Horoscope: ರಾಶಿಭವಿಷ್ಯ; ನಿಮ್ಮ ಕೈಯಾರೆ ಪ್ರೀತಿಯನ್ನು ಹಾಳುಮಾಡಿಕೊಳ್ಳುವಿರಿ-ಎಚ್ಚರ
ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ, ಮಾರ್ಚ್ 20ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಧನು, ಮಕರ, ಕುಂಭ, ಮೀನ ರಾಶಿಯವರ ಇಂದಿನ (ಮಾರ್ಚ್ 20) ಭವಿಷ್ಯ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಶುಕ್ಲ, ವಾರ : ಬುಧ, ತಿಥಿ :ಏಕಾದಶೀ, ನಿತ್ಯನಕ್ಷತ್ರ : ಪುಷ್ಯಾ, ಯೋಗ : ಶೋಭನ, ಕರಣ : ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 37 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 42 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:40 ರಿಂದ ಸಂಜೆ 02:11ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 08:08 ರಿಂದ 09:39ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 11:10 ರಿಂದ 12:40 ರ ವರೆಗೆ.
ಧನು ರಾಶಿ : ನೀವು ಇಂದು ಪ್ರೇಮಿಗಳನ್ನು ಒಂದು ಮಾಡಲು ಹೋಗಿ ಸಂಕಷ್ಟದಲ್ಲಿ ಬೀಳುವಿರಿ. ನಿಮ್ಮ ಕೆಲವು ನಿರ್ಧಾರವು ಆತ್ಮಸಂತೋವನ್ನು ಕೊಡುವುದು. ಇಂದು ಉದ್ಯೋಗದಲ್ಲಿ ಹೊಸ ಅವಕಾಶಗಳ ಕಡೆ ಗಮನ ಹರಿಸುವಿರಿ. ಆರ್ಥಿಕತೆಯಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಪ್ರಗತಿ ಇರುವುದು. ಇಷ್ಟದವರು ನಿಮ್ಮನ್ನು ಶುಭಕಾರ್ಯಗಳಿಗೆ ಆಹ್ವಾನಿಸಬಹುದು. ಪ್ರಭಾವೀ ವ್ಯಕ್ತಿಗಳ ಒಡನಾಟವನ್ನು ಯಾರ ಜೊತೆಯಾದರೂ ಹಂಚಿಕೊಂಡು ಸಮಾಧಾನ ಮಾಡಿಕೊಳ್ಳುವಿರಿ. ನೀವಿಟ್ಟ ನಂಬಿಕೆಯೇ ನಿಮಗೆ ಶಾಶ್ವತವಾಗಿ ಸಿಗುವುದು. ನಿಮ್ಮ ಮನೆಯ ಕಾರ್ಯವು ಹಲವು ದಿನಗಳಿಂದ ನಿಂತಿದ್ದು ಮತ್ತೆ ಆರಂಭಿಸುವಿರಿ. ವೈಯಕ್ತಿಕ ಕಾರ್ಯದಲ್ಲಿ ಗಮನವು ಕಡಿಮೆ ಇರುವುದು. ಮಕ್ಕಳನ್ನು ನಯದಿಂದ ಸರಿದಾರಿಗೆ ತರಬೇಕಾಗುವುದು. ಹಲವಾರು ಗೊಂದಲಗಳು ನಿಮ್ಮ ಮನಸ್ಸಿನಲ್ಲಿ ಓಡಾಡಬಹುದು. ಇಂದು ನಿಮಗೆ ಅನಿರೀಕ್ಷಿತ ಆನಂದವನ್ನು ತರುವ ವಾರ್ತೆಗಳು ಬರಬಹುದು.
ಮಕರ ರಾಶಿ : ನಿಮ್ಮ ಕೈಯಾರೆ ಪ್ರೀತಿಯನ್ನು ಹಾಳುಮಾಡಿಕೊಳ್ಳುವಿರಿ. ತಂದೆಯ ಜೊತೆ ವಿಚಿತ್ರ ಸನ್ನಿವೇಶವನ್ನು ಎದುರಿಸಬೇಕಾಗಬಹುದು. ನಿಮ್ಮ ಸಂಬಂಧದಲ್ಲಿಯೇ ವಿವಾಹ ನಿಶ್ಚಯವಾಗಬಹುದು. ಇಂದಿನ ವ್ಯವಹಾರದಲ್ಲಿ ಊಹೆಯು ಸತ್ಯವಾದೀತು. ವಿದ್ಯಾರ್ಥಿಗಳು ಪರಿಶ್ರಮದಿಂದ ಪಡೆಯಬೇಕಾದುದನ್ನು ಪಡೆಯುವರು. ನೀವು ಸಾಲವನ್ನು ಮಾಡಿದ್ದರೆ, ಇಂದು ನಿಮ್ಮ ಬಳಿ ಹಣವು ಬಂದು ಸೇರಿದರೂ ಮರುಪಾವತಿಗೆ ಮನಸ್ಸಾಗದು. ಬಂಧುಗಳಿಂದಾದ ನೋವನ್ನು ನೀವು ಹೇಳಿಕೊಳ್ಳಲಾರಿರಿ. ಅನವಶ್ಯಕ ಸಂಪರ್ಕವನ್ನು ಕಡಿದುಕೊಳ್ಳಲು ಇಚ್ಛಿಸುವಿರಿ. ಕಾನೂನಿನ ಪಾಠವನ್ನು ಹಿರಿಯರು ಮಾಡುವರು. ಉದ್ಯೋಗಕ್ಕಾಗಿ ಬಂದ ಬಂಧುವಿಗೆ ಮಾರ್ಗದರ್ಶನ ಮಾಡುವಿರಿ. ಸಹೋದರನ ಸಹಕಾರವು ಅನುಕೂಲವೇ ಆಗುವುದು. ಪ್ರತೀಕಾರಕ್ಕೆ ಸಮಯದ ನಿರೀಕ್ಷೆಯಲ್ಲಿ ಇರುವಿರಿ.
ಕುಂಭ ರಾಶಿ : ವ್ಯಾಪಾರದಲ್ಲಿ ನಿಮಗಾದ ಹಿನ್ನಡೆಯು ಅವಮಾನದಂತೆ ಆಗಬಹುದು. ಯಾರಿಂದಲೂ ಏನನ್ನೂ ನಿರೀಕ್ಷಿಸದೇ ಸ್ವತಂತ್ರವಾಗಿ ಇರಬೇಕು ಎಂದು ಅನ್ನಿಸುವುದು. ನಿರುದ್ಯೋಗಿಗಳಿಗೆ ಹಲವು ಪ್ರಯತ್ನಗಳ ಅನಂತರ ಕೆಲಸವು ಸಿಗಬಹುದು. ಇಂದು ನಿಮ್ಮ ದೇಹವು ಆಯಾಸದಿಂದ ದುರ್ಬಲವಾಗಬಹುದು. ಹೆಚ್ಚು ವಿಶ್ರಾಂತಿಯ ಅವಶ್ಯಕತೆ ಇರುವುದು. ಇಂದು ನಿಮ್ಮ ವಾಹನದ ಬಳಕೆಯನ್ನು ಹೆಚ್ಚು ಮಾಡುವಿರಿ. ದೇಹವನ್ನು ದಂಡಿಸಲು ನಿಮಗೆ ಆಗದು. ಕಾರ್ಯದ ನಿಮಿತ್ತ ನಿಮ್ಮ ಓಡಾಟವು ವ್ಯರ್ಥವಾಗಬಹುದು. ದುಷ್ಕೃತ್ಯಕ್ಕೆ ಪ್ರೇರಣೆ ಸಿಗಬಹುದು. ಅಶುಭ ಸೂಚನೆಗಳನ್ನು ಗಮನದಲ್ಲಿ ಇಟ್ಟುಕೊಂಡು ಕಾರ್ಯದಲ್ಲಿ ಪ್ರವೃತ್ತರಾಗಿ. ಆಪ್ತ ಬಂಧುವನ್ನು ಅಕಾಲದಲ್ಲಿ ಕಳೆದುಕೊಳ್ಳುವಿರಿ. ಸಮಯೋಚಿತ ಕಾರ್ಯದಿಂದ ಪ್ರಶಂಸೆಯು ಇರಲಿದೆ. ಪಾಲುದಾರಿಕೆಯಲ್ಲಿ ಹಂಚಿಕೆಯು ಸಮವಾಗಿರಲಿ. ಅನಂತರ ಇದೇ ದೊಡ್ಡ ಘಟನೆ ಆಗಬಹುದು.
ಮೀನ ರಾಶಿ : ನಿಮಗೆ ವ್ಯಾವಹಾರಿಕ ಕ್ಷೇತ್ರವು ಸಾಕಾಗಿ, ಅದರಿಂದ ದೂರವಿರಲು ಪ್ರಯತ್ನಿಸುವಿರಿ. ಕುಟುಂಬದ ಸದಸ್ಯರ ಒಡನಾಡವು ಹಿತಕರ ಎನಿಸುವುದು. ಅನ್ಯ ಮೂಲದ ಆದಾಯದಿಂದ ನೀವು ಆರ್ಥಿಕತೆಯಲ್ಲಿ ನೆಮ್ಮದಿ ಕಾಣುವಿರಿ. ಇಂದು ನಿಮ್ಮ ಉದ್ಯೋಗವು ಸಾಮರಸ್ಯದಿಂದ ಸಾಗುವುದು. ಯಾವುದಾದರೂ ಶುಭದ ನಿರೀಕ್ಷೆಯಲ್ಲಿ ಇರಬಹುದು. ಹಣಕಾಸಿನ ಪ್ರಯತ್ನಗಳು ಸಫಲವಾಗಬಹುದು. ಆಗತ್ಯಕ್ಕೆ ಎಲ್ಲೂ ತೊಂದರೆಯಾಗದಂತೆ ಇರುವಿರಿ. ಜವಾಬ್ದಾರಿಯು ಬಂದು ಹೊರೆಯು ಹೆಚ್ಚಾಗುವುದು. ಬಹಳ ಹುಡುಕಾಟದ ಅನಂತರದ ಉತ್ತಮ ವಿವಾಹ ಸಂಬಂಧವು ಬರುವುದು. ಕರ್ತವ್ಯದ ವಿಚಾರದಲ್ಲಿ ನೀವು ಆಲಸ್ಯವೋ ಬೇಜವಾಬ್ದಾರಿಯೋ ಒಳ್ಳೆಯದಲ್ಲ. ಬಂಧುಗಳಿಂದ ಬೇಗ ಹಣವನ್ನು ಕೊಡುವುದಾಗಿ ಪಡೆಯುವಿರಿ. ಪುರುಷಪ್ರಯತ್ನದಿಂದ ಇಂದು ಹೆಚ್ಚು ಇರುವುದು. ಸಂಗಾತಿಯ ಜೊತೆ ಆಪ್ತವಾದ ಮಾತುಕತೆ ಇರಲಿದೆ. ನೀವು ಸಾಕಷ್ಟು ಸುಖವನ್ನು ಅನುಭವಿಸಿದ ಮೇಲೆ ಮತ್ತೇನೋ ಬೇಕು ಎಂದೆನಿಸಬಹುದು.
-ಲೋಹಿತ ಹೆಬ್ಬಾರ್-8762924271 (what’s app only)




