Horoscope: ಈ ರಾಶಿಯವರಿಗೆ ಬರಬೇಕಾದ ಹಣವು ಬಾರದೇ ಸಾಲವನ್ನು ಮಾಡಬೇಕಾಗಬಹುದು

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 04, 2024 | 12:15 AM

ಸೆಪ್ಟೆಂಬರ್​ 4,​ 2024ರ​​ ನಿಮ್ಮ ರಾಶಿಭವಿಷ್ಯ: ಮನೆಗೆ ಬೇಕಾದ ವಸ್ತುಗಳನ್ನು ತರಲು ಸಂಗಾತಿಯ ಅನುಮತಿ ಪಡೆಯದೇ ಮಾಡುವಿರಿ. ಇಂದು ನೀವು ವಹಿಸಿಕೊಂಡ ಕಾರ್ಯವನ್ನು ಬಿಡದೇ ಮುನ್ನಡೆಸುವಿರಿ. ಕಛೇರಿಯಲ್ಲಿ ಉದ್ಯೋಗದ ಕಾರಣ ನಿಮ್ಮನ್ನು ದೂರದ ಊರಿಗೆ ಕಳುಹಿಸಬಹುದು.ಹಾಗಾದರೆ ಸೆಪ್ಟೆಂಬರ್​ 4ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Horoscope: ಈ ರಾಶಿಯವರಿಗೆ ಬರಬೇಕಾದ ಹಣವು ಬಾರದೇ ಸಾಲವನ್ನು ಮಾಡಬೇಕಾಗಬಹುದು
ದಿನಭವಿಷ್ಯ
Follow us on

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2024 ಸೆಪ್ಟೆಂಬರ್​ 4) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಪೂರ್ವಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಉತ್ತರಾಫಲ್ಗುಣೀ, ಯೋಗ: ಸಾಧ್ಯ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:41 ಗಂಟೆ, ರಾಹು ಕಾಲ ಮಧ್ಯಾಹ್ನ 12:31 ರಿಂದ ಸಂಜೆ 02:04, ಯಮಘಂಡ ಕಾಲ ಬೆಳಿಗ್ಗೆ 07:54 ರಿಂದ 09:27ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 10:59 ರಿಂದ 12:31ರ ವರೆಗೆ.

ಮೇಷ ರಾಶಿ : ಬಂಡವಾಳದ ವಿಚಾರದಲ್ಲಿ ಯಾರ ಮಾತೂ ಪಥ್ಯವಾಗದು. ಇಂದು ನಿಮ್ಮ ನಿರೀಕ್ಷೆಯಂತೆ ಬರಬೇಕಾದ ಹಣವು ಬರಬಹುದು. ಪರಿಶ್ರಮವು ಎಂದಿಗಿಂತ ಅಧಿಕವಾಗಿದ್ದು, ಅದಕ್ಕೆ ಯೋಗ್ಯವಾದ ಫಲವು ಸಿಗುವುದು. ನಿಮ್ಮ ಸರ್ಕಾರಿ ಕೆಲಸಗಳಿಗೆ ಹೆಚ್ಚು ಓಡಾಟ ಆಗಬಹುದು. ಸಂಗಾತಿಯ ಜೊತೆ ಉದ್ಯಮದ ಕುರಿತು ಚರ್ಚಿಸಿ, ಕಲಹದಲ್ಲಿ ಅಂತ್ಯವಾಗಲಿದೆ. ಭೂಮಿಯ ವ್ಯವಹಾರದಲ್ಲಿ ಹಿನ್ನಡೆಯಾಗಬಹುದು. ಮನೆಯಿಂದ ಹೊರಡುವಾಗ ಶುಭ ಸೂಚನೆಗಳನ್ನು ಗಮನಿಸಿ, ಕಾರ್ಯದ ಸಾಧ್ಯಾಸಾಧ್ಯತೆಗಳ ಬಗ್ಗೆ ತಿಳಿಯುವಿರಿ. ಮಕ್ಕಳ ಸಂತೋಷಕ್ಕಾಗಿ ಹಣವನ್ನು ಖಾಲಿ ಮಾಡುವಿರಿ. ಅದೃಷ್ಟವನ್ನು ನಂಬಿ ಕೆಲಸವನ್ನು ಮಾಡುವಿರಿ. ಹೊಸತನ್ನು ಕಲಿಯುವ ಉತ್ಸಾಹದಲ್ಲಿ ಇರುವಿರಿ. ಕುಟುಂಬಕ್ಕೆ ಕಿಂಚಿತ್ ಸಹಾಯವನ್ನು ಯಾವುದೋ ಒಂದು ರೀತಿಯಲ್ಲಿ ಮಾಡುವಿರಿ. ತಾಳ್ಮೆಯನ್ನು ಕಳೆದುಕೊಳ್ಳುವ ಸ್ಥಿತಿ ಬರಬಹುದು. ಇಂದು ಚರಾಸ್ತಿಗೆ ಸಂಬಂಧಿಸಿದ ಕೆಲಸಗಳು ಇರುತ್ತವೆ.

ವೃಷಭ ರಾಶಿ : ಸಿಟ್ಟನ್ನು ಯಾವುದಾದರೂ ಒಂದು ದಾರಿಯಲ್ಲಿ ಹೊರಹಾಕಿದೆ ಸಮಾಧಾನಪಟ್ಟುಕೊಳ್ಳುವಿರಿ. ಇಂದು ನಿಮ್ಮ ಮುಂದೆ ಸಾಲದ ವಿಚಾರ ಬಂದರೆ ಮೌನವಹಿಸುವಿರಿ. ನಿಮ್ಮ‌ ಪ್ರಾಮಾಣಿಕ ಕೆಲಸಕ್ಕೆ ಅಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ನ್ಯಾಯಾಲಯದ ಓಡಾಟವು ನಿಮಗೆ ಬೇಸರ ತರಿಸಬಹುದು. ಮಿತ್ರರೆಂದು ಬಂದವರ ವಿಚಾರದಲ್ಲಿ ಜಾಗರೂಕತೆ ಇರಲಿ. ಮಾನಸಿಕವಾಗಿ ನಿಮಗೆ ಇಂದು ಅವರು ತೊಂದರೆ ಕೊಡಬಹುದು. ಕುಟುಂಬದ‌ ಚರ ಆಸ್ತಿಯನ್ನು ನಯವಾಗಿ ಪಡೆಯಲು ಯತ್ನಿಸುವಿರಿ. ಬರಬೇಕಾದ ಹಣವು ಬಾರದೇ ಸಾಲವನ್ನು ಮಾಡಬೇಕಾಗಬಹುದು. ಕುಟುಂಬ ನಿರ್ವಹಣೆಯ ವಿಚಾರದಲ್ಲಿ ದಂಪತಿಗಳ ನಡುವೆ ಭಿನ್ನಾಭಿಪ್ರಾಯ ಬರಬಹುದು. ಚಂಚಲವಾದ ಮನಸ್ಸಿನ ಕಾರಣ ಕೆಲವಕಳೆದುಕೊಳ್ಳುವಿರಿ. ಕೈಲಾಗದ್ದನ್ನು ಮಾಡುವ ಉತ್ಸಾಹ ಬೇಡ. ಆಸೆಯಿಂದ ಕಳೆದುಕೊಳ್ಳುವುದು ಹೆಚ್ಚಾಗಬಹುದು. ಬೇಡವೆಂದರೂ ಬೇಡದ ವಿಚಾರಗಳು ತಲೆಯಲ್ಲಿ ಗಿರಿಕಿಯಾಗಬಹುದು.

ಮಿಥುನ ರಾಶಿ : ಎಲ್ಲ ಸಮಯದಲ್ಲಿಯೂ ಇನ್ನೊಬ್ಬರಿಗೆ ಪ್ರಶಂಸೆ ಕೊಡಲಾರಿರಿ.‌ ಇಂದು ಹಳೆಯ ಪ್ರಣಯವು ಆರಂಭದ ಸೂಚನೆ ಸಿಗುವುದು. ಸ್ತ್ರೀಯರು ಮನೆಯಲ್ಲಿ ಆದ ಘಟನೆಯಿಂದ ತಾಳ್ಮೆಯನ್ನು ಕಳೆದುಕೊಳ್ಳಬಾರದು. ಬಂಧುಗಳ ಅಸಹಾಯವು ನಿಮಗೆ ಬೇಸರ ತರಿಸುವುದು. ಶುಭಸೂಚನೆಯನ್ನು ನೀವು ಗಮನಿಸುವುದು ಉತ್ತಮ. ಪೂರ್ವ ಆಲೋಚನೆಗಳು ದಿಕ್ಕು ತಪ್ಪಬಹುದು. ದ್ವೇಷವನ್ನು ಮುಂದುವರಿಸದೇ ಮುಕ್ತಾಯ ಮಾಡಿಕೊಳ್ಳಿ. ವಿದ್ಯುತ್ ವಸ್ತುಗಳಿಂದ ನಿಮಗೆ ಭಯ ಹಾಗೂ ಕೋಪವೂ ಬರುವುದು. ದೂರಾದ ಪ್ರೇಮಿಯನ್ನು ನೆನಪುಮಾಡಿಕೊಂಡು ದುಃಖಿಸುವಿರಿ. ಮೋಜಿನ‌ ಆಟಕ್ಕೆ ಬಲಿಯಾಗುವ ಸಾಧ್ಯತೆ ಇದೆ. ಆಟದಲ್ಲಿ ಎಚ್ಚರವಿರಲಿ. ಆಸ್ತಿ ವ್ಯವಹಾರವು ನಿಮಗೆ ಅನುಕೂಲವಾಗುವ ಸಾಧ್ಯತೆಯಿದೆ. ಲಲಿತಕಲೆಗಳಲ್ಲಿ ನಿಮ್ಮ ಛಾಪು ಮೂಡಿಸುವ ಪ್ರಯತ್ನ ಇರುವುದು. ಕೆಲವನ್ನು ನೀವು ಅನುಭವಿಸುವುದು ಅನಿವಾರ್ಯ.

ಕರ್ಕಾಟಕ ರಾಶಿ : ಮನೆಗೆ ಬೇಕಾದ ವಸ್ತುಗಳನ್ನು ತರಲು ಸಂಗಾತಿಯ ಅನುಮತಿ ಪಡೆಯದೇ ಮಾಡುವಿರಿ. ಇಂದು ನೀವು ವಹಿಸಿಕೊಂಡ ಕಾರ್ಯವನ್ನು ಬಿಡದೇ ಮುನ್ನಡೆಸುವಿರಿ. ಕಛೇರಿಯಲ್ಲಿ ಉದ್ಯೋಗದ ಕಾರಣ ನಿಮ್ಮನ್ನು ದೂರದ ಊರಿಗೆ ಕಳುಹಿಸಬಹುದು. ನಿಮಗೆ ಯಾರನ್ನಾದರೂ ಸೋಲಿಸುವ ಖಯಾಲಿ ಶುರುವಾಗುವುದು. ನಿಮ್ಮ ಗುರಿಯನ್ನು ತಪ್ಪಿಸಲು ಬೇಕಾದ ಪಿತೂರಿಯು ನಡೆಯಬಹುದು. ನಿಮ್ಮ ಮಾತಿನ ವೇಗವನ್ನು ಅರ್ಥಮಾಡಿಕೊಳ್ಳಲು ಕಷ್ಟವಾದೀತು. ಕಛೇರಿಯಲ್ಲಿ ಸ್ತ್ರೀಯರಿಂದ ಸಹಕಾರವನ್ನು ಪಡೆಯುವಿರಿ. ಭಯದಲ್ಲಿ ನೀವು ಬಹಳ ಇಂದಿನ ದಿನವನ್ನು ಕಳೆಯಬೇಕಾದೀತು. ನಿಮ್ಮನ್ನು ನೀವೇ ತಮಾಷೆಗೆ ಅವಮಾನ ಮಾಡಿಕೊಳ್ಳುವಿರಿ. ಖಾಸಗಿ ಉದ್ಯೋಗದಲ್ಲಿ ಇರುವವರಿಗೆ ಆತಂಕವಿರಲಿದೆ. ಸುಲಭವಾಗಿ ಸಿಕ್ಕುವುದನ್ನು ಬಿಟ್ಟಕೊಳ್ಳುವಿರಿ. ನೆರಮನೆಯವರ ಜೊತೆ ವಾದ ಮಾಡಬೇಕಾದೀತು. ಎಲ್ಲವನ್ನೂ ಬೇರೆಯವರ ದೃಷ್ಟಿಯಲ್ಲಿ ನೋಡುವುದು ಸರಿಯಾಗದು.