Gold Ring: ಆ ಬೆರಳಿಗೆ ಉಂಗುರ ಧರಿಸಬಾರದು… ಮತ್ಯಾವ ಬೆರಳಿಗೆ ಹಾಕಿಕೊಳ್ಳಬೇಕು?

Gold Ring for Ring finger: ಮಧ್ಯದ ಬೆರಳಿನಲ್ಲಿ ಚಿನ್ನದ ಉಂಗುರವನ್ನು ಧರಿಸುವುದು ಅಶುಭವೆಂದು ಪರಿಗಣಿಸಲಾಗಿದೆ. ಇದು ಅನೇಕ ಅಡ್ಡ ಪರಿಣಾಮಗಳನ್ನು ಹೊಂದಿದೆ. ಅದೇ ಹೆಬ್ಬೆರಳಿನ ಬಗ್ಗೆ ಹೇಳುವುದಾದರೆ, ಯಾರೇ ಆಗಲಿ ಹೆಬ್ಬೆರಳಿಗೆ ಉಂಗುರ ಧರಿಸುವುದಿಲ್ಲ. ಹಾಗಾಗಿ ಎಂದಿಗೂ ನಿಮ್ಮ ಹೆಬ್ಬೆರಳಿನಲ್ಲಿ ಚಿನ್ನದ ಉಂಗುರವನ್ನು ಧರಿಸದಂತೆ ವಿಶೇಷ ಕಾಳಜಿ ವಹಿಸಿ.

Gold Ring: ಆ ಬೆರಳಿಗೆ ಉಂಗುರ ಧರಿಸಬಾರದು... ಮತ್ಯಾವ ಬೆರಳಿಗೆ ಹಾಕಿಕೊಳ್ಳಬೇಕು?
ಆ ಬೆರಳಿಗೆ ಉಂಗುರ ಧರಿಸಬಾರದು...
Follow us
ಸಾಧು ಶ್ರೀನಾಥ್​
|

Updated on: Sep 04, 2024 | 5:06 AM

ಅನೇಕ ಜನರು ತಮ್ಮ ಜೀವನದಲ್ಲಿ ದಿಟ್ಟ ಹೆಜ್ಜೆಗಳನ್ನು ಇಡಲು ಇಷ್ಟಪಡುತ್ತಾರೆ. ಅಂತಹ ಜನರು ಜ್ಯೋತಿಷ್ಯವನ್ನು ನಂಬುತ್ತಾರೆ ಮತ್ತು ಅದರ ಸಹಾಯವನ್ನು ತೆಗೆದುಕೊಳ್ಳುತ್ತಾರೆ. ಜ್ಯೋತಿಷ್ಯದಲ್ಲಿ, ಅಂತಹ ಅನೇಕ ವಿಷಯಗಳನ್ನು ವ್ಯಕ್ತಿಯ ಗ್ರಹಗಳು ಮತ್ತು ನಕ್ಷತ್ರಪುಂಜಗಳ ಪ್ರಕಾರ ಹೇಳಲಾಗಿದೆ, ಅದನ್ನು ಅಳವಡಿಸಿಕೊಂಡರೆ ಯಾರೇ ಆಗಲಿ ಪ್ರಯೋಜನ ಪಡೆಯುತ್ತಾರೆ. ಅನೇಕ ಜನರು ಜ್ಯೋತಿಷ್ಯದ ಪರಿಹಾರಗಳನ್ನು ಪಾಲಿಸುತ್ತಾ, ಅಳವಡಿಸಿಕೊಳ್ಳುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಈ ಕ್ರಮಗಳಲ್ಲಿ ಯಾವುದನ್ನಾದರೂ ಸರಿಯಾಗಿ ಅಳವಡಿಸಿಕೊಂಡಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ.

ಚಿನ್ನದ ಉಂಗುರಗಳನ್ನು ಧರಿಸಲು ಇಷ್ಟಪಡುವ ಅನೇಕ ಜನರಿದ್ದಾರೆ. ಚಿನ್ನದ ಉಂಗರು ಧರಿಸುವುದರಿಂದ ಪ್ರಯೋಜನಗಳನ್ನು ಪಡೆಯಲು ಇಚ್ಛಿಸುತ್ತಾರೆ. ಆದರೆ ಚಿನ್ನದ ಉಂಗುರವನ್ನು ಧರಿಸುವುದು ಯಾವ ಕೈಯಲ್ಲಿ, ಯಾವ ಬೆರಳಿಗೆ ಸರಿ ಎಂಬುದು ಅನೇಕರಿಗೆ ತಿಳಿದಿಲ್ಲ. ಅವರು ತಪ್ಪಾದ ಬೆರಳಿಗೆ ಉಂಗುರವನ್ನು ಧರಿಸುತ್ತಾರೆ. ಹೀಗೆ ಮಾಡುವುದರಿಂದ ಲಾಭದ ಬದಲು ನಷ್ಟವೇ ಶುರುವಾಗುತ್ತದೆ. ನಿಮ್ಮ ಜೀವನದಲ್ಲಿ ಇಂತಹ ಪ್ರಯೋಜನಗಳ ಬಗ್ಗೆ ಆಸಕ್ತಿ ಹೊಂದಿದ್ದರೆ, ನೀವು ಯಾವ ಬೆರಳಿಗೆ ಚಿನ್ನದ ಉಂಗುರವನ್ನು ಧರಿಸಬೇಕು ಮತ್ತು ಅದರಿಂದಾಗುವ ಪ್ರಯೋಜನಗಳೇನು ಎಂಬುದನ್ನು ಇಲ್ಲಿ ನಿಮಗಾಗಿ ಹೇಳುತ್ತಿದ್ದೇವೆ. ಚಿನ್ನದ ಉಂಗುರವನ್ನು ಯಾವ ಬೆರಳಿಗೆ ಧರಿಸಬಾರದು ಎಂಬುದನ್ನು ಸಹ ಮುಖ್ಯವಾಗಿ ತಿಳಿಯಿರಿ.

ಚಿನ್ನದ ಉಂಗುರವನ್ನು ಏಕೆ ಧರಿಸಬೇಕು? ಹಿಂದೂ ಧರ್ಮದಲ್ಲಿ ಚಿನ್ನವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ ಮತ್ತು ಒಂದು ಕಾಲದಲ್ಲಿ ಭಾರತವನ್ನು ಚಿನ್ನದ ಹಕ್ಕಿ ಎಂದೂ ಕರೆಯಲಾಗುತ್ತಿತ್ತು. ಎಲ್ಲರೂ ಚಿನ್ನವನ್ನು ಪ್ರೀತಿಸುತ್ತಾರೆ. ಚಿನ್ನವನ್ನು ಶುಭ ಕಾರ್ಯಗಳಿಗೆ ಬಳಸಲಾಗುತ್ತದೆ. ಮದುವೆಯಲ್ಲಿ ಚಿನ್ನವನ್ನು ಬಳಸಲಾಗುತ್ತದೆ. ಜನರು ಆಭರಣಕ್ಕಾಗಿ ಚಿನ್ನವನ್ನು ಬಳಸುತ್ತಾರೆ. ಚಿನ್ನವನ್ನು ಲಕ್ಷ್ಮಿ ದೇವಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ ಮತ್ತು ಚಿನ್ನವು ಮನೆಗೆ ಬಹಳಷ್ಟು ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ಹೇಳಲಾಗುತ್ತದೆ.

Also Read:  Radha Ashtami 2024 – ಈ ಬಾರಿ ರಾಧಾ ಅಷ್ಟಮಿ ಯಾವಾಗ? ಇದನ್ನು ಆಚರಿಸದೇ ಹೋದರೆ ಕೃಷ್ಣ ಜನ್ಮಾಷ್ಟಮಿ ಅಪೂರ್ಣವಾಗುತ್ತದೆ ಯಾಕೆ?

ಚಿನ್ನವು ಜನರ ಜೀವನದ ಮೇಲೂ ಪರಿಣಾಮ ಬೀರುತ್ತದೆ. ಚಿನ್ನವನ್ನು ಧರಿಸುವುದರಿಂದ ಸೂರ್ಯನ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಇದು ನಿಮ್ಮ ಜೀವನದಲ್ಲಿ ಮಂಗಳಕರ ಯೋಗವನ್ನು ಸೃಷ್ಟಿಸುತ್ತದೆ ಎಂಬ ನಂಬಿಕೆ ಇದೆ. ಚಿನ್ನವನ್ನು ಧರಿಸುವುದರಿಂದ ವ್ಯಕ್ತಿಯ ಜೀವನದಲ್ಲಿ ಶಕ್ತಿ ಮತ್ತು ಧೈರ್ಯವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಜ್ಯೋತಿಷಿಗಳು ತಮ್ಮ ಸೂರ್ಯನು ದುರ್ಬಲರಾಗಿರುವವರಿಗೆ ಚಿನ್ನವನ್ನು ಧರಿಸಲು ಸಲಹೆ ನೀಡುತ್ತಾರೆ. ಚಿನ್ನವನ್ನು ಧರಿಸುವುದರಿಂದ ವ್ಯಕ್ತಿಯ ದೇಹ ಮತ್ತು ಮನಸ್ಸಿನ ಮೇಲೆ ನೇರ ಪರಿಣಾಮ ಬೀರುತ್ತದೆ, ಇದು ವ್ಯಕ್ತಿಯ ಅಂತಃ ಶಕ್ತಿಯನ್ನು ಹೆಚ್ಚಿಸುತ್ತದೆ.

ಚಿನ್ನದ ಉಂಗುರವನ್ನು ಯಾವ ಬೆರಳಿಗೆ ಧರಿಸಬೇಕು? ಯಾರಿಗೇ ಆಗಲಿ ಜೀವನದಲ್ಲಿ ಸಮಸ್ಯೆಗಳು ಕೊನೆಗೊಳ್ಳದಿದ್ದರೆ ಮತ್ತು ವಿವಿಧ ವಿಷಯಗಳಲ್ಲಿ ದೀರ್ಘಕಾಲದಿಂದ ಲಾಭದ ಸ್ಥಿತಿಗಳು ಉದ್ಭವವಾಗಿರದಿದ್ದರೆ, ಅಂತಹ ಪರಿಸ್ಥಿತಿಯಲ್ಲಿ ನೀವು ಚಿನ್ನದ ಉಂಗುರವನ್ನು ಧರಿಸಬೇಕು. ನೀವು ಉಂಗುರದ ಬೆರಳಿನಲ್ಲಿ (Ring finger) ಚಿನ್ನದ ಉಂಗುರವನ್ನು ಧರಿಸಬಹುದು. ಉಂಗುರದ ಬೆರಳಿಗೆ ಚಿನ್ನದ ಉಂಗುರವನ್ನು ಧರಿಸುವುದರಿಂದ ಹಲವಾರು ಪ್ರಯೋಜನಗಳಿವೆ. ನಮ್ಮ ದೇಹದ ಉಂಗುರ ಬೆರಳುಗಳ ರಕ್ತನಾಳಗಳು ಹೃದಯವನ್ನು ಸಂಪರ್ಕಿಸುತ್ತವೆ ಎಂದು ಹಲವರು ನಂಬುತ್ತಾರೆ. ಆದ್ದರಿಂದ ಚಿನ್ನದ ಉಂಗುರವನ್ನು ಯಾವಾಗಲೂ ಉಂಗುರದ ಬೆರಳಿಗೆ ಧರಿಸಬೇಕು ಎಂದು ನಂಬಲಾಗಿದೆ. ನಿಶ್ಚಿತಾರ್ಥದ ಸಮಯದಲ್ಲಿ ಸಹ, ಚಿನ್ನದ ಉಂಗುರಗಳನ್ನು ಉಂಗುರದ ಬೆರಳಿಗೆ ಮಾತ್ರ ಧರಿಸಲಾಗುತ್ತದೆ. ಇದಲ್ಲದೆ, ಕಿರುಬೆರಳಿಗೆ ಚಿನ್ನದ ಉಂಗುರವನ್ನು ಸಹ ಧರಿಸಬಹುದು.

Also Read: Roofless Shikari Devi Temple: ಆ ದೇವಸ್ಥಾನ ಬಟಾಬಯಲಿನಲ್ಲಿದೆ, ಶಿಕಾರಿ ದೇವಿಗೆ ಆಕಾಶವೇ ಶ್ರೀರಕ್ಷೆ! ಎಲ್ಲಿದೆ ಈ ಮಂದಿರ?

ಯಾವ ಬೆರಳಿನಲ್ಲಿ ಚಿನ್ನದ ಉಂಗುರವನ್ನು ಧರಿಸಬಾರದು? ಮಧ್ಯದ ಬೆರಳಿನಲ್ಲಿ ಚಿನ್ನದ ಉಂಗುರವನ್ನು ಧರಿಸುವುದು ಅಶುಭವೆಂದು ಪರಿಗಣಿಸಲಾಗಿದೆ. ಮಧ್ಯದ ಬೆರಳಿಗೆ ಚಿನ್ನದ ಉಂಗುರವನ್ನು ಎಂದಿಗೂ ಧರಿಸುವುದಿಲ್ಲ. ಇದು ಅನೇಕ ಅಡ್ಡ ಪರಿಣಾಮಗಳನ್ನು ಹೊಂದಿದೆ. ಇದು ಶನಿ ಗ್ರಹದ ಬೆರಳಾಗಿದೆ ಮತ್ತು ನೀವು ಅದರ ಮೇಲೆ ಚಿನ್ನದ ಉಂಗುರವನ್ನು ಧರಿಸಿದರೆ, ಅದು ನಿಮ್ಮದೇ ಪಾದವನ್ನು ನೀವೇ ಕೊಡಲಿಯಿಂದ ಹೊಡೆದುಕೊಂಡಂತೆ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದು ಪ್ರತಿಕೂಲ ಫಲಿತಾಂಶಗಳಿಗೆ ಕಾರಣವಾಗುತ್ತದೆ. ಇದು ಹಣದ ಕೊರತೆಗೆ ಕಾರಣವಾಗುತ್ತದೆ, ಆದ್ದರಿಂದ ಮಧ್ಯದ ಬೆರಳಿಗೆ ಚಿನ್ನದ ಉಂಗುರವನ್ನು ಧರಿಸಬಾರದು.

ನಿಮ್ಮ ಹೆಬ್ಬೆರಳಿನ ಮೇಲೂ ಧರಿಸಬೇಡಿ ಇನ್ನು ನಾವು ಹೆಬ್ಬೆರಳಿನ ಬಗ್ಗೆ ಮಾತನಾಡುವುದಾದರೆ, ಹೇಗೂ ಜನರು ಹೆಬ್ಬೆರಳಿಗೆ ಯಾವುದೇ ರೀತಿಯ ಉಂಗುರವನ್ನು ಧರಿಸುವುದಿಲ್ಲ. ಆದಾಗ್ಯೂ ಎಂದಿಗೂ ನಿಮ್ಮ ಹೆಬ್ಬೆರಳಿನಲ್ಲಿ ಚಿನ್ನದ ಉಂಗುರವನ್ನು ಧರಿಸದಂತೆ ವಿಶೇಷ ಕಾಳಜಿ ವಹಿಸಿ. ಇದು ಚಂದ್ರನನ್ನು ಸಂಕೇತಿಸುತ್ತದೆ ಮತ್ತು ಈ ಬೆರಳಿನಲ್ಲಿ ಚಿನ್ನದ ಬದಲು ಬೆಳ್ಳಿಯನ್ನು ಬಳಸಿ. ಅದು ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)

ತೆರಿಗೆ ಹಣ ಸಂಗ್ರಹದಲ್ಲೂ ಸರ್ಕಾರ ಭಾರೀ ಹಿಂದೆ ಬಿದ್ದಿದೆ: ಕುಮಾರಸ್ವಾಮಿ
ತೆರಿಗೆ ಹಣ ಸಂಗ್ರಹದಲ್ಲೂ ಸರ್ಕಾರ ಭಾರೀ ಹಿಂದೆ ಬಿದ್ದಿದೆ: ಕುಮಾರಸ್ವಾಮಿ
ಬೆಳಗಾವಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ
ಬೆಳಗಾವಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ
ಪ್ರಭಾಕರ್ ಜೊತೆ ಸರಿಗಮ ವಿಜಿಗೆ ಇತ್ತು ಒಳ್ಳೆಯ ಒಡನಾಟ
ಪ್ರಭಾಕರ್ ಜೊತೆ ಸರಿಗಮ ವಿಜಿಗೆ ಇತ್ತು ಒಳ್ಳೆಯ ಒಡನಾಟ
ಕಾಂಗ್ರೆಸ್​ನ ನೂತನ ಪ್ರಧಾನ​ ಕಚೇರಿ‘ಇಂದಿರಾ ಭವನ’ ಉದ್ಘಾಟಿಸಿದ ಸೋನಿಯಾ
ಕಾಂಗ್ರೆಸ್​ನ ನೂತನ ಪ್ರಧಾನ​ ಕಚೇರಿ‘ಇಂದಿರಾ ಭವನ’ ಉದ್ಘಾಟಿಸಿದ ಸೋನಿಯಾ
ಹೋಲಿ ಡಿಪ್ ಆಧ್ಯಾತ್ಮಿಕ ಅನುಭೂತಿಯನ್ನು ನೀಡುತ್ತದೆ: ರಷ್ಯನ್ ಮಹಿಳೆ
ಹೋಲಿ ಡಿಪ್ ಆಧ್ಯಾತ್ಮಿಕ ಅನುಭೂತಿಯನ್ನು ನೀಡುತ್ತದೆ: ರಷ್ಯನ್ ಮಹಿಳೆ
ನೂತನ ಎಐಸಿಸಿ ಕಟ್ಟಡಕ್ಕೆ ಇಂದಿರಾ ಗಾಂಧಿ ಭವನ್ ಎಂದು ಹೆಸರಿಡಲಾಗಿದೆ
ನೂತನ ಎಐಸಿಸಿ ಕಟ್ಟಡಕ್ಕೆ ಇಂದಿರಾ ಗಾಂಧಿ ಭವನ್ ಎಂದು ಹೆಸರಿಡಲಾಗಿದೆ
ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
Daily Horoscope: ಈ ರಾಶಿಯವರು ಇಂದು ಮಕ್ಕಳಿಂದ ಶುಭ ಸುದ್ದಿ ಕೇಳುವರು
Daily Horoscope: ಈ ರಾಶಿಯವರು ಇಂದು ಮಕ್ಕಳಿಂದ ಶುಭ ಸುದ್ದಿ ಕೇಳುವರು
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ