AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ದಿನಭವಿಷ್ಯ; ನಿಮ್ಮ ನೇರವಾದ ಮಾತಿನಿಂದ ತೊಂದರೆಯಾಗಬಹುದು-ಎಚ್ಚರ

ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ. ಮಾರ್ಚ್ 23ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Horoscope: ದಿನಭವಿಷ್ಯ; ನಿಮ್ಮ ನೇರವಾದ ಮಾತಿನಿಂದ ತೊಂದರೆಯಾಗಬಹುದು-ಎಚ್ಚರ
ರಾಶಿ ಭವಿಷ್ಯ
TV9 Web
| Edited By: |

Updated on: Mar 23, 2024 | 12:30 AM

Share

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ (ಮಾರ್ಚ್​​​​​ 23) ಭವಿಷ್ಯ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಶುಕ್ಲ, ವಾರ : ಶನಿ, ತಿಥಿ :ಚತುರ್ದಶೀ, ನಿತ್ಯನಕ್ಷತ್ರ : ಪೂರ್ವಾಫಲ್ಗುಣೀ, ಯೋಗ : ಶೂಲ, ಕರಣ : ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 35 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 42 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 09:37 ರಿಂದ ಸಂಜೆ 11:08ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:10 ರಿಂದ 03:41ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 06:36 ರಿಂದ 08:07 ರ ವರೆಗೆ.

ಸಿಂಹ ರಾಶಿ : ನಿಮಗೆ ನಿಮ್ಮ ವಸ್ತುಗಳ ಮೇಲೆ ಪ್ರೇಮವು ಅಧಿಕವಾಗಿ ಇರುವುದು. ನಂಬುಗೆಯ ವಿಚಾರದಲ್ಲಿ ನೀವು ಮೋಸ ಹೋಗಬಹುದು. ಒಂದನ್ನು ಪಡೆಯಲು ಮತ್ತೊಂದನ್ನು ಬಿಡಬೇಕಾದೀತು. ಸಂಗಾತಿಯ ಜೊತೆಗಿನ ಭಿನ್ನಾಭಿಪ್ರಾಯಗಳು ಶಾಶ್ವತವಾಗದಂತೆ ನೋಡಿಕೊಳ್ಳಿ. ಇಷ್ಟವಿಲ್ಲದಿದ್ದರೂ ಮಾತನಾಡುವುದು ಅನಿವಾರ್ಯವಾದೀತು. ಒತ್ತಡವನ್ನು ತಣಿಸಿಕೊಳ್ಳಲು ದುರಭ್ಯಾಸವನ್ನು ರೂಢಿಸಿಕೊಳ್ಳಬೇಕಸದೀತು. ಇನ್ನೊಬ್ಬರ ಸ್ವತ್ತನ್ನು ಅಪೇಕ್ಷಿಸುವುದು ಬೇಡ. ಮೋಹದಿಂದ ಹೊರಬರುವುದು ಕಷ್ಟವಾದೀತು. ಕಾನೂನಿನ ಹಾದಿಯು ನಿಮ್ಮನ್ನು ರಕ್ಷಿಸಬಹುದು. ನಿಮ್ಮ ಕಾರ್ಯಗಳು ಇತರರಿಗೆ ಅಸೂಯೆಯನ್ನು ಕೊಡಬಹುದು. ನಿಮ್ಮ ದುರ್ಬಲ್ಯವು ಇನ್ನೊಬ್ಬರಿಗೆ ಆಹಾರವಾಗಬಹುದು. ನೇರವಾದ ಮಾತಿನಿಂದ ತೊಂದರೆಯಾಗಬಹುದು. ಕುಶಲತೆಯಿಂದ ಕೆಲಸವನ್ನು ಮಾಡಿ. ಮಿತ್ರರಿಂದ ಏನಾದರೂ ಪಡೆಯಬೇಕು ಅನ್ನಿಸುವುದು.

ಕನ್ಯಾ ರಾಶಿ : ಇಂದು ಸಂತೋಷವನ್ನು ತರುವ ಚಟುವಟಿಕೆಗಳಲ್ಲಿ ಮಾತ್ರ ತೊಡಗಿಸಿಕೊಳ್ಳುವಿರಿ. ಬರಬೇಕಾದ ಹಣವು ಬಾರದೇ ತೊಂದರೆಯಲ್ಲಿ ಸಿಕ್ಕಿಕೊಳ್ಳುವಿರಿ. ಹಳೆಯ ವಸ್ತುಗಳ ದುರಸ್ತಿಯ ಕಡೆ ಗಮನವಿರುವುದು. ನಿಮ್ಮ ಸಂಸ್ಥೆಗೆ ಹೆಚ್ಚಿನ ಮನ್ನಣೆಯು ಸಿಗುವುದು. ನಿಮ್ಮ ಲಾಭವನ್ನು ಹೆಚ್ಚು ಮಾಡಿಕೊಳ್ಳುವಿರಿ. ಸಂತೋಷದ ಸಮಯವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವಿರಿ. ಹರಿದು ಹೋದ ಮನಸ್ಸುಗಳನ್ನು ಕೂಡಿಸುವುದು ಕಷ್ಟವಾದೀತು. ಕಾಲಹರಣ ಮಾಡಲು ಅನವಶ್ಯಕ ಮಾತುಗಳನ್ನು ಆಡುವಿರಿ. ಆಲಸ್ಯ ಮನೋಭಾವವನ್ನು ಕಡಿಮೆ ಮಾಡಿಕೊಳ್ಳಿ. ಸಾಮಾಜಿಕ ಕೆಲಸದಲ್ಲಿ ನೀವು ಕಳೆದುಹೋಗಬಹುದು. ವಾಹನ ಚಾಲನೆಯಲ್ಲಿ ಜಾಗರೂಕತೆ ಇರಲಿ. ಮೆಚ್ಚುಗೆಯಿಂದ ಅಹಂಕಾರವು ಜಾಗರೂಕವಾದೀತು. ಮಿತ್ರರಿಗೆ ಸಹಾಯ ಮಾಡಿ ನೀವು ತೊಂದರೆಯಲ್ಲಿ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ.

ತುಲಾ ರಾಶಿ : ನಿಮಗೆ ಯಾರಿಂದಲಾದರೂ ಹಣವು ದಾನವಾಗಿ ಸಿಗಬಹುದು. ಸಾಮಾಜಿಕ ಕಾರ್ಯಗಳಲ್ಲಿ ಬ್ಯುಸಿಯಾಗುವ ಸಾಧ್ಯತೆ ಇದೆ. ನಿಮ್ಮನ್ನು ಯಾರಾದರೂ ಅಳೆಯಬಹುದು. ಅದರ ಬಗ್ಗೆ ಅತಿಯಾದ ನಿರೀಕ್ಷೆ ಬೇಡ. ನೀವು ನಿಮ್ಮ ಸುತ್ತಲಿರುವವರನ್ನು ಬಹಳ ಉತ್ಸಾಹದಿಂದ ಇಡುವಿರಿ. ಹಿತಶತ್ರುಗಳಿಂದ ಹಲವು ತೊಂದರೆಗಳು ಬರಬಹುದು. ಕೃತಜ್ಞತೆ ಭಾವವನ್ನು ಪ್ರಕಟಿಸುವಿರಿ. ಹೊಗಳಿಕೆಯನ್ನು ಬಹಳ ಸಂಕೋಚದಿಂದ ಪಡೆಯುವಿರಿ. ಸಿಗದ ಹಣದ ಬಗ್ಗೆ ನಿಮಗೆ ಬೇಸರವಿರದು. ಬಂಧುಗಳು ಮನಸ್ಸಿಗೆ ನೋವಾಗುವ ಮಾತುಗಳನ್ನು ಆಡಿದರೂ ಅದನ್ನು ಮನಸ್ಸಿನಲ್ಲಿ ಇರಿಸಿಕೊಳ್ಳುವುದಿಲ್ಲ. ಧಾರ್ಮಿಕ ಭಾವವು ನಿಮ್ಮಲ್ಲಿ ಜಾಗರೂಕವಾಗಬಹುದು. ಪ್ರೀತಿಯ ವಿಚಾರದಲ್ಲಿ ಬುದ್ಧಿವಾದವನ್ನು ಹೇಳುವರು. ಕೆಲವರನ್ನು ನೀವು ನಂಬಬೇಕಾಗುತ್ತದೆ. ನಿಮ್ಮ‌ ದಾಖಲೆಗಳು ಯಾರಿಗಾದರೂ ಸಿಕ್ಕಿ ದುರುಪಯೋಗವಾಗಬಹುದು.

ವೃಶ್ಚಿಕ ರಾಶಿ : ಹಳೆಯ ವಸ್ತುಗಳನ್ನು ಮಾರಾಟ ಮಾಡುವ ಗುರಿಯನ್ನು ಇಟ್ಟುಕೊಳ್ಳುವಿರಿ‌. ಯಾರಾದರೂ ನಿಮ್ಮ ಗಮನವನ್ನು ಬೇರೆ ಕಡೆ ಕೊಂಡೊಯ್ಯಬಹುದು. ನಿಮ್ಮ ಬಳಿ ಇರುವ ವಸ್ತುಗಳಿಂದ ನಿಮಗೆ ತೃಪ್ತಿ ಎನಿಸಬಹುದು. ಪ್ರೀತಿಯಿಂದ ಮಾಡಬಹುದಾದುದನ್ನು ಹಾಗೆಯೇ ಮಾಡಿ. ಹಣದಲ್ಲಿ ಖರ್ಚಿನ ಭಾಗವೇ ಹೆಚ್ಚಿರಲಿದೆ. ಕುಟುಂಬದ ಆಸ್ತಿಗಾಗಿ ಮಾತುಕತೆಗಳು ತಾರಕ್ಕೆ ಹೋಗಬಹುದು. ಅಧಿಕಾರವು ಕ್ಷಣಿಕ ಎಂಬ ಭಾವವು ನಿಮ್ಮೊಳಗೆ ಇರಲಿ. ಚಿಕ್ಕ ಕೆಲಸವನ್ನಾದರೂ ಬಹಳ ಅಚ್ಚುಕಟ್ಟಿನಿಂದ ಮಾಡಿಕೊಳ್ಳುವಿರಿ. ಕುಟುಂಬದ ಕಾರ್ಯದಿಂದ ಆಯಾಸವು ಬರಲಿದೆ. ಸಂಗಾತಿಯ ಬಗ್ಗೆ ಆರೋಗ್ಯದ ಕಾಳಜಿ ತೋರಿಸುವಿರಿ. ಅವರ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾದೀತು. ನಿಗದಿತ ಅವಧಿಯಲ್ಲಿ ನಿಮ್ಮ ಕೆಲಸಗಳನ್ನು ಪೂರ್ಣ ಮಾಡಿಕೊಳ್ಳುವಿರಿ. ನೀವು ಇಷ್ಟಪಟ್ಟಿದ್ದನ್ನು ಕಳೆದುಕೊಳ್ಳುವ ಸಂದರ್ಭವು ಬರಬಹುದು.

ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ