December 2024 Monthly Horoscope: ಈ ರಾಶಿಯವರಿಗೆ ದೈವದ ಸ್ಮರಣೆಯಿಂದ ಎಲ್ಲವೂ ಶುಭ
ಡಿಸೆಂಬರ್ ಮಾಸ ಭವಿಷ್ಯ:ಶನಿ ಒಳ್ಳೆಯ ಸ್ಥಾನ, ಕುಜನದು ನೀಚ ಸ್ಥಾನ. ಒಬ್ಬರು ಶುಭ, ಇನ್ನೊಬ್ಬರು ಅಶುಭವನ್ನು ಕೊಡಲಿದ್ದಾರೆ. ಆದೇ ದೈವದ ಸ್ಮರಣೆಯಿಂದ ಶುಭದಂತೆ ನಡೆಯಲಿದೆ.
ಡಿಸೆಂಬರ್ 2024 ಈ ವರ್ಷದ ಕೊನೆಯ ತಿಂಗಳಾಗಿದೆ. ಗುರು ವೃಷಭದಲ್ಲಿ, ಕುಜ ಕರ್ಕಾಟಕದಲ್ಲಿ, ಕೇತು ಕನ್ಯಾದಲ್ಲಿ, ಬುಧ ವೃಶ್ಚಿಕದಲ್ಲಿ, ಸೂರ್ಯ ಧನುವಿನಲ್ಲಿ, ಶುಕ್ರ ಹಾಗೂ ಶನಿ ಕುಂಭದಲ್ಲಿ, ರಾಹು ಮೀನದಲ್ಲಿ ಇರುವರು. ಶನಿ ಒಳ್ಳೆಯ ಸ್ಥಾನ, ಕುಜನದು ನೀಚ ಸ್ಥಾನ. ಒಬ್ಬರು ಶುಭ, ಇನ್ನೊಬ್ಬರು ಅಶುಭವನ್ನು ಕೊಡಲಿದ್ದಾರೆ. ಆದೇ ದೈವದ ಸ್ಮರಣೆಯಿಂದ ಎಲ್ಲವೂ ಶುಭದಂತೆ ನಡೆಯಲಿದೆ.
ಮೇಷ ರಾಶಿ :
ಡಿಸೆಂಬರ್ ತಿಂಗಳಲ್ಲಿ ರಾಶಿ ಚಕ್ರದ ಮೊದಲನೇ ರಾಶಿಯವರಿಗೆ ಶುಭ. ಶುಕ್ರನು ಏಕಾಶ ಸ್ಥಾನಕ್ಕೆ ಬರಲಿದ್ದಾನೆ. ಪೂರ್ವಪುಣ್ಯದಿಂದ ನಿಮಗೆ ಸಿಗುವ ಸಂಪತ್ತು ಲಭಿಸಲಿದೆ. ಸಂಗಾತಿಯಯಿಂದ ಆರ್ಥಿಕ ನೆರವು. ರವಿಯು ನವಮ ಸ್ಥಾನಕ್ಕೆ ಪ್ರವೇಶ. ಸರ್ಕಾರದ ಕೆಲಸದಲ್ಲಿ ಪ್ರಗತಿ. ಪ್ರಭಾವಿ ವ್ಯಕ್ತಿಗಳ ಸಹವಾಸ ಸಿಗಲಿದೆ. ನಿಮಗೆ ಬಂಧುಗಳನ್ನು ಮೆಚ್ಚಿಸಲಾಗದು. ಏನಾದರೂ ನಕಾರಾತ್ಮಕ ಅಂಶಗಳು ಕಾಣಿಸುವುದು. ಯಾಂತ್ರಿಕ ಕಾರ್ಯದಲ್ಲಿ ಸುಖ. ಸರ್ಪರಾಜನನ್ನು ಪೂಜಿಸಿ, ತೊಡಕುಗಳನ್ನು ದೂರ ಮಾಡಿಕೊಳ್ಳಿ.
ವೃಷಭ ರಾಶಿ :
ರಾಶಿ ಚಕ್ರದ ಎರಡನೇ ರಾಶಿಯವರಿಗೆ ಈ ವಾರ ಮಿಶ್ರಫಲ. ರಾಶಿಯಲ್ಲಿ ಗುರುವಿದ್ದರೂ ನಿಮಗೆ ಯಾವುದೇ ಫಲ ಸಿಕ್ಕಿದಂತೆ ಕಾಣಿಸದು. ಕಾರಣ ಅದು ಶತ್ರುವಿನ ರಾಶಿ. ಎಂತಹ ಬಲವಾನ್ ಕೂಡ ದುರ್ಬಲನಾಗುವನು. ರಾಶಿಯ ಅಧಿಪತಿ ಶುಕ್ರನು ತಿಂಗಳ ಕೊನೆಯಲ್ಲಿ ಶನಿಯ ಜೊತೆ ಸೇರುವನು. ಕಲಾತ್ಮಕ ಕೆಲಸಕ್ಕೆ ಪ್ರಶಂಸೆ ಸಿಗುವುದು. ಬಂಧುಗಳ ಕಡೆಯಿಂದ ವಿವಾಹಕ್ಕೆ ಅನುಕೂಲವಾಗುವುದು. ರಾಹುವಿನಿಂದ ನಿಮ್ಮ ಆದಾಯಕ್ಕೆ ಹೊಸ ದಿಕ್ಕು ಕಾಣಿಸುವ ಉದಾ. ಸೂರ್ಯದೇವನನ್ನು ಆರೋಗ್ಯಕ್ಕಾಗಿ ಪ್ರಾರ್ಥಿಸಿ.
ಮಿಥುನ ರಾಶಿ :
ಡಿಸೆಂಬರ್ ತಿಂಗಳಲ್ಲಿ ಈ ರಾಶಿಯವರಿಗೆ ಅಶುಭ ಫಲ. ಸೂರ್ಯನು ಸಪ್ತಮದಲ್ಲಿ ಸಂಗಾತಿಯ ಜೊತೆ ಹೆಚ್ಚು ಮನಸ್ತಾಪವನ್ನು ಮಾಡಿಸುವನು. ಸ್ತ್ರೀಯರಿಂದಲೂ ಸೇವಕರಿಂದಲೂ ಬೇಕಾದ ಸಹಕಾರ ಸಿಗಲಿದೆ. ರಾಹುವು ದಶಮದಲ್ಲಿ ಇದ್ದು ಉದ್ಯೋಗದಲ್ಲಿ ತೊಂದರೆ ಮಾಡಿಸುವನು. ವಿದೇಶ ಪ್ರವಾಸಕ್ಕೆ ತೆರಳಲು ಈ ತಿಂಗಳಲ್ಲಿ ಅವಕಾಶ ಹೆಚ್ಚು. ಸಂಸಾರ ಜೀವನ ಸಾಕೆನಿಸುವುದು. ದೈವ ಭಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಬೇಕು. ಲಕ್ಷ್ಮೀ ನಾರಾಯಣ ಸ್ತೋತ್ರದಿಂದ ನಿಮಗೆ ಬಲ.
ಕರ್ಕಾಟಕ ರಾಶಿ :
ರಾಶಿ ಚಕ್ರದ ನಾಲ್ಕನೇ ರಾಶಿಯವರಿಗೆ ಈ ತಿಂಗಳಲ್ಲಿ ಅಶುಭ. ಷಷ್ಠದಲ್ಲಿ ಸೂರ್ಯನು ಮಿತ್ರನ ರಾಶಿಯಲ್ಲಿ ಇದ್ದರೂ ಮಿತ್ರರೇ ಶತ್ರುಗಳಾಗುವರು ಅಥವಾ ಶತ್ರುಗಳಂತೆಯೂ ಅನ್ನಿಸುವುದು. ಹಿತಶತ್ರುಗಳ ಪೀಡೆಯಿಂದ ಜರ್ಝರಿತವಾಗುವಿರಿ. ವಾಹನ ಸಂಚಾರದಿಂದ ನಿಮಗೆ ತೊಂದರೆ ಕಾಣಿಸುವುದು.ಹಿರಿಯರ ಮೇಲಿನ ಪ್ರೀತಿಯು ತೋರಿಕೆಯದಾಗಿರಲಿದೆ. ಕುಜನು ನಿಮ್ಮ ರಾಶಿಯಲ್ಲಿ ಇರುವ ಕಾರಣ ಕೋಪ ಹೆಚ್ಚು. ಇದು ಆರೋಗ್ಯದ ಮೇಲೂ ಪರಿಣಾಮ ಬೀರುವುದು. ಸುಬ್ರಹ್ಮಣ್ಯನ ಪ್ರಾರ್ಥನೆಯನ್ನು ಮಾಡಿ.
ಸಿಂಹ ರಾಶಿ :
ಈ ತಿಂಗಳಲ್ಲಿ ಐದನೇ ರಾಶಿಯವರಿಗೆ ರಾಶಿಯ ಅಧಿಪತಿಯಾದ ಸೂರ್ಯನು ಪಂಚಮದಲ್ಲಿ ಇರಲಿದ್ದಾನೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಉತ್ತಮ ಪ್ರಗತಿ ಕಾಣಿಸುವುದು. ಶುಕ್ರನು ಸಪ್ತಮದಲ್ಲಿ ಇರುವಾಗ ಸಂಗಾತಿಯ ಜೊತೆಗಿನ ಮನಸ್ತಾಪವು ದೂರಾಗಲಿದೆ. ಶತ್ರುಗಳು ಪ್ರಬಲರಾಗುವರು. ದ್ವಿತೀಯದಲ್ಲಿ ಕೇತುವು ಮಾತಿನಿಂದ ಅಪಮಾನ ಮಾಡಿಸುವನು. ಕೌಟುಂಬಿಕ ವಿಚಾರದಲ್ಲಿ ಹಿನ್ನಡೆ ಕೊಡಿಸುವನು. ಕುಜನು ದ್ವಾದಶದಲ್ಲಿ ಇದ್ದು ಉದ್ಯೋಗದಲ್ಲಿ ವ್ಯತ್ಯಾಸ ಮಾಡಿಸುವನು. ಬಾಂಧವ್ಯವನ್ನು ನೀವು ಸರಿಯಾಗಿ ಇಟ್ಟುಕೊಂಡರೆ ಉತ್ತಮ. ಆದಿತ್ಯಹೃದಯ ಸ್ತೋತ್ರವನ್ನು ಪಠಿಸಿ.
ಕನ್ಯಾ ರಾಶಿ :
ಡಿಸೆಂಬರ್ ತಿಂಗಳಲ್ಲಿ ನಿಮಗೆ ಶುಭ. ರಾಶಿಯ ಅಧಿಪತಿ ತೃತೀಯದಲ್ಲಿ ಇರುವನು. ಸಾಹಿತ್ಯ ಅಥವಾ ಮಾತಿಗೆ ಸಂಬಂಧಿಸಿ ಕಾರ್ಯವು ಕೂಡಲೇ ಫಲವನ್ನು ಕೊಡದು. ಸಹೋದರ ನಡುವೆ ವಾಗ್ವಾದ ನಡೆಯಲಿದೆ. ತಾರಕಕ್ಕೂ ಹೋಗಬಹುದು. ಸಂಗಾತಿಯನ್ನು ವಿನಾಕಾರಣ ದ್ವೇಷಿಸುವಿರಿ. ಸ್ತ್ರೀಯರ ಜೊತೆ ವಿವಾದವಾಗುವುದು. ಈ ತಿಂಗಳಲ್ಲಿ ರವಿಯು ಚತುರ್ಥದಲ್ಲಿ ಮಿತ್ರನ ಮನೆಯಲ್ಲಿ ಇದ್ದು ಕೌಟುಂಬಕ ವ್ಯವಹಾರಕ್ಕೆ ಅನುಕೂಲನಾಗಿರುವನು. ವಿದೇಶದ ಕನಸು ನನಸಾಗುವುದು. ಗೋವಿಗೆ ಸಕಲದೋಷ ನಿವಾರಣೆಯ ಸಂಕಲ್ಪ ಮಾಡಿ ಗೋಗ್ರಾಸವನ್ನು ನೀಡಿ.
ತುಲಾ ರಾಶಿ :
ಈ ತಿಂಗಳಲ್ಲಿ ನಿಮಗೆ ಅಶುಭ ಫಲವೇ ಅಧಿಕ. ಪಂಚಮದ ಶನಿ ನಿಮ್ಮ ಮನಸ್ಸನ್ನು ಕುಗ್ಗಿಸಬಹುದು. ಮಕ್ಕಳ ವಿಚಾರಕ್ಕೆ ಮನಸ್ತಾಪ ಕಾಣಿಸುವುದು. ವಿದ್ಯಾಭ್ಯಾಸದ ಹಿನ್ನಡೆಯಿಂದ ಖಿನ್ನತೆಗೆ ಬೀಳುವಿರಿ. ಸೂರ್ಯನು ತೃತೀಯದಲ್ಲಿ ಇರುವುದರಿಂದ ಪ್ರತಿಭೆಗೆ ಪುರಸ್ಕಾರ, ಶ್ರಮಕ್ಕೆ ಯೋಗ್ಯವಾದ ಫಲ ಸಿಗುವುದು. ಮಾತಿನ ಮೇಲೆ ಹಿಡಿತವಿರಲಿ. ವಿರೋಧಗಳು ಉಂಟಾಗುವುದು. ಗುರುವಿನ ಬಲವೂ ಇಲ್ಲದೇ ಬಹಳ ಸಂಕಟವಾಗುವುದು. ಯಾವುದಕ್ಕೂ ಪರಿಹಾರ ಮಾರ್ಗವನ್ನು ಕಂಡುಕೊಳ್ಳಲಾಗದು. ಗುರುಚರಿತ್ರೆಯ ಪಠನದಿಂದ ಮನಸ್ಸಿಗೆ ನೆಮ್ಮದಿ.
ವೃಶ್ಚಿಕ ರಾಶಿ :
ಡಿಸೆಂಬರ್ ತಿಂಗಳಲ್ಲಿ ರಾಶಿಚಕ್ರದ ಎಂಟನೇ ರಾಶಿಯವರಿಗೆ ಶುಭ. ಗುರುವಿನ ಪೂರ್ಣ ದೃಷ್ಟಿ ನಿಮ್ಮ ಮೇಲೆ ಇರಲಿದೆ. ಯಾವುದಕ್ಕೂ ಭಯಪಡುವ ಅಗತ್ಯವಿಲ್ಲ. ಇನ್ನು ರವಿಯು ದ್ವಿತೀಯದಲ್ಲಿ ಇದ್ದು ನಿಮ್ಮಿಂದ ಮಾರ್ಗದರ್ಶನ ಪಡೆಯುವರು. ಕುಜನು ನೀಚನಾಗಿ ನಿಮ್ಮ ಉದ್ಯೋಗದಲ್ಲಿ ಕಿರಿಕಿರಿ ಮಾಡಿಸುವನು. ಶುಕ್ರನು ಈ ತಿಂಗಳಲ್ಲಿ ಚತುರ್ಥ ಸ್ಥಾನಕ್ಕೆ ಹೋಗುವ ಕಾರಣ ಕಲಾವಿದರಿಗೆ ವಿದೇಶಕ್ಕೆ ತೆರಳುವ ಅವಕಾಶ ಸಿಗಲಿದೆ. ಬುಧನು ಪರಸ್ಪರ ಶತ್ರುಗಳ ರಾಶಿಯಲ್ಲಿ ಇರುವ ಕಾರಣ ಒತ್ತಡ, ಉದ್ವೇಗಕ್ಕೆ ದಾರಿಗಳು ಕಾಣಿಸುವುದು. ಕಾರ್ತಿಕೇಯನನ್ನು ವಿವಿಧ ಉಪಚಾರಗಳಿಂದ ಆರಾಧಿಸಿ.
ಧನು ರಾಶಿ :
ರಾಶಿ ಚಕ್ರದ ಒಂಭತ್ತನೇ ರಾಶಿಯವರಿಗೆ ಡಿಸೆಂಬರ್ ತಿಂಗಳಲ್ಲಿ ಅಶುಭ. ಮೊದಲನೆಯದಾಗಿ ಗುರುಬಲವೂ ಇಲ್ಲ. ನಿಮ್ಮ ರಾಶಿಗೆ ಸೂರ್ಯನ ಪ್ರವೇಶವಾಗಿ ಆರೋಗ್ಯವೂ ಕೆಡುವುದು. ರಾಶಿಯ ಅಧಿಪತಿ ಹಾಗೂ ಚತುರ್ಥದ ಅಧಿಪತಿ ಗುರುವು ಷಷ್ಠದಲ್ಲಿ ಇರುವುದರಿಂದ ಸಂಸಾರದಲ್ಲಿ ಹೊಂದಾಣಿಕೆ ಕಷ್ಟ. ಎದುರಿನಿಂದ ಚೆನ್ನಾಗಿ ಇದ್ದರೂ ಕತ್ತಿಮಸೆಯುವರು. ಇನ್ನು ಶುಕ್ರನು ತೃತೀಯದಲ್ಲಿ ಇರುವುದು ಸಹೋದರಿಯ ಜೊತೆ ಬಾಂಧವ್ಯ ಬೆಳೆಯುವುದು. ಯಾವುದನ್ನೂ ಅತಿಯಾಗಿ ಮಾಡದೇ ಮಿತಿಯಲ್ಲಿ ಇರಿಸಿಕೊಳ್ಳಿ. ವಿಷ್ಣುಸಹಸ್ರನಾಮವನ್ನು ಪ್ರಾತಃಕಾಲದಲ್ಲಿ ಪಠಿಸಿ.
ಮಕರ ರಾಶಿ :
ಈ ತಿಂಗಳಲ್ಲಿ ನಿಮಗೆ ಶುಭ ಫಲ. ಶುಕ್ರನು ತಿಂಗಳಲ್ಲಿ ಪ್ರಥಮ ಹಾಗೂ ದ್ವಿತೀಯದಲ್ಲಿ ಇರುವನು. ಕುಟುಂಬವು ಸ್ತ್ರೀಯರಿಂದ ಮನಸ್ತಾಪವು ಕಾಣಿಸುವುದು. ಕುಜನ ನೀಚ ದೃಷ್ಟಿ ಈ ರಾಶಿಯ ಮೇಲಿರುವ ಕಾರಣ ಈ ತಿಂಗಳಲ್ಲಿ ಸಿಟ್ಟಾಗುವುದು ಹೆಚ್ಚು. ರವಿಯು ದ್ವಾದಶ ಸ್ಥಾನಕ್ಕೆ ಬಂದು ಮನೆಯ ಕಾರ್ಯಗಳಿಗೆ ಓಡಾಟ, ಖರ್ಚು ಮಾಡಿಸುವನು. ಹಿರಿಯರ ವಿಷಯಕ್ಕೆ ಆರ್ಥಿಕ ಸಹಾಯವನ್ನು ಮಾಡಬೇಕಾಗುವುದು. ಸರ್ಕಾರದ ಕಾರ್ಯದಲ್ಲಿ ವಿಳಂಬ. ಮುನ್ನುಗ್ಗಿ ಕೆಲಸ ಮಾಡಿಕೊಳ್ಳುವುದು ಕಷ್ಟ. ಹನುಮಾನ್ ಸ್ತೋತ್ರವನ್ನು ಪಠಿಸಿ.
ಕುಂಭ ರಾಶಿ :
ಇದು ಹನ್ನೊಂದನೇ ರಾಶಿಯಾಗಿದ್ದು ಡಿಸೆಂಬರ್ ತಿಂಗಳಲ್ಲಿ ನಿಮಗೆ ಶುಭ. ಶನಿಯು ಉಚ್ಚ ಸ್ಥಾನದಲ್ಲಿ ಇದ್ದಾನೆ ಮತ್ತು ಸಾಡೇ ಸಾಥ್ ಮಧ್ಯಭಾಗದಲ್ಲಿ ಇರುವುದರಿಂದ ಧೈರ್ಯ ಸ್ಥೈರ್ಯಗಳು ಅಧಿಕವಾಗಿರುವುದು. ಶುಕ್ರನ ಪ್ರವೇಶದ ಅನಂತರ ನಿಮ್ಮಲ್ಲಿ ಕೆಲವು ಬದಲಾವಣೆ ಕಾಣಿಸುವುದು. ಆಲಂಕಾರಿಕ ವಸ್ತುಗಳ ಬಳಕೆ ಹೆಚ್ಚು. ರಸಿಕರಂತೆ ತೋರಿಸಿಕೊಳ್ಳುವಿರಿ. ರವಿಯು ಮಿತ್ರನ ಸ್ಥಾನಕ್ಕೆ ಬರುವುದರಿಂದ ಏಕಾದಶದಲ್ಲಿ ಇರುವ ರವಿಯು ತಂದೆಯಿಂದ ಆರ್ಥಿಕ ಸಹಕಾರವನ್ನು ಮಾಡಿಸುವನು. ಸರ್ಕಾರದ ವಿಚಾರದಲ್ಲಿ ಜಯ. ಏಕಾದಶದ ಅಧಿಪತಿ ಗುರುವು ಚತುರ್ಥದಲ್ಲಿ ಇರುವ ಕಾರಣ ಕೌಟುಂಬಿಕ ನೆಮ್ಮದಿ ಸಿಗುವುದು. ಆತ್ಮ ವಿಶ್ವಾಸ ಇನ್ನಷ್ಟು ಬಲವಾಗುವುದು.
ಮೀನ ರಾಶಿ :
ಡಿಸೆಂಬರ್ ತಿಂಗಳಲ್ಲಿ ನಿಮಗೆ ಶುಭಶುಭಾ ಫಲವು ಹೆಚ್ಚು. ಸೂರ್ಯನು ಮಿತ್ರನ ಮನೆಯಿಂದ ಮತ್ತೊಂದು ಮಿತ್ರನ ಮನೆಗೆ ಪ್ರವೇಶದಿಂದ ನಿಮಗೆ ಸಂತಸ. ಉದ್ಯಮದಲ್ಲಿ ಮುನ್ನಡೆ, ಪಾಲುದಾರಿಕೆಯನ್ನು ಮಾಡಲು ಯತ್ನಿಸಿದರೆ ಸಾಧ್ಯವಾಗುಬುದು. ವೈದ್ಯ ವೃತ್ತಿಯನ್ನು ಅವಲಂಬಿಸಿದವರಿಗೆ ಶ್ರೇಯಸ್ಸು. ಇನ್ನು ಶುಕ್ರನು ದ್ವಾದಶ ಸ್ಥಾನಕ್ಕೆ ಇರುವುದು ಅಷ್ಟು ಸುಖವಲ್ಲ. ವಾಹನಗಳಿಂದ ಭೋಗ ವಸ್ತುಗಳಿಂದ ದುಃಖ. ದುರಸ್ತಿಗೆ ಖರ್ಚಾಗುವುದು. ಹಾಳಾಗಿ ಧನ ನಷ್ಟ ಮಾಡಿಕೊಳ್ಳುವಿರಿ. ಶನೈಶ್ಚರನು ಸಾಡೇ ಸಾಥ್ ಸ್ಥಾನದಲ್ಲಿ ಇರುವ ಕಾರಣ ಅರ್ಧನಾರೀಶ್ವರ ಸ್ತೋತ್ರವನ್ನು ಪಠಿಸಿ.
-ಲೋಹಿತ ಹೆಬ್ಬಾರ್, ಇಡುವಾಣಿ – 8762924271 (what’s app only)