AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 25ರ ದಿನಭವಿಷ್ಯ

Daily Numerology February 25: ಜನ್ಮಸಂಖ್ಯೆ 4, 5, 6ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಫೆಬ್ರವರಿ 25ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಈ ದಿನ ನಿಮ್ಮ ಅದೃಷ್ಟ ಹೇಗಿರಲಿದೆ, ಯಾವ ಸವಾಲುಗಳನ್ನು ಎದುರಿಸಬೇಕಾಗಬಹುದು ಮತ್ತು ಅದಕ್ಕೆ ಪರಿಹಾರಗಳೇನು ಎಂದು ವಿವರವಾಗಿ ವಿವರಿಸಲಾಗಿದೆ.

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 25ರ ದಿನಭವಿಷ್ಯ
Numerology Image Credit source: google
ಸ್ವಾತಿ ಎನ್​ಕೆ
| Edited By: |

Updated on: Feb 25, 2026 | 12:45 AM

Share

ಧನ್ವಂತರಿ ದೇವಸ್ಥಾನಕ್ಕೆ ತೆರಳಿ, ದರ್ಶನ ಪಡೆಯುವುದು ಉತ್ತಮ. ಒಂದು ವೇಳೆ ಸಾಧ್ಯವಾಗದಿದ್ದಲ್ಲಿ ಮನೆಯಲ್ಲಿಯೇ ಧನ್ವಂತರಿಯ ಸ್ಮರಣೆ ಮಾಡಿಕೊಳ್ಳಿ. ಆರೋಗ್ಯ ಸಮಸ್ಯೆಗಳು ಕಾಡುತ್ತಾ ಇದ್ದಲ್ಲಿ ಅದರಿಂದ ನಿವಾರಣೆ ಕಾಣುವ ಮಾರ್ಗೋಪಾಯ ದೊರೆಯುತ್ತದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಪ್ರೀತಿಯಲ್ಲಿ ಇರುವವರು- ದಂಪತಿ ಮಧ್ಯೆ ಪರಸ್ಪರ ಗೌರವ ಹೆಚ್ಚಾಗಿ, ಸಂಬಂಧ ಗಾಢವಾಗಲಿದೆ. ಹೆಚ್ಚು ಖಾರದ ಪದಾರ್ಥಗಳ ಆಹಾರ ಸೇವನೆಯಿಂದ ದೂರ ಇರುವುದು ಬಹಳ ಮುಖ್ಯ. ವಿದ್ಯಾರ್ಥಿಗಳು ಹೊಸ ವಿಷಯಗಳನ್ನು ಕಲಿಯಲು ಆಸಕ್ತಿ ತೋರಿಸಿ, ಕೋರ್ಸ್ ಗಳಿಗೆ ಸೇರುವ ಸಾಧ್ಯತೆ ಇದೆ. ಇನ್ನು ಓದಿನ ಜೊತೆಗೆ ಪಾರ್ಟ್ ಟೈಂ ಉದ್ಯೋಗ ಮಾಡಬೇಕು ಎಂದುಕೊಳ್ಳುತ್ತಿರುವವರಿಗೆ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ನಿಮ್ಮ ಬಗೆಗಿನ ಆತ್ಮವಿಶ್ವಾಸವು ಹೆಚ್ಚಾಗಿರುತ್ತದೆ. ಕೆಲಸದಲ್ಲಿ ನಿಮ್ಮ ಆಲೋಚನೆ ಮತ್ತು ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳುವ ರೀತಿ ಮೆಚ್ಚುಗೆ ಪಡೆಯುತ್ತವೆ. ಒತ್ತಡವನ್ನು ಗೆಲ್ಲಲಿದ್ದೀರಿ. ಈ ಹಿಂದೆ ನೀವು ಮಾಡಿದಂಥ ದೊಡ್ಡ ಖರ್ಚುಗಳಿಗೆ ಹೇಗೆ ಹಣ ಹೊಂದಿಸುವುದು ಎಂಬ ಚಿಂತೆಯಲ್ಲಿದ್ದರೆ ಅದಕ್ಕೆ ಪರಿಹಾರ ದೊರೆಯಲಿದೆ. ನಿಮ್ಮ ಮಾತಿನಿಂದ ಕುಟುಂಬದಲ್ಲಿ ಸಾಮರಸ್ಯ, ಒಗ್ಗಟ್ಟು ತರುವಲ್ಲಿ ಯಶಸ್ಸು ಕಾಣುತ್ತೀರಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಕುಟುಂಬದಲ್ಲಿ ಸಣ್ಣ- ಪುಟ್ಟ ಮನಸ್ತಾಪ ಉಂಟಾದಲ್ಲಿ ಮೃದುವಾದ ಮಾತುಗಳನ್ನಾಡಿ, ಅದನ್ನು ಪರಿಹರಿಸುವ ಕಡೆಗೆ ಗಮನ ನೀಡಿ. ಇನ್ನು ಪ್ರೀತಿಯಲ್ಲಿ ಇರುವವರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಮಯ ಕೊಡಿ. ಜಠರಕ್ಕೆ ಸಂಬಂಧಿಸಿದಂತೆ ಸಣ್ಣಪುಟ್ಟ ತೊಂದರೆ ಕಾಣಿಸಿಕೊಳ್ಳಬಹುದು. ನಿಯಮಿತ ಆಹಾರ ಸೇವನೆ ಮತ್ತು ವಿಶ್ರಾಂತಿಗೆ ಪ್ರಾಮುಖ್ಯ ನೀಡಿ. ವಿದ್ಯಾರ್ಥಿಗಳಿಗೆ ಸ್ನೇಹಿತರ ಜತೆ ಒಳ್ಳೆಯ ಸಮಯ ಕಳೆಯುವ ಅವಕಾಶ ದೊರಕುತ್ತದೆ.

ಲೇಖನ- ಸ್ವಾತಿ ಎನ್.ಕೆ.

Follow Us