
ಈ ದಿನ ನಿಮ್ಮ ಮನೆ ಹತ್ತಿರದ ಕೃಷ್ಣನ ದೇವಸ್ಥಾನಕ್ಕೆ ತೆರಳಿ, ಅಲ್ಲಿಗೆ ತುಳಸಿ ಹಾರದ ಸಮರ್ಪಣೆ ಮಾಡುವುದರಿಂದ ಇಷ್ಟು ಸಮಯ ನಿಮಗೆ ಕಾಡುತ್ತಿದ್ದ ದ್ವಂದ್ವ ದೂರವಾಗಲಿದೆ. ಇನ್ನು ಮುಖ್ಯವಾದ ವ್ಯಕ್ತಿಗಳ ಭೇಟಿಗೆ ತೆರಳುತ್ತಾ ಇದ್ದೀರಿ ಅಂತಾದಲ್ಲಿ ಮನೆಯಿಂದ ಹೊರಡುವ ಮೊದಲು ನಾಲ್ಕು ಹಸಿ ಕಡ್ಲೇಕಾಳು ಬಾಯಿಗೆ ಹಾಕಿಕೊಂಡು ಅಗೆದು, ಮುಂದುವರಿಯಿರಿ.
ಮನ ಮುಟ್ಟುವಂತೆ ಎಲ್ಲ ವಿಚಾರಗಳನ್ನು ಇತರರಿಗೆ ದಾಟಿಸುವುದಕ್ಕೆ ಸಫಲರಾಗಲಿದ್ದೀರಿ. ಮುಂದಾಲೋಚನೆಯಿಂದ ಲೆಕ್ಕ ಹಾಕಿಕೊಂಡು ಇಟ್ಟ ಹೆಜ್ಜೆಗಳು ಫಲ ನೀಡಲಿವೆ. ಯಾರು ಬದ್ಧತೆಯಿಂದ ನಿಮ್ಮ ಸಲಹೆ- ಸೂಚನೆಯನ್ನು ಅನುಸರಿಸಿದವರಿಗೆ ದೊಡ್ಡ ಲಾಭವಾಗುವ ಸಾಧ್ಯತೆಗಳಿವೆ. ಇತರರು ತಮ್ಮಿಂದ ಪೂರ್ತಿ ಮಾಡಲು ಸಾಧ್ಯವಿಲ್ಲ ಎಂದು ಅರ್ಧಕ್ಕೇ ನಿಲ್ಲಿಸಿದ ಕೆಲಸವೊಂದನ್ನು ಪೂರ್ತಿ ಮಾಡಬೇಕಾದ ಜವಾಬ್ದಾರಿ ನಿಮಗೆ ಬರಲಿದೆ.
ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡ ಕೆಲಸಗಳಲ್ಲಿ ದೊಡ್ಡ ಯಶಸ್ಸು ಸಿಗುವ ಎಲ್ಲ ಸಾಧ್ಯತೆಗಳಿವೆ. ಯಾರು ಉದ್ಯೋಗಕ್ಕೆ ಸಂಬಂಧಿಸಿದಂಥ ಪರೀಕ್ಷೆಗಳನ್ನು ಬರೆದಿರುತ್ತಾರೋ ಅಂಥವರಿಗೆ ಶುಭ ಸುದ್ದಿ ಕೇಳುವಂಥ ಯೋಗ ಇದೆ. ಮದುವೆಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಸಂಬಂಧಿಕರ ಮುಖಾಂತರ ರೆಫರೆನ್ಸ್ ಗಳು ಬರಬಹುದು. ಇದು ನಿಮ್ಮ ಮನಸ್ಸಿಗೆ ಒಪ್ಪುವ ಸಾಧ‌್ಯತೆಗಳು ಸಹ ಹೆಚ್ಚಿವೆ.
ಸಣ್ಣ- ಪುಟ್ಟದಾದರೂ ಮನೆ ಮಟ್ಟಿಗೆ ಕಾರ್ಯಕ್ರಮ ಆಯೋಜಿಸುವಂಥ ಸಾಧ್ಯತೆ ಇದೆ. ತಂದೆ ಅಥವಾ ತಂದೆ ಸಮಾನರಾದವರ ಆರೋಗ್ಯ ಸ್ಥಿತಿ ಸ್ವಲ್ಪ ಆತಂಕಕ್ಕೆ ಕಾರಣ ಆಗಬಹುದು. ನಿಮ್ಮೆಲ್ಲ ಪ್ರಯತ್ನವನ್ನು ಮಾಡಿದ ನಂತರದಲ್ಲಿಯೂ ಒಬ್ಬರೇ ವ್ಯಕ್ತಿ, ಒಂದೇ ವಿಷಯ, ಒಂದು ವಸ್ತು ನಿಮ್ಮನ್ನು ಈ ದಿನ ಬಹುವಾಗಿ ಕಾಡಬಹುದು. ಅದರಲ್ಲೂ ಕೊನೆ ಕ್ಷಣದಲ್ಲಿ ನಿರ್ಧಾರಗಳಲ್ಲಿ ಬಹಳ ಏರುಪೇರು ಮಾಡಲಿದ್ದೀರಿ.
ಲೇಖನ- ಸ್ವಾತಿ ಎನ್.ಕೆ.