AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope; ದಿನ ಭವಿಷ್ಯ | ತುಲಾ ರಾಶಿಯವರಿಗೆ ವಿಶ್ರಾಂತಿ ಇಲ್ಲದ ದುಡಿಮೆ ಬೇಸರ ತರಲಿದೆ..

Horoscope Today ನಿತ್ಯ ಪಂಚಾಂಗ: ಶಾರ್ವರಿನಾಮ ಸಂವತ್ಸರ, ಉತ್ತರಾಯಣ, ಮಾಘಮಾಸ, ಶಿಶಿರ ಋತು, ಶುಕ್ಲಪಕ್ಷ, ಷಷ್ಠಿ ತಿಥಿ, ಗುರುವಾರ, ಫೆಬ್ರವರಿ 18, 2021 ಭವಿಷ್ಯ.

Horoscope; ದಿನ ಭವಿಷ್ಯ | ತುಲಾ ರಾಶಿಯವರಿಗೆ ವಿಶ್ರಾಂತಿ ಇಲ್ಲದ ದುಡಿಮೆ ಬೇಸರ ತರಲಿದೆ..
ರಾಶಿ ಭವಿಷ್ಯ
ರಾಜೇಶ್ ದುಗ್ಗುಮನೆ
| Updated By: ಆಯೇಷಾ ಬಾನು|

Updated on: Feb 18, 2021 | 6:29 AM

Share

ನಿತ್ಯ ಪಂಚಾಂಗ: ಶಾರ್ವರಿನಾಮ ಸಂವತ್ಸರ, ಉತ್ತರಾಯಣ, ಮಾಘಮಾಸ, ಶಿಶಿರ ಋತು, ಶುಕ್ಲಪಕ್ಷ, ಷಷ್ಠಿ ತಿಥಿ, ಗುರುವಾರ, ಫೆಬ್ರವರಿ 18, 2021. ಭರಣಿ ನಕ್ಷತ್ರ, ರಾಹುಕಾಲ: ಇಂದು ಮಧ್ಯಾಹ್ನ 1:56 ರಿಂದ ಮಧ್ಯಾಹ್ನ 3:23 ವರೆಗೆ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 6.41. ಸೂರ್ಯಾಸ್ತ: ಸಂಜೆ 6.18.

ದಿನಾಂಕ: 18-02-2021 ರ ಗುರುವಾರದ ರಾಶಿಭವಿಷ್ಯ

ಮೇಷ: ದೂರಾಲೋಚನೆಯಿಂದ ಕಾರ್ಯದಲ್ಲಿ ಯಶಸ್ಸು. ಆಸ್ತಿ ಖರೀದಿ ಸಾಧ್ಯ.ವೈವಾಹಿಕ ಚಿಂತೆ ಇರುವದು. ಧಾರ್ಮಿಕ ಸಮಾರಂಭಗಳಲ್ಲಿ ಭಾಗಿಯಾಗುವ ಯೋಗವಿದೆ. ಧಾರ್ಮಿಕ ಕ್ಷೇತ್ರಗಳ ದರ್ಶನ ಯೋಗವಿದೆ. ಶುಭ ಸಂಖ್ಯೆ:8

ವೃಷಭ: ಗಂಭೀರ ಆರೋಪದಿಂದ ಮುಕ್ತರಾಗುವಿರಿ. ಅನುಕೂಲಕರ ವಾತಾವರಣ ಇರುವದರಿಂದ ಇನ್ನೂ ಹೆಚ್ಚಿನ ವ್ಯವಹಾರಿಕ ಸುಧಾರಣೆ ಮಾಡಲು ಪ್ರಯತ್ನಿಸಿರಿ.ಆರೋಗ್ಯದ ಸೂಕ್ತ ಕಾಳಜಿ ವಹಿಸಿರಿ. ಶುಭ ಸಂಖ್ಯೆ: 3

ಮಿಥುನ: ಕೆಲಸಗಳು ನಿಧಾನಗತಿಯಲ್ಲಿ ಸಾಗುವವು ಸೂಕ್ಷ್ಮತೆಯಿಂದ ವ್ಯವಹರಿಸಿರಿ. ಮಹತ್ವದ ಕಾರ್ಯ ಕಲಾಪಗಳಲ್ಲಿ ಭಾಗವಹಿಸುವ ಯೋಗವಿದೆ. ಮನೋಚಿಂತಿತ ಕಾರ್ಯ ಕೈಗೂಡುವದು. ಹಳೆಯ ಸಾಲ ತೀರುವದು. ಶುಭ ಸಂಖ್ಯೆ: 7

ಕರ್ಕ: ಹೊಸ ವಿಚಾರಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುವಿರಿ. ಕಠಿಣ ಪರಿಸ್ಥಿತಿಯಲ್ಲಿಯೂ ದುರ್ಲಭ ಸಾಧನೆ ಮಾಡುವಿರಿ. ಪರಿವಾರದಲ್ಲಿ ಸಂತಸವಿರುವದು. ಕೇಡುಬಯಸುವ ಜನರಿಗೆ ಅಂಜದೇ ಮುಂದುವರಿಯಿರಿ. ಶುಭ ಸಂಖ್ಯೆ: 6

ಸಿಂಹ: ಸಾಲಗಾರರ ತೊಂದರೆ ಇರುವದು. ಅನಾರೋಗ್ಯ, ವ್ಯವಹಾರದಲ್ಲಿ ಹಾನಿ ಕಂಡುಬರುವದು. ನಿಧಾನಗತಿಯ ಕೆಲಸದಿಂದ ಮನೋಕ್ಷೋಭೆ ಉಂಟಾಗುವ ಸಂಭವವಿದೆ. ಶುಭ ಸಂಖ್ಯೆ: 9

ಕನ್ಯಾ: ನಿಶ್ಚಿತ ಕೆಲಸಕ್ಕೆ ಬೆಂಬಲ ಸಿಗುವದರಿಂದ ಉತ್ತಮ ಫಲ ದೊರೆಯುವದು. ಸುಮ್ಮನೇ ಕೂಡದ ಜಾಯಮಾನ ಇರುವದರಿಂದ ಹೊಸ ಯೋಜನೆಯನ್ನು ರೂಪಿಸುವಿರಿ. ಹಿಂದಿನ ಬಾಕಿ ವಸೂಲಾತಿಗೆ ಶ್ರಮಿಸಬೇಕಾಗುವದು. ಶುಭ ಸಂಖ್ಯೆ: 2

ತುಲಾ: ವಿಶ್ರಾಂತಿ ಇಲ್ಲದ ದುಡಿಮೆ ಬೇಸರ ತರುವದು. ಜವಾಬ್ದಾರಿಗಳ ಹಂಚಿಕೆ ಮಾಡುವ ಪ್ರಮೇಯ ಉಂಟಾಗುವದು. ಮಿತಿ ಮೀರಿದ ಆಲೋಚನೆಗಳು ದಿಕ್ಕು ತಪ್ಪಿಸುವ ಸಾಧ್ಯತೆ ಇದೆ. ಆರ್ಥಿಕ ಲಾಭ ಇಲ್ಲದಿದ್ದರೂ ಹಾನಿ ಇರುವದಿಲ್ಲ. ಶುಭ ಸಂಖ್ಯೆ: 5

ವೃಶ್ಚಿಕ: ಹಣಕಾಸಿನ ವಿಷಯದಲ್ಲಿ ಬಂಧುಗಳೊಂದಿಗೆ ಮನಸ್ತಾಪವಾಗುವ ಸಾಧ್ಯತೆ ಇದೆ. ಸಹಾನುಭೂತಿಗೆ ಮಣಿಯದೆ ಇರುವದು ಒಳಿತು. ಉನ್ನತ ಅಧಿಕಾರಿಗಳಿಂದ ತೊಂದರೆ ಉಂಟಾಗುವದು. ಆತ್ಮವಿಶ್ವಾಸದಿಂದ ಮುಂದುವರೆಯಿರಿ. ಶುಭ ಸಂಖ್ಯೆ: 8

ಧನು: ತಾಪತ್ರಯಗಳೆಲ್ಲ ದೂರವಾಗಿದ್ದು ಆರ್ಥಿಕ ಸ್ಥಿತಿ ಸುಧಾರಣೆಯಾಗುತ್ತದೆ. ವ್ಯಾಪಾರಾದಿ ಉದ್ಯಮಗಳು ಇಷ್ಟದಂತೆ ನಡೆಯುತ್ತದೆ. ಕೆಲವೊಮ್ಮೆ ಸಣ್ಣ ವಿಷಯಗಳಿಗೂ ಭಯ ತೋರಿದರೂ ಹಾನಿಯಿಲ್ಲ. ಶುಭ ಸಂಖ್ಯೆ: 3

ಮಕರ: ಮನೆ, ನಿವೇಶನ, ಆಸ್ತಿ ಖರೀದಿ ಯೋಗವಿದೆ. ವ್ಯವಹಾರದಲ್ಲಿ ಜಾಗ್ರತೆ ಇರಲಿ. ವ್ಯಾಪಾರ ಉತ್ತಮವಾಗಿರುವದು. ಉತ್ಸಾಹ ಮೂಡುವದು. ದೋಷ ಪರಿಹಾರಕ್ಕೆ ಜಲದಾನ ಮಾಡಿರಿ. ಶುಭ ಸಂಖ್ಯೆ: 5

ಕುಂಭ: ಅಲ್ಪ ತ್ರಾಸದಾಯಕ. ಗಡಿಬಿಡಿಯ ವಾತಾವರಣ, ಆರೋಗ್ಯದಲ್ಲಿ ಏರುಪೇರು ಸಂಭವ. ಮಹತ್ವದ ಕೆಲಸಗಳನ್ನು ಮುಂದೂಡುವದು ಒಳ್ಳೆಯದು. ಮಂಗಲಕಾರ್ಯ, ಹೆಸರು, ಕಡಲೆ ದಾನ ಮಾಡಿರಿ. ಶುಭ ಸಂಖ್ಯೆ: 9

ಮೀನ: ದಿಟ್ಟತನ, ಮನೋಸ್ಥೈರ್ಯ, ನೇರ,ನಿಷ್ಟುರ ನಡೆಗಳಿಗೆ ಉತ್ತಮ ಫಲಪಾಪ್ತವಾಗುವುದು. ನಿಮ್ಮ ನಿರ್ಧಾರಗಳು ಪರಿವರ್ತನೆಗೆ ಕಾರಣವಾಗುವವು. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರುವದು. ಶುಭ ಸಂಖ್ಯೆ: 4

basavaraj guruji

ಬಸವರಾಜ ಗುರೂಜಿ(ಡಾ.ಬಸವರಾಜ ಗುರೂಜಿ ಸಂಪರ್ಕ ಸಂಖ್ಯೆ: 9972848937)

ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ