ಈ ರಾಶಿಯವರಿಗೆ ಇಂದಿನ ವೃತ್ತಿಯು ಕಲಹದಿಂದ ಆರಂಭವಾಗಬಹುದು
ಶಾಲಿವಾಹನ ಶಕವರ್ಷ 1947ರ ಉತ್ತರಾಯಣ, ಶಿಶಿರ ಋತುವಿನ ಫಾಲ್ಗುಣ ಮಾಸ ಶುಕ್ಲ ಪಕ್ಷದ ದ್ವಾದಶೀ ತಿಥಿ, ಬುಧವಾರ ಅಪ್ರಾಮಾಣಿಕತೆ, ಪ್ರೀತಿಪಾತ್ರರು ದೂರ, ದುರಭ್ಯಾಸ, ನಿರುದ್ಯೋಗದಿಂದ ದುಃಖ ಇವೆಲ್ಲ ಈ ದಿನದ್ದು. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ? ನಿಮ್ಮ ದಿನ ಭವಿಷ್ಯ ತಿಳಿದುಕೊಳ್ಳಿ.

ಪಂಚಾಂಗ: ಶಾಲಿವಾಹನ ಶಕೆ 1947ರ ಕ್ರೋಧೀ ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಸೌರ ಮಾಸ : ಕುಂಭ ಮಾಸ, ಮಹಾನಕ್ಷತ್ರ : ಪೂರ್ವಾಭಾದ್ರಾ, ಮಾಸ : ಫಾಲ್ಗುಣ, ಪಕ್ಷ : ಶುಕ್ಲ, ವಾರ : ಬುಧ, ತಿಥಿ : ತ್ರಯೋದಶೀ, ನಿತ್ಯನಕ್ಷತ್ರ : ಮಘಾ, ಯೋಗ : ಸುಕರ್ಮ, ಕರಣ : ತೈತಿಲ, ಸೂರ್ಯೋದಯ – 06 – 43 am, ಸೂರ್ಯಾಸ್ತ – 06 – 41 pm, ಇಂದಿನ ಶುಭಾಶುಭಕಾಲ : ರಾಹು ಕಾಲ 12:42 – 14:12, ಯಮಘಂಡ ಕಾಲ 08:13 – 09:43, ಗುಳಿಕ ಕಾಲ 11:13 – 12:42
ಮೇಷ ರಾಶಿ: ಇಂದಿನ ವೃತ್ತಿಯು ಕಲಹದಿಂದ ಆರಂಭವಾಗಬಹುದು. ಇಂದು ನಿದ್ರಾಭಂಗದಿಂದ ಬಹಳ ಕಷ್ಟಪಡಬೇಕಾದೀತು. ಗುರುಸೇವೆಯನ್ನು ಮಾಡುವ ಅವಕಾಶದಿಂದ ವಂಚಿತರಾಗುವುದು ಬೇಡ. ನಿಮ್ಮ ಪ್ರಾಮಾಣಿಕತೆಗೆ ಪ್ರಶಂಸೆಯು ಸಿಗುವುದು. ಹೇಳಿದಷ್ಟು ಸುಲಭವಾಗಿ ಏನನ್ನೂ ಮಾಡಲಾಗದು. ವಾಹನ ಚಾಲನೆಯಲ್ಲಿ ಕಿರಿಕಿರಿ. ಇಷ್ಟಪಟ್ಟವರನ್ನು ದೂರ ಮಾಡಿಕೊಳ್ಳುವಿರಿ. ಅನ್ಯರ ವಿಚಾರದಲ್ಲಿ ನಿಮಗೆ ಆಸಕ್ತಿಯು ಕಡಿಮೆ ಆಗುವುದು. ಸರ್ಕಾರದ ಕೆಲಸಕ್ಕಾಗಿ ಅಧಿಕ ಓಡಾಟವಾಗುವುದು. ಆರ್ಥಿಕ ನೆರವನ್ನು ಯಾರಿಂದಲಾದರೂ ನೀವು ಬಯಸುವಿರಿ. ಸಮಾಧನ ಚಿತ್ತದಿಂದ ಇರಬೇಕು ಎಂದು ಅನಿಸಿದರೂ ಅದನ್ನು ಕಾರ್ಯರೂಪಕ್ಕೆ ತರಲಾಗದು. ಅನಿರೀಕ್ಷಿತ ಘಟನೆಯಿಂದ ಸ್ತಬ್ಧವಾಗುವಿರಿ. ವ್ಯವಹಾರದ ವಿಷಯದಲ್ಲಿ ನಿಮಗೆ ಯಾವುದೇ ಔದಾರ್ಯ ಬೇಡ. ನಿಮ್ಮ ಸ್ವಭಾವದಿಂದ ದಾಂಪತ್ಯದಲ್ಲಿ ಕೆಲವು ಮಾತುಗಳು ಕೇಳಿಬರಬಹುದು. ಸಹೋದರನ ಪ್ರೀತಿಯಿಂದ ಸಂತೋಷಪಡುವಿರಿ. ಬೇಕಾದವರ ಪ್ರೀತಿ ಸಿಗದೇ ಬೇಸರ.
ವೃಷಭ ರಾಶಿ: ನಿಮ್ಮ ಇಂದಿನ ಚಟುವಟಿಕೆಗಳನ್ನು ಸಮಯಕ್ಕೆ ತಕ್ಕಂತೆ ಬದಲಿಸುವಿರಿ. ಮಾತನ್ನು ಉಳಿಸಿಕೊಳ್ಳಲು ಸೋಲುಬಹುದು. ಚೋರ ಭಯವು ನೀವು ಹೊರಗೆ ಹೋದಾಗಕಾಡಬಹುದು. ಕೇಳಿದಷ್ಟಕ್ಕೆ ಮಾತ್ರ ಉತ್ತರಿಸುವಿರಿ. ನಿಮ್ಮ ಪುಟ್ಟ ಪ್ರಪಂಚದಿಂದ ಹೊರಬರಲು ತಯಾರಾಗುವಿರಿ. ಸ್ವಾರ್ಥಕ್ಕಾಗಿ ಯಾರನ್ನೂ ಕಳೆದುಕೊಳ್ಳುವಿರಿ. ವಿದ್ಯಾರ್ಥಿಗಳಿಗೆ ವೈದ್ಯಕೀಯ ವೃತ್ತಿಯ ಬಗ್ಗೆ ಆಸಕ್ತಿ ಅಧಿಕವಾಗುವುದು. ವೃತ್ತಿಪರ ವ್ಯವಹಾರಗಳು ಲಾಭದಾಯಕ. ಬಂಧುಗಳ ನಕಾರಾತ್ಮಕ ಮಾತುಗಳಿಂದ ನಿಮಗೆ ಬೇಸರವಾದೀತು. ಆಡಿದ ಮಾತಿಗೆ ಕ್ಷಮೆಯನ್ನು ಕೇಳಬೇಕಾದೀತು. ನಿಮ್ಮ ಸುರಕ್ಷತೆಯಲ್ಲಿ ನೀವಿರುವುದು ಉತ್ತಮ. ಕಛೇರಿಯಲ್ಲಿ ಸರಿಯಾದ ಕೆಲಸವನ್ನು ಮಾಡಲು ಸಾಧ್ಯವಾಗದೇ ಹೋಗಬಹುದು. ನಿಮ್ಮ ಗೌಪ್ಯ ವಿಚಾರವನ್ನು ಮುಚ್ಚಿಡಲು ಪ್ರಯತ್ನಿಸುವಿರಿ. ಹಳೆಯ ಹೂಡಿಕೆಯಿಂದ ಲಾಭವು ಸಿಗಲಿದೆ. ಯಾವುದೂ ಕರಗತ ಆಗದೇ ಪ್ರದರ್ಶನಕ್ಕೆ ಒಪ್ಪಿಗೆ ಕೊಡುವುದು ಬೇಡ. ಶುದ್ಧತೆಯ ಬಗ್ಗೆ ಕಾಳಜಿ ಅಧಿಕವಾಗಿರುವುದು.
ಮಿಥುನ ರಾಶಿ: ಕೇಳಿದ ವಿಚಾರವನ್ನೇ ಮತ್ತೆ ಮತ್ತೆ ಕೇಳಬೇಕಾಗಬಹುದು. ಧಾರ್ಮಿಕ ಆಚರಣೆಯಲ್ಲಿ ಆಸಕ್ತಿ ಹೆಚ್ಚಿದ್ದು, ಬೇಕಾದ ಕಾರ್ಯವನ್ನು ಮಾಡುವಿರಿ. ಕಲಹವನ್ನು ಸಂಧಾನದ ಮೂಲಕ ಸರಿಮಾಡಿಕೊಳ್ಳುವ ಪ್ರಯತ್ನ ಫಲಿಸುವುದು. ಅತಿಯಾದ ಮಾತು ನಿಮಗೆ ತೊಂದರೆಯನ್ನು ಕೊಟ್ಟೀತು. ಉದ್ಯೋಗದಲ್ಲಿ ಭಡ್ತಿಗಾಗಿ ಕಾಯುತ್ತಿದ್ದು ಇಂದು ಸಿಗಬಹುದು. ಸ್ನೇಹಿತರಿಂದ ನಿಮಗೆ ಬಹುಮಾನ ಸಿಗಬಹುದು. ದೂರದ ಊರಿಗೆ ಒಬ್ಬರೇ ವಾಹನ ಚಲಾಯಿಸುವಿರಿ. ಆಭರಣಗಳನ್ನು ಖರೀದಿಸಲು ಹಣವನ್ನು ಖರ್ಚು ಮಾಡುವ ಅವಕಾಶ ಎದುರಾಗಬಹುದು. ವ್ಯಾಪಾರದಲ್ಲಿ ಮಧ್ಯವರ್ತಿಗಳಿಂದ ನಿಮ್ಮ ವ್ಯಾಪಾರವು ಕುಂಠಿತವಾಗುವುದು. ಯಾರೋ ಹೆಣೆದ ಮೋಸದ ಜಾಲಕ್ಕೆ ಸಿಕ್ಕಬಹುದು. ಆಭರಣ ಖರೀದಿಯಿಂದ ಮುಂದಕ್ಕೆ ಬಳಕೆಯಾಗಬಹುದು. ಉತ್ತಮ ಆಹಾರವನ್ನು ಪಡೆಯಲು ಯತ್ನಿಸಿ. ಅಪ್ರಸ್ತುತ ಆಲೋಚನೆಗೆ ಬ್ರೇಕ್ ಹಾಕಿಕೊಂಡಷ್ಟು ಒಳ್ಳೆಯದು. ಕಲಾವಿದರು ಅವಕಾಶದ ನಿರೀಕ್ಷೆಯಲ್ಲಿ ಇರುವರು. ಹಳೆಯ ಪ್ರೇಮಿಯ ಭೇಟಿಯಾಗಿ ಮುಜುಗರಕ್ಕೆ ಸಿಕ್ಕಿಕೊಳ್ಳಬಹುದು. ಸ್ಥಿತಿವಂತರ ಜೊತೆ ಮಾತನಾಡಲು ಇಷ್ಟವಾಗದು.
ಕರ್ಕಾಟಕ ರಾಶಿ: ಸರಿಯಾದ ನೆಲೆಯನ್ನು ಕಂಡುಕೊಳ್ಳುವಲ್ಲಿ ಯಶಸ್ಸು ಸಿಗಲಿದೆ. ವಿದ್ಯಾಭ್ಯಾಸಕ್ಕೆ ಪ್ರೇಮವು ತೊಂದರೆ ಕೊಟ್ಟೀತು. ಬಂಧುಗಳ ಆಗಮನದಿಂದ ಸಂತೋಷಗೊಳ್ಳುವಿರಿ. ಹಣಕಾಸಿನ ಹರಿವು ಸರಿಯಾದ ಮಾರ್ಗದಲ್ಲಿ ಬರವಂತೆ ನೋಡಿಕೊಳ್ಳಿ. ಯಾರ ಬಳಿಯೂ ಸಹಾಯ ಹಸ್ತವನ್ನು ಚಾಚದೇ ಸ್ವಂತ ಬಲದ ಮೇಲೆ ಬರುವ ಆಸೆ ಇರಲಿದೆ. ಪರಿಚಿತರ ಜೊತೆ ಸಾಮಾಜಿಕ ಚಟುವಟಿಕೆಯಲ್ಲಿ ಭಾಗಿ. ನಿಮ್ಮ ನಿಷ್ಕಾಳಜಿಯಿಂದ ಅನಾಯಾಸವಾಗಿ ಬರುವ ಆದಾಯವು ಸಿಗದೇ ಹೋಗುವುದು. ಸಂಗಾತಿಯಿಂದ ಅವಮಾನವಾಗುವುದು. ಸಹೋದರನಿಂದ ಉಡುಗೊರೆಯು ಸಿಗಬಹುದು. ಚಂಚಲ ಸ್ವಭಾವವು ತಾನಾಗಿಯೇ ಕಡಿಮೆಯಾಗಿದ್ದು ಅಚ್ಚರಿ ಆಗಬಹುದು. ವಿರೋಧದ ನಡುವೆ ಗೆಲುವು ಸಂತೋಷವನ್ನು ಹೆಚ್ಚು ಮಾಡುಬುದು. ವೃತ್ತಿಯಲ್ಲಿ ಬಂದ ಮಾತಿನಿಂದ ನೀವು ಉದ್ವೇಗಗೊಳ್ಳುವ ಅವಶ್ಯಕತೆ ಇರುವುದಿಲ್ಲ. ಕೆಲವರ ವಿಚಾರದಲ್ಲಿ ನಿಮ್ಮ ದೃಷ್ಟಿಯನ್ನು ಬದಲಿಸಿಕೊಳ್ಳುವುದೇ ಯೋಗ್ಯವಾದುದು. ನಿಮಗೆ ಮೇಲಧಿಕಾರಿಗಳ ಬಗ್ಗೆ ಸದ್ಭಾವವು ಇರದು.
ಸಿಂಹ ರಾಶಿ: ನಿಮ್ಮ ನಿರ್ಧಾರಗಳಿಗೆ ಸ್ನೇಹಿತರ ಬೆಂಬಲವಿದೆ ಯಾರನ್ನಾದರೂ ಪ್ರಶಂಸಿಸುವ ಮನಸ್ಸಾಗುವುದು. ನಿಯಮಿತ ಆಹಾರದಿಂದ ನಿಮಗೆ ಸೌಖ್ಯವು ಸಿಗಬಹುದು. ನೂತನ ವಾಹನದಿಂದ ಅಹ್ಲಾದಕರವಾಗಿ ಇರುವಿರಿ. ಅಲ್ಪ ಕಾಲ ಮನೆಯಿಂದ ದೂರ ಉಳಿಯವಿರಿ. ಸಂಗಾತಿಯ ಸಣ್ಣ ಮಾತೂ ನಿಮಗೆ ದೋಷವಾಗಿ ಕಾಣಬಹುದು. ಸಣ್ಣ ಆರೋಗ್ಯದ ತೊಂದರೆಯೂ ನಿಮ್ಮ ಮನಸ್ಸಿಗೆ ಕಿರಿಕಿರಿಯನ್ನು ಉಂಟುಮಾಡುವುದು. ಕಾರ್ಯದಲ್ಲಿ ವೇಗವು ಕುಂಠಿತವಾಗುವುದು. ಸರ್ಕಾರದ ಸೌಲಭ್ಯವು ನಿಮಗೆ ಸಿಗದೇ ಹೋಗಬಹುದು. ನಿಮ್ಮ ಕೆಲಸವು ಸಂದೇಹಕ್ಕೆ ಆಸ್ಪದ ಕೊಡುವುದು ಬೇಡ. ಮಕ್ಕಳ ವಿದೇಶ ಪ್ರವಾಸವು ಖುಷಿಕೊಡದು. ಯಶಸ್ಸನ್ನು ಪಡೆಯುವ ಹಂಬಲವಿರಲಿದೆ. ನೀವು ನೋಡಿದ್ದೇ ಸತ್ಯ ಎಂದು ತಿಳಿದುಕೊಳ್ಳುವುದು ಬೇಡ. ಉತ್ತಮ ವಸ್ತುವಿನ ದಾನದಿಂದ ಯಶಸ್ಸು ಪ್ರಾಪ್ತವಾಗುವುದು. ಇಂದು ಯಾರಿಗೂ ನಿಮ್ಮ ಅವಶ್ಯಕತೆ ಇಲ್ಲದೇ ಹೋಗಬಹುದು. ಸರಳತೆಯು ನಿಮ್ಮ ಸ್ವಭಾವವಾಗಿರಲಿ.
ಕನ್ಯಾ ರಾಶಿ: :ಸರಿಯಾದ ವ್ಯಾಪಾರವಾಗದೇ ಕಷ್ಟವಾದೀತು. ಹಳೆಯ ವಸ್ತುಗಳನ್ನು ಮಾರಾಟ ಮಾಡಿ ಬೇಕಾದುದನ್ನು ಖರೀದಿಸುವ ಅನಿವಾರ್ಯತೆ ಬರಬಹುದು. ನಿಮ್ಮ ಅಹಂಕಾರವು ಹತಾಶೆಯನ್ನು ತರಿಸೀತು. ಶತ್ರುಗಳ ಕಾರಣದಿಂದ ಖರ್ಚುನ್ನು ಮಾಡಬೇಕಾದ ಸ್ಥಿತಿಯು ಬರಲಿದೆ. ಮನಸ್ಸಿಗೆ ಬೇಕಾದ ನೆಮ್ಮದಿಯಿಂದ ಹುಡುಕಾಟದಲ್ಲಿ ಇರುವಿರಿ. ಧಾರ್ಮಿಕ ಕ್ಷೇತ್ರದ ಭೇಟಿಕೊಡುವಿರಿ. ಅಕಾಲದಲ್ಲಿ ಸೇವಿಸಿದ ಆಹಾರದಿಂದ ನಿಮಗೆ ಆರೋಗ್ಯವು ಹಾಳಾಗುವುದು. ನಿಮ್ಮ ಮಾತುಗಳು ಪಾಲನೆಯಗದೇ ಇರಬಹುದು. ಮನೆಯಲ್ಲಿ ನೌಕರರ ಕಾರಣಕ್ಕೆ ಸಿಟ್ಟಾಗುವಿರಿ. ಹೊಸ ಸಂಬಂಧದ ಕಡೆ ನಿಮ್ಮ ಚಿತ್ತವು ಇರಲಿದೆ. ಸಾಲದಿಂದ ನಿಮ್ಮ ಮನಸ್ಸು ಕುಗ್ಗುವುದು. ನಿರಂತರ ಕೆಲಸವನ್ನು ಮಾಡುವುದು ಇಷ್ಟವಾಗಲಿದೆ. ಸಂಗಾತಿಯ ಭಾವನೆಗೆ ಬೆಲೆ ಕೊಟ್ಟು ಸಂತೋಷಪಡಿಸುವಿರಿ. ವೈವಾಹಿಕ ಸಂಬಂಧವನ್ನು ಸರಿಯಾಗಿ ಇಟ್ಟುಕೊಳ್ಳಿ. ಉದ್ಯಮದಲ್ಲಿ ನಿರಂತರ ಸಂಪರ್ಕವಿರಲಿ. ಹಣಕಾಸಿನ ಉಳಿತಾಯದ ಬಗ್ಗೆ ಅಧಿಕ ಗಮನ ಕೊಡುವಿರಿ.