ದಿನ ಭವಿಷ್ಯ: ಇಂದು ಈ ರಾಶಿಯವರ ವರ್ತನೆ ವಿಭಿನ್ನ ಹಾಗೂ ಅತಿರೇಕವೂ ಆಗಿರಲಿದೆ..

Daily Horoscope Mach 14: ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಶಿಶಿರ ಋತುವಿನ ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಏಕಾದಶೀ ತಿಥಿಯ ಶನಿವಾರ ಅಲೆದಾಟ, ವ್ಯಕ್ತಿತ್ವದ ವಿಕಾಸ, ಅಪರಿಚಿತರ ಸಹವಾಸ, ಮುಖದಲ್ಲಿ ಮಂದಹಾಸ, ಗೊತ್ತಿಲ್ಲದ ಕಾರ್ಯದಲ್ಲಿ ಸಾಹಸ, ಅಧಿಕಾರದಲ್ಲಿ ಗೊಂದಲ ಎಲ್ಲವೂ ಈ ದಿನದ ವಿಶೇಷ.

ದಿನ ಭವಿಷ್ಯ: ಇಂದು ಈ ರಾಶಿಯವರ ವರ್ತನೆ ವಿಭಿನ್ನ ಹಾಗೂ ಅತಿರೇಕವೂ ಆಗಿರಲಿದೆ..
ದಿನ ಭವಿಷ್ಯ
Edited By:

Updated on: Mar 14, 2026 | 12:02 AM

ಮೇಷ ರಾಶಿ:

ಇಂದಿನ ಪ್ರಯಾಣದಲ್ಲಿ ಅಡೆತಡೆಗಳಿದ್ದರೂ ಅದನ್ನು ಲೆಕ್ಕಿಸದೇ ಮುನ್ನಡೆಯುವಿರಿ. ಹೊಂದಾಣಿಕೆ ಕಷ್ಟವಾದರೂ ಅನಿವಾರ್ಯವಾಗಬಹುದು. ಶರೀರದಲ್ಲಿ ಅಸಮತೋಲನವು ಇರಲಿದೆ. ಇಂದು ಉಪಾಯದಿಂದ ಕೆಲಸವನ್ನು ಮಾಡುವುದು ಉತ್ತಮ. ಸ್ನೇಹಿತರ ವಿವಾಹ ಸಮಾರಂಭದಲ್ಲಿ ಖುದ್ದಾಗಿ ಭಾಗಿಯಾಗುವಿರಿ. ವ್ಯಾಪಾರವು ಮಧ್ಯಮಗತಿಯಲ್ಲಿ ಇರುವುದು. ನಿಮ್ಮದಾದ ನಿಯಮವನ್ನು ಬಿಡಲು ನೀವು ತಯಾರಿರುವುದಿಲ್ಲ. ಕೆಲವರ‌ ಮನೋಗತವನ್ನು ಅರಿತುಕೊಳ್ಳುವಿರಿ. ಹಿರಿಯರ ಜೊತೆ ವರ್ತನೆಗಳು ಬಿಗುಮಾನದಿಂದ ಇರಲಿದೆ.

ವೃಷಭ ರಾಶಿ:

ದಾಂಪತ್ಯದಲ್ಲಿ ಮನಸ್ತಾಪವನ್ನು ಶಾಂತಗೊಳಿಸಿಕೊಳ್ಳುವುದು ಒಳ್ಳೆಯದು. ಜವಾಬ್ದಾರಿಯನ್ನು ಒಪ್ಪಿಕೊಳ್ಳುವುದಿಲ್ಲ. ಸಂಗಾತಿಯ ಕಾರಣದಿಂದ ನಿಮಗೆ ಬೇಸರವಾಗುವುದು. ಸಕಾಲಕ್ಕೆ ಭೋಜನವನ್ನು ಸ್ವೀಕರಿಸುವುದು ಸೂಕ್ತ. ಕೆಲವರು ನಿಮ್ಮ ದಾರಿ ತಪ್ಪಿಸಬಹುದು. ಅತಿಯಾದ ನಿರೀಕ್ಷೆಯನ್ನು ಇಟ್ಟುಕೊಂಡು ಹತಾಶರಾಗುವಿರಿ. ಮನೆಯ ಕೆಲಸದಲ್ಲಿ ಅಧಿಕ ಸಮಯವನ್ನು ಕಳೆಯುವಿರಿ. ವ್ಯತ್ಯಾಸವನ್ನು ಸರಿದೂಗಿಸವ ಕಲೆ ಬರಬಹುದು.

ಮಿಥುನ ರಾಶಿ:

ನಿಮ್ಮ ಸ್ವೇಚ್ಛಾಚಾರವು ಮನೆಯವರಿಗೆ ಇಷ್ಟವಾಗದು. ನ್ಯಾಯಕ್ಕೆ ಸಮ್ಮತವಾದ ಕಾರ್ಯವನ್ನು ಮಾಡಿ. ಹಿರಿಯರನ್ನು ನೋಡಿಕೊಳ್ಳುವ ಜವಾಬ್ದಾರಿ ಬರಬಹುದು. ಅನಿರೀಕ್ಷಿತ ಧನಾಗಮನದಿಂದ ಸಂತೋಷವು ಇಮ್ಮಡಿಯಾಗಬಹುದು. ವೈದ್ಯರಿಗೆ ಹೆಚ್ಚಿನ ಅವಕಾಶವು ಸಿಗಬಹುದು. ಇನ್ನೊಬ್ಬರ ಗೌಪ್ಯತೆಯನ್ನು ಬಿಚ್ಚಿಡುವುದು ಸಂತೋಷದ ವಿಚಾರವಾಗುವುದು. ನಿಮ್ಮ ಬಗ್ಗೆ ನೀವೇ ಹೇಳಕೊಳ್ಳುವುದು ಜಂಭವೆನಿಸುವುದು. ನಿಮ್ಮ ಚಿಂತನೆಗಳು ನಿಮಗೆ ಮಾತ್ರ ಸರಿ ಎನಿಸುವುದು.

ಕರ್ಕಾಟಕ ರಾಶಿ:

ಎಂದೋ ಪಡೆದ ಸಾಲದ ಮರುಪಾವತಿಯನ್ನು ಮಾಡಬೇಕಾಗಿಬರಬಹುದು. ಶತ್ರುಬಾಧೆಯನ್ನು ನಿವಾರಿಸಿಕೊಳ್ಳಲು ಕಷ್ಟವಾದೀತು. ನಿಮ್ಮನ್ನು ನಿಂದಿಸುವವರಿಗೆ ಉತ್ತರವನ್ನು ಕೊಡುವ ಯೋಚನೆಯಲ್ಲಿಯೇ ಇರುವಿರಿ. ಧನಾಗಮನದ ನಿರೀಕ್ಷೆಯಲ್ಲಿ ಇರುವಿರಿ. ಕೊಡು ಕೊಳ್ಳುವುದರಲ್ಲಿ ಸಮಾನತೆ ಇರಲಿ. ವಿದೇಶೀ ವ್ಯಾಪಾರದಿಂದ ಆದಾಯವು ಹೆಚ್ಚಾಗಬಹುದು. ನಿಮ್ಮ ಅಜ್ಞಾನವನ್ನು ನೀವೇ ತೋರಿಸಿಕೊಳ್ಳುವಿರಿ. ಕೆಲವು ಸಮಸ್ಯೆಯನ್ನು ನೀವಾಗಿಯೇ ತಂದುಕೊಳ್ಳುವಿರಿ.

ಸಿಂಹ ರಾಶಿ:

ಯಾವುದೇ ಪೂರ್ವನಿರ್ಧಾರವಿಲ್ಲದೇ ವಿದೇಶ ಪ್ರಯಾಣ ಮಾಡುವಿರಿ. ಅಪಾತ್ರರಿಗೆ ನಿಮ್ಮ ವಸ್ತುವನ್ನು ಗೊತ್ತಿಲ್ಲದೇ ಕೊಡುವಿರಿ. ಇಂತಹ ದಾನದಿಂದ ಪ್ರಯೋಜನವಾಗದು. ಅಮೇಧ್ಯವಾದ ಆಹಾರವನ್ನು ಸೇವಿಸುವ ಸಂದರ್ಭವು ಬರಬಹುದು. ರಕ್ಷಣೆಯ ಜವಾಬ್ದಾರಿ ಇದ್ದವರಿಗೆ ಒತ್ತಡವಿರುವುದು. ದೂರದ ಸ್ಥಳಕ್ಕೆ ಉದ್ಯೋಗಕ್ಕೆ ಹೋಗಲು ಮನೆಯಿಂದ ನಕಾರಾತ್ಮಕ ಸೂಚನೆ ಬರಬಹುದು. ಯಾರನ್ನೂ ಅವಲಂಬಿಸದೇ ನಡೆಯಬೇಕು ಎನ್ನುವ ಹಠವು ಬರುವುದು.

ಕನ್ಯಾ ರಾಶಿ:

ಸಹೋದ್ಯೋಗಿಗೆ ಸಹಾಯ ಮಾಡುವ ಸ್ಥಿತಿಯು ನಿಮಗೆ ಬರಬಹುದು. ಆಗಬೇಕಾದ ಕಾರ್ಯಗಳು ಒತ್ತಡ ಇಲ್ಲದೇ ಆಗುವುದು. ವಿಶ್ವಾಸದಿಂದ ಕೊಟ್ಟ ಸಾಲಕ್ಕೆ ಬೆಲೆ ಇರಲಿ. ಯಾರ ಬಲವಂತಕ್ಕೂ ಮಣಿಯುವುದಿಲ್ಲ. ಇಂದಿನ ಸಮಯವನ್ನು ವ್ಯರ್ಥಮಾಡಿಕೊಂಡು ಬೇಸರಿಸುವಿರಿ.‌ ನಿಮ್ಮ‌ ಸ್ವಭಾವವು ಇತರರಿಗೆ ಅಸಹಜತೆಯಂತೆ ಕಾಣಿಸಬಹುದು. ಯಾರ ಮೇಲೂ ಹಿಡಿತ ಸಾಧಿಸುವ ಪ್ರಯತ್ನವು ಬೇಡ. ಸಮಯ ಮಾತ್ರ ವ್ಯರ್ಥವಾಗಬಹುದು.

ತುಲಾ ರಾಶಿ:

ನಿಮ್ಮ ವಿದ್ಯೆಗೆ ಯೋಗ್ಯವಾದ ಅವಕಾಶಗಳು ಅನಿರ್ಬಂಧಿತವಾಗಿ ಸಿಗಬಹುದು. ದಾಯದಿ‌ ಕಲಹವು ನಿಮ್ಮನ್ನು ಹಿಮ್ಮೆಟ್ಟಿಸೀತು. ಮನಸ್ಸಿನ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಇಂದು ಕಷ್ಟವಾದೀತು. ಕೆಲವು ವ್ಯಕ್ತಿಗಳಿಂದ ನೀವು ದೂರವಿರಲು ಇಚ್ಛಿಸುವಿರಿ. ವ್ಯಾಪಾರದಲ್ಲಿ ಜನರ ಆಕರ್ಷಣೆಯನ್ನು ಮಾಡುವ ಕಲೆ ಸಿದ್ಧಿಸಿದೆ. ಗತ್ತಿನಿಂದ ಮಾತನಾಡುವುದನ್ನು ನಿಲ್ಲಿಸಿ. ನಿಮ್ಮ ಅಸಮಾಧಾನವನ್ನು ಅಸ್ಥಾನದಲ್ಲಿ ಹೊರಹಾಕಿ ಮುಜುಗರಕ್ಕೆ ಒಳಗಾಗುವಿರಿ.

ವೃಶ್ಚಿಕ ರಾಶಿ:

ಗೃಹನಿರ್ಮಾಣದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ತೋರುವಿರಿ. ನಿಮ್ಮ ಉದ್ಯಮಕ್ಕೆ ಹೂಡಕೆ ಬರಬಹುದು. ನೆರೆಹೊರೆಯರ ಮಾತು ನಿಮಗೆ ಬೇಸರ ತರಿಸಿ, ಪ್ರತಿಯಾಗಿ ಏನನ್ನಾದರೂ ಹೇಳಲು ಹೋಗುವಿರಿ. ನಿಮ್ಮ ಉದ್ವೇಗದ ಮನಸ್ಸನ್ನು ಇತರರಿಗೆ ತೋರಿಸುವಿರಿ. ಮೇಲಧಿಕಾರಿಗಳು ನಿಮ್ಮ ಕಾರ್ಯಕ್ಕೆ ತೊಂದರೆ ಕೊಡಬಹುದು. ನಿಮಗೆ ಖುಷಿ ಕೊಡುವ ಸಂಗತಿಯ ಕಡೆಗೆ ಗಮನಹರಿಸಿ. ಕೆಲವರಿಂದ ಸಹಾಯವನ್ನು ನಿರೀಕ್ಷಿಸದೇ ಇದ್ದರೂ ಸಹಕಾರ ದೊರೆತೀತು.

ಧನು ರಾಶಿ:

ಮಕ್ಕಳ ಜೀವನದಲ್ಲಿ ಬದಲಾವಣೆಯನ್ನು ನೀವು ಗಮನಿಸಿ ಅದಕ್ಕೆ ಬೇಕಾದ ಮಾರ್ಗದರ್ಶನ ಮಾಡುವಿರಿ. ಉದ್ಧಟತನದ ಮಾತುಗಳಿಂದ ನಿಮ್ಮ ಸ್ವಭಾವವು ಸ್ಪಷ್ಟವಾಗುವುದು.‌ ಪುಣ್ಯಸ್ಥಳಗಳನ್ನು ಕುಟುಂಬ ಜೊತೆ ಹೋಗಿ ದರ್ಶನ ಮಾಡುವಿರಿ.‌ ಸಹಾಯವನ್ನು ದುರುಪಯೋಗ ಮಾಡಿಕೊಳ್ಳಬಹುದಿ. ಅತಿಯಾದ ದೇಹದಂಡನೆಯಿಂದ ನಿಮಗೆ ಆಯಾಸವಾಗಲಿದೆ. ವಿದ್ಯಾಭ್ಯಾಸದ ಕಾರಣಕ್ಕೆ ಹಣವನ್ನು ಪಡೆದು ಅನ್ಯ ಕಾರ್ಯಕ್ಕೆ ಬಳಸಿಕೊಳ್ಳುವಿರಿ.

ಮಕರ ರಾಶಿ:

ನಿರೀಕ್ಷಿತ ಗೌರವವು ನಿಮಗೆ ಸಿಗಲಿದೆ.‌ ಸಾಮಾಜಿಕ ಕ್ಷೇತ್ರದಲ್ಲಿ ಒತ್ತಡ. ಇಂದಿನ ಕೆಲವು ಮಾತುಗಳನ್ನು ನೀವು ನಿರ್ಲಕ್ಷಿಸುವಿರಿ. ಹೆಣ್ಣು ಮಕ್ಕಳಿಂದ ನಿಮಗೆ ಯಶಸ್ಸು ಪ್ರಾಪ್ತಿ. ಕಛೇರಿಯ ವ್ಯವಹಾರದಲ್ಲಿ ನಿಮಗೆ ಕೋಪ ಬರಬಹುದು. ಹೊಸ ಉದ್ಯೋಗದ ಅಭಿವೃದ್ಧಿಗೆ ದೇವರಲ್ಲಿ ಶರಣಾಗುವಿರಿ. ಪ್ರಯತ್ನಗಳು ಆರಂಭವಾಗಲಿದೆ. ಪಿತ್ರಾರ್ಜಿತ ಆಸ್ತಿಯು ತಾನಾಗಿಯೇ ಬರಬಹುದು. ವಿದ್ಯಾಭ್ಯಾಸದಲ್ಲಿ ಆಸಕ್ತಿ ಬರುವಂತೆ ಮಾಡುವ ಹೊಣೆಗಾರಿಕೆ ಇರಲಿದೆ.

ಕುಂಭ ರಾಶಿ:

ಹೊಸ ಉದ್ಯಮಕ್ಕೆ ಒಬ್ಬೊಬ್ಬರದರು ಒಂದೊಂದು ಅಭಿಪ್ರಾಯ. ಆಸ್ತಿಗೆ ಸಂಬಂಧಿಸಿದ ಪತ್ರ ವ್ಯವಹಾರವನ್ನು ಜೋಪಾನ ಮಾಡಿಕೊಳ್ಳಿ. ಅಪರೂಪದ ಬಂಧುಗಳ ಸಮಾಗಮವಾಗಲಿದ್ದು, ಸಂತೋಷವಾಗಲಿದೆ. ದೇವಾಲಯಕ್ಕೆ ಹೋಗಿ ನೆಮ್ಮದಿಯನ್ನು ಪಡೆದುಕೊಳ್ಳುವಿರಿ. ವಾಹನದಿಂದ ಬಿದ್ದು ಗಾಯವಾಗುವ ಸಾಧ್ಯತೆ ಇದೆ. ನಿಮಗೆ ಬೇಕಾದ ವಾತಾವರಣದಲ್ಲಿ ಇರುವುದು ಇಷ್ಟವಾಗುವುದು. ನಿಮ್ಮ ಕನಸನ್ನು ಸಕಾರ‌ ಮಾಡಿಕೊಳ್ಳಲು ಪ್ರಗತಿಯಲ್ಲಿ ಇರುವಿರಿ.

ಮೀನ ರಾಶಿ:

ಸಂತೋಷಕ್ಕೆ ಅಡ್ಡಿಯಾಗುವ ಕಾರ್ಯವನ್ನು ಮಾಡಿಕೊಂಡು ಪಶ್ಚಾತ್ತಾಪ ಪಡುವಿರಿ. ಅಜಾಗರೂಕತೆಯಿಂದ ನಿಮ್ಮ ವಸ್ತುವು ಇನ್ನೊಬ್ಬರ ಪಾಲಾಗಬಹುದು. ಕಳೆದ ವಿಚಾರವನ್ನು ಮತ್ತೆ ಮತ್ತೆ ನೆನಪಿಸಿಕೊಂಡು ದುಃಖಿಸುವಿರಿ. ಅನ್ಯ ಕಾರ್ಯದಿಂದ ನಿಮ್ಮ ಮುಖ್ಯ‌ ಕಾರ್ಯದಲ್ಲಿ ವೇಗವು ಕಡಿಮೆ ಆಗಬಹುದು. ನೂತನ ವಾಹನವನ್ನು ಖರೀದಿಸುವ ಆಲೋಚನೆ ಇರುವುದು. ಸ್ನೇಹಿತರ ಸಂಪಾದನೆಯ ದಾರಿಯನ್ನು ಹಾಕಿಕೊಡುವಿರಿ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಫಾಲ್ಗುಣ, ಸೌರ ಮಾಸ : ಮೀನ, ಮಹಾನಕ್ಷತ್ರ : ಪೂರ್ವಾಭಾದ್ರ, ವಾರ : ಶನಿ, ಪಕ್ಷ : ಕೃಷ್ಣ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ಉತ್ತರಾಷಾಢಾ, ಯೋಗ : ವರಿಯಾನ್, ಕರಣ : ಬವ, ಸೂರ್ಯೋದಯ – 06 – 34 am, ಸೂರ್ಯಾಸ್ತ – 06 – 33 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 11:04 – 12:34, ಯಮಗಂಡ ಕಾಲ 15:34 – 17:03, ಗುಳಿಕ ಕಾಲ 08:04 – 09:34

-ಲೋಹಿತ ಹೆಬ್ಬಾರ್ – 8762924271 (what’s app only)

Follow Us