
ಒಂದೇ ರೀತಿಯ ಕೆಲಸದಿಂದ ಆಸಕ್ತಿ ಕುಂದಬಹುದು. ಮಧ್ಯ ಸಣ್ಣ ವಿರಾಮವನ್ನು ನೀವು ಬಯಸುವಿರಿ. ನಿಮ್ಮನ್ನು ಲಕ್ಷಿಸಲು ಸಾಧ್ಯವಾಗದ ದೊಡ್ಡ ವ್ಯಕ್ತಿತ್ವ ನಿಮ್ಮದಾಗುವುದು. ಸ್ವಕೀಯರೇ ನಿಮ್ಮ ನಿಜವಾದ ವೇಗವನ್ನು ಕುಂಠಿತಗೊಳಿಸುವರು. ತಪ್ಪು ಮಾಹಿತಿ ನೀಡಿ ನಿಮ್ಮ ದಾರಿ ತಪ್ಪಿಸಬಹುದು. ನಿಮ್ಮ ಕೈಲಾಗುವ ಕೆಲಸವನ್ನು ಮಾಡಿ ಕಿಂಚಿತ್ ಆದಾಯವನ್ನು ಮಾಡಿಕೊಳ್ಳುವಿರಿ. ನಿಮ್ಮ ಪ್ರಗತಿಯ ಬಗ್ಗೆ ಇತರರು ಪ್ರಶಂಸಿಸಬಹುದು. ಉದ್ಯಮದ ವಿಚಾರದಲ್ಲಿ ನೌಕರರಿಂದ ಹಿನ್ನಡೆಯಾಗಲಿದೆ.
ಅತಿಯಾದ ತಂಪು ವಸ್ತುಗಳನ್ನು ಸೇವಿಸಿ ಆರೋಗ್ಯ ಕೆಡುವುದು. ನಿಮ್ಮ ದೌರ್ಬಲ್ಯವನ್ನು ಉಪಯೋಗಿಸಿಕೊಳ್ಳಬಹುದು. ನಿಮ್ಮ ಕೆಲಸಕ್ಕೆ ಪ್ರಶಂಸೆ ಸಿಗುವುದು. ಕೆಲಸದ ಮೆಚ್ಚುಗೆಗಳು ಸಂತೋಷವನ್ನುಂಟುಮಾಡುತ್ತವೆ. ತಲೆ ಕೆಡಿಸಿಕೊಳ್ಳದೆ ನಿಮ್ಮ ಕಾರ್ಯದಲ್ಲಿ ಪ್ರವೃತ್ತರಾಗಿ ಕಾರ್ಯದಲ್ಲಿ ನಿಷ್ಠೆಯನ್ನು ತೋರಿಸಿ. ಮನೆಯ ವಾಸವನ್ನು ಬದಲಾಯಿಸುವಿರಿ. ಪ್ರೀತಿಯ ಸುಖದಿಂದ ವಂಚಿತರಾಗುವಿರಿ.
ಯಾರೇ ಆದರೂ ಅವರನ್ನು ಒಂದು ಹಂತದವರಗೆ ಮಾತ್ರ ಒಳಗೆ ಕರೆಯುವುದು ಸೂಕ್ತ. ಬಾಂಧವ್ಯದಲ್ಲಿ ವ್ಯವಹಾರ ಕಷ್ಟವಾದೀತು. ನೆರೆಯವರು ನಿಮ್ಮ ಹಳೆಯ ವಿಷಯಗಳನ್ನು ನೆನೆಸಿಕೊಳ್ಳದೇ ಪ್ರಸ್ತುತದತ್ತ ಗಮನ ಹರಿಸಿ. ಹಿಂದೆ ಮುಂದೆ ಯೋಚಿಸದೆ ಏಕಾಏಕಿಯಾಗಿ ಯಾರಿಗೂ ಮಾತು ಕೊಡುವುದು ಬೇಡ. ಸಣ್ಣ ವಿಚಾರಕ್ಕೆ ದ್ವೇಷ ಸಾಧಿಸುವುದು ಸರಿಯಾಗದು. ಹೊಂದಾಣಿಕೆಯ ಕಡೆ ನಿಮ್ಮ ಗಮನವಿರಲಿ.
ಎಲ್ಲ ಕಾರ್ಯ ಮಾಡಲು ನಿಮಗೆ ಇಂದು ಬಹಳ ಸಮಯ ಇರುವಂತೆ ತೋರುತ್ತದೆ. ಕಾನೂನು ಕೆಲಸದಲ್ಲಿ ಎಚ್ಚರಿಕೆ ಇರಲಿ. ಯಾವ ಕಾರ್ಯಕ್ಕೂ ಮುಂಚಿತವಾಗಿ ಹಣ ಕೊಡುವುದು ಬೇಡ. ಆರ್ಥಿಕ ಒತ್ತಡದಿಂದ ಚಿಕ್ಕ ಏರುಪೇರು ಆಗಬಹುದು. ನಿಮಗೆ ಸಂಬಂಧಿಸಿದ ವಿಚಾರದಲ್ಲಿ ಮಾತ್ರ ನಿಮ್ಮ ಹಸ್ತಕ್ಷೇಪ ಇರಲಿ. ಪೋಷಕರಿಗೆ ಮಹತ್ವಾಕಾಂಕ್ಷೆಯನ್ನು ಬಹಿರಂಗಪಡಿಸುವಿರಿ. ಇಂದು ತಲ್ಲೀನರಾಗಿ ಎಲ್ಲ ಕಾರ್ಯವನ್ನು ಮಾಡುವಿರಿ.
ಇಂದು ನೀವು ಅನಾಯಾಸವಾಗಿ ವೃತ್ತಿಯಲ್ಲಿ ತೊಡಗುವಿರಿ. ಕುಟುಂಬದಲ್ಲಿ ನಡೆಯಲಿರುವ ವಿವಾಹ ಕಾರ್ಯದ ಓಡಾಟವಿರುವುದು. ಉತ್ತಮ ಯೋಚನಾ ಶಕ್ತಿಯಿಂದ ಮಾರ್ಗವನ್ನು ಹುಡುಕುವಿರಿ. ಜಾಣ್ಮೆಯಿಲ್ಲದೇ ಸಣ್ಣ ಖರ್ಚು ಕೂಡ ದೊಡ್ಡದಾಗಬಹುದು. ಪ್ರಭಾವಿಗಳ ಶಿಫಾರಸು ಇದ್ದರೂ ಕೆಲಸ ಸಾಧ್ಯವಾಗದು. ಯಾರನ್ನೂ ದೂಷಿಸುವುದು ನಿಮಗೆ ಹೇಳಿಸಿದ್ದಲ್ಲ. ಕೃಷಿಗೆ ಸಂಬಂಧಿಸಿದ ಕಾರ್ಯವನ್ನು ವೇಗವಾಗಿ ಮಾಡಿಕೊಳ್ಳಿ. ಮಕ್ಕಳ ವಿವಾಹದ ಚಿಂತೆಯು ಕಾಡಬಹುದು.
ವಾಹನ ಸಂಚಾರಕ್ಕೆ ನಿಮಗೆ ಅನೇಕ ಅಡ್ಡಿಗಳು ಬರಬಹುದು. ಇಂದಿನ ಕೆಲಸಗಳು ಬೇಗ ಕೆಲಸದಲ್ಲಿ ನಿಮ್ಮ ಚುರುಕು ಮೆಚ್ಚುಗೆಯನ್ನು ಗಳಿಸಬಹುದು. ಔಷಧದಿಂದ ದುಷ್ಪರಿಣಾಮವಾಗಬಹುದು. ಹಳೆಯ ಹೂಡಿಕೆಗಳು ಲಾಭದ ಸಂಕೇತ ತೋರಿಸುತ್ತವೆ. ನಿಮ್ಮ ಇಂದಿನ ಆರ್ಥಿಕಲಾಭವು ನಿಮಗೆ ಹೆಚ್ಚು ಸುಖವನ್ನು ಕೊಡಬಹುದು. ನಿಮ್ಮ ಬಗ್ಗೆ ನಕಾರಾತ್ಮಕ ಮಾತುಗಳನ್ನು ಕೇಳಬೇಕಾಗುವುದು. ಒಮ್ಮೆಲೆ ಕಷ್ಟಗಳು ಬರುವುದರಿಂದ ಧೃತಿಗೆಡುವ ಅವಶ್ಯಕತೆ ಇರುವುದಿಲ್ಲ.
ನಿಮ್ಮ ವ್ಯಾಪಾರವು ಅಜ್ಞಾನದಿಂದ ನಷ್ಟವಾಗುತ್ತದೆ. ಮಕ್ಕಳಿಂದ ನೆಮ್ಮದಿಯು ನಿಮಗೆ ಸಿಗುತಗತದೆ. ಹಣಕ್ಕಾಗಿ ಕಿರಿಕಿರಗಳು ಅಧಿಕವಾದಂತೆ ತೋರುವುದು. ಹೂಡಿಕೆಗೆ ಮೊದಲು ಎಲ್ಲವನ್ನೂ ಅಧ್ಯಯನ ಮಾಡಿ. ನಿಮ್ಮ ತಾಳ್ಮೆಯೇ ಗುರಿಯನ್ನು ತಲುಪಲು ಸಹಕಾರಿಯಾಗಿರುವುದು. ಮನಃಶಾಂತಿಗೆ ಧ್ಯಾನವನ್ನು ರೂಢಿ ಮಾಡಿಕೊಳ್ಳಿ. ಮಹಿಳೆಯರಿಗೆ ಈ ದಿನ ಶುಭವಿರುವುದು. ಅಧಿಕ ಆದಾಯದಿಂದ ನಿಮ್ಮ ನೆಮ್ಮದಿಯ ಹರಣವಾಗಿದೆ ಎಂದು ಅನ್ನಿಸಬಹುದು.
ನಿಮ್ಮ ಆದಾಯವನ್ನು ಶ್ರಮದಿಂದ ಹೆಚ್ಚು ಮಾಡಿಕೊಳ್ಳುವಿರಿ. ಕೆಲಸದಲ್ಲಿ ಅವಕಾಶಗಳು ಸಿಗಬಹುದು ಆದರೆ ತೀರ್ಮಾನದಲ್ಲಿ ತಾಳ್ಮೆ ಅಗತ್ಯ. ಬಟ್ಟೆಯನ್ನು ಮನೆಯವರಿಗೆ ಖರೀದಿಮಾಡುವಿರಿ. ಖರ್ಚುಗಳು ನಿಮ್ಮ ಮೇಲೆ ಒತ್ತಡ ತರುತ್ತವೆ. ಅದೃಷ್ಟವನ್ನು ಮಾತ್ರ ನಂಬಿ ಕೆಲಸ ಮಾಡುವುದು ಬೇಡ. ನೀವು ಪಡೆದ ಸಾಲವನ್ನು ಮರುಪಾವತಿಸುವಿರಿ. ಸರ್ಜನಾತ್ಮಕವಾಗಿ ಏನನ್ನಾದರೂ ಮಾಡಲು ಹೋಗಿ ಎಡವುವಿರಿ.
ಚಂಚಲ ಮನಸ್ಸಿನಿಂದ ಕಾರ್ಯವನ್ನು ಸಾಧಿಸಲಾಗದು. ಬಹಳ ದಿನಗಳ ಅನಂತರ ಸಹೋದರರ ಭೇಟಿಯಾಗಲಿದ್ದು, ಸಂತೋಷವು ಇಮ್ಮಡಿಸುವುದು. ನಿಮ್ಮ ಆಕ್ರೋಶವನ್ನು ಮನೆಯಲ್ಲಿ ಹೊರಹಾಕುವಿರಿ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶದ ನಿರೀಕ್ಷೆ ಇದೆ. ಉಜ್ವಲ ಭವಿಷ್ಯಕ್ಕಾಗಿ ಸಮರ್ಪಿತ ಯತ್ನ ಅಗತ್ಯ. ಅಧಿಕಾರ ಪ್ರಾಪ್ತಿಗಾಗಿ ನೀವು ತಂತ್ರ ಹೂಡುವಿರಿ. ಅನಗತ್ಯ ವಾದ ವಿವಾದಗಳಿಂದ ದೂರವಿರಿ.
ನೀವು ಕುಟುಂಬದವರ ಅನಾರೋಗ್ಯದ ಕಾಳಜಿ ಮಾಡಬೇಕಾಗುವುದು. ಕೆಲಸದ ಕಡೆಗೆ ಹೆಚ್ಚಿನ ಗಮನ ನೀಡಿದರೂ ಮನಸ್ಸು ಬೇರೆಡೆ ಇರಬಹುದು. ಹಣಕಾಸು ಸ್ಥಿತಿಯಲ್ಲಿ ನಿರ್ವಹಣಾ ಜಾಣತನ ಅಗತ್ಯ. ಸಹೋದ್ಯೋಗಿಯಿಂದ ಸ್ಪರ್ಧಾತ್ಮಕ ಮನೋಭಾವನೆ ಎದುರಾಗಬಹುದು. ಅಂತರ್ಜಾಲದಿಂದ ಸಂಗಾತಿಯನ್ನು ಹುಡುಕುವ ಪ್ರಯತ್ನ ಮಾಡುವಿರಿ. ಹೊಸ ವಿಷಯ ಕಲಿಯಲು ಉತ್ತಮ ಸಮಯ. ಅಶಕ್ತರಿಗೆ ಸಹಾಯ ನಿಮ್ಮಿಂದ ಸಹಕಾರ ನೀಡಿ.
ಪರಸ್ಪರ ಪ್ರೀತಿಯು ದಾಂಪತ್ಯದಲ್ಲಿ ಹೊಂದಾಣಿಕೆ ಬೆಳೆಯುವುದು. ಉದ್ಯೋಗದಲ್ಲಿ ಚುರುಕು ಮತ್ತು ಯೋಜನೆ ಮುಖ್ಯ. ಹಣಕಾಸಿನಲ್ಲಿ ಸ್ಥಿರತೆ ಇದ್ದರೂ ಸಾಲ ಅಥವಾ ಸಾಲಕೊಡಿಕೆ ಬೇಡ. ಇಂದು ನಿಮ್ಮಲ್ಲಿ ಆತ್ಮಸ್ಥೈರ್ಯವು ಇರಲಿದೆ. ಮೈಯ್ಯಲ್ಲ ಕಣ್ಣಿದ್ದರೂ ನಿಮಗೆ ವಂಚಿಸುವವರು ಇರುವರು. ದುಸ್ಸಾಹಸಕ್ಕೆ ಹೋಗಿ ಕೈ ಸುಟ್ಟುಕೊಳ್ಳುವಿರಿ. ನಿಮ್ಮ ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ.
ಅನ್ಯರ ಕಾರಣದಿಂದ ಧನವು ವ್ಯಯವಾಗುವ ಬಗ್ಗೆ ನಿಮಗೆ ಅಸಮಾಧಾನವಿದ್ದು, ಅದನ್ನು ಸರಿಯಾದ ಉಳಿಸಿಕೊಳ್ಳುವಂತೆ ನೋಡಿಕೊಳ್ಳಿ. ಹಣಕಾಸು ಸಂಬಂಧಿತ ವಿಷಯಗಳು ನಿಮ್ಮ ಗಮನಕ್ಕೆ ಬರುತ್ತವೆ. ಮಕ್ಕಳ ಸಾಧನೆ ಸಂತೋಷ ನೀಡಲಿದೆ. ಪ್ರೀತಿಯಲ್ಲಿ ಚಿಕ್ಕ ಚಿಕ್ಕ ವ್ಯತ್ಯಾಸಗಳನ್ನು ಸಮಾಧಾನದಿಂದ ಮುಗಿಸಿ. ಅನಗತ್ಯ ಚರ್ಚೆಗಳಿಗೆ ದೂರವಿರಿ. ಮನೆ ಹಿರಿಯರ ಆರೋಗ್ಯದ ಕಡೆ ಗಮನ ನೀಡಿ. ಕಾರ್ಯದಲ್ಲಿ ಶ್ರದ್ಧೆಯು ಕಡಿಮೆಯಾಗುವುದು.
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ವೈಶಾಖ, ಸೌರ ಮಾಸ : ಮೇಷ, ಮಹಾನಕ್ಷತ್ರ : ಕೃತ್ತಿಕಾ, ವಾರ : ಶನಿ, ಪಕ್ಷ : ಕೃಷ್ಣ, ತಿಥಿ : ಅಮಾವಾಸ್ಯಾ, ನಿತ್ಯನಕ್ಷತ್ರ : ಭರಣೀ, ಯೋಗ : ಸೌಭಾಗ್ಯ, ಕರಣ : ಚತುಷ್ಪಾತ್, ಸೂರ್ಯೋದಯ – 05 – 58 am, ಸೂರ್ಯಾಸ್ತ – 06 – 43 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09:10 – 10:45, ಯಮಗಂಡ ಕಾಲ 13:57 – 15:32, ಗುಳಿಕ ಕಾಲ 05:58 – 07:34
-ಲೋಹಿತ ಹೆಬ್ಬಾರ್ – 8762924271 (what’s app only)