AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Love Horoscope: ಆಗಸ್ಟ್ 16 ರಿಂದ 22 ರ ವರೆಗಿನ ವಾರದ ಪ್ರೇಮ – ಪ್ರೀತಿ ಭವಿಷ್ಯ ಇಲ್ಲಿ ತಿಳಿದುಕೊಳ್ಳಿ

ಆಗಸ್ಟ್ 16 ರಿಂದ 22 ರ ವಾರದಲ್ಲಿ ಗ್ರಹಗಳ ಸಂಚಾರವು ಪ್ರೇಮ ಜೀವನದ ಮೇಲೆ ಹೇಗೆ ಪರಿಣಾಮ ಬೀರಲಿದೆ? ನೀಚ ಶುಕ್ರ ಕನ್ಯಾ ರಾಶಿಯಲ್ಲಿದ್ದರೆ, ಉಚ್ಚ ಗುರು ಕರ್ಕಾಟಕದಲ್ಲಿದ್ದಾನೆ. ಸಿಂಹದಲ್ಲಿ ಸೂರ್ಯ-ಬುಧ-ಕೇತುಗಳ ಸಂಯೋಜನೆ ಮತ್ತು ಮೀನದಲ್ಲಿ ವಕ್ರ ಶನಿ ಇವೆ. ಈ ಗ್ರಹಗಳ ಸ್ಥಾನಗಳು ಪ್ರತಿ ರಾಶಿಯ ಪ್ರೇಮ ಸಂಬಂಧಗಳಲ್ಲಿ ಏರಿಳಿತಗಳನ್ನು ತರಲಿವೆ. ನಿಮ್ಮ ಪ್ರೇಮ ಜೀವನದ ಭವಿಷ್ಯ ತಿಳಿಯಿರಿ.

Love Horoscope: ಆಗಸ್ಟ್ 16 ರಿಂದ 22 ರ ವರೆಗಿನ ವಾರದ ಪ್ರೇಮ - ಪ್ರೀತಿ ಭವಿಷ್ಯ ಇಲ್ಲಿ ತಿಳಿದುಕೊಳ್ಳಿ
ವಾರದ ಪ್ರೇಮ - ಪ್ರೀತಿ ಭವಿಷ್ಯImage Credit source: Getty Images
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Aug 15, 2026 | 3:50 PM

Share

​ಆಗಸ್ಟ್ 16ರಿಂದ 22ರವರೆಗೆ ಪ್ರೇಮ ಕಾರಕನಾದ ಶುಕ್ರನು ಕನ್ಯಾ ರಾಶಿಯಲ್ಲಿ ನೀಚಸ್ಥಿತಿಯಲ್ಲಿದ್ದರೆ, ಗುರು ಕರ್ಕಾಟಕದಲ್ಲಿ ಉಚ್ಚಸ್ಥಿತಿಯಲ್ಲಿದ್ದಾನೆ. ಸಿಂಹ ರಾಶಿಯಲ್ಲಿ ಸೂರ್ಯ-ಬುಧ-ಕೇತುಗಳ ಸಂಯೋಜನೆ ಹಾಗೂ ಮೀನದಲ್ಲಿ ಶನಿಯ ವಕ್ರಸ್ಥಿತಿ ಇದೆ. ಈ ಗ್ರಹಗಳ ಸಂಚಾರದಿಂದ ಪ್ರೇಮ ಹೀಗಿರಲಿದೆ.

ಮೇಷ ರಾಶಿ:

​ವಾರದ ಆರಂಭದಲ್ಲಿ ಸಂಗಾತಿಯೊಂದಿಗೆ ಸಣ್ಣಪುಟ್ಟ ಅಭಿಪ್ರಾಯ ಭೇದಗಳು ಬರಬಹುದು. ನಿಮ್ಮ ಕೋಪ ಹಾಗೂ ಆತುರದ ಮಾತುಗಳನ್ನು ನಿಯಂತ್ರಿಸುವುದು ಸೂಕ್ತ. ವಾರದ ದ್ವಿತೀಯಾರ್ಧದಲ್ಲಿ ಪರಸ್ಪರ ಅರ್ಥೈಸಿಕೊಳ್ಳುವಿಕೆ ಹೆಚ್ಚಿ, ಪ್ರೀತಿ ಗಟ್ಟಿಯಾಗುತ್ತದೆ.

ವೃಷಭ ರಾಶಿ:

ನಿಮ್ಮ ರಾಶ್ಯಾಧಿಪತಿ ಶುಕ್ರ ನೀಚಸ್ಥಾನದಲ್ಲಿ ಇರುವುದರಿಂದ ಭಾವನೆಗಳನ್ನು ಸರಿಯಾಗಿ ವ್ಯಕ್ತಪಡಿಸಲು ಕಷ್ಟವಾಗಬಹುದು. ಸಂಗಾತಿಯ ಮೇಲೆ ಅನಗತ್ಯ ಅನುಮಾನ ಪಡುವುದನ್ನು ಬಿಟ್ಟು ಮುಕ್ತ ಸಂಭಾಷಣೆಗೆ ಒತ್ತು ನೀಡುವುದು ಸಂಬಂಧವನ್ನು ಸರಿಪಡಿಸುತ್ತದೆ.

​ಮಿಥುನ ರಾಶಿ:

ನಿಮ್ಮ ರಾಶಿಯಲ್ಲಿ ಮಂಗಳನ ಸಂಚಾರವಿರುವುದರಿಂದ ಪ್ರೇಮ ಜೀವನದಲ್ಲಿ ಸಣ್ಣ ಕಿರಿಕಿರಿಗಳು ಉಂಟಾಗಬಹುದು. ನಾಲಿಗೆಯ ಮೇಲೆ ನಿಗ್ರಹವಿರಲಿ. ಅನಗತ್ಯ ವಾದ-ವಿವಾದಗಳನ್ನು ಬದಿಗಿಟ್ಟರೆ ವಾರಾಂತ್ಯದಲ್ಲಿ ಮಧುರ ಕ್ಷಣಗಳನ್ನು ಕಳೆಯಬಹುದು.

ಕರ್ಕಾಟಕ ರಾಶಿ :

​ನಿಮ್ಮ ರಾಶಿಯಲ್ಲಿ ಉಚ್ಚ ಗುರುವಿನ ಉಪಸ್ಥಿತಿ ಇರುವುದರಿಂದ ಪ್ರೇಮ ವಿಚಾರಗಳಲ್ಲಿ ಸಂತೋಷ ಮತ್ತು ಉತ್ಸಾಹ ಇರಲಿದೆ. ಸಂಗಾತಿಯಿಂದ ಪೂರ್ಣ ಬೆಂಬಲ ಸಿಗಲಿದೆ. ಅವಿವಾಹಿತರಿಗೆ ಹೊಸ ಪ್ರೇಮ ಪ್ರಸ್ತಾಪಗಳು ಒದಗಿಬರುವ ಉತ್ತಮ ಸಮಯವಿದು.

ಸಿಂಹ ರಾಶಿ:

​ನಿಮ್ಮ ರಾಶಿಯಲ್ಲಿ ಸೂರ್ಯ, ಬುಧ ಹಾಗೂ ಕೇತುಗಳಿರುವುದರಿಂದ ಅಹಂಕಾರದ ಭಾವನೆ ಸಂಬಂಧಕ್ಕೆ ಧಕ್ಕೆ ತರಬಹುದು. ಸಂಗಾತಿಯ ಸಣ್ಣ ತಪ್ಪುಗಳನ್ನು ಕ್ಷಮಿಸಿ ಮುನ್ನಡೆದರೆ ದಾಂಪತ್ಯ ಮತ್ತು ಪ್ರೇಮ ಜೀವನ ಸುಖಮಯವಾಗಿರುತ್ತದೆ.

​ಕನ್ಯಾ ರಾಶಿ:

​ಪ್ರೇಮ ಕಾರಕ ಶುಕ್ರನು ನಿಮ್ಮ ರಾಶಿಯಲ್ಲೇ ನೀಚನಾಗಿರುವುದರಿಂದ ಅತಿಯಾದ ವಿಮರ್ಶಾತ್ಮಕ ಮನೋಭಾವ ನಿಮ್ಮ ನಡುವೆ ಅಂತರ ತರಬಹುದು. ಸಂಗಾತಿಯ ಭಾವನೆಗಳಿಗೆ ಗೌರವ ನೀಡುವುದು ಮತ್ತು ಅವರ ಪ್ರಯತ್ನಗಳನ್ನು ಗುರುತಿಸುವುದು ಈ ವಾರ ಅತ್ಯಗತ್ಯ.

​ತುಲಾ ರಾಶಿ:

ರಾಶ್ಯಾಧಿಪತಿ ಶುಕ್ರನ ಸ್ಥಿತಿಯಿಂದಾಗಿ ಪ್ರೇಮ ಸಂಬಂಧಗಳಲ್ಲಿ ಸ್ವಲ್ಪ ಏರಿಳಿತಗಳು ಕಂಡುಬರಬಹುದು. ಹಳೆಯ ವಿಚಾರಗಳನ್ನು ತೆಗೆದು ಜಗಳವಾಡುವುದನ್ನು ತಡೆಯಿರಿ. ವಾರಾಂತ್ಯದಲ್ಲಿ ಒಟ್ಟಿಗೆ ಸಮಯ ಕಳೆಯುವುದರಿಂದ ಮನಸ್ತಾಪಗಳು ನಿವಾರಣೆಯಾಗಲಿವೆ.

ವೃಶ್ಚಿಕ ರಾಶಿ:

​ಗುರುವಿನ ಶುಭ ದೃಷ್ಟಿಯಿಂದಾಗಿ ಪ್ರೇಮ ಜೀವನದಲ್ಲಿ ಧನಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಸಂಗಾತಿಯೊಂದಿಗೆ ಅರ್ಥಪೂರ್ಣ ಸಮಯ ಕಳೆಯುವಿರಿ. ಪರಸ್ಪರ ನಂಬಿಕೆ ಹೆಚ್ಚಲಿದ್ದು, ಒಟ್ಟಾಗಿ ಹೊಸ ಯೋಜನೆಗಳನ್ನು ರೂಪಿಸುವಿರಿ.

ಧನು ರಾಶಿ:

​ಚಂದ್ರನ ಶುಭ ಸ್ಥಿತಿಯು ಮನಸ್ಸಿಗೆ ನೆಮ್ಮದಿ ನೀಡಲಿದೆ. ಪ್ರೇಮಿಗಳು ಪರಸ್ಪರ ಉತ್ತಮ ತಿಳಿವಳಿಕೆಯನ್ನು ಹೊಂದುವರು. ದಾಂಪತ್ಯದಲ್ಲಿ ಆತ್ಮೀಯತೆ ಹಾಗೂ ಅನ್ಯೋನ್ಯತೆ ವೃದ್ಧಿಯಾಗಲಿದ್ದು, ಸಣ್ಣ ಪ್ರವಾಸದ ಸಾಧ್ಯತೆಯಿದೆ.

ಇದನ್ನೂ ಓದಿ: ಬುಧ ಸಂಚಾರ ಫಲ: ಈ ರಾಶಿಯವರಿಗೆ ಒಲಿಯಲಿದೆ ದಿಢೀರ್ ಧನಯೋಗ ಹಾಗೂ ವೃತ್ತಿ ಪ್ರಗತಿ

​ಮಕರ ರಾಶಿ:

​ಸಂಬಂಧಗಳಲ್ಲಿ ಪ್ರಾಮಾಣಿಕತೆ ಮತ್ತು ನಿಷ್ಠೆ ಬಹಳ ಮುಖ್ಯ. ಉದ್ಯೋಗ ಅಥವಾ ಕೆಲಸದ ಒತ್ತಡವನ್ನು ಪ್ರೇಮ ಜೀವನದ ಮೇಲೆ ಪ್ರಭಾವ ಬೀರಲು ಬಿಡಬೇಡಿ. ಸಂಗಾತಿಗೆ ಕನಿಷ್ಠ ಸಮಯ ಕೊಡುವುದು ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ.

ಕುಂಭ ರಾಶಿ:

ರಾಹು ಹಾಗೂ ಶನಿಯ ಪ್ರಭಾವದಿಂದ ಮನಸ್ಸಿನಲ್ಲಿ ಗೊಂದಲಗಳು ಉಂಟಾಗಬಹುದು. ಸಂಗಾತಿಯೊಂದಿಗೆ ಮಾತನಾಡುವಾಗ ತಾಳ್ಮೆಯಿಂದಿರಿ. ಭಾವನಾತ್ಮಕವಾಗಿ ನಿರ್ಧಾರ ತೆಗೆದುಕೊಳ್ಳುವ ಬದಲು ವಾಸ್ತವಕ್ಕೆ ಹತ್ತಿರವಾಗಿ ಚಿಂತಿಸಿ.

ಮೀನ ರಾಶಿ:

ನಿಮ್ಮ ರಾಶಿಯಲ್ಲಿ ಲಗ್ನ ಮತ್ತು ವಕ್ರ ಶನಿ ಇರುವುದರಿಂದ ಭಾವನಾತ್ಮಕವಾಗಿ ಸ್ವಲ್ಪ ಸೂಕ್ಷ್ಮವಾಗಿರುತ್ತೀರಿ. ಕೌಟುಂಬಿಕ ಬೆಂಬಲ ಸಿಗಲಿದ್ದು, ಪ್ರೇಮಿಗಳು ತಮ್ಮ ಸಂಬಂಧವನ್ನು ಮದುವೆಯ ಹಂತಕ್ಕೆ ಕೊಂಡೊಯ್ಯಲು ಇದು ಸೂಕ್ತ ಸಮಯ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ನಾನು ಮಾತಾಡಲ್ಲ ಅಂದ್ರೆ ಸೈಲೆಂಟ್ ಆಗಿದ್ದೀನಿ ಅಂತಾ ಅರ್ಥ ಅಲ್ಲ ಎಂದ ಸಿದ್ದು
ನಾನು ಮಾತಾಡಲ್ಲ ಅಂದ್ರೆ ಸೈಲೆಂಟ್ ಆಗಿದ್ದೀನಿ ಅಂತಾ ಅರ್ಥ ಅಲ್ಲ ಎಂದ ಸಿದ್ದು
ಸ್ವಾತಂತ್ರ್ಯ ದಿನಾಚರಣೆ ವೇಳೆ ಅಸ್ವಸ್ಥಗೊಂಡ ಆಂಧ್ರ ಸಚಿವ
ಸ್ವಾತಂತ್ರ್ಯ ದಿನಾಚರಣೆ ವೇಳೆ ಅಸ್ವಸ್ಥಗೊಂಡ ಆಂಧ್ರ ಸಚಿವ
6ನೇ ತರಗತಿಯಿಂದ AI ಶಿಕ್ಷಣ, AI ವಿಶ್ವವಿದ್ಯಾಲಯ: ಸಿಎಂ ಮಹತ್ವದ ಘೋಷಣೆ
6ನೇ ತರಗತಿಯಿಂದ AI ಶಿಕ್ಷಣ, AI ವಿಶ್ವವಿದ್ಯಾಲಯ: ಸಿಎಂ ಮಹತ್ವದ ಘೋಷಣೆ
ಸರ್ಕಾರದ ಅಭಿವೃದ್ಧಿ ಯೋಜನೆಗಳ ಬಗ್ಗೆ ಸಿಎಂ ಡಿಕೆ ಶಿವಕುಮಾರ ಏನಂದ್ರು?
ಸರ್ಕಾರದ ಅಭಿವೃದ್ಧಿ ಯೋಜನೆಗಳ ಬಗ್ಗೆ ಸಿಎಂ ಡಿಕೆ ಶಿವಕುಮಾರ ಏನಂದ್ರು?
ಈದ್ಗಾ ಮೈದಾನದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸಚಿವ ಜಮೀರ್ ಭಾಗಿ
ಈದ್ಗಾ ಮೈದಾನದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸಚಿವ ಜಮೀರ್ ಭಾಗಿ
ವಾಹನ ಸವಾರರೇ ಇಂದು ಸಂಜೆ ಈ ರಸ್ತೆಯಲ್ಲಿ ಹೋಗಬೇಡಿ
ವಾಹನ ಸವಾರರೇ ಇಂದು ಸಂಜೆ ಈ ರಸ್ತೆಯಲ್ಲಿ ಹೋಗಬೇಡಿ
ರಾಜ ರಾಜ ವರ್ಮ ಎಂದ ತುಕಾಲಿ ; ದೇವರಾಜ್ ಸ್ಟೈಲ್​ ಮಿಮಿಕ್ರಿ ಮಾಡಿದ ಸಂತೋಷ್
ರಾಜ ರಾಜ ವರ್ಮ ಎಂದ ತುಕಾಲಿ ; ದೇವರಾಜ್ ಸ್ಟೈಲ್​ ಮಿಮಿಕ್ರಿ ಮಾಡಿದ ಸಂತೋಷ್
ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಶ್ರೀಶ್ರೀ ರವಿಶಂಕರ್ ಗುರೂಜಿ ಮಾತು
ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಶ್ರೀಶ್ರೀ ರವಿಶಂಕರ್ ಗುರೂಜಿ ಮಾತು
ಇಂಧನ ಹಾಗೂ ಮೂಲಸೌಕರ್ಯ ವಲಯದಲ್ಲಿ ದಾಖಲೆ ಪ್ರಗತಿ
ಇಂಧನ ಹಾಗೂ ಮೂಲಸೌಕರ್ಯ ವಲಯದಲ್ಲಿ ದಾಖಲೆ ಪ್ರಗತಿ
ವೈಚಾರಿಕ ನಕ್ಸಲರನ್ನು ಗುರುತಿಸಿ, ಬಹಿಷ್ಕರಿಸಬೇಕು; ಪ್ರಧಾನಿ ಮೋದಿ ವಾಗ್ದಾಳಿ
ವೈಚಾರಿಕ ನಕ್ಸಲರನ್ನು ಗುರುತಿಸಿ, ಬಹಿಷ್ಕರಿಸಬೇಕು; ಪ್ರಧಾನಿ ಮೋದಿ ವಾಗ್ದಾಳಿ