AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಲವು ದಿನಗಳ ಮನಸ್ಸಿನ ಗೊಂದಲಗಳಿಗೆ ಪರಿಹಾರ ಇರುವುದು

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ವೈಶಾಖ ಮಾಸ ಕೃಷ್ಣ ಪಕ್ಷದ ತ್ರಯೋದಶೀ ತಿಥಿ, ಭಾನುವಾರ ಗುರಿಯ ಕೇಂದ್ರ ಬದಲಾವಣೆ, ಹತ್ತಿರದವರಿಂದ‌ ದೂರು, ಪ್ರಸಿದ್ಧಿಯ ಆಸಕ್ತಿ ಇವೆಲ್ಲ ಈ‌ ದಿನದ ವಿಶೇಷ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ಹಲವು ದಿನಗಳ ಮನಸ್ಸಿನ ಗೊಂದಲಗಳಿಗೆ ಪರಿಹಾರ ಇರುವುದು
ಜ್ಯೋತಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: May 25, 2025 | 1:30 AM

Share

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ವಸಂತ, ಸೌರ ಮಾಸ: ವೃಷಭ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಕೃಷ್ಣ, ವಾರ: ಭಾನುವಾರ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಭರಣೀ, ಯೋಗ: ಸೌಭಾಗ್ಯ, ಕರಣ: ಗರಜ, ಸೂರ್ಯೋದಯ – 06 : 04 am, ಸೂರ್ಯಾಸ್ತ – 06 : 55 pm, ಇಂದಿನ ಶುಭಾಶುಭಕಾಲ : ರಾಹು ಕಾಲ 17:19 – 18:55, ಯಮಘಂಡ ಕಾಲ 12:30 – 14:06, ಗುಳಿಕ ಕಾಲ 15:42 – 17:19

ಮೇಷ ರಾಶಿ: ನಿಕಟವರ್ತಿಗಳು ವಿನಾಕಾರಣ ದೂರಾಗಬಹುದು. ಹಲವು ದಿನಗಳ ಮನಸ್ಸಿನ ಗೊಂದಲಗಳಿಗೆ ಪರಿಹಾರ ಇರುವುದು. ಒಂದುಕಡೆ ಬಂದರೆ ಮತ್ತೊಂದು ಕಡೆಯಿಂದ ನಿರ್ಗಮನ. ನಿಮಗೆ ಇದೆಲ್ಲದರ ಮೇಲೆ ಜುಗುಪ್ಸೆ ಬರಬಹುದು. ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ. ದುಡುಕಿನ ನಿರ್ಧಾರಗಳನ್ನು ತಗೆದುಕೊಂಡು ಸಂಕಟಪಡಬೇಕಾದೀತು. ಸಂಗಾತಿಯೊಂದಿಗೆ ಉತ್ತಮ ಸಂವಾದ ನಡೆಯಲಿದೆ. ಪರರ ಅಸೂಯೆಗೆ ಔಷಧವಿಲ್ಲ. ಆರೋಗ್ಯವನ್ನು ಕಡೆಗಣಿಸಬೇಡಿ, ವಿಶ್ರಾಂತಿಗೆ ಒತ್ತುನೀಡಿ. ದಿನದ ಕೊನೆಗೆ ಒಂದು ಶುಭಸುದ್ದಿ ಕೇಳಲಿದ್ದೀರಿ. ಈ ದಿನ ಸಕಾರಾತ್ಮಕ ವಿಚಾರಕ್ಕೆ ಒತ್ತುಕೊಟ್ಟರೆ ಅದರತ್ತ ಸಾಗುತ್ತಿದೆ. ನಿಮ್ಮನ್ನು ನಿಂದಿಸಲು ಕೆಲವು ಹೊಂಚು ಹಾಕಿದ್ದು ತಿಳಿದು ಅದನ್ನು ಸರಿ ಮಾಡಿಕೊಳ್ಳುವಿರಿ. ಬಂಧುಗಳು ನಿಮ್ಮ ಸಂಕಟಕ್ಕೆ ಜೊತೆಯಾಗುವರು. ರಾಜಕೀಯಕ್ಷೇತ್ರವು ನಿಮಗೆ ಕೈಹಿಡಿಯಬಹುದು. ಆದಷ್ಟು ಆಲೋಚಿಸಿ ಮುಂದಡಿಯಿಡಿ. ಮಾನಸಿಕವಾಗಿ ಋುಣಾತ್ಮಕ ಚಿಂತನೆಗಳು ನಿಮ್ಮ ಮನಸ್ಸನ್ನು ಕೊರೆಯಲಿವೆ. ನಿಮ್ಮ ಆಸಕ್ತಿಯಿಂದ ಉದ್ಯೋಗ ಕ್ಷೇತ್ರದಲ್ಲಿ ಕೆಲವು ಬದಲಾವಣೆ ತರುವಿರಿ.

ವೃಷಭ ರಾಶಿ: ನಿಮ್ಮಿಂದ ಆಗದೇ ಇದ್ದರೂ ಅದನ್ನು ಯಾರಿಂದಲಾದರೂ ಆಗುತ್ತದೆ ಎಂಬ ನಂಬಿಕೆ ಇರುವುದು. ಇಂದು ಸ್ತ್ರೀಯರು ವ್ಯವಹಾರದಲ್ಲಿ ಲಾಭವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಶ್ರಮಕ್ಕೆ ದೈವವು ಅನುಕೂಲವನ್ನು ಮಾಡಲಿದೆ‌. ಮಾತಿನಲ್ಲಿ ಮೆಚ್ಚುಗೆಯು ನಿಮಗೆ ಸಿಗಲಿದೆ. ನಿಮಗೆ ಕೆಲವು ಜವಾಬ್ದಾರಿಗಳು ಬರಬಹುದು. ಜಾಹೀರಾತು ಕ್ಷೇತ್ರದವರಿಗೆ ಅಪೂರ್ವ ಯೋಜನೆ ಗೊತ್ತಾಗುವುದು. ಕೋಪಗೊಳ್ಳುವ ಬದಲು ಶಾಂತಿಯುತವಾಗಿ ಪರಿಸ್ಥಿತಿಯನ್ನು ಪರಿಹರಿಸಿದರೆ ಉತ್ತಮ. ನಿಮ್ಮೊಳಗೆ ಅಹಂಕಾರದಂತಹ ಪರಿಸ್ಥಿತಿ ಬೆಳೆಯಲು ಬಿಡಬೇಡಿ. ಅನಾರೋಗ್ಯದಿಂದ ಕಿರಿಕಿರಿ ಅನುಭವಿಸಿದರೆ ಇಂದು ಸ್ವಲ್ಪ ಕಡಮೆ ಆಗಲಿದೆ. ಆರ್ಥಿಕವಾಗಿ ಖರ್ಚು ವೆಚ್ಚಗಳಲ್ಲಿ ಬಲವಾದ ಹಿಡಿತವಿರಲಿದೆ. ವಿದ್ಯಾರ್ಥಿಗಳಿಗೆ ಕರ್ತವ್ಯವನ್ನು ನೆನಪಿಸುವಂತಾಗುತ್ತದೆ. ನಿಮ್ಮ ಸ್ಥಗಿತಗೊಂಡ ಕಾರ್ಯಗಳನ್ನು ಪೂರ್ಣಗೊಳ್ಳಬಹುದು. ಇಂದು ನೀವು ಸಂತೋಷವಾಗಿರುವುದರಿಂದ ಎಲ್ಲದರಲ್ಲೂ ಯಶಸ್ಸನ್ನು ಪಡೆಯುತ್ತೀರಿ.

ಮಿಥುನ ರಾಶಿ: ಎಲ್ಲವನ್ನೂ ಹಾಗೆಯೇ ಮಾಡಿದರೂ ಫಲಿತಾಂಶ ಬೇರೆಯೇ ಬರಬಹುದು. ಇಂದು ಅನಗತ್ಯವಾಗಿ ಸುತ್ತಾಟವಾಗುವುದೇ ವಿನಃ ಪ್ರಯೋಜನವಾಗದು. ಇದರಿಂದ ಸಿಟ್ಟೂ ಹತಾಶೆಯೂ ಇರಲಿದೆ. ನಿಧಾನವಾಗಿ ಸಾಗುವ ಸಾಗುತ್ತಿರುವ ಕೆಲಸದಿಂದ ಬೇಸರವಾಗಲಿದೆ. ಕೆಲಸದಲ್ಲಿ ಬದಲಾವಣೆ ಸಾಧ್ಯತೆ ಇದೆ. ಆರೋಗ್ಯ ಸಮಸ್ಯೆಯಿಂದ ದೊಡ್ಡ ಕೆಲಸವನ್ನೇ ಬಿಡಬೇಕಾಗುವುದು. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯಬಹುದು. ನಿಮ್ಮ ಶಾಂತವಾದ ಸ್ವಭಾವದಿಂದ ಗೊಂದಲಗಳನ್ನು ಬಗೆಹರಿಸಲು ಸಾಧ್ಯ. ಸ್ನೇಹಿತರ ಸಹಾಯ ನಿರೀಕ್ಷೆಗೆ ಮೀರಿ ಬರಲಿದೆ. ಶಿಕ್ಷಕ ವೃತ್ತಿಯವರಿಗೆ ಮಕ್ಕಳಿಂದ ಗೌರವವು ಸಿಗಲಿವೆ. ನಿಮ್ಮನ್ನು ಪ್ರೀತಿಮಾಡಿಕೊಳ್ಳಲಿದ್ದಾರೆ. ನಿಮ್ಮವರಿಂದಲೇ ವಂಚಿತರಾಗುವಿರಿ. ವಿಶ್ವಾಸವು ಇಲ್ಲದೇ ಹೋಗಿ ಸಂಬಂಧವೂ ಒಡೆದುಹೋಗಲಿದೆ. ಉದ್ಯೋಗಿಗಳಿಗೆ ಉದ್ಯಮದಲ್ಲಿಉತ್ತಮ ಅವಕಾಶಗಳು ಬರಲಿವೆ. ಮೌಲ್ಯಯುತವಾದ ಏನನ್ನಾದರೂ ಪಡೆಯುವ ಬಯಕೆಯನ್ನು ಇಂದು ಪೂರೈಸಬಹುದು. ನಿಮ್ಮ ವಸ್ತುವು ಕಳೆದುಹೋಗಬಹುದು. ಯಾವುದೇ ಉದ್ವೇಗಕ್ಕೆ ಒಳಗಾಗುವುದು ಬೇಡ.

ಕರ್ಕಾಟಕ ರಾಶಿ: ಯಾರದೋ ಮೂಲಕ ಬರುವ ತಪ್ಪು ತಿಳಿವಳಿಕೆಯನ್ನು ತಲೆಯಿಂದ ಹೊರಹಾಕಿದರೆ ಸಮಾಧಾನ ನಿಮ್ಮೊಳಗೆ ಇಳಿಯುವುದು. ಇಂದು ದುಶ್ಚಟವನ್ನು ಸ್ನೇಹಿತರ ಮೂಲಕ ಕಲಿಯುವ ಸಂಭವವಿದೆ. ಉದ್ಯೋಗದಲ್ಲಿ ಭಡ್ತಿಯು ಸಿಗಲಿದೆ. ಮಕ್ಕಳಿಂದ ಸಂತೋಷವಾರ್ತೆಯು ಇರುತ್ತದೆ. ಸ್ನೇಹಿತರಿಂದ ಉತ್ತಮ ಸುದ್ದಿ ಕೇಳಬಹುದು. ಕೆಲವು ನಿರ್ಧಾರಗಳಲ್ಲಿ ಗೊಂದಲ ಉಂಟಾಗಬಹುದು, ಹಿರಿಯರ ಸಲಹೆ ಉಪಯುಕ್ತ. ಆರೋಗ್ಯದಲ್ಲಿ ಸಣ್ಣ ಅಸ್ವಸ್ಥತೆಗಳು ಕಾಣಿಸಬಹುದು. ಬಂಧುಗಳ ಮನೆಯಲ್ಲಿ ಇಂದು ನಿಮ್ಮ ವಾಸವಿರಲಿದೆ. ಮಕ್ಕಳು ಕಲಿಕೆಯಲ್ಲಿ ಆಸಕ್ತಿಯನ್ನು ತೋರಿಸದೇ ಇರುವುದರಿಂದ ಬೈಯ್ಯುವಿರಿ. ಆಲಸ್ಯದಿಂದ ಹೊರಬರಬೇಕಾದ ಸ್ಥಿತಿಯು ಇದೆ. ಹೊಸ ಆಲೋಚನೆಗೆ ನೀವು ತೆರೆದುಕೊಳ್ಳುವಿರಿ. ರಾಜಕೀಯವಾಗಿ ಕೆಲವು ಬದಲಾವಣೆಗಳು ಆಗುವುದು. ದೈವಭಕ್ತಿಯನ್ನು ಬೆಳೆಸಿಕೊಂಡು ಸಾಗಬೇಕಾಗುವುದು. ನೀವು ಭಾವನಾತ್ಮಕವಾಗಿ ತೆಗೆದುಕೊಳ್ಳುವ ನಿರ್ಧಾರಗಳು ನಿಮ್ಮ ಸ್ಥಾನವನ್ನು ದುರ್ಬಲಗೊಳಿಸಬಹುದು. ನಿಮ್ಮದಾದ ವಸ್ತುವನ್ನು ಇತರರಿಗೆ ಕೊಡಬೇಕಾಗುವುದು.

ಸಿಂಹ ರಾಶಿ: ಆ ಕ್ಷಣದ ಮನೋಭಾವವೇ ನಿಮ್ಮದಾಗಿರುವುದು. ಅದನ್ನು ಸರಿಯಾಗುವಂತೆ ನೋಡಿಕೊಳ್ಳಿ. ಇಂದು ಸಾಮಾಜಿಕವಾದ ಕೆಲಸ ಮಾಡುತ್ತಿದ್ದರೆ ನಿಮಗೆ ಠೀಕೆಗಳು ಬರಲಿದೆ. ಅದು ನಿಮ್ಮ ಪರೀಕ್ಷೆಯ ಕಾಲವೂ ಆಗಬಹುದು. ಕಟ್ಟಡವನ್ನು ನಿರ್ಮಿಸುವ ಕಾರ್ಯದಲ್ಲಿ ನೀವು ಯಶಸ್ವಿಯಾಗುವಿರಿ. ದುರಾಸೆಯಿಂದ ಆರ್ಥಿಕ ನಷ್ಟವಾಗುವ ಸಾಧ್ಯತೆ ಇದೆ. ಸತ್ಯ ಮತ್ತು ತಾಳ್ಮೆಯಿಂದ ಮಾತ್ರ ಇಂದಿನ ದಿನ ಸುಧಾರಿಸುತ್ತದೆ. ಸಂಜೆಗೆ ಹಿಂದಿನ ನಷ್ಟಗಳನ್ನು ಸರಿದೂಗಿಸಲು ಸಾಧ್ಯವಾಗುತ್ತದೆ. ನಿರಾಶೆ ಕೊನೆಗೊಳ್ಳುತ್ತದೆ ಮತ್ತು ಆಲೋಚನೆಯಲ್ಲಿ ಸಕಾರಾತ್ಮಕತೆ ಬರುತ್ತದೆ. ಪ್ರೀತಿಯ ಜೀವನದಲ್ಲಿ ಹೆಚ್ಚಿನ ನಿರೀಕ್ಷೆಗಳು ನಿರಾಸೆಗೆ ಕಾರಣವಾಗಬಹುದು. ದಾಯಾದಿಗಳ ಆಗಮನ ಕಿರಿಕಿರಿ ತರಲಿದೆ. ಕೆಲವು ಕೆಲಸದ ಭರಾಟೆಯಲ್ಲಿ ಇಂದು ಸಮಯವು ನಿಮ್ಮದಾಗಿರದು. ಲಭ್ಯತೆಯನ್ನು ರೂಢಿಸಿಕೊಳ್ಳಿ. ಅಜಾಗರೂಕರಾಗಿ ಯಾರ ಜೊತೆಯೂ ವರ್ತಿಸುವುದು ಬೇಡ. ಸಮಸ್ಯೆಗಳೆಲ್ಲವೂ ಪರಿಹಾರವಾಗಲಿದೆ. ವೈವಾಹಿಕ ಜೀವನವನ್ನು ಇಂದು ಕೂಡ ಅತ್ಯಂತ ಸಂತೋಷದಿಂದ ಕಳೆಯುವಿರಿ. ಆರೋಗ್ಯದ ವಿಷಯದಲ್ಲಿ ಇಂದು ಸ್ವಲ್ಪ ತೊಂದರೆಯಾಗಬಹುದು. ಉದ್ಯಮಕ್ಕೆ ಹೊಸ ದಿಕ್ಕನ್ನು ಕೊಡುವ ಸಾಧ್ಯತೆ ಇದೆ.

ಕನ್ಯಾ ರಾಶಿ: ನಿಮ್ಮ ಉತ್ಸಾಹಕ್ಕೆ ಯಾರಿಂದಲಾದರೂ ಭಂಗ ಬರಬಹುದು. ನಿಮ್ಮ ವೇಗಕ್ಕೆ ಕೆಲಸಗಳು ಆಗುತ್ತಿಲ್ಲ ಎಂಬ ತುಡಿತ ಇರಲಿದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಇಂದು ನೀವು ನಿಶ್ಚಿಂತರು. ಆತ್ಮೀಯರೊಂದಿಗೆ ಸಂತೋಷದ ಕ್ಷಣಗಳ ನಿರೀಕ್ಷೆ. ನೀವು ಆರ್ಥಿಕ, ದೈಹಿಕ ಮತ್ತು ಮಾನಸಿಕ ಶಾಂತಿಯನ್ನು ಪಡೆಯುತ್ತೀರಿ. ಜಾಣ ಮರೆವನ್ನು ತೋರಿಸುವಿರಿ. ಕುಟುಂಬದಲ್ಲಿ ಹಬ್ಬದ ವಾತಾವರಣ ನೆಲೆಸಲಿದೆ. ಕೆಲಸದ ಸ್ಥಳದಲ್ಲಿ ನಿಮಗೆ ಮೆಚ್ಚುಗೆ ಸಿಗುತ್ತದೆ. ಜೊತೆಗೆ ಲಾಭವನ್ನು ತರಬಹುದು. ಸಂಗಾತಿಯಿಂದ ಹಣದ ಸಹಾಯವು ದೊರೆಯಬಹುದು. ನಿಮಗೆ ಕುಟುಂಬವು ಬೆಂಬಲವನ್ನು ನೀಡುತ್ತದೆ. ನಿಮ್ಮ ವೃತ್ತಿಯಲ್ಲಿ ಪ್ರಸಿದ್ಧರಾಗುತ್ತೀರಿ. ಇನ್ನೊಬ್ಬರ ವಸ್ತುಗಳ ಮೇಲೆ ಬಯಕೆ ಆಗಬಹುದು. ಆಸೆಗಳನ್ನು ಹಿಡಿತದಲ್ಲಿ ಇಡಿ. ಶುಭ ಕಾರ್ಯದ ಚಿಂತನೆ ಅನಿರೀಕ್ಷಿತವಾಗಿ ನಡೆಯಲಿದೆ. ವ್ಯವಹಾರದಲ್ಲಿಯೂ ಹೊಸ ಅಧ್ಯಾಯ ತೆರೆಯಲಿದೆ. ಹೂಡಿಕೆ ವಿಸ್ತರಣೆಗೆ ಅವಸರ ಬೇಡ. ನಿಮ್ಮ ವಿರೋಧಿಗಳಿಗೆ ನೀವು ತಲೆನೋವಾಗಿ ಉಳಿಯುತ್ತೀರಿ. ನಿಮ್ಮ ನೇರ ಮಾತುಗಳು ಇಷ್ಟವಾಗದ ಕಾರಣ ನಿಮ್ಮಿಂದ ಯಾರಾದರೂ ದೂರವಿರಬಹುದು.

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್