AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದು ನಿಮ್ಮ ಸ್ವಂತ ಉದ್ಯಮದಲ್ಲಿ ನಿಮಗೆ ಲಾಭವಿದೆ

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವರ್ಷ ಋತುವಿನ ಶ್ರಾವಣ ಮಾಸ ಕೃಷ್ಣ ಪಕ್ಷದ ಅಮಾವಾಸ್ಯಾ ತಿಥಿ ಶನಿವಾರ ಹೊಸಬರ ಸಾಂಗತ್ಯ, ಅಚಾತುರ್ಯ, ಪರರಿಂದ ದುಃಖ, ಅಸ್ಥೈರ್ಯ, ನಾಯಕರ ಗತ್ತು, ಅನ್ಯರ ಹೊಣೆ ಇವೆಲ್ಲ ಈ ದಿನದ ವಿಶೇಷ. ಇಂದು ಯಾವ ರಾಶಿಗಳ ಜನರ ಭವಿಷ್ಯ ಹೇಗಿರಲಿದೆ ಎಂಬುದರ ಬಗ್ಗೆ ಮಾಹಿತಿ

ಇಂದು ನಿಮ್ಮ ಸ್ವಂತ ಉದ್ಯಮದಲ್ಲಿ ನಿಮಗೆ ಲಾಭವಿದೆ
ಜ್ಯೋತಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Aug 23, 2025 | 1:42 AM

Share

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು: ವರ್ಷ, ಚಾಂದ್ರ ಮಾಸ: ಶ್ರಾವಣ, ಸೌರ ಮಾಸ: ಸಿಂಹ, ಮಹಾನಕ್ಷತ್ರ: ಮಘಾ, ವಾರ: ಶುಕ್ರ, ತಿಥಿ: ಅಮಾವಾಸ್ಯಾ, ನಿತ್ಯನಕ್ಷತ್ರ: ಮಘಾ, ಯೋಗ: ಸಿದ್ದಿ, ಕರಣ: ಚತುಷ್ಪಾತ್, ಸೂರ್ಯೋದಯ – 06 : 20 am, ಸೂರ್ಯಾಸ್ತ – 06 : 49 pm, ಇಂದಿನ ಶುಭಾಶುಭ ಕಾಲ: ರಾಹು ಕಾಲ 09:28 – 11:02, ಗುಳಿಕ ಕಾಲ 06:21- 07:55 ಯಮಗಂಡ ಕಾಲ 14:09 – 15:42

ತುಲಾ ರಾಶಿ: ಕುಲಕಸುಬನ್ನು ವ್ಯಾಪಕವಾಗಿ ವಿಸ್ತರಿಸಿ ಉದ್ಯಮವಾಗಿ ಮಾಡಿಕೊಳ್ಳುವ ಪ್ರಯತ್ನದತ್ತ ಸಾಗುವಿರಿ. ಇಂದು ನಿಮಗೆ ನಿಮ್ಮವರುಲೇ ಬಯಸದೇ ಇದ್ದರೂ ಸಹಾಯ ಮಾಡುವವರಿದ್ದಾರೆ. ಬಂಧುಗಳ ಬಗ್ಗೆ ನಿಮಗೆ ಕನಿಕರ ಬರುವುದು. ಅಮೂಲ್ಯವಾದ ವಸ್ತುವನ್ನು ನೀವು ಕಳೆದಕೊಳ್ಳುವ ಸಾಧ್ಯತೆ ಇದೆ. ವಾಹನದ ವಿಚಾರಕ್ಕೆ ಸಂಗಾತಿಯ ಜೊತೆ ಕಲಹವಾಗಬಹುದು. ಉದ್ಯೋಗಕ್ಕೆ ಸಂಬಂಧಿಸಿದೆ ನಿಮ್ಮಲ್ಲಿ ಅನಿಶ್ಚಿತತೆ ಇರಲಿದೆ. ವಿಶ್ವಾಸವನ್ನು ಪಡೆಯಲು ಶ್ರಮಿಸಿ, ಸೋಲಬಹುದು. ಸಂಶೋಧನೆಯಲ್ಲಿ ತೊಡಗಿದ್ದರೆ ಸ್ವಲ್ಪ ಹಿನ್ನಡೆಯೂ ಹಣದ ಕೊರತೆಯೂ ಆಗಬಹುದು.‌ ಯಾರಿಂದಲಾದರೂ ಅಪಮಾನವೂ ಆಗುವ ಸಾಧ್ಯತೆ ಇದೆ. ಉನ್ನತ ವ್ಯಾಸಂಗದಲ್ಲಿ ನಿಮಗೆ ಅಡೆತಡೆಗಳು ಬರಲಿದ್ದು, ನಿಶ್ಚಲವಾದ ಗುರಿಯೊಂದಿಗೆ ಸಾಗಿ. ಏನಾಗುತ್ತಿದೆ ಎಂಬ ಯಾವ ಸೂಚನೆಯೂ ನಿಮಗೆ ಸಿಗದಾಗುವುದು. ವ್ಯಾಪಾರವನ್ನು ಮುಚ್ಚಬೇಕು ಎನ್ನುವ ಸ್ಥಿತಿಯವರೆಗೆ ಹೋಗಬಹುದು. ಆಪ್ತರಾದ ಮಾತ್ರಕ್ಕೆ ಎಲ್ಲವನ್ನೂ ಸರಿಯಾಗಿ ಹೇಳುತ್ತಾರೆ ಎಂದಿಲ್ಲ. ತಂದೆಯ ಆಸೆಯನ್ನು ಪೂರ್ಣ ಮಾಡಿ, ಅವರಿಗೆ ಖುಷಿಯನ್ನು ಕೊಡುವಿರಿ.

ವೃಶ್ಚಿಕ ರಾಶಿ: ಹಣಕ್ಕಾಗಿ ಬೇಡಿಕೆ ಬಂದರೆ ಕೂಡಲೇ ಪ್ರತಿಕ್ರಿಯೆ ಕೊಡದೇ ಕಾಯಿಸಿ. ಇಂದು ನಿಮ್ಮ ಜೊತೆಗಾರರ ನಿಧಾನಗತಿಯ ಕೆಲಸವು ನಿಮ್ಮ ಮನಃಸ್ಥಿತಿಗೆ ಹೊಂದದಿರಬಹುದು. ಉದ್ಯೋಗದಲ್ಲಿ ಸ್ಥಳಾಂತರವು ನಿಮಗೆ ಕಷ್ಟವಾದೀತು. ಆದರೆ ಅನಿವಾರ್ಯವೂ ಆಗಲಿದೆ. ವಿವಾಹಜೀವನಕ್ಕೆ ಕಾಲಿಟ್ಟ ನಿಮಗೆ ಕೆಲವು ಅಸ್ಪಷ್ಟವಾದ‌ ನಡತೆಯಿಂದ ದಿಗ್ಭ್ರಾಂತರಾಗುವ ಸಾಧ್ಯತೆ ಇದೆ. ನಿಮ್ಮ ಬಳಿ ಬಂದು ಕ್ಷಮಾಪಣೆ ಕೇಳಿದಲ್ಲಿ ಕ್ಷಮಿಸುವ ದೊಡ್ಡತನವನ್ನು ತೋರಿಸಿ.‌ ನಿಮ್ಮ ಸಂಕಷ್ಟಕ್ಕೆ ನಿಮ್ಮ ನಂಬಿಕೆ ಮನುಷ್ಯ ರೂಪದಲ್ಲಿ ಬರಲಿದೆ. ಮಕ್ಕಳಿಂದ ನಿಮಗೆ ಕಿರಿಕಿರಿಯಾಗಲಿದೆ. ಸಂತೋಷದಿಂದ ನೀವು ಇರುವಿರಿ. ಪ್ರೇಮಪ್ರಕರಣವು ಹೊಸ ರೂಪವನ್ನು ಪಡೆದುಕೊಳ್ಳಬಹುದು. ಸಾಮಾಜಿಕ ಕಾರ್ಯದಲ್ಲಿ ಆಸಕ್ತಿ ಹೆಚ್ಚಾಗುವುದು. ಬಹಳ ದಿನಗಳ ಅನಂತರ ಉದ್ಯೋಗಕ್ಕೆ ಸೇರಿಕೊಳ್ಳುವ ಅವಕಾಶ ಸಿಗಲಿದೆ. ವಾಹನದಿಂದ‌ ಬಿದ್ದು ಪೆಟ್ಟುಮಾಡಿಕೊಳ್ಳಬಹದು. ಜಾಗರೂಕತೆಯಿಂದ ವಾಹನವನ್ನು ಚಲಾಯಿಸಿ. ಎಲ್ಲವೂ ತಾನಾಗಿಯೇ ತಿಳಿದು ಬರುತ್ತದೆ. ಪೂರ್ವಾಪರ ಯೋಚನೆ ಇಲ್ಲದೇ ಮಾತನಾಡಿ ಸಂಬಂಧವನ್ನು ಹಾಳುಮಾಡಿಕೊಳ್ಳಬೇಡಿ.

ಧನು ರಾಶಿ: ನಷ್ಟವಾದ ಕೆಲಸಕ್ಕೆ ಅನ್ಯರನ್ನು ಹೊಣೆಗಾರರನ್ನಾಗಿ ಮಾಡದೇ ನೀವು ಜೊತೆಯಾಗುವುದು ಉತ್ತಮ. ಇಂದು ನೀವು ಹಾಕಿಕೊಂಡ ಯೋಜನೆಗೆ ಕುಟುಂಬದ ಸಹಾಯವು ಲಭ್ಯವಾಗಲಿದೆ. ದೈವಾನುಗ್ರಹಕ್ಕೆ ಕಠಿಣವಾದ ಕಾರ್ಯವನ್ನೂ ಮಾಡುವಿರಿ. ನಿಮ್ಮ ಆರೋಗ್ಯವನ್ನು ವಿಚಾರಿಸಲು ಬಂಧುಗಳು ಬರಬಹುದು. ಧಾರ್ಮಿಕ ಕಾರ್ಯದಲ್ಲಿ ನೀವು ಭಾಗಿಯಾಗಲಿದ್ದೀರಿ. ಪುಣ್ಯಸ್ಥಳಗಳಿಗೆ ನೀವು ಹೋಗುವ ಅವಕಾಶ ಸಿಗಲಿದೆ. ಎಷ್ಟೇ ಪ್ರಯತ್ನಿಸಿದರೂ ನಿಮಗೆ ಸಿಗುವುದು ಕಷ್ಟವಾದಾಗ ಅದನ್ನು ಬಿಟ್ಟು ಮುನ್ನಡೆಯುವುದು ಸೂಕ್ತ. ಉತ್ತಮ‌ ಸಂಗತಿಗಳ‌ ಕಡೆ ನಿಮ್ಮ ಗಮನವಿರಲಿ. ನಕಾರಾತ್ಮಕ ಚಿಂತನೆಯನ್ನು ನೀವು ನಿಧಾನವಾಗಿ‌ ಕಡಿಮೆ ಮಾಡಿಕೊಳ್ಳಿ. ಸಂಗಾತಿಯ ಮನಸ್ತಾಪವನ್ನು ಸಮಯವನ್ನು ನೋಡಿ ಸರಿಮಾಡುವಿರಿ. ಕಾರ್ಯ ಸ್ಥಳದಲ್ಲಿ ನಿಮ್ಮ ವ್ಯವಸ್ಥಾಪಕರೊಂದಿಗೆ ನೀವು ಉತ್ತಮ ಬಾಂಧವ್ಯವನ್ನು ಹೊಂದುವಿರಿ. ನಿಮ್ಮ ಶ್ರಮದ ಲಾಭವನ್ನು ಮತ್ಯಾರಾದರೂ ಪಡೆಯಬಹುದು. ವ್ಯಾಪಾರದಲ್ಲಿ ಚಾಣಕ್ಷತೆಯಿಂದ ಲಾಭವನ್ನು ಪಡೆಯುವಿರಿ. ಸಹೋದರಿಯ ಜವಾಬ್ದಾರಿಯೂ ನಿಮಗೆ ಬರಲಿದ್ದು ಭಾರ ಹೆಚ್ಚಾಗುವುದು.

ಮಕರ ರಾಶಿ: ಅಪಮೌಲ್ಯಕ್ಕೆ ಬೇಕಾದ ಬೆಲೆಯನ್ನು ತೆರಬೇಕಾಗುವುದು. ಇಂದು ನಿಮ್ಮ ಆಲೋಚನಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗಲಿದೆ. ಉದ್ಯೋಗಕ್ಕೆ ವಿದಾಯ ಹೇಳುವ ಸಂದರ್ಭವು ಬರಬಹುದು. ನಿಮ್ಮ ನೆಚ್ಚಿನವರ ಭೇಟಿಯಾಗುವ ಸಂದರ್ಭ ಬಂದರೂ ಕಾರಣಾಂತರಗಳಿಂದ ತಪ್ಪಿಹೋಗಬಹುದು. ನಿಮಗೆ ಸಹಕರಿಸಿದವರನ್ನು ಕೃತಜ್ಞತೆಯಿಂದ ಸ್ಮರಿಸಿ. ನಿಮಗೆ ನಿಮ್ಮ‌ ವಂಶದ ಕಾರಣದಿಂದ ಗೌರವ ಸಿಗಬಹುದು. ಕೆಲಸಗಳಿಗೆ ಪ್ರಂಶಸೆ ಸಿಗಲಿದೆ. ನಿಮ್ಮ‌ ಹಾಸ್ಯ ಸ್ವಭಾವವು ಕೆಲವರಿಗೆ ಕಷ್ಟವಾದೀತು. ಪ್ರಯಾಣವು ಅಗತ್ಯವಿದ್ದರಷ್ಟೇ ಮಾಡಿ. ಯಾರನ್ನೂ ಅವಲಂಬಿಸದೇ ನಿಮಗೆ ಬೇಗನೆ ಕೆಲಸ ಆಗಬಹುದು‌. ದುಡುಕುವ ಪ್ರಮೇಯವನ್ನು ಒತ್ತಡದಿಂದ ತಂದುಕೊಳ್ಳುವಿರಿ. ಕಛೇರಿಯಲ್ಲಿ ನಿಮ್ಮನ್ನು ಪ್ರಶಂಸಿಸಬಹುದು.‌ ಅದನ್ನು ಸಮವಾಗಿ ತೆಗೆದುಕೊಳ್ಳಿ.‌ ಅತಿಯಾದ ವೈಭವೀಕರಣದಿಂದ ನಿಮಗೆ ಕಷ್ಟವಾಗವುದು ಬೇಡ. ಶಿಸ್ತನ್ನು ಬಿಡದೇ ಪಾಲಿಸುವುದು ನಿಮಗೆ ಗೌರವವನ್ನು ತಂದು ಕೊಡುವುದು. ಅಪರಿಚಿತರು ನಿಮ್ಮನ್ನು ಅಳೆಯಬಹುದು. ಶಿಸ್ತುಬದ್ಧವಾದ ವ್ಯವಹಾರದಿಂದ ನಿಮಗೆ ಹೊಗಳಿಕೆ ಸಿಗುವುದು.

ಕುಂಭ ರಾಶಿ: ಆಗೊಮ್ಮೆ ಈಗೊಮ್ಮೆ ಕೆಲಸದ ನಿಮಿತ್ತ ಬರುವವರಿಗೆ ಆದರದ ಅವಶ್ಯಕತೆ ಇರದು. ಇಂದು ನಿಮ್ಮ ಕಾರ್ಯಗಳು ನಿಧಾನಗತಿಯಲ್ಲಿ ಇರಲಿದೆ. ಕುಟುಂಬದವರಿಗೆ ಸಮಯ ಕೊಡುವುದು ಕಷ್ಟವಾದೀತು. ಆರ್ಥಿಕವಾಗಿ ನೀವು ಸುಧಾರಣೆ ಕಾಣಬೇಕು ಎಂದಿದ್ದರೂ ನೀವು ಆಲಸ್ಯದಿಂದ ಹೊರಬರಬೇಕಾದೀತು.‌ ಉತ್ಸಾಹದ ಕೊರತೆ ಅತಿಯಾಗಿ ತೋರುವುದು. ಸಹನೆಯನ್ನು ನಿಯಂತ್ರಿಸಲು ಸಾಧ್ಯವಾಗದು. ಅಧಿಕಾರದ ಮಾತು‌ ಇಂದು‌ ನಡೆಯದೇ ಇದ್ದೀತು. ವೇತನವನ್ನು ಹೆಚ್ಚಿಸಲು ನೀವು ವಿನಂತಿ ಮಾಡಿಕೊಳ್ಳಬಹುದು. ಯಾರದೋ ನಿಯಂತ್ರಣದಲ್ಲಿ ಇರುವ ಅನುಭವ ಹೆಚ್ಚಾಗಿ ಕಾಡುವುದು. ಸಂಗಾತಿಯ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಸ್ನೇಹಿತರ ಭೇಟಿಯಾಗಲು ಇಂದು‌ ಬಹಳ‌ ಸಮಯ ಕಾಯುವಿರಿ. ಯಾರನ್ನಾದರೂ ನಂಬಲು ನಿಮ್ಮ‌ ಮನಸ್ಸು ಸಿದ್ಧವಿರದು. ಸಜ್ಜನರಿಗೆ ಭೋಜನವನ್ನು ಹಾಕಿಸಿ. ದೂರದ ಊರಿಗೆ ಹೋದಾಗ ಉತ್ತಮ ವ್ಯವಸ್ಥೆ ಆಗಲಿದೆ. ಅಗ್ನಿಯಿಂದ ನಿಮಗೆ ಭಯವು ಕಾಡುವುದು.

ಮೀನ ರಾಶಿ: ಇಂದಿನ ನಿಮ್ಮ ಶ್ರಮವನ್ನು ಯಾರ ಬಳಿಯೂ ಹೇಳಿ‌ ಪ್ರಯೋಜನವಿಲ್ಲ. ಇಂದು ನಿಮ್ಮ ಸ್ವಂತ ಉದ್ಯಮದಲ್ಲಿ ನಿಮಗೆ ಲಾಭವಿದೆ. ಹೂಡಿಕೆಯ ಹಣವೇ ನಿಮಗೆ ಧೈರ್ಯವನ್ನು ಕೊಡುತ್ತದೆ. ನಿಮ್ಮ ಅತಿಯಾದ ಉತ್ಸಾಹವು ಯಾರಾದರೂ ನೋಡಿ ಆಡಿಕೊಳ್ಳಬಹುದು‌. ನಿಮ್ಮ ಕಾರ್ಯಕೌಶಲವು ಸಹೋದ್ಯೋಗಿಗಳಿಗೆ ತಿಳಿಯಬಹುದು. ಆರೋಪ ಪ್ರತ್ಯಾರೋಪಕ್ಕೆ ವೃತ್ತಿಯಲ್ಲಿ ಅವಕಾಶ ತೆರೆಯುವುದು. ಮಿತ್ರರಿಗೋಸ್ಕರ ಸ್ವಲ್ಪವನ್ನು ತ್ಯಾಗಮಾಡುವಿರಿ. ನಿಮ್ಮ‌ ಅಂದಾಜಿಗೆ ತಕ್ಕಂತೆ ನಡೆಯದೇ ಇರುವುದು ಬೇಸರವನ್ನು ಉಂಟುಮಾಡೀತು. ಸ್ತ್ರೀಯರ ಜೊತೆ ಹೆಚ್ಚಿನ ಸಮಯವನ್ನು ಕಳೆಯುವಿರಿ. ನಿಮ್ಮ ಮಾತುಗಳು ಇತರರಿಗೆ ಹೆಚ್ಚಾದಂತೆ ತೋರೀತು. ದಿನ ನಿತ್ಯದ ವಸ್ತುಗಳೇ ನಿಮಗೆ ಬಹಳ ಹೆಚ್ಚಾದಂತೆ ಅನ್ನಿಸುವುದು. ಯಾರನ್ನೂ ನಂಬುವ ಸ್ಥಿತಿಯಲ್ಲಿ ಇಂದು ನೀವಿರುವುದಿಲ್ಲ. ಅದಷ್ಟು ಕಡಿಮೆ ಮಾತನಾಡಿ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ. ಅವರ ಆರೋಗ್ಯವೂ ಚೇತರಿಕೆ ಕಾಣುವುದು. ಇಂದು ನಿಮ್ಮ ಆದಾಯವನ್ನು ಇಮ್ಮಡಿಗೊಳಿಸಿಕೊಳ್ಳಬಹುದು.

Follow Us
Lohitha Hebbar
Lohitha Hebbar

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ