AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ಪ್ರಯಾಣದಿಂದ ಆಯಾಸ, ಅಸಾಧ್ಯವಾದುದನ್ನು ಸಾಧಿಸುವ ಭ್ರಮೆಯಿಂದ ಹೊರಬನ್ನಿ

ಚಂದ್ರ, ಸೂರ್ಯನ ಸಂಚಾರ ಚೆನ್ನಾಗಿರಬೇಕು. ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (ಸೆಪ್ಟೆಂಬರ್ 26) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ಪ್ರಯಾಣದಿಂದ ಆಯಾಸ, ಅಸಾಧ್ಯವಾದುದನ್ನು ಸಾಧಿಸುವ ಭ್ರಮೆಯಿಂದ ಹೊರಬನ್ನಿ
ಪ್ರಾತಿನಿಧಿಕ ಚಿತ್ರImage Credit source: iStock Photo
TV9 Web
| Edited By: |

Updated on: Sep 26, 2023 | 12:10 AM

Share

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಸೆಪ್ಟೆಂಬರ್ 26 ಮಂಗಳವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಶ್ರವಣಾ, ಯೋಗ: ಸುಕರ್ಮ, ಕರಣ:ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 25 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 07:53 ರಿಂದ 09:24 ರವರೆಗೆ, ಯಮಘಂಡ ಕಾಲ ಬೆಳಿಗ್ಗೆ 10:54 ರಿಂದ 12:24 ರವರೆಗೆ, ಗುಳಿಕ ಕಾಲ ಮಧ್ಯಾಹ್ನ 01:55 ರಿಂದ 03:25ರ ವರೆಗೆ.

ಮೇಷ ರಾಶಿ: ನಕಾರಾತ್ಮಕ ಆಲೋಚನೆಗಳು ನಿಮ್ಮ ಮನಸ್ಸನ್ನು ಕೆಡಿಸುವುದು. ಅಸಾಧ್ಯವಾದುದನ್ನು ಸಾಧಿಸುವ ಭ್ರಮೆಯಿಂದ ಹೊರಬನ್ನಿ. ಸಂಗಾತಿಯ ಜೊತೆ ಹೆಚ್ಚು ಸಮಯವನ್ನು ಕಳೆದರೂ ಮನಸ್ಸಿಗೆ ನೆಮ್ಮದಿ ಸಿಗದು. ನೀವು ಇಂದು ಅಸಹಾಯಕರಂತೆ ತೋರುವಿರಿ. ಆರ್ಥಿಕವಾಗಿ ಸಬಲರಾಗಲು ವಿವಿಧ ಆರ್ಥಿಕ ಮೂಲವನ್ನು ಅನ್ವೇಷಿಸಬೇಕಾದೀತು. ಮಕ್ಕಳ‌ ವಿವಾಹ ಕಾರ್ಯದಲ್ಲಿ ನೀವು ಮಗ್ನರಾಗುವಿರಿ. ಶತ್ರುಗಳ ಉಪಟಳ ಕಡಿಮೆ ಆಗಿದ್ದು ವೈಯಕ್ತಿಕ ಯೋಜನೆಗೆ ಸಮಯ ಕೊಡಲಾದೀತು. ಮಾತನ್ನು ನಿಯಂತ್ರಿಸಿರುವುದು ಮಿತ್ರರಿಗೆ ಆಶ್ಚರ್ಯ ಎನಿಸುವುದು.

ವೃಷಭ ರಾಶಿ: ಪ್ರೇಮದಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇದೆ. ತಾಳ್ಮೆಯಿಂದ ಮುಂದುವರಿಯುವುದು ಮುಖ್ಯವಾದೀತು. ವ್ಯಾಪಾರಸ್ಥರಿಗೆ ಸ್ವಲ್ಪ ಆಲಸ್ಯವು ಇರುವುದು. ಒಂದೇ ವಿಚಾರವನ್ನು ಮನನ‌ ಮಾಡುವಿರಿ. ಸಂಗಾತಿಯ ನಡುವೆ ಭಿನ್ನಾಭಿಪ್ರಾಯ ಬರಲಿದೆ. ಪ್ರಯಾಣದಿಂದ ಆಯಾಸವಾಗಬಹುದು. ನಿಮ್ಮ ಆಸೆಗಳನ್ನು ಇನ್ನೊಬ್ಬರ ಜೊತೆ ಹೇಳಿಕೊಂಡು ಸಮಾಧಾನ ಪಡುವಿರಿ. ತುರ್ತು ಅವಶ್ಯಕತೆ ಇರುವುದು. ಭೀತಿಯಿಂದ ನೀವು ಕೆಲವನ್ನು ಮಾಡದೇ ಇರುವಿರಿ. ಇರುವುದರಲ್ಲಿ ನೆಮ್ಮದಿಯನ್ನು ಕಾಣುವುದು ಮುಖ್ಯವಾದೀತು. ಮನಸ್ಸಿನ ಚಾಂಚಲತ್ಯವನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ. ವೃತ್ತಿಯಲ್ಲಿ ಮೇಲಧಿಕಾರಿಗಳಿಂದ ತೊಂದರೆ ಬರಬಹುದು. ಕೆಲವರ ವಿಚಾರದಲ್ಲಿ ನಿಮ್ಮ‌ ಅಭಿಪ್ರಾಯವು ಬದಲಾಗಬಹುದು.

ಮಿಥುನ ರಾಶಿ: ನಿಮಗೆ ತಿಳಿದ ವಿಚಾರದ ಬಗ್ಗೆ ಹುಡುಕಾಟ ನಡೆಸುವಿರಿ. ವಿದ್ಯಾರ್ಥಿಗಳು ಸಂಶೋಧನೆಯತ್ತ ಗಮನವನ್ನು ಕೊಡುವರು. ಸಂಗಾತಿಯ ಆರೋಗ್ಯದ ಬಗ್ಗೆ ಚಿಂತೆ ಇರುವುದು. ಸರಿಯಾದ ಸಮಯಕ್ಕೆ ಉತ್ತಮ ವೈದ್ಯರ ಸಲಹೆಯನ್ನು ಪಡೆಯಿರಿ. ಕಛೇರಿಯ ಕೆಲಸವನ್ನು ಮನೆಗೂ ತಂದುಕೊಳ್ಳುವಿರಿ. ಇಂದು ಮಾನಸಿಕವಾಗಿ ನೀವು ಕುಗ್ಗುವಿರಿ. ಕೆಲಸದಿಂದ ಸ್ವಲ್ಪ ವಿಶ್ರಾಂತಿಯನ್ನು ಪಡೆಯುವುದು ಉತ್ತಮ. ವೇತನವನ್ನು ಹೆಚ್ಚಿಸಿಕೊಳ್ಳಲು ಅನ್ಯ ಮಾರ್ಗವನ್ನು ಹುಡುಕುವ ಅವಶ್ಯಕತೆ ಬರಬಹುದು. ಹೊಸ ಉದ್ಯೋಗಕ್ಕೆ ಬೇಕಾದ ಸಿದ್ಧತೆಯನ್ನೂ ಆಲೋಚಿಸುವಿರಿ. ಯಾರೋ ಕೊಟ್ಟದ್ದನ್ನು ಸ್ವೀಕರಿಸುವುದಿಲ್ಲ. ‌ಗೆಲುವನ್ನು ಸಾಧಿಸಲು ಛಲವಿರುವುದು.

ಕಟಕ ರಾಶಿ: ಉದ್ವೇಗದಲ್ಲಿ ನೀವು ಏನನ್ನಾದರೂ ಹೇಳಬಹುದು. ಇಂದಿನ ಕೆಲವು ಮಾತುಗಳು ನಿಮಗೆ ಇಷ್ಟವಾಗದೇ ಹೋಗುವುದು. ಕೆಲವು ವಿಚಾರದಲ್ಲಿ ನೀವು ಆತುರರಾಗುವಿರಿ. ವೈದ್ಯರಿಗೆ ಪ್ರಶಂಸೆಯ ದಿನ.‌ ಸರ್ಕಾರಿ ಉದ್ಯೋಗಿಗಳಿಗೆ ವರ್ಗಾವಣೆ ಸಾಧ್ಯತೆ ಇದೆ. ಭವಿಷ್ಯದ ಬಗ್ಗೆ ದೊಡ್ಡ ಕನಸನ್ನು ಕಟ್ಟಿಕೊಳ್ಳುವಿರಿ. ಮಕ್ಕಳು ನಿಮ್ಮ ಕೆಲಸಕ್ಕೆ ತೊಂದರೆ ಕೊಡಬಹುದು. ಬೇಡದ ವಸ್ತುಗಳನ್ನು ಇನ್ನೊಬ್ಬರಿಗೆ ಕೊಡುವಿರಿ. ಮನೆಯ ವಾತಾರಣದಲ್ಲಿ ಇರಲು ಖುಷಿಯಾಗುವುದು.‌ ನಿಮ್ಮ ರಹಸ್ಯವನ್ನು ನೀವು ಗೊತ್ತಿಲ್ಲದೇ ಬೇರೆಯವರ ಜೊತೆ ಹಂಚಿಕೊಳ್ಳುವಿರಿ. ಸಮಯಕ್ಕೆ ಬೆಲೆಯನ್ನು ಕೊಡುವುದು ಉತ್ತಮ.

ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ
ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ
ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
New Year 2026 Live: ನ್ಯೂ ಇಯರ್; ರಾಜ್ಯದ ಉದ್ದಗಲಕ್ಕೂ ಸಂಭ್ರಮ ಜೋರು
New Year 2026 Live: ನ್ಯೂ ಇಯರ್; ರಾಜ್ಯದ ಉದ್ದಗಲಕ್ಕೂ ಸಂಭ್ರಮ ಜೋರು
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?