Daily Horoscope: ಇಂದಿನ ರಾಶಿಭವಿಷ್ಯ, ಸಿರಿವಂತರಾಗಲು ಈ ರಾಶಿಯವರು ಆಯ್ಕೆ ಮಾಡಿಕೊಂಡ ದಾರಿಯು ಸರಿಯಿರದು
ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 16) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ನೋಡುತ್ತಾರೆ. ಇದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜೂನ್ 15) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಕೃತ್ತಿಕಾ, ಯೋಗ: ಸುಕರ್ಮಾ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 01 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 10:56 ರಿಂದ ಮಧ್ಯಾಹ್ನ 12:33ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:47 ರಿಂದ 05:24ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:42 ರಿಂದ 09:19ರ ವರೆಗೆ.
ಮೇಷ: ಯಾರ ಮೇಲೂ ಒತ್ತಡವನ್ನು ಹೇರುವುದು ಬೇಡ. ಅವರವರ ಬದುಕು ಅವರವರಿಗೇ ಇರಲಿದೆ. ನೀವು ಅವರನ್ನು ದಾರಿತಪ್ಪಿಸುವ ಅವಶ್ಯಕತೆ ಇಲ್ಲ. ನಿಮ್ಮ ಮಾರ್ಗದ ಬಗ್ಗೆ ನಿಮಗೆ ಸ್ಪಷ್ಟತೆ ಇರಲಿ. ನಿಮ್ಮ ನೆಮ್ಮದಿಯನ್ನು ಕದಡುವ ಸಂದರ್ಭಗಳು ಬಂದರೆ ನೀವು ಇರಬೇಕಾದ ಸ್ಥಿತಿಯಲ್ಲಿ ಇರಿ. ಆರ್ಥಿಕವಾಗಿ ನೀವು ಇಂದು ಅಲ್ಪ ಬಲರು. ಸಹಜ ಬೆಳವಣಿಗೆಗೆ ನಿಮ್ಮ ಒತ್ತು ಹೆಚ್ಚಿರಲಿ. ಮಿತ್ರರ ಜೊತೆ ಹೆಚ್ಚು ಕಾಲವನ್ನು ಕಳೆಯುವಿರಿ. ನೀವು ಒಂಟಿಯಾಗೇ ಇರಲು ಇಚ್ಛಿಸುವವರು, ಹಾಗೆಯೇ ಇರುವುದು ಒಳ್ಳೆಯದು.
ವೃಷಭ: ಸಿರಿವಂತರಾಗಲು ನೀವು ಆಯ್ಕೆ ಮಾಡಿಕೊಂಡ ದಾರಿಯು ಸರಿಯಿರದು. ನಿಮ್ಮ ಬಗ್ಗೆಯೇ ನೀವು ಅವಲೋಕನ ಮಾಡಿಕೊಂಡು ನಿರ್ಧಾರವನ್ನು ತೆಗೆದುಕೊಳ್ಳಿ. ನೀವು ಇಂದು ಸ್ವಭಾವವನ್ನು ಬದಲಿಸಿಕೊಳ್ಳುವ ಸಾಧ್ಯತೆ ಇದೆ. ಹಠದ ಸ್ವಭಾವವು ನಿಮಗೆ ಶ್ರೇಯಸ್ಸನ್ನು ತಂದುಕೊಡದು. ನಿಮ್ಮವರ ಮಾತಿಗೆ ಒಪ್ಪಿಗೆ ಸೂಚಿಸುವುದು ಅತ್ಯವಶ್ಯಕ. ಬಂದ ಸಮಸ್ಯಗಳಿಗೆ ಒಂದೇ ಉತ್ತರವಿರದು. ಮಾರ್ಗಗಳನ್ನು ಹುಡುಕಲು ನಿಮಗೆ ಆಸಕ್ತಿ ಕಡಿಮೆ ಇರಲಿದೆ. ಮಾತುಗಳು ಬಹಳ ಕಠೋರವಿರಲಿದೆ. ಏನನ್ನಾದರೂ ಸಾಧಿಸಲು ಯೋಚಿಸುವುದು ಒಳ್ಳೆಯದು. ತೊಂದರೆಗಳನ್ನು ಜೀರ್ಣಮಾಡಿಕೊಳ್ಳುವುದು ನಿಮಗೆ ಅಭ್ಯಾಸವಾಗಿದೆ.
ಮಿಥುನ: ಕೇಳಿದ್ದನ್ನು ಸಂಗಾತಿಯಿಂದ ಪಡೆಯಲು ಅಸಾಧ್ಯವಾದೀತು. ವಾಯುವಿಹಾರಕ್ಕೆ ನೀವು ಸಂಗಾತಿಯ ಜೊತೆ ಹೋಗಬಹುದು. ಆರೋಗ್ಯವನ್ನು ನೀವು ಗಮನದಲ್ಲಿಟ್ಟುಕೊಂಡು ಆಹಾರವನ್ನು ಸ್ವೀಕರಿಸಿ. ನಿಮಗೆ ಸಿಗವ ಅಧಿಕಾರಕ್ಕೆ ಯಾರನ್ನೋ ಅಪರಾಧಿಗಳನ್ನಾಗಿ ಮಾಡಬಹುದು. ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೆ ನಂಬಿಕೆ ಇದ್ದರೂ ಅದನ್ನು ಪ್ರದರ್ಶನಕ್ಕೆ ಇಟ್ಟು ಅಪಮಾನಕ್ಕೆ ಒಳಗಾಗುವಿರಿ. ಸುಯೋಗದ ಲಕ್ಷಣವು ಇಂದು ನಿಮಗೆ ಕಾಣಿಸಿಕೊಳ್ಳುವುದು. ಮನೆಯ ಕೆಲಸದ ಅಂದಾಜು ತಪ್ಪಿಹೋಗಬಹುದು. ಅಪರೂಪದ ಬಂಧುಗಳನ್ನು ನೀವು ಭೇಟಿಯಾಗುವಿರಿ. ಆಪ್ತ ಸಮಾಲೋಚನೆ ನಡೆಯುವುದು.
ಕರ್ಕಾಟಕ: ಆತುರದ ವ್ಯವಹಾರದಿಂದ ನಿಮಗೆ ಉತ್ತಮ ಅವಕಾಶಗಳನ್ನು ಕಳೆದುಕೊಳ್ಳಬಹುದು. ನೀವು ಅಂದುಕೊಳ್ಳುವ ವಿಚಾರಗಳು ನಿಮ್ಮದಷ್ಟೇ ಆಗಿರುವುದಿಲ್ಲ. ಶತ್ರುಗಳ ಮೇಲೆ ನಿಮ್ಮ ಗಮನವು ಇರಲಿದೆ. ನಿಮಗೆ ಅನಿವಾರ್ಯ ಕೆಲಸವು ಬಂದಿರುವುದರಿಂದ ನಿಮ್ಮ ಕೆಲಸವನ್ನು ಸ್ನೇಹಿತರಿಗೆ ಮಾಡಲು ಕೊಡುವಿರಿ. ತಿಳಿವಳಿಕೆಯ ಮಟ್ಟವನ್ನು ನೀವೇ ತಿಳಿಯುವಿರಿ. ಸರಿಯಾದ ಸಮಯಕ್ಕೆ ಆಹಾರವನ್ನು ಸೇವಿಸಿ. ವಿವಾಹದ ಮಾತುಕತೆಗಳಿಂದ ನೀವು ಬೇಸರಗೊಳ್ಳಬಹುದು. ಆಹಾರಕ್ಕಾಗಿ ಹಣವನ್ನು ಖರ್ಚುಮಾಡುವಿರಿ. ಎಂದೂ ಸಂಭವಿಸಬಾರದು ಎಂಬ ವಿಚಾರವು ಇಂದು ಸಂಭವಿಸುವುದು.
-ಲೋಹಿತಶರ್ಮಾ ಇಡುವಾಣಿ




