Horoscope: ಈ ರಾಶಿಯವರು ಆತುರದ ಪ್ರಯಾಣವನ್ನು ಮಾಡುವುದು ಬೇಡ

ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ಸೆಪ್ಟೆಂಬರ್ 10) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

Horoscope: ಈ ರಾಶಿಯವರು ಆತುರದ ಪ್ರಯಾಣವನ್ನು ಮಾಡುವುದು ಬೇಡ
ಜ್ಯೋತಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 10, 2023 | 12:15 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಸೆಪ್ಟೆಂಬರ್ 10 ಭಾನುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ನಿಜ ಶ್ರಾವಣ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಪುನರ್ವಸು, ಯೋಗ: ವ್ಯತಿಪಾತ್, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 37 ನಿಮಿಷಕ್ಕೆ, ರಾಹು ಕಾಲ ಸಂಜೆ 05:05 ರಿಂದ 06:37 ರವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:30 ರಿಂದ 02:02ರ ವರೆಗೆ, ಗುಳಿಕ ಕಾಲ ಸಂಜೆ 03:33 ರಿಂದ 05:05ರ ವರೆಗೆ.

ಧನು ರಾಶಿ : ಅಪರಿಚಿತರ ಮಾತನ್ನು ನೀವು ನಂಬುವಿರಿ. ವಿಕ್ರಯದಲ್ಲಿ ಲಾಭವಿರಲಿದೆ. ಪರೀಕ್ಷೆಯ ಸಿದ್ಧತೆಯಲ್ಲಿ ವಿದ್ಯಾರ್ಥಿಗಳಿಗೆ ಗೊಂದಲವಾಗಬಹುದು. ಬಂಧುಗಳ ವಿಯೋಗವೂ ಆಗಬಹುದು. ಪಾಲುದಾರಿಕೆಯಲ್ಲಿ ನಿಮಗೆ ವಂಚನೆಯಾದಂತೆ ಅನ್ನಿಸಬಹುದು. ಸ್ನೇಹಿತರು ಕೇಳಿದರೂ ಸಹಾಯ ಮಾಡದೇ ಇರುವುದು ನಿಮಗೆ ಸಂದೇಹ ಬರುವುದು. ಪ್ರೇಮವು ನೀವಂದುಕೊಂಡಂತೆ ಮುಕ್ತಾಯವಾದುದ್ದು ನಿಮಗೆ ಖುಷಿಕೊಡುವುದು. ಅಂದುಕೊಂಡಂತೆ ಆಗಿದ್ದಕ್ಕೆ ಸಂತೋಷವು ಇರಲಿದೆ. ವಿದೇಶದಲ್ಲಿ ಉದ್ಯೋಗಕ್ಕಾಗಿ ಪ್ರಯತ್ನಿಸುವಿರಿ. ಗೌಪ್ಯವಾಗಿ ವ್ಯವಹಾರವನ್ನು ನಡೆಸುವಿರಿ. ಲೋಭದಿಂದ‌ ಇರುವ ಸಂಪತ್ತನ್ನೂ ಕಳೆದುಕೊಳ್ಳಬೇಕಾಗಬಹುದು.

ಮಕರ ರಾಶಿ : ಸ್ತ್ರೀಯರು ತಾಳ್ಮೆಯನ್ನು ಕಳೆದುಕೊಳ್ಳುವ ಸಂಭವವಿದೆ. ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೇ ಸರಿಯಾಗಿ ಗೊತ್ತಿಲ್ಲದೇ ಹೋಗಬಹುದು. ಮಕ್ಕಳ ಶುಭವಾರ್ತೆಯು ಸಂತಸಕೊಡಬಹುದು. ಬಂಗಾರದ ಮೇಲೆ‌ ಹೂಡಿಕೆ ಮಾಡುವಿರಿ. ತಾಯಿಯ ಕಡೆಯಿಂದ ನಿಮಗೆ ಬೇಕಾದ ಸಹಾಯವನ್ನು ನಿರೀಕ್ಷಿಸಬಹುದು. ಆತುರದ ಪ್ರಯಾಣವನ್ನು ಮಾಡುವುದು ಬೇಡ. ಯಂತ್ರೋಪಕರಣಗಳ ಮಾರಾಟದಿಂದ ನಷ್ಟವಾಗುವ ಸಾಧ್ಯತೆ ಇದೆ. ಬಂದ ಅವಕಾಶಗಳನ್ನು ಕೈ ಬಿಡುವಿರಿ. ನಿಮ್ಮ ಮಾತಿಗೆ ಯಾರೂ ಬೆಲೆ ಕೊಡದೇ ಇರುವುದು ಬೇಸರವಾದೀತು. ಇಂದು ಯಾವ ಕಾರ್ಯಕ್ಕೂ ನಿಮಗೆ ಶ್ರದ್ಧೆಯು ಇಲ್ಲವಾಗುವುದು. ಹನುಮಾನ್ ಚಾಲೀಸ್ ಪಠಣ‌ ಮಾಡಿ.

ಕುಂಭ ರಾಶಿ : ಅಧಿಕಾರಕ್ಕೆ ಸಂಬಂಧಿಸಿದಂತೆ ಮಿತ್ರನಿಂದ ನಿಮಗೆ ವಂಚನೆಯಾಗಿರುವುದು ಗೊತ್ತಾಗುವುದು. ಕಳೆದುದ್ದು ಸಣ್ಣ ವಸ್ತುವೇ ಆದರೂ ಬಹಳ ಬೇಸರಗೊಳ್ಳುವಿರಿ. ಮನೆಯ ಕೆಲಸದಲ್ಲಿ ಸಮಯವನ್ನು ಕಳೆಯುವಿರಿ. ಮಕ್ಕಳಿಗೆ ಉದ್ಯೋಗವನ್ನು ಕೊಡಿಸಲು ಕೆಲವರನ್ನು ಭೇಟಿಯಾಗುವಿರಿ. ಕಣ್ಣಿನ ತೊಂದರೆಯಿಂದ ಕಷ್ಟವಾದೀತು. ನಿರುದ್ಯೋಗದಿಂದ‌ ಮನೆಯಲ್ಲಿಯೇ ಕುಳಿತು ಬೇಸರವಾಗುವುದು. ನಿಮ್ಮ ಬಗ್ಗೆ ಸಕಾರಾತ್ಮಕ ಮಾತುಗಳನ್ನು ಆಡುವರು. ಹಣದ ಹರಿವು ಇಂದು ಸಾಮಾನ್ಯವಾಗಿರುವುದು. ಸಂಗಾತಿಯ ಜೊತೆ ಸಣ್ಣ ವಾಗ್ವಾದವು ನಡೆಯಬಹುದು. ಶಿವಕವಚದಿಂದ‌ ನಿಮ್ಮ‌ ದಿನದ ಕಾರ್ಯಗಳು ನಿರಾತಂಕವಾಗಿ ಆಗುವುದು.

ಮೀನ ರಾಶಿ : ಇಂದಿನ ಕಾರ್ಯಸಾಧನೆಗೆ ಹೆಚ್ಚಿನ ತಿರುಗಾಟವು ಬರಬಹುದು. ‌ಧಾರ್ಮಿಕ ಆಚರಣೆಯಿಂದ ಸಂಕಷ್ಟಗಳು ದೂರಾಗುವ ನಂಬಿಕೆ ಇರಲಿದೆ. ರಾಜಕಾರಣಿಗಳು ಸಮಾರಂಭಗಳಿಗೆ ಭಾಗವಹಿಸುವರು. ಗೌರವವೂ ಸಿಗಲಿದೆ. ಸರ್ಕಾರದ ಕೆಲಸವನ್ನು ಪ್ರಭಾವಿ ವ್ಯಕ್ತಿಗಳ ಮೂಲಕ ಮುನ್ನಡೆಸುವಿರಿ.‌ ಆರೋಗ್ಯವೂ ಕೆಡಬಹುದು. ನಿಮಗೆ ಬರುವ ಆಸ್ತಿಯಲ್ಲಿ ಹೆಚ್ಚಿನ ಲಾಭವನ್ನು ಅಪೇಕ್ಷಿಸುವಿರಿ. ಮಾತಿನಿಂದ ನಿಮಗೆ ಕಷ್ಟವಾದೀತು. ಖರ್ಚಿನ ವಿಚಾರದಲ್ಲಿ ಗೊಂದಲವಾಗಬಹುದು. ಇಂದು ಕೋಪವು ಹೆಚ್ಚಾಗಬಹುದು. ಸಂಗಾತಿಯನ್ನು ಪ್ರೀತಿಯಿಂದ ಗೆಲ್ಲಬೇಕಾದೀತು.

-ಲೋಹಿತಶರ್ಮಾ 8762924271 (what’s app only)