Horoscope Today 15 January 2025: ಇಂದಿನ ದಿನ ಭವಿಷ್ಯದಲ್ಲಿ ಯಾರಿಗೆ ಶುಭ, ಯಾರಿಗೆ ಅಶುಭ? ತಿಳಿದುಕೊಳ್ಳಿ

| Updated By: ರಮೇಶ್ ಬಿ. ಜವಳಗೇರಾ

Updated on: Jan 15, 2025 | 2:30 AM

ಶಾಲಿವಾಹನ ಶಕೆ 1947ರ ಮಾರ್ಗಶಿರ ಮಾಸದ ಕೃಷ್ಣ ಪಕ್ಷದ ಪಂಚಮಿಯ ದಿನದ ನಿತ್ಯ ಪಂಚಾಂಗವನ್ನು ಮತ್ತು ಎಲ್ಲಾ 12 ರಾಶಿಗಳಿಗೆ ದಿನದ ಭವಿಷ್ಯವನ್ನು ಒಳಗೊಂಡಿದೆ. ಪ್ರತಿಯೊಂದು ರಾಶಿಗೂ ಆರ್ಥಿಕ, ವೃತ್ತಿಪರ ಮತ್ತು ವೈಯಕ್ತಿಕ ಜೀವನದ ಮೇಲೆ ದಿನದ ಪ್ರಭಾವವನ್ನು ವಿವರಿಸಲಾಗಿದೆ. ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳನ್ನು ತಿಳಿದುಕೊಳ್ಳಲು ಈ ಲೇಖನ ಸಹಾಯ ಮಾಡುತ್ತದೆ.

Horoscope Today 15 January 2025: ಇಂದಿನ ದಿನ ಭವಿಷ್ಯದಲ್ಲಿ ಯಾರಿಗೆ ಶುಭ, ಯಾರಿಗೆ ಅಶುಭ? ತಿಳಿದುಕೊಳ್ಳಿ
ದಿನ ಭವಿಷ್ಯ
Follow us on

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಕರ ಮಾಸ, ಮಹಾನಕ್ಷತ್ರ: ಉತ್ತರಾಷಾಢ, ಮಾಸ: ಪೌಷ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಆಶ್ಲೇಷಾ, ಯೋಗ: ಪ್ರೀತಿ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 07 ಗಂಟೆ 02 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 21 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:42 ರಿಂದ 14:07ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 08:27 ರಿಂದ ಬೆಳಿಗ್ಗೆ 09:52 ರವರೆಗೆ, ಗುಳಿಕ ಬೆಳಿಗ್ಗೆ 11:17 ರಿಂದ ಮಧ್ಯಹ್ನಾ 12:42 ರವರೆಗೆ.

ಮೇಷ ರಾಶಿ :ಇಂದು ಮನಸ್ಸಿನ ಆಯಾಸವು ಕಡುಮೆಯಾಗದೇ ಕಷ್ಟವಾಗುವುದು. ನಿಮ್ಮನ್ನು ಯಾರೊಂದಿಗೆ ಹೋಲಿಸಿಕೊಳ್ಳುವುದರ ಮೇಲೆ ನಿಮ್ಮ ಸಂತೋಷವು ಇರುವುದು‌. ಉನ್ನತ ಅಭ್ಯಾಸದ ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಮಾರ್ಗದರ್ಶನ ಅಭಾವವು ಹೆಚ್ಚು ತೋರುವುದು. ಆಮದು ವ್ಯವಹಾರದಲ್ಲಿ ನಿಮಗೆ ತೊಡಕಿರುವುದು. ಮನೆಯ ಎಷ್ಟೋ ವಿಚಾರಗಳನ್ನು ತಿಳಿಯುಬ ಇಚ್ಛೆ ಇರದು. ಆಂತರಿಕ ಕಲಹವನ್ನು ಜಗಜ್ಜಾಹಿರ ಮಾಡಿಕೊಳ್ಳುವಿರಿ. ನಿಮ್ಮ ಅಗಾಧ ಜ್ಞಾನವು ಎಲ್ಲಿಯಾದರೂ ಸದುಪಯೋಗಕ್ಕೆ ಬರಲಿದೆ. ಇಂದು ಬಂಧುಗಳ ಕಾರಣಕ್ಕಾಗಿ ಧನವ್ಯಯದ ಸಾಧ್ಯತೆ ಇದೆ. ನಿಮ್ಮ ಆಸ್ತಿಯ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಿ. ಹಳೆಯ ನೋವುಗಳು ಕಾಣಿಸಿಕೊಳ್ಳಬಹುದು. ಉದ್ಯೋಗದಲ್ಲಿ ಆಯ್ಕೆ ಸಮಸ್ಯೆಯು ಬರಬಹುದು. ಶತ್ರುಗಳ ಬಲೆಗೆ ಬಲಿಯಾಗುವಿರಿ. ನಿಮಗೆ ಆಗದೇ ಇರುವುದನ್ನು ಯಾವ ಕಾರಣಕ್ಕೂ ಒಪ್ಪಿಕೊಳ್ಳಲಾರಿರಿ.

ವೃಷಭ ರಾಶಿ :ಇಂದಿನ ಅನಿರೀಕ್ಷಿತ ಸುದ್ದಿಯಿಂದ ಮನಸ್ಸು ಕದಡಲಿದೆ. ಒಂದರಲ್ಲಿ ನೀವು ನಿಶ್ಚಯಾತ್ಮಕ ಬುದ್ಧಿ ಇಟ್ಟರೆ ಅದನ್ನು ಬದಲಿಸುವುದು ಸುಲಭವಲ್ಲ. ಪ್ರಯಾಣದಲ್ಲಿ ನಿನಗೆ ಯಾರಾದರೂ ಶತ್ರುಗಳಾಗಬಹುದು. ಬರುವ ಹಣವು ಕೈಸೇರಿದರೂ ಖರ್ಚಿನ ದಾರಿ ಮುಕ್ತವಾಗಿರುವುದು ಮಕ್ಕಳಿಗೆ ಸಿಗುವ ಪುರಸ್ಕಾರದಿಂದ ನಿಮಗೆ ಸಂತೋಷವಾಗುವುದು. ಅಪರೂಪದ ಮಿತ್ರರು ನಿಮ್ಮನ್ನು ಭೇಟಿ ಮಾಡುವರು. ಮನೆಗೆ ಅತಿಥಿಗಳ ಆಗಮನವಾಗಬಹುದು. ನಿಮ್ಮ ಮಕ್ಕಳನ್ನು ಓದಿಸಲು ಹೊರಗೆ ಕಳುಹಿಸುವ ನಿರ್ಧಾರವಿರಲಿದೆ. ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳಲು ನೀವು ಸಫಲರಾಗುವುದಿಲ್ಲ. ಹೂಡಿಕೆಯಿಂದ ಹಿಂಬರುವ ಸಾಧ್ಯತೆ ಇದೆ. ಏಕಪಕ್ಷೀಯವಾದ ನಿರ್ಧಾರದಿಂದ ನಿಮ್ಮವರಿಗೆ ಬೇಸರವಾದೀತು. ಅಹಂಕಾರದಿಂದ ಸಾಧಿಸಲು ಶಕ್ಯವಾಗದ್ದನ್ನು ಪ್ರೀತಿಯಿಂದ ಸಾಧಿಸುವಿರಿ. ನಿಮ್ಮನ್ನು ವಿರೋಧಿಸುವವರ ನಡುವೆ ಬೆಳೆಯಲು ಹಂಬಲಿಸುವಿರಿ. ಇಂದು ವಿಶ್ರಾಂತಿಯು ಹೆಚ್ಚು ಬೇಕೆನಿಸಬಹುದು.

ಮಿಥುನ ರಾಶಿ :ಯಾರೋ ಮಾಡಿದ ತಪ್ಪಿನಿಂದಾಗಿಯೂ ಭಯವುಂಟಾಗುವುದು. ಸುಮ್ಮನಿದ್ದಾಗ ನಕಾರಾತ್ಮಕ ವಿಚಾರಗಳೇ ಮತ್ತೆ ಮತ್ತೆ ನೆನಪುಮಾಡಿಕೊಳ್ಳುವಿರಿ. ನಮ್ರತೆಯು ನಿಮ್ಮನ್ನು ಎತ್ತರಕ್ಕೆ ಏರಿಸುವುದು. ಹೇಳಿಕೊಳ್ಳಲಾಗದ ಸಂಕಟವನ್ನು ಮನಸ್ಸಿನಲ್ಲಿಯೇ ನುಂಗಬೇಕಾಗುವುದು. ಪ್ರಭಾವಿ ಗಣ್ಯರ ಜೊತೆ ಕೆಲವು ಸಮಯವನ್ನು ಕಳೆಯುವಿರಿ. ವ್ಯವಹಾರದಲ್ಲಿ ಚುರುಕು ಸಾಲದು. ಉದ್ಯೋಗದಲ್ಲಿ ದಿನದಿಂದ ದಿನಕ್ಕೆ ಉಂಟಾದ ಒತ್ತಡದಿಂದ ಉದ್ಯೋಗವನ್ನು ಬದಲಿಸಲು ಯೋಚನೆ ಬರುವುದು. ಯಂತ್ರೋಪಕರಣದ ಮಾರಾಟಗಾರರಿಗೆ ಅಧಿಕ ಲಾಭವಾಗುವುದು. ಪ್ರೀತಿಯನ್ನು ಕುಟುಂಬದ ಜೊತೆ ಹಂಚಿಕೊಳ್ಳುವಿರಿ. ಮನೆತನದ ಕಾರಣದಿಂದ ನಿಮಗೆ ಗೌರವವು ಪ್ರಾಪ್ತವಾಗಲಿದೆ. ಮೇಲಧಿಕಾರಿಗಳನ್ನು ಮೆಚ್ಚಿಸುವಿರಿ. ನೀವು ಇಂದು ನೋಡಲು ಪ್ರಶಾಂತವಾಗಿ ಕಂಡರೂ ನಿಮ್ಮಳಗೆ ಅಶಾಂತಿಯ ತರಂಗಗಳು ಒಂದೊಂದೊಗಿಯೇ ಮೇಲೆ ಬರುವುದು.

ಕರ್ಕಾಟಕ ರಾಶಿ :ಎಲ್ಲಿಯೂ ಸಿಕ್ಕಿಕೊಳ್ಳದಂತೆ ನಯವಾಗಿ ಎಲ್ಲವನ್ನೂ ಮಾಡಿಕೊಳ್ಳುವಿರಿ. ನಿಮಗೆ ಮಾಡುವ ಅವಮಾನವು ಎಂದಿಗಿಂತಲೂ ನಿಮ್ಮನ್ನು ಕೆರಳಿಸಬಹುದು. ಧಾರ್ಮಿಕ ವಿಚಾರವಾಗಿ ನೀವು ದೂರ ಪ್ರಯಾಣವನ್ನು ಮಾಡುವಿರಿ. ಏಕಾಗ್ರತೆಯಿಂದ ನಿಮ್ಮ ಮತ್ತೆಲ್ಲ ಕಾರ್ಯಗಳೂ ನಿಧಾನವಾಗಬಹುದು. ಪರಿಶ್ರಮದಿಂದ ಧನಾರ್ಜನೆ ಮಾಡಿದ್ದು ನಿಮಗೆ ಅಧಿಕ ಸಂತೋಷವಾಗುವುದು. ಕೃಷಿಯಲ್ಲಿ ದೂರದೃಷ್ಟಿಯ ಚಿಂತನೆಯನ್ನು ಮಾಡುವಿರಿ. ನಿಮ್ಮ ಮಾತುಗಳೇ ನಿಮಗೆ ಮುಳುವಾಗುವ ಸಾಧ್ಯತೆ ಇದೆ. ಉದ್ಯೋಗವಿಲ್ಲದೇ ಬೇಸರಗೊಂಡ ನಿಮಗೆ ಬೇರೆಕಡೆಯಲ್ಲಿ ಕೆಲಸವು ಸಿಗುವುದು. ಇಂದು ಸಂದರ್ಭವನ್ನು ನೋಡಿಕೊಂಡು ಮಾತನಾಡಿ. ನಿಮ್ಮ ಕೆಲಸದ ಸಮಯವು ಬದಲಾಗಲಿದ್ದು ಹೊಂದಿಕೊಳ್ಳುವುದು ಕಷ್ಟವಾದೀತು. ರಾಜಕೀಯ ಜೀವನವು ನಿಮ್ಮನ್ನು ಅತಂತ್ರವಾಗಿಸಬಹುದು. ನಿಮ್ಮನ್ನು ತಿಳಿದವರೇ ನಿಮ್ಮ ಬಗ್ಗೆ ಸಲ್ಲದ್ದನ್ನು ಮಾತನಾಡಬಹುದು. ಕೆಲವನ್ನು ನೀವು ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಸೇಡನ್ನು ಮುಂದುವರಿಸದೇ ಯಥಾಸ್ಥಿತಿಯಲ್ಲಿ ಇರಿ.

ಸಿಂಹ ರಾಶಿ :ಮೂಕನಂತೆ ಇದ್ದರೆ ಎಲ್ಲರೂ ತಮಗೆ ಬೇಕಾದುದನ್ನು ಮಾಡಿಸಿಕೊಳ್ಳುವರು. ಬಂಧನದಿಂದ ಮುಕ್ತರಾದಂತಹ ಅನುಭವವಾಗುವುದು. ಯಾರ ಜೀವನವನ್ನೂ ಸಣ್ಣದಾಗಿ ಕಾಣುವುದು ಬೇಡ. ಆಸ್ತಿಯಲ್ಲಿ ಸಮ ಪಾಲು ಸಿಗದೇ ವಿವಾದ ಸೃಷ್ಟಿಯಾಗಬಹುದು. ಪಾಲುದಾರಿಕೆಯಲ್ಲಿ ನಿಮಗೆ ಸಣ್ಣ ಸಮಸ್ಯೆಗಳು ಹುಟ್ಟಿಕೊಳ್ಳಬಹುದು. ಇನ್ನೊಬ್ಬರ ಒತ್ತಾಯದ ಕಾರಣಕ್ಕೆ ನೀವು ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗುವಿರಿ. ಮಕ್ಕಳಿಗಾಗಿ ವಾಸಸ್ಥಳ ಬದಲಾಗಬಹುದು. ವಿವಾಹದ ಬಗ್ಗೆ ಬಂಧುಗಳ ಜೊತೆ ಗಂಭೀರವಾಗಿ ಚರ್ಚಿಸುವಿರಿ. ಇಂದು ಮನಸ್ಸಿಗೆ ಹಿಡಿಸಿದವರ ಕೆಲಸವನ್ನು ಮಾತ್ರ ಬೇಗ ಮಾಡಿ ಮುಗಿಸುವಿರಿ. ಸಂಗಾತಿಯ ಕಡೆಯಿಂದ ನಿಮಗೆ ಶುಭಸಮಾಚಾರವು ಗೊತ್ತಾಗುವುದು. ಇಂದಿನ ನಿಮ್ಮ ಪ್ರಯಾಣವು ನಿಮಗೆ ಹಿತಕರವಾದ ಅನುಭವವನ್ನು ನೀಡಬಹುದು. ತಪ್ಪು ಮಾಡಿದರೂ ಸಿಕ್ಕಿಕೊಳ್ಳದೇ ಇರುವಿರಿ. ಪರರಿಂದ ಸಿಗುವ ಹಣವನ್ನು ಸಮರ್ಪಕವಾಗಿ ಬಳಸುವಿರಿ. ಮಾತಿನಲ್ಲಿ ಮಾರ್ದವ ಇರಲಿ.

ಕನ್ಯಾ ರಾಶಿ :ನಿಮ್ಮ ವೈಯಕ್ತಿಕ ಕಾರಣಗಳು ಇತರರಿಗೆ ಅನವಶ್ಯಕ. ಸಹಾನುಭೂತಿ ಪಡೆಯಲು ಏನಾದರೂ ಹೇಳುವಿರಿ. ನಿಮ್ಮ ಗೌಪ್ಯತೆಯ ಉಪಕಾರದ ಗುಣವು ಅನ್ಯರಿಗೂ ತಿಳಿಯುವುದು. ನಿಮ್ಮ ಇಂದಿನ ಮೌನವೂ ಇನ್ನೊಬ್ಬರಿಗೆ ಚಿಂತೆಯಾಗುವುದು. ನಿಮಗೆ ಸಂಬಂಧಿಸದ ವಿಚಾರಗಳಲ್ಲಿ ಪ್ರವೇಶವನ್ನು ಪಡೆಯುವುದು ಬೇಡ. ಸರ್ಕಾರದ ಕಾರ್ಯಗಳನ್ನು ಬೇಗ ಮೂರನೇ ವ್ಯಕ್ತಿಗಳಿಂದ ಮುಗಿಸಿಕೊಳ್ಳಬಲ್ಲಿರಿ. ವ್ಯವಹಾರದ ದಾಖಲೆಗಳು ಸರಿಯಾಗಿ ಇಟ್ಟುಕೊಳ್ಳಬೇಕು. ವಾಹನಕ್ಕಾಗಿ ಸಾಲ ಮಾಡಬೇಕಾಗುವುದು. ದಾಂಪತ್ಯದಲ್ಲಿ ಪರಸ್ಪರರ ಹೊಂದಾಣಿಕೆಯು ಕಾಣಿಸುವುದು. ಮಕ್ಕಳನ್ನು ಪಡೆದುಕೊಳ್ಳುವ ಚಿಂತೆಯು ಕಾಡುವುದು. ಪ್ರೇಮದಲ್ಲಿ ಸಿಕ್ಕಿಕೊಂಡು ಕಷ್ಟಪಡುವಿರಿ. ಸಂಗಾತಿಯ ತೀರ್ಮಾನವನ್ನು ಒಪ್ಪುವುದು ಕಷ್ಟವಾದೀತು. ಮಕ್ಕಳ ವಿಚಾರವಾಗಿ ನಿಮಗೆ ದೂರಬರಬಹುದು. ಮನಸ್ಸು ಬಿಚ್ಚಿ‌ ಮಾತನಾಡಲು ನಿಮಗೆ ಆಗದು. ಎಲ್ಲವನ್ನೂ ಒಳಗೇ ಅಡಗಿಸಿಕೊಳ್ಳುವಿರಿ. ವೈಯಕ್ತಿಕ ವಿಚಾರದಲ್ಲಿ ಯಾರ ಮಧ್ಯಪ್ರವೇಶವನ್ನೂ ಸಹಿಸಲಾರಿರಿ.

ತುಲಾ ರಾಶಿ :ಕಾರ್ಯದ ದಕ್ಷತೆಯಿಂದ ನಿಮ್ಮ ಬೆನ್ನು ತಟ್ಟಿಕೊಳ್ಳುವಿರಿ. ಆತ್ಮವಿಶ್ವಾಸ ಹೆಚ್ಚಾಗುವುದರ ಜೊತೆ ದ್ವೇಷಿಸುವವರೂ ಹೆಚ್ಚಾಗುವರು. ಭೂಮಿಯ ಖರೀದಯ ಬಗ್ಗೆ ಹೆಚ್ಚು ಆಸಕ್ತಿ ತೋರಿಸಿದರೂ ಅದನ್ನು ನಿಮ್ಮದಾಗಿಸಿಕೊಳ್ಳುವುದು ಇಂದು ಕಷ್ಟ. ಸಮಯ ಬರುವ ತನಕ ಕಾಯಬೇಕು. ಉದ್ಯೋಗದಲ್ಲಿ ಮಕ್ಕಳಿಗೆ ಪ್ರವೇಶವನ್ನು ಕೊಡುವಿರಿ. ಅಧಿಕ ಸಾಲವು ನಿಮ್ಮ‌ ಮಾನಸಿಕ‌ಸ್ಥಿತಿಯನ್ನೇ ಬದಲಿಸೀತು. ಸಹೋದರರು ಮರೆತ ವಿಚಾರವನ್ನು ಮತ್ತೆ ನೆನಪಿಸಿಕೊಳ್ಳುವರು. ಬಂಧುಗಳು ನಿಮ್ಮನ್ನು ಬಹಳವಾಗಿ‌ ದೂರುವರು. ಮನೆಯ ಕಾರ್ಯಗಳು ಇಂದು ಅಧಿಕವಾಗಿ ಇರಬಹುದು. ನೂತನ ವಾಹನದ ಖರೀದಿಗೆ ಪರ ಊರಿಗೆ ಹೋಗುವಿರಿ. ಅನಾಯಾಸದಿಂದ ಸಂಪಾದನೆಯ ಮಾರ್ಗವನ್ನು ನೀವು ಕಂಡುಕೊಳ್ಳುವಿರಿ. ಕೊಟ್ಟ ಮಾತಿಗೆ ಸರಿಯಾಗಿ ನಡೆದುಕೊಳ್ಳುವ ಪ್ರಯತ್ನ ಮಾಡುವಿರಿ. ನಿಮ್ಮ ಚಿಂತನೆಯನ್ನು ವಿಸ್ತರಿಸಿಕೊಳ್ಳುವುದು ಉತ್ತಮ. ದುರ್ಬಲರಿಗೆ ಮಾನಸಿಕ ಧೈರ್ಯವನ್ನು ತುಂಬುವಿರಿ. ನಿಮ್ಮ ಪೂರ್ಣ ಸಾಮರ್ಥ್ಯವನ್ನು ಇಂದು ತೋರಿಸಲಾರಿರಿ.

ವೃಶ್ಚಿಕ ರಾಶಿ :ನೀವು ಎಷ್ಟೇ ಪ್ರಾಮಾಣಿಕರಾದರೂ ಅದನ್ನು ಒಪ್ಪುವವರೂ ಒಬ್ಬರು ಬೇಕು. ಮೇಲಧಿಕಾರಿಗಳ ಜೊತೆ ಸಿಟ್ಟಾಗುವ ಸಂದರ್ಭವಿದ್ದರೂ ತಾಳ್ಮೆಯನ್ನು ಕಂಡುಕೊಳ್ಳಿ. ಯಾರನ್ನೂ ನೀವು ಹೀಗೆ ಎಂದು ಫಲಕವನ್ನು ಅಂಟಿಸಲು ಸಾಧ್ಯವಾಗದು. ಅಪರಿಚಿತರ ಜೊತೆ ಮಾತನಾಡಲು ನೀವು ಹಿಂಜರಿಯಬಹುದು. ಸ್ಮರಣಶಕ್ತಿಯ ದೋಷವು ಸ್ವಲ್ಪವೇ ಬರಲಿದೆ. ಅವಕಾಶಗಳು ತಪ್ಪಿಹೋಗಿ, ನಿಮ್ಮನ್ನೇ ನೀವು ಬೂದುಕೊಳ್ಳುವಿರಿ. ನಿಮಗೆ ವಹಿಸಿದ ಕೆಲಸವನ್ನು ಅದ್ಭುತವಾಗಿ ಮಾಡಲು ಪ್ರಯತ್ನಿಸುವಿರಿ. ನಿಮ್ಮ ಕಾಯುವಿಕೆಗೆ ಫಲ ಸಿಕ್ಕಂತಾಗುವುದು. ಮಾತಿನ ಮಾಧುರ್ಯವು ಬರುವ ಸಂಕಟವನ್ನು ಕಡಿತ ಮಾಡುವುದು. ವೈಯಕ್ತಿಕ ಕಾರ್ಯದ ಕಾರಣ ಪ್ರಯಾಣ ಮಾಡುವಿರಿ. ಗೊತ್ತಿಲ್ಲದ ಕಾರ್ಯವನ್ನು ಮಾಡಲು ಉತ್ಸಾಹ ಇರಲಿದೆ. ಸಹೋದ್ಯೋಗಿಗಳು ನಿಮ್ಮೆದುರು ಅಹಂಕಾರವನ್ನು ತೋರಿಸುವರು. ನಿಮ್ಮ ನಿಲುವಲ್ಲಿ ನೀವಿರುವಿರಿ. ಕೆಲಸವು ಸರಳವಾದರೂ ಅದನ್ನು ಆರಂಭಿಸಲು ಸರಿಯಾದ ಮಾರ್ಗವು ಸಿಗದು. ಇನ್ನೊಬ್ಬರ ಒತ್ತಾಯದ ಕಾರಣಕ್ಕೆ ನೀವು ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗುವಿರಿ.

ಧನು ರಾಶಿ :ಉದ್ಯೋಗದಲ್ಲಿ ನಿಜವು ಮಾಡುವ ಬದಲಾವಣೆಗೆ ಎಲ್ಲರ ಅನುಮತಿ ಪಡೆಯುವುದು ಉತ್ತಮ. ನಿಮ್ಮ ಕಾರ್ಯವನ್ನು ಮಾಡಲು ಒಂದೊಂದೆ ಕಾರಣವನ್ನು ಹೇಳುವಿರಿ. ಹೊಂದಾಣಿಕೆಯನ್ನು ಮಾಡಿಕೊಳ್ಳುವುದು ನಿಮ್ಮ ಅಂತಸ್ತು ಕಡಿಮೆ ಎಂಬ ಭಾವನೆಯು ನಿಮ್ಮ ತಲೆಯಲ್ಲಿ ಇರುವುರು. ಗುಣಾತ್ಮಕ ಚಿಂತನೆಯನ್ನು ಮಾಡಿ. ಏನೇ ಬಂದರೂ ಎಲ್ಲವೂ ವಿಧಿ ನಿಯಮ ಎಂಬ ನಿರ್ಧಾರಕ್ಕೆ‌ ಬರುವಿರಿ. ನಿಮ್ಮ ಬುದ್ಧಿಗಿಂತ ಕೌಶಲಕ್ಕೆ ಹೆಚ್ಚು ಒತ್ತು. ವಿರುದ್ಧಾಹರ ಸೇವಯು ನಿಮ್ಮ ಆರೋಗ್ಯವನ್ನು ಕೆಡಲಿದೆ. ಇನ್ನೊಬ್ಬರ ವಸ್ತುವಿನ ಬಗ್ಗೆ ಬರುವ ಮೋಹವು ನಿಮ್ಮನ್ನು ಕೆಡಿಸಬಹುದು. ಆತ್ಮಪ್ರಶಂಸೆಯು ಕಿರಿಕಿರಿ ತರಿಸುವುದು. ಸಾಧಿಸಬೇಕು ಎಂಬ ಮಹದಾಸೆ ಇದ್ದರೂ ಅದು ಕ್ಷಣಿಕ. ಕಲಾವಿದರು ಪ್ರಶಂಸೆಯಿಂದ ಬೀಗುವುದು ಸಹಜ, ವಾಸ್ತವ ಗೊತ್ತಿರಲಿ. ಅಕಾರಣವಾಗಿ ಕೋಪ ಮಾಡಬೇಕಾಗುವುದು. ಆಕಸ್ಮಿಕವಾಗಿ ಕೆಲವರನ್ನು ಕಳೆದುಕೊಳ್ಳುವಿರಿ. ಅಪರಿಚಿತರ ಮಾತಿನಿಂದ ನಿಮ್ಮ ವ್ಯಕ್ತಿತ್ವವು ಬದಲಾಗುವುದು.

ಮಕರ ರಾಶಿ :ಇಂದು ಅವಸರವಾಗಿ ಮಾಡುವ ಕೆಲಸವಿದ್ದರೆ ಮುಂದೂಡುವುದೇ ಉಚಿತ. ಸಾಮಾಜಿಕ ವ್ಯವಸ್ಥೆಯಲ್ಲಿ ಪ್ರವೇಶ ಪಡೆಯುವಿರಿ. ಸಮಯವು ಸದುಪಯೋಗವಾಗಬೇಕಾದರೆ ಅದರ ಬಗ್ಗೆ ಪೂರ್ಣ ಗಮನಕೊಟ್ಟು ಸರಿಮಾಡಿಕೊಳ್ಳಿ. ನೂತನದ ವಾಹನದಿಂದ ನಿಮಗೆ ಸಂತೋಷವಾಗಲಿದೆ‌. ಇರುವ ಸಂಪನ್ಮೂಲವನ್ನು ಯೋಗ್ಯರೀತಿಯಲ್ಲಿ ಬಳಸಿ. ದಾಂಪತ್ಯದಲ್ಲಿ ಬರುವ ತಿರುವುಗಳನ್ನು ನೀವೇ ಕುಳಿತು ಸರಿಮಾಡಿಕೊಳ್ಳುವುದು ಉತ್ತಮ. ಸೇವಾ ಮನೋಭಾವವು ನಿಮ್ಮಲ್ಲಿ ಜಾಗರೂಕವಾಗಬಹುದು. ಜನರ ಜೊತೆ ಬೆರೆಯಲು ಹಿಂದೇಟು ಹಾಕುವಿರಿ. ನಿಮ್ಮ ವ್ಯಕ್ತಿತ್ವದಿಂದ ಕೆಲವರಿಗೆ ಹೆಮ್ಮೆ. ಉದ್ಯೋಗ ವೃದ್ಧಿಯ ಕುರಿತು ಅಧಿಕಾರಿಗಳ ಜೊತೆ ಚರ್ಚಿಸುವಿರಿ. ಸಂಗಾತಿಗೆ ನಿಮ್ಮ ಪ್ರೀತಿಯು ಕಡಿಮೆಯಾಗಿರುವುದು. ವಿಲಾಸಿ ಜೀವನದ ಕನಸಿನಲ್ಲಿ ಇರುವಿರಿ. ಪ್ರೀತಿಯನ್ನು ಕುಟುಂಬದ ಜೊತೆ ಹಂಚಿಕೊಳ್ಳುವಿರಿ.

ಕುಂಭ ರಾಶಿ :ಇಂದು ಆಪ್ತರ ಬಗ್ಗೆ ಹೇಳಲಾರದ ದುಮ್ಮಾನಗಳು ನಿಮ್ಮೊಳಗೆ ತುಂಬಿಕೊಳ್ಳಬಹುದು. ಪ್ರಯಾಣದಿಂದ ನಿಮಗೆ ಪ್ರಯಾಸವಾಗುವುದು. ದುಃಖವನ್ನು ಒಬ್ಬರೇ ಅನುಭವಿಸುವಿರಿ. ಧನಾರ್ಜನೆಗೆ ಹೆಚ್ಚು ಅವಕಾಶಗಳು ಲಭ್ಯವಾಗಿದ್ದು ಉತ್ತಮ ಆದಾಯದ್ದನ್ನು ಆಯ್ಕೆ ಮಾಡಿಕೊಳ್ಳುವಿರಿ. ನಿರೀಕ್ಷೆಯ ಮಟ್ಟಕ್ಕೆ ಹೋಗುವುದು ಕಷ್ಟವಾದರೂ ಸ್ವಲ್ಪ ನೆಮ್ಮದಿಯು ಇರಲಿದೆ. ಸ್ತ್ರೀಯರಿಗೆ ಅಭದ್ರತೆಯು ಕಾಡಬಹುದು. ಕೃಷಿಯಲ್ಲಿ ಚಂಚಲವಾದ ಮನಸ್ಸನ್ನು ಇಟ್ಟುಕೊಳ್ಳುವಿರಿ. ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ನೀವು ಇರುವಿರಿ. ಮಕ್ಕಳ ವಿಚಾರದಲ್ಲಿ ನೀವು ಮೃದುವಾಗುವಿರಿ. ಬಂಧುಗಳು ಅನಿರೀಕ್ಷಿತ ಭೇಟಿಯಾಗಿ ಸಂತೋಷ ಕೊಡುವರು. ಯಾರ ಮಾತನ್ನೂ ಕೇಳದ ಚಿತ್ತಚಾಂಚಲ್ಯವು ಇರಲಿದೆ. ಸಂಗಾತಿಯ ಜೊತೆ ಮನಸ್ತಾಪ ಬರುವ ಕಾರಣ, ನಿಮ್ಮ ಕೆಲಸ ಕಾರ್ಯಗಳಲ್ಲಿ ಒಂದಿಲ್ಲೊಂದು ಕಿರಿಕಿರಿ ಇರುವುದು. ಭಾವನಾತ್ಮಕವಾಗಿ ನಿಮಗೆ ಸೋಲಾಗುವುದು. ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳಲು ನೀವು ಸಫಲರಾಗುವುದಿಲ್ಲ.

ಮೀನ ರಾಶಿ :ಇಂದು ವಾಕ್ಚಾತುರ್ಯದಿಂದ ನೀವು ಗೆಲ್ಲಬಹುದು. ನಿಮ್ಮ ಮನವನ್ನು ಒಲಿಸುವುದು ಕಷ್ಟ. ಯಾವುದೂ ನಿಮಗೆ ಸಮಾಧಾನ ಕೊಡದು. ಇಂದಿನ ಆಯಾಸದ ಕೆಲಸವು ನಿಮ್ಮನ್ನು‌ ನಿಷ್ಕ್ರಿಯ ಗೊಳಿಸಬಹುದು. ಅಸಹಜ ವರ್ತನೆಯು ನಿಮ್ಮನ್ನು ಮಿತ್ರರಿಂದ ದೂರವಾಗಿಸುವುದು. ನಿಮ್ಮ ನಕಾರಾತ್ಮಕ ಜನಪ್ರಿಯತೆಯು ನಿಮಗೆ ಬೇಸರ ಕೊಡುವುದು. ಮಿತ್ರರ ಸಹಕಾರವನ್ನು ಬಹಳ ದಿನಗಳ ಅನಂತರ ಕೇಳುವಿರಿ. ಆದರೆ ಅವರಿಂದ ಅದು ಸಿಗದು. ನಿಮ್ಮ ಗುರಿಯ ಬಗ್ಗೆ ಸ್ಪಷ್ಟವಾದ ನಿರ್ಧಾರವಿರಲಿ. ಸ್ನೇಹಿತರಿಂದ ಉಡುಗೊರೆ ಸಿಗಬಹುದು. ನಿಮ್ಮನ್ನು ವಿರೋಧಿಸುವವರ ನಡುವೆ ಬೆಳೆಯಲು ಹಂಬಲಿಸುವಿರಿ. ಯಾರ ಮಾತನ್ನೂ ಕೇಳದ ಚಿತ್ತಚಾಂಚಲ್ಯವು ಇರಲಿದೆ. ಶರೀರ ಪೀಡೆಯು ಕಾಣಿಸಿಕೊಂಡೀತು. ಆಂತರಿಕ ಕಲಹವು ಎಲ್ಲರಿಗೂ ಗೊತ್ತಾಗುವಂತೆ ಮಾಡಿಕೊಳ್ಳುವಿರಿ. ಮಾಡಿಕೊಳ್ಳುವಿರಿ. ನಿಮ್ಮ ಹಣವನ್ನು ಪಡೆಯಲು ಓಡಾಟ ಮಾಡಬೇಕಾಗುವುದು.

-ಲೋಹಿತ ಹೆಬ್ಬಾರ್ – 8762924271 (what’s app only)