AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಂಬಾ ದಿನಗಳಿಂದ ಕಾಡುವ ಸಮಸ್ಯೆಗೆ ಇಂದು ಪರಿಹಾರ ದೊರಕಲಿದೆ

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಗ್ರೀಷ್ಮ ಋತುವಿನ ಜ್ಯೇಷ್ಠ ಮಾಸ ಕೃಷ್ಣ ಪಕ್ಷದ ಚತುರ್ದಶೀ ತಿಥಿ ಮಂಗಳವಾರ ಇತರರಿಂದ ಗೊಂದಲ, ದಾನದಿಂದ ತೃಪ್ತಿ, ವಿದೇಶದಲ್ಲಿ ಆತಂಕ, ಉಚಿತದಿಂದ ಧನನಷ್ಟ ಇವೆಲ್ಲ ಈ ದಿನದ ವಿಶೇಷ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲಾಫಲ ಎನ್ನುವುದನ್ನು ತಿಳಿದುಕೊಳ್ಳಿ.

ತುಂಬಾ ದಿನಗಳಿಂದ ಕಾಡುವ ಸಮಸ್ಯೆಗೆ ಇಂದು ಪರಿಹಾರ ದೊರಕಲಿದೆ
ದಿನ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ವಿವೇಕ ಬಿರಾದಾರ|

Updated on: Jun 24, 2025 | 1:56 AM

Share

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ಗ್ರೀಷ್ಮ, ಸೌರ ಮಾಸ: ಮಿಥುನ, ಮಹಾನಕ್ಷತ್ರ: ಆರ್ದ್ರಾ, ಮಾಸ: ಜ್ಯೇಷ್ಠ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ರೋಹಿಣೀ, ಯೋಗ: ಆಯುಷ್ಮಾನ್, ಕರಣ : ವಣಿಜ, ಸೂರ್ಯೋದಯ – 06 : 06 am, ಸೂರ್ಯಾಸ್ತ – 07:03 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:49 – 17:26, ಯಮಘಂಡ ಕಾಲ 09:21 – 10:58, ಗುಳಿಕ ಕಾಲ 12:35 – 14:12

ಮೇಷ ರಾಶಿ: ನಿಮ್ಮ ವ್ಯವಹಾರದ ಗುಟ್ಟನ್ನು ಹಣಕಾಸನ್ನು ನೋಡಿಕೊಳ್ಳುವನು. ನಿಮ್ಮಿಂದ ಕುಟುಂಬಕ್ಕೆ ಉತ್ತಮವಾದ ಹೆಸರು ಬರಲಿದೆ. ನೀವೇ ಆಯ್ಕೆ‌ ಮಾಡಿಕೊಂಡ ಉದ್ಯೋಗದ ಸ್ಥಳದಿಂದ ನಿಮಗೆ ತೊಂದರೆಯಾಗಿ ಕೆಲಸವನ್ನು ಬಿಡಲಿದಗದೀರಿ. ಸಂಬಂಧಗಳಲ್ಲಿ ಭಾವನಾತ್ಮಕತೆ ಹೆಚ್ಚಿರುತ್ತದೆ. ಬಹಳ‌ದಿನಗಳ ಅನಂತೆ ನಿಶ್ಚಿಂತೆಯಿಂದ ನಿದ್ರಿಸುವಿರಿ. ಮನೆಯವರ ಅಭಿಪ್ರಾಯಕ್ಕೆ ಮೌಲ್ಯ ನೀಡಿ. ದಿನದ ಕೊನೆಯಲ್ಲಿ ಅಚ್ಚರಿಯ ಲಾಭದ ಸೂಚನೆ ಇರುವುದು. ವಹಿಸಿಕೊಟ್ಟ ಕೆಲಸದ ಮೇಲೆ ಗಮನಹರಿಸಬೇಕು. ಅದು ಕಷ್ಟವಾದರೆ ಎಲ್ಲಿಗಾದರೂ ಹೋಗಿಬನ್ನಿ. ಭೂಮಿಯ ವ್ಯವಹಾರದಲ್ಲಿ ಹೆಚ್ಚಿನ ಲಾಭವಿದ್ದರೂ ಇನ್ನೊಬ್ಬರಿಗೆ ಕೊಟ್ಟೇ ಖಾಲಿಯಾಗುವುದು. ಆಪ್ತರೆನಿಸಿಕೊಂಡವರೆ ವಿಶ್ವಾಸವಿಲ್ಲದೇ ಇದ್ದಿದ್ದು, ಇನ್ಮು ನಂಬಿಕೆ‌‌ ಬರಲಿದೆ. ಯಾರನ್ನೂ ಗೆಲ್ಲುವೆನು ಎಂಬ ಹುಂಬುತನ ಬೇಡ. ಸಿಟ್ಟಗೊಂಡು ಮಾತನಾಡಬೇಕಾದ ಅವಶ್ಯಕತೆ ಇಲ್ಲ. ಸಮಾಧಾನಚಿತ್ತರಾಗಿ ಮಾತನಾಡಿ. ಹೂಡಿಕೆಯ ವಿಚಾರದಲ್ಲಿ ಯಾರಾದರೂ ದಾರಿಯನ್ನು ತಪ್ಪಿಸಿಯಾರು.

ವೃಷಭ ರಾಶಿ: ಬಂಧುಗಳು ನಿಮ್ಮನ್ನು ಭೇಟಿ ಮಾಡಬಹುದು. ಇಂದು ಚರಾಸ್ತಿಯ ವಿಚಾರಕ್ಕೆ ಸಹೋದರರ ನಡುವೆ ವಾಗ್ವಾದ ನಡೆಯಬಹುದು. ಇಂದು ಯಾವುದೇ ಪ್ಲಾನ್ಇಲ್ಲದೇ ಮಾಡಿದ ವ್ಯವಹಾರಗಳಲ್ಲಿ ಲಾಭವು ಅಧಿಕವಿಲ್ಲ. ಓದಿನಲ್ಲಿ ಆಸಕ್ತಿ ಕಡಿಮೆ‌ ಇರುವುದು ಸ್ಪಷ್ಟವಾಗಿ ಕಾಣುವುದು. ಕೆಲವರು ನಿಮ್ಮ ವಿಚಾರಗಳನ್ನು ತಿರಸ್ಕರಿಸಬಹುದು. ಆಸೆಗಳನ್ನು ಹರಿಬಿಡುವುದು ನಿಮ್ಮ ಯೋಗ್ಯತೆಯನ್ನು ತಿಳಿಸುವುದು. ಹಣಕಾಸಿನಲ್ಲಿ ಸಣ್ಣ ಮೊತ್ತದ ಲಾಭ. ಮನೆಯಲ್ಲಿ ಸಂತೋಷದ ವಾತಾವರಣ. ಕೆಲಸದಲ್ಲಿ ಹೊಸ ಆಯ್ಕೆಗಳತ್ತ ಗಮನ ಹರಿಸಿ. ಶಕ್ತಿ ಮೀರಿ ಏನನ್ನೂ ಮಾಡುವುದು ಬೇಡ. ರಾಜಕೀಯ ವ್ಯಕ್ತಿಗಳು ಎಂದಿಗಿಂತಲೂ ಹೆಚ್ಚು ವಾಗ್ವಾದವನ್ನು ಮಾಡುವರು. ಯಾರನ್ನೋ ಗಾಬರಿಗೊಳಿಸವುದು ಸರಿಯಲ್ಲ. ಬೇಕೆಂದೇ ಸಮಸ್ಯೆಗಳನ್ನು ನಿಮ್ಮ ಬುಡಕ್ಕೆ ಎಳೆದುಕೊಳ್ಳಬೇಡಿ. ಹೇಳಬೇಕಾದ‌ ವಿಷಯದಲ್ಲಿ ಮುಚ್ಚು ಮರೆ ಇಲ್ಲದೇ ಸರಿಯಾಗಿ ಹೇಳಿ.‌ ಆದುದರ ಬಗ್ಗೆ ನಿಮಗೆ ಯಾವುದೇ ಬೇಸರವನ್ನು ಮಾಡಿಕೊಳ್ಳುವುದಿಲ್ಲ.

ಮಿಥುನ ರಾಶಿ: ಎಷ್ಟೇ ಉಪಕಾರದ ಗುಣವಿದ್ದರೂ ದುರ್ಗುಣವು ಎಲವನ್ನೂ ತಿಂದುಹಾಕಬಹುದು. ಇಂದು ನಿರುಪಯೋಗಿ ವಸ್ತುಗಳನ್ನು ಅನ್ಯರಿಗೆ ಕೊಡುವಿರಿ. ಎಲ್ಲವನ್ನೂ ಮಾತಿನಿಂದಲೇ ಬಗೆಹರಿಸಲಾಗದು. ನಿಶ್ಚಿತ ಆದಾಯವು ನಂಬಿ ಸಾಲವನ್ನು ಪಡೆಯುವಿರಿ.‌ ಗಮನದಿಂದ ಕಾರ್ಯ ಮಾಡಿದರೆ ಯಶಸ್ಸು ಖಚಿತ. ಹಣಕಾಸಿನಲ್ಲಿ ಉತ್ತಮ ಸುಧಾರಣೆ. ಹಳೆಯ ಸಮಸ್ಯೆಗಳಿಗೆ ಪರಿಹಾರ. ಉದ್ಯೋಗದಲ್ಲಿ ಬೆಳವಣಿಗೆ ಸಾಧ್ಯ. ಸಂಬಂಧಗಳಲ್ಲಿ ನಂಬಿಕೆ ಬಲವಾಗಲಿ. ನಿಮ್ಮ ಇಂದಿನ ಮಾತು ಕೇಳಿ ನೀವೊಬ್ಬ ವಾಚಾಳಿ ಎಂಬ ಬಿರುದನ್ನು ಪಡೆಯುವಿರಿ. ಸರ್ಕಾರದಿಂದ‌ ಬರುವ ಹಣವು ವಿಳಂಬವಾಗಿ ಬರಲಿದೆ. ವಾಹನದಲ್ಲಿ ಸುತ್ತಾಡುವ ಬಯಕೆ ಇರಲಿದೆ. ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸುವ ಸ್ಥಿತಿ‌‌ವಬಂದಾಗ ಒಮ್ಮೆ‌ ಪರಿಶೀಲಿಸಿ ವಸ್ತುಗಳನ್ನು ತರುವಿರಿ. ಹೊಸ ಯೋಜನೆಗಳೂ ಅವರಿಗೆ ಸಿಗಲಿದೆ. ನಿಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತಮ ಪ್ರಗತಿ ಇರಲಿದೆ. ನಿಮ್ಮ ದಕ್ಷ ಕಾರ್ಯವು ಎಲ್ಲರಿಗೂ ಮಾದರಿಯಾದೀತು.

ಕರ್ಕಾಟಕ ರಾಶಿ: ನಿಮ್ಮನ್ನು ಭದ್ರಪಡಿಸಿಕೊಂಡು ಅನಂತರ ಇನ್ನೊಂದನ್ನು ಪಡೆಯುವ ಬಗ್ಗೆ ಯೋಚಿಸಿ. ಅವಿವಾಹಿತರಿಗೆ ಇಂದು ವಿವಾಹಕ್ಕೆ ಯೋಗ್ಯವಾದ ಮಾತುಗಳು ಕೇಳಿಸಬಹುದು. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದೆ. ಇಂದು ಪತಿಯ ವರ್ತನೆಯು ಬದಲಾದಂತೆ ತೋರುವುದು. ಹಣಕಾಸಿನ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳಲು ಸರಿಯಾದ ಸಮಯ. ಸಂಬಂಧಗಳಲ್ಲಿ ಗಂಭೀರವಾಗಿ ವರ್ತಿಸಿ. ನಿಮ್ಮ ಶ್ರಮವನ್ನು ಗುರುತಿಸಲಾಗುತ್ತದೆ. ಪ್ರವಾಸ ಯೋಜನೆ ಮುಂದೂಡುವ ಸಾಧ್ಯತೆ. ಸುಮ್ಮನೇ ಎಲ್ಲರನ್ನು ಅನುಮಾನದ ಕಣ್ಣಿನಿಂದ ನೋಡಿ, ಮನಸ್ಸನ್ನು ಹಾಳುಮಾಡಿಕೊಳ್ಳುವಿರಿ. ತೈಲದ ವ್ಯಾಪಾರದಲ್ಲಿ ಅಭಿವೃದ್ಧಿಯು ಕುಂಠಿತವಾಗಿರುತ್ತದೆ. ಸ್ಥಿರಾಸ್ತಿಯನ್ನು ಅಗ್ಗದ ಬೆಲೆಗೆ ಮಾರಾಟಕ್ಕೆ ಇಟ್ಟರೂ ಖರೀದಿಯಾಗದೇ ಇರುವುದು ಆತಂಕವನ್ನು ತರಿಸುವುದು. ಕಂಡಿದ್ದನ್ನು ಕಂಡಂತೆ ಹೇಳುವುದು ಸರಿಯೇ. ಸ್ಪರ್ಧೆಗಾಗಿ ನಡೆಸಿದ ನಿಮ್ಮ ಶ್ರಮವು ವ್ಯರ್ಥವಾದೀತು. ನಿಮ್ಮ‌ ಮೇಲಿರುವ ಭಾವನೆಯು ದೂರಾಗಬಹುದು. ಅಮೂಲ್ಯ ಸಮಯವನ್ನು ಆಲಸ್ಯದಿಂದ ಕಳೆಯುವಿರಿ.

ಸಿಂಹ ರಾಶಿ: ವಿದೇಶದಿಂದ ಬರುವಾಗ ಮನೆಯವರಿಗೆ ಅತಂಕ. ಇಂದು ಮನೆಯನ್ನು ನೋಡಿಕೊಳ್ಳುವ ಹೊಣೆ ನಿಮಗೆ ಸಿಗಲಿದೆ. ತುಂಬಾ ದಿನಗಳಿಂದ ಕಾಡುವ ಸಮಸ್ಯೆಗೆ ಇಂದು ಪರಿಹಾರ ದೊರಕಲಿದೆ. ಅಪವಾದಗಳು ಬರಬಹುದು.‌ ಒಪ್ಪಂದದ ಕುರಿತು ಯೋಚನೆ ಆಗಬಹುದು. ಹಣಕಾಸಿನಲ್ಲಿ ಸ್ಪಷ್ಟತೆ ಇರಲಿ. ಆರೋಗ್ಯದಲ್ಲಿ ಸಾಧಾರಣ ಸ್ಥಿತಿ. ಸಹೋದ್ಯೋಗಿಯ ಜೊತಡ ಸ್ಪರ್ಧೆ ಎದುರಾಗಬಹುದು. ನಿಮ್ಮ ಶ್ರದ್ಧೆ ಹಾಗೂ ಸಮರ್ಥನೆಯಿಂದ ಜಯ ಸಿಗುವುದು ಖಚಿತ. ನಿಮ್ಮ ನಡೆ ಅನುಮಾನವನ್ನು ತರಿಸಬಹುದು. ಕಛೇರಿಯ ವ್ಯವಹಾರವು ಸಾಕೆನಿಸುವಷ್ಟು ಒತ್ತಡ ಬರಬಹುದು. ಭಾವೋದ್ವೇಗದಲ್ಲಿ ಏನನ್ನಾದರೂ ಹೇಳುವಿರಿ. ಸಾಲ ಮಾಡುವ ಸಂದರ್ಭವು ಬಂದರೆ ನಿಮಗೆ ಬೇಕಾದಷ್ಟು ಮಾತ್ರ ಪಡೆದುಕೊಂಡು ತೀರಿಸಲು ಯತ್ನಿಸಿ. ಸಿಗುವಷ್ಟನ್ನೂ ಆಸೆಯಿಂದ ತೆಗೆದುಕೊಳ್ಳಬೇಡಿ. ಭವಿಷ್ಯತ್ತಿನಲ್ಲಿ ತೊಂದರೆಯಾದೀತು. ಸಂತಾನದ ವಿಚಾರದಲ್ಲಿ ಅಶಾಂತಿ ಮೂಡಬಹುದು. ನಿಮ್ಮವರೆಂದುಕೊಂಡವರು ನಿಮ್ಮವರಾಗದೇ ಇರಬಹುದು.

ಕನ್ಯಾ ರಾಶಿ: ಯೋಗ್ಯವಾದ ಭೂಮಿ ಸಿಗದೇ ಒದ್ದಾಟ ಮಾಡುವಿರಿ. ಇಂದು ನಿಮ್ಮ ಉದ್ಯಮದಲ್ಲಿ ಆದ ನಷ್ಟದಿಂದ ಮನಸಿನೊಳಗೆ ಸಂಕಟಪಡುವಿರಿ. ಧಾರ್ಮಿಕ ಕಾರ್ಯಗಳನ್ನು ಮಾಡುವವರಿಗೆ ಇಂದು ಹೆಚ್ಚಿನ ಲಾಭವನ್ನು ನಿರೀಕ್ಷಿತ ಲಾಭವನ್ನು ಕಾಣಬಹುದಾಗಿದೆ. ಹಳೆಯ ಸಾಲ ತೀರಿಸಬಹುದಾದ ಅವಕಾಶ. ಕುಟುಂಬದೊಂದಿಗೆ ಸಂತೋಷದ ಕ್ಷಣಗಳು. ಮನಸ್ಸಿನಲ್ಲಿ ದೃಢತೆ ಇಟ್ಟುಕೊಳ್ಳಿ. ಸ್ನೇಹಿತರಿಂದ ಬೆಂಬಲ ನಿರೀಕ್ಷಿಸಬಹುದು. ವಿದೇಶದಿಂದ ಹಣದ ವ್ಯವಹಾರವನ್ನು ಇಟ್ಟುಕೊಂಡರೆ ಕಷ್ಟವಾದೀತು. ನಿಮ್ಮ ಸ್ನೇಹಿತರ ನಡುವೆ ಬಾಂಧವದಲ್ಯವು ಬಲವಾಗಲಿದೆ. ಪರೀಕ್ಷೆಯನ್ನು ಎದುರಿಸಲು ಸಕಲರೀತಿಯಲ್ಲಿಯೂ ಸಜ್ಜಾಗಲಿದ್ದೀರಿ. ನೀವು ಮಾಡುವ ಕಾರ್ಯದಲ್ಲಿ ಪ್ರಯತ್ನವು ಪೂರ್ಣವಿರಲಿ. ಫಲದ ಅಪೇಕ್ಷೆಯನ್ನು ಬಿಡುವುದು ಉತ್ತಮ. ಇನ್ನೊಬ್ಬರ ವಿಶ್ವಾಸ ಗಳಿಸಿ, ಅವರಿಂದ ಕೆಲಸವನ್ನು ಪಡೆಯುವಿರಿ. ಕುಟುಂಬದಿಂದ‌ ನಿಮಗೆ ಬೇಕಾದ ಸಹಕಾರ ಸಿಗಲಿದೆ. ಮಕ್ಕಳು ನಿಮ್ಮನ್ನು ಪ್ರೀತಿಸುವರು. ಅನಾರೋಗ್ಯದ ಕಾರಣ ಉತ್ಸಾಹದ ಯಾವ ಕಾರ್ಯವನ್ನೂ ಮಾಡಲಾಗದು.

ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ನನ್ನ ಮದುವೆಯಾದಾಗ ನೀನೂ ಗೌಡ್ತಿಯಾದೆ ಅಂತ ಛೇಡಿಸುತ್ತಿದ್ದರು: ಮಾಲಾಶ್ರೀ
ನನ್ನ ಮದುವೆಯಾದಾಗ ನೀನೂ ಗೌಡ್ತಿಯಾದೆ ಅಂತ ಛೇಡಿಸುತ್ತಿದ್ದರು: ಮಾಲಾಶ್ರೀ