AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಂಪಿ ಉತ್ಸವಕ್ಕೆ ಈ ಅದ್ಭುತವನ್ನು ನೋಡುವುದಕ್ಕಾದ್ರೂ ಹೋಗಬೇಕು: ಮತ್ತೆ ಮರುಕಳಿಸಲಿದೆ ವಿಜಯನಗರ ಸಾಮ್ರಾಜ್ಯದ ವೈಭವ

ವಿಶ್ವವಿಖ್ಯಾತ ಹಂಪಿ ಉತ್ಸವ 2026 ಫೆಬ್ರವರಿ 13-15 ರವರೆಗೆ ನಡೆಯಲಿದೆ. ಈ ಬಾರಿ ಪರಂಪರೆ ಮತ್ತು ಆಧುನಿಕ ತಂತ್ರಜ್ಞಾನದ ಅದ್ಭುತ ಸಂಗಮವಾಗಿ, 1,000 ಡ್ರೋನ್‌ಗಳು ವಿಜಯನಗರ ಸಾಮ್ರಾಜ್ಯದ ಇತಿಹಾಸ, ರಾಜರು ಮತ್ತು ಸ್ಮಾರಕಗಳನ್ನು ಆಕಾಶದಲ್ಲಿ ಪ್ರದರ್ಶಿಸಲಿವೆ. 10 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ನಿರೀಕ್ಷಿತರಾಗಿದ್ದು, ಜಿಲ್ಲಾಡಳಿತವು ಭರ್ಜರಿ ಸಿದ್ಧತೆಗಳನ್ನು ನಡೆಸುತ್ತಿದೆ. ಈ ಐತಿಹಾಸಿಕ ಉತ್ಸವ ಎಲ್ಲರಿಗೂ ಅದ್ಭುತ ಅನುಭವ ನೀಡಲಿದೆ.

ಹಂಪಿ ಉತ್ಸವಕ್ಕೆ ಈ ಅದ್ಭುತವನ್ನು ನೋಡುವುದಕ್ಕಾದ್ರೂ ಹೋಗಬೇಕು: ಮತ್ತೆ ಮರುಕಳಿಸಲಿದೆ ವಿಜಯನಗರ ಸಾಮ್ರಾಜ್ಯದ ವೈಭವ
ಹಂಪಿ ಉತ್ಸವ
ಅಕ್ಷಯ್​ ಪಲ್ಲಮಜಲು​​
|

Updated on: Feb 12, 2026 | 11:03 AM

Share

ವಿಜಯನಗರ, ಫೆ.12: ವಿಶ್ವವಿಖ್ಯಾತ ಹಂಪಿ ಉತ್ಸವ 2026 (Hampi Utsav 2026) ಕ್ಕೆ ದಿನಗಣನೆ ಆರಂಭವಾಗಿದ್ದು, ಫೆಬ್ರವರಿ 13 ರಿಂದ 15 ರವರೆಗೆ ಐತಿಹಾಸಿಕ ವಿಜಯನಗರ ಸಾಮ್ರಾಜ್ಯದ ವೈಭವ ಮರುಕಳಿಸಲಿದೆ. ಈ ಬಾರಿಯ ಉತ್ಸವವು ಪರಂಪರೆ ಮತ್ತು ಆಧುನಿಕ ತಂತ್ರಜ್ಞಾನದ ಅದ್ಭುತ ಸಂಗಮಕ್ಕೆ ಸಾಕ್ಷಿಯಾಗಲಿದೆ. ಇನ್ನು ಹಂಪಿ ಉತ್ಸವದಲ್ಲಿ ಪ್ರಮುಖ ಆಕರ್ಷಣೆಗಳು ಮತ್ತು ವಿಶೇಷತೆಗಳು ಇರಲಿದೆ. ಮೈಸೂರು ದಸರಾದಲ್ಲಿ ಜನಮನ ಗೆದ್ದಿದ್ದ ಮಾದರಿಯಲ್ಲೇ, ಈ ಬಾರಿ ಆಕಾಶದಲ್ಲಿ 1,000 ಡ್ರೋನ್‌ಗಳು ಚಿತ್ತಾರ ಬಿಡಿಸಲಿವೆ. ಗಾಯತ್ರಿ ಪೀಠದ ವೇದಿಕೆಯ ಸಮೀಪದಲ್ಲಿ ಈ ಹೈಟೆಕ್ ಪ್ರದರ್ಶನ ನಡೆಯಲಿದೆ.

ಈ ಡ್ರೂನ್​​ ಮೂಲಕ ವಿಜಯನಗರ ಸಾಮ್ರಾಜ್ಯದ ಉದಯ, ಸುರ್ಣ ಯುಗ ಮತ್ತು ಯುದ್ಧದ ಪ್ರಮುಖ ಕ್ಷಣಗಳನ್ನು ಚಿತ್ರಿಸಲಾಗುತ್ತದೆ. ಜತೆಗೆ ಸಾಮ್ರಾಜ್ಯದ ಸ್ಥಾಪಕರಾದ ಹಕ್ಕ-ಬುಕ್ಕ, ಪ್ರಖ್ಯಾತ ಅರಸರಾದ ಶ್ರೀಕೃಷ್ಣದೇವರಾಯ ಮತ್ತು ದೇವರಾಯರ ಚಿತ್ರಗಳು ಆಕಾಶದಲ್ಲಿ ಮೂಡಿಬರಲಿವೆ. ಹಂಪಿಯ ಐತಿಹಾಸಿಕ ಸ್ಮಾರಕಗಳಾದ ಕಲ್ಲು ರಥ, ವಿರೂಪಾಕ್ಷ ದೇಗುಲದ ಗೋಪುರ, ಉಗ್ರ ನರಸಿಂಹ, ಕಡಲೆಕಾಳು ಗಣೇಶ, ಲೋಟಸ್ ಮಹಲ್ ಮತ್ತು ವಿಜಯ ವಿಠಲ ದೇಗುಲದ ಕಲಾಕೃತಿಗಳು ಡ್ರೋನ್ ಮೂಲಕ ಕಂಗೊಳಿಸಲಿವೆ.

ಇದನ್ನೂ ಓದಿ: ಪ್ರವಾಸಿಗರೇ ಮೈಸೂರಿಗೆ ಹೋದ್ರೆ ‘ಮಧುವನ’ ಕ್ಕೆ ಭೇಟಿ ನೀಡಲೇಬೇಕು: ಇಲ್ಲಿ ಏನಿದೆ ಗೊತ್ತಾ?

ಇನ್ನು ಈ ಬಾರಿಯ ಉತ್ಸವದಲ್ಲಿ ಹಂಪಿಯ ಐತಿಹಾಸಿಕ ಸ್ಮಾರಕಗಳಾದ ಕಲ್ಲು ರಥ, ವಿರೂಪಾಕ್ಷ ದೇಗುಲದ ಗೋಪುರ, ಉಗ್ರ ನರಸಿಂಹ, ಕಡಲೆಕಾಳು ಗಣೇಶ, ಲೋಟಸ್ ಮಹಲ್ ಮತ್ತು ವಿಜಯ ವಿಠಲ ದೇಗುಲದ ಕಲಾಕೃತಿಗಳು ಡ್ರೋನ್ ಮೂಲಕ ಕಂಗೊಳಿಸಲಿವೆ. ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರು ಹೇಳಿರುವ ಪ್ರಕಾರ, ಈ ವರ್ಷದ ಉತ್ಸವಕ್ಕೆ ದೇಶ-ವಿದೇಶಗಳಿಂದ ಸುಮಾರು 10 ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ನೇತೃತ್ವದಲ್ಲಿ ಜಿಲ್ಲಾಡಳಿತವು ಭರ್ಜರಿ ಸಿದ್ಧತೆಗಳನ್ನು ನಡೆಸುತ್ತಿದೆ ಎಂದು ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ರಸ್ತೆ ಬದಿ ನಿಂತಲ್ಲೇ ನಿಂತ ವಾಹನಗಳಿಗೆ ಎಷ್ಟು ದಂಡ ಗೊತ್ತಾ?
ರಸ್ತೆ ಬದಿ ನಿಂತಲ್ಲೇ ನಿಂತ ವಾಹನಗಳಿಗೆ ಎಷ್ಟು ದಂಡ ಗೊತ್ತಾ?
‘ದರ್ಶನ್ ಅಭಿಮಾನಿಗಳು ತಪ್ಪು ಮಾಡಲ್ಲ, ಅದು ಕಿಡಿಗೇಡಿಗಳ ಕೆಲಸ’
‘ದರ್ಶನ್ ಅಭಿಮಾನಿಗಳು ತಪ್ಪು ಮಾಡಲ್ಲ, ಅದು ಕಿಡಿಗೇಡಿಗಳ ಕೆಲಸ’
ಬೆಂಗಳೂರಲ್ಲಿ ಡಿಸಿಪಿ ಅಕ್ಷಯ್ ಮಚೀಂದ್ರ ನೇತೃತ್ವದಲ್ಲಿ ಮಿಡ್‌ನೈಟ್ ಆಪರೇಷನ್
ಬೆಂಗಳೂರಲ್ಲಿ ಡಿಸಿಪಿ ಅಕ್ಷಯ್ ಮಚೀಂದ್ರ ನೇತೃತ್ವದಲ್ಲಿ ಮಿಡ್‌ನೈಟ್ ಆಪರೇಷನ್
ಬ್ಯಾಡರಹಳ್ಳಿ ಜನರಿಗೆ ಎದುರಾಯ್ತು ಚಿರತೆ ಭಯ!
ಬ್ಯಾಡರಹಳ್ಳಿ ಜನರಿಗೆ ಎದುರಾಯ್ತು ಚಿರತೆ ಭಯ!
ವಯನಾಡು: ಸುರಂಗ ನಿರ್ಮಾಣ ಸ್ಥಳದಲ್ಲಿ ದುರ್ಘಟನೆ ಸಂಭವಿಸಿದ್ದೇಕೆ?
ವಯನಾಡು: ಸುರಂಗ ನಿರ್ಮಾಣ ಸ್ಥಳದಲ್ಲಿ ದುರ್ಘಟನೆ ಸಂಭವಿಸಿದ್ದೇಕೆ?
1.79 ಕೋಟಿ ಹಣವಿದ್ದ ಎಟಿಎಂ ವಾಹನ ಅಡ್ಡಗಟ್ಟಿ ಕೀ ಎಗರಿಸಿದ ಕಿಡಿಗೇಡಿಗಳು
1.79 ಕೋಟಿ ಹಣವಿದ್ದ ಎಟಿಎಂ ವಾಹನ ಅಡ್ಡಗಟ್ಟಿ ಕೀ ಎಗರಿಸಿದ ಕಿಡಿಗೇಡಿಗಳು
ಹುಂಡಿ ಎಣಿಕೆ ವೇಳೆ 1.98 ಲಕ್ಷ ರೂ. ಜಾಕೆಟ್ ಒಳಗೆ ಇಳಿಸಿ ಎಗರಿಸಿದ ಆಸಾಮಿ!
ಹುಂಡಿ ಎಣಿಕೆ ವೇಳೆ 1.98 ಲಕ್ಷ ರೂ. ಜಾಕೆಟ್ ಒಳಗೆ ಇಳಿಸಿ ಎಗರಿಸಿದ ಆಸಾಮಿ!
ಇಂದು ಯೋಗಿನಿ ಏಕಾದಶಿ, ಬುಧ ಜಯಂತಿ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಯೋಗಿನಿ ಏಕಾದಶಿ, ಬುಧ ಜಯಂತಿ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಪ್ರವಾಹದಲ್ಲಿ ಕೊಚ್ಚಿಹೋದ 3,000 ಎಲ್‌ಪಿಜಿ ಸಿಲಿಂಡರ್‌ಗಳು; ವಿಡಿಯೋ ವೈರಲ್!
ಪ್ರವಾಹದಲ್ಲಿ ಕೊಚ್ಚಿಹೋದ 3,000 ಎಲ್‌ಪಿಜಿ ಸಿಲಿಂಡರ್‌ಗಳು; ವಿಡಿಯೋ ವೈರಲ್!
‘ದೇವಿ’ ಸಿನಿಮಾದ ನಟ, ಯುವ ರೈತ ಚೇತನ್​ಗೆ 10 ನಿರ್ದೇಶಕರಿಂದ ಮೋಸ
‘ದೇವಿ’ ಸಿನಿಮಾದ ನಟ, ಯುವ ರೈತ ಚೇತನ್​ಗೆ 10 ನಿರ್ದೇಶಕರಿಂದ ಮೋಸ