AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope ದಿನ ಭವಿಷ್ಯ – ಯಾವ ರಾಶಿಗೆ ಯಾವ ಫಲ ಇಲ್ಲಿದೆ ನಿಮ್ಮ ದಿನ ಭವಿಷ್ಯ

Today Horoscope ಏಪ್ರಿಲ್ 14, 2021ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ.

Horoscope ದಿನ ಭವಿಷ್ಯ – ಯಾವ ರಾಶಿಗೆ ಯಾವ ಫಲ ಇಲ್ಲಿದೆ ನಿಮ್ಮ ದಿನ ಭವಿಷ್ಯ
ದಿನ ಭವಿಷ್ಯ
ಆಯೇಷಾ ಬಾನು
|

Updated on:Apr 14, 2021 | 6:21 AM

Share

ನಿತ್ಯ ಪಂಚಾಂಗ: ಪ್ಲವನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಶುಕ್ಲಪಕ್ಷ, ಬಿದಿಗೆ ತಿಥಿ, ಬುಧವಾರ, ಏಪ್ರಿಲ್ 14, 2021. ಭರಣಿ ನಕ್ಷತ್ರ, ರಾಹುಕಾಲ :ಇಂದು ಬೆಳಿಗ್ಗೆ 12.16 ರಿಂದ ಇಂದು ಮಧ್ಯಾಹ್ನ 1.49ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 6.01. ಸೂರ್ಯಾಸ್ತ: ಸಂಜೆ 6.31.

ತಾ.14-04-2021 ರ ಬುಧವಾರದ ರಾಶಿಭವಿಷ್ಯ

ಮೇಷ: ವಿನಾಕಾರಣ ನಿಂದನೆ ಸಂಭವವಿದೆ. ಖರ್ಚು ಹೆಚ್ಚಾಗುವ ಯೋಗ ಇರುವುದರಿಂದ ಉಳಿತಾಯದ ಯೋಜನೆ ಮಾಡಿರಿ. ಮನೆಯಲ್ಲಿ ಶಾಂತಿಯುತ ನೆಮ್ಮದಿಯ ವಾತಾವರಣ ಇರುವುದು. ಶುಭ ಸಂಖ್ಯೆ: 9

ವೃಷಭ: ಪರಿವಾರದಲ್ಲಿ ಹೊಸಕಳೆ ಬರುವುದು. ಕುಟುಂಬದಲ್ಲಿ ಸುಖ ಇರುವುದು. ಮಹತ್ವದ ಕೆಲಸಕ್ಕೆ ವಿಘ್ನ ಬರುವ ಸಾಧ್ಯತೆ ಇದೆ ಎಚ್ಚರಿಕೆವಹಿಸಿರಿ. ವ್ಯವಹಾರಗಳು ಲಾಭದಾಯಕವಾಗಿ ಇರುವವು. ಶುಭ ಸಂಖ್ಯೆ: 1

ಮಿಥುನ: ಕುಟುಂಬದಲ್ಲಿ ಭಿನ್ನಾಭಿಪ್ರಾಯ ಇರುವುದು. ವೈವಾಹಿಕ ಚಿಂತೆ ಇರುವುದು. ಧಾರ್ಮಿಕ ಸಮಾರಂಭಗಳಲ್ಲಿ ಭಾಗಿಯಾಗುವ ಯೋಗವಿದೆ. ಹಿರಿಯರ ಸಲಹೆಗೆ ತಕ್ಕಂತೆ ಮುಂದುವರೆಯಿರಿ. ಶುಭ ಸಂಖ್ಯೆ: 8

ಕಟಕ: ಉದ್ಯೋಗ ಪ್ರಾಪ್ತಿ, ಉದ್ಯಮದಲ್ಲಿ ಪ್ರಗತಿ ಇರುವುದು. ಹಳೆಯ ಸಾಲ ತೀರುವುದು. ಅನೇಕ ಮೂಲಗಳಿಂದ ಧನಪ್ರಾಪ್ತಿಯ ಯೋಗವಿದೆ. ಬಂಧುವರ್ಗದಲ್ಲಿಯ ಅಸಮಾಧಾನಗಳು ಪರಿಹಾರವಾಗುವವು. ಶುಭ ಸಂಖ್ಯೆ: 2

ಸಿಂಹ: ವಾಸಸ್ಥಾನ, ಉದ್ಯೋಗಸ್ಥಾನ ಬದಲಾವಣೆಯ ಯೋಗವಿದೆ. ಕೌಟುಂಬಿಕ ಸಮಸ್ಯೆಗಳು ದೂರಾಗುವವು. ವ್ಯವಹಾರಿಕ ಸೂಕ್ಷ್ಮತೆಯಿಂದ ಹಾನಿ ತಪ್ಪಿಸಿರಿ. ವೃಥಾಚಿಂತೆ ಇರುವುದು. ಹೊಸ ವ್ಯವಹಾರಗಳು ಬೇಡ. ಶುಭ ಸಂಖ್ಯೆ: 7

ಕನ್ಯಾ: ಭವಿಷ್ಯತ್ತಿನ ಉಪೇಕ್ಷೆ ಮಾಡದೇ ಉಳಿತಾಯಕ್ಕೆ ಗಮನಹರಿಸಿರಿ. ಆಪತ್ತುಗಳ ಪರಿಹಾರಕ್ಕಾಗಿ ವ್ಯಥಾ ತಿರುಗಾಟದ ಸಂಭವವಿದೆ. ಹಿರಿಯರ ಸಲಹೆಗೆ ತಕ್ಕಂತೆ ಮುಂದುವರೆಯಿರಿ. ಶುಭ ಸಂಖ್ಯೆ: 3

ತುಲಾ: ಅಪೇಕ್ಷಿತ ಸ್ಥಾನಮಾನಗಳು ದೊರೆಯುವವು. ಮಹತ್ವದ ಕಾರ್ಯ ಸಾಧನೆಯಾಗುವ ಲಕ್ಷಣಗಳಿವೆ. ಮನೆಯಲ್ಲಿ ಕೌಟುಂಬಿಕ ಭಿನ್ನಾಭಿಪ್ರಾಯ ಇದ್ದರೂ ನೆಮ್ಮದಿಗೆ ಭಂಗವಿಲ್ಲ. ಆದಾಯಕ್ಕಿಂತ ಅಧಿಕ ಖರ್ಚು ಇರುವುದು. ಶುಭ ಸಂಖ್ಯೆ: 6

ವೃಶ್ಚಿಕ: ಮಹತ್ವದ ಕಾರ್ಯ ಕಲಾಪಗಳಲ್ಲಿ ಭಾಗವಹಿಸುವ ಯೋಗವಿದೆ. ವಿವಿಧ ಮೂಲಗಳಿಂದ ಸಹಾಯ ದೊರೆಯುವುದು. ಸ್ವಸಾಮಥ್ರ್ಯದಿಂದ ಕಠಿಣ ಪರಿಸ್ಥಿತಿಯನ್ನು ನಿಭಾಯಿಸುವಿರಿ. ಅನಾವಶ್ಯಕ ಖರ್ಚಿನ ಸಾಧ್ಯತೆ ಇದೆ. ಶುಭ ಸಂಖ್ಯೆ: 4

ಧನು: ವಿಶೇಷ ರೀತಿಯ ಕಾರ್ಯ ಒದಗಿ ಬಂದು ಸಂತಸ ಉಂಟಾಗುತ್ತದೆ. ಸ್ಥಾನಮಾನಗಳಿಗೂ ಕೊರತೆ ಇಲ್ಲ. ವಿಶೇಷ ವಸ್ತು ಸಂಗ್ರಹ. ಅನಾರೋಗ್ಯ ತೋರಿಬಂದು ಕಿರಿಕಿರಿ ಎನಿಸಬಹುದು. ಶುಭ ಸಂಖ್ಯೆ: 5

ಮಕರ: ವ್ಯರ್ಥ ಚಿಂತೆ, ತಪ್ಪು ಕಲ್ಪನೆ, ನಿಷ್ಟುರ ಮಾತುಗಳನ್ನು ಕೇಳುವ ಸಂಭವ, ಜನ್ಮಸ್ಥ ಶುಕ್ರ ಇರುವುದರಿಂದ ಆರ್ಥಿಕ ಸುಭದ್ರತೆ ಇರುವುದು. ವಿದ್ಯಾರ್ಥಿಗಳಿಗೆ ಪರಿಶ್ರಮ ಅವಶ್ಯಕ. ಮನೆಯಲ್ಲಿ ಸಂತೋಷವಿರುವುದು. ಗೋ ಸೇವೆಯಿಂದ ಕಷ್ಟಪರಿಹಾರ. ಶುಭ ಸಂಖ್ಯೆ: 9

ಕುಂಭ: ಮಿತ್ರರ ಸಕಾರಾತ್ಮಕ ಧೋರಣೆಯಿಂದ ವ್ಯವಹಾರಿಕ ಅಭಿವೃದ್ಧಿ ಕಂಡು ಬರುವುದು. ಕುಟುಂಬದ ಜವಾಬ್ದಾರಿ ಹೆಚ್ಚುವುದು. ಮಕ್ಕಳ ವಿದ್ಯಾಬ್ಯಾಸ ಹಾಗೂ ಆರೋಗ್ಯದ ಚಿಂತೆ ಕಂಡುಬರುವುದು. ನಿರ್ಲಕ್ಷ್ಯ, ಕೆಲಸ ಮುಂದೂಡುವ ಸ್ವಭಾವದಿಂದ ಹಾನಿ ಸಂಭವ. ಶುಭ ಸಂಖ್ಯೆ: 1

ಮೀನ: ಸ್ವೀಕೃತ ಕಾರ್ಯವು ಫಲಪ್ರದವಾಗಿ ಗೌರವ ಆದರಗಳು ಪ್ರಾಪ್ತವಾಗುವವು. ಈ ಸಮಯದಲ್ಲಿ ಉತ್ತಮ ಧನಾರ್ಜನೆಯಾಗುವುದು ವಿದೇಶಪ್ರಯಾಣ, ಪ್ರೇಮಸಂಭಾಷಣೆ, ದೇವ ಬ್ರ್ರಾಹ್ಮಣ, ಧರ್ಮಕಾರ್ಯಗಳು ನಡೆಯುವವು. ಸ್ಥಿರಾಸ್ತಿಗೆ ಸಂಬಂಧಿಸಿದ ವ್ಯಾಜ್ಯ ಪರಿಹಾರವಾಗುವವು. ಶುಭ ಸಂಖ್ಯೆ: 3 ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ. ಸಂಪರ್ಕ ಸಂಖ್ಯೆ: 9972848937

Published On - 6:21 am, Wed, 14 April 21

ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್