Horoscope Today- ದಿನ ಭವಿಷ್ಯ; ಮೀನ ರಾಶಿಯವರಿಗೆ ಪ್ರಯಾಣದಲ್ಲಿ ತೊಡಕು, ಸ್ತ್ರೀಯರು ಎಚ್ಚರವಾಗಿರಬೇಕು
Horoscope ಅಕ್ಟೋಬರ್ 27, 2021ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ.
ನಿತ್ಯ ಪಂಚಾಂಗ: ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಆಶ್ವಯುಜ ಮಾಸ, ಶರದೃತು, ಕೃಷ್ಣಪಕ್ಷ, ಷಷ್ಠಿ ತಿಥಿ, ಬುಧವಾರ, ಅಕ್ಟೋಬರ್ 27, 2021. ಆರ್ದ್ರೆ ನಕ್ಷತ್ರ, ರಾಹುಕಾಲ: ಇಂದು ಬೆಳಿಗ್ಗೆ 11.59 ರಿಂದ ಇಂದು ಮಧ್ಯಾಹ್ನ 1.25 ರ ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 6.12. ಸೂರ್ಯಾಸ್ತ: ಸಂಜೆ 5.47
ತಾ.27-10-2021 ರ ಬುಧವಾರದ ರಾಶಿಭವಿಷ್ಯ.
ಮೇಷ: ಲಾಭ ಸಮೃದ್ಧಿ, ಮನಸ್ಸಿನ ಮೇಲೆ ಪರಿಣಾಮ ಬೀರಲಿದೆ. ಪ್ರಯಾಣದಲ್ಲಿ ಎಚ್ಚರವಿರಲಿ. ವಿಷ ಜಂತುಗಳ ಭಯ, ಪಕ್ಕದ ಮನೆಯವರ ಕಷ್ಟಕ್ಕೆ ನೆರವಾಗುವಿರಿ. ಮಹಿಳೆಯರು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿ. ಶುಭ ಫಲ. ಶುಭ ಸಂಖ್ಯೆ: 6
ವೃಷಭ: ಕಡಿಮೆ ಅವಧಿಯಲ್ಲಿ ಹೆಚ್ಚು ಕೆಲಸ ಮಾಡುವ ಕೌಶಲ ಬೆಳೆಸಿಕೊಳ್ಳಿ. ನಿಮ್ಮಲ್ಲಿರುವ ಶಕ್ತಿಯ ಅರಿವು ನಿಮಗಾಗಲಿದೆ. ಮಕ್ಕಳಿಗೆ ಖರ್ಚು ಹೆಚ್ಚಾಗಲಿದೆ, ನಿಮ್ಮ ಹಣ ಒಳ್ಳೇಕಾರ್ಯಕ್ಕೆ ವಿನಿಯೋಗವಾಗಲಿದೆ, ಉತ್ತಮ ಫಲ. ಶುಭ ಸಂಖ್ಯೆ: 9
ಮಿಥುನ: ನಿಮ್ಮ ನಡುವಿನ ಗೆಳೆಯರ ಕಷ್ಟಗಳನ್ನು ಅರ್ಥ ಮಾಡಿಕೊಂಡು ಕೈಲಾದ ಸಹಾಯ ಮಾಡಿ. ಮತ್ತೊಬ್ಬರನ್ನು ಹಗುರವಾಗಿ ಕಾಣದಿರಿ. ಸ್ವಲ್ಪ ಗೊಂದಲದ ವಾತಾವರಣ, ಆರೋಗ್ಯದಲ್ಲಿ ವ್ಯತ್ಯಾಸ, ಮಾತಿನಿಂದ ಸ್ವಲ್ಪ ಸಮಸ್ಯೆ, ಚಂದ್ರನ ಪ್ರಾರ್ಥನೆ ಮಾಡಿ. ಶುಭ ಸಂಖ್ಯೆ: 3
ಕಟಕ: ಧನಾಗಮನವಾಗಲಿದೆ. ಬಾಕಿ ಉಳಿದಿರುವ ಕೆಲಸಗಳು ಪೂರ್ಣವಾಗಲಿವೆ. ಅನಾವಶ್ಯಕ ವಿಚಾರಗಳ ಬಗ್ಗೆ ಹೆಚ್ಚು ಗಮನ ನೀಡಬೇಡಿ. ಕಷ್ಟ ಪಟ್ಟರೂ ಸಿರಿವಂತರಾಗುತಿಲ್ಲವೇ? ದಾರಿದ್ರ್ಯ ಯೋಗವಿರಬಹುದು!ಯಾವುದೇ ಕೊರತೆ ಇಲ್ಲ, ಭೂವ್ಯಾಪಾರಿಗಳಿಗೆ ಎಚ್ಚರಿಕೆಯ ದಿನ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ. ಶುಭ ಸಂಖ್ಯೆ: 2
ಸಿಂಹ: ಲಾಭದ ದಿನ, ಸ್ವಲ್ಪ ಅದೃಷ್ಟ ಕೈಕೊಡಲಿದೆ, ಸ್ತ್ರೀಯರಿಂದ ಅಸಹಕಾರ, ಅಮ್ಮನವರಿಗೆ ತುಪ್ಪದ ದೀಪ ಹಚ್ಚಿ. ತಂದೆ-ಮಕ್ಕಳಲ್ಲಿ ಭಿನ್ನಾಭಿಪ್ರಾಯ, ಸ್ತ್ರೀಯರ ಸಲಹೆಯಿಂದ ಕಾರ್ಯಾನುಕೂಲ, ತಾಯಿಯಿಂದ ಅನುಕೂಲ, ಪರಶುರಾಮ ಪ್ರಾರ್ಥನೆ ಮಾಡಿ. ಶುಭ ಸಂಖ್ಯೆ: 4
ಕನ್ಯಾ: ಸ್ತ್ರೀಯರಿಂದ ಸಹಾಯ, ಸಮಾಧಾನದ ದಿನ, ಮಕ್ಕಳಿಗೆ ಆರೋಗ್ಯದಲ್ಲಿ ವ್ಯತ್ಯಾಸ, ಬಾಲಾರಿಷ್ಟ ಶಾಂತಿ ಮಾಡಿಸಿ. ನಷ್ಟ ಸಂಭವ, ಆರೋಗ್ಯದಲ್ಲಿ ವ್ಯತ್ಯಾಸ, ಸಾಲ ಕೊಡಬೇಡಿ, ಶತ್ರುಗಳ ಬಾಧೆ ಬಾಧಿಸಲಿದೆ, ಪರಶುರಾಮರ ಸ್ಮರಣೆ ಮಾಡಿ. ಶುಭ ಸಂಖ್ಯೆ: 7
ತುಲಾ: ಸ್ತ್ರೀಯರಿಂದ ಕೆಲಸದಲ್ಲಿ ವಿಘ್ನತೆ, ಎಚ್ಚರಿಕೆ ಇರಲಿ, ಸಂಗಾತಿಯಿಂದ ಅಸಮಧಾನ, ಲಕ್ಷ್ಮೀ ನಾರಾಯಣ ಹೃದಯ ಪಾರಾಯಣ ಮಾಡಿ. ಸಂಗಾತಿಯಿಂದ ಸಹಕಾರ, ಕಿರಿಕಿರಿ ಮಿಶ್ರಫಲ, ಹಣ ವ್ಯತ್ಯಾಸ, ಪ್ರಯಾಣಿಕರಿಗೆ ಶುಭದಿನ, ಆಟೋಮೊಬೈಲ್ಸ್ ಕ್ಷೇತ್ರದವರಿಗೆ ಶುಭಫಲ, ಶಿವಕೇಶವ ಪ್ರಾರ್ಥನೆ ಮಾಡಿ. ಶುಭ ಸಂಖ್ಯೆ: 1
ವೃಶ್ಚಿಕ: ವ್ಯಾಪಾರಿಗಳಿಗೆ ಶುಭಲಾಭ, ಅನಿವಾರ್ಯವಾಗಿ ಸಾಲ ಮಾಡಬೇಕಾದ ಪರಿಸ್ಥಿತಿ, ಚಂದ್ರ-ಗುರು ಪ್ರಾರ್ಥನೆ ಮಾಡಿ. ಈ ಮೂರು ರಾಶಿಯವರ ಜೊತೆ ಪ್ರಣಯ ಓಕೆ, ದಾಂಪತ್ಯ ಜೋಕೆ! ಶುಭ ಸಂಖ್ಯೆ: 6
ಧನಸ್ಸು: ವ್ಯಾಪಾರದಲ್ಲಿ ಮೋಸ ಹೋಗುವ ಸಾಧ್ಯತೆ, ಮನಸ್ಸಿಗೆ ಸಮಾಧಾನ, ಮಿಶ್ರಫಲ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ. ಅತಿ ಭೋಜನದಿಂದ ಆರೋಗ್ಯ ವ್ಯತ್ಯಾಸ, ಮಿತಾಹಾರ ಸ್ವೀಕರಿಸಿ, ವಿದ್ಯಾರ್ಥಿಗಳಿಗೆ ಉತ್ತಮ ಫಲ, ಉದ್ಯೋಗಿಗಳಿಗೆ ಅದೃಷ್ಟ ದಿನ, ಆದಿತ್ಯ ಹೃದಯ ಪಠಿಸಿ. ಶುಭ ಸಂಖ್ಯೆ: 9
ಮಕರ: ಶಶಯೋಗದಿಂದ ಉತ್ತಮ ಫಲ, ಸರ್ಕಾರಿ ನೌಕರರಿಗೆ ಶುಭಫಲ, ಬುದ್ಧಿಶಕ್ತಿಯಿಂದ ಯಶಸ್ಸು, ಆರೋಗ್ಯದ ಕಡೆ ಗಮನ ಕೊಡಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ. ಲಾಭದ ದಿನ, ಸರ್ಕಾರಿ ನೌಕರರಿಗೆ ಶುಭಫಲ, ನಷ್ಟ ಸಾಧ್ಯತೆ, ಸಹೋದರರಿಂದ ಸಹಕಾರ, ಶನೈಶ್ಚರ ಪ್ರಾರ್ಥನೆ ಮಾಡಿ. ಶುಭ ಸಂಖ್ಯೆ: 5
ಕುಂಭ: ವಿದ್ಯಾರ್ಥಿಗಳು ಎಚ್ಚರವಾಗಿರಬೇಕು, ದುರ್ಜನರ ಸಹವಾಸ ಸಾಧ್ಯತೆ. ಜಾಗ್ರತೆ ಇರಲಿ, ನಂಬುವ ಮುನ್ನ ಯೋಚಿಸಿ, ಸ್ತ್ರೀಯರಿಂದ ಸಹಕಾರ, ವಿದೇಶದಿಂದ ಶುಭಸುದ್ದಿ, ಧನ ಸಮೃದ್ಧಿ, ಗುರು ಪ್ರಾರ್ಥನೆ ಮಾಡಿ. ಶುಭ ಸಂಖ್ಯೆ: 4
ಮೀನ: ಪ್ರಯಾಣದಲ್ಲಿ ತೊಡಕು, ಸ್ತ್ರೀಯರು ಎಚ್ಚರವಾಗಿರಬೇಕು, ನೀರಿನಿಂದ ಕೊಂಚ ಸಮಸ್ಯೆ ಸಾಧ್ಯತೆ, ಸಹೋದರರ ಸಹಕಾರ, ಪ್ರಶಂಸೆ ಸಿಗಲಿದೆ, ಸ್ತ್ರೀಯರ ಬುದ್ಧಿ ಕೊಂಚ ಮಂಕಾಗಲಿದೆ, ಅಮ್ಮನವರ ಪ್ರಾರ್ಥನೆ ಮಾಡಿ. ಶುಭ ಸಂಖ್ಯೆ: 8