Nitya Bhavishya: ಸಹೋದರರ ಜೊತೆ ಆತ್ಮೀಯತೆ, ನಿಮ್ಮ ಪ್ರತಿಭೆಗೆ ತಕ್ಕ ಸಮ್ಮಾನ ದೊರೆಯಲಿದೆ
2023 ಜನವರಿ 19 ಗುರುವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದ್ರೆ 2023 ಜನವರಿ 19 ಗುರುವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಮಕರಮಾಸ, ಮಹಾನಕ್ಷತ್ರ: ಉತ್ತರಾಷಾಢ, ಮಾಸ: ಪೌಷ, ಪಕ್ಷ: ಕೃಷ್ಣ, ಗುರುವಾರ, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಜ್ಯೇಷ್ಠಾ, ಯೋಗ: ಧ್ರುವ, ಕರಣ: ತೈತಿಲ, ರಾಹು ಕಾಲ ಮಧ್ಯಾಹ್ನ 2 ಗಂಟೆ 19 ನಿಮಿಷದಿಂದ ಮಧ್ಯಾಹ್ನ 3 ಗಂಟೆ 34 ನಿಮಿಷದವರೆಗೆ, ಸೂರ್ಯೋದಯ: ಬೆಳಗ್ಗೆ 07 ಗಂಟೆ 02 ನಿಮಿಷಕ್ಕೆ, ಸೂರ್ಯಾಸ್ತ: ಸಂಜೆ 06 ಗಂಟೆ 23ನಿಮಿಷಕ್ಕೆ.
ತಾ. 19-01-2023 ರ ಗುರುವಾರ ರಾಶಿ ಭವಿಷ್ಯ ಹೀಗಿದೆ:
ಮೇಷ: ಕುಟುಂಬದಲ್ಲಿ ಪಿತ್ರಾರ್ಜಿತ ಆಸ್ತಿಯ ಮಾತುಕತೆಯಗಲಿದ್ದು ತಂದೆಗೆ ಚಿಂತೆಯು ಕಾಡಬಹುದಾಗಿದೆ. ಭೂಮಿಯ ವ್ಯವಹಾರಕ್ಕೆ ಸಂಬಂಧಿಸಿದಂತೆ ಗೊಂದಲಗಳು ಬರಬಹುದು. ಹೆಚ್ಚಿನ ರಿಸ್ಕ್ ನ್ನು ತೆಗದುಕೊಳ್ಳಬೇಕಾಗಬಹುದು. ತಾಯಿಯ ಪ್ರೀತಿಯು ದೊರೆಯುವ ದಿನವಿಂದು. ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುವಿರಿ. ವಿದ್ಯಾರ್ಥಿಗಳು ಓದಿನ ಕಡೆಗೆ ಗಮನವನ್ನು ಕೊಟ್ಟು ಪರೀಕ್ಷೆಗೆ ಸಿದ್ಧತೆಯನ್ನು ಮಾಡುವುದು ಉಚಿತ.
ವೃಷಭ: ಪ್ರಯಾಣವನ್ನು ಮಾಡಲು ಹೋಗಬೇಡಿ. ಅನಾರೋಗ್ಯ ಅಥವಾ ಅನಾಹುತವಾಗುವ ಸಾಧ್ಯತೆ ಇದೆ. ನೀವು ಹೇಳದೇ ಇರುವ ರಹಸ್ಯವನ್ನು ಇಂದು ನಿಮ್ಮಿಂದ ತಿಳಿಯಲಿದೆ. ಯಾರಿಗೂ ಉಪದೇಶವನ್ನು ಕೊಡಲು ಹೋಗಬೇಡಿ. ಅಪಹಾಸ್ಯಕ್ಕೆ ಒಳಗಾಗಬೇಕಾಗಿ ಬರಬಹುದು. ಉನ್ನತವಾದ ಧ್ಯೇಯವೇ ನಿಮ್ಮ ಯಶಸ್ಸಿನ ಮೊದಲು ಮೆಟ್ಟಿಲು ಎನ್ನುವುದನ್ನು ತಿಳಿದಿದ್ದೀರಿ. ಕಲಹಕ್ಕೆ ದಾರಿಯನ್ನು ಮಾಡಿಕೊಡಬೇಡಿ. ಮಾತನಾಡುವಾಗ ಪದಗಳ ಮೇಲೆ ಜಾಗರೂಕತೆಯನ್ನು ಇರಿಸಿ.
ಮಿಥುನ: ನೀವಿಂದು ಉದ್ಯೋಗದ ಸ್ಥಳದಲ್ಲಿ ಕಾರ್ಯದ ಒತ್ತಡದಿಂದ ಕಿರಿಕಿರಿಯು ಆಗಬಹುದಾಗಿದೆ. ಸಂಗಾತಿಯಿಂದ ಸಂಪತ್ತನ್ನು ಪಡೆದು ಖರೀದಿಗಳನ್ನು ಮಾಡಲಿದ್ದೀರಿ. ಸ್ನೇಹಿತರು ನಿಮ್ಮ ಸಹಾಯಕ್ಕೆ ಬರಲಿದ್ದಾರೆ. ಧಾರ್ಮಿಕದತ್ತ ನಿಮ್ಮ ಮನಸ್ಸು ಒಲಿಯುವ ಸಾಧ್ಯತೆ ಇದ್ದು. ಹೆಚ್ಚು ಕಾಲ ದೇವತೋಪಾಸನೆಯಲ್ಲಿ ಕಾಲವನ್ನು ಕಳೆಯುವಿರಿ. ದೇವಾಲಯ, ಪವಿತ್ರ ನದಿಗಳ ದರ್ಶನ ಸ್ನಾನವನ್ನು ಮಾಡುವವರಿದ್ದೀರಿ.
ಕಟಕ: ಬೆನ್ನಿನಲ್ಲಿ ಆದ ಹುಣ್ಣು ನಿಮಗೆ ನೋವನ್ನು ಕೊಡುವಂತೆ ನಿಮ್ಮದೇ ಮಿತ್ರರು ಶತ್ರುಗಳಾಗಿ ನುಂಗಲೂ ಆಗದ ಉಗುಳಲೂ ಆಗದ ಸ್ಥಿತಿಯನ್ನು ಅನುಭವಿಸುವಿರಿ. ನೀವಿಂದು ಹಿರಿಯರ ಮಾರ್ಗದರ್ಶನದಲ್ಲಿ ಮುಂದುವರಿದರೆ ಉತ್ತಮವಾಗಲಿದೆ. ಆರೋಗ್ಯವನ್ನು ಹೆಚ್ಚಿಸುವ, ಚೆನ್ನಾಗಿಡುವ ಆಹಾರ, ಪಾನೀಯಗಳನ್ನು ಸೇವಿಸಿ. ಪುಸ್ತಕಗಳ ಓದಿನಿಂದ ಇಂದು ನೀವು ಖುಷಿಯನ್ನು ಪಡೆಯುವಿರಿ.
ಸಿಂಹ: ಯಂತ್ರಗಳ ರಿಪೇರಿಯಿಂದಾಗಿ ಅಧಿಕ ಖರ್ಚುಗಳು ಆಗಬಹುದು. ಮಕ್ಕಳ ಬಗ್ಗೆ ಹೆಚ್ಚು ಕಾಳಜಿಯನ್ನು ಇರಿಸಿಕೊಳ್ಳುವುದು ಉತ್ತಮ. ಅಪರಿಚಿತರು ನಿಮ್ಮ ಸಹಾಯವನ್ನು ಕೇಳಿ ಬರಬಹುದು. ಸಹಾಯವನ್ನು ಮಾಡಿ ಸಮಯವನ್ನು ವ್ಯರ್ಥಮಾಡಬೇಡಿ. ವೃತ್ತಿಯಿಂದ ನಿಮಗೆ ಬೇಸರವುಂಟಾಗಬಹುದು. ಯಾವುದೇ ನಿರ್ಧಾರಗಳನ್ನು ಇಂತಹ ಸಂದರ್ಭಗಳಲ್ಲಿ ತೆಗೆದುಕೊಳ್ಳಬೇಡಿ. ಹಣರ ಉಳಿತಾಯಕ್ಕೆ ದಾರಿಯನ್ನು ಕಂಡುಕೊಳ್ಳಲು ಬಯಸುವಿರಿ.
ಕನ್ಯಾ: ನಿದ್ರೆಯು ಸರಿಯಾಗಿ ಆಗದೆ ಮನಸ್ಸು ಉತ್ಸಾಹವನ್ನು ತೋರಿಸುವುದಿಲ್ಲ. ಆಲಸ್ಯವನ್ನು ಇಂದು ಮೈಗೂಡಿಸಿಕೊಂಡಿರುತ್ತೀರಿ. ವಿದ್ಯಾರ್ಥಿಗಳು ಶಿಕ್ಷಕರಿಂದ ಉಪದೇಶವನ್ನು ಪಡೆಯುವರು. ಸಮಾಜಸೇವೆಗೆ ನಿಮ್ಮನ್ನು ತೊಡಗಿಸಿಕೊಳ್ಳುವ ಹಂಬಲದಲ್ಲಿ ಇರುತ್ತೀರಿ. ವೈದ್ಯರ ಸಲಹೆಯನ್ನು ನಿರಾಕರಿಸದೇ ಹಾಗೆಯೇ ನಡೆದುಕೊಳ್ಳಿ. ಬೆಟ್ಟ ಗುಡ್ಡಗಳನ್ನು ಏರುವ ಸಾಹಸಕ್ಕೆ ಹೋಗಬೇಡಿ. ಬಿದ್ದು ಪೆಟ್ಟು ಮಾಡಿಕೊಳ್ಳಬಹುದು. ಎಂದೋ ಖರೀದಿಸಿದ ವಸ್ತುವಿನ ಬಳಕೆಯು ಇಂದಾಗಲಿದೆ.
ತುಲಾ: ಬಂಗಾರದ ವ್ಯಾಪಾರಿಗಳಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. ನೌಕರಸ್ಥರು ಇಂದು ಒತ್ತಡಗಳು ಇಲ್ಲದೇ ನಿಶ್ಚಿಂತೆಯಿಂದ ಕೆಲಸವನ್ನು ಮಾಡುವಿರಿ. ವೈದ್ಯರು ರೋಗಿಯ ತಪಾಸಣೆಯಲ್ಲಿ ಜಾಗರೂಕರಾಗಿರಿ. ಸಣ್ಣ ಅನಾಹುತವೂ ನಿಮ್ಮ ವೃತ್ತಿಗೆ ಕಂಟಕವಾದೀತು. ಯಾರ ಮಾತಿಗೂ ಎದುರಾಡದೇ ಒಪ್ಪಿಕೊಳ್ಳಿ. ನಿಮ್ಮ ಸ್ವಂತ ಆಲೋಚನೆಗಳಿಂದ ಮಾಡಬೇಕಾದುದನ್ನು ಮಾಡಿಕೊಳ್ಳಿ. ಹೊರಗಿನ ಆಹಾರವು ನಿಮಗೆ ದೀರ್ಘಕಾಲದ ಅನಾರೋಗ್ಯವನ್ನು ತಂದೊಂಡ್ಡಬಹುದು.
ವೃಶ್ಚಿಕ: ಯಾರ ಬಲವನ್ನೂ ತಪ್ಪಾಗಿ ಗ್ರಹಿಸಿಬೇಡಿ. ರೂಪಕ್ಕೆ ತಕ್ಕಂತೆ ಸ್ವರೂಪವಿರುವುದಿಲ್ಲ ಎನ್ನುವ ಮಾತನ್ನು ನೆನಪಿಸಿಕೊಳ್ಳುತ್ತ ಇರಿ. ಉದ್ವೇಗದಿಂದ ಏನನ್ನಾದರೂ ಹೇಳಲು ಹೋಗಬೇಡಿ. ನಿಮ್ಮನ್ನು ಅನ್ಯರಂತೆ ಕಂಡಾರು. ಹಿರಿಯ ಜೊತೆ ಕುಳಿತು ಅನುಭವವನ್ನು ಕೇಳಿ ಪಡೆಯಿರಿ. ದಾಂಪತ್ಯದಲ್ಲಿ ಬಿರುಸಿನ ಮಾತುಗಳು ಕೇಳಿಬರಬಹುದು. ಎಂದೋ ಸಾಂದರ್ಭಿಕವಾಗಿ ಆಡಿದ ಮಾತು ನಿಮಗೆ ಮುಳ್ಳಾದೀತು. ಓಡಾಟವನ್ನು ಕಡಿಮೆ ಮಾಡಿ ವಿಶ್ರಾಂತಿಯ ಕಡೆಗೆ ಗಮನಹರಿಸಿ.
ಧನು: ಇಂದಿನ ನಿಮ್ಮ ಮಾತುಕತೆಗಳಿಂದ ನೀವಿನ್ನೂ ಬಹಳ ತಿಳಿದುಕೊಳ್ಳಬೇಕು ಎಂದನ್ನಿಸುವುದು. ಎಲ್ಲರೂ ವಿದ್ಯಾವಂತೆ ತೋರಿ ನಿಮಗೇ ನಿಮ್ಮ ಮೇಲೆ ಅಶಿಕ್ಷಿತ ಭಾವನೆ ಬರಲಿದೆ. ಯಾರದೋ ಸಿಟ್ಟನ್ನು ಮಕ್ಕಳ ಮೇಲೆ ತೀರಿಕೊಂಡು ಪಶ್ಚಾತ್ತಾಪವನ್ನು ಅನುಭವಿಸುವಿರಿ. ನಿಮ್ಮವರೇ ನಿಮಗೆ ಶತ್ರುಗಳಂತೆ ಕಂಡಾರು. ತಂದೆತೊಂದಿಗೆ ಕಲಹವೂ ನಡೆದುಬಿಡುವುದು. ಪೂರ್ವಕೃತ್ಯಗಳು ನಿಮಗೆ ನೆನಪಾಗಲಿದೆ.
ಮಕರ: ನಿಮ್ಮವರೇ ನಿಮಗೆ ವಂಚನೆಯ ಸಂಚನ್ನು ಹಾಕುವರು. ನೀವೇ ಮಾಡಿಕೊಂಡ ತಪ್ಪಿನಿಂದ ನಿಮಗೆ ಬೀಳುವ ಸಾಧ್ಯತೆ ಇದೆ. ಉದ್ಯೋಗದ ನಿಮಿತ್ತ ಹೊಸ ವ್ಯಕ್ತಿಗಳ ಪರಿಚಯವಾಗಲಿದೆ. ಹೊಸ ಕೆಲಸಗಳನ್ನು ಮಾಡುವ ಉತ್ಸಾಹದಲ್ಲಿ ಇರುತ್ತೀರಿ. ಉದ್ಯೋಗದ ಅನ್ವೇಷಣೆಯನ್ನು ಮಾಡುತ್ತಿರುವವರಿಗೆ ಉದ್ಯೋಗವು ಪ್ರಾಪ್ತವಾಗುವುದು. ನೂತನ ಗೃಹಪ್ರವೇಶ ಕಾರ್ಯಕ್ರಮವು ನೆರವೇರಲಿದೆ. ಹೊಸದಾದ ವಸ್ತುವೊಂದನ್ನು ಖರೀದಿಸುವಿರಿ.
ಕುಂಭ: ಮುಂದಾಲೋಚನಯ ಫಲವಾಗಿ ನೀವಿಂದು ಧನವನ್ನು ಹೊಂದಿದ್ದೀರಿ. ಸ್ನೇಹಿತರ ವಿಯೋಗವಾಗುವ ಸಾಧ್ಯತೆ ಇದೆ. ನಿಮ್ಮ ಮಾತುಗಳು ಪ್ರೀತಿಸಿದವರ ಹೃದಯಕ್ಕೆ ನಾಟಿ ಅವರೂ ದೂರಾಗುವರು. ಬೇಸರವನ್ನು ಹೆಚ್ಚು ಮಾಡಿಕೊಳ್ಳುವ ಸನ್ನಿವೇಶವನ್ನು ಎದುರು ಹಾಕಿಳ್ಳಬೇಡಿ. ನಿಮ್ಮ ಸತ್ಕಾರ್ಯವು ನಿಮ್ಮನ್ನು ಕೈ ಬಿಡದು. ಒಳ್ಳೆಯವರ ಸಹವಾಸವನ್ನು ಮಾಡಿದ್ದಕ್ಕೆ ಒಳ್ಳೆಯ ಸ್ಥಿತಿಯು ಬರಲಿದೆ. ಕಛೇರಿಯ ಕಲಸವಿಂದು ಸಲೀಸಾಗಿ ಮುಕ್ತಾಯವಗುವುದು.
ಮೀನ: ಒತ್ತಡದಲ್ಲಿ ಇಂದಿನ ದಿನ ಆರಂಭವಾದರೂ ಮುಕ್ತಾಯಕ್ಕೆ ಪ್ರಶಾಂತಮನಸ್ಕರಾಗಿ ಇರುವಿರಿ. ನೀರಿನ ಉತ್ಪನ್ನದ ವ್ಯಾಪರಿಗಳಿಗೆ ಲಾಭವು ಸಿಗಲಿದೆ. ಸಹೋದರರ ಜೊತೆ ಆತ್ಮೀಯವಾದ ಒಡನಾಟವನ್ನು ಹೊಂದುವಿರಿ. ನಿಮ್ಮ ಪ್ರತಿಭೆಗೆ ತಕ್ಕುದಾದ ಸಮ್ಮಾನವು ಇಂದು ಸಿಗಲಿದೆ. ಹಣವನ್ನು ಉಳಿಸಲು ಬೇಕಾದ ಹೂಡಿಕೆ ಮುಂತಾದ ಯೋಜನೆಗಳನ್ನು ಆರಂಭಿಸುವ ಮನಸ್ಸು ಮಾಡುವಿರಿ. ವಿವಾದಗಳನ್ನು ಗೆಲ್ಲುವ ಸಾಧ್ಯತೆ ಇದೆ.
ಲೋಹಿತಶರ್ಮಾ, ಇಡುವಾಣಿ