Daily Horoscope: ಅನಗತ್ಯ ಖರ್ಚುಗಳ ಬಗ್ಗೆ ಗಮನವಿರಲಿ, ಅಧಿಕ ಆದಾಯವಿರುವ ಕೆಲಸ ಹುಡುಕುವಿರಿ

13 ಜನವರಿ​ 2025: ಸೋಮವಾರದಂದು ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ಪ್ರೀತಿಯಿಂದ ಆಗದ್ದನ್ನು ಭೀತಿಯಿಂದ ಮಾಡಿಸಿಕೊಳ್ಳುವಿರಿ. ಕೃಷಿಗೆ ಸಂಬಂಧಿಸಿದ ನೂತನ ಅನ್ವೇಷಣೆಯನ್ನು ಮಾಡುವ ಹೊಸ ಆಲೋಚನೆಯನ್ನು ಮಾಡುವಿರಿ. ಹಾಗಾದರೆ ಜನವರಿ 13ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope: ಅನಗತ್ಯ ಖರ್ಚುಗಳ ಬಗ್ಗೆ ಗಮನವಿರಲಿ, ಅಧಿಕ ಆದಾಯವಿರುವ ಕೆಲಸ ಹುಡುಕುವಿರಿ
ಅನಗತ್ಯ ಖರ್ಚುಗಳ ಬಗ್ಗೆ ಗಮನವಿರಲಿ, ಅಧಿಕ ಆದಾಯವಿರುವ ಕೆಲಸ ಹುಡುಕುವಿರಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jan 13, 2025 | 12:10 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಉತ್ತರಾಷಾಢ, ಮಾಸ: ಪೌಷ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ಪೂರ್ಣಿಮಾ, ನಿತ್ಯನಕ್ಷತ್ರ: ಪುನರ್ವಸು, ಯೋಗ: ವೈಧೃತಿ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 07 ಗಂಟೆ 02 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 20 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 08:27 ರಿಂದ 09:52ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 11:17 ರಿಂದ ಮಧ್ಯಾಹ್ನ 12:42 ರವರೆಗೆ, ಗುಳಿಕ ಮಧ್ಯಹ್ನಾ 02:06 ರಿಂದ 03: 31 ರವರೆಗೆ.

ಮೇಷ ರಾಶಿ: ನಿಮಗೆ ಸಿಗುವ ಅನಿರೀಕ್ಷಿತ ಉಡುಗೊರೆಯಿಂದ ಸಂತೋಷ ಸಿಗಲಿದೆ. ವಿದ್ಯಾರ್ಥಿಗಳಿಗೆ ಅನಭ್ಯಾಸದ ಕಾರಣ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹಿನ್ನಡೆಯಾಗುವುದು. ಆಭರಣ ಮಾರಾಟಗಾರು ಲಾಭವನ್ನು ಗಳಿಸಬಹುದು. ಶತ್ರುಗಳು ಅನ್ಯ ಕಾರ್ಯದಲ್ಲಿ ತೊಡಗಿರುವ ಕಾರಣ ನಿಮಗೆ ಬಾಧೆ ಇರದು. ಕಲಾವಿದರು ಅವಕಾಶದ ಕದ ತಟ್ಟುವಿರಿ. ಎದುರಿಸಬಹುದಾದ ಸಮಸ್ಯೆಯನ್ನು ಧೈರ್ಯದಿಂದ ಮುನ್ನುಗ್ಗಿ. ಇಂದು ನಿಮಗೆ ಕೆಲಸವು ಆಗಬೇಕಾಗಿದ್ದು ಪ್ರಯಾಣವು ಅನಿವಾರ್ಯವಾಗುವುದು. ವಾಹನ ಸೌಕರ್ಯದಿಂದ ನಿಮಗೆ ಸಮಾಧನ. ಒಂದೇ ಸಾರಿ ಖರ್ಚಿನ ಎಲ್ಲ ಯೋಜನೆ ಇಟ್ಟುಕೊಳ್ಳಬೇಡಿ. ನಿಮ್ಮ ಮಾತು ಇನ್ನೊಬ್ಬರಿಗೆ ಸಿಟ್ಟು ಬರುವಂತೆ ಇರವುದು. ಮಕ್ಕಳ ವಿದ್ಯಾಭ್ಯಾಸದ ಖರ್ಚು ಸ್ವಲ್ಪ ಕಡಿಮೆ‌ ಆಗಿದ್ದು ಸಂತಸದ ಸಮಾಚಾರವಾಗಲಿದೆ. ‌ವಿವಾದಕ್ಕೆ ಹೋಗಿ ಮೂರ್ಖರಾಗುವುದು ಬೇಡ. ದೈವಾನುಕೂಲದಿಂದ ನಿಮಗೆ ಸಿಗಬೇಕಾದ ಸಂಪತ್ತು ಬರಲಿದೆ.

ವೃಷಭ ರಾಶಿ; ಅನಧಿಕೃತ ಮಾಹಿತಿಯಿಂದ ಬೆಚ್ಚಿಬೀಳುವಿರಿ. ಆರ್ಥಿಕತೆಯು ದುರ್ಬಲವಾಗಿದ್ದು ಇದೇ ದೊಡ್ಡ ಚಿಂತೆಯಾಗಬಹುದು. ಏಕಕಾಲಕ್ಕೆ ಹತ್ತಾರು ಚಿಂತನೆಯನ್ನು ಮನಸ್ಸು ಮಾಡಲಿದೆ. ಅನಗತ್ಯ ಖರ್ಚುಗಳ ಬಗ್ಗೆ ಗಮನವಿರಲಿ. ಅಧಿಕ ಆದಾಯ ಕೆಲಸವನ್ನು ಇಂದು ಹುಡುಕುವಿರಿ. ಸಣ್ಣ ವಿಚಾರಕ್ಕೆ ಆದ ಅಪಮಾನವನ್ನು ಎಲ್ಲಿಯೂ ಹೇಳಲಾರಿರಿ. ಮನೆಯಲ್ಲಿ ನಡೆದು ಶುಭಕಾರ್ಯದ ತಯಾರಿಯಲ್ಲಿ ನೀವು ಇರುವಿರಿ. ಆಸ್ತಿಯ ವಿಚಾರದಲ್ಲಿ ನಿಮ್ಮ ನಿಲುವಿಗೆ ಅಪಜಯವಾಗಬಹುದು. ಇಂದು ನೀವು ಸಂಗಾತಿಯ ಮಾತನ್ನೇ ಹೆಚ್ಚು ಹೆಚ್ಚುಕೇಳಲಾರಿರಿ. ಎಲ್ಲೊ ಸಿಕ್ಕ ಬಂಧುಗಳ ಒಡನಾಟವು ಹಿತವೆನಿಸುವುದು. ಸ್ನೇಹಿತರಿಗೋಸ್ಕರ ನೀವು ಹಣವನ್ನು ಖರ್ಚು ಮಾಡಬೇಕಾದೀತು. ನಿಮ್ಮ‌ ವಸ್ತುಗಳನ್ನು ದುರುಪಯೋಗ ಮಾಡಿಕೊಳ್ಳುವಿರಿ. ನೀವು ಇನ್ನೊಬ್ಬರಿಗೆ ನಿಮ್ಮನ್ನು ಹೋಲಿಸಿಕೊಂಡು ನಿಮ್ಮೊಳಗೇ ಸಂಕಟಪಡುವಿರಿ. ನಿಮ್ಮ ಸಹನೆಯನ್ನು ಬಿಡದೇ ಅದನ್ನೇ ಅಸ್ತ್ರವನ್ನಾಗಿ ಮಾಡಿಕೊಳ್ಳಿ. ಧಾರ್ಮಿಕ ಕಾರ್ಯದಲ್ಲಿ ನಂಬಿಕೆ ಹೆಚ್ಚಾಗುವುದು.

ಮಿಥುನ ರಾಶಿ: ಸರ್ಕಾರಿ ಉದ್ಯೋಗದ ಕಡೆ ನಿಮ್ಮ ಮನಸ್ಸು ಹೊರಳುವುದು. ಕಾರ್ಯದ ಕಾರಣ ಸಂಭ್ರಮವನ್ನು ಕಳೆದುಕೊಳ್ಳಬೇಕಾಗುವುದು. ಶಿಕ್ಷಕವೃತ್ತಿಯವರು ಉನ್ನತ ಸ್ಥಾನದ ನಿರೀಕ್ಷೆಯಲ್ಲಿ ಇರುವರು. ಖಾಸಗಿ ಸಂಸ್ಥೆಯ ಹುದ್ದೆಯನ್ನು ನೀವು ಪಡೆಯಲಿದ್ದೀರಿ. ಧಾರ್ಮಿಕ‌ಚಿಂತನೆಗಳು ನಿಮ್ಮ ಮನಸ್ಸಿನಲ್ಲಿ ಓಡಬಹುದು. ನೀವು ಇಂದು ಹಳೆಯ ಸ್ನೇಹಿತನ ಜೊತೆ ಸೇರಿ ಹೊಸ ಉದ್ಯೋಗವನ್ನು ಆರಂಭಿಸುವ ಯೋಚನೆ ಮಾಡುವಿರಿ. ಆದಾಯವು ಕುಗ್ಗಬಹುದು. ತಂದೆ ಹಾಗೂ ತಾಯಿಯರ ಜೊತೆ ಬಹಳ ದಿನಗಳ ಅನಂತರ ಹರಟೆ ಹೊಡೆಯುವಿರಿ. ತೀರ್ಥಕ್ಷೇತ್ರಗಳ ದರ್ಶನವನ್ನು ಮಕ್ಕಳ ಜೊತೆ ಮಾಡುವಿರಿ. ಚಂಚಲವಾದ ಮನಸ್ಸನ್ನು ಏಕಾಗ್ರವಾಗಿ ಇಡಲು ಪ್ರಯತ್ನಿಸುವಿರಿ. ತಿಳಿದವರ ಜೊತೆ ಸಂದೇಹವನ್ನು ಪರಿಹರಿಸಿಕೊಳ್ಳುವಿರಿ. ಎಲ್ಲರಿಂದ ಗೌರವವನ್ನು ಪಡೆಯುವ ಬಯಕೆ ಇರಲಿದೆ. ನಿಮಗೆ ಕೊಟ್ಟ ಜವಾಬ್ದಾರಿಗಳನ್ನು ನೀವು ಇತರರಿಗೆ ಹಂಚಿ ನಿರಾಳರಾಗುವಿರಿ.

ಕರ್ಕಾಟಕ ರಾಶಿ: ನಿಮ್ಮ ಮಾನಸಿಕತೆಯೇ ನೀವು ಎಲ್ಲರಿಂದ ದೂರಾಗುವಂತೆ ಮಾಡುವುದು. ಕುಟುಂಬದ ಜವಾಬ್ದಾರಿಯು ನಿಮ್ಮ ಮೇಲೇ ಬರಬಹುದು‌. ಭೂಮಿಯ ವಿಚಾರದಲ್ಲಿ ಶಾಂತವಾದ ಕಲಹವು ಮತ್ತೆ ಆರಂಭವಾಗುವುದು. ಸಾಕೆನಿಸುವಷ್ಟು ಯಾವ ಆಹಾರವನ್ನೂ ಸೇವಿಸುವುದು ಬೇಡ. ಮಕ್ಕಳ ಶ್ರಮದಿಂದ ಪಾಲಕರಿಗೆ ನೆಮ್ಮದಿ ಇರಲಿದೆ. ವಿದ್ಯಾರ್ಥಿಗಳಿಗೆ ಬೆಂಬಲದ ಕೊರತೆ ಇರುವುದು. ಹಿರಿಯರ ಆರೋಗ್ಯದಲ್ಲಿ ವ್ಯತ್ಯಸಾವಾಗಿದ್ದು ತುರ್ತು ಚಿಕಿತ್ಸೆಯ ಅವಶ್ಯಕತೆ ಇರಲಿದೆ. ಹಲವು ದಿನಗಳ ನಿಮ್ಮ ಋಣವು ಮುಕ್ತಾಯವಾಗಿದ್ದು ಸಂತಸದ ವಿಚಾರವಾಗಿದೆ. ಸಣ್ಣ ವ್ಯಾಪಾರದಲ್ಲಿ ಲಾಭವನ್ನು ಕಾಣುವಿರಿ. ಉನ್ನತ ಹುದ್ದೆಗೆ ಆಯ್ಕೆಯಾದವರ ಪಟ್ಟಿಯಲ್ಲಿ ನಿಮ್ಮ ಹೆಸರೂ ಇರಲಿದೆ. ಮಕ್ಕಳ ಭವಿಷ್ಯಕ್ಕೆ ಹಣವನ್ನು ಉಳಿತಾಯ ಮಾಡವಿರಿ. ಇಂದಿನ ಸಮಯ ಮಿತಿಯನ್ನು ಅರಿತು ಕಾರ್ಯವನ್ನು ಮಾಡುವಿರಿ. ನಂಬಿಕೆಯನ್ನು ಪ್ರಯತ್ನಪೂರ್ವಕವಾಗಿ ಇರಿಸಿಕೊಳ್ಳುಬಿರಿ. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಪ್ರಯತ್ನಿಸುವಿರಿ.

ಸಿಂಹ ರಾಶಿ; ನಿಮ್ಮ ಉತ್ಪಾದನೆಯು ಆದಾಯಕ್ಕಿಂತ ನೆಮ್ಮದಿಯನ್ನು ಹೆಚ್ಚು ಕೊಡುವುದು. ಪ್ರತಿಫಲದ ನಿರೀಕ್ಷೆ ಇಲ್ಲದೇ ನೀವು ಸ್ನೇಹಿತನಿಗೆ ಸಹಾಯವನ್ನು ಮಾಡುವಿರಿ. ಮಾರು ಮಾತಿನಿಂದ ಇನ್ನೊಬ್ಬರು ನಿಮ್ಮನ್ನು ದ್ವೇಷಿಸುವರು. ಸಾಧಿಸುವ ವಿಧಾನವವನ್ನು ಹೇಳಿಕೊಳ್ಳುವುದು ಬೇಡ.‌ ವಾಹನ ಚಾಲನೆಗೆ ಅತ್ಯುತ್ಸಾಹವಿದ್ದರೂ ಎಚ್ಚರಿಕೆಯನ್ನು ಹೆಚ್ಚು ಇಟ್ಟುಕೊಳ್ಳುವುದು ಮುಖ್ಯ. ಖಾಸಗಿ ಉದ್ಯೋಗ ಸಾಕೆನಿಸಿ, ಮನೆಯಲ್ಲಿ ಇರುವ ಯೋಚನೆ ಬರುವುದು. ಬಹಳ ಪ್ರಯತ್ನದ ಫಲವಾಗಿ ಅವಿವಾಹಿತರಿಗೆ ಯೋಗ್ಯವಾದ ಸಂಬಂಧವು ಬರಲಿದೆ. ಅತಿಯಾದ ಉದ್ಯೋಗದ ಬದಲಾವಣೆಯನ್ನು ಮಾಡುವುದು ಬೇಡ. ಮಾತ್ಸರ್ಯದಿಂದ ಸುಖವನ್ನು ನಾಶಮಾಡಿಕೊಳ್ಳುವಿರಿ. ಸಂಗಾತಿಯ ಜೊತೆ ಕೆಲವು ಸಮಯವನ್ನು ಕಳೆಯುವ ಮನಸ್ಸಾಗುವುದು. ದೂರಪ್ರಯಾಣವನ್ನು ಇಂದು ರದ್ದು ಮಾಡಿರಿ.

ಕನ್ಯಾ ರಾಶಿ: ಪ್ರೀತಿಯಿಂದ ಆಗದ್ದನ್ನು ಭೀತಿಯಿಂದ ಮಾಡಿಸಿಕೊಳ್ಳುವಿರಿ. ಕೃಷಿಗೆ ಸಂಬಂಧಿಸಿದ ನೂತನ ಅನ್ವೇಷಣೆಯನ್ನು ಮಾಡುವ ಹೊಸ ಆಲೋಚನೆಯನ್ನು ಮಾಡುವಿರಿ. ನಿಮ್ಮ ತಪ್ಪಿಗೆ ಯಾರನ್ನೋ‌ ದೂರಿ ಕಲಹವಾಗುವುದು. ಬಾಲಿಶವಾಗಿ ವರ್ತಿಸುವುದರಿಂದ ನಿಮ್ಮ ಬಗ್ಗೆ ತಪ್ಪು ಕಲ್ಪನೆ ಬರಬಹುದು. ಅವಶ್ಯಕ ವಸ್ತುಗಳನ್ನು ನೀವು ಕಳೆದುಕೊಳ್ಳುವಿರಿ‌. ಸಾಲ ಪಡೆದವರ ಹುಡುಕಾಟವನ್ನು ಕಷ್ಟ. ಶ್ರಮವಹಿಸಿದಷ್ಟು ಫಲವು ಸಿಗಲಿಲ್ಲ ಎಂಬ ಬೇಸರವಿದ್ದರೂ ತಕ್ಕಮಟ್ಟಿನ ಖುಷಿಯು ಇರಲಿದೆ. ಇಂದು ದೈವಾನುಕೂಲವನ್ನು ನಿರೀಕ್ಷಿಸದೇ ಪುರುಷ ಪ್ರಯತ್ನವು ಹೆಚ್ಚಿರಬೇಕಾಗುವುದು. ಹೇಳಬೇಕಾದ್ದನ್ನು ಹೇಳದೇ ‌ಮನಸ್ಸಿನಲ್ಲಿಯೇ ಮಂಡಿಗೆ ತಿನ್ನುವಿರಿ. ಪ್ರೇಮಿಯನ್ನು ನೀವು ಬಹಳ ಜೋಪಾನವಾಗಿ ನೋಡಿಕೊಳ್ಳಬೇಕಾಗುವುದು. ಆಪ್ತರಿಂದ ಸಣ್ಣ ನಿರ್ಲಕ್ಷ್ಯವನ್ನೂ ಸಹಿಸಲಾರಿರಿ. ಸ್ನೇಹಿತರು ನೆಚ್ಚುವ ಕಾರ್ಯವನ್ನು ಮಾಡುವಿರಿ.