Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜನವರಿ 17ರ ದಿನಭವಿಷ್ಯ
ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 17ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 17ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಟೀವಿ, ಲ್ಯಾಪ್‌ಟಾಪ್, ಟ್ಯಾಬ್‌ಲೆಟ್, ಮೊಬೈಲ್‌ಫೋನ್ ಖರೀದಿಗಾಗಿ ಹಣವನ್ನು ಖರ್ಚು ಮಾಡಲಿದ್ದೀರಿ. ಮನೆಯಲ್ಲಿ ಶುಭ ಕಾರ್ಯಗಳನ್ನು ನಡೆಸುವುದಕ್ಕೆ ಮಾತುಕತೆ ನಡೆಸಲಿದ್ದೀರಿ. ಉದ್ಯೋಗ ಬದಲಾವಣೆಗಾಗಿ ಪ್ರಯತ್ನಿಸುತ್ತಿರುವವರಿಗೆ ಸ್ನೇಹಿತರು- ಸಂಬಂಧಿಗಳ ಸಹಾಯ ದೊರೆಯಲಿದೆ. ಹೊಸ ಸೈಟು- ಜಮೀನು ಖರೀದಿ ಮಾಡುವುದಕ್ಕೆ ಹುಡುಕಾಟ ನಡೆಸಲಿದ್ದೀರಿ. ಕಮಿಷನ್ ಆಧಾರದಲ್ಲಿ ಸಂಪಾದನೆ ಮಾಡುವವರಿಗೆ ಆದಾಯದ ಹರಿವು ಹೆಚ್ಚಾಗಲಿದೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಕ್ರೆಡಿಟ್ ಕಾರ್ಡ್ ಬಿಲ್, ಇಎಂಐಗಳನ್ನು ಸರಿಯಾದ ದಿನಾಂಕದಲ್ಲಿ ಪಾವತಿ ಮಾಡಿದ್ದೀರಾ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಉನ್ನತ ಸ್ಥಾನಮಾನ, ಜವಾಬ್ದಾರಿಗಳನ್ನು ವಹಿಸಲಾಗುತ್ತದೆ. ಇನ್ನು ಹೋಮ್ ಲೋನ್, ವಾಹನ ಲೋನ್‌ಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಬ್ಯಾಂಕ್‌ಗಳಲ್ಲಿ ಸಾಲ ದೊರೆಯುವ ಸಾಧ್ಯತೆ ಇದೆ. ಮಹಿಳೆಯರು ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಗ್ಯಾಸ್ ಸಿಲಿಂಡರ್ ಬಳಕೆಯನ್ನು ಎಚ್ಚರಿಕೆಯಿಂದ ಮಾಡಿ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಟೂರ್ ಆಪರೇಟರ್‌ಗಳಿಗೆ ಅಲೆದಾಟ ಇರುತ್ತದೆ. ಸರ್ಕಾರಕ್ಕೆ ಸಂಬಂಧಿಸಿದ ಕೆಲಸ- ಕಾರ್ಯಗಳನ್ನು ಮುಗಿಸುವ ಸಲುವಾಗಿ ಹೊಸ ಹೊಸ ಜನರನ್ನು ಭೇಟಿ ಆಗಲಿದ್ದೀರಿ. ಮನೆಯಲ್ಲಿ ನಿಮಗೆ ಗೌರವ ಕಡಿಮೆ ಆಗಿದೆ ಎಂಬ ಭಾವನೆ ಮೂಡಲಿದೆ. ಈ ಹಿಂದೆ ನೀವು ಸಾಲ ಕೊಟ್ಟಿದ್ದರ ಪೈಕಿ ಸಣ್ಣ ಮೊತ್ತವಾದರೂ ಇನ್ನು ವಾಪಸ್ ಬರಲಿಕ್ಕಿಲ್ಲ ಎಂದೆನಿಸುತ್ತದೆ. ಅತ್ತೆ ಮೇಲಿನ ಸಿಟ್ಟು ಕೊತ್ತಿ ಮೇಲೆ ಅನ್ನುವ ಹಾಗೆ ಯಾರದೋ ಮೇಲಿನ ಸಿಟ್ಟು ಮತ್ತ್ಯಾರ ಮೇಲೋ ತೋರಿಸದಿರಿ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಷೇರು ಮಾರುಕಟ್ಟೆ, ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆ ಮಾಡಿರುವವರಿಗೆ ಒತ್ತಡದ ದಿನಗಳು ಎದುರಾಗುತ್ತವೆ. ಯಾವುದೋ ಒಂದು ಸುದ್ದಿ ನಿಮ್ಮ ಮನಸ್ಸಿನ ಆತಂಕಕ್ಕೆ ಕಾರಣವಾಗಿ, ನಷ್ಟಕ್ಕೆ ದಾರಿ ಮಾಡಿಕೊಡಬಹುದು. ಕ್ರಿಯೇಟಿವ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಡೆಡ್‌ಲೈನ್ ಒಳಗಾಗಿ ಕೆಲಸ ಮಾಡಬೇಕಾದ ಒತ್ತಡ ಎದುರಾಗುತ್ತದೆ. ಯಾರದೋ ತಪ್ಪಿಗೆ ನೀವು ಬೆಲೆ ತೆರಬೇಕಾಗುತ್ತದೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ತಾತ್ಕಾಲಿಕವಾಗಿಯಾದರೂ ಬೇರೆ ಸ್ಥಳಗಳಿಗೆ ತೆರಳಬೇಕಾಗಬಹುದು. ಇನ್ನು ಕೃಷಿಕರಿಗೆ ಕೃಷಿ ಸಲಕರಣೆಗಳು, ಪಶುಗಳನ್ನು ಖರೀದಿ ಮಾಡುವಂಥ ಯೋಜನೆ ರೂಪಿಸಲಿದ್ದೀರಿ. ಇದಕ್ಕಾಗಿ ಸಾಲ ಕೂಡ ಮಾಡಬಹುದು. ಮನೆಯ ನವೀಕರಣ ಅಥವಾ ಸುಣ್ಣ- ಬಣ್ಣ ಮಾಡಿಸಬೇಕು ಎಂದಿರುವವರು ಸರಿಯಾಗಿ ಯೋಜನೆ ರೂಪಿಸಿಕೊಳ್ಳಿ. ಗುರುಗಳು- ಗುರು ಸಮಾನರಾದವರ ದರ್ಶನದಿಂದ ಹಾಗೂ ಸೇವೆಯಿಂದ ಮನಸ್ಸಿಗೆ ಶಾಂತಿ ದೊರೆಯಲಿದೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಪ್ರೇಮಿಗಳಿಗೆ ಬಹಳ ಒಳ್ಳೆ ಸಮಯ ಇದು. ಏಕಾಂತದಲ್ಲಿ ಭೇಟಿ ಮಾಡಿ, ದಿಢೀರನೆ ಕಿರು ಪ್ರವಾಸಗಳಿಗೆ ತೆರಳುವ ಯೋಗ ಇದೆ. ಸಂಬಂಧಿಕರ ಮನೆಗಳಲ್ಲಿನ ಕಾರ್ಯಕ್ರಮಗಳಿಗೆ ನಿಮಗೆ ಆಹ್ವಾನ ಬರಲಿದೆ. ದೇಹದ ತೂಕಕ್ಕೆ ಸಂಬಂಧಿಸಿದ ಕೆಲವು ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಅಡುಗೆ- ಪೌರೋಹಿತ್ಯ ವೃತ್ತಿಯಲ್ಲಿ ಇರುವವರಿಗೆ ಹಣಕಾಸು ಹರಿವು ಸ್ವಲ್ಪ ಸರಾಗ ಆಗಲಿದೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಎದುರಿಸುತ್ತಿದ್ದಲ್ಲಿ ತಹಬಂದಿಗೆ ಬರಲಿದೆ. ತೀರ್ಥಕ್ಷೇತ್ರಗಳನ್ನು ದರ್ಶನ ಮಾಡಬೇಕು ಎಂದುಕೊಂಡಿರುವವರು ಸ್ವಲ್ಪ ಮುಂದಕ್ಕೆ ಹಾಕಬೇಕಾದ ಸಂದರ್ಭ ಎದುರಾಗಬಹುದು. ಸ್ವಂತ ಉದ್ಯೋಗಗಳನ್ನು ಮಾಡುತ್ತಿರುವವರಿಗೆ ಕುಟುಂಬ ನಿರ್ವಹಣೆ- ಸಾಲ ಮರುಪಾವತಿಯಲ್ಲಿ ಸ್ವಲ್ಪ ಏರುಪೇರಾಗುವ ಸಾಧ್ಯತೆಗಳಿವೆ. ರೈಲಿನಲ್ಲಿ ಪ್ರಯಾಣಿಸುವವರು ಬೆಲೆಬಾಳುವ ವಸ್ತುಗಳ ಕಡೆಗೆ ಸ್ವಲ್ಪ ಜಾಸ್ತಿಯೇ ಲಕ್ಷ್ಯ ನೀಡಬೇಕಾಗುತ್ತದೆ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಭಾವನಾತ್ಮಕವಾಗಿ ಸ್ವಲ್ಪ ದುರ್ಬಲರಾಗುತ್ತೀರಿ. ಇತರರಿಗಾಗಿ ಬೆಲೆ ಬಾಳುವ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಇದೆ. ಇನ್ನು ಹೊಸ ಸ್ಥಳಗಳಿಗೆ ತೆರಳುವವರು ನೀರಿನ ಶುದ್ಧತೆ ಬಗ್ಗೆ ಹೆಚ್ಚಿನ ಲಕ್ಷ್ಯ ವಹಿಸಿ. ಈ ಹಿಂದೆ ಯಾರ ಜತೆಗೆ ಜಗಳ ಮಾಡಿಕೊಂಡಿದ್ದಿರೋ ಅವರ ಜತೆಗೆ ಅಥವಾ ಅವರ ಕೈ ಕೆಳಗೆ ಕೆಲಸ ಮಾಡುವಂಥ ಸನ್ನಿವೇಶ ಸೃಷ್ಟಿ ಆಗಲಿದೆ. ಬಿಪಿಒ- ಐಟಿ ವಲಯಗಳಲ್ಲಿ ಕೆಲಸ ಮಾಡುವವರಿಗೆ ಮೇಲಧಿಕಾರಿಗಳು ನಡೆಸಿಕೊಳ್ಳುವ ರೀತಿಯಿಂದ ಭಾರೀ ಬೇಸರ ಆಗುತ್ತದೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ವಿದೇಶಗಳಲ್ಲಿ ಉದ್ಯೋಗಕ್ಕೆ ಪ್ರಯತ್ನಿಸುತ್ತಿರುವವರಿಗೆ ಕಾಂಟ್ಯಾಕ್ಟ್‌ಗಳ ಮೂಲಕವಾಗಿ ಸಹಾಯ ಆಗಲಿದೆ. ನಗರದ ಹೊರಭಾಗಗಳಲ್ಲಿ ವಾಸ ಮಾಡುವವರಿಗೆ ಇದು ಎಚ್ಚರಿಕೆಯ ಮಾತು: ಬೆಲೆಬಾಳುವ ವಸ್ತುಗಳನ್ನು ಜೋಪಾನ ಮಾಡಿಟ್ಟುಕೊಳ್ಳಿ, ರಾತ್ರಿ ವೇಳೆ ಸಂಚರಿಸುವಾಗಂತೂ ಧರಿಸದಿರುವುದು ಉತ್ತಮ. ಹೊಸ ವಾಹನ ಖರೀದಿಗಾಗಿ ಹಣವನ್ನು ಖರ್ಚು ಮಾಡುವ ಯೋಗ ಇದೆ.
ಲೇಖನ- ಎನ್.ಕೆ.ಸ್ವಾತಿ