Nitya Bhavishya: ಈ ರಾಶಿಯವರಿಗೆ ಇಂದು ಅದೃಷ್ಟಿವದೆ, ಆದರೆ ಪ್ರಯತ್ನ ಅಗತ್ಯ

2023 ಜನವರಿ 29 ಭಾನುವಾರ ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ಯಾವ ರಾಶಿಯವರಿಗೆ ಅಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

Nitya Bhavishya: ಈ ರಾಶಿಯವರಿಗೆ ಇಂದು ಅದೃಷ್ಟಿವದೆ, ಆದರೆ ಪ್ರಯತ್ನ ಅಗತ್ಯ
ರಾಶಿ ಭವಿಷ್ಯImage Credit source: Cntraveller.In
Follow us
TV9 Web
| Updated By: Rakesh Nayak Manchi

Updated on: Jan 29, 2023 | 5:05 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದ್ರೆ 2023 ಜನವರಿ 26 ಗುರುವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಕರಮಾಸ, ಮಹಾನಕ್ಷತ್ರ : ಶ್ರವಣಾ, ಮಾಸ : ಮಾಘ, ಪಕ್ಷ : ಶುಕ್ಲ, ವಾರ : ಭಾನು, ತಿಥಿ : ಅಷ್ಟಮಿ, ನಿತ್ಯನಕ್ಷತ್ರ : ಭರಣಿ, ಯೋಗ : ಶುಭ, ಕರಣ : ಬವ, ಸೂರ್ಯೋದಯ ಬೆಳಗ್ಗೆ 07 ಗಂಟೆ 02 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 29 ನಿಮಿಷಕ್ಕೆ. ರಾಹು ಕಾಲ ಸಂಜೆ 05:03 – ಸಂಜೆ 06:29, ಯಮಘಂಡ ಕಾಲ 12:46 – ಒ2:12, ಗುಳಿಕ ಕಾಲ 03:37 – 05:03.

  1. ಮೇಷ: ನಿಮ್ಮ ಜೊತೆಗೆ ದೃಷ್ಟವು ಇರಲಿದೆ. ಅಲ್ಪ ಪ್ರಯತ್ನದಿಂದ ಕೆಲಸವನ್ನು ಸಾಧಿಸಿಕೊಳ್ಳಬಹುದು. ನಿಮಗೆ ಬಂದಿರುವ ಕೆಲಸಗಳು ಒಂದೊಂದಾಗಿಯೇ ಮುಕ್ತಾಯಗೊಳ್ಳುವುದು. ಒತ್ತಡದ ಕೆಲಸಗಳನ್ನು ನಿರ್ವಹಿಸಬೇಕಾಗಬಹುದು. ಮೆಚ್ಚುಗೆಯು ನಿಮ್ಮ ಕೆಲಸಕ್ಕೆ ಸಿಗಲಿದೆ. ಮೇಲಧಿಕಾರಿಗಳ ಪ್ರೋತ್ಸಾಹ ಮತ್ತು ಪ್ರಶಂಸೆಯು ಸಿಗಲಿದೆ. ಉದ್ವಿಗ್ನಕ್ಕೆ ಒಳಗಾಗದೇ ಎಚ್ಚರಿಕೆಯಿಂದ ಕೆಲಸವನ್ನು ಮಾಡಿ ಮುಗಿಸಿ. ದಾಂಪತ್ಯದಲ್ಲಿ ಸುಖವಿರಲಿದೆ.
  2. ವೃಷಭ: ಇಂದು ನಿಮಗೆ ಕೆಲವು ಗೊಂದಲಗಳು ಇರಲಿವೆ. ಅನಗತ್ಯ ಖರ್ಚುಗಳು ಆಗಬಹುದಾಗಿದೆ. ಸಿಕ್ಕ ಸೌಕರ್ಯಗಳಿಂದ ಕೆಲವು ತೊಂದರೆಗಳನ್ನು ಅನುಭವಿಸಬೇಕಾಗಬಹುದು. ನಿಮ್ಮ ರಹಸ್ಯವು ಇಂದು ಬಯಲಾಗಬಹುದು. ವೈವಾಹಿಕ ಜೀವನ ಸುಂದರವಾಗಿರಲಿದೆ. ಸಂಗಾತಿಗಳು ಪರಸ್ಪರ ಅನ್ಯೋನ್ಯವಾಗಿ ಇರಲಿದ್ದೀರಿ. ಹೊಂದಾಣಿಕೆಯ ಬದುಕು ನಿಮ್ಮದಾಗಲಿದೆ. ಸಹೋದರರ ಜೊತೆ ವಿವಾದಗಳು ಆಗಬಹುದು. ದೂರದ ಪ್ರಯಾಣವು ಸುಖದಾಯಕವಲ್ಲ.
  3. ಮಿಥುನ: ಮಾನಸಿಕ ಒತ್ತಡದಿಂದ ಹೊರಬರಲು ಪ್ರಯತ್ನಿಸಿ. ನಿಮ್ಮ ಉದ್ಯೋಗದ ಕಡೆಗೆ ಹೆಚ್ಚು ಗಮನವಿರಲಿ, ಲಾಭವಾದೀತು. ಶರೀರಕ್ಕೆ ಅತಿಯಾಗಿ ಆಯಾಸವಾಗುವ ಕೆಲಸಗಳನ್ನು ಮಾಡಬೇಡಿ, ಅಶಕ್ತತೆಯು ಉಂಟಾಗಬಹುದು. ಕಛೇರಿಯಲ್ಲಿ ಕೆಲಸವು ನಿಧಾನವಾಗಿ ಸಾಗಬಹುದು. ಆಲಸ್ಯವನ್ನು ಬಿಟ್ಟು ಕೆಲಸ ಮಾಡಿ‌. ಹೊಸ ಪ್ರೇಮವು ಅಂಕುರಿಸಬಹುದು. ವ್ಯಕ್ತಿಗಳ ಬಗ್ಗೆ ಮಾಹಿತಿ ಇರಲಿ. ನಂಬಿ ಮೋಸಹೋಗಬೇಡಿ.
  4. ಕಟಕ: ಅನಗತ್ಯವಾಗಿ ಹಣವನ್ನು ಖರ್ಚು ಮಾಡುವ ಸ್ಥಿತಿಯು ಬರಲಿದೆ. ಇದುವರೆಗೆ ಆದ ಖರ್ಚುಗಳನ್ನು ನೋಡಿಕೊಳ್ಳಿ, ಅಧಿಕಾಗಿರಬಹುದು. ಸ್ವಂತ ಉದ್ಯೋಗಿಗಳಿಗೆ ಒತ್ತಡದ ಸ್ಥಿತಿ ಬರಬಹುದು. ಅನ್ಯರಿಂದ ಕೆಲವು ತೊಂದರೆಗಳು ಆಗಬಹುದು. ಸಂಗಾತಿಯ ಮಾತುಗಳು ನಿಮಗೆ ಕಿರಿಕಿರಿ ತರಿಸಬಹುದು. ಉದ್ವೇಗಕ್ಕೂ ಒಳಗಾಗಬಹುದು. ಏನನ್ನಾದರೂ ಮಾತನಾಡಬೇಡಿ. ಮಾತಿನ‌ಮೇಲೆ ನಿಗವಿರಲಿ. ಅಥವಾ ಸುಮ್ಮನಿರಿ. ಆರೋಗ್ಯವು ವ್ಯತ್ಯಾಸವಾಗಬಹುದು.
  5. ಸಿಂಹ: ಉದ್ಯೋಗದಲ್ಲಿ ಹೆಚ್ಚು ಲಾಭವು ಆಗಬಹುದು. ನಿಮ್ಮನ್ನು ದುರ್ಬಲಗೊಳಿಸುವ ಕಾರ್ಯತಂತ್ರಗಳು ನಡೆಯಬಹುದು. ಅದನ್ನೂ ಮೀರಿ ಕೆಲಸ ಮಾಡುವ ಶಕ್ತಿಯನ್ನು ಹೊಂದಬೇಕಿದೆ. ವ್ಯಾಪಾರಸ್ಥರು ಗ್ರಾಹಕರ ಜೊತೆ ಉತ್ತಮವಾದ ಬಂಧವನ್ನು ಇರಿಸಿಕೊಳ್ಳುವುದು ಉತ್ತಮ. ನಿಮ್ಮ ಮಾತುಗಳೇ ನಿಮಗೆ ಆಸ್ತಿಯಾಗುವುದು. ದೂರದ ಸಂಬಂಧಿಗಳು ವಿವಾಹ ವಿಷಯವಾಗಿ ನಿಮ್ಮನ್ನು ಭೇಟಿಮಾಡುವರು. ಉಪಕಾರವಿತ್ತವರಿಗೆ ಕೃತಜ್ಞತೆಯನ್ನು ಅರ್ಪಿಸಿ. ಕುಲಕ್ಕೆ ಗೌರವವನ್ನು ತರುವಿರಿ.
  6. ಕನ್ಯಾ: ವಿಲಾಸಿ ಜೀವನವನ್ನು ಇಷ್ಟ ಪಟ್ಟು ಅದಕ್ಕೆ ಬೇಕಾದ ಹಣವನ್ನು ಹೊಂದಿಸಿಕೊಳ್ಳುವಿರಿ. ಸಂಗಾತಿ ಹಾಗು ಮಕ್ಕಳ ಜೊತೆ ಖುಷಿಯನ್ನು ಹಂಚುತ್ತ ಕಾಲವನ್ನು ಕಳೆಯುವಿರಿ. ಹೆಚ್ಚು ಓಡಾಟವು ಇರಲಿದೆ. ಹಿರಿಯರ ಮಾರ್ಗದರ್ಶನವನ್ನು ಪಡೆಯಬೇಕಾಗಿಬರಬಹುದು. ಆಪ್ತರಿಗೆ ಸಿಹಿ ತಿನಿಸುಗಳನ್ನು ಮಾಡಿ ಉಣಿಸಲಿದ್ದೀರಿ. ಕಛೇರಿಯಲ್ಲಿ ಉದ್ಯೋಗದ ಬದಲಾವಣೆ ವಾತಾವರಣ ಎದುರಾಗುವುದು. ಸ್ವಲ್ಪಮಟ್ಟಿಗೆ ಆತಂಕವೂ ಉಂಟಾಗಲಿದೆ. ಸ್ನೇಹಿತರು ನಿಮ್ಮ ಸಹಾಯಕ್ಕೆ ಬರಲಿದ್ದಾರೆ.
  7. ತುಲಾ: ಕೆಲವು ದಿನಗಳಿಂದ ಮಾತನ್ನು ಬಿಟ್ಟು ದ್ವೇಷವನ್ನು ಸಾಧಿಸುತ್ತಿದ್ದರೆ ಇಂದು ಅದು ಸರಿಯಾಗಲಿದೆ. ದ್ವೇಷದಿಂದ ಸಾಧಿಸಲಾಗದು ಏನನ್ನೂ ಎನ್ನುವುದು ಅರಿವಾಗಲಿದೆ. ನಿಮ್ಮ ಉತ್ಸಾಹವನ್ನು ಭಂಗಮಾಡುವ ಕೆಲವು ಘಟನೆಗಳು ನಡೆಯಬಹುದು. ಆತ್ಮಬಲವನ್ನು ಹೆಚ್ಚು ಮಾಡಿಕೊಂಡು ಮುನ್ನಡೆಯುವುದು ಯೋಗ್ಯ. ಮನಸ್ಸನ್ನು ತಾಳ್ಮೆಯಿಂದ ಇರಲು ಕ್ರಮವನ್ನು ತೆಗೆದುಕೊಳ್ಳಿ. ಸಂಗೀತಾದಿಗಳನ್ನು ಕೇಳಿ. ಆಪ್ತರನ್ನು ಕಳೆದುಕೊಳ್ಳಬೇಕಾಗಬಹುದು.
  8. ವೃಶ್ಚಿಕ: ಕೆಲವರು ನಿಮ್ಮ ಸ್ನೇಹವನ್ನು ಬಯಸಿ ಬರಬಹುದು. ನಿಮ್ಮಲ್ಲಿರುವ ಒಳ್ಳೆಯ ಗುಣಗಳ ಪರೀಕ್ಷೆಯೂ ಆಗಲಿದೆ. ಹೊಸದಾಗಿ ಆರಂಭಿಸಿದ ಉದ್ಯೋಗದಲ್ಲಿ ಉತ್ಸಾಹವಿರಲಿದೆ. ಕಛೇರಿಯಲ್ಲಿ ಸಹೋದ್ಯೋಗಿಗಳ ಪರಿಚಯವಾಗಲಿದೆ. ಅವರು ಆಪ್ತರಾಗಬಹುದು. ಆಗುವಾಗ ಪೂರ್ವಾಪರವನ್ನು ಪರಿಶೀಲಿಸಿ ಆಗುವುದು ಒಳಿತು. ಹೆಚ್ಚು ಮಾತುಗಳು ನಿಮ್ಮನ್ನು ವಾಚಾಳಿ ಎನ್ನುವ ಬಿರುದನ್ನೂ ತರಬಹುದು. ನೋಡಿ ಮಾತನಾಡಿ.
  9. ಧನು: ಆರೋಗ್ಯವನ್ನು ಗಟ್ಟಿಯಾಗಿ ಇರಿಸಿಕೊಂಡು ನಿಮ್ಮ ಕೆಲಸಗಳನ್ನು ಮಾಡಿ. ಆರೋಗ್ಯಕ್ಕೆ ಬೇಕಾದ ವ್ಯಾಯಾಮಾದಿಗಳನ್ನು ಬೆಳಗಿನ ಕಾಲದಲ್ಲಿ ಮಾಡಿ, ಕಾರ್ಯದಲ್ಲಿ ಪ್ರವೃತ್ತರಾಗಿ. ಹಿರಿಯರ ಹಿತವಚನಗಳನ್ನು ಶ್ರದ್ಧೆಯಿಂದ ಆಲಿಸಿ, ಅವರ ಸಿಟ್ಟಿಗೆ ಗುರಿಯಾಗಬೇಡಿ. ಮನಸ್ಸು ಮಾಡಿದರೆ ಏನನ್ನೂ ಮಾಡುತ್ತೇನೆ ಎನ್ನುವ ಅತಿಯಾದ ಆತ್ಮವಿಶ್ವಾಸದಿಂದ ಹೊರಬನ್ನಿ. ಉತ್ತಮ ಅಭ್ಯಾಸದಲ್ಲಿ ತೊಡಗಿ. ಮನೆಯ ಸುಂದರೀಕರಣಕ್ಕೆ ಹೆಚ್ಚು ಗಮನವನ್ನು ಕೊಡುವಿರಿ. ವಿದ್ಯಾರ್ಥಿಗಳು ಓದಿನ ಬಗ್ಗೆ ಗಮನ ಹರಿಸಲು ಏಕಾಗ್ರತೆಯನ್ನು ಬೆಳೆಸಿಕೊಳ್ಳುವತ್ತ ಪ್ರಯತ್ನ ನಡೆಸಿ.
  10. ಮಕರ: ಖರ್ಚುಗಳಿಗೆ ಕಡಿವಾಣವನ್ನು ಹಾಕಲು ಬೆಳಗ್ಗೆಯೇ ಯೋಜನೆಯನ್ನು ತಯಾರಿಸಿ. ದುಂದುವೆಚ್ಚವೆಂದು ಕಂಡಲ್ಲಿ ಅದನ್ನು ಮಾಡಬೇಡಿ. ನೀವು ಕೂಡಿಡುವ ಹಣವು ಆಪದ್ಧನವಾಗಲಿದೆ. ಭೂಮಿಯ ವ್ಯವಹಾರದಲ್ಲಿ ನಿಮಗೆ ಜಯವಾಗಬಹುದು. ನಿಮ್ಮ ವರ್ಚಸ್ಸಿಗೆ ಹೆದರಿ ನಿಮ್ಮ ಶತ್ರುಗಳು ಶರಣಾಗಲೂಬಹುದು. ಉದ್ಯೋಗದ ನಿಮಿತ್ತ ಪ್ರಯಾಣವಿರಲಿದೆ. ವಿವಾಹಿತರು ಮನೆಯಲ್ಲಿ ಆದ ವಿವಾದವನ್ನು ಹೊರಗೆ ಹೇಳಿ ಅಪಹಾಸ್ಯಕ್ಕೆ ಒಳಗಾಗುವರು. ಜಾಗರೂಕಾಗಿರಿ, ನಿಮ್ಮ ಜೊತೆಗಾರರೆಲ್ಲ ಹಿತೈಷಿಗಳಾಗಿರುವುದಿಲ್ಲ.
  11. ಕುಂಭ: ಐಚ್ಛಿಕವಿಚಾರಗಳನ್ನು ಪೂರೈಸಿಕೊಳ್ಳಲು ಹೆಚ್ಚು ಸಮಯವನ್ನು ಪಡೆಯುವಿರಿ. ಖರ್ಚುಗಳ ಬಗ್ಗೆ ಗಮನವಿರಲಿ. ಆದಾಯದ ತಂತ್ರಗಳನ್ನು ನೀವು ಮಾಡುವವರಿದ್ದೀರಿ. ಅವಿವಾಹಿತರು ವಿವಾಹಕ್ಕೆ ಸಂಬಂಧಿಸಿದ ವಾರ್ತೆಯನ್ನು ಕೇಳುವವರಿದ್ದಾರೆ. ಅಧಿಕ ಆಹಾರವನ್ನು ಸೇವಿಸುವ ಮನಸ್ಸು ಮಾಡುವಿರಿ. ಮಾತನಾಡುವಾಗ ಯಾರ ಜೊತೆ ಮಾತನಾಡುತ್ತಿದ್ದೇನೆ ಎನ್ನುವ ಜ್ಞಾನವೂ ಇರಲಿ. ಯಾರ ಕುರಿತೂ ಹಗುರಾದ ಮಾತುಗಳು ಬೇಡ.
  12. ಮೀನ: ಅತಿ ಉತ್ಸಾಹ ಒಳ್ಳೆಯದೇ. ಅದು ಯಾವ ಮಾರ್ಗದಲ್ಲಿದೆ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಿ. ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿ ನೀವಿರುವಿರಿ. ಉದ್ಯೋಗದಲ್ಲಿ ಸಂತಸವಿದ್ದು ಬಹಳ ಆನಂದದಿಂದ ಮಾಡುವಿರಿ. ಕಛೇರಿಯಲ್ಲಿ, ಮನೆಯಲ್ಲಿ ನಿಮ್ಮ ಆಲೋಚನೆಗೆ ತಕ್ಕಂತೆ ನಡೆದುಕೊಳ್ಳುವವರಿದ್ದಾರೆ. ಮಕ್ಕಳ ಜೊತೆ ಮಕ್ಕಳಂತೆ ವರ್ತಿಸಿ ಅವರ ಪ್ರೀತಿಯನ್ನು ಗಳಿಸುವಿರಿ.

-ಲೋಹಿತಶರ್ಮಾ ಇಡುವಾಣಿ

ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ
ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ
ಮಹಾಕುಂಭದಲ್ಲಿ ಸಂಕ್ರಾಂತಿಯ ದಿನವಾದ ಇಂದು 2.5 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಹಾಕುಂಭದಲ್ಲಿ ಸಂಕ್ರಾಂತಿಯ ದಿನವಾದ ಇಂದು 2.5 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಿಡ್ ವೀಕ್ ಎಲಿನಿಮೇಷನ್ ಟಾಸ್ಕ್, ಗೆದ್ದವರ್ಯಾರು? ಸೋತವರ್ಯಾರು?
ಮಿಡ್ ವೀಕ್ ಎಲಿನಿಮೇಷನ್ ಟಾಸ್ಕ್, ಗೆದ್ದವರ್ಯಾರು? ಸೋತವರ್ಯಾರು?
ವೇದಿಕೆ ಮೇಲೆ ಚರ್ಚೆಯಲ್ಲಿ ಮಗ್ನರಾದ ಕುಮಾರಸ್ವಾಮಿ ಮತ್ತು ವಿಜಯೇಂದ್ರ
ವೇದಿಕೆ ಮೇಲೆ ಚರ್ಚೆಯಲ್ಲಿ ಮಗ್ನರಾದ ಕುಮಾರಸ್ವಾಮಿ ಮತ್ತು ವಿಜಯೇಂದ್ರ
ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ, ಅವರಿಗೆ ವಿಶ್ರಾಂತಿಯ ಅಗತ್ಯವಿದೆ:ಶಶಿಕಲಾ
ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ, ಅವರಿಗೆ ವಿಶ್ರಾಂತಿಯ ಅಗತ್ಯವಿದೆ:ಶಶಿಕಲಾ
ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದ ಸಚಿವೆಯ ಪತಿ ರವೀಂದ್ರ ಹೆಬ್ಬಾಳ್ಕರ್
ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದ ಸಚಿವೆಯ ಪತಿ ರವೀಂದ್ರ ಹೆಬ್ಬಾಳ್ಕರ್
ಘಟನೆ ಸಿದ್ದರಾಮಯ್ಯ ಮತ್ತು ಅವರ ಸರ್ಕಾರಕ್ಕೆ ಒಳ್ಳೇದು ಮಾಡಲ್ಲ: ವಿಜಯೇಂದ್ರ
ಘಟನೆ ಸಿದ್ದರಾಮಯ್ಯ ಮತ್ತು ಅವರ ಸರ್ಕಾರಕ್ಕೆ ಒಳ್ಳೇದು ಮಾಡಲ್ಲ: ವಿಜಯೇಂದ್ರ
ಅಪಘಾತದ ಸ್ವರೂಪ ನೋಡಿದರೆ ಕಾರು ಚಾಲಕ ಬದುಕುಳಿದಿದ್ದೇ ಪವಾಡ
ಅಪಘಾತದ ಸ್ವರೂಪ ನೋಡಿದರೆ ಕಾರು ಚಾಲಕ ಬದುಕುಳಿದಿದ್ದೇ ಪವಾಡ
ಬೆಂಗಳೂರಿನ ಬಯೋ ಇನ್ನೋವೇಶನ್ ಸೆಂಟರ್​ನಲ್ಲಿ ಅಗ್ನಿ ಅವಘಡ
ಬೆಂಗಳೂರಿನ ಬಯೋ ಇನ್ನೋವೇಶನ್ ಸೆಂಟರ್​ನಲ್ಲಿ ಅಗ್ನಿ ಅವಘಡ