ಈ ರಾಶಿಯವರಿಗೆ ಸ್ತ್ರೀಯರ ಉಪಸ್ಥಿತಿಯು ಬಲವನ್ನು ತಂದುಕೊಡುವುದು
ಶಾಲಿವಾಹನ ಶಕವರ್ಷ 1947ರ ಉತ್ತರಾಯಣ, ಶಿಶಿರ ಋತುವಿನ ಫಾಲ್ಗುಣ ಮಾಸ ಶುಕ್ಲ ಪಕ್ಷದ ದ್ವಾದಶೀ ತಿಥಿ, ಬುಧವಾರ ಅಪ್ರಾಮಾಣಿಕತೆ, ಪ್ರೀತಿಪಾತ್ರರು ದೂರ, ದುರಭ್ಯಾಸ, ನಿರುದ್ಯೋಗದಿಂದ ದುಃಖ ಇವೆಲ್ಲ ಈ ದಿನದ್ದು. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ? ನಿಮ್ಮ ದಿನ ಭವಿಷ್ಯ ತಿಳಿದುಕೊಳ್ಳಿ.

ತುಲಾ ರಾಶಿ: :ಮನೆಯ ನಿರ್ಮಾಣಕ್ಕೆ ಯೋಜನೆಗಿಂತ ಅಧಿಕ ಖರ್ಚು. ನಿಮ್ಮ ಉದ್ಯಮವನ್ನು ವಿಸ್ತರಿಸುವ ಬಗ್ಗೆ ಚಿಂತನೆ ನಡೆಸುವಿರಿ. ಸಾಹಸದಿಂದ ಇಂದಿನ ಕೆಲಸವನ್ನು ಪೂರ್ಣಮಾಡುವಿರಿ. ಸ್ತ್ರೀಯರ ಉಪಸ್ಥಿತಿಯು ನಿಮಗೆ ಬಲವನ್ನು ತಂದುಕೊಡುವುದು. ಆರ್ಥಿಕತೆಯ ಬಲಕ್ಕಾಗಿ ಗೊತ್ತಿಲ್ಲದ ಕಾರ್ಯವನ್ನೂ ಮಾಡುವಿರಿ. ವಿದೇಶದ ಮಿತ್ರರ ಸಹಾಯದಿಂದ ನೀವು ಉದ್ಯಮವು ವಿಸ್ತಾರವಾಗಬಹುದು. ಆಗುತ್ತದೆ ಎಂದು ಏನನ್ನಾದರೂ ಮಾಡುವುದು ಉಚಿತವಾಗದು. ಅಧಿಕ ಓಡಾಟದಿಂದ ನೀವು ಆಯಾಸಗೊಳ್ಳುವಿರಿ. ಇಂದು ಹಣದ ಹರಿವು ಅಲ್ಪವಾಗಿ ಇರುವುದು. ಆಪ್ತರನ್ನು ಕಳೆದುಕೊಂಡು ಬೇಸರಿಸುವಿರಿ. ವ್ಯಾಪಾರದ ನಷ್ಟವನ್ನು ನಿಮಗೆ ಅರಗಿಸಿಕೊಳ್ಳಲಾಗದು. ನಿದ್ರೆಯು ಕಡಿಮೆಯಾದ ಕಾರಣ ಕಾರ್ಯದಲ್ಲಿ ಉತ್ಸಾಹ ಕಡಿಮೆ ಇರಲಿದೆ. ಬೇಕಾದಷ್ಟು ಅವಕಾಶಗಳನ್ನು ಬಿಡುವುದು ನಿಮಗೆ ಅಭ್ಯಾಸಬಾಗಬಹುದು. ಪ್ರೇಮಿಯ ಜೊತೆ ಹರಟೆ ಹೊಡೆಯುತ್ತ ದಿನವನ್ನು ಕಳೆಯುವಿರಿ. ಅತಿಥಿಗಲನ್ನು ಮನೆಗೆ ಆಹ್ವಾನಿಸುವಿರಿ. ಕೆಲವರ ಕಣ್ತಪ್ಪಿಸಿ ಓಡಾಡುವಿರಿ.
ವೃಶ್ಚಿಕ ರಾಶಿ: ಸರಕುಗಳ ಆಮದಿನಲ್ಲಿ ತೊಂದರೆ. ನೀವು ಮಧ್ಯಸ್ತಿಕೆ ವಹಿಸಬೇಕಾದ ಸ್ಥಿತಿ ಉಂಟಾದೀತು. ಇಂದು ನೀವು ತುರ್ತು ಪ್ರಯಾಣವನ್ನು ಮಾಡಬೇಕಾಗಬಹುದು. ಕಛೇರಿಯ ಕಲಹದಲ್ಲಿ ಭಾಗಿಯಾಗದೇ ನಿಮ್ಮಷ್ಟಕ್ಕೇ ಇದ್ದು ಬಿಡಿ. ತಂದೆಗೆ ಬೇಕಾದ ಧನಸಹಾಯವನ್ನು ನೀವು ಮಾಡುವಿರಿ. ಬಂದ ಹಣವನ್ನು ಸಂಗ್ರಹಿಸಲು ಪ್ರಯತ್ನಿಸಿ. ಇಲ್ಲವಾದರೆ ಸಂಪತ್ತನ್ನು ಉಳಿಸಿಕೊಳ್ಳುವುದು ಕಷ್ಟವಾದೀತು. ಅಸಾಧ್ಯವನ್ನು ಸಾಧಿಸುವ ಹಠವು ಬೇಡವಾದೀತು. ಭೂಮಿಯಿಂದ ಆದಾಯ ಸಿಗುಂತೆ ಕಾರ್ಯ. ಒಡಹುಟ್ಟಿದವರ ಜೊತೆ ಅನಗತ್ಯ ಮಾತುಗಳು ಬರಬಹುದು. ಅಸ್ವಾಭಾವಿಕ ಬೆಳವಣಿಗೆಯು ನಿಮಗೆ ಬೇಸರವನ್ನು ತರಿಸೀತು. ಉದ್ಯಮದಲ್ಲಿ ಹಿನ್ನಡೆಯಾಗುವುದು ನಿಮಗೆ ಮೊದಲೇ ಗೊತ್ತಿದ್ದೂ ಪ್ರಯತ್ನಿಸುವಿರಿ. ಸಂಸ್ಥೆಯ ಮುಖ್ಯಸ್ಥರಾಗಲು ಆಹ್ವಾನವು ಬರಬಹುದು. ಉದ್ಯೋಗದಲ್ಲಿ ಚಂಚಲತೆ ಇರುವುದು. ಅನಪೇಕ್ಷಿಯ ವಿಚಾರವನ್ನು ಪ್ರಸ್ತಾಪಿಸಿಕೊಂಡು ಕಾಲಹರಣ ಮಾಡುವಿರಿ. ಆಪ್ತರಿಂದ ನಿಮಗಾಗದವರ ಬಗ್ಗೆ ಮಾಹಿತಿಯನ್ನು ಪಡೆಯುವಿರಿ.
ಧನು ರಾಶಿ: ನಿಮ್ಮ ದೃಷ್ಟಿಗೆ ಸರಿ ಎನಿಸಿದ್ದನ್ನಾದರೂ ಮಾಡಿ. ನಿಮ್ಮ ವ್ಯಕ್ತಿತ್ವವನ್ನು ಸುಧಾರಿಸಿಕೊಳ್ಳುವ ಕಡೆ ಗಮನಹರಿಸುವಿರಿ. ಹಳೆಯ ಅಭ್ಯಾಸವನ್ನು ಬಿಟ್ಟು ಹೊಸತನ್ನು ರೂಢಿಸಿಕೊಳ್ಳುವಿರಿ. ಸಾಲಗಾರದಿಂದ ವಂಚನೆ ಆಗುವ ಸಾಧ್ಯತೆ ಇದೆ. ಮಾತನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ. ಪ್ರೇಮವು ನಿಮಗೆ ಬೇಕಾದಂತೆ ತಿರುವು ಪಡೆಯಬಹುದು. ನಿಮ್ಮನ್ನು ದುರುಪಯೋಗ ಮಾಡಿಕೊಳ್ಳುವ ಸಂಭವಿದೆ. ಸಿಟ್ಟನ್ನು ವೃತ್ತಿಯಲ್ಲಿ ತೋರಿಸುವುದು ಬೇಡ. ನೀವು ಆಯ್ಕೆ ಆಗಿದ್ದು ಯಾವುದಕ್ಕೋ ಕೆಲಸವು ಮತ್ಯಾವುದೋ ಆಗಲಿದೆ. ಅನಾರೋಗ್ಯವು ಚಿಕಿತ್ಸೆಯಾಗಿ ಪರಿಣಮಿಸಬಹುದು. ಉತ್ತಮ ಭೂಮಿಯ ಲಾಭವನ್ನು ಪಡೆಯುವಿರಿ. ವಿವಾಹದ ಉತ್ತಮ ಕುಲವು ತಪ್ಪಿಹೋಗಬಹುದಹ. ಕೆಲವರ ಸಹವಾಸವು ನಿಮಗೆ ಇಷ್ಟವಾಗದೇ ಇರಬಹುದು. ಅಪಾಯಯಕ್ಕೆ ಸಿಕ್ಕಿಕೊಳ್ಳುವ ಸಂಭವವಿತ್ತು. ಧನವ್ಯಯವನ್ನು ನಿಮ್ಮ ಜಾಣ್ಮೆಯಿಂದ ತಪ್ಪಿಸಿಕೊಳ್ಳುವಿರಿ. ಸ್ತ್ರೀಯರಿಂದ ಕೆಲವು ಸಮಸ್ಯೆಯು ಬರಲಿದೆ. ಆಗಬೇಕೆಂದುಕೊಂಡ ಕಾರ್ಯವನ್ನು ಪೂರ್ಣ ಮಾಡಲಾಗದು.
ಮಕರ ರಾಶಿ: ಮಂಗಲಕಾರ್ಯಕ್ಕೆ ಸಿದ್ಧತೆ ನಡೆಸುವಿರಿ. ಹಣಕಾಸಿನ ಉದ್ಯಮದಲ್ಲಿ ಕೆಲವು ಅಡಚಣೆಗಳು ಉಂಟಾಗಬಹುದು. ಎಲ್ಲಿಗೇ ಹೋದರೂ ನಿಮಗೆ ಹಿತವೆನಿಸದು. ಬಿಡಿಸಲಾಗದಷ್ಟು ಆಪ್ತವಾದ ಸಂಬಂಧವು ದೂರವಾಗಬಹುದು. ಇಂದು ಪ್ರಯಾಣದ ಆಯಾಸವು ಇರಲಿದೆ. ಶತ್ರುಗಳನ್ನು ಕ್ಷಮಿಸಿ, ಅವರ ಮೇಲೆ ನಿಮ್ಮ ದೃಷ್ಟಿಯು ಬೇಕಾಗುವುದು. ಉದ್ಯೋಗವನ್ನು ಬಿಟ್ಟು ಬೇರೆಯದನ್ನು ಯೋಚಿಸಲಾಗದು. ಪಾಲುದಾರಿಕೆಯಲ್ಲಿ ನಿಮ್ಮದೇ ಅಧಿಕವಾಗಿರುವುದು. ಶತ್ರುವಿನ ಮೇಲೆ ಸೇಡು ತೀರಿಸಿಕೊಳ್ಳಲು ಅಧಿಕ ಖರ್ಚನ್ನು ಮಾಡಬೇಕಾದೀತು. ಉದ್ಯಮಿಗಳಿಗೆ ನೌಕರರ ಕಲಹವನ್ನು ಸರಿ ಮಾಡುವುದೇ ಹೆಚ್ಚಾಗುವುದು. ಚರಾಸ್ತಿಯ ಬಗ್ಗೆ ಪೂರ್ಣ ಮಾಹಿತಿ ಇರದು. ಸ್ನೇಹಿತರ ಸಹಕಾರದಿಂದ ಸ್ಥಿರಾಸ್ತಿಯನ್ನು ಖರೀದಿಸುವಿರಿ. ಪ್ರೀತಿಯಲ್ಲಿ ನಿಮಗೆ ಮೋಸವಾಗುವುದು. ಉದ್ಯಮಕ್ಕೆ ಬೇಕಾದ ವಿವರಗಳನ್ನು ಅನುಭವಿಗಳಿಂದ ಪಡೆಯಿರಿ. ಸ್ನೇಹಿತನ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳುವಿರಿ. ಹೊಸ ಸಂಶೋಧನೆಯ ಬಗ್ಗೆ ಆಸಕ್ತಿ ಇರುವುದು. ಅವಕಾಶಗಳನ್ನು ಹುಡುಕುವಿರಿ.
ಕುಂಭ ರಾಶಿ: ನಿಮ್ಮವರ ರಕ್ಷಣೆಯ ಬಗ್ಗೆ ಅಧಿಕ ಗಮನವಿರುವುದು. ಮುಖ್ಯಸ್ಥರ ಅನುಪಸ್ಥಿತಿಯಲ್ಲಿ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುವುದು. ಸರ್ಕಾರದ ಉದ್ಯೋಗಸ್ಥರು ಕೆಲವರ ಒತ್ತಡಕ್ಕೆ ಸಿಕ್ಕಿಕೊಳ್ಳಬೇಕಾಗುವುದು. ನಿಮ್ಮ ಸಮ್ಮುಖದಲ್ಲಿ ಕುಟುಂಬದ ಸಮಸ್ಯೆಗಳು ಬಗೆಹರಿಯಬಹುದು. ಅನಿರೀಕ್ಷಿತವಾಗಿ ದೊರೆತವರು ನಿಮ್ಮ ಉದ್ಯಮದ ಭಾಗವಾಗಬಹುದು. ಆಸ್ತಿಯ ವಿಚಾರ ಬಂದಾಗ ಮೌನ ತಾಳುವಿರಿ. ಬಹಳ ದಿನಗಳ ಅನಂತರ ಸಾರ್ವಜನಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ. ನಿಮ್ಮನ್ನು ನೀವೇ ರೂಪಿಸಿಕೊಳ್ಳುವ ಅನಿವಾರ್ಯತೆ ಬರಬಹುದು. ನಿರುದ್ಯೋಗದ ಸ್ಥಿತಿಯು ದಾಯಾದಿಗಳಿಗೆ ಸಂತಸವಗುವುದು. ಸಕಾರಾತ್ಮಕ ಆಲೋಚನೆಗಳನ್ನು ನೀವು ಆಪ್ತರ ಜೊತೆ ಹಂಚಿಕೊಳ್ಳುವಿರಿ. ಆಪತ್ತಿಗೆ ಪ್ರತಿಯಾಗಿ ಆಪತ್ತು ಕೊಡಬಾರದು. ಕಳೆದುಕೊಂಡ ಹಣವನ್ನು ಪಡೆಯಲು ಛಲ ಬರಬಹುದು. ನಿಮ್ಮ ಯೋಜನೆಗೆ ಬೆನ್ನೆಲುಬಾಗಿ ನಿಲ್ಲುವವರು ಬೇಕಾಗಿದ್ದರೆ. ಮಕ್ಕಳ ವಿಚಾರದಲ್ಲಿ ಅಧಿಕ ಖರ್ಚನ್ನು ಇಂದು ಮಾಡಬೇಕಾಗಬಹುದು.
ಮೀನ ರಾಶಿ: ಇಂದು ಪ್ರಯತ್ನ ವಿಫಲವಾದರೂ ಉತ್ಸಾಹದಲ್ಲಿ ಇರುವಿರಿ. ನಿಮ್ಮ ವೃತ್ತಿಯಲ್ಲಿ ಕೆಲವು ಮಾರ್ಪಾಡುಗಳು ಆದ ಕಾರಣ ವೃತ್ತಿಯನ್ನು ಬದಲಿಸುವ ಯೋಚನೆ ಬರಲಿದೆ. ವ್ಯಾಪಾರಸ್ಥರು ಅಧಿಕ ಖರ್ಚಿನ ಕಾರಣ ಯಾವುದೇ ಕೆಲಸಕ್ಕೂ ಮುಂದಾಗಲಾರರು. ಬೋಧನ ಕಲೆಯನ್ನು ಸಿದ್ಧಿಸಿಕೊಳ್ಳುವಿರಿ. ಮಕ್ಕಳ ಜೊತೆ ಸಾಮರಸ್ಯದ ಮಾತನಾಡಿ. ಸಾಲದ ಮರುಪಾವತಿಗೆ ಸೂಕ್ತ ಕ್ರಮದ ಅಗತ್ಯವಿರಲಿದೆ. ಯಾವ ಬದಲಾವಣೆಯನ್ನೂ ಸ್ವೀಕರಿಸುವ ಮನೋಭಾವ ಬರಬಹುದು. ಆಲಸ್ಯದಿಂದ ಕಛೇರಿಯ ಕೆಲಸಗಳು ವಿಳಂಬವಾಗುವುದು. ನಿಮ್ಮ ಬಗ್ಗೆ ಪ್ರಶಂಸೆಯ ನುಡಿಗಳು ಕೇಳಿಬರಬಹುದು. ವಿದ್ಯಾರ್ಥಿಗಳಿಗೆ ಓದಲು ಸಮಯವನ್ನು ಇಂದು ಹೊಂದಿಕೆಯಾಗದು. ವೈಷಮ್ಯವನ್ನು ಎಲ್ಲರೆದುರು ಪ್ರದರ್ಶಿಸುವುದು ಬೇಡ. ಪೂರಕ ವಾತಾವರಣದಲ್ಲಿ ಕೊರತೆ ಇರುವುದು. ಯಾರಿಂದಲಾದರೂ ಪ್ರಶಂಸೆಯನ್ನು ಬಯಸುವಿರಿ. ಸುಮ್ಮನೇ ಆಪ್ತರ ಮೇಲೆ ಸಂಶಯವನ್ನು ಇಟ್ಟುಕೊಳ್ಳುವುದು ಬೇಡ. ಹೂಡಿಕೆಯ ವಿಚಾರದಲ್ಲಿ ಇಂದು ಸಕಾರಾತ್ಮಕ ಆಲೋಚನೆಯು ಇರದು. ಉದ್ವೇಗದಲ್ಲಿ ಇದ್ದರೂ ಸಮಾಧಾನದಲ್ಲಿ ಇದ್ದಂತೆ ತೋರುವಿರಿ.
-ಲೋಹಿತ ಹೆಬ್ಬಾರ್ – 8762924271 (what’s app only)




