Horoscope Today 16 March: ಯಾರೇ ದಾರಿ ತಪ್ಪಿಸಿದರೂ ಕೊನೆಗೆ ಮುಟ್ಟುವುದು ಮೊದಲ ಗುರಿಗೆ
ಶಾಲಿವಾಹನ ಶಕವರ್ಷ 1947ರ ಉತ್ತರಾಯಣ, ಶಿಶಿರ ಋತುವಿನ ಫಾಲ್ಗುಣ ಮಾಸ ಕೃಷ್ಣ ಪಕ್ಷದ ದ್ವಿತೀಯಾ ತಿಥಿ, ಭಾನುವಾರ ಪ್ರೀತಿಯ ಸುಖ, ಹಣಕ್ಕಾಗಿ ಕಿರಿಕಿರಿ, ತಪ್ಪಿದ ಗುರಿ, ಪರರ ಬೆಳವಣಿಗೆ ಕಂಡು ಹೊಟ್ಟೆಯಲ್ಲಿ ಉರಿ. ಮನೆ ಹಿರಿಯರ ಆರೋಗ್ಯದ ಕಡೆ ಗಮನ ನೀಡಿ. ಇದೆಲ್ಲ ಈ ದಿನದ ಭವಿಷ್ಯ.

ಬೆಂಗಳೂರು, ಮಾರ್ಚ್ 16, ನಿತ್ಯ ಪಂಚಾಗ: ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಸೌರ ಮಾಸ : ಕುಂಭ ಮಾಸ, ಮಹಾನಕ್ಷತ್ರ : ಪೂರ್ವಾಭಾದ್ರಾ, ಮಾಸ : ಫಾಲ್ಗುಣ, ಪಕ್ಷ : ಕೃಷ್ಣ, ವಾರ : ಭಾನು, ತಿಥಿ : ದ್ವಿತೀಯಾ, ನಿತ್ಯನಕ್ಷತ್ರ : ಚಿತ್ರಾ, ಯೋಗ : ವೃದ್ಧಿ, ಕರಣ : ತೈತಿಲ, ಸೂರ್ಯೋದಯ – 06 – 40 am, ಸೂರ್ಯಾಸ್ತ – 06 – 41 pm, ಇಂದಿನ ಶುಭಾಶುಭಕಾಲ : ರಾಹು ಕಾಲ 17:12 – 18:42, ಯಮಘಂಡ ಕಾಲ 12:41 – 14:11, ಗುಳಿಕ ಕಾಲ 15:42 – 17:12.
ಮೇಷ ರಾಶಿ: ಮಕ್ಕಳ ಬದುಕಿನ ಬಗ್ಗೆ ಆಲೋಚನೆ ಮಾಡುವಿರಿ. ಇಂದು ಬೇರೆಯವರ ಕಷ್ಟಕ್ಕೆ ಸ್ಪಂದಿಸುವುದು ನಿಮ್ಮ ಕರ್ತವ್ಯವೂ ಆಗಿದೆ. ಸಂಗಾತಿಯನ್ನು ಮನವೊಲಿಸುವ ಕಾರ್ಯ ಸಫಲವಾಗಲಿದೆ. ಯಾರನ್ನೂ ನಿಕೃಷ್ಟವಾಗಿ ಕಾಣುವುದು ಬೇಡ. ಅವರವರ ಶಕ್ತಿ, ಸಾಮರ್ಥ್ಯಗಳು ಅವರಿಗಿರುತ್ತವೆ. ಅಸಂಗತ ಸಮಾಚಾರವನ್ನು ಒಪ್ಪಬೇಕಿಲ್ಲ. ನಿಮ್ಮನ್ನು ಲಕ್ಷಿಸಲು ಸಾಧ್ಯವಾಗದ ದೊಡ್ಡ ವ್ಯಕ್ತಿತ್ವ ನಿಮ್ಮದಾಗುವುದು. ಸ್ವಕೀಯರೇ ನಿಮ್ಮ ನಿಜವಾದ ವೇಗವನ್ನು ಕುಂಠಿತಗೊಳಿಸುವರು. ಬರಹಗಳು ನಿಮ್ಮ ಆದಾಯಕ್ಕೆ ಹೆಚ್ಚಿನ ಒತ್ತನ್ನು ಕೊಡುವುದು. ಕಣ್ಣಿಗೆ ಪ್ರತ್ಯಕ್ಷ ಕಂಡರೂ ಪ್ರಮಾಣೀಕರಿಸಿ ನೋಡು ಎನ್ನುವಂತೆ ಪರಿಶೀಲಿಸಿ ಕಾರ್ಯ ಪ್ರವೃತ್ತರಾಗಿ. ಹೊಸ ಉದ್ಯಮದ ಕಡೆ ಅಧಿಕ ಗಮನ ಇರುವುದು. ನಿಮ್ಮ ಪ್ರಯತ್ನವನ್ನು ಇತರರಿಗೂ ತಿಳಿಸುವ ಸಮಯ ಇಂದು. ತಪ್ಪು ಮಾಹಿತಿ ನೀಡಿ ನಿಮ್ಮ ದಾರಿ ತಪ್ಪಿಸಬಹುದು. ಯಾವುದನ್ನು ಖಂಡಿಸುವಾಗಲೂ ಅದರ ಪೂರ್ಣ ಮಾಹಿತಿ ಇರಲಿ. ಸ್ನೇಹಿತರ ಸಹವಾಸ ಅಧಿಕಾಗುವುದು. ಮಾತಿನಲ್ಲಿ ಲವಲವಿಕೆ ಇರುವುದು.
ವೃಷಭ ರಾಶಿ: ನೇರವಾದ ಮಾತುಗಳನ್ನು ಆಡಿದರೂ ವಾಸ್ತವವನ್ನು ಅರಿತರೆ ಒಳ್ಳೆಯದು. ನಿಮ್ಮ ಪೂರ್ವ ನಿಶ್ಚಿತ ಯೋಜನೆಯನ್ನು ಬದಲಾಯಿಸುವಿರಿ. ನಿಮ್ಮ ದೌರ್ಬಲ್ಯವನ್ನು ಉಪಯೋಗಿಸಿಕೊಳ್ಳಬಹುದು. ನಿಮ್ಮ ಕೆಲಸಕ್ಕೆ ಪ್ರಶಂಸೆ ಸಿಗುವುದು. ನಿಮ್ಮ ಏಳಿಗೆ ಕಂಡು ಅಸೂಯೆ ಪಡುವವರ ಸಂಖ್ಯೆ ಹೆಚ್ಚಾಗಲಿದೆ. ಆರ್ಥಿಕತೆಯ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ವಾಹನದ ಖರೀದಿಸುವ ಆಸೆಯು ಪ್ರಬಲವಾಗಬಹುದು. ನಯವಂಚಕತನವು ನಿಮಗೆ ಪ್ರಿಯವಾಗಬಹುದು. ಅದಕ್ಕೆ ತಲೆ ಕೆಡಿಸಿಕೊಳ್ಳದೆ ನಿಮ್ಮ ಕಾರ್ಯದಲ್ಲಿ ಪ್ರವೃತ್ತರಾಗಿ ಕಾರ್ಯದಲ್ಲಿ ನಿಷ್ಠೆಯನ್ನು ತೋರಿಸಿ. ಯಾವುದನ್ನೂ ಕರಾರುವಾಕ್ಕಾಗಿ ಹೇಳಲಾಗದು. ಪ್ರೀತಿಯ ಸುಖದಿಂದ ವಂಚಿತರಾಗುವಿರಿ. ವಿದೇಶಪ್ರಯಾಣದ ಗುಂಗಿನಿಂದ ಹೊರಬನ್ನಿ. ಕುಟುಂಬದ ಪ್ರೋತ್ಸಾಹವು ನಿಮಗೆ ಸಿಗಬಹುದು. ವಿವಾಹಕ್ಕೆ ದಿನವನ್ನು ನಿರ್ಧರಿಸುವಿರಿ. ದುಂದುವೆಚ್ಚದಿಂದ ಬೇಸರ. ಮಕ್ಕಳ ಜೊತೆ ಸಂತೋಷದ ಕ್ಷಣವು ಇರಲಿದೆ. ಶ್ರದ್ಧೆಯಿಂದ ಯಾವುದನ್ನೂ ಇಂದು ಮಾಡಲಾರಿರಿ.
ಮಿಥುನ ರಾಶಿ: ವಿದೇಶೀ ವಿನಿಮಯದಲ್ಲಿ ಗೊಂದಲ ಬರಬಹುದು. ವ್ಯಾಪಾರಕ್ಕೆ ಬೇಕಾದ ಬಂಡವಾಳವನ್ನು ಹಾಕಲು ವ್ಯಕ್ತಿಗಳ ಅನ್ವೇಷಣೆ ಮಾಡುವಿರಿ. ವ್ಯವಹಾರದ ಪ್ರಜ್ಞೆಯನ್ನು ಇಟ್ಟುಕೊಂಡು ಮಾತನಾಡಿ. ನಿಮ್ಮ ಕಾರ್ಯವೇ ಉತ್ತರವಾಗಿರಲಿ. ಬಂಧುಗಳು ನಿಮ್ಮನ್ನು ಪ್ರಶಂಸಿಸಿ ಕಾರ್ಯವನ್ನು ಸಾಧಿಸಿಕೊಳ್ಳುವರು. ವ್ಯಾಪಾರದ ಬದಲಾವಣೆಗಳನ್ನು ಅಧ್ಯಯನ ಮಾಡಿ ಬದಲಾಯಿಸಿ. ಚುರುಕುತನವು ನಿಮಗೆ ಸಾಧ್ಯವಾಗದು. ನಿಮ್ಮ ಒಳ್ಳೆಯತನವನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ಬಳಕೆ ಆದೀತು. ನೆರೆಯವರು ನಿಮ್ಮ ವ್ಯವಹಾರದಲ್ಲಿ ಪ್ರವೇಶಪಡೆಯಬಹುದು. ಜಾಗರೂಕರಾಗಿ ಜನರಿಂದ ದೂರವಿರುವುದು ಒಳ್ಳೆಯದು. ನಿಮ್ಮ ಹುಸಿತನವು ಪ್ರಕಟವಾಗಬಹುದು. ಬೇಡಿಕೆಯ ಪೂರೈಕೆಗೆ ಅತಿಯಾದ ಪ್ರಯತ್ನ ಮಾಡಬೇಕು. ನಿಮ್ಮದೇ ಆದ ಕುಟುಂಬದಲ್ಲಿ ಹಲವರು ಕಿರಿಕಿರಿ ಮಾಡಬಹುದು. ಹಿಂದೆ ಮುಂದೆ ಯೋಚಿಸದೆ ಏಕಾಏಕಿಯಾಗಿ ಯಾರಿಗೂ ಮಾತು ಕೊಡುವುದು ಬೇಡ. ಪ್ರತ್ಯಕ್ಷವಾಗಿ ಕಾಣುವ ವ್ಯಕ್ತಿಗಳಿಗೆ ನಿಮ್ಮ ಬಗೆಗಿನ ದೃಷ್ಟಿಕೋನವೇ ಬದಲಾಗುವುದು.
ಕರ್ಕಾಟಕ ರಾಶಿ: ಯಂತ್ರಗಳ ಜೊತೆ ಕೆಲಸ ಮಾಡುತ್ತಿದ್ದರೆ ಜಾಗರೂಕತೆ ಅವಶ್ಯಕ. ಭವಿಷ್ಯದ ಜೀವನ ನಿರ್ವಹಣೆಯ ಬಗ್ಗೆ ಚಿಂತಾಕ್ರಾಂತರಾಗುವಿರಿ. ಕನಸನ್ನು ಕಾಣುವುದು ಯೋಗ್ಯವೇ. ಆದರೆ ಸಾಮರ್ಥ್ಯವನ್ನೂ ಅರಿತುಕೊಳ್ಳುವುದು ಮುಖ್ಯವಾಗುವುದು. ಆದಾಯದ ಗೌಪತೆಯನ್ನು ಕಾಪಾಡಿಕೊಳ್ಳುವಿರಿ. ಮನಸ್ಸಿಗೆ ಮಂಕು ಕವಿದಂತೆ ಇರುವಿರಿ. ಜೀವನವು ಅಸಾರವಾದುದ್ದು ಎಂಬ ಭಾವವು ಬರಬಹುದು. ವಂಚನೆಯ ಕರೆಗಳಿಂದ ಆದಷ್ಟು ಎಚ್ಚರವಾಗಿರಿ. ನಿಮ್ಮ ಸುತ್ತಮುತ್ತಲಿನವರಿಂದ ತೊಂದರೆಯಾಗಬಹುದು. ಮುಕ್ತ ಮನಸ್ಸನ್ನು ಬೆಳೆಸಿಕೊಳ್ಳುವಿರಿ. ಕುಟುಂಬದ ಸಮಸ್ಯೆಯನ್ನು ಹಾಗೆಯೇ ಬಿಟ್ಟುಬಿಡುವಿರಿ. ಜೀವನದಲ್ಲಿ ಚುರುಕುತನ ಕಂಡುಕೊಳ್ಳಲು ದಾರಿಯನ್ನು ಕಂಡುಕೊಳ್ಳಿ. ಒತ್ತಡವನ್ನು ಹೇರಿ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಅಲ್ಪ ಆದಾಯವನ್ನು ಹೆಚ್ಚು ಮಾಡಿ ಹೇಳುವಿರಿ. ನಿಮ್ಮ ವಿಚಾರದಲ್ಲಿ ಅನ್ಯರ ಹಸ್ತಕ್ಷೇಪ, ಮೇಲಧಿಕಾರಿಗಳೊಂದಿಗೆ ಗುಟ್ಟಾಗಿ ನಿಮ್ಮ ಬಗ್ಗೆ ಚಾಡಿ ಮಾತುಗಳು ಒಂದಾದಮೇಲೊಂದು ಬರುವುವು.
ಸಿಂಹ ರಾಶಿ: ಅತಿಯಾದ ಕಾಳಜಿಯೇ ನಿಮಗೆ ಮುಳ್ಳಾಗಬಹುದು. ಇಂದು ಯಾರನ್ನೂ ದೂಷಿಸುವುದು ನಿಮಗೆ ಹೇಳಿಸಿದ್ದಲ್ಲ. ಕೃಷಿಗೆ ಸಂಬಂಧಿಸಿದ ಕಾರ್ಯವನ್ನು ವೇಗವಾಗಿ ಮಾಡಿಕೊಳ್ಳಿ. ಯಾರನ್ನೋ ದೂಷಿಸಿ, ಇನ್ಯಾರಿಗೋ ಹತ್ತಿರವಾಗುವಿರಿ. ನಿಮ್ಮ ಇಂದಿನ ಆರ್ಥಿಕಲಾಭವು ನಿಮಗೆ ಹೆಚ್ಚು ಸುಖವನ್ನು ಕೊಡಬಹುದು. ಸಂತಾನವು ನಿಮ್ಮ ಖುಷಿಯನ್ನು ಹೆಚ್ಚಿಸುವುದು. ಮಕ್ಕಳಿಂದ ಅನಿರೀಕ್ಷಿತ ಉಡುಗೊರೆ ಸಿಗಬಹುದು. ಮಕ್ಕಳ ವಿವಾಹದ ಚಿಂತೆಯು ಕಾಡಬಹುದು. ಅಧಿಕಾರ ಮತ್ತು ವರ್ಚಸ್ಸು ಹೆಚ್ಚಿಸಿಕೊಳ್ಳುವ ಅವಕಾಶ ಬರುವುದು. ಸಕಾರಾತ್ಮಕ ಯೋಚನೆಯಿಂದ ಮುಂದಡಿ ಇಡಬೇಕಾದೀತು. ನಿಮ್ಮ ನಡೆಗೆ ತಾರ್ಕಿಕ ಸ್ಪರ್ಶವನ್ನು ಕೊಟ್ಟು ಮುಕ್ತಾಯ ಮಾಡುವಿರಿ. ನಿಮ್ಮ ಬುದ್ಧಿಶಕ್ತಿಗೆ ತಕ್ಕಂತೆ ಕೆಲಸದಲ್ಲಿ ಜಯವನ್ನು ಸಾಧಿಸುವಿರಿ. ಔಷಧದ ವ್ಯಾಪಾರದಿಂದ ನಿಮಗೆ ಅಧಿಕ ಲಾಭವಾಗಬಹುದು. ಧೈರ್ಯದಿಂದ ಮುನ್ನಡೆಯುವ ಇಚ್ಛಾಶಕ್ತಿಯನ್ನು ರೂಢಿಸಿಕೊಳ್ಳಿ. ಸ್ವಂತ ಉದ್ಯೋಗವನ್ನು ನಡೆಸಲು ಚಿಂತಿಸುವುದು ಉತ್ತಮ.
ಕನ್ಯಾ ರಾಶಿ: ವ್ಯಾಪಾರದಲ್ಲಿ ವಂಚನೆಯಾಗದಂತಹ ರೀತಿಯಲ್ಲಿ ತಂತ್ರವನ್ನು ರೂಪಿಸುವಿರಿ. ಸಹವಾಸವನ್ನು ಕಡಿಮೆ ಮಾಡಿ, ಒಳ್ಳೆಯ ವಿಚಾರಗಳ ಕಡೆ ಗಮನ ಅತ್ಯವಶ್ಯಕ. ಅನೇಕ ವಿಚಾರಗಳು ನಿಮ್ಮನ್ನು ಸೆಳೆಯಬಹುದು. ಕಡಿಮೆ ಖರ್ಚು ಮತ್ತು ಆದಾಯದ ಉದ್ಯಮಕ್ಕೆ ಆದ್ಯತೆ ಕೊಡುವಿರಿ. ನಿಮ್ಮ ಯಶಸ್ಸಿಗೆ ವಿರೋಧಿಗಳು ಅಡ್ಡಗಾಲು ಹಾಕಬಹುದು. ಸ್ಥಿರಾಸ್ತಿಯಲ್ಲಿ ಲಾಭವನ್ನು ಪಡೆಯಲು ತಂತ್ರವನ್ನು ಬಳಸುವಿರಿ. ಮಕ್ಕಳ ವಿಚಾರದಲ್ಲಿ ನೀವು ಬಹಳ ಮೃದು ಸ್ವಭಾವವಿರುವುದು. ವಿಶ್ವಾಸವನ್ನು ಗಟ್ಟಿಗೊಳಿಸುವ ಪ್ರಯತ್ನವನ್ನು ಮಾಡಲಿದ್ದೀರಿ. ಯಾವುದಕ್ಕೂ ಧೃತಿಗೆಡುವ ಅವಶ್ಯಕತೆ ಇರುವುದಿಲ್ಲ. ಉದ್ವೇಗದಿಂದ ಸಿಟ್ಟುಗೊಂಡು ಸಹೋದ್ಯೋಗಿಗಳಿಗೆ ಅಪ್ರಿಯರಾಗುವಿರಿ. ಉದ್ಯೋಗದ ಬದಲಾವಣೆಯ ವಿಚಾರದಲ್ಲಿ ನೀವು ದ್ವಂದ್ವವಿರಲಿದೆ. ಇಂದಿನ ಕೆಲಸಗಳು ಬೇಗ ಮುಕ್ತಾಯವಾಗಿ ನಿಶ್ಚಿಂತೆಯಿಂದ ಇರುವಿರಿ. ವೈದ್ಯಕೀಯ ಕ್ಷೇತ್ರದ ಕಲಿಕೆ ಬಹಳ ಕಷ್ಟವೆನಿಸಬಹುದು. ಕೆಲವು ವಿಚಾರದಲ್ಲಿ ಮರೆವೂ ನಿಮಗೆ ವರವಾದಂತೆ ಅನ್ನಿಸುವುದು. ವಿದ್ಯಾಭ್ಯಾಸಕ್ಕೆ ಮನೆಯನ್ನು ಬಿಟ್ಟು ದೂರವಿರಲು ನಿರ್ಧಾರ ಮಾಡುವಿರಿ.
ತುಲಾ ರಾಶಿ: ಒಪ್ಪಿಕೊಂಡ ಶರತ್ತಿಗೆ ಸರಿಯಾಗಿ ಕೆಲಸವನ್ನು ಮಾಡಲಾಗದು. ಸಭ್ಯತೆಯಿಂದ ಮಾತನಾಡಿ. ಇಂದು ನಿಮ್ಮ ಕಾರ್ಯದ ಹೊರೆ ಅಧಿಕಾವಾಗಿದ್ದರೂ ಅದನ್ನು ಮುಂದೂಡುವ ಪ್ರಯತ್ನ ಬೇಡ. ಅದು ಶೇಷವಾಗಿಯೇ ಉಳಿಯುತ್ತ ಹೋಗಬಹುದು. ಅಧಿಕ ಆದಾಯದಿಂದ ನಿಮ್ಮ ನೆಮ್ಮದಿಯ ಹರಣವಾಗಿದೆ ಎಂದು ಅನ್ನಿಸಲೂಬಹುದು. ಸಂಗಾತಿಯ ಮಾತನ್ನು ನಡೆಸಿಕೊಡಲಾಗದು. ಹಣಕ್ಕಾಗಿ ಕಿರಿಕಿರಗಳು ಅಧಿಕವಾದಂತೆ ತೋರುವುದು. ವಿದ್ಯಾರ್ಥಿಗಳು ಮನೋಭಾವವನ್ನು ಬದಲಿಸಿಕೊಳ್ಳುವ ಅಗತ್ಯವಿದೆ. ವರ್ತನೆಯು ಹಾದಿ ತಪ್ಪಿದಂತೆ ಹೆಚ್ಚಿನವರಿಗೆ ತೋರುವುದು. ನಿಮ್ಮ ತಾಳ್ಮೆಯೇ ಗುರಿಯನ್ನು ತಲುಪಲು ಸಹಕಾರಿಯಾಗಿರುವುದು. ಮಕ್ಕಳಿಗೆ ಯಾವುದಾದರೂ ಉತ್ತಮ ಹವ್ಯಾಸದ ರುಚಿ ಬರುವಂತೆ ಮಾಡುವಿರಿ. ಒತ್ತಡ ಕಡಿಮೆಯಾಗಿ ಮನೆಯಲ್ಲಿ ನೆಮ್ಮದಿಯಿಂದ ಇರುವಿರಿ. ಮಕ್ಕಳ ವೃತ್ತಿಯಲ್ಲಿ ಹೆಚ್ಚಿನ ಏಳ್ಗೆಯನ್ನು ಕಂಡು ಸುಖಿಸುವಿರಿ. ಬರಲಿರುವ ಹಣವನ್ನು ಸರಿಯಾಗಿ ವಿನಿಯೋಗಿಸಿ.
ವೃಶ್ಚಿಕ ರಾಶಿ: ಇಂದು ನಿಮ್ಮ ಸಹಾಯದಿಂದ ಸಂತೋಷಗೊಳ್ಳುವರು. ನಿಮ್ಮ ಕ್ರಿಯಾಶೀಲತೆಯನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುವಿರಿ. ನಿಮ್ಮ ಮೇಲಿನ ಗೌರವು ಈ ಕಾರಣಕ್ಕೆ ಕಡಿಮೆ ಆಗಬಹುದು. ಇಂದು ಮಡದಿ, ಮಕ್ಕಳಿಂದಲೇ ಟೀಕೆಯನ್ನು ಕೇಳಬೇಕಾದೀತು. ಮಾತುಗಳನ್ನು ಬದಲಿಸಿ, ಎಲ್ಲರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ. ಮಕ್ಕಳು ನಿಮ್ಮ ವರ್ತನೆಯನ್ನು ವಿರೋಧಿಸಬಹುದು. ಅಂತರಂಗವನ್ನು ಆದಷ್ಟು ಗೌಪ್ಯವಾಗಿ ಇಡುವುದು ಬೇಕಾದೀತು. ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಪಾರದರ್ಶಕತೆ ಮಾತ್ರ ಇರಲಿ. ಮಕ್ಕಳ ವಿವಾಹದ ಬಗ್ಗೆ ಚಿಂತಿಸಿ ಭಾವುಕರಾಗುವಿರಿ. ಸಹೋದ್ಯೋಗಿಗಳು ಉದ್ಯೋಗಕ್ಕೆ ಸಂಬಂಧಿಸಿದ ಗೊಂದಲವನ್ನು ಪರಿಹರಿಸಲು ಸಹಕಾರ ನೀಡಬಹುದು. ಪಿತ್ತಸಂಬಂಧಿ ರೋಗದ ಬಾಧೆ ಉಂಟಾಗಬಹುದು. ಕುಟುಂಬಕ್ಕಾಗಿ ಮಾಡಿದ ಸಾಲವನ್ನು ನೆನೆಸಿಕೊಂಡು ಸಂಕಟಪಡುವಿರಿ. ಸ್ತ್ರೀಯರಿಗೆ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆ ಸಿಗಬಹುದು. ಇನ್ನೊಬ್ಬರ ನೋವಿಗಿ ಸ್ಪಂದಿಸುವ್ವಿರಿ. ದಾಂಪತ್ಯದಲ್ಲಿ ಸಾಮರಸ್ಯದ ಅಗತ್ಯವು ಬಹಳ ಇರಲಿದೆ. ಅಸಹಜ ವ್ಯವಹಾರದಿಂದ ಹಿಂದೆ ಸರಿಯುವುದು ಉತ್ತಮ.
ಧನು ರಾಶಿ: ಹಲವರ ಮಾತು ನಿಮ್ಮ ನಿರ್ಧಾರಕ್ಕೆ ಮತ್ತಷ್ಟು ಗೊಂದಲವನ್ನು ಮಾಢಿತು. ಇಂದು ಯಾವ ಸವಾಲನ್ನು ಸ್ವೀಕರಿಸಿದರೂ ಜಯವನ್ನು ಕಾಣಬಲ್ಲಿರಿ. ಆದರೆ ಒಂದು ಮಿತಿಯಲ್ಲಿ ಇರಲಿ. ಬೇಸರವನ್ನು ಕಳೆಯಲು ಒಂಟಿಯಾಗಿ ದೂರ ಹೋಗಿ. ಧಾರ್ಮಿಕ ಕಾರ್ಯಗಳು ಶ್ರದ್ಧೆಯಿಂದ ಪೂರ್ಣವಾಗಲಿದೆ. ಬಹಳ ದಿನಗಳ ಅನಂತರ ಸಹೋದರರ ಭೇಟಿಯಾಗಲಿದ್ದು, ಸಂತೋಷವು ಇಮ್ಮಡಿಸುವುದು. ರಾಜಕೀಯ ಪ್ರೇರಿತ ಕಾರ್ಯದಲ್ಲಿ ಸಿಕ್ಕಿಕೊಳ್ಳುವಿರಿ. ಸಕಾರಾತ್ಮಕವಾಗಿ ಚಿಂತಿಸಿ ಕಾರ್ಯದಲ್ಲಿ ತೊಡಗಿಕೊಳ್ಳಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಇರಲಿದೆ. ಸ್ಥಿರಾಸ್ತಿಯನ್ನು ಖರೀದಿಸಲು ಉತ್ತಮ ಕಾಲವಿದು. ಗೃಹ ನಿರ್ಮಾಣದಂತಹ ಕಾರ್ಯಕ್ಕೆ ಕೈ ಹಾಕುವುದು ಬೇಡ. ಭೂಮಿಯ ವಿವಾದ ಹೊಸದಾಗಿ ಆರಂಭವಾಗಲಿದೆ. ತೀರ್ಥ ಕ್ಷೇತ್ರದಲ್ಲಿ ವಾಸಮಾಡುವ ಸಂದರ್ಭವು ಬರಬಹುದು. ಪುಣ್ಯವೆಂದು ಭಾವಿಸಿ. ವ್ಯವಹಾರದಲ್ಲಿ ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ಅನಗತ್ಯ ವಾದ ವಿವಾದಗಳಿಂದ ದೂರವಿರಿ.
ಮಕರ ರಾಶಿ: ನೀವು ಇಂದು ನ್ಯಾಯೋಚಿತ ಮಾತುಗಳನ್ನಾಡುವಿರಿ. ಮನೆಯಲ್ಲಿಯೇ ಕುಳಿತು ಉದ್ಯೋಗವನ್ನು ಮಾಡುವ ಅವಕಾಶವು ಸಿಗಲಿದೆ. ಅಧಿಕ ಖರ್ಚನ್ನು ನಿಯಂತ್ರಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಮಾತು ಎಷ್ಟೇ ಸಹೃದಯತೆಯಿಂದ ಇದ್ದರೂ ಕೇಳಿಸಿಕೊಳ್ಳುವ ಸಹೃದಯರು ಸಿಗುವುದಿಲ್ಲ. ಉದ್ವಿಗ್ನತೆಯು ಉಂಟಾದಾಗ ಏನನ್ನಾದರೂ ಮಾಡಿಕೊಳ್ಳುವಿರಿ. ಸಿಗಲಿರುವ ಸ್ಥಿರಾಸ್ತಿಯು ಕೈತಪ್ಪಿಹೋಗಬಹುದು. ನಿಮ್ಮ ಸಮಸ್ಯೆಗಳಿಗೆ ಹಲವರು ಹಲವು ರೀತಿಯ ಸಲಹೆಗಳನ್ನು ನೀಡಬಹುದು. ಸಲಹೆಯನ್ನು ಏಕಚಿತ್ತದಿಂದ ಸ್ವೀಕರಿಸಿ, ನಿಮ್ಮ ವಿವೇಕದಿಂದ ಬಳಸಿಕೊಳ್ಳಿ. ಅನ್ಯರಿಂದ ಹಣಕಾಸಿನ ವಿಷಯದಲ್ಲಿ ಮೋಸ ಹೋಗುವ ಸನ್ನಿವೇಶವು ಬರಬಹುದು. ಸಾಹಿತ್ಯಾಸಕ್ತಿರಿಗೆ ಮೇಲುಗೈ ಸಾಧಿಸುವ ಸನ್ನಿವೇಶವು ಸೃಷ್ಟಿಯಾಗುವುದು. ಎಲ್ಲವೂ ನಿಮ್ಮಿಂದ ಆದರೂ ಹೇಳಿಕೊಳ್ಳುವಾಗ ಗೌಣವಾಗಿರಲಿ. ದಾಂಪತ್ಯದಲ್ಲಿ ಸಲುಗೆಯು ಅತಿಯಾಗಲಿದೆ. ತಂದೆಯಿಂದ ಉದ್ಯಮಕ್ಕೆ ಧನವನ್ನು ನಿರೀಕ್ಷಿಸುವಿರಿ.
ಕುಂಭ ರಾಶಿ: ಕಾರ್ಯದಲ್ಲಿ ಬರುವ ಸಣ್ಣ ವಿಘ್ನಗಳಿಗೆ ಗಂಭೀರವಾದ ಆಲೋಚನೆ ಬೇಡ. ಮಾನಸಿಕ ಸ್ಥಿರತೆಯ ಪರೀಕ್ಷೆಯಾಗಲಿದೆ. ಇಂದು ಉದ್ಯಮವು ಆಹಾರಕ್ಕೆ ಸಂಬಂಧಿಸಿದ್ದಾರೆ ಹೆಚ್ಚಿನ ಅನುಕೂಲತೆಗಳು ಒದಗಿ ಬರಬಹುದು. ಕಲಿಕೆಯಲ್ಲಿ ಚುರುಕುತನವನ್ನು ರೂಢಿಸಿಕೊಳ್ಳುವುದು ಭವಿಷ್ಯದ ದೃಷ್ಟಿಯಿಂದ ಉತ್ತಮ. ಇಂದು ನಿಮ್ಮಲ್ಲಿ ಆತ್ಮಸ್ಥೈರ್ಯವು ಇರಲಿದೆ. ಮಾನಸಿಕವಾಗಿ ಸದೃಢರಾಗುವಿರಿ. ಗುರಿಯ ಸಾಧನೆಗೆ ಸಾರ್ವಜನಿಕ ಸಂಪರ್ಕವನ್ನು ಕಳೆದುಕೊಳ್ಳುವಿರಿ. ನೀವು ಅಂದಿಕೊಂಡಂತೆ ಸಹೋದರಿಯರಿಂದ ಸಹಕಾರ ದೊರೆಯುವುದಿಲ್ಲ. ನಿಮ್ಮ ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ. ತಾಯಿಯ ಕಡೆಯಿಂದ ನಿಮಗೆ ಆರ್ಥಿಕ ಸಹಾಯವು ಸಿಗಬಹುದು. ಹೊಸ ವಿಚಾರಗಳ ಕಡೆ ಹೊರಳುವ ಆಲೋಚನೆ ಮನಸ್ಸಿಗೆ ಬರಲಿದೆ. ನಿಮ್ಮಿಂದ ಆಗದೇ ಇರುವ ಕಾರ್ಯ ಎಂದು ಯಾವುದೂ ಇರದು. ಆದರೆ ಕೆಲವಕ್ಕೆ ಸಮಯ ಹೆಚ್ಚು ಬೇಕು ಅಷ್ಟೇ. ಕುಟುಂಬದಲ್ಲಿ ನಿಮ್ಮ ಬಗ್ಗೆ ಭಯವು ಇರಲಿದೆ.
ಮೀನ ರಾಶಿ: ಅತಿಥಿಗಳ ಆಗಮನ ಹಾಗೂ ಅವರಿಗೆ ನಿಮ್ಮಿಂದ ಪ್ರೀತಿಯ ಸತ್ಕಾರ. ನಿಮ್ಮ ಇಂದಿನ ಕಾರ್ಯಗಳು ಸಫಲವಾಗುವುದೇ ಎಂಬ ಅನುಮಾನವು ನಿಮ್ಮನ್ನು ಅತಿಯಾಗಿ ಕಾಡಬಹುದು. ಕಲಿತ ವಿದ್ಯೆಯ ಪ್ರದರ್ಶನಕ್ಕೆ ಅವಕಾಶವು ಸಿಗಲಿದೆ. ನಿಮ್ಮ ದೈನಂದಿನ ಕಾರ್ಯದಲ್ಲಿ ವ್ಯತ್ಯಾಸ. ಆಧ್ಯಾತ್ಮಿಕ ಚಿಂತನೆಗಳಿಂದ ಮನಸ್ಸಿಗೆ ಶಾಂತತೆಯನ್ನು ಪಡೆಯುವಿರಿ. ಮನೆ ಹಿರಿಯರ ಆರೋಗ್ಯದ ಕಡೆ ಗಮನ ನೀಡಿ. ನಿಮ್ಮ ಪರಿಶ್ರಮಕ್ಕೆ ತಕ್ಕಷ್ಟು ಹಣ ಬರದೆ ತೊಂದರೆ ಅನುಭವಿಸುವಿರಿ. ಮಂದಗತಿಯಲ್ಲಿ ಸಾಗುವ ಕೆಲಸಗಳಿಗೆ ವೇಗವನ್ನು ಕೊಡುವಿರಿ. ನಿಮಗೆ ಆತ್ಮತೃಪ್ತಿಯು ಇರುವುದು. ಎಂತ ಅನುಭವವವಿದ್ದರೂ ವಾಹನ ಚಲಾಯಿಸುವಾಗ ಎಚ್ಚರ ಇರಲಿ. ದುರ್ಬಲರಿಗೆ ಧೈರ್ಯವನ್ನು ಕೊಡುವಿರಿ. ಉದ್ಯಮಿಗಳಿಗೆ ಅಧಿಕಾರಿ ವರ್ಗದ ಭಯವು ಕಾಡುವ ಸಾಧ್ಯತೆ ಹೆಚ್ಚಿದೆ. ಏಕತಾನತೆಯ ಜೀವನವು ನಿಮಗೆ ಬೇಸರವನ್ನು ಕೊಟ್ಟಿದ್ದು, ಹೊಸತನ್ನು ನೀವು ಬಯಸುವಿರಿ. ಇಂದು ನೀವು ಹೊಸ ಹೂಡಿಕೆಗೆ ಮನಸ್ಸು ಮಾಡುವಿರಿ.
-ಲೋಹಿತ ಹೆಬ್ಬಾರ್ – 8762924271 (what’s app only)