Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today 25 March: ಈ ರಾಶಿಯವರು ಇಂದು ವಾಹನ ಚಲಾಯಿಸುವಾಗ ಎಚ್ಚರಿಕೆ ವಹಿಸಿ

ಶಾಲಿವಾಹನ ಶಕವರ್ಷ 1947ರ ಉತ್ತರಾಯಣ, ಶಿಶಿರ ಋತುವಿನ ಫಾಲ್ಗುಣ ಮಾಸ ಕೃಷ್ಣ ಪಕ್ಷದ ಏಕಾದಶೀ ತಿಥಿ, ಮಂಗಳವಾರ ಕಾರ್ಯಗಳನ್ನು ನಿರ್ದಿಷ್ಟ ಮಾಡಿಕೊಳ್ಳುವುದು, ಮನಸ್ಸಿಗೆ ಬಂದಂತೆ ಹರಟುವುದು, ಸ್ನೇಹಿತರ ವಂಚನೆಯಿಂದ ನಿಮಗೆ ಬೇಸರವಾಗುವುದು. ಒಡಹುಟ್ಟಿದವರೊಂದಿಗಿನ ಸಂಬಂಧವು ಸುಧಾರಿಸುತ್ತದೆ. ಈ ದಿನದ ಭವಿಷ್ಯ ಇಲ್ಲಿದೆ.

Horoscope Today 25 March: ಈ ರಾಶಿಯವರು ಇಂದು ವಾಹನ ಚಲಾಯಿಸುವಾಗ ಎಚ್ಚರಿಕೆ ವಹಿಸಿ
ಈ ರಾಶಿಯವರು ಇಂದು ವಾಹನ ಚಲಾಯಿಸುವಾಗ ಎಚ್ಚರಿಕೆ ವಹಿಸಿ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಗಂಗಾಧರ​ ಬ. ಸಾಬೋಜಿ

Updated on: Mar 25, 2025 | 12:02 AM

ಬೆಂಗಳೂರು, ಮಾರ್ಚ್​ 25, ನಿತ್ಯ ಪಂಚಾಗ: ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಸೌರ ಮಾಸ : ಮೀನ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಕೃಷ್ಣ, ವಾರ : ಮಂಗಳ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ಧನಿಷ್ಠಾ, ಯೋಗ : ಶಿವ, ಕರಣ : ಬವ, ಸೂರ್ಯೋದಯ – 06 – 34 am, ಸೂರ್ಯಾಸ್ತ – 06 – 42 pm, ಇಂದಿನ ಶುಭಾಶುಭಕಾಲ : ರಾಹು ಕಾಲ 15:41 – 17:12, ಯಮಘಂಡ ಕಾಲ 09:37 – 11:08, ಗುಳಿಕ ಕಾಲ 12:39 – 14:10.

ಮೇಷ ರಾಶಿ: ಅತಿಯಾದ ಆಸೆ ಇಲ್ಲದೇ ಇದ್ದರೂ ಅಲ್ಪಕ್ಕೆ ತೃಪ್ತಿ ಇರದು. ನಿಮ್ಮ ಸಂಗಾತಿಯ ಜೊತೆ ಸಣ್ಣ ವಿಷಯಗಳಿಗೆ ಆಗುವ ವಿವಾದವನ್ನು ತಪ್ಪಿಸಿ. ವಿದ್ಯಾರ್ಥಿಗಳು ಕಲಿಕೆಗೆ ಹೊಸ ಸಾಧ್ಯತೆಗಳು ಹುಡುಕಿಕೊಳ್ಳುವುದು ಅಗತ್ಯ. ಸಂಬಂಧಿಕರ ಜೊತೆ ವ್ಯವಹರಿಸುವುದನ್ನು ತಪ್ಪಿಸಿ, ಇಲ್ಲವಾದರೆ ಸಂಬಂಧವು ಹದಗೆಡಬಹುದು. ನಿಮ್ಮ ಎಂದೋ ಆರಂಭಿಸಬೇಕೆಂದುಕೊಂಡ ಯೋಜನೆಗಳನ್ನು ಇಂದು ಪ್ರಾರಂಭಿಸಬಹುದು. ವಾಹನಗಳ ಬಳಕೆಯಲ್ಲಿ ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಪುಣ್ಯ ಪ್ರದೇಶಗಳಿಗೆ ಪ್ರಯಾಣಿಸಿ ದಾನ-ಧರ್ಮದಲ್ಲಿ ಭಾಗಿಯಾಗಿಯಾಗುವಿರಿ. ಅತಿಥಿಯ ಆಗಮನವು ನಿಮಗೆ ಸಂತೋಷವನ್ನು ತರುತ್ತದೆ. ಯಾವುದೇ ಅವಸರಕ್ಕೆ ಒಳಗಾಗದೇ ಮಾನಸಿಕವಾಗಿ ಋಣಾತ್ಮಕ ಚಿಂತನೆಗಳು ನಿಮ್ಮ ಮನಸ್ಸನ್ನು ಕೊರೆಯಲಿವೆ. ನಿಮ್ಮ ಆಸಕ್ತಿಯಿಂದ ಉದ್ಯೋಗ ಕ್ಷೇತ್ರದಲ್ಲಿ ಕೆಲವು ಬದಲಾವಣೆಗಳಿರಬಹುದು. ನಿಮ್ಮ ಸಹೋದ್ಯೋಗಿಗಳು ನಿಮ್ಮ ಬಗ್ಗೆ ಅಸೂಯೆ ಪಡಬಹುದು. ಆದರೆ ನಿಮ್ಮ ಉತ್ತಮ ನಡವಳಿಕೆಯನ್ನು ನೋಡಿ, ಜನರು ನಿಮ್ಮನ್ನು ಒಲಿಸಿಕೊಳ್ಳಲು ಬಯಸುತ್ತಾರೆ. ಇಂದು ಅಸಂಗತ ವಿಚಾರದಲ್ಲಿ ಆಸಕ್ತಿ ಕಡಿಮೆ.

ವೃಷಭ ರಾಶಿ: ಸ್ನೇಹಿತರ ವಂಚನೆಯಿಂದ ನಿಮಗೆ ಬೇಸರವಾಗುವುದು. ಒಡಹುಟ್ಟಿದವರೊಂದಿಗಿನ ಸಂಬಂಧವು ಸುಧಾರಿಸುತ್ತದೆ. ವೃತ್ತಿಯಲ್ಲಿ ಮೇಲಧಿಕಾರಿಗಳಿಂದ ಭಯ. ಪ್ರೀತಿಯಲ್ಲಿ ಮಾತಿನ ಕಠೋರತೆಯಿಂದ ಸಂಬಂಧಗಳಲ್ಲಿ ಬಿರುಕು ಬರಬಹುದು.ತಾಯಿಯ ಕಡೆಯಿಂದ ಸಂಬಂಧಗಳು ಸುಧಾರಿಸುತ್ತವೆ. ವ್ಯಾಪಾರ, ವ್ಯವಹಾರದಲ್ಲಿ ಡೋಲಾಯಮಾನವಾದ ಸ್ಥಿತಿ ಇರುವುದು. ವೈವಾಹಿಕ ಜೀವನವನ್ನು ಇಂದು ಕೂಡ ಅತ್ಯಂತ ಸಂತೋಷದಿಂದ ಕಳೆಯುವಿರಿ. ಅತಿಥಿ ಸತ್ಕಾರದಿಂದ ಒತ್ತಡ ದೂರ. ಆರೋಗ್ಯದ ವಿಷಯದಲ್ಲಿ ಇಂದು ಸ್ವಲ್ಪ ತೊಂದರೆಯಾಗಬಹುದು. ಆರ್ಥಿಕವಾಗಿ ಖರ್ಚು ವೆಚ್ಚಗಳಲ್ಲಿ ಬಲವಾದ ಹಿಡಿತವಿರಲಿದೆ. ಯಾರನ್ನೂ ಓಲೈಸುವ ಬಗ್ಗೆ ಆಸಕ್ತಿ ಇರದು. ವಿದ್ಯಾರ್ಥಿಗಳಿಗೆ ಕರ್ತವ್ಯವನ್ನು ನೆನಪಿಸುವಂತಾಗುತ್ತದೆ. ನಿಮ್ಮ ಸ್ಥಗಿತಗೊಂಡ ಕಾರ್ಯಗಳನ್ನು ಪೂರ್ಣಗೊಳ್ಳಬಹುದು. ಕೃಷಿಯ ಬಗ್ಗೆ ಅಧಿಕ ಆಸಕ್ತಿ. ಇಂದು ನೀವು ಸಂತೋಷವಾಗಿರುವುದರಿಂದ ಎಲ್ಲದರಲ್ಲೂ ಯಶಸ್ಸನ್ನು ಪಡೆಯುತ್ತೀರಿ.

ಮಿಥುನ ರಾಶಿ: ಶಾರೀರಿಕ ದುರ್ಬಲತೆಯನ್ನು ದೂರಮಾಡಿಕೊಳ್ಳುವಿರಿ. ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮ ಖ್ಯಾತಿ ಹೆಚ್ಚಾಗುತ್ತದೆ. ಜೀವನೋಪಾಯ ಕ್ಷೇತ್ರದಲ್ಲಿ ಹೊಸ ಪ್ರಯತ್ನಗಳು ಅವಶ್ಯಕ. ನೌಕರರಿಂದ ಗೌರವವು ನಿಮಗೆ ಸಿಗುತ್ತದೆ. ಜೀರ್ಣಕ್ರಿಯೆ ಮತ್ತು ಕಣ್ಣಿನ ಅಸ್ವಸ್ಥತೆಗಳ ಸಮಸ್ಯೆಗಳಾಗಬಹುದು. ನೀವು ಸೇವಿಸುವ ಆಹಾರ ಮತ್ತು ಪಾನೀಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ. ಈ ಸಮಯದಲ್ಲಿ, ಹೊರಗೆ ಏನನ್ನಾದರೂ ತಿನ್ನುವುದನ್ನು ತಪ್ಪಿಸಿ. ಮದುವೆಯಾಗಲು ಪ್ರಯತ್ನಿಸುವವವರಿಗೆ ಒಳ್ಳೆಯ ಸುದ್ದಿ ಸಿಗುತ್ತದೆ. ಯಾವುದಾದರೂ ಕಾರ್ಯವನ್ನು ಮಾಡುವ ಮುನ್ನ ಒಮ್ಮೆ ಯೋಚಿಸಿ ನಂತರ ನಿರ್ಧಾರವನ್ನು ತೆಗೆದುಕೊಳ್ಳಿ. ಹೆತ್ತವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಅತಿಯಾದ ಆಸೆಯು ತಾನಾಗಿಯೇ ನಿಯಂತ್ರಣಕ್ಕೆ ಬರಲಿದೆ. ಯಾವುದೇ ಜಗಳ ಮತ್ತು ವಿವಾದಗಳಿಗೆ ಸಿಲುಕಬೇಡಿ. ಉದ್ಯೋಗಿಗಳಿಗೆ ಉದ್ಯಮದಲ್ಲಿ ಉತ್ತಮ ಅವಕಾಶಗಳು ಬರಲಿವೆ. ಮೌಲ್ಯಯುತವಾದ ಏನನ್ನಾದರೂ ಪಡೆಯುವ ಬಯಕೆಯನ್ನು ಇಂದು ಪೂರೈಸಬಹುದು.

ಕರ್ಕಾಟಕ ರಾಶಿ: ಸಣ್ಣ ಅನಾರೋಗ್ಯವನ್ನೂ ನಿರ್ಲಕ್ಷ್ಯದಿಂದ ದೊಡ್ಡ ಮಾಡಿಕೊಳ್ಳುವಿರಿ. ವಿದ್ಯಾರ್ಥಿಗಳು ಯಶಸ್ಸಿಗಾಗಿ ಹೆಚ್ಚು ಶ್ರಮಿಸಬೇಕಾಗಬಹುದು. ನಿಮ್ಮ ಕೆಲಸವನ್ನು ನೋಡಿದ ವಿರೋಧಿಗಳು ನಿಮ್ಮನ್ನು ಹೊಗಳುತ್ತಾರೆ. ವ್ಯವಹಾರವನ್ನು ಹೆಚ್ಚಿಸಲು ಕುಟುಂಬದ ಜೊತೆ ಸಮಾಲೋಚನೆ ಮಾಡಬೇಕಾಗುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಿಮಗೆ ಅವಕಾಶಗಳು ಸಿಗುತ್ತವೆ. ವೃತ್ತಿರಂಗದಲ್ಲಿ ಪ್ರತಿಷ್ಠಿತರ ಸಹಯೋಗದಿಂದ ಕಾರ್ಯಸಿದ್ಧಿ. ಹಣಕಾಸಿನ ವಿಚಾರದಲ್ಲಿ ಮುಖ್ಯವಾಗಿ ಖರ್ಚು ವೆಚ್ಚಗಳ ಬಗ್ಗೆ ಯೋಚಿಸುವಂತಾಗಲಿದೆ. ಕೆಲವರ ಮಾತು ನಿಮ್ಮನ್ನು ಇಬ್ಬಂದಿಯನ್ನಾಗಿ ಮಾಡಬಹುದು. ರಾಜಕೀಯವಾಗಿ ಮುನ್ನಡೆಯ ದಿನಗಳಿವು. ನಿಮ್ಮ ವ್ಯಾಪಾರ ಯೋಜನೆಗಳು ಇದೀಗ ಉತ್ತೇಜನವನ್ನು ಪಡೆಯುತ್ತವೆ ಮತ್ತು ನೀವು ಹೆಚ್ಚಿನ ಪ್ರಮಾಣದ ಲಾಭವನ್ನು ಸಹ ಪಡೆಯುತ್ತೀರಿ. ಗೊತ್ತಿದೂ ಮಾಡುವ ಮೂರ್ಖತನಕ್ಕೆ ಅನುಭವಿಸುವುದೊಂದೇ ದಾರಿ. ಭಾವನಾತ್ಮಕವಾಗಿ ತೆಗೆದುಕೊಳ್ಳುವ ನಿರ್ಧಾರಗಳು ನಿಮ್ಮ ಸ್ಥಾನವನ್ನು ದುರ್ಬಲಗೊಳಿಸಬಹುದು.

ಸಿಂಹ ರಾಶಿ: ಕೇವಲ ಪುರುಷ ಪ್ರಯತ್ನದಿಂದ ಯಾವುದೂ ಸಾಧ್ಯವಾಗದು. ದೈವಬಲವೂ ಸೇರಬೇಕು ಎಂಬ ಮಾನಸಿಕತೆ ಇದ್ದರೆ ಇಂದಿನ ಯೋಜನೆಯಿಂದ ಕಾರ್ಯಸಿದ್ಧಿ. ಸಂಗಾತಿಯ ಬೆಂಬಲವನ್ನು ದುರುಪಯೋಗ ಮಾಡಿಕೊಳ್ಳುವುದು ಬೇಡ. ಪ್ರೇಮ ಅನುಭವಗಳು ಕಹಿಯಾದ ಕಾರಣ ಪ್ರೇಮದ ಕೊಡು ಕೊಳ್ಳುವಿಕೆಯಿಂದ ದೂರ. ನ್ಯಾಯಾಂಗಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನೀವು ಲಾಭ ಪಡೆಯುತ್ತೀರಿ. ಉದ್ಯೋಗ ಕ್ಷೇತ್ರದಲ್ಲಿ ಎದುರಾಗುವ ಸಮಸ್ಯೆಗಳಿಂದ ನಿಮಗೆ ಪರಿಹಾರ ಸಿಗುತ್ತದೆ. ವಾಸಿಸುವ ಸ್ಥಳದಲ್ಲಿ ನೆಮ್ಮದಿ ದೂರಾದ ಅನುಭವವಾಗಬಹುದು. ನಿಮ್ಮ ಧಾರ್ಮಿಕ ಚಟುವಟಿಕೆಗಳನ್ನು ನೀವು ಗಮನದಲ್ಲಿರಿಸಿಕೊಳ್ಳುತ್ತೀರಿ. ನಿಮ್ಮ ವಿರೋಧಿಗಳಿಗೆ ನೀವು ತಲೆನೋವಾಗಿ ಉಳಿಯುತ್ತೀರಿ. ನಿಮ್ಮ ಮಕ್ಕಳ ಆರೋಗ್ಯದ ಬಗ್ಗೆ ನಿಮಗೆ ಸ್ವಲ್ಪ ಕಾಳಜಿ ಇರಬಹುದು. ಪ್ರೀತಿಯ ಜೀವನದಲ್ಲಿ ಹೆಚ್ಚಿನ ನಿರೀಕ್ಷೆಗಳು ನಿರಾಸೆಗೆ ಕಾರಣವಾಗಬಹುದು. ಕೊಡು ಕೊಳ್ಳುವ ವ್ಯವಹಾರಗಳಲ್ಲಿ ಲಾಭ ಕಂಡು ಬಂದರೂ, ಜಾಗರೂಕತೆ ವಹಿಸುವುದು ಅಗತ್ಯ. ಬಲಗಣ್ಣಿನ ತೊಂದರೆ ಕಾಣಿಸುವುದು.

ಕನ್ಯಾ ರಾಶಿ: ಇಂದು ನಿಮ್ಮ ಸುತ್ತ ಆಹ್ಲಾದಕರ ವಾತಾವರಣ ಇರುವಂತೆ ಬಯಸುವಿರಿ. ಮಂಗಳ ಕಾರ್ಯದಿಂದಾಗಿ, ಕುಟುಂಬ ಸದಸ್ಯರ ಸಂತೋಷ ಹೆಚ್ಚಾಗುತ್ತದೆ. ತಲೆಗೆ ಗಾಯಮಾಡಿಕೊಳ್ಳುವ ಸಂದರ್ಭವಿರುವುದು. ಹಲವು ದಿನಗಳಿಂದ ನಡೆಯುತ್ತಿರುವ ವಹಿವಾಟು ಪ್ರಮುಖ ಸಮಸ್ಯೆಯನ್ನು ಪರಿಹರಿಸಬಹುದು. ಕೈಯಲ್ಲಿ ಸಾಕಷ್ಟು ಹಣವನ್ನು ಹೊಂದಿರುವ ನೀವು ನೆಮ್ಮದಿಯಿಂದ ಇರುವಿರಿ. ಕೆಲವು ಕೆಲಸದ ಭರದಲ್ಲಿ ಇಂದು ಸಮಯವು ನಿಮ್ಮದಾಗಿರದು. ವಾತಾವರಣವು ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಸಂಗಾತಿಯ ಸಾಕಷ್ಟು ಬೆಂಬಲ ಮತ್ತು ಒಡನಾಟವನ್ನು ಪಡೆಯುತ್ತೀರಿ. ದಾಂಪತ್ಯದಲ್ಲಿ ಪರರ ದೂಷಣೆ ಹೆಚ್ಚಾಗಿದ್ದು, ಆತ್ಮಾವಲೋಕನದ ಅವಶ್ಯಕತೆ ಇರುವುದು. ಮನೆಯಲ್ಲಿ ಸಹಕಾರ ಮತ್ತು ಸಂತೋಷದ ವಾತಾವರಣವೂ ಇರುತ್ತದೆ. ಜೀವನ ಸಂಗಾತಿಯಿಂದ ಸಂಪೂರ್ಣ ಬೆಂಬಲ ಸಿಗುತ್ತದೆ. ಶುಭ ಕಾರ್ಯದ ಚಿಂತನೆ ಅನಿರೀಕ್ಷಿತವಾಗಿ ನಡೆಯಲಿದೆ. ಉದ್ಯಮ, ವ್ಯವಹಾರದಲ್ಲಿಯೂ ಹೊಸ ಅಧ್ಯಾಯ ತೆರೆಯಲಿದೆ. ಹೂಡಿಕೆ ವಿಸ್ತರಣೆಗೆ ಅವಸರ ಬೇಡ.

ತುಲಾ ರಾಶಿ: ನಿಮ್ಮ ವೈಯಕ್ತಿಕ ಸಮಯವನ್ನು ಯಾರಾದರೂ ಕಿತ್ತುಕೊಳ್ಳಬಹುದು. ಬೇಸರದಿಂದ ಪ್ರಯೋಜನವೂ ಆಗದು. ಸಣ್ಣ ಕಾರಣಕ್ಕೆ ಜೀವನ ಸಂಗಾತಿಯಿಂದ ದೂರಾಗುವ ಸಾಧ್ಯತೆಯಿದೆ. ಸ್ನೇಹಿತರಿಗೆ ಸಹಾಯ ಮಾಡಲು ಅವಕಾಶವಿರುತ್ತದೆ. ಉದ್ಯೋಗ ಮತ್ತು ವ್ಯವಹಾರ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಯತ್ನಗಳಿಂದ ಊಹಿಸಲಾಗದ ಯಶಸ್ಸನ್ನು ಸಾಧಿಸುವಿರಿ. ಯಾವುದೇ ಆರ್ಥಿಕ ವೆಚ್ಚದಲ್ಲಿ ಮಾತಿನ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳಬೇಡಿ. ಇಂದು ತಪ್ಪಾದ ಹೂಡಿಕೆಯಿಂದ ಹಣೆಕಳೆದುಕೊಳ್ಳುವಿರಿ. ಇಲ್ಲದಿದ್ದರೆ ನಷ್ಟವು ನಿಮ್ಮದಾಗುತ್ತದೆ. ಪ್ರೀತಿಪಾತ್ರರನ್ನು ಭೇಟಿ ಮಾಡಲು ನಿಮ ಇಷ್ಟವಾಗುವುದು. ನೀವು ಮಕ್ಕಳ ಕಡೆಯಿಂದ ತೃಪ್ತಿದಾಯಕ ಒಳ್ಳೆಯ ಸುದ್ದಿ ಪಡೆಯುತ್ತೀರಿ. ಕಾನೂನು ವಿವಾದ ಅಥವಾ ಮೊಕದ್ದಮೆಯಲ್ಲಿನ ಗೆಲುವು ನಿಮಗೆ ಸಂತೋಷಕ್ಕೆ ಕಾರಣವಾಗಬಹುದು. ವ್ಯಾಪಾರ, ವ್ಯವಹಾರಗಳ ಮುನ್ನಡೆಗಾಗಿ ಪ್ರಯಾಣದ ಮಾತುಕತೆಯ ಸಾಧ್ಯತೆ ಇರುತ್ತದೆ. ದಾಯಾದಿಗಳ ಆಗಮನ ಕಿರಿಕಿರಿ ತರಲಿದೆ.

ವೃಶ್ಚಿಕ ರಾಶಿ: ಸಮಯವಾದಾಗ ಬರುವ ಸಂಬಂಧಕ್ಕಿಂತ ಸಮಯ ಮಾಡಿಕೊಂಡು ಬರುವ ಸಂಬಂಧಕ್ಕೆ ಬೆಲೆ ಹೆಚ್ಚಾಗಿರುವುದು. ಹೊಸ ಆದಾಯದ ಮೂಲಗಳನ್ನು ಸೃಷ್ಟಿಸಿಕೊಳ್ಳುವಿರಿ. ಮಾತಿನ ಮೃದುತ್ವವು ನಿಮಗೆ ಗೌರವವನ್ನು ತರುತ್ತದೆ. ಕಣ್ಣು ನೋವು ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಮತ್ತು ಕುಟುಂಬದ ಜವಾಬ್ದಾರಿಗಳನ್ನು ಪೂರೈಸಲಾಗುವುದು. ಒಂದರ ಆಳ ತಪ್ಪಿದರೂ ಮತ್ತೊಂದರಲ್ಲಿ ಬೀಳಬೇಕಾಗುವುದು. ವಾಹನ ಬಳಕೆಯಲ್ಲಿ ಎಚ್ಚರಿಕೆಯಿಂದ ಬಳಸಿ, ಆಕಸ್ಮಿಕ ವಾಹನ ವೈಫಲ್ಯದಿಂದಾಗಿ ವೆಚ್ಚಗಳು ಹೆಚ್ಚಾಗಬಹುದು. ನಿಮ್ಮ ಶತ್ರುಗಳು ತಮ್ಮ ನಡುವೆ ಹೋರಾಡುವ ಮೂಲಕ ನಾಶವಾಗುತ್ತಾರೆ. ವಿದೇಶದಿಂದ ವ್ಯಾಪಾರವು ಸಕಾರಾತ್ಮಕ ಫಲಿತಾಂಶಗಳನ್ನು ತರುತ್ತದೆ. ಆತ್ಮೀಯ ವ್ಯಕ್ತಿ ಸುವಾರ್ತೆಯನ್ನು ಸ್ವೀಕರಿಸುತ್ತಾನೆ. ವಿಶ್ಲೇಷಣಾ ಸಾಮರ್ಥ್ಯಕ್ಕೆ ಪ್ರಶಂಸೆ ಸಿಗಲಿದೆ. ಚಿಂತಿತ ವ್ಯವಹಾರಗಳು ಹಂತ ಹಂತವಾಗಿ ಬಲಗೊಳ್ಳಲಿವೆ. ಅದೃಷ್ಟ ಬಲದಿಂದ ಹೂಡಿಕೆಗಳು ಲಾಭದಾಯಕವಾಗಲಿವೆ. ನಿಮ್ಮ ಸ್ಥಾನವು ಆರ್ಥಿಕವಾಗಿ ಸದೃಢವಾಗಿರುತ್ತದೆ.

ಧನು ರಾಶಿ: ಸ್ತ್ರೀಯರು ಸ್ವತಂತ್ರವಾಗಿ ಅಲ್ಪ ಕಾಲ ಕಳೆಯುವ ಮನೋಭಿಲಾಷೆಯನ್ನು ಹೊಂದುವರು. ಆಸ್ತಿ ಮತ್ತು ಜೀವನೋಪಾಯ ಕ್ಷೇತ್ರದಲ್ಲಿ ಪ್ರಗತಿ ಪಡೆಯುವ ಸಾಧ್ಯತೆ ಇದೆ. ಪ್ರತಿಷ್ಠೆ ಹೆಚ್ಚಾಗುತ್ತದೆ ಮತ್ತು ಮಗುವಿನ ಜವಾಬ್ದಾರಿಯನ್ನು ಪೂರೈಸಬಹುದು. ಹೊಸ ಉದ್ಯಮಿಗಳು ಪ್ರಯೋಜನ ಪಡೆಯಲಿದ್ದಾರೆ. ಪ್ರಾಣಿಗಳಿಂದ ಆಪತ್ತು ಬರಬಹುದು. ಕಾರ್ಯಕ್ಷೇತ್ರದಲ್ಲಿ ನಿಮ್ಮ ನಾಯಕತ್ವದಲ್ಲಿ ನಡೆಯುತ್ತಿರುವ ಕೆಲಸಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಧಾರ್ಮಿಕ ಕಾರ್ಯಗಳಲ್ಲಿ ಸಮಯವನ್ನು ಕಳೆಯಲಾಗುವುದು. ನಿಮ್ಮ ಪಾಲಿನ ಕೆಲಸ ಕಾರ್ಯಗಳಲ್ಲಿ ಚುರುಕುತನ ಕಂಡುಬಂದು ಮುನ್ನಡೆ ಸಾಧಿಸಲಿದ್ದೀರಿ. ಅತ್ಯಾಪ್ತರು ನಿಮ್ಮನ್ನು ದೂಷಿಸಬಹುದು. ಅವರಿಂದ ಸೂಕ್ತ ಕಾರಣವನ್ನು ಕೇಳಿ. ವ್ಯಾಪಾರ, ವ್ಯವಹಾರದಲ್ಲಿ ಲಾಭದಾಯಕ ವಾತಾವರಣ ಕಂಡುಬರಲಿದೆ. ನಿಮ್ಮ ಖರೀದಿಯಲ್ಲಿ ಸಮಯವನ್ನು ಕಳೆಯುವಿರಿ. ಲೌಕಿಕ ಆನಂದದ ವಿಧಾನಗಳು ಹೆಚ್ಚಾಗುತ್ತವೆ. ಇಂದು ಸಹೋದರ ಸಹೋದರಿಯ ಜೊತೆಗಿನ ನಿಮ್ಮ ವಾತ್ಸಲ್ಯವು ತೃಪ್ತಿಯನ್ನು ಕೊಡುವುದು.

ಮಕರ ರಾಶಿ: ಕುಟುಂಬದಲ್ಲಿ ಮಂಗಳ ಕಾರ್ಯಕ್ಕೆ ಸಿದ್ಧತೆ. ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ. ಸ್ಪರ್ಧೆಯಲ್ಲಿ ಮಗುವಿನ ಯಶಸ್ಸಿನ ಸುದ್ದಿಯನ್ನು ಪಡೆಯುವುದು ಸಂತಸಗೊಳ್ಳುವಿರಿ. ಇಂದು ನೀವು ಆಸ್ಪತ್ರೆಯಲ್ಲಿ ಇರಬೇಕಾದ ಸ್ಥಿತಿ ಎದುರಾಗಬಹುದು. ದಾಂಪತ್ಯದ ಕಲಹದಿಂದ ಮಕ್ಕಳ ವಿದ್ಯಾಭ್ಯಾಸದ ಮೇಲೆ ವಿಪರೀತ ಪರಿಣಾಮವುಂಟು ಮಾಡಲಿದೆ. ಯಾವುದೇ ಕೆಲಸವನ್ನು ಪೂರ್ಣಗೊಳಿಸದ ಕಾರಣ ನಿಮ್ಮ ಮನಸ್ಸು ಕೂಡ ತೊಂದರೆಗೊಳಗಾಗಬಹುದು. ವ್ಯಾಪಾರದಲ್ಲಿನ ಹೊಸ ಒಪ್ಪಂದಗಳು ಲಾಭದ ಪರಿಸ್ಥಿತಿಗಳನ್ನು ಸೃಷ್ಟಿಸುತ್ತವೆ. ಅಮೂಲ್ಯವಾದದ್ದನ್ನು ಕಳೆದುಕೊಳ್ಳುವಿರಿ. ಕೌಟುಂಬಿಕ ವಿಚಾರಗಳಲ್ಲಿ ಒತ್ತಡಗಳು ದೂರವಾಗಿ ನೆಮ್ಮದಿ ಕಂಡುಬರಲಿದೆ. ಉದ್ಯೋಗ, ವ್ಯವಹಾರಗಳಲ್ಲಿ ಏರುಗತಿಯನ್ನು ಕಂಡು ಸಮಾಧಾನವಾಗಲಿದೆ. ಉದ್ಯೋಗಿಗಳು ಕ್ಷೇತ್ರದಲ್ಲಿ ಬಡ್ತಿ ಸುದ್ದಿಗಳನ್ನು ಕೇಳಬಹುದು. ಆದ್ದರಿಂದ ವ್ಯಾಪಾರಿಗಳು ಸಹ ಲಾಭ ಪಡೆಯಬಹುದು. ನಿಮ್ಮನ್ನು ವಶಪಡಿಸಿಕೊಳ್ಳುವ ತಂತ್ರಗಾರಿಕೆ ನಡೆಯುವುದು. ವ್ಯವಹಾರ ರೂಪಾಂತರವನ್ನು ಯೋಜಿಸಲಾಗುತ್ತದೆ.

ಕುಂಭ ರಾಶಿ: ನಿಮ್ಮ ಪ್ರಯತ್ನವೂ ವಿಳಂಬ ಗತಿಯದ್ದಾದ ಕಾರಣ ಫಲವೂ ವಿಳಂಬವಾಗುವುದು. ಇಂದು ಶಾಂತಿಯಿಂದ ನಿಮ್ಮ ದಿನವನ್ನು ಕಳೆಯುವಿರಿ. ರಾಜಕೀಯದಲ್ಲಿ ನಿಮ್ಮ ಪ್ರಯತ್ನಗಳು ಯಶಸ್ವಿಯಾಗಲಿದ್ದು, ಸಾರ್ವಜನಿಕ ಸಂಪರ್ಕಕ್ಕೂ ಅನುಕೂಲವಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಅರ್ಹತೆಯನ್ನು ಹೆಚ್ಚಿಸುವಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಕುಟುಂಬದ ವಿಚಾರದಲ್ಲಿ ವಿರೋಧಿಗಳು ಜಯ ಸಾಧಿಸುವರು. ಹೊಸ ಒಪ್ಪಂದದ ಬಾಗಿಲು ಮತ್ತು ಸ್ಥಾನ ಹೆಚ್ಚಾಗುತ್ತದೆ. ಕೆಲವು ಅಹಿತಕರ ಜನರನ್ನು ಭೇಟಿಯಾಗುವುದರಿಂದ ಅನಗತ್ಯ ತೊಂದರೆಗಳನ್ನು ಎದುರಿಸಬೇಕಾಗಬಹುದು. ಉದ್ಯೋಗ, ವ್ಯಾಪಾರ, ವ್ಯವಹಾರಗಳಲ್ಲಿ ಉಲ್ಲಾಸಕರ ವಾತಾವರಣ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ನೆಮ್ಮದಿ ತರಲಿದೆ. ಆರೋಗ್ಯದ ಬಗ್ಗೆ ಚಿಂತೆ ಕಡಿಮೆಯಾಗಲಿದೆ. ಆಸ್ತಿಯ ವಿಚಾರದಲ್ಲಿ ಅಧಿಕ ಲಾಭ ಸಿಗಲಿದೆ. ಹುಚ್ಚುನತನದ ಸಾಹಸದಿಂದ ನಿಮ್ಮವರು ಬಲಿ. ಇಂದು ನಿಮಗೆ ಕೆಲವು ತೊಂದರೆಗಳಾಗುವ ಸಾಧ್ಯತೆಯಿದೆ.

ಮೀನ ರಾಶಿ: ನಿಮಗಿರುವ ಸಾಮಾಜಿಕ ಮಾನ್ಯತೆಯ ಬಗ್ಗೆ ಇಂದು ನಿಜವಾದ ಚಿತ್ರಣ ಸಿಗುವುದು. ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಉದ್ಯಮದ ಖ್ಯಾತಿಯನ್ನು ಶತ್ರು ಹಾನಿ ಮಾಡಬಹುದು. ಕುಟುಂಬ ಜೀವನವು ಒತ್ತಡವನ್ನುಂಟು ಮಾಡುತ್ತದೆ. ಆದರೆ ಪ್ರೀತಿಪಾತ್ರರ ಜೊತೆ ಸಮಯ ಕಳೆಯಲಾಗುತ್ತದೆ. ಸಂಗಾತಿಯ ಬೆಂಬಲ ಮತ್ತು ಒಡನಾಟವನ್ನು ಪಡೆಯುವಿರಿ. ಸ್ವಂತ ವ್ಯಾಪಾರ, ವ್ಯವಹಾರ ಹಾಗೂ ಕೌಟುಂಬಿಕ ವಿಚಾರಗಳಲಿದ್ದ ಒತ್ತಡಗಳು ನಿವಾರಣೆಯಾಗಲಿವೆ. ನೈಪುಣ್ಯತೆಯನ್ನು ಮೆರೆಯುವ ಸಾಧ್ಯತೆ ಹೆಚ್ಚು. ಶುಭ ಕಾರ್ಯದ ನಿರ್ಧಾರವು ಪ್ರಯತ್ನ ಬಲದಿಂದ ಫಲ ನೀಡಲಿದೆ. ಇಂದು ನಿಮ್ಮ ವೈವಾಹಿಕ ಜೀವನವು ಸಂತೋಷಕರವಾಗಿರುತ್ತದೆ. ಇದರೊಂದಿಗೆ, ನೀವು ಇಂದು ದಿನದ ಶುಭವನ್ನು ಪಡೆಯುತ್ತೀರಿ. ವ್ಯವಹಾರದಲ್ಲಿನ ವಿಸ್ತರಣೆ ನಿಮಗೆ ಸಂತೋಷವನ್ನು ನೀಡುತ್ತದೆ.

-ಲೋಹಿತ ಹೆಬ್ಬಾರ್-8762924271 (what’s app only)

ಅತಿಯಾದ ಮಾತೇ ಯತ್ನಾಳ್ ಪಾಲಿಗೆ ಕುತ್ತಾಯಿತು: ವಿಜಯಾನಂದ್ ಕಾಶಪ್ಪನವರ್
ಅತಿಯಾದ ಮಾತೇ ಯತ್ನಾಳ್ ಪಾಲಿಗೆ ಕುತ್ತಾಯಿತು: ವಿಜಯಾನಂದ್ ಕಾಶಪ್ಪನವರ್
ಲಿಂಗಾಯತರು ಬಿಜೆಪಿನ ಪುನಃ ಅಧಿಕಾರಕ್ಕೆ ತರಬೇಕೆಂದುಕೊಂಡಿದ್ದರು: ಸ್ವಾಮೀಜಿ
ಲಿಂಗಾಯತರು ಬಿಜೆಪಿನ ಪುನಃ ಅಧಿಕಾರಕ್ಕೆ ತರಬೇಕೆಂದುಕೊಂಡಿದ್ದರು: ಸ್ವಾಮೀಜಿ
ಫ್ಯಾನ್ಸ್ ಪ್ರಕಾರ ಆರ್​ಸಿಬಿ- ಸಿಎಸ್​ಕೆ ಕಾಳಗದ ಸ್ಮರಣೀಯ ಕ್ಷಣ ಇದೆ
ಫ್ಯಾನ್ಸ್ ಪ್ರಕಾರ ಆರ್​ಸಿಬಿ- ಸಿಎಸ್​ಕೆ ಕಾಳಗದ ಸ್ಮರಣೀಯ ಕ್ಷಣ ಇದೆ
‘ಮನದ ಕಡಲು’ ನಟ-ನಟಿಯರಿಗೆ ಶಾಪ ಹಾಕಿದ ರಂಗಾಯಣ ರಘು
‘ಮನದ ಕಡಲು’ ನಟ-ನಟಿಯರಿಗೆ ಶಾಪ ಹಾಕಿದ ರಂಗಾಯಣ ರಘು
ಹನಿ ಟ್ರ್ಯಾಪ್ ಪ್ರಕರಣ ಸಿಐಡಿ ತನಿಖೆಗೆ ಒಪ್ಪಿಸಿದನ್ನು ಸ್ವಾಗತಿಸಿದ ರಾಜಣ್ಣ
ಹನಿ ಟ್ರ್ಯಾಪ್ ಪ್ರಕರಣ ಸಿಐಡಿ ತನಿಖೆಗೆ ಒಪ್ಪಿಸಿದನ್ನು ಸ್ವಾಗತಿಸಿದ ರಾಜಣ್ಣ
ಒಡಿಶಾದಲ್ಲಿ ಪೊಲೀಸರಿಂದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಜಲಫಿರಂಗಿ ಬಳಕೆ
ಒಡಿಶಾದಲ್ಲಿ ಪೊಲೀಸರಿಂದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಜಲಫಿರಂಗಿ ಬಳಕೆ
ರೈತರಿಗೆ ಡಬಲ್​ ಗುಡ್​ನ್ಯೂಸ್ ನೀಡಿದ ಕೃಷಿ ಸಚಿವ ಚಲುವರಾಯಸ್ವಾಮಿ..!
ರೈತರಿಗೆ ಡಬಲ್​ ಗುಡ್​ನ್ಯೂಸ್ ನೀಡಿದ ಕೃಷಿ ಸಚಿವ ಚಲುವರಾಯಸ್ವಾಮಿ..!
ಯತ್ನಾಳ್ ಕಾಂಗ್ರೆಸ್​ಗೆ ಬರುತ್ತೇನೆಂದರೆ ಸ್ವಾಗತಿಸಲು ನಾನ್ಯಾರೂ ಅಲ್ಲ: ಶಾಸಕ
ಯತ್ನಾಳ್ ಕಾಂಗ್ರೆಸ್​ಗೆ ಬರುತ್ತೇನೆಂದರೆ ಸ್ವಾಗತಿಸಲು ನಾನ್ಯಾರೂ ಅಲ್ಲ: ಶಾಸಕ
ನನ್ನ ಜಾತ್ರೆ ನಿಲ್ಸಿದ್ದೀರಿ.. 3 ದಿನದಲ್ಲಿ ಮೂರು ಹೆಣ ಬೀಳುತ್ತೆ ಎಂದ ಮಹಿಳೆ
ನನ್ನ ಜಾತ್ರೆ ನಿಲ್ಸಿದ್ದೀರಿ.. 3 ದಿನದಲ್ಲಿ ಮೂರು ಹೆಣ ಬೀಳುತ್ತೆ ಎಂದ ಮಹಿಳೆ
ಉಚ್ಚಾಟನೆ ನಿರ್ಧಾರವನ್ನು ಪುನರ್​ಪರಿಶೀಲಿಸುವಂತೆ ಕೋರುವೆ: ಶ್ರೀರಾಮುಲು
ಉಚ್ಚಾಟನೆ ನಿರ್ಧಾರವನ್ನು ಪುನರ್​ಪರಿಶೀಲಿಸುವಂತೆ ಕೋರುವೆ: ಶ್ರೀರಾಮುಲು