Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ರಾಶಿಯವರಿಗೆ ಹಳೆಯದನ್ನು ಮರೆತು ಹೊಸ ಹಾದಿಯತ್ತ ಹೆಜ್ಜೆ ಹಾಕುವ ಮನಸ್ಸಾದೀತು

ಶಾಲಿವಾಹನ ಶಕವರ್ಷ 1947ರ ಉತ್ತರಾಯಣ, ಶಿಶಿರ ಋತುವಿನ ಫಾಲ್ಗುಣ ಮಾಸ ಕೃಷ್ಣ ಪಕ್ಷದ ದ್ವಾದಶೀ ತಿಥಿ, ಬುಧವಾರ ನಿಂದನೆಯನ್ನು ಸಹಿಸಿಕೊಳ್ಳುವುದು, ಅನಧಿಕೃತ ವಿಚಾರಗಳ ಚರ್ಚೆ, ಹಿರಿಯರ ಮಾರ್ಗದರ್ಶನ ಇವೆಲ್ಲ ಈ ದಿನದ ವಿಶೇಷ.

ಈ ರಾಶಿಯವರಿಗೆ ಹಳೆಯದನ್ನು ಮರೆತು ಹೊಸ ಹಾದಿಯತ್ತ ಹೆಜ್ಜೆ ಹಾಕುವ ಮನಸ್ಸಾದೀತು
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Mar 26, 2025 | 2:05 AM

 ನಿತ್ಯ ಪಂಚಾಗ:  ಶಾಲಿವಾಹನ ಶಕೆ 1947ರ ಕ್ರೋಧೀ ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಸೌರ ಮಾಸ : ಮೀನ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಕೃಷ್ಣ, ವಾರ : ಬುಧ, ತಿಥಿ : ದ್ವಾದಶೀ, ನಿತ್ಯನಕ್ಷತ್ರ : ಶತಭಿಷಾ, ಯೋಗ : ಸಿದ್ಧ, ಕರಣ : ಕೌಲವ, ಸೂರ್ಯೋದಯ – 06 – 33 am, ಸೂರ್ಯಾಸ್ತ – 06 – 42 pm, ಇಂದಿನ ಶುಭಾಶುಭಕಾಲ : ರಾಹು ಕಾಲ 12:38 – 14:10, ಯಮಘಂಡ ಕಾಲ 08:05 – 09:36, ಗುಳಿಕ ಕಾಲ 11:07 – 12:38

ಮೇಷ ರಾಶಿ: ರಾಶಿ ಹೊಸ ಯೋಚನೆಗಳು ಸಾಕಾರವಾಗದಿದ್ದರೂ ಉತ್ಸಾಹವಿರಲಿದೆ. ಹಳೆಯದನ್ನು ಮರೆತು ಹೊಸ ಹಾದಿಯತ್ತ ಹೆಜ್ಜೆ ಹಾಕುವ ಮನಸ್ಸಾದೀತು. ತೆಗೆದುಕೊಳ್ಳುವ ನಿರ್ಣಯವು ಪೂರ್ಣ ಬೆಂಬಲದಿಂದ ಕೂಡಿರದು. ನಕಾರಾತ್ಮಕ ಆಲೋಚನೆಗಳು ನಿಮ್ಮ ಮನಸ್ಸನ್ನು ಕೆಡಿಸುವುದು. ಅಸಾಧ್ಯವಾದುದನ್ನು ಸಾಧಿಸುವ ಭ್ರಮೆಯಿಂದ ಹೊರಬನ್ನಿ. ಅಹಂಕಾರ ಸುಳಿಯುವ ಸಾಧ್ಯತೆ ಇದೆ. ಸಂಗಾತಿಯ ಜೊತೆ ಹೆಚ್ಚು ಸಮಯವನ್ನು ಕಳೆದರೂ ಮನಸ್ಸಿಗೆ ನೆಮ್ಮದಿ ಸಿಗದು. ಯಾವುದನ್ನಾದರೂ ಸಂತೋಷದಿಂದ ಸ್ವೀಕರಿಸುವ ಮನೋಭಾವವಿರಲಿ. ವಿದ್ಯಾರ್ಥಿಗಳು ಏಕಾಗ್ರತೆಯಿಂದ ಮುನ್ನಡೆದರೆ ಸಾಧಿಸುವ ಹಾದಿಯು ಸರಳವಾಗುವುದು. ಇಂದು ಖರೀದಿಸುವ ಎಲ್ಲದಕ್ಕೂ ಹೆಚ್ಚುವರಿ ಹಣವನ್ನು ಕೊಡಬೇಕಾದೀತು‌. ನೀವು ಇಂದು ಅಸಹಾಯಕರಂತೆ ತೋರುವಿರಿ. ಆರ್ಥಿಕವಾಗಿ ಸಬಲರಾಗಲು ವಿವಿಧ ಆರ್ಥಿಕ ಮೂಲವನ್ನು ಅನ್ವೇಷಿಸಬೇಕಾದೀತು. ಮಕ್ಕಳ‌ ವಿವಾಹ ಕಾರ್ಯದಲ್ಲಿ ನೀವು ಮಗ್ನರಾಗುವಿರಿ. ಮಾತನ್ನು ಚೆನ್ನಾಗಿ ಇಟ್ಟುಕೊಂಡು ವ್ಯವಹಾರವನ್ನು ಮುನ್ನಡೆಸುವಿರಿ. ಕುತರ್ಕಗಳು ನಿಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತದೆ.

ವೃಷಭ ರಾಶಿ: ಅಲೆಮಾರಿಗಳಂತೆ ನಿಮಗೆ ನಿಮ್ಮ ಬಗ್ಗೆ ಅನಿಸುವುದು. ದ್ವೇಷವನ್ನು ಸಾಧಿಸಲು ನಿಮಗೆ ಇಂದು ಸರಿಯಾದ ಕಾರಣ ಸಿಗಬಹುದು. ಮಾತಿನಿಂದ ಯಾರಾದರೂ ನಿಮ್ಮನ್ನು ಕಟ್ಟಿಹಾಕಬಹುದು. ಅನುಭವವು ಸುಳ್ಳಾದಂತೆ ಕಾಣಿಸುವುದು. ಕೃತಜ್ಞತೆಯನ್ನು ಬೆಳೆಸಿಕೊಳ್ಳುವುದು ನಿಮ್ಮ ವ್ಯಕ್ತಿತ್ವವನ್ನು ಬದಲಿಸಬಹುದು. ಪ್ರೇಮದಲ್ಲಿ ಹಿನ್ನಡೆಯಾಗಲಿದೆ. ತಾಳ್ಮೆಯಿಂದ ಮುಖ್ಯ ಆಯುಧವಾಗಿರಲಿ. ವಿದೇಶದ ಕನಸು ಸದ್ಯ ಸಾಕಾರವಾಗದು. ವ್ಯಾಪಾರಸ್ಥರಿಗೆ ಸ್ವಲ್ಪ ಆಲಸ್ಯವು ಇರುವುದು. ಒಂದೇ ವಿಚಾರವನ್ನು ಮನನ‌ ಮಾಡುವಿರಿ. ಸಂಗಾತಿಯ ನಡುವೆ ಭಿನ್ನಾಭಿಪ್ರಾಯ ಬರಲಿದೆ. ಪ್ರಯಾಣದಿಂದ ಆಯಾಸವಾಗಬಹುದು. ಉನ್ನತ ಅಭ್ಯಾಸದಿಂದ ಹಿಂದೇಟುಹಾಕುವ ಸ್ಥಿತಿ ಬರಬಹುದು. ನಿಮ್ಮ ಆಸೆಗಳನ್ನು ಇನ್ನೊಬ್ಬರ ಜೊತೆ ಹೇಳಿಕೊಂಡು ಸಮಾಧಾನ ಪಡುವಿರಿ. ತುರ್ತು ಅವಶ್ಯಕತೆ ಇರುವುದು. ಇನ್ನೊಬ್ಬರ ಯೋಜನೆಯನ್ನು ನಿಮ್ಮದೆಂದು ಸಾಧಿಸುವಿರಿ.‌

ಮಿಥುನ ರಾಶಿ: ತಪ್ಪುಗಳನ್ನು ಹೇಳಿದರೆ ಸಹಿಸಲಾಗದು. ಸಿಟ್ಟುಗೊಳ್ಳಲೂಬಹುದು. ದೈಹಿಕ‌ ದೌರ್ಬಲ್ಯವನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳಿ. ನಿಮಗೆ ತಿಳಿದ ವಿಚಾರದ ಬಗ್ಗೆ ಹುಡುಕಾಟ ನಡೆಸುವಿರಿ. ವಿದ್ಯಾರ್ಥಿಗಳು ಸಂಶೋಧನೆಯತ್ತ ಗಮನವನ್ನು ಕೊಡುವರು. ಸಂಗಾತಿಯ ಆರೋಗ್ಯದ ಬಗ್ಗೆ ಚಿಂತೆ ಇರುವುದು. ವಿದ್ಯಾರ್ಥಿಗಳು ಅನಾರೋಗ್ಯದಿಂದ ವಿಶ್ರಾಂತಿ ಪಡೆಯಬೇಕಾಗಬಹುದು. ಅಧಿಕಾರಕ್ಕಾಗಿ ಯಾರನ್ನೂ ವಂಚಿಸಬಹುದು. ಸರಿಯಾದ ಹಂಚಿಕೊಂಡು ಕೆಲಸವನ್ನು ಮಾಡುವುದು ಸೂಕ್ತ. ಕಛೇರಿಯ ಕೆಲಸವನ್ನು ಮನೆಗೂ ತಂದುಕೊಳ್ಳುವಿರಿ. ಇಂದು ಮಾನಸಿಕವಾಗಿ ನೀವು ಕುಗ್ಗುವಿರಿ. ಕೆಲಸದಿಂದ ಸ್ವಲ್ಪ ವಿಶ್ರಾಂತಿಯನ್ನು ಪಡೆಯುವುದು ಉತ್ತಮ. ಸುಳ್ಳಿನಿಂದ ಸಾಧಿಸಿದ ಕಾರ್ಯ ಇಂದು ಮುಳ್ಳಾಗಿ ಚುಚ್ಚುವುದು. ಭೂಮಿಯ ವ್ಯವಹಾರವು ಸುಲಭಕ್ಕೆ ಕೈ ಹಿಡಿಯದು. ವೇತನವನ್ನು ಹೆಚ್ಚಿಸಿಕೊಳ್ಳಲು ಅನ್ಯ ಮಾರ್ಗವನ್ನು ಹುಡುಕುವ ಅವಶ್ಯಕತೆ ಬರಬಹುದು. ಅಪರಿಚಿತರ ಜೊತೆ ಮಾತನಾಡಲು ಬಹಳ ಹಿಂಜರಿಕೆ ಇರುವುದು.

ಕರ್ಕಾಟಕ ರಾಶಿ: ಕಹಿಯ ಅನುಭವವನ್ನು ಸಿಹಿಯಾಗಿಸುವ ಜಾಣ್ಮೆ ತಿಳಿದಿರಲಿ. ಇಂದು ಪಾಲುದಾರಿಕೆಯಿಂದ ಉತ್ತಮ ಆದಾಯವನ್ನು ಪಡೆಯಬಹುದು. ನಿಮ್ಮನ್ನು ಯಾವುದೋ ಕಾರಣಕ್ಕೆ ಹೊಗಳಬಹುದು. ಉದ್ವೇಗದಲ್ಲಿ ನೀವು ಏನನ್ನಾದರೂ ಹೇಳಬಹುದು. ಅವಶ್ಯಕತೆ ಇರುವವರಿಗೆ ಬೇಕಾದ ಸಹಾಯವನ್ನು ಮಾಡಿ. ಇಂದಿನ ಕೆಲವು ಮಾತುಗಳು ನಿಮಗೆ ಇಷ್ಟವಾಗದೇ ಹೋಗುವುದು. ಕೆಲವು ವಿಚಾರದಲ್ಲಿ ನೀವು ಆತುರರಾಗುವಿರಿ. ಮನೆಯ ಖರೀದಿಯ ಬಗ್ಗೆ ಉತ್ಸಾಹ ತೋರುವಿರಿ. ಭವಿಷ್ಯದ ಬಗ್ಗೆ ಪತಿಯಾದ ಚಿಂತನೆ ಇರಲಿದೆ. ನಿಮ್ಮರನ್ನು ನೀವು ಕಳೆದುಕೊಳ್ಳುವ ಭೀತಿಯು ಇರುವುದು. ಸರ್ಕಾರಿ ಉದ್ಯೋಗಿಗಳಿಗೆ ವರ್ಗಾವಣೆ ಸಾಧ್ಯತೆ ಇದೆ. ಆಲಸ್ಯದಿಂದ ನಿಮ್ಮ ಅನೇಕ ಕಾರ್ಯಗಳು ಹಿಂದುಳಿಯಬಹುದು. ಮಕ್ಕಳು ನಿಮ್ಮ ಕೆಲಸಕ್ಕೆ ತೊಂದರೆ ಕೊಡಬಹುದು. ಬೇಡದ ವಸ್ತುಗಳನ್ನು ಇನ್ನೊಬ್ಬರಿಗೆ ಕೊಡುವಿರಿ. ಮನೆಯ ವಾತಾರಣದಲ್ಲಿ ಇರಲು ಖುಷಿಯಾಗುವುದು.‌ ನಿಮ್ಮ ರಹಸ್ಯವನ್ನು ನೀವು ಗೊತ್ತಿಲ್ಲದೇ ಬೇರೆಯವರ ಜೊತೆ ಹಂಚಿಕೊಳ್ಳುವಿರಿ.

ಸಿಂಹ ರಾಶಿ: ನಿಮ್ಮ ಮಾತು ಇಂದಿನ ಸಂಭ್ರಮವನ್ನು ಹಾಳುಮಾಡೀತು.‌ ಇಂದು ಕೆಲವು ಸಂದರ್ಭದಲ್ಲಿ ಉಕ್ಕಿಬರುವ ಸಿಟ್ಟನ್ನು ನಿಯಂತ್ರಿಸುವ ಕಲೆಯನ್ನು ತಿಳಿದುಕೊಳ್ಳಿ. ನಿಮ್ಮ ಸಿದ್ಧಾಂತಕ್ಕೂ ಪ್ರಯೋಗಕ್ಕೂ ಸಾಮ್ಯತೆ ಬರದು. ಉದ್ಯೋಗದಲ್ಲಿ ಬದಲಾವಣೆಯನ್ನು ನೀವು ನಿರೀಕ್ಷಿಸುತ್ತ ಇರುವಿರಿ. ಊಹಿಸದೇ ಇರುವ ಕಡೆಯಿಂದ ನಿಮಗೆ ಬೇಕು ಎನಿಸಿದ ಸಂಪತ್ತು ದೊರೆಯುವುದು. ಸರ್ಕಾರೀ ಮೂಲದ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ಇದು ನಿಮಗೆ ಇಂದಿನ ಅಚ್ಚರಿಯ ವಿಚಾರವೇ ಆಗಲಿದೆ. ಉದ್ಯೋಗದಲ್ಲಿ ಹೆಚ್ಚುಗಾರಿಕೆ ಇರುವುದು. ತಾಳ್ಮೆಯಿಂದ ಕಾರ್ಯವನ್ನು ಮಾಡಿ. ನೂತನ‌ ಸ್ನೇಹವನ್ನು ಬೆಳೆಸಿಕೊಳ್ಳುವಿರಿ. ಒತ್ತಡಕ್ಕೆ ಮಣಿದು ನಿಮ್ಮ ಕೆಲಸ ಹಾಗೂ ನಿರ್ಧಾರವನ್ನು ಬದಲಿಸುವಿರಿ. ಅಜ್ಞಾತ ಸ್ಥಳದಿಂದ ಹೊರಬರುವ ಬಗ್ಗೆ ಯೋಚಿಸುವಿರಿ. ವಿದೇಶದ ಪ್ರಯಾಣಕ್ಕೆ ಆಯಾಸವು ಆಯಾಸವು ಅಡ್ಡಿಬರಬಹುದು. ದೇಹವನ್ನು ದಂಡಿಸುವ ಅನಿವಾರ್ಯತೆ ಇರಲಿದೆ. ಆಕರ್ಷಕ ಮಾತಿಗೆ ಮನಸೋತು ಪ್ರೀತಿಯಲ್ಲಿ ಬೀಳುವಿರಿ. ನಿಮ್ಮನ್ನು ಅಧಿಕಾರದಲ್ಲಿ ಕುಳ್ಳಿರಿಸಲು ಮೇಲಧಿಕಾರಿಗಳು ಕಾಯುವರು.

ಕನ್ಯಾ ರಾಶಿ: ಇಂದು ಸಂಗಾತಿಯಿಂದ ಹೊಸ ಚಿಂತೆ ಹುಟ್ಟಿಕೊಳ್ಳುವುದು. ಎಷ್ಟೋ ದಿನಗಳ ಹಿಂದಿನ ಮನದ ಆಸೆಗಳನ್ನು ನೆರವೇರಿಸಿಕೊಳ್ಳುವಿರಿ. ಇಂದು ಸ್ವಂತ ಕಾರ್ಯಗಳಿಗೆ ಸಮಯವನ್ನು ಹೊಂದಿಸಿಕೊಳ್ಳುವುದು ಕಷ್ಟವಾಗುವುದು. ಮುಖವನ್ನು ಗಂಟು ಹಾಕಿಕೊಂಡು ಇರುವುದು ನಿಮ್ಮಿಂದ ಜನರನ್ನು ದೂರವಿರಿಸುವುದು. ಅತಿಯಾದ ಆಡಂಬರವು ನಿಮಗೆ ಇಷ್ಟವಾಗದು. ಬೇಡವೆನಿಸಿದವರನ್ನು ನಿಧಾನವಾಗಿ ಗೊತ್ತಾಗದಂತೆ ಪಕ್ಕಕ್ಕೆ ಸರಿಸುವಿರಿ. ನಿಮ್ಮಲ್ಲಿರುವ ಅಲ್ಪ ಹಣವನ್ನು ಸೇರಿಸಿ ಕೊಡಬೇಕಾದವರಿಗೆ ಹಣವನ್ನು ಕೊಡುವಿರಿ. ಇಂದಿನ ನಿಮ್ಮ ಮಾರಾಟದಿಂದ ಅಧಿಕಲಾಭವೂ ಆಗದು. ಸತ್ಪಾತ್ರರಿಗೆ ದಾನವನ್ನು ಮಾಡಿ. ನಿಮ್ಮ ವ್ಯಕ್ತಿತ್ವಕ್ಕೆ ಕಳಂಕವನ್ನು ಬಳಿಯಬಹುದು. ಕೃಷಿ ಕಾರ್ಯಗಳನ್ನು ಅಧಿಕ ಹಣಕೊಟ್ಟು ಮಾಡಿಸಬೇಕಾಗುವುದು. ಬೆನ್ನಿನ ನೋವು ನಿಮ್ಮ ಕಾರ್ಯಗಳ‌ ಏಕಾಗ್ರತೆಯನ್ನು ಕೆಡಿಸೀತು. ಉದ್ಯೋಗಕ್ಕೆ ವಿರಾಮ ಹೇಳಿ ಹೊರಗೆ ಸುತ್ತಾಟವನ್ನು ಮಾಡುವಿರಿ. ಎಲ್ಲ ಕಾರ್ಯವನ್ನೂ ನೀವೇ ಮಾಡಬೇಕು ಎಂಬ ಹೆಬ್ಬಯಕೆ ಬೇಡ. ಸಂತೋಷಕೂಟಕ್ಕೆ ಹಣವನ್ನು ಖರ್ಚು ಮಾಡಬೇಕಾದೀತು.

VIDEO: ಕೆಎಲ್ ರಾಹುಲ್​ ಮಿಮಿಕ್​ಗೆ ಬಿದ್ದು ಬಿದ್ದು ನಕ್ಕ DC ಫ್ಯಾಮಿಲಿ
VIDEO: ಕೆಎಲ್ ರಾಹುಲ್​ ಮಿಮಿಕ್​ಗೆ ಬಿದ್ದು ಬಿದ್ದು ನಕ್ಕ DC ಫ್ಯಾಮಿಲಿ
ಜಾರಕಿಹೊಳಿ-ಕುಮಾರಸ್ವಾಮಿ ಭೇಟಿಯನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು: ರವಿ
ಜಾರಕಿಹೊಳಿ-ಕುಮಾರಸ್ವಾಮಿ ಭೇಟಿಯನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು: ರವಿ
ಇದು ಸಂಭ್ರಮಿಸುವ ಟೈಮಲ್ಲ, ಯತ್ನಾಳ್ ಕೊರತೆ ನೀಗಿಸುವೆಡೆ ಯೋಚಿಸಬೇಕು: ಸಂಸದ
ಇದು ಸಂಭ್ರಮಿಸುವ ಟೈಮಲ್ಲ, ಯತ್ನಾಳ್ ಕೊರತೆ ನೀಗಿಸುವೆಡೆ ಯೋಚಿಸಬೇಕು: ಸಂಸದ
ನನಗೂ ನೋಟೀಸ್ ಜಾರಿಯಾಗಿದೆ, ಸಮರ್ಪಕ ಉತ್ತರ ನೀಡುತ್ತೇನೆ: ಸೋಮಶೇಖರ್
ನನಗೂ ನೋಟೀಸ್ ಜಾರಿಯಾಗಿದೆ, ಸಮರ್ಪಕ ಉತ್ತರ ನೀಡುತ್ತೇನೆ: ಸೋಮಶೇಖರ್
ಸಿಎಂ ಆಗಲು ಕುಮಾರಸ್ವಾಮಿ ಬೆಂಬಲ ಕೇಳಿರಬಹುದು ಸತೀಶ್: ಜಿಟಿಡಿ
ಸಿಎಂ ಆಗಲು ಕುಮಾರಸ್ವಾಮಿ ಬೆಂಬಲ ಕೇಳಿರಬಹುದು ಸತೀಶ್: ಜಿಟಿಡಿ
ಈ ನಾಯಿ ಮುಖ ನೋಡಿ ನಿಮ್ಗೆ ದಂಡ ಹಾಕ್ತಿಲ್ಲ:ಟ್ರಾಫಿಕ್ ಪೊಲೀಸ್
ಈ ನಾಯಿ ಮುಖ ನೋಡಿ ನಿಮ್ಗೆ ದಂಡ ಹಾಕ್ತಿಲ್ಲ:ಟ್ರಾಫಿಕ್ ಪೊಲೀಸ್
ಶ್ರೀನಗರ-ಜಮ್ಮು ಹೆದ್ದಾರಿಯ ನವಯುಗ್ ಸುರಂಗ ಮಾರ್ಗದಲ್ಲಿ ಭೀಕರ ಅಪಘಾತ
ಶ್ರೀನಗರ-ಜಮ್ಮು ಹೆದ್ದಾರಿಯ ನವಯುಗ್ ಸುರಂಗ ಮಾರ್ಗದಲ್ಲಿ ಭೀಕರ ಅಪಘಾತ
ಏರ್ ಕಂಪ್ರೆಸರ್ ಬ್ರೇಕ್​ಗಳು ಏರ್ ಲೀಕಾಗುತ್ತಿದ್ದರೆ ಬ್ರೇಕ್ ಹತ್ತಲ್ಲ?
ಏರ್ ಕಂಪ್ರೆಸರ್ ಬ್ರೇಕ್​ಗಳು ಏರ್ ಲೀಕಾಗುತ್ತಿದ್ದರೆ ಬ್ರೇಕ್ ಹತ್ತಲ್ಲ?
ಕೊಲೆ ಆರೋಪಿಗೆ ಸರ್ಕಾರಿ ಕಾರ್ಯಕ್ರಮದಲ್ಲಿ ರಾಜಾತಿಥ್ಯ
ಕೊಲೆ ಆರೋಪಿಗೆ ಸರ್ಕಾರಿ ಕಾರ್ಯಕ್ರಮದಲ್ಲಿ ರಾಜಾತಿಥ್ಯ
ತೆಲಂಗಾಣದಲ್ಲಿ ನಿರ್ಮಾಣ ಹಂತದ ಆರು ಅಂತಸ್ತಿನ ಕಟ್ಟಡ ಕುಸಿತ
ತೆಲಂಗಾಣದಲ್ಲಿ ನಿರ್ಮಾಣ ಹಂತದ ಆರು ಅಂತಸ್ತಿನ ಕಟ್ಟಡ ಕುಸಿತ