Horoscope: ರಾಶಿಭವಿಷ್ಯ, ಈ ರಾಶಿಯವರು ದೈವಾನುಗ್ರಹವನ್ನು ಪ್ರಾರ್ಥಿಸಿ ಕಾರ್ಯಾರಂಭ ಮಾಡಿ

ನೀವು ಇಂದು ಕೈಗೊಳ್ಳುವ ಯಾವುದೇ ಕೆಲಸಕಾರ್ಯಗಳು ಚೆನ್ನಾಗಿರಬೇಕು ಎಂದರೆ ನಿಮ್ಮ ರಾಶಿಫಲ ಚೆನ್ನಾಗಿರಬೇಕು. ಒಂದಷ್ಟು ಮಂದಿ ರಾಶಿಭವಿಷ್ಯ ತಿಳಿದುಕೊಂಡೇ ಮುಂದಿನ ಕಾರ್ಯ ಆರಂಭಿಸುತ್ತಾರೆ. ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ ಇಂದು ಡಿಸೆಂಬರ್ 5 ರ ನಿಮ್ಮ ಭವಿಷ್ಯ ಹೀಗಿದೆ ನೋಡಿ.

Horoscope: ರಾಶಿಭವಿಷ್ಯ, ಈ ರಾಶಿಯವರು ದೈವಾನುಗ್ರಹವನ್ನು ಪ್ರಾರ್ಥಿಸಿ ಕಾರ್ಯಾರಂಭ ಮಾಡಿ
ದಿನಭವಿಷ್ಯImage Credit source: iStock Photo
Follow us
TV9 Web
| Updated By: Rakesh Nayak Manchi

Updated on: Dec 05, 2023 | 12:45 AM

ನೀವು ಇಂದು ಕೈಗೊಳ್ಳುವ ಯಾವುದೇ ಕೆಲಸಕಾರ್ಯಗಳು ಚೆನ್ನಾಗಿರಬೇಕು ಎಂದರೆ ನಿಮ್ಮ ರಾಶಿಫಲ (Zodiac sign) ಚೆನ್ನಾಗಿರಬೇಕು. ಶುಭ ಫಲ ಇದೆಯಾ ಅಥವಾ ಏನಾದರು ವಿಘ್ನ ಎದುರಾಗಲಿದೆಯಾ? ಏನು ಮಾಡಬೇಕು ಏನು ಮಾಡಬಾರದು? ವ್ಯಾಪಾರದಲ್ಲಿ ಲಾಭ-ನಷ್ಟು ಇದೆಯಾ? ಎಂದು ತಿಳಿದುಕೊಳ್ಳುವವರು ಇದ್ದಾರೆ. ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ ಇಂದಿನ (ಡಿಸೆಂಬರ್ 5) ನಿಮ್ಮ ಭವಿಷ್ಯ (Horoscope) ಹೇಗಿದೆ ಎಂದು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಅನೂರಾಧಾ, ಮಾಸ: ಕಾರ್ತಿಕ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಪೂರ್ವಾಫಲ್ಗುಣೀ, ಯೋಗ: ವಿಷ್ಕಂಭ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 44 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 01 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:12 ರಿಂದ 04:37 ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:34 ರಿಂದ 10:59ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:23 ರಿಂದ 01:48ರ ವರೆಗೆ.

ಧನು ರಾಶಿ: ಅಧಿಕಾರಿಗಳ‌ ಕೆಂಗಣ್ಣಿಗೆ ಗುರಿಯಾಗಿ ವ್ಯವಹಾರವನ್ನು ಕೆಡಿಸಿಕೊಳ್ಳುವಿರಿ. ಭೋಗ ವಸ್ತುಗಳನ್ನು ಅಧಿಕವಾಗಿ ಖರೀದಿಸುವಿರಿ. ಉನ್ನತ ವಿದ್ಯಾಭ್ಯಾಸಕ್ಕೆ ಸಾಲವನ್ನು ಮಾಡಬೇಕಾಗುವುದು. ಕಾರಣಾಂತರದಿಂದ ನಿಮ್ಮ ಪ್ರಯಾಣವು ಸ್ಥಗಿತವಾಗಬಹುದು. ಇಂದು ನಿಮಗೆ ಪೂರಕವಾದ ಅಂಶಗಳೇ ಹೆಚ್ಚು ಇರುವುವು. ಮಕ್ಕಳನ್ನು ಖುಷಿಯಿಂದ ಇಡಲು ಹೊಸ ಪ್ರಯತ್ನವನ್ನು ಮಾಡುವಿರಿ. ಹಿರಿಯರ ಮಾತನ್ನು ಪಾಲಿಸುವಿರಿ. ನಿಮಗೆ ಇಂದು ಕೈ ಹಾಕಿದ ಕಾರ್ಯದಲ್ಲಿ ಜಯ ಸಿಗುವುದು. ಪೂರ್ವಜನ್ಮದ ಪುಣ್ಯವು ರಕ್ಷಿಸುವುದು. ಅತಿಯಾದ ನಿಮ್ಮ ನಿರೀಕ್ಷೆಯು ಹುಸಿಯಾಗಿ ಬೇಸರವಾದೀತು. ಸ್ವಂತ ಉದ್ಯೋಗದಿಂದ ಒತ್ತಡವು ಅಧಿಕವಾಗಿ ಬರಬಹುದು. ಮನೆಯ ಕೆಲಸವನ್ನು ಮಾಡಿಕೊಳ್ಳಲು ನಿಮಗೆ ಸಮಯ ಸಾಕಾಗದು. ನಿಮ್ಮ ಮಾತುಗಳಿಂದ ಅನರ್ಥವಾಗಬಹುದು.

ಮಕರ ರಾಶಿ: ಮಹಿಳೆಯರು ಹಣದಿಂದ ವಂಚಿತರಾಗಬಹುದು. ಉನ್ನತ ಸ್ಥಾನದತ್ತ ನಿಮ್ಮ ಕಣ್ಣು ಇರುವುದು. ವಿವಿಧ ಕಡೆಗಳಿಂದ ಧನಾಗಮನವಾಗಬಹುದು. ನಿಮ್ಮ ಹಳೆಯ ವಾಹನವನ್ನು ಮಾರಾಟ ಮಾಡಿ ನೂತನ ವಾಹನವನ್ನು ಖರೀದಿ ಮಾಡುವಿರಿ. ದೈಹಿಕ ಶ್ರಮದಿಂದ ನಿಮಗೆ ಆಯಾಸವಾಗುವುದು. ದೇವರಲ್ಲಿ ಭಕ್ತಿಯು ಅಧಿಕವಾದೀತು. ಮಕ್ಕಳಿಗೆ ಶಿಸ್ತನ್ನು ಹೇಳುವಿರಿ. ನಿಮ್ಮ ಮನಸ್ಸನ್ನು ಬಹಳ ವಿಚಲಿತವಾಗಿದ್ದು ಸ್ಥಿರತ್ವವನ್ನು ತಂದುಕೊಳ್ಳುವುದು ಕಷ್ಟವಾದೀತು. ನಿಮ್ಮ ಅಲ್ಪ ಜ್ಞಾನವನ್ನು ಎಲ್ಲರೆದುರು ತೋರಿಸುವುದು ಬೇಡ. ಮಾಡುವ ಕೆಲಸವನ್ನೇ ಹೊಸರೀತಿಯಲ್ಲಿ ಮಾಡುವಿರಿ. ನಿಮ್ಮ ಆಸ್ತಿಯನ್ನು ಇನ್ನೊಬ್ಬರು ಪಡೆಯಲು ಕಾನೂನು ರೀತಿಯಲ್ಲಿ ಹೋಗುವರು. ಮನೆಗೆ ದಂಪತಿಗಳನ್ನು ಕರೆದು ಸತ್ಕಾರ ಮಾಡಿ. ಸಹೋದರನ ಬೆಂಬಲವಿದ್ದರೂ ನಿಮಗೆ ಸ್ವಾಭಿಮಾನದಿಂದ ಹೊರಬರಲು ಆಗದು.

ಕುಂಭ ರಾಶಿ: ಸಂತೋಷದಲ್ಲಿ ಇಂದಿನ ಕಾರ್ಯಯೋಜನೆಯನ್ನು ಮರೆತುಬಿಡುವಿರಿ. ದೈವಾನುಗ್ರಹವನ್ನು ಪ್ರಾರ್ಥಿಸಿ ಕಾರ್ಯಾರಂಭವನ್ನು ಮಾಡಿ.‌ ಜೂಜು ಮೊದಲಾದ ಲೇವಾದೇವಿಯ ವ್ಯವಹಾರದಲ್ಲಿ ನಿಮಗೆ ಹಿನ್ನಡೆಯಾಗುವುದು. ದೇವಾಲಯವು ನಿಮಗೆ ಇಂದು ನೆಮ್ಮದಿಯ ಸ್ಥಾನವಾಗುವುದು. ಆರೋಗ್ಯದಲ್ಲಿ ಅಸಮಾಧಾನವು ಇರಲಿದೆ. ಮಾತಾನಾಡುವ ಭರದಲ್ಲಿ ಏನಾದರೂ ಹೇಳಬಹುದು. ಕೇವಲ ಬಾಯಿ ಮಾತಿನಲ್ಲಿ ವ್ಯವಹಾರವನ್ನು ಮಾಡಿ ಮುಂದುವರಿಸುವುದು ಬೇಡ. ನಿಮ್ಮ ರಹಸ್ಯವನ್ನು ಯಾರಾದರೂ ತಿಳಿದುಕೊಳ್ಳಲು ಬಯಸುವರು. ಹೊಗಳಿಕೆಯ ಮಾತಿಗೆ ಮರುಳಾಗುವಿರಿ. ಅವರಸದಲ್ಲಿ ಏನನ್ನೂ ಖರೀದಿ ಮಾಡುವುದು ಬೇಡ. ನಿಮ್ಮ ಸಲಹೆಯನ್ನು ಅಧಿಕಾರಿಗಳು ಸ್ವೀಕರಿಸದೇ ಇರಬಹುದು. ನೀವು ಇಂದು ಎಲ್ಲರ ಜೊತೆ ಅಲ್ಪವಾಗಿ ಮಾತನಾಡುವಿರಿ. ಸ್ಮರಣಶಕ್ತಿಯ ಕೊರತೆಯು ಅಧಿಕವಾಗಿ ಕಾಡಡಬಹುದು. ಸೌಂದರ್ಯದ ಬಗ್ಗೆ ಅತಿಯಾದ ಕಳಜಿ ಕಾಣಿಸುವುದು.

ಮೀನ ರಾಶಿ: ಇಂದು ನೀವು ಬಹಳ ಗಡಿಬಿಡಿಯಲ್ಲಿ ಇರುವಂತೆ ತೋರುತ್ತದೆ. ವಿದ್ಯಾರ್ಥಿಗಳು ಬಂದಷ್ಟೇ ಅಂಕಗಳಿಗೆ ತೃಪ್ತಿಪಡಬೇಕಾಗುತ್ತದೆ. ಮನಸ್ಸಿನ ಅಸ್ಥಿರತೆಯಿಂದ ನಿಮ್ಮ ಸಂಪತ್ತನ್ನು ಕಳೆದುಕೊಳ್ಳುವಿರಿ. ನಿಮ್ಮ ವಸ್ತುಗಳು ಕಾಣೆಯಾಗಬಹುದು. ಮಾತಿನ ಬಿರುಸು ಅಧಿಕವಾಗಿ ಇರುವುದು. ಇಂದಿನ ಖರ್ಚು ನಿಮ್ಮ ಜೇಬಿಗೆ ಭಾರವಾದೀತು. ಶತ್ರುಗಳ ತೊಂದರೆಯಿಂದ ನಿರ್ಮಾಣ ಕಾರ್ಯವು ನಿಧಾನವಾಗಲಿದೆ. ಯಂತ್ರೋಪಕರಣಗಳ ಮಾರಾಟದಿಂದ ತೃಪ್ತಿ ಇರವುದು. ನೌಕರರ ವರ್ತನೆಯ ಮೇಲೆ ನಿಮ್ಮ ಕಣ್ಣಿಡಿ. ಬಂಧುಗಳ ಜೊತೆ ಕಲಹವಾಗುವುದು. ಸಂಗಾತಿಯ ನೆರವನ್ನು ನೀವು ನಿರೀಕ್ಷಿಸುವಿರಿ. ಆದ್ಯತೆಯ ಮೇಲೆ ನಿಮ್ಮ ಕಾರ್ಯಗಳು ಇರಬಹುದು. ವಿಳಂಬವು ನಿಮಗೆ ಇಷ್ಟವಾಗದು. ಅಧಿಕಾರಿಗಳ ಮನವನ್ನು ಒಲಿಸಿ ನಿಮ್ಮ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ಮಕ್ಕಳಿಂದ ಶುಭ ಸಮಾಚಾರವು ನಿಮಗೆ ಬರಲಿದೆ.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್