Horoscope Today 30 September : ಇಂದು ಈ ರಾಶಿಯವರ ಶತ್ರುಗಳಿಗೆ ಭಯದ ವಾತಾವರಣ

ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಶರದ್ ಋತುವಿನ ಆಶ್ವಯುಜ ಮಾಸ ಶುಕ್ಲ ಪಕ್ಷದ ಅಷ್ಟಮೀ ತಿಥಿ ಮಂಗಳವಾರ ದುಃಸ್ವಪ್ನ, ನಿರ್ಲಿಪ್ತತೆ, ಶಿಕ್ಷಣದ ಆಲೋಚನೆ, ಸಾತ್ತ್ವಿಕ ಆಹಾರ ಸೇವನೆ, ಹಳೆಯ ವಸ್ತುಗಳ ದುರಸ್ತಿ, ಅಡ್ಡ ಪರಿಣಾಮ ಎಲ್ಲವೂ ಈ ದಿನದ ವಿಶೇಷ.

Horoscope Today 30 September : ಇಂದು ಈ ರಾಶಿಯವರ ಶತ್ರುಗಳಿಗೆ ಭಯದ ವಾತಾವರಣ
Horoscope
Edited By:

Updated on: Sep 30, 2025 | 1:30 AM

ಶಾಲಿವಾಹನ ಶಕೆ ರ ವಿಶ್ವಾ1948ವಸು ಸಂವತ್ಸರದ ದಕ್ಷಿಣಾಯನ, ಋತು : ಶರದ್, ಚಾಂದ್ರ ಮಾಸ : ಆಶ್ವಯುಜ, ಸೌರ ಮಾಸ : ಕನ್ಯಾ, ಮಹಾನಕ್ಷತ್ರ : ಹಸ್ತ, ವಾರ : ಮಂಗಳ, ಪಕ್ಷ : ಶುಕ್ಲ, ತಿಥಿ : ಅಷ್ಟಮೀ, ನಿತ್ಯನಕ್ಷತ್ರ : ಉತ್ತರಾಷಾಢಾ, ಯೋಗ : ವೈಧೃತಿ, ಕರಣ : ಕೌಲವ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 09 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:09 – 16:39, ಗುಳಿಕ ಕಾಲ 12:09 – 13:39, ಯಮಗಂಡ ಕಾಲ 09:10 – 10:40

ಎಂಟನೇ ದಿನದ ನವರತ್ರದಲ್ಲಿ ಪೂಜೆಗೊಳ್ಳುವ ದೇವಿ ಮಹಾಗೌರೀ. ಮಹಾಸರಸ್ವತಿಯ ಅಂಶ ಈ ದೇವಿ. ಈಕೆಯ ರೂಪ ಬಿಳಿಯ ಎತ್ತನ್ನೇರಿ, ಬಿಳಿಯ ಉಡುಪನ್ನು ಧರಿಸಿ, ತ್ರಿಶೂಲ, ಡಮರು, ವರದ ಹಾಗೂ ಅಭಯ ಮುದ್ರೆಯನ್ನು ಧರಿಸಿದವಳು. ಶಿವನ ಅರ್ಧಾಂಗಿನಿಯಾಗಿ ಇರುವವಳು ಇವಳು. ವಿದ್ಯಾಪ್ರದಾನೆಯಾಗಿ ಹರಸಲಿ.

ಮೇಷ ರಾಶಿ : :ನಿರ್ಲಿಪ್ತಯಿದ್ದರೆ ಯಾರೂ ಬೇಸರ ಮಾಡಿಸಲಾರರು. ಎಲ್ಲವನ್ನೂ ನೀವು ಪ್ರೀತಿಯಿಂದ ವಿಶ್ವಾಸದಿಂದ ಪಡೆಯಲಾಗದು. ಯಾರ ಬೆಂಬಲಕ್ಕೂ ನೀವು ಸುಮ್ಮನೇ ಇರಲಾರಿರಿ. ಇಂದು ನಿಮಗೆ ದೇವತಾರಾಧನೆಯಲ್ಲಿ ಮನಸ್ಸಾಗುವುದು. ಸಿಟ್ಟಾಗಬೇಕಾದ ಸ್ಥಿತಿಯಲ್ಲಿಯೂ ನೀವು ಪ್ರಶಾಂತರಾಗಿರುವುದು‌ ಆಶ್ಚರ್ಯಕರ ಸಂಗತಿಯಾಗಿದೆ. ಮನೆಯ ಕೆಲಸದಲ್ಲಿ ನೀವು ಮಗ್ನರಾಗುವಿರಿ. ನಿಮ್ಮ ಕರ್ತವ್ಯ ಪರತೆಗೆ ಅಧಿಕಾರಿಗಳಿಂದ ಪ್ರಶಂಸೆ. ಮಕ್ಕಳಿಂದ ನಿಮಗೆ ಉದ್ಯಮಕ್ಕೆ ಅವಕಾಶ ಸಿಗುವುದು. ಉದ್ಯೋಗದ ನಿಮಿತ್ತ ನೌಕರರ ತುರ್ತು ಸಭೆಯನ್ನು ಕರೆಯಲಿದ್ದೀರಿ. ಮನೆ ಮತ್ತು ಕೆಲಸವನ್ನು ಸಮಾನವಾಗಿ ಇಟ್ಟುಕೊಳ್ಳಿ. ಕಟ್ಟಡವನ್ನು ನಿರ್ಮಾಣ ಮಾಡುವವರಿಗೆ ಹೆಚ್ಚು ಕೆಲಸವು ಇರಲಿದೆ. ಹಳೆಯ ಖಾಯಿಲೆಯಿಂದ ಬಳಲಬಹುದು. ಬೇಡವಾದ ವಸ್ತುಗಳನ್ನು ಮಾರಿ ಹಣವನ್ನು ಪಡೆಯುವಿರಿ. ಹಣದ ಲೆಕ್ಕಾಚಾರದಲ್ಲಿ ನಿಮಗೆ ಮೋಸವಾದುದ್ದು ತಿಳಿದುಬರುವುದು.

ವೃಷಭ ರಾಶಿ : :ನಿದ್ರಯಲ್ಲಿನ ಕನಸು ನಿಮ್ಮನ್ನು ಭಯಗೊಳಿಸುವುದು. ಕೆಲವು ಸುದ್ದಿಗಳು ನಿಮ್ಮನ್ನು ಭ್ರಾಂತಗೊಳಿಸಬಹುದು. ಅಪರಿಚಿತ ವ್ಯಕ್ತಿಗಳು ನಿಮಗೆ ಬಹಳ ಆಪ್ತರಾಗುವರು. ಸಂಗಾತಿಯ ಪುನರಾವರ್ತಿತ ಘಟನೆಯಿಂದ ನಿಮಗೆ ಬಹಳ ಬೇಸರವಾಗುವುದು. ಸಂಗಾತಿಯ ಮಾತು ನಿಮಗೆ ಸಿಟ್ಟನ್ನ ತರಿಸೀತು. ನಿಮ್ಮನ್ನು ಕನಿಷ್ಠವಾಗಿಯೂ ಉದ್ಯಮದಲ್ಲಿ ಕಾಣಬಹುದು. ಯಾವುದೇ ಫಲಾಪೇಕ್ಷೆ ಇಲ್ಲದೇ ಸ್ನೇಹಿತರನ್ನು ಮಾಡಿಕೊಳ್ಳುವಿರಿ. ಇಂದಿನ ನಿಮ್ಮ ವ್ಯಾಪಾರವು ಎಂದಿಗಿಂತ ಹೆಚ್ಚು ಕಳೆಗಟ್ಟಲಿದೆ. ಹೂಡಕೆಯ ಹಣವು ನಿಮಗೆ ಸರಿಯಾಗಿ ಸಿಗಲಿದೆ. ವೇತನವನ್ನು ಹಂಚಿಕೊಂಡರೆ ಅಸೂಯೆಪಡುವರು. ನಿಮ್ಮನ್ನು ನೀವು ತೆರೆದುಕೊಳ್ಳಲು ಅವಕಾಶ ಸಿಗುವುದು. ನಿವೃತ್ತಿಯಾದವರಿಗೆ ಬರಬೇಕಾದ ಹಣವನ್ನು ಪಡೆಯಲು ತೊಂದರೆಯಾದೀತು. ನಿಮ್ಮ ನಿಯಮಗಳನ್ನು ನೀವೇ ಮುರಿದುಕೊಳ್ಳುವಿರಿ. ಮಕ್ಕಳ‌ ಮೇಲೆ ಅಶಿಸ್ತಿನ ಕಾರಣಕ್ಕೆ ಸಿಟ್ಟಾಗುವಿರಿ. ಮನೆಗೆ ಬಂದವರನ್ನು ಖಾಲಿ ಕೈಯಲ್ಲಿ ಕಳುಹಿಸಿ ಅನಂತರ ಪಶ್ಚಾತ್ತಾಪಪಡುವಿರಿ. ನಿಮ್ಮ ಕೆಲವು ಹೊಸ ಪ್ರಯತ್ನಗಳು ಫಲ ನೀಡುತ್ತವೆ.

ಮಿಥುನ ರಾಶಿ : :ಭವಿಷ್ಯವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಶಿಕ್ಷಣವನ್ನು ಪಡೆಯುವ ಯೋಚನೆ ಮಾಡಿ. ಕಛೇರಿಯಲ್ಲಿ ನಿಮ್ಮ ಸ್ಥಾನವನ್ನು ಉಳಿಸಿಕೊಳ್ಳಲುವಂತೆ ಇರಿ. ಸಂಗಾತಿಯ ಜೊತೆ ಕಲಹದ ಕಾರಣ ಎಲ್ಲವೂ ಅಸ್ತವ್ಯಸ್ತ ಆಗಬಹುದು.‌ ವಿಶ್ವಾಸಘಾತವು ನಿಮಗೆ ದುಃಖವನ್ನು ತರಿಸಬಹುದು. ಆಹಾರದ ಕೊರತೆಯಿಂದ ನಿಮಗೆ ಸಂಕಟವಾಗಲಿದೆ. ದುಡಿಮೆಯ ಬೆನ್ನೇರಿ ಸಂಬಂಧಗಳನ್ನು ಅಗೌರವದಿಂದ ಕಾಣುವ ಸ್ವಭಾವವನ್ನು ಬೆಳೆಸಿಕೊಂಡಿರುವಿರಿ. ಖಾಸಗಿ ಸಂಸ್ಥೆಯು ನಿಮಗೆ ಉನ್ನತ ಸ್ಥಾನವನ್ನು ಕೊಡಲಿದೆ. ಉಳಿತಾಯವನ್ನು ಆದಾಯದ ಆಧಾರದ ಮೇಲೆ ಮಾಡಿ. ನಿಮ್ಮ ಮತ್ತು ನೌಕರರ ನಡುವಿನ ಸಂಬಂಧವು ಹದ ತಪ್ಪಬಹುದು. ಸಿಕ್ಕ ಗೌರವಕ್ಕೆ ತಕ್ಕಂತೆ ನಿಮ್ಮ ವರ್ತನೆ ಇದ್ದರೆ ಒಳ್ಳೆಯದು. ವಿಶೇಷ ಕೆಲಸಕ್ಕೆ ಹೊರಡುವಾಗ ಕುಲದೇವರ ಸ್ಮರಣೆಯನ್ನು ಮರೆಯುವುದು ಬೇಡ. ನೇರ ನುಡಿಯಿಂದ ಎದುರಿನವರಿಗೆ ತೊಂದರೆಯಾದೀತು. ಭೂ ವ್ಯವಹಾರದಲ್ಲಿ ಕೈ ಹಾಕಿದರೆ ಪರಿಶೀಲನೆ ಬಹಳ ಮುಖ್ಯ. ಹಣವನ್ನು ಹೊಂದಿಸುವುದು ಇಂದು ಸುಲಭದ ಕೆಲಸವಲ್ಲ‌.

ಕರ್ಕಾಟಕ ರಾಶಿ : :ಸಾರ್ವಜನಿಕವಾಗಿ ಗುಂಪುಗಾರಿಕೆಯನ್ನು ಮಾಡಲುಹೋಗುವುದು ಬೇಡ. ಮನೆಗೆ ಬಂದವರನ್ನು ಬರಿದಾಗಿ ಕಳುಹಿಸುವುದು ಬೇಡ. ಇಂದು ನೀವು ಹಣವನ್ನು ಖರ್ಚು ಮಾಡದೇ ಜಿಪುಣರಂತೆ ತೋರುವಿರಿ. ಧನದ‌ ಲಾಭವನ್ನು ನಿರೀಕ್ಷಿಸದೇ ಕೆಲಸವನ್ನು ಆರಂಭಿಸಿ. ನೀವು ಮಿಂಚಿನ‌ ವೇಗದಲ್ಲಿ ಮಾಡುವ ಕೆಲಸವು ಎಲ್ಲರಿಗೂ ಇಷ್ಟವಾಗುವುದು. ಮಕ್ಕಳನ್ನು ತಿದ್ದುವ ಕೆಲಸದಲ್ಲಿ ಸಮಯವು ಹೋಗುವುದು. ನಿಮ್ಮ‌ ಸ್ವಭಾವದ ದುರುಪಯೋಗವಾಗಲಿದೆ. ಸತ್ತ್ವಯುತವಾದ ಆಹಾರವನ್ನು ಸೇವಿಸಿ. ನಗುಮುಖವು ನಿಮ್ಮ ವ್ಯಾಪಾರಕ್ಕೆ ಪೂರಕ. ಗಂಭೀರವಾದ ಚಿಂತನೆಯನ್ನು ಮಾಡುವುದು ನಿಮಗೆ ಇಷ್ಟವಿಲ್ಲದ ಕೆಲಸವಾಗಲಿದೆ. ಸಮಾರಂಭದಲ್ಲಿ ಆಪ್ತರ ಸಮಾಗಮವಾಗಲಿದೆ. ಹಳೆಯ ಗೆಳತಿಯು ಸಿಗಬಹುದು. ನಿಮ್ಮ ವೈಯಕ್ತಿಕ ವಿಚಾರವನ್ನು ಇತರರಿಗೆ ತಿಳಿದುಕೊಳ್ಳುವ ಕುತೂಹಲ ಇರಲಿಕ್ಕಿದೆ. ಯಾರಿಂದಲೂ ಅತಿಯಾಗಿ ನಿರೀಕ್ಷಿಸದೇ ಕೆಲಸವನ್ನು ಮಾಡಿ. ಬೇಕಾದವರನ್ನು ಮಾತಿನಿಂದ ದೂರ ಮಾಡಿಕೊಳ್ಳುವಿರಿ.

ಸಿಂಹ ರಾಶಿ : :ಉಸಿರಿಗೆ ಸಂಬಂಧಿಸಿ ತೊಂದರೆಯಿಂದ ನಿಮ್ಮೊಳಗೆ ಆತಂಕ ಉಂಟಾಗುವುದು. ಜವಾಬ್ದಾರಿಯ ಸ್ಥಾನದಲ್ಲಿ ಇದ್ದು ನೀವು ವರ್ತಿಸಬೇಕಾಗುವುದು. ವಿದ್ಯಾಭ್ಯಾಸದಲ್ಲಿ ಪ್ರಗತಿಯ ಜೊತೆ ಶತ್ರುಗಳೂ ಉಂಟಾಗುವರು. ಅಪರಿಚಿತರ ಜಾಲಕ್ಕೆ ಸಿಕ್ಕಿ ಮೋಸ ಹೋಗಬಹುದು. ಆರ್ಥಿಕ ಬಲವನ್ನು ನೋಡಿ ಇಂದು ಮುಂದುವರಿಯಿರಿ. ಸ್ನೇಹಿತರು ನಿಮ್ಮ ಬಳಿ ಹಣದ ಸಹಾಯವನ್ನು ಕೇಳಬಹುದು. ವೃತ್ತಿಯಲ್ಲಿ ನೀವು ಹೊಸತನ್ನು ತರಲು ಯೋಚಿಸಬಹುದು. ನೀವು ಕೊಡುವ ತೀರ್ಮಾನವು ನ್ಯಾಯಸಮ್ಮತವಾಗಿರಲಿ. ಕಾರ್ಯನಿರ್ವಹಣಾ ಹುದ್ದೆಯಿಂದ ಮುಕ್ತರಾಗುವಿರಿ. ಸ್ತ್ರೀಯರಿಂದ ನಿಮಗೆ ಬೇಕಸದ ಸಹಾಯವು ಸಿಗಲಿದೆ. ಇನ್ನೊಬ್ಬರ ಆದಾಯಕ್ಕೆ ತೊಂದರೆಯನ್ನು ಕೊಡುವುದು ಒಳ್ಳೆಯದಲ್ಲ. ಎಂದೋ ಮಾಡಿದ ಉಪಕಾರವು ನಿಮಗೆ ವರವಾಗಿ ಬರಬಹುದು. ‌ಬಲವಂತವಾಗಿ ಇನ್ನೊಬ್ಬರಿಂದ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಪ್ರಾಮಾಣಿಕತೆಯು ಇಂದು ನಿಮಗೆ ವರದಾನವಾಗುವುದು.

ಕನ್ಯಾ ರಾಶಿ : :ಎಲೆಕ್ಟ್ರಾನಿಕ್ ವಸ್ತುಗಳ ದುರಸ್ತಿ ಮಾಡಿಸುವಿರಿ. ಪ್ರಭಾವೀ ವ್ಯಕ್ತಿಗಳ ಸಂಪರ್ಕವು ಯಾರದೋ ಮೂಲಕ ಸಿಗುವುದು. ಇಂದು ಎಲ್ಲರಿಗೂ ನೀವು ಇಷ್ಟವಾಗುವಿರಿ. ಕಲಾತ್ಮಕ ವಿಚಾರದಲ್ಲಿ ಇಂದು ಹೆಚ್ಚು ಆಸಕ್ತಿಯನ್ನು ಇಟ್ಟುಕೊಳ್ಳುವಿರಿ. ನಿಮ್ಮ ನಿರ್ಧಾರವನ್ನು ಇನ್ನೊಬ್ಬರ ಮೇಲೆ‌ ಹೇರುವುದು ಬೇಡ. ಎಲ್ಲರ ಮೇಲೂ ಹಿಡಿತ ಸಾಧಿಸುವುದು ಅಶಕ್ಯ. ರಾಜಕೀಯ ವಲಯದಲ್ಲಿ ನಿಮ್ಮ ಮಾತು ನಡೆಯಲಿದ್ದು ಅದನ್ನು ಸದುಪಯೋಗವಾಗಿವಂತೆ ಮಾಡಿಕೊಳ್ಳಿ. ಮನಸ್ಸಿಗೆ ಕೆಲವು ಸಮಯ ವಿಶ್ರಾಂತಿ ಬೇಕಾಗುವುದು. ಮನೆಯ ಮೇಲೆ‌‌ ಚೋರರ ಭಯವು ಕಾಡಬಹುದು. ಕೃಷಿಯಲ್ಲಿ ಸ್ವಲ್ಪಮಟ್ಟಿಗೆ ನಷ್ಟವಾಗುವ ಸಾಧ್ಯತೆ ಇದೆ. ಅನುಭವಿಗಳ ಮಸರ್ಗದರ್ಶನವು ನಿಮಗೆ ಸಿಗಲಿದೆ. ಸಣ್ಣ ವ್ಯಾಪಾರಿಗಳಿಗೆ ಸ್ವಲ್ಪ ಲಾಭವಾಗುವುದು. ಬಂಧುಗಳ ಜೊತೆಗೆ ನಿಮ್ಮ ಒಡನಾಟವು ಚೆನ್ನಾಗಿರುವುದು. ಸಂಬಂಧವು ನಿಮಗೆ ಹೊಸ ಉತ್ಸಾಹವನ್ನು ಕೊಡಬಹುದು. ಮಾತಿನಲ್ಲಿ ಹಿಡಿತವಿದ್ದರೆ ನಿಮಗೆ ಇಂದು ಕ್ಷೇಮ. ಸಣ್ಣದಕ್ಕೂ ಸಂಗಾತಿಯ ಬೆಂಬಲವನ್ನು ಅಪೇಕ್ಷಿಸುವಿರಿ.

ತುಲಾ ರಾಶಿ : :ಮರದ ಕೆಲಸ ಮಾಡುವವರಿಗೆ ಶ್ರಮ‌ ಅಧಿಕವಾಗುವುದು. ಪರ ಊರು ನಿಮ್ಮ ಆರೋಗ್ಯವನ್ನು ಹಾಳುಮಾಡುವುದು. ಮೇಲಧಿಕಾರಿಗಳ ಕಿರುಕುಳವನ್ನು ಸಹಿಸುವುದು ಕಷ್ಟವಾಗುವುದು. ಹಳೆಯ ವಿಚಾರಕ್ಕೆ ಸಂಗಾತಿಯ ಜೊತೆ ಕಲಹವಾಗಲಿದೆ. ಆದಷ್ಟು ಒಬ್ಬರು ಸುಮ್ಮನಿದ್ದರೆ ಕಲಹವು ಶಾಂತವಾಗಲಿದೆ. ಶ್ರೇಷ್ಠ ವಸ್ತುಗಳ ಲಾಭವಿದ್ದರೂ ಅದನ್ನು ಉಳಿಸಿಕೊಳ್ಳುವುದು ಕಷ್ಟವಾದೀತು. ಮನೆಯ ಶುಭ ಕಾರ್ಯಗಳಿಗೆ ನೀವು ಕೈಲಾದ ಸಹಕಾರವನ್ನು ಕೊಡಬಹುದು. ಹರಕೆಯನ್ನು ದೇವರಿಗೆ ಅರ್ಪಿಸುವುದನ್ನು ಮರೆಯಬೇಡಿ‌. ಕಛೇರಿಯ ಕೆಲಸಗಳನ್ನು ಬೇರೆ ಸಮಯದಲ್ಲಿಯೂ ಮಾಡಬೇಕಾಗುವುದು. ಕೆಲವು ಘಟನೆಗಳನ್ನು ನೀವು ಮರೆತು ಮುಂದಡಿ ಇಡಬೇಕಾದೀತು.‌ ಸಂಗಾತಿಯ ಬೆಂಬಲವನ್ನು ನಿರಾಕರಿಸುವಿರಿ. ತಪ್ಪಿಗೆ ಕ್ಷಮೆ ಕೇಳಿ ದೊಡ್ಡವರಾಗಲಿದ್ದೀರಿ. ಅವರ ಎಲ್ಲ ಸಹಕಾರಗಳನ್ನು ತೆಗೆದುಕೊಳ್ಳಿ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಬಹುದು. ನಿಮ್ಮ ಅಧ್ಯಯನವು ಕಡಿಮೆಯಾಗಲಿದೆ. ನಿಮ್ಮವರನ್ನು ದೂರ ಮಾಡಿಕೊಳ್ಳದೇ ಯಥಾಸ್ಥಿತಿಯಲ್ಲಿ ಇರಿಸಿ.

ವೃಶ್ಚಿಕ ರಾಶಿ : :ಪ್ರಾಚೀನ ವೈದ್ಯಪದ್ಧತಿಯನ್ನು ಅನುಸರಿಸುವುದು ಉತ್ತಮ. ಅಡ್ಡ ಪರಿಣಾಮದಿಂದ ದೂರವಿರಬಹುದು. ಯಾರನ್ನೋ ಟೀಕಸುತ್ತ ನಿಮ್ಮ ಸಮಯವನ್ನು ಹಾಳುಮಾಡಿಕೊಳ್ಳುವಿರಿ. ಇಂದಿನ ಆದಾಯ ಕಡಿಮೆ ಇದ್ದರೂ ನೆಮ್ಮದಿ ಇರಲಿದೆ. ಪ್ರಾಮಾಣಿಕತೆ ನಿಮಗೆ ವರವಾಗಬಹುದು. ನಿಮ್ಮ ಸರಳತೆಯು ನಿಮಗೆ ಧನಾತ್ಮಕ ಅಂಕಗಳನ್ನು ನೀಡುವುದು. ಸ್ತ್ರೀಯರಿಂದ ನೀವು ಸಂತೋಷವನ್ನು ಅನುಭವಿಸುವಿರಿ. ನಿಮ್ಮ ಮನಸ್ಸಿಗೆ ಹೊಂದುವವರ ಒಡನಾಟ ಸಿಗುವುದು. ನಿಮ್ಮವರೇ ನಿಮಗೆ ತೊಂದರೆಯನ್ನು ಕೊಡುವರು. ವಿವಾಹ ವಿಚಾರವನ್ನು ನೀವು ಆತುರದಿಂದ ಮಾಡುವುದು ಬೇಡ. ನಿಮ್ಮ ಅನುಭವವು ಇತರದ್ದು ಆಗಬೇಕಾಗಿಲ್ಲ. ಮಕ್ಕಳ‌ ಮೇಲೆ ಮೋಹವು ಅಧಿಕವಾಗುವುದು. ಸಿಕ್ಕ ಸಂಪತ್ತನ್ನು ಜೋಪಾನವಾಗಿ ಇರಿಸಿಕೊಳ್ಳಿ. ಅಗ್ನಿಯ ಬಗ್ಗೆ ಎಚ್ಚರಿಕೆ ಇರಲಿ. ಯಾವುದೇ ಕೆಲಸಕ್ಕೆ ಬೇರೆಯವರ ಮೇಲೆ ಅವಲಂಬಿತರಾಗಬೇಡಿ. ಉದ್ಯಮವು ದಿಕ್ಕು ತಪ್ಪದಂತೆ ನೋಡಿಕೊಳ್ಳಿ. ಹೊರದೇಶಕ್ಕೆ ನೀವು ಹೋಗಬೇಕಾದ ಸ್ಥಿತಿಯು ಬರಬಹುದು.

ಧನು ರಾಶಿ ::ನೀವು ಇಂದು ಯಾರ ಕೈ ಕೆಳಗೆ ಕೆಲಸ ಮಾಡುತ್ತೀರಿ ಎನ್ನುವುದು ನಿಮ್ಮ ಉತ್ಸಾಹಕ್ಕೆ ಕಾರಣವಾಗುವುದು. ನಿಮ್ಮ ಆತ್ಮವಿಶ್ವಾಸವೇ ಏಕಾಗ್ರತೆಯನ್ನು ತರುವುದು. ಯಾರ ಮೇಲೂ ದ್ವೇಷ ಬರುವಂತಹ ಕೆಲಸವನ್ನು ಮಾಡುವುದು ಬೇಡ. ಇಂದು ನೀವು ವ್ಯವಹಾರದಲ್ಲಿ ಜಾಗರೂಕರಾಗಿ ಇರಬೇಕಸದೀತು. ಹಣವನ್ನು ತಪ್ಪಾದ ಕಡೆಯಲ್ಲಿ ಹೂಡುವಿರಿ. ಸುಮ್ಮನೇ ಎಲ್ಲದಕ್ಕೂ ಒಪ್ಪಿಗೆಯನ್ನು ಕೊಡುವುದು ಬೇಡ. ಅಧ್ಯಯನದಿಂದ ಪ್ರತಿಷ್ಠೆ ಹೆಚ್ಚಾಗುವುದು. ಸಾಹಸಮಯವಾದ ಪ್ರವೃತ್ತಿಯನ್ನು ಇಟ್ಟುಕೊಳ್ಳುವುದು ಬೇಡ. ನಿಮ್ಮ‌ ಅಭಿಪ್ರಾಯವನ್ನು ಹಂಚಿಕೊಳ್ಳಿ. ನಿಮ್ಮ ಸ್ವಭಾವವನ್ನು ಬದಲಾಯಿಸಿಕೊಳ್ಳುವಿರಿ. ನಿಮ್ಮ ವಸ್ತುಗಳ ಬಳಕೆಯನ್ನು ನೀವು ನಿರ್ಲಕ್ಷ್ಯದಿಂದ‌ ಮಾಡುವಿರಿ. ಸರಳ ಮಾತುಗಳನ್ನು ಆಡುವುದು ನಿಮಗೆ ಬಾರದು. ಹೊಸ ಕೆಲಸಕ್ಕೆ ಸೇರುವ ಉತ್ಸಾಹದಲ್ಲಿ ನೀವಿರುವಿರಿ. ಮಕ್ಕಳ ನಡುವೆ ವಾದವು ಬೆಳೆಯಬಹುದು. ನೀವು ಹಳೆಯ ಸ್ನೇಹಿತರನ್ನು ಭೇಟಿ ಮಾಡಲು ಹೋಗಬಹುದು. ಸ್ವಂತ ಬುದ್ಧಿಯಿಂದ ನಿಮ್ಮ ಕಾರ್ಯವನ್ನು ಮಾಡಿಕೊಳ್ಳಿ.

ಮಕರ ರಾಶಿ ::ನಿಮಗೆ ಸಾಂತ್ವನದ ಮಾತುಗಳು ಮನಸ್ಸಿಗೆ ಬಲವನ್ನು ಕೊಡುವುದು. ಒಮ್ಮೆಲೇ‌ ಅಧಿಕ ಲಾಭವನ್ನೂ ಇಂದು ಯಾರಿಂದಲೂ ನಿರೀಕ್ಷಿಸಬಾರದು. ನೀವು ಇಂದು ದೇವರ ಮೇಲೆ‌ ಸಂಪೂರ್ಣ ಭಾರ ಹಾಕಿ ನಿಮ್ಮ ಕಾರ್ಯವನ್ನು ಆರಂಭಿಸುವಿರಿ. ಪ್ರೇಮವನ್ನು ನೀವು ಒಪ್ಪಿಕೊಳ್ಳದೇ ನಿಮ್ಮದೇ ವಾದವನ್ನು ಮಾಡುವಿರಿ. ಸಂಗಾತಿಯ ಮಾತುಗಳು ನಿಮಗೆ ಕಿರಿಕಿರಿಯನ್ನು ತಂದೀತು. ಸುಲಭದ ಕೆಲಸಗಳನ್ನು ಸಂಕೀರ್ಣ ಮಾಡಿಕೊಳ್ಳುವಿರಿ. ಗೃಹನಿರ್ಮಾಣಕ್ಕೆ ಸ್ಥಳಪರಿಶೀಲನೆ ಆಗುವುದು. ಸಂಗಾತಿಯಿಂದ ಹಣದ ಸಹಾಯವನ್ನು ಪಡೆಯುವಿರಿ. ಶೋಧಕರಿಗೆ ಹೆಚ್ಚಿನ ಅವಕಾಶಗಳು ಸಿಗುವ ಸಾಧ್ಯತೆ ಇದೆ. ಸಾಮಾಜಿಕ ಕೆಲಸಗಳು ನಿಮಗೆ ಅಭ್ಯಾಸದಂತೆ‌ ಅಗುವುದು. ಬಂಧುಗಳ ಆಗಮನವು ಖುಷಿಕೊಡುವುದು. ಸಂಗಾತಿಯಾಗಲಿರುವವರು ಇಂದು ಭೇಟಿಯಾಗುವಿರಿ. ವಿದೇಶದಲ್ಲಿರುವ ಕುಟುಂಬದ ಸದಸ್ಯರಿಂದ ನಿಮಗೆ ಶುಭ ಸುದ್ದಿಯು ಬರುವುದು. ಉದ್ಯಮದಲ್ಲಿ ನಿಮಗೆ ಪ್ರಗತಿ ಕಾಣಿಸುವುದು.

ಕುಂಭ ರಾಶಿ : :ವಾಹನ ಚಾಲನೆಯಿಂದ ಜೀವನ ನಡೆಸುವವರು ದೂರದೂರಿಗೆ ಪ್ರಯಾಣ ಮಾಡುವಿರಿ. ಇಂದು ನಿಮ್ಮ ಹಳೆಯ ವೈರವು ಮುರಿದುಬೀಳುವುದು. ನೆಮ್ಮದಿಗೆ ನಿಮ್ಮದೇ ಸೂತ್ರಗಳನ್ನು ನೀವು ಅನುಸರಿಸುವಿರಿ.‌ ಕೆಲವು ಅಭ್ಯಾಸವನ್ನು ಬಿಟ್ಟುಬಿಡುವಿರಿ. ಸ್ನೇಹಿತರ ಜೊತೆ ಹೆಚ್ಚಿನ ಸಮಯವನ್ನು ಕಳೆಯುವಿರಿ. ಸಂಸಾರವನ್ನು ನಿಭಾಯಿಸುವ ಕಲೆಯನ್ನು ನೀವು ತಿಳಿದುಕೊಳ್ಳಬಹುದು. ಔದ್ಯೋಗಿಕವಾದ ವಿಚಾರವನ್ನು ಮನೆಯಲ್ಲಿ ಸಹೋದರರ‌ ಜೊತೆ ಚರ್ಚಿಸುವಿರಿ. ತಾಯಿಯಿಂದ ನಿಮಗೆ ಹಿತವಚನವು ಸಿಗಲಿದೆ. ಯಾವುದನ್ನೂ ಗೊತ್ತಿಲ್ಲದೇ ನಂಬುವುದು ಬೇಡ. ನಿಮ್ಮ ವರ್ತನೆಯು ಎಂದಿಗಿಂತ ಭಿನ್ನವಾಗಿರುವುದು. ಕ್ಲಿಷ್ಟಕರ ಸನ್ನಿವೇಶಗಳನ್ನು ನೀವು ಸುಲಭವಾಗಿ ನಿಭಾಯಿಸುವ ಕಲೆಯನ್ನು ಅರಿತಿರುವಿರಿ. ಅನವಶ್ಯಕ ವಸ್ತುಗಳನ್ನು ಖರೀದಿಸಿ ದಂಡ ಮಾಡುವಿರಿ. ನೀವು ನಿಮ್ಮ ಹಿರಿಯರ ಸಲಹೆಯನ್ನು ಅನುಸರಿಸಿದರೆ ಉತ್ತಮವಾದುದನ್ನು ಪಡೆಯುವಿರಿ. ನಿಮ್ಮ ದೇಹಕ್ಕೆ ಆಯುಧದಿಂದ ಬಲವಾಗಿ ಘಾಸಿಯಾಗಬಹುದು.

ಮೀನ ರಾಶಿ : :ಆಸ್ತಿಯನ್ನು ನಿವೇಶನವಾಗಿ ಪರಿವರ್ತಿಸುವಿರಿ. ಮಾಡಿದ ತಪ್ಪನ್ನೇ ಮತ್ತೆ ಮಾಡಿ, ಎಲ್ಲರ ಕೆಂಗಣ್ಣಿಗೆ ಗುರಿಯಾಗುವಿರಿ. ಇಂದು ನೀವು ಏಕಾಂತವಾಗಿ ಇರಲು ಆಗದು. ಸಾಮಾಜಿಕ ಕಳಕಳಿಯನ್ನು ನೀವು ಹೆಚ್ಚಿಸಿಕೊಳ್ಳುವಿರಿ. ಆದಾಯಕ್ಕಿಂತ ಖರ್ಚು ಹೆಚ್ಚಾಗಿ ಆತಂಕವಾಗಬಹುದು. ಕುಟುಂಬದ ಸದಸ್ಯರ ಪ್ರೀತಿಯು ಸಿಗಲಿದೆ. ಆಕಸ್ಮಿಕ ವಾರ್ತೆಯನ್ನು ನೀವು ಸಮಾಧಾನದಿಂದ ತೆಗೆದುಕೊಳ್ಳಬೇಕಾದೀತು.‌ ನಿಮ್ಮ ಕೆಲಸಕ್ಕೆ ಪ್ರಶಂಸೆಯು ಸಿಗಲಿದೆ. ಅಲಂಕಾರಿಕ ವಸ್ತುಗಳನ್ನು ನಿಮ್ಮ ಜಾಣ್ಮೆಯಿಂದ ಹೆಚ್ಚು ಮಾರಾಟ ಮಾಡುವಿರಿ. ಸಂಗಾತಿಯನ್ನು ಸಂತೋಷಪಡಿಸಲು ಇಷ್ಟಪಡುವಿರಿ‌. ನಿಮ್ಮ ಅಭಿರುಚಿಯು ಬದಲಾಗುವುದು. ಸನ್ನಿವೇಶಗಳನ್ನು ಅರ್ಥಮಾಡಿಕೊಳ್ಳಲು ಕಷ್ಟವಾದೀತು. ಅಲ್ಪ ಶ್ರಮದಿಂದ ಹೆಚ್ಚು ಗಳಿಸುವ ತಂತ್ರವನ್ನು ಹೂಡುವಿರಿ. ಸಹೋದರರು ನಿಮ್ಮ ಕಷ್ಟದಲ್ಲಿ ಭಾಗಿಯಾಗುವರು. ಯಾವದನ್ನೂ ಕ್ಷಣದಲ್ಲಿ ಬದಲಿಸಲಾಗದು. ನಿಮ್ಮ ಬಳಿ ಇರುವುದುನ್ನು ಕೊಡಲಾರಿರಿ.

ಲೋಹಿತ ಹೆಬ್ಬಾರ್ – 8762924271 (what’s app only)