AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sagittarius Horoscope: ಏಪ್ರಿಲ್​​ ತಿಂಗಳು ಧನು ರಾಶಿಯವರಿಗೆ ಹೇಗಿರಲಿದೆ? ಇಲ್ಲಿದೆ ಮಾಸಭವಿಷ್ಯ

2026ರ ಏಪ್ರಿಲ್ ಧನು ರಾಶಿಯವರಿಗೆ ಮಿಶ್ರಫಲಗಳನ್ನು ನೀಡಲಿದ್ದು, ವೃತ್ತಿಯಲ್ಲಿ ಗೌರವ, ಅಧಿಕಾರ ಲಭಿಸಲಿದೆ. ಮೂರನೇ ಮನೆಯ ರಾಹು-ಬುಧರಿಂದ ಹೊಸ ಆದಾಯ ಮೂಲಗಳು ಸೃಷ್ಟಿಯಾಗಲಿದ್ದು, ಹಠಾತ್ ಧನಲಾಭ ಯೋಗವಿದೆ. ವಿಶೇಷವಾಗಿ ಆಹಾರ ಉದ್ಯಮದಲ್ಲಿರುವವರಿಗೆ ಗುರು ಬಲದಿಂದ ಶುಭ ಫಲಗಳು ದೊರೆಯುತ್ತವೆ. ಗೃಹ ನಿರ್ಮಾಣದಲ್ಲಿ ವಿಳಂಬ, ವಾಹನ ಖರ್ಚು ಹೆಚ್ಚಬಹುದು. ವಿದ್ಯಾರ್ಥಿಗಳಿಗೆ ವಿದೇಶ ಪ್ರಯಾಣದ ಯೋಗವಿದೆ.

Sagittarius Horoscope: ಏಪ್ರಿಲ್​​ ತಿಂಗಳು ಧನು ರಾಶಿಯವರಿಗೆ ಹೇಗಿರಲಿದೆ? ಇಲ್ಲಿದೆ ಮಾಸಭವಿಷ್ಯ
ಮಾಸಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Apr 11, 2026 | 3:18 PM

Share

ಕಾಲಜ್ಙಾನ ಶಾಸ್ತ್ರವು ಸೂಚಿಸುವಂತೆ ಏಪ್ರಿಲ್ 2026ರ ಗ್ರಹಗತಿಗಳನ್ನು ಗಮನಿಸಿದಾಗ, ಧನು ರಾಶಿಯವರಿಗೆ ಅಂದರೆ ಮೂಲ, ಪೂರ್ವಾಷಾಢ, ಉತ್ತರಾಷಾಢ 1ನೇ ಪಾದದ ನಕ್ಷತ್ರದವರಿಗೆ ಈ ತಿಂಗಳು ಮಿಶ್ರಫಲಗಳಿಂದ ಕೂಡಿದೆ. ರಾಶ್ಯಾಧಿಪತಿ ಗುರು ಮಿಥುನ ರಾಶಿಯಲ್ಲಿ, ಶನಿ ಕುಂಭದಲ್ಲಿ ಹಾಗೂ ರಾಹು-ಕೇತುಗಳು ಕುಂಭ ಮತ್ತು ಸಿಂಹ ರಾಶಿಯಲ್ಲಿದ್ದಾರೆ. ನಿಮ್ಮ ಜಾತಕದ ದಶೆ ಮತ್ತು ಗೋಚಾರ ಫಲಗಳು

​​ಅಧಿಕಾರ ಮತ್ತು ಉದ್ಯೋಗ :

ನಿಮ್ಮ ರಾಶ್ಯಾಧಿಪತಿ ಗುರುವು ಏಳನೇ ಮನೆಯಲ್ಲಿ ಇದ್ದು ನಿಮ್ಮ ರಾಶಿಯನ್ನು ನೋಡುತ್ತಿರುವುದು ಅತ್ಯಂತ ದೊಡ್ಡ ಬಲ. ಇದು ನಿಮಗೆ ಸಮಾಜದಲ್ಲಿ ಗೌರವ ಮತ್ತು ಕೆಲಸದಲ್ಲಿ ಅಧಿಕಾರ ತಂದುಕೊಡಲಿದೆ. ನಿಮ್ಮ ರಾಶಿಯ ಹಿಂದಿನ ಮನೆಯಲ್ಲಿ (ವೃಶ್ಚಿಕ) ಮಂಗಳ-ಚಂದ್ರ ಇರುವುದರಿಂದ ಕೆಲಸದಲ್ಲಿ ಸ್ವಲ್ಪ ಒತ್ತಡ ಅಥವಾ ಮಾನಸಿಕ ಆತಂಕ ಇರಬಹುದು, ಆದರೆ ಯಶಸ್ಸು ನಿಮ್ಮದಾಗುತ್ತದೆ.

ಆರ್ಥಿಕತೆ ಮತ್ತು ಆದಾಯ :

ಮೂರನೇ ಮನೆಯಲ್ಲಿ ರಾಹು ಮತ್ತು ಬುಧ ಇರುವುದರಿಂದ ನಿಮ್ಮ ಬುದ್ಧಿವಂತಿಕೆಯಿಂದ ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಹಠಾತ್ ಧನಲಾಭದ ಯೋಗವಿದೆ. ಆದರೆ ನಾಲ್ಕನೇ ಮನೆಯಲ್ಲಿ ಶನಿ-ರವಿ ಇರುವುದರಿಂದ ಮನೆ ಅಥವಾ ವಾಹನದ ಮೇಲಿನ ಖರ್ಚು ಹೆಚ್ಚಾಗಬಹುದು.

ಗೃಹ ನಿರ್ಮಾಣ ಮತ್ತು ಕೃಷಿ :

ನಾಲ್ಕನೇ ಮನೆಯಲ್ಲಿ ಶನಿ ಮತ್ತು ರವಿಯ ಯುತಿ ಇರುವುದರಿಂದ ಗೃಹ ನಿರ್ಮಾಣ ಕಾರ್ಯಗಳಲ್ಲಿ ವಿಳಂಬ ಅಥವಾ ತಾಂತ್ರಿಕ ಅಡೆತಡೆಗಳು ಎದುರಾಗಬಹುದು. ಎಚ್ಚರಿಕೆಯಿಂದ ಮುಂದುವರಿಯಿರಿ. ಕೃಷಿಯಲ್ಲಿ, ವಿಶೇಷವಾಗಿ ಅಡಿಕೆ ಅಥವಾ ತೋಟಗಾರಿಕೆಯಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಮಣ್ಣಿನ ಸತ್ವ ಹೆಚ್ಚಿಸಲು ನೀವು ಮಾಡುತ್ತಿರುವ ನೈಸರ್ಗಿಕ ವಿಧಾನಗಳು ದೀರ್ಘಕಾಲದ ಲಾಭ ನೀಡಲಿವೆ.

ಸಾಲ ಮತ್ತು ಸಮಾಜ ಸೇವೆ:

ಒಂಭತ್ತನೇ ಮನೆಯಲ್ಲಿ ಕೇತು ಇರುವುದರಿಂದ ಆಧ್ಯಾತ್ಮಿಕ ಚಿಂತನೆ ಹೆಚ್ಚಲಿದೆ. ಸಮಾಜ ಸೇವೆಗೆ ಇದು ಸಕಾಲ. ಅನಗತ್ಯ ಸಾಲ ಮಾಡುವುದರಿಂದ ದೂರವಿರಿ, ಏಕೆಂದರೆ 4ನೇ ಮನೆಯ ಶನಿಯು ಮಾನಸಿಕ ನೆಮ್ಮದಿಯನ್ನು ಸ್ವಲ್ಪ ಕಡಿಮೆ ಮಾಡಬಹುದು.

ವಿದ್ಯಾಭ್ಯಾಸ ಮತ್ತು ವಿದೇಶ ಪ್ರವೇಶ :

ವಿದ್ಯಾರ್ಥಿಗಳಿಗೆ ಜ್ಞಾನ ವೃದ್ಧಿಯಾಗಲಿದೆ. ಮೂರನೇ ಮನೆಯ ರಾಹುವು ಧೈರ್ಯವನ್ನು ನೀಡುವುದರಿಂದ ವಿದೇಶ ಪ್ರವೇಶ ಅಥವಾ ದೂರದ ಪ್ರಯಾಣದ ಪ್ರಯತ್ನಗಳು ಫಲಪ್ರದವಾಗಲಿವೆ.

ಆಹಾರ ಉದ್ಯಮ ಮತ್ತು ಸಂಬಂಧ:

ಏಳನೇ ಮನೆಯ ಗುರುವು ಆಹಾರ ಉದ್ಯಮದಲ್ಲಿರುವವರಿಗೆ ಮತ್ತು ವ್ಯಾಪಾರಸ್ಥರಿಗೆ ಅತ್ಯಂತ ಶುಭಕರ. ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯವಿರಲಿದ್ದು, ಹೊಸ ಒಪ್ಪಂದಗಳಿಗೆ ಇದು ಸರಿಯಾದ ಸಮಯ.

– ಲೋಹಿತ ಹೆಬ್ಬಾರ್

Follow Us