Horoscope: ಮೇಷ, ವೃಷಭ, ಮಿಥುನ, ಕಟಕ ರಾಶಿಯವರ ಇಂದಿನ ಭವಿಷ್ಯ ಹೀಗಿದೆ

ಆಗಸ್ಟ್​ 29,​ 2024ರ​​ ನಿಮ್ಮ ರಾಶಿಭವಿಷ್ಯ: ಯೋಚನೆಯ ದಿಕ್ಕನ್ನು ಬದಲಿಸದರೆ ತೊಂದರೆಗಳಿಗೆ ಉತ್ತರವೂ ಸಿಗಲಿದೆ. ಇಂದು ಸರಿ‌ ಮಾಡಲು ಸಾಧ್ಯವಾಗದಷ್ಟು ನಿಮ್ಮ‌ ಮನಸ್ಸು ಕೆಡಲಿದೆ. ಲೆಕ್ಕಾಚಾರದ ವಿಷಯದಲ್ಲಿ ನೀವು ಹಿಂದುಳಿದಿರುವುದು ಎಲ್ಲರಿಗೂ ಗೊತ್ತಾಗುವುದು. ಹಾಗಾದರೆ ಆಗಸ್ಟ್​ 29ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Horoscope: ಮೇಷ, ವೃಷಭ, ಮಿಥುನ, ಕಟಕ ರಾಶಿಯವರ ಇಂದಿನ ಭವಿಷ್ಯ ಹೀಗಿದೆ
ಮೇಷ, ವೃಷಭ, ಮಿಥುನ, ಕಟಕ ರಾಶಿಯವರ ಇಂದಿನ ಭವಿಷ್ಯ ಹೀಗಿದೆ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Aug 29, 2024 | 12:10 AM

ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2024 ಆಗಸ್ಟ್​ 29) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ಶ್ರಾವಣ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಪುರ್ವಸು, ಯೋಗ: ಹರ್ಷಣ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:45 ಗಂಟೆ, ರಾಹು ಕಾಲ ಮಧ್ಯಾಹ್ನ 02:06 ರಿಂದ 03:39, ಯಮಘಂಡ ಕಾಲ ಬೆಳಗ್ಗೆ 06:22 ರಿಂದ 07:54ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:27 ರಿಂದ 11:00ರ ವರೆಗೆ.

ಮೇಷ ರಾಶಿ: ಇಂದು ಶ್ರಮಪಟ್ಟು ಮಾಡಿದ ಕೆಲಸವು ಕೊನೆಯ ಕ್ಷಣದಲ್ಲಿ ಹಾಳಾಗಬಹುದು. ಎಂದೋ ಬಳಸಿದ್ದನ್ನು ಇಂದು ಪಡೆಯುವಿರಿ. ನಿರುದ್ಯೋಗವು ನಿಮ್ಮ ಮನಸ್ಸಿಗೆ ಬಹಳ‌ ಕಿರಿಕಿರಿಯಾಗಲಿದೆ. ಆಸಕ್ತಿಕರ ವಿಚಾರವನ್ನು ನೀವು ಇನ್ನೊಬ್ಬರ ಬಳಿ ಹೇಳಿಕೊಳ್ಳುವಿರಿ. ನಿಮ್ಮ ಮೇಲೆ‌ ಕೆಲವು ಆಕ್ಷೇಪಗಳು ಬರಬಹುದು. ಕಾರ್ಯದಲ್ಲಿ ಶ್ರದ್ಧೆಯು ಕಾರಣಾಂತರಗಳಿಂದ ಕಡಿಮೆ ಆಗಬಹುದು. ಕಾಲ ಕಳೆದರು ಕರ್ಮ ಕಳೆಯದು. ತಿಳಿವಳಿಕೆಯ ಕೊರತೆಯಿಂದ ನೀವು ಕಷ್ಟಪಡಬೇಕಾದೀತು. ಏನೇ ಹೇಳಿದರೂ ನಿಮಗೆ ಬೇಕಾದುದನ್ನೇ ಮಾಡುವಿರಿ. ಹಿತಶತ್ರುಗಳಿಂದ ಕೆಲವು ವಿಚಾರಕ್ಕೆ ತೊಂದರೆಯಾಗಲಿದೆ. ಆರ್ಥಿಕವಾಗಿ ನಿಮ್ಮ ಅಲ್ಪ ವೃದ್ಧಿಯು ಸಂತಸವನ್ನು ಕೊಡಲಿದೆ. ದಾಂಪತ್ಯದಲ್ಲಿ ಕಲಹವಿದ್ದರೂ ತಣ್ಣಗಾಗಿ ಹೊಂದಾಣಿಕೆಯಿಂದ ಮುಂದುವರಿಯುವಿರಿ. ಸಣ್ಣ ವ್ಯಾಪರಿಗಳಿಗೆ ಪ್ರೋತ್ಸಾಹವು ಸಿಗಲಿದೆ. ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಮನೆಯಿಂದ ದೂರ ಕಳಿಸುವಿರಿ. ಭಿನ್ನಾಭಿಪ್ರಾಯಗಳನ್ನು ಸರಿಮಾಡಿಕೊಂಡು ಕುಟುಂಬವನ್ನು ನಡೆಸಬೇಕಾಗುವುದು.

ವೃಷಭ ರಾಶಿ; ಇಂದು ನಿಮ್ಮ ಹಣವು ಯಾವುದೋ ಒಂದು ರೀತಿಯಲ್ಲಿ ಖರ್ಚಾಗುವ ಸಾಧ್ಯತೆ ಇದ್ದು, ಅದನ್ನು ನಿಭಾಯಿಸಿ. ದೇವರ ಉಪಾಸನೆಯಲ್ಲಿ ಆಲಸ್ಯವು ಅಧಿಕವಾಗುವುದು. ನಿಮ್ಮ ಮಾತಿನಿಂದ ಇನ್ನೊಬ್ಬರಿಗೆ ಬೇಸರಗವಾಗಲಿದ್ದು ಗೊತ್ತಾದ ಕೂಡಲೆ ಅದನ್ನು ನಿಲ್ಲಿಸಿ. ನಿಯಮ ಉಲ್ಲಂಘನೆ‌ ಮಾಡಿ ದಂಡ ತುಂಬುವಿರಿ. ಉದ್ಯೋಗದಿಂದ‌‌ ಕೆಲವರನ್ನು ಕೈ ಬಿಡುವಿರಿ. ನಿಮಗೆ ಸಿಗುವ ಅವಕಾಶಗಳು ಬೇರೆಯವರ ಪಾಲಾಗಬಹುದು. ಯಾವುದನ್ನೂ ಅಂದಿಕೊಂಡಷ್ಟು ಸುಲಭವಾಗಿ ಮಾಡಲಾಗದು. ಅತಿಯಾದ ಉತ್ಸಾಹದಲ್ಲಿರುವ ನಿಮಗೆ ಮನೆಯವರ ಮಾತು ಉತ್ಸಾಹ ಭಂಗವನ್ನು ಮಾಡುವ ಸಾಧ್ಯತೆ ಇದೆ. ಹಳೆಯ ಸ್ನೇಹಿತರನ್ನು ಭೇಟಿ ಮಾಡಿ ಸಹಾಯವನ್ನು ನೀವು ಕೇಳುವಿರಿ. ಆರೋಗ್ಯವನ್ನು ನೀವು ನಿರ್ಲಕ್ಷಿಸುವಿರಿ. ಸಾಮಾನ್ಯರಂತೆ ಅಸಾಮಾನ್ಯತೆಯನ್ನು ತೋರಿಸುವಿರಿ. ಅತಿಯಾದ ಮನೆಯ ಕೆಲಸದಿಂದ ಆಯಾಸವಾಗಬಹುದು. ನಿಮ್ಮ ಹೆಜ್ಜೆಗಳೆಲ್ಲ ಗುರುತಾಗಬೇಕು ಎಂದರೆ ಸಾಧ್ಯವಾಗದು. ಅನಿರೀಕ್ಷಿತ ವಾರ್ತೆಯನ್ನು ನೀವು ನಂಬಲಾರಿರಿ.

ಮಿಥುನ ರಾಶಿ; ಯೋಚನೆಯ ದಿಕ್ಕನ್ನು ಬದಲಿಸದರೆ ತೊಂದರೆಗಳಿಗೆ ಉತ್ತರವೂ ಸಿಗಲಿದೆ. ಇಂದು ಸರಿ‌ ಮಾಡಲು ಸಾಧ್ಯವಾಗದಷ್ಟು ನಿಮ್ಮ‌ ಮನಸ್ಸು ಕೆಡಲಿದೆ. ಲೆಕ್ಕಾಚಾರದ ವಿಷಯದಲ್ಲಿ ನೀವು ಹಿಂದುಳಿದಿರುವುದು ಎಲ್ಲರಿಗೂ ಗೊತ್ತಾಗುವುದು. ಸುಮ್ಮನೇ ಇಲ್ಲದ ನೆಪವನ್ನು ಹೇಳಿ ಕೆಲಸದಿಂದ ತಪ್ಪಿಸಿಕೊಳ್ಳುವಿರಿ. ಪ್ರಯಾಣದಲ್ಲಿ ಸುಖವಿರಲಿದೆ. ದಾಂಪತ್ಯದಲ್ಲಿ ಸಣ್ಣ ಮನಸ್ತಾಪಗಳು ಬಂದರೂ ಅಲ್ಲಿಯೇ ಶಾಂತವಾಗುವುದು. ಧಾರ್ಮಿಕ ಆಸಕ್ತಿಯು ಇಂದು ಕಡಿಮೆ ಇರಲಿದೆ. ವಿದ್ಯಾರ್ಥಿಗಳು ಗೊಂದಲವನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸುವಿರಿ. ಇಂದಿನ ಕೆಲಸವನ್ನು ಮುಗಿಸುವಾಗ ಸಂತೃಪ್ತಿ ಇರಲಿದೆ. ಭೂ ವ್ಯವಹಾರದಲ್ಲಿ ನಿಮ್ಮ ಯೋಜನೆಯ ಫಲಿಸುವುದು. ಉದ್ಯೋಗದಲ್ಲಿ ನಿಮ್ಮ ಸ್ಥಾನಕ್ಕೆ ಬರಲು ಯಾರಾದರೂ ಕಾಯುತ್ತಿರಬಹುದು. ಹಿತಶತ್ರುಗಳ ಕಿರುಕುಳವನ್ನು ನೀವು ಸಹಿಸಲಾರಿರಿ. ಯಾರ ಮೇಲಿನ ಸಿಟ್ಟಿಗೆ ನೀವೇ ಹತಾಶರಾಗುವಿರಿ.

ಕರ್ಕಾಟಕ ರಾಶಿ: ಇಂದು ನಿಮ್ಮ ಮನೆಯ ಹಿರಿಯರ ಸೇವೆಯಿಂದ ನೆಮ್ಮದಿ ಸಿಗುವುದು. ನೀವು ಯಾರದ್ದಾದರೂ ಬಾಯಿಗೆ ವಿಷಯವಾಗಬಹುದು. ಮನಸ್ಸಿಗೆ ಬಂದಂತೆ ಮಾತಮಾಡದೇ ಅರ್ಥವತ್ತಾದ ಮಾತುಗಳನ್ನು ಅಡುವುದು ಒಳ್ಳೆಯದು. ಕಛೇರಿಯಲ್ಲಿ ನಿಮ್ಮ ಮಾತುಗಳಿಗೆ ಅನಾದರವು ಸಿಗಲಿದೆ. ರಾಜಕೀಯ ಮಾಡುವವರೆಗೆ ಆತುರತೆ ಇರುವುದು ಕಷ್ಟ. ತಂತ್ರಜ್ಞರಾಗಿದ್ದರೆ ನಿಮಗೆ ಉದ್ಯೋಗವನ್ನು ಬಹಳ ಜಾಗರೂಕತೆಯಿಂದ ಮಾಡಬೇಕಾದೀತು. ದುಃಖದ ವಿಷಯವನ್ನು ನೀವು ಧೈರ್ಯವಾಗಿ ಕೇಳುವಿರಿ. ಸೊಂಟ ಭಾಗದ ಪೀಡೆಯಿಂದ ನಿಮಗೆ ಕಷ್ಟವಾದೀತು. ನಿಮಗೆ ಇಷ್ಟವಲ್ಲದ ವಿಷಯವನ್ನು ಒತ್ತಾಯಿಸಿದರೂ‌ ಮಾಡಲು ಹೋಗುವುದಿಲ್ಲ. ಯಾರ ಜೊತೆಗೂ ನಿಮ್ಮ ವರ್ತನೆಯು ಸಹಜತವಾಗಿ ಇರದು. ಯಂತ್ರಗಳ ಕೆಲಸವು ನಿಮಗೆ ಸಾಕೆನಿಸಬಹುದು. ಆಸ್ತಿಯ ವಿಚಾರದಲ್ಲಿ ಆಕಸ್ಮಿಕ ತಿರುವು ಬರಬಹುದು. ಯಾವುದನ್ನೇ ಆದರೂ ಮಿತಿಯಲ್ಲಿ ಬಳಸಿದರೆ ಉತ್ತಮ.

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್