Horoscope: ಏನನ್ನು ಕಳೆದುಕೊಳ್ಳುತ್ತಿದ್ದೇನೆ ಎಂಬ ಯೋಚನೆ ನಿಮ್ಮನ್ನು ಕಾಡುವುದು

18 ಅಕ್ಟೋಬರ್​ 2024: ಶುಕ್ರವಾರದಂದು ಮೇಷ, ವೃಷಭ, ಮಿಥುನ, ಕರ್ಕಾಟಕ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ವಿದ್ಯಾರ್ಥಿಗಳು ತಮ್ಮ ನಿಶ್ಚಿತ ಗುರಿಯನ್ನು ಮುಟ್ಟಲು ಹೆಚ್ಚು ಶ್ರಮ ಹಾಗೂ ಸಮಯವನ್ನು ಕೊಡಬೇಕಾಗುವುದು. ಪ್ರಯಾಣವು ಸುಖಕರ ಎನಿಸದರೂ ಅನಂತರ ಅದರ ನೋವು ನಿಮಗೆ ಗೊತ್ತಾಗುವುದು. ಹಾಗಾದರೆ ಅಕ್ಟೋಬರ್ 18ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Horoscope: ಏನನ್ನು ಕಳೆದುಕೊಳ್ಳುತ್ತಿದ್ದೇನೆ ಎಂಬ ಯೋಚನೆ ನಿಮ್ಮನ್ನು ಕಾಡುವುದು
ಏನನ್ನು ಕಳೆದುಕೊಳ್ಳುತ್ತಿದ್ದೇನೆ ಎಂಬ ಯೋಚನೆ ನಿಮ್ಮನ್ನು ಕಾಡುವುದು
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Oct 18, 2024 | 12:05 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಚಿತ್ರಾ, ಮಾಸ: ಆಶ್ವಯುಜ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಅಶ್ವಿನೀ, ಯೋಗ: ವಜ್ರ​, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 25 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 09 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 10:50 ರಿಂದ ಮಧ್ಯಾಹ್ನ 12:18ರವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:14 ರಿಂದ ಸಂಜೆ 04:42ರವರೆಗೆ, ಗುಳಿಕ ಕಾಲ ಬೆಳಿಗ್ಗೆ 07:54 ರಿಂದ 09:22 ರವರೆಗೆ.

ಮೇಷ ರಾಶಿ: ಗಟ್ಟಿಯಾದ ನಿಮ್ಮ ಮನಸ್ಸು ಇಂದು ಕರಗುವ ಸಂದರ್ಭವು ಬರುವುದು.‌ ಇಂದು ಮನೆಯ ಹಲವು ಕಾರ್ಯಗಳನ್ನು ಒಬ್ಬರೇ ಮಾಡಬೇಕಾಗುವುದು. ಆಕಸ್ಮಿಕವಾಗಿ ಅಲ್ಪ ಸಂಪತ್ತು ಬಂದರೂ ಅದು ನಷ್ಟವಾಗಿ ಹೋಗುವುದು. ದಾಂಪತ್ಯದಲ್ಲಿ ಒಲವು ಹೆಚ್ಚಾಗುವುದು. ತಾಳ್ಮೆಯನ್ನು ಕಳೆದುಕೊಳ್ಳುವಷ್ಟು ಕೋಪವು ಬೇಡ. ಹಲವು ಆದಾಯ ಮೂಲಗಳಲ್ಲಿ ಇಂದು ಒಂದು ಮಾತ್ರ ಉಳಿದುಕೊಳ್ಳುವುದು. ಸಂಗಾತಿಯ ಜೊತೆ ಸಲ್ಲಾಪವನ್ನು ಹೆಚ್ವು ಮಾಡುವಿರಿ. ಬಂಧುಗಳ ಜೊತೆ ಹಣಕಾಸಿನ ವ್ಯವಹಾರವನ್ನು ಮಾಡಬೇಕಾಗಿ ಬಂದರೆ ಪಾರದರ್ಶಕತೆಯೇ ಮುಖ್ಯವಾಗಿ ಇಟ್ಟುಕೊಳ್ಳಿ. ಏನನ್ನು ಕಳೆದುಕೊಳ್ಳುತ್ತಿದ್ದೇನೆ ಎಂಬ ಯೋಚನೆ ನಿಮಗಿರಲಿ. ನಿಮ್ಮ ಉದ್ಯಮವನ್ನು ನಿಲ್ಲಿಸುವ ಚಿಂತನೆ ಮಾಡುವಿರಿ. ನಿಮ್ಮ ಆರ್ಥಿಕತೆಯನ್ನು ಯಾರ ಜೊತೆಯೂ ಹಂಚಿಕೊಳ್ಳುವುದು ಬೇಡ. ದೊಡ್ಡ ವಿಚಾರವನ್ನು ಸಣ್ಣದಾಗಿ ಮಾಡಿ, ಯಾರಿಗೂ ಗೊತ್ತಾಗದಂತೆ ಮಾಡುವಿರಿ. ಶುಭ ಸಮಾರಂಭಗಳಿಗೆ ಆಹ್ವಾನ ಬರಲಿದೆ.

ವೃಷಭ ರಾಶಿ: ಏನಾದರೂ ಹೊಸ ಉತ್ಪನ್ನಗಳನ್ನು ನಿರ್ಮಾಣ‌ಮಾಡುವ ಆಸೆ ಬರುವುದು. ಇಂದು ಆತ್ಮವಿಶ್ವಾಸವು ಎಲ್ಲ ಕೆಲಸವೂ ಬೇಗ ಮುಗಿಯುವಂತೆ ಮಾಡುವುದು. ನಿಮ್ಮ ಮನಸ್ಸು ಕಿರಿಕಿರಿಯಿಂದ ಹೊರಬರಲು ಸಮಯವನ್ನು ತೆಗೆದುಕೊಳ್ಳುವುದು. ವಿದ್ಯಾರ್ಥಿಗಳು ತಮ್ಮ ನಿಶ್ಚಿತ ಗುರಿಯನ್ನು ಮುಟ್ಟಲು ಹೆಚ್ಚು ಶ್ರಮ ಹಾಗೂ ಸಮಯವನ್ನು ಕೊಡಬೇಕಾಗುವುದು. ಪ್ರಯಾಣವು ಸುಖಕರ ಎನಿಸದರೂ ಅನಂತರ ಅದರ ನೋವು ನಿಮಗೆ ಗೊತ್ತಾಗುವುದು. ಉದ್ಯೋಗದ ದಾಹ ನಿಮ್ಮನ್ನು ದಾರಿ ತಪ್ಪಿಸುವ ಸಾಧ್ಯತೆ ಇದೆ. ನೀವು ಇಂದು ಅಪರಿಚಿತ ವ್ಯಕ್ತಿಗಳ ನಡುವೆ ಇರುವಿರಿ. ಸಂಗಾತಿಯ ಮಾತುಗಳು ನಿಮಗೆ ಮನಸ್ಸಿಗೆ ನಾಟುವುದು. ಅಸಂಬದ್ಧ ಮಾತುಗಳನ್ನು ಕಡಿಮೆ ಮಾಡಿ. ಕೇಳಿದಷ್ಟಕ್ಕೆ ಮಾತ್ರ ನಿಮ್ಮ ಉತ್ತರವಿರಲಿ. ಒತ್ತಡವನ್ನು ನೀವಾಗಿಯೇ ತಂದುಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಬದಲಾವಣೆ ಅನಿರೀಕ್ಷಿತಬಾದರೂ ಯೋಗ್ಯವೇ. ಬೇಕಾದಾಗ ಬಳಸಿಕೊಳ್ಳುವ ಸಂಬಂಧದಿಂದ ದೂರವಿರುವಿರಿ.

ಮಿಥುನ ರಾಶಿ: ಸಹೋದರ ಭಾವವನ್ನು ಇಟ್ಟುಕೊಂಡು ವರ್ತಿಸಿ. ಇಂದು ನಿಮ್ಮ ಮನಸ್ಸಿಗೆ ಬೇಕಾದ ವಿಶ್ರಾಂತಿಗೆ ಸ್ಥಳದ ಅನ್ವೇಷಣೆ ಮಾಡುವಿರಿ. ಹೂಡಿಕೆಯನ್ನು ಮಾಡುವ ವಿಚಾರವು ನಿಮ್ಮಲ್ಲಿ ಬಲವಾಗಿ ಇರುವುದು. ಅದೃಷ್ಟವು ಇಂದು ಕೈಕೊಡಬಹುದು. ಅಧಿಕ ಶ್ರಮವಿದ್ದರೂ ಫಲವು ಮಾತ್ರ ಅಲ್ಪವೇ ಸಿಗುವುದು. ದೂರ ಪ್ರಯಾಣದಿಂದ ಪ್ರಯಾಸವಾಗುವುದು. ಇಂದಿನ ನಿಮ್ಮ ಆಲೋಚನೆಗಳಿಗೆ ಹಲವರಿಂದ ಮಾನ್ಯತೆ ಪಡೆಯುವುದು. ದೃಷ್ಟಿ ದೋಷವು ಕಾಣಿಸಿಕೊಳ್ಳಬಹುದು. ಸ್ಥಾನಮಾನದ ಆಕಾಂಕ್ಷೆ ಅಧಿಕವಾಗುವುದು. ಹೆಚ್ಚಿನ ಉತ್ಸಾಹದಿಂದ ಇರುವ ನಿಮಗೆ ಕೆಲವು ಜವಾಬ್ದಾರಿಗಳು ಬರಬಹುದು. ಸ್ನೇಹಸಂಬಂಧಗಳು ದೂರವಾಗಬಹುದು. ಕೃಷಿಯಲ್ಲಿ ಅಧಿಕ ಆದಾಯವನ್ನು ಪಡೆಯಬೇಕು ಎನ್ನಿಸುವುದು. ನೀರನಲ್ಲಿ ಹೆಚ್ಚು ಸಮಯವನ್ನು ಕಳೆಯುವಿರಿ. ಮಕ್ಕಳು ಕೇಳಿದರೆಂದು ಏನನ್ನಾದರೂ ಮಾಡುವುದು ಸರಿಯಾಗದು. ಎಲ್ಲ ಕಾರ್ಯಗಳನ್ನು ಭಯದಿಂದ ಮಾಡುವಿರಿ.

ಕರ್ಕಾಟಕ ರಾಶಿ: ಆಕಸ್ಮಿಕ ತೊಂದರೆಗಳನ್ನು ಎದುರಿಸುವ ಎದೆಗಾರಿಕೆ ಬೇಕು. ಇಂದು ನಿಮ್ಮ ಅಸತ್ಯದ ಮಾತು ಎಲ್ಲರಿಗೂ ತಿಳಿಯುವುದು. ಹಣದ ವಿಷಯದಲ್ಲಿ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ನಿಮಗೆ ಕಷ್ಟವೆನಿಸಬಹುದು. ನಿಮ್ಮವರನ್ನು ಅವಶ್ಯಕತೆಗಷ್ಟೇ ಬಳಸಿಕೊಳ್ಳುವಿರಿ. ರಮಣೀಯತೆಯು ನಿಮಗೆ ಇಷ್ಟವಾಗುವುದು. ನಿಮ್ಮ ಬಗ್ಗೆ ತಪ್ಪು ಕಲ್ಪನೆಗಳು ಮೂಡಲಿದ್ದು ಅದನ್ನು ಸರಿ ಮಾಡಿಕೊಳ್ಳಲು ಬಯಸುವಿರಿ. ಅನಗತ್ಯ ಕಾರ್ಯಗಳನ್ನು ಮಾಡಲು ಸಮಯವನ್ನು ಕೊಡುವ ಬದಲು ಸದುಪಯೋಗವಾಗುವಂತೆ ಇರಲಿ. ತುರ್ತು ಕಾರ್ಯದ ಕಾರಣಕ್ಕೆ ಪ್ರಯಾಣವನ್ನು ಮಾಡುವಿರಿ. ನೀವು ಆಡಿದ ಮಾತು ನಿಜವೇ ಆಗಿದ್ದರೂ ಕೂಡಲೇ ನಂಬುವುದು ಕಷ್ಟವಾದೀತು. ದೈವ ಬಲವನ್ನು ನಂಬಿ ನೀವು ಕಾರ್ಯವನ್ನು ಮಾಡುವಿರಿ. ನಿಮ್ಮ ಸ್ವಂತ ಕೆಲಸಕ್ಕಾಗಿ ಅಧಿಕಾರಿಗಳ ಮೇಲೆ ಒತ್ತಡವನ್ನು ಹೇರುವಿರಿ. ಸ್ನೇಹಿತರ ಜೊತೆ ಎಲ್ಲಿಗಾದರೂ ಹೋಗಬೇಕು ಎನಿಸುವುದು. ವಿದ್ಯಾರ್ಥಿಗಳು ಕೆಲವುದರಲ್ಲಿ ಸೋಲಬಹುದು. ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿ.

ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ಸುಲಭ ಕ್ಯಾಚ್ ಕೈಚೆಲ್ಲಿ ಸುಮ್ಮನೆ ನಿಂತ ರಾಹುಲ್; ರೋಹಿತ್ ಕೆಂಡಾಮಂಡಲ
ಸುಲಭ ಕ್ಯಾಚ್ ಕೈಚೆಲ್ಲಿ ಸುಮ್ಮನೆ ನಿಂತ ರಾಹುಲ್; ರೋಹಿತ್ ಕೆಂಡಾಮಂಡಲ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ
ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ರಾಜಕೀಯ, ಉಗ್ರಂ ಮಂಜು ಸೂತ್ರಧಾರಿ?
ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ರಾಜಕೀಯ, ಉಗ್ರಂ ಮಂಜು ಸೂತ್ರಧಾರಿ?
ರಾಜ್ಯ ರಾಜಕೀಯಕ್ಕೆ ಒಳಿತಾಗುವ ದೃಷ್ಟಿಯಿಂದ ಅಭ್ಯರ್ಥಿ ಆಯ್ಕೆ: ಕುಮಾರಸ್ವಾಮಿ
ರಾಜ್ಯ ರಾಜಕೀಯಕ್ಕೆ ಒಳಿತಾಗುವ ದೃಷ್ಟಿಯಿಂದ ಅಭ್ಯರ್ಥಿ ಆಯ್ಕೆ: ಕುಮಾರಸ್ವಾಮಿ
ಮಳೆ ನಿಂತರೂ ನಿಲ್ಲದ ಅವಾಂತರ: ಸೋರುತ್ತಿದೆ ಬಾಗೇಪಲ್ಲಿಯ ತಹಶೀಲ್ದಾರ್ ಕಚೇರಿ
ಮಳೆ ನಿಂತರೂ ನಿಲ್ಲದ ಅವಾಂತರ: ಸೋರುತ್ತಿದೆ ಬಾಗೇಪಲ್ಲಿಯ ತಹಶೀಲ್ದಾರ್ ಕಚೇರಿ
ಧಮ್ಮಿದ್ದಿದ್ದರೆ ಸಿದ್ದರಾಮಯ್ಯ ಕೆಂಪಣ್ಣ ವರದಿ ಟೇಬಲ್ ಮಾಡುತ್ತಿದ್ದರು: ರವಿ
ಧಮ್ಮಿದ್ದಿದ್ದರೆ ಸಿದ್ದರಾಮಯ್ಯ ಕೆಂಪಣ್ಣ ವರದಿ ಟೇಬಲ್ ಮಾಡುತ್ತಿದ್ದರು: ರವಿ
ಹಿಂದೆ 2 ವರ್ಷ ಜೈಲಲ್ಲಿದ್ದ ನಾಗೇಂದ್ರಗೆ ಈಗ ಕೇವಲ 3 ತಿಂಗಳಲ್ಲಿ ಬೇಲ್: ಶಾಸಕ
ಹಿಂದೆ 2 ವರ್ಷ ಜೈಲಲ್ಲಿದ್ದ ನಾಗೇಂದ್ರಗೆ ಈಗ ಕೇವಲ 3 ತಿಂಗಳಲ್ಲಿ ಬೇಲ್: ಶಾಸಕ