Horoscope: ಭವಿಷ್ಯದಲ್ಲಿ ಬರಬಹುದಾದ ತೊಂದರೆಗಳನ್ನು ಊಹಿಸಿಕೊಂಡು ಚಿಂತೆಪಡುವಿರಿ

ಸೆಪ್ಟೆಂಬರ್​ 12,​ 2024ರ​​ ನಿಮ್ಮ ರಾಶಿಭವಿಷ್ಯ: ನೀವು ಕೆಲಸವನ್ನು ಕಳೆದುಕೊಂಡಿರುವುದು ದಾಯಾದಿಗಳಿಗೆ ಸಂತೋಷದ ಸಮಾಚಾರವಾಗಲಿದೆ. ಸಣ್ಣ ಸಣ್ಣ ಖರ್ಚುಗಳೇ ಕಷ್ಟವಾದೀತು. ಅಧಿಕ ಖರ್ಚಿನ್ನು ಇಂದು ಮಾಡಬೇಕಾಗಿಬರಬಹುದು. ಯಾರಿಗೂ ಹೊರೆಯಾಗದಂತೆ ನಿಮಗೆ ಇರಬೇಕು ಎಂದು ಅನ್ನಿಸಬಹುದು. ಹಾಗಾದರೆ ಸೆಪ್ಟೆಂಬರ್​ 12ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Horoscope: ಭವಿಷ್ಯದಲ್ಲಿ ಬರಬಹುದಾದ ತೊಂದರೆಗಳನ್ನು ಊಹಿಸಿಕೊಂಡು ಚಿಂತೆಪಡುವಿರಿ
ರಾಶಿಭವಿಷ್ಯ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Sep 12, 2024 | 12:05 AM

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2024 ಸೆಪ್ಟೆಂಬರ್​ 12) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಪೂರ್ವಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ನವಮೀ, ನಿತ್ಯನಕ್ಷತ್ರ: ಮೂಲಾ, ಯೋಗ: ಆಯುಷ್ಮಾನ್, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:35 ಗಂಟೆ, ರಾಹು ಕಾಲ ಮಧ್ಯಾನ್ನ 02:00 ರಿಂದ 03:32, ಯಮಘಂಡ ಕಾಲ ಬೆಳಿಗ್ಗೆ 06:22 ರಿಂದ 07:54ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 09:26 ರಿಂದ 10:57ರ ವರೆಗೆ.

ಮೇಷ ರಾಶಿ: ನಿಮ್ಮದಲ್ಲದ ಕಾರ್ಯವನ್ನು ಮಾಡಲು ಒಪ್ಪುಕೊಳ್ಳಲಾರಿರಿ. ನಿಮ್ಮ ವೇಗದ ಮಾತು ಇತರರಿಗೆ ಅರ್ಥವಾಗದೇ ಇರಬಹುದು. ವಿದ್ಯಾರ್ಥಿಗಳಿಗೆ ಆಭ್ಯಾಸಕ್ಕೆ ಸಮಯವನ್ನು ಹೊಂದಿಸುವುದು ಕಷ್ಟವಾದೀತು. ಪೂರಕ ವಾತಾವರಣ ಕೊರತೆ ಕಾಣುವುದು. ಹೂಡಿಕೆಯನ್ನು ಇನ್ನೊಬ್ಬರ ಒತ್ತಾಯಕ್ಕೆ ಮಾಡುವಿರಿ. ಸಮಾಧಾನವಿಲ್ಲಸಿದ್ದರೂ ಸಮಾಧಾನದಂತೆ ತೋರುವುದು. ಪುಣ್ಯದ ಫಲವನ್ನು ನೀವು ಪಡೆಯುವಿರಿ. ಕೆಲವು ಕಾರ್ಯಗಳು ನಿಮಗೆ ನಿಷ್ಪ್ರಯೋಜಕ ಎಂದು ಕಾಣಿಸುವುದು. ಕೆಲಸವನ್ನು ಬಿಡಬೇಕಾದ ಸಂದರ್ಭವು ಬರಬಹುದು. ನಿಮ್ಮ ಆತ್ಮವಿಶ್ವಾಸಕ್ಕೆ ತೊಂದರೆ ಬರಬಹುದು. ಪೂರ್ಣಮಾಹಿತಿಯ ಕೊರತೆಯನ್ನು ಇಟ್ಟುಕೊಂಡು ನೀವು ಕೆಲಸವನ್ನು ಮಾಡಬೇಕಾದೀತು. ಅನಾಹುತಗಳು ಸಣ್ಣದರಲ್ಲಿಯೇ ಆಗುವ ಸಂದರ್ಭವಿದೆ. ನಿಮ್ಮ ನಿಜವಾದ ಸಾಮರ್ಥ್ಯದಿಂದ ಯಶಸ್ಸು ಗಳಿಸುವಿರಿ. ಸಿಟ್ಟು ಮಾಡಿಕೊಂಡು ಆಗಬೇಕಾದ ಕೆಲಸವನ್ನು ಮಾಡಿ ಮುಗಿಸುವಿರಿ.

ವೃಷಭ ರಾಶಿ: ನೀವು ಕೆಲಸ ಮಾಡುವ ಸಂಸ್ಥೆಯ ರಹಸ್ಯವನ್ನು ನೀವು ಬಿಟ್ಟುಕೊಡಲಾರಿರಿ. ಒತ್ತಡ ಮಾಡಿಕೊಂಡು ಕಾರ್ಯವನ್ನು ಮಾಡುವುದು ಬೇಡ. ನೀವು ಕೆಲಸವನ್ನು ಕಳೆದುಕೊಂಡಿರುವುದು ದಾಯಾದಿಗಳಿಗೆ ಸಂತೋಷದ ಸಮಾಚಾರವಾಗಲಿದೆ. ಸಣ್ಣ ಸಣ್ಣ ಖರ್ಚುಗಳೇ ಕಷ್ಟವಾದೀತು. ಅಧಿಕ ಖರ್ಚಿನ್ನು ಇಂದು ಮಾಡಬೇಕಾಗಿಬರಬಹುದು. ಯಾರಿಗೂ ಹೊರೆಯಾಗದಂತೆ ನಿಮಗೆ ಇರಬೇಕು ಎಂದು ಅನ್ನಿಸಬಹುದು. ನಿಮ್ಮ ದುರಭ್ಯಾಸವು ಇತರರಿಗೂ ತಿಳಿಯಬಹುದು. ಭವಿಷ್ಯದಲ್ಲಿ ಬರಬಹುದಾದ ತೊಂದರೆಗಳನ್ನು ನೀವು ಊಹಿಸಿಕೊಂಡು ಚಿಂತೆಪಡುವಿರಿ. ಸಂಗಾತಿಯಿಂದ ನಿಮಗೆ ಸಿಗಬೇಕಾದುದನ್ನು ಪಡೆಯುವಿರಿ. ಸಿಕ್ಕಿದ್ದನ್ನು ಜೋಪಾನ ಮಾಡಿಕೊಳ್ಳಿ. ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳಲೂಬಹುದು. ಸುಮ್ಮನೇ ಇರುವುದು ನಿಮಗೆ ಇಂದು ಪ್ರಿಯವಾದೀತು. ಹೂಡಿಕೆಯಿಂದ ಹಣವನ್ನು ಕಳೆದುಕೊಳ್ಳುವಿರಿ. ಹೆಚ್ಚು ಮಾತನಾಡುವ ಉದ್ಯೋಗಕ್ಕೆ ಸೇರಿಕೊಳ್ಳುವಿರಿ.

ಮಿಥುನ ರಾಶಿ: ಮನಸ್ಸು ಯಾವುದೋ ಕಾರಣಕ್ಕೆ ಭಾರವಾಗಬಹುದು. ಅನ್ಯರಿಂದ ಅಸಾಧ್ಯ ಎನಿಸಿದ ಕಾರ್ಯವನ್ನು ಮಾಡಲು ನೀವು ಧೈರ್ಯವನ್ನು ಬಿಡಲಾರಿರಿ. ಕೋಪವು ನಿಮ್ಮ ಸಹಜತೆಯಾದರೂ ಅದರಿಂದ ಹೊರಬರುವ ತಂತ್ರವನ್ನು ತಿಳಿದುಕೊಳ್ಳಬೇಕು. ನಿಮ್ಮ ಯೋಜನೆಗಳು ವಾಸ್ತವಕ್ಕೆ ಹತ್ತಿರವಿರಲಿ. ಹೆಚ್ಚಿನ ವಿವರಗಳನ್ನು ಅನುಭವಿಗಳ, ತಿಲಕಿದವರಿಂದ ಪಡೆಯಿರಿ. ವಿವಾಹ ಸಮಾರಂಭಕ್ಕೆ ಹೋಗುವಿರಿ. ಪ್ರಭಾವೀ ವ್ಯಕ್ತಿಗಳ ಭೇಟಿಯು ನಿಮ್ಮ ಉತ್ಸಾಹವನ್ನು ಹೆಚ್ಚಿಸಬಹುದು. ಸಂಗಾತಿಯ ಒಳ್ಳೆಯ ಕೆಲಸಗಳು ನಿಮಗೆ ಇಷ್ಟವಾಗದು. ಕೆಲಸವನ್ನು ಏಕಾಗ್ರತೆಯಿಂದ ಮಾಡುವಿರಿ. ನಿಮ್ಮದೇ ಆದ ಮಿತ್ರರ ವೃಂದವನ್ನು ಕಟ್ಟಿಕೊಳ್ಳುವಿರಿ. ಸಹೋದರರ ನಡುವೆ ದ್ವೇಷವು ಉಂಡಾಗಬಹುದು. ಯಾರ ಪ್ರಶಂಸೆಗೂ ಕಾಯದೇ ಚೆನ್ನಾಗಿ ಕರ್ತವ್ಯವನ್ನು ಮಾಡುವಿರಿ. ಕಛೇರಿಯಲ್ಲಿ ಕೆಲವು ಬದಲಾವಣೆ ನಿಮಗೆ ಕಷ್ಟವಾದೀತು.

ಕಟಕ ರಾಶಿ: ಯಶಸ್ಸಿಗಾಗಿ ಏನನ್ನೂ ಮಾಡದೇ ಕರ್ತವ್ಯ ದೃಷ್ಟಿಯಿಂದ ಮಾಡಿದಾಗ ಯಶಸ್ಸನ್ನು ನಿಮ್ಮನ್ನು ಬಂದು ಸೇರುವುದು. ನಿಮ್ಮ ಪ್ರಾಮಾಣಿಕತೆಯನ್ನು ತೋರಿಸುವ ಅವಶ್ಯಕತೆ ಇಲ್ಲ. ಉತ್ತಮ ಭೂಮಿಯ ಲಾಭವಾಗಲಿದೆ. ಅಪಾಯದಿಂದ ಹೊರಬರಲಿದ್ದೀರಿ. ಧನವ್ಯಯವನ್ನು ನಿಮ್ಮ ಜಾಣತನದಿಂದ ತಪ್ಪಿಸಿಕೊಳ್ಳುವಿರಿ‌. ಅಪರಿಚಿತರಿಗೆ ಇಂದು ಸಹಾಯವನ್ನು ಮಾಡುವಿರಿ. ಕೋಪದ ನಿಯಂತ್ರಣವನ್ನು ಮಾಡಲು ಕಷ್ಟವಾದೀತು. ಸಂಸಾರದಲ್ಲಿ ನಿರಾಸಕ್ತಿಯು ಇರಲಿದೆ. ನಿಮ್ಮ ಸಣ್ಣತನವೇ ದೊಡ್ಡ ಲಾಭಕ್ಕೆ ತೊಂದರೆಯಾಗುವುದು. ಕ್ಷಮೆಯನ್ನು ಕೇಳಿದರೆ ನಿರಾಕರಿಸುವುದು ಬೇಡ. ಸೌಲಭ್ಯಗಳಿಂದ ನೀವು ಆಲಸ್ಯವನ್ನು ಬೆಳೆಸಿಕೊಳ್ಳುವಿರಿ.‌ ಮಕ್ಕಳ ಪ್ರೀತಿಯನ್ನು ಸಂಪಾದಿಸುವಿರಿ. ಅನಗತ್ಯ ಖರೀದಿಯನ್ನು ಮಾಡುವಿರಿ. ಕಾರ್ಯದ ನೈರಂತರ್ಯದಿಂದ ಅದ್ಭುತವನ್ನು ಸಾಧಿಸಲು ಸಾಧ್ಯ. ಅಸಂಬದ್ಧ ವಿಚಾರಕ್ಕೆ ಮಧ್ಯ ಪ್ರವೇಶ ಸಲ್ಲದು.

ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎಂದ ಪ್ರಸನ್ನಾನಂದಪುರಿ ಸ್ವಾಮೀಜಿ
ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎಂದ ಪ್ರಸನ್ನಾನಂದಪುರಿ ಸ್ವಾಮೀಜಿ
ಟೋಲ್​ನಲ್ಲಿ ಲಾರಿ ನಿಲ್ಲಿಸಲು ಪ್ರಯತ್ನಿಸಿದ ಟೋಲ್ ಪ್ಲಾಜಾ ಸಿಬ್ಬಂದಿಯ ಹತ್ಯೆ
ಟೋಲ್​ನಲ್ಲಿ ಲಾರಿ ನಿಲ್ಲಿಸಲು ಪ್ರಯತ್ನಿಸಿದ ಟೋಲ್ ಪ್ಲಾಜಾ ಸಿಬ್ಬಂದಿಯ ಹತ್ಯೆ
ದರ್ಶನ್​ ಜತೆ ಉಂಟಾದ ಮನಸ್ತಾಪದ ಬಗ್ಗೆ ಮೌನ ಮುರಿದ ಧ್ರುವ ಸರ್ಜಾ
ದರ್ಶನ್​ ಜತೆ ಉಂಟಾದ ಮನಸ್ತಾಪದ ಬಗ್ಗೆ ಮೌನ ಮುರಿದ ಧ್ರುವ ಸರ್ಜಾ
ಕೊಲ್ಕತ್ತಾದಲ್ಲಿ ಜನರ ಮನಸೆಳೆಯುತ್ತಿದೆ ಮಳೆಹನಿ ಥೀಮ್​ನ ದುರ್ಗಾ ಪೆಂಡಾಲ್
ಕೊಲ್ಕತ್ತಾದಲ್ಲಿ ಜನರ ಮನಸೆಳೆಯುತ್ತಿದೆ ಮಳೆಹನಿ ಥೀಮ್​ನ ದುರ್ಗಾ ಪೆಂಡಾಲ್
ಕೆಡಿಪಿ ಸಭೆ ನಡೆಸುವ ಸಚಿವರು ತಮ್ಮ ಜಿಲ್ಲೆಗಳ ಹೋಮ್​ವರ್ಕ್ ಮಾಡಿರುತ್ತಾರೆಯೇ?
ಕೆಡಿಪಿ ಸಭೆ ನಡೆಸುವ ಸಚಿವರು ತಮ್ಮ ಜಿಲ್ಲೆಗಳ ಹೋಮ್​ವರ್ಕ್ ಮಾಡಿರುತ್ತಾರೆಯೇ?
ಮಹದೇವಪ್ಪ ಮನೆಗೆ ಜಾರಕಿಹೊಳಿ ಊಟಕ್ಕೆ ಹೋಗೋದು ತಪ್ಪಲ್ಲ: ಜಮೀರ್ ಅಹ್ಮದ್
ಮಹದೇವಪ್ಪ ಮನೆಗೆ ಜಾರಕಿಹೊಳಿ ಊಟಕ್ಕೆ ಹೋಗೋದು ತಪ್ಪಲ್ಲ: ಜಮೀರ್ ಅಹ್ಮದ್
ಏನೇನೋ ಬೊಗಳುತ್ತಾನೆ: ಆಗಾಗ ಕೆಣಕಿದ ಜಗದೀಶ್​ಗೆ ಹಂಸಾ ಕೊಟ್ಟ ಮರ್ಯಾದೆ ಇಷ್ಟೇ
ಏನೇನೋ ಬೊಗಳುತ್ತಾನೆ: ಆಗಾಗ ಕೆಣಕಿದ ಜಗದೀಶ್​ಗೆ ಹಂಸಾ ಕೊಟ್ಟ ಮರ್ಯಾದೆ ಇಷ್ಟೇ
ರಾಜ್ಯಪಾಲ ಮತ್ತು ಸಿಎಂ ನಡುವಿನ ಮಾತುಕತೆ ಬೇರೆ ರಾಜಕಾರಣಿಗಳಿಗೆ ಮಾದರಿ
ರಾಜ್ಯಪಾಲ ಮತ್ತು ಸಿಎಂ ನಡುವಿನ ಮಾತುಕತೆ ಬೇರೆ ರಾಜಕಾರಣಿಗಳಿಗೆ ಮಾದರಿ
ಇಂದಿನಿಂದ 5 ದಿನಗಳ ಕಾಲ ದೆಹಲಿಯಲ್ಲಿ ನಡೆಯಲಿದೆ ಫೆಸ್ಟಿವಲ್ ಆಫ್ ಇಂಡಿಯಾ
ಇಂದಿನಿಂದ 5 ದಿನಗಳ ಕಾಲ ದೆಹಲಿಯಲ್ಲಿ ನಡೆಯಲಿದೆ ಫೆಸ್ಟಿವಲ್ ಆಫ್ ಇಂಡಿಯಾ
ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಹಿಂದಿನ ಸತ್ಯಾಂಶ ಮುಚ್ಚಿಟ್ಟ ಶಿವಕುಮಾರ್
ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಹಿಂದಿನ ಸತ್ಯಾಂಶ ಮುಚ್ಚಿಟ್ಟ ಶಿವಕುಮಾರ್