Week Horoscope: ಮಕರದಲ್ಲಿ 4 ಗ್ರಹಗಳ ಪ್ರಭಾವ, ಪ್ರೀತಿ, ವೃತ್ತಿ, ಹಣಕಾಸು ಭವಿಷ್ಯ!
ಜನವರಿ ನಾಲ್ಕನೇ ವಾರದಲ್ಲಿ ಮಕರ ರಾಶಿಯಲ್ಲಿ ನಾಲ್ಕು ಗ್ರಹಗಳ ಸಂಚಾರವು ವಿಶೇಷ ಪರಿಣಾಮ ಬೀರಲಿದೆ. ಶನಿ ಸ್ಥಾನದಲ್ಲಿರುವ ರವಿಯಿಂದ ಕುಟುಂಬ ಕಲಹ, ಸರ್ಕಾರಿ ಕೆಲಸಗಳಲ್ಲಿ ಅಡಚಣೆ, ಪ್ರೇಮ ಸಂಬಂಧಗಳಲ್ಲಿ ಸವಾಲುಗಳ ಸಾಧ್ಯತೆ. ಆದರೂ ಪ್ರಾಮಾಣಿಕ ವಿಶ್ವಾಸವು ಗೆಲ್ಲಲಿದೆ. ಈ ವಾರದಲ್ಲಿ ನಿಮ್ಮ ರಾಶಿಗೆ ಅನ್ವಯಿಸುವ ಸಂಪೂರ್ಣ ವಾರ ಭವಿಷ್ಯ ಮತ್ತು ಗ್ರಹಗಳ ಪ್ರಭಾವದಿಂದ ಉಂಟಾಗುವ ಶುಭ-ಅಶುಭ ಫಲಗಳ ಸಮಗ್ರ ವಿವರ ಇಲ್ಲಿದೆ.

ಜನವರಿ ತಿಂಗಳ ನಾಲ್ಕನೇ ವಾರ ನಾಲ್ಕು ಗ್ರಹಗಳು ಮಕರದಲ್ಲಿ ಇರುವರು. ಶನಿ ಸ್ಥಾನದಲ್ಲಿ ಇರುವ ರವಿ ತಂದೆ ಮಕ್ಕಳ ನಡುವೆಯೇ ಕಲಹ, ಸರ್ಕಾರದ ಕಾರ್ಯಗಳು ಬೇಗ ಆಗದೇ ನಾನ ಕಾರಣದಿಂದ ಕುಂಟುತ್ತ ಸಾಗುವುದು. ಪ್ರೇಮಕ್ಕೂ ಕೆಲವೊಮ್ಮೆ ಫಲಿತಾಂಶ ಸಿಗದೇ, ಒದ್ದಾಡುವ ಸ್ಥಿತಿ. ಆದರೂ ನಿಮ್ಮ ಪ್ರಾಮಾಣಿಕ ವಿಶ್ವಾಸವು ಗೆಲ್ಲುವುದು.
ಮೇಷ:
ಆರ್ಥಿಕ ಲಾಭದಾಯಕ ವಾರ. ಕೆಲಸದಲ್ಲಿ ಬಡ್ತಿ ಸಾಧ್ಯತೆ. ಹಠಾತ್ ಧನಲಾಭವಾಗಲಿದೆ. ಆರೋಗ್ಯ ಸುಧಾರಿಸಲಿದ್ದು, ಕುಟುಂಬದೊಂದಿಗೆ ಸಂತೋಷದ ಸಮಯ ಕಳೆಯುವಿರಿ.
ವೃಷಭ:
ಅಲ್ಪ ಹೂಡಿಕೆಯಲ್ಲಿಯೂ ಲಾಭ. ಹೊಸ ಜವಾಬ್ದಾರಿಗಳು ನಿಮ್ಮನ್ನು ಹುಡುಕಿ ಬರಲಿವೆ. ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ. ಸಂಗಾತಿಯ ಸಹಕಾರ ಸದಾ ಇರುತ್ತದೆ.
ಮಿಥುನ:
ತಾಳ್ಮೆಯ ಸಂವಹನದಿಂದ ಈ ವಾರ ಯಶಸ್ಸು. ಸಣ್ಣ ಪ್ರವಾಸದ ಯೋಗವಿದೆ. ಸಂಬಂಧಗಳಲ್ಲಿನ ಕಹಿ ಮರೆತು ಒಂದಾಗುವಿರಿ. ಹೊಸ ವಸ್ತುಗಳ ಖರೀದಿಗೆ ಇದು ಶುಭ ಸಮಯ.
ಕರ್ಕಾಟಕ:
ಆತ್ಮವಿಶ್ವಾಸ ಹೆಚ್ಚಲಿದೆ. ವೃತ್ತಿಜೀವನದಲ್ಲಿ ಅತ್ಯುತ್ತಮ ಪ್ರಗತಿ. ಕಠಿಣ ಶ್ರಮಕ್ಕೆ ತಕ್ಕ ಗೌರವ ಸಿಗಲಿದೆ. ಆಸ್ತಿ ವಿಚಾರದಲ್ಲಿ ಶುಭ ಸುದ್ದಿ ಕೇಳುವಿರಿ.
ಸಿಂಹ:
ಈ ವಾರ ನಿಮ್ಮ ನಾಯಕತ್ವಕ್ಕೆ ಮನ್ನಣೆ. ಕುಟುಂಬದ ಗೊಂದಲಗಳು ಪರಿಹಾರವಾಗಲಿವೆ. ಹಿರಿಯರ ಆಶೀರ್ವಾದದಿಂದ ಕೆಲಸಗಳು ಸುಗಮವಾಗಲಿವೆ. ಮನಸ್ಸಿಗೆ ಶಾಂತಿ ದೊರೆಯುವುದು.
ಕನ್ಯಾ:
ಉದ್ಯೋಗ ಬದಲಾವಣೆಗೆ ಸಕಾಲ. ದೀರ್ಘಕಾಲದ ಕನಸುಗಳು ನನಸಾಗಲಿವೆ. ಮಕ್ಕಳಿಂದ ಸಂತಸದ ಸುದ್ದಿ. ಹಳೆಯ ಸ್ನೇಹಿತರ ಭೇಟಿ ಹೊಸ ಚೈತನ್ಯ ನೀಡಲಿದೆ.
ತುಲಾ:
ಸಾಮಾಜಿಕ ಗೌರವ ವೃದ್ಧಿ. ಹಳೆಯ ಹೂಡಿಕೆಯಿಂದ ಲಾಭ. ಆರೋಗ್ಯದ ಮೇಲೆ ಸ್ವಲ್ಪ ಗಮನವಿರಲಿ. ಅನಿರೀಕ್ಷಿತ ಅತಿಥಿಗಳ ಆಗಮನದಿಂದ ಸಂಭ್ರಮದ ವಾತಾವರಣ.
ವೃಶ್ಚಿಕ:
ಕೆಲಸದ ಒತ್ತಡವಿರಲಿದೆ. ಆದರೂ ಗುಪ್ತ ಮೂಲಗಳಿಂದ ಧನಲಾಭವಾಗಲಿದೆ. ತಾಳ್ಮೆಯಿಂದ ವರ್ತಿಸಿ. ಶತ್ರುಗಳ ಮೇಲೆ ಜಯ ಸಾಧಿಸುವಿರಿ.
ಧನುಸ್ಸು:
ಆದಾಯ ಹೆಚ್ಚಳಕ್ಕೆ ಕಸರತ್ತು. ಹೊಸ ಉದ್ಯೋಗ ಸಿಗುವ ಸಾಧ್ಯತೆ. ದೈವಿಕ ಕಾರ್ಯಗಳಲ್ಲಿ ಆಸಕ್ತಿ ಮೂಡಲಿದೆ. ದೂರದ ಪ್ರಯಾಣ ಲಾಭದಾಯಕವಾಗಿರಲಿದೆ.
ಮಕರ:
ನಿರ್ಧಾರಗಳಲ್ಲಿ ಜಾಗರೂಕರಾಗಿರಿ. ತಾಳ್ಮೆ ಅಗತ್ಯ. ವಾರದ ಅಂತ್ಯಕ್ಕೆ ಶುಭ ಫಲಗಳು ಸಿಗಲಿವೆ. ಪ್ರೇಮ ಜೀವನದಲ್ಲಿ ಮಧುರತೆ ಇರಲಿದೆ.
ಕುಂಭ:
ಬದಲಾವಣೆಗಳಿಗೆ ಒಗ್ಗಿಕೊಳ್ಳುವುದು ಅನಿವಾರ್ಯ. ಹೊಸ ಹವ್ಯಾಸಗಳಿಂದ ಲಾಭ. ಸಂಗಾತಿಯ ಬೆಂಬಲ ಸಿಗಲಿದೆ. ನಿಮ್ಮ ಕ್ರಿಯಾಶೀಲತೆಗೆ ತಕ್ಕ ಪ್ರತಿಫಲ ದೊರೆಯಲಿದೆ.
ಮೀನ:
ದೈವಿಕ ರಕ್ಷಣೆ ಇರಲಿದೆ. ಶ್ರಮಕ್ಕೆ ತಕ್ಕ ಫಲ ಲಭ್ಯ. ಆಸ್ತಿ ಖರೀದಿಗೆ ಮುನ್ನಡೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ.
-ಲೋಹಿತ ಹೆಬ್ಬಾರ್ – 8762924271 (what’s app only)
Published On - 5:39 pm, Sat, 24 January 26
