AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ಸಹೋದ್ಯೋಗಿಗಳ ಜೊತೆ ವೈಮನಸ್ಸು ಉಂಟಾಗಬಹುದು‌‌

ನೀವು ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ನವೆಂಬರ್​ 29: ಅಗತ್ಯಕ್ಕಿಂತ ಹೆಚ್ಚು ಖರ್ಚು ಬೇಡ. ದಾಂಪತ್ಯದಲ್ಲಿ ಪರಸ್ಪರ ಅಭಿಪ್ರಾಯ ಭೇದವು ಕಾಣಿಸಿಕೊಂಡೀತು. ಸಂಗಾತಿಯ ಆರೋಗ್ಯದ ಬಗ್ಗೆ ಚಿಂತೆ ಶುರುವಾಗುತ್ತದೆ. ಆರ್ಥಿಕ ಸ್ಥಿತಿಯು ಉತ್ತಮವಾಗಿರುತ್ತದೆ. ಹಾಗಾದರೆ ನವೆಂಬರ್​ 29ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Horoscope: ಸಹೋದ್ಯೋಗಿಗಳ ಜೊತೆ ವೈಮನಸ್ಸು ಉಂಟಾಗಬಹುದು‌‌
ಸಹೋದ್ಯೋಗಿಗಳ ಜೊತೆ ವೈಮನಸ್ಸು ಉಂಟಾಗಬಹುದು‌‌
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Nov 29, 2024 | 12:12 AM

Share

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಅನುರಾಧಾ, ಮಾಸ: ಕಾರ್ತಿಕ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ವಿಶಾಖಾ, ಯೋಗ: ಶೋಭನ, ಕರಣ: ಶಕುನಿ, ಸೂರ್ಯೋದಯ ಬೆಳಗ್ಗೆ 06 ಗಂಟೆ 42 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 00 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 10:56 ರಿಂದ ಮಧ್ಯಾಹ್ನ 12:21ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:11 ರಿಂದ ಸಂಜೆ 04:35 ರವರೆಗೆ, ಗುಳಿಕ ಕಾಲ ಬೆಳಿಗ್ಗೆ 08:07 ರಿಂದ 09:32 ರವರೆಗೆ.

ತುಲಾ ರಾಶಿ: ಚಿಂತೆಯಲ್ಲಿ ದಿನವು ಕಳೆದುಹೋಗುವುದು. ಇಂದು ನೀವು ಎಲ್ಲ ಒತ್ತಡಗಳನ್ನು ಬದಿಸರಿಸಿ ನಿರಾಳವಾಗಿ ಕಾಲ ಕಳೆಯುತ್ತೀರಿ. ಇಂದು ನಿಮ್ಮ ಜೀವನಕ್ಕೆ ಸಂಬಂಧಿಸಿದ ಕೆಲವು ನಿರ್ಧಾರವನ್ನು ತೆಗೆದುಕೊಳ್ಳಬೇಕಾದೀತು. ಭವಿಷ್ಯದಲ್ಲಿ ನೀವು ಒಳ್ಳೆಯ ಫಲಿತಾಂಶವನ್ನು ಪಡೆಯುವಿರಿ. ಸಹೋದ್ಯೋಗಿಗಳ ಜೊತೆ ವೈಮನಸ್ಯ ಉಂಟಾಗಬಹುದು‌‌. ನಿಮ್ಮ ವಿರೋಧಿಗಳು ಹೆಚ್ಚಾಗಬಹುದು. ಆದಾಯದ ಮೂಲವನ್ನು ಹೆಚ್ಚು ಮಾಡಿಕೊಳ್ಳಲು ಓಡಾಡಬೇಕಾದೀತು. ಕಷ್ಟದಲ್ಲಿ ಇರುವವರಿಗೆ ಕರುಣೆ ಇರಲಿದೆ. ನಿಮಗೆ ಆಗುವ ಸಹಾಯವನ್ನು ಮಾಡಿ.‌ ಧಾರ್ಮಿಕ ಆಚರಣೆಗೆ‌ ಮನಸ್ಸಿದ್ದರೂ ಸಮಯದ ಅಭಾವದಿಂದ ಸಾಧ್ಯಬಾಗದು. ದುರಭ್ಯಾಸದ ಬಗ್ಗೆ ಎಚ್ಚರಿಕೆ ಇರಲಿ. ನಿಮ್ಮ ನಕಾರಾತ್ಮಕ ಭಾವನೆಗಳನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳುವಿರಿ. ಮನಸ್ಸು ಭಾರವನ್ನು ಕಳೆದುಕೊಳ್ಳುವುದು. ಭೂಮಿಯ ವಿಚಾರದಲ್ಲಿ ನಷ್ಟವಾಗಿ ತೊಂದರೆ ಪಡುವಿರಿ.

ವೃಶ್ಚಿಕ ರಾಶಿ: ಕೆಲವು ಸ್ವಭಾವವನ್ನು ನೀವು ಬಿಡುವ ಯೋಚನೆ ಮಾಡುವಿರಿ. ಯಾರಿಗೋ ಕೊಡಬೇಕಾದ ಹಣವು ಅನಿರೀಕ್ಷಿತವಾಗಿ ನಿಮ್ಮ ಕೈ ಸೇರುವುದು. ಅಧಿಕಾರಿಗಳಿಂದ ಕ್ರಮ ತೆಗೆದುಕೊಳ್ಳಬಹುದು. ವಾಹನ‌ಸಂಚಾರದಿಂದ ಆಯಾಸವಾಗುವುದು.‌ ಅಹಂಕಾರದಿಂದ ಬೀಗುವುದು ಬೇಡ. ನಿಮ್ಮನ್ನು ಇತರರು ನೋಡುವರು. ರಾಜಕಾರಣಿಗಳು ಕಾರ್ಯಕ್ರಮದ ಒತ್ತಡದಲ್ಲಿ ಇರುವರು. ಮಾನಸಿಕ ಒತ್ತಡದಿಂದ ಬೇರೆ ಕೆಲಸದಲ್ಲಿ ತೊಡಗಿಕೊಳ್ಳುವಿರಿ. ಪೋಷಕರ ಜೊತೆ ನಿಮ್ಮ ದಿನವು ಆನಂದದಿಂದ ಇರುವುದು. ಮನಸ್ಸು ಅನ್ಯ ಆಲೋಚನೆಯಲ್ಲಿ ಮಗ್ನವಾಗಿರುವುದು. ಆಪ್ತರ ಸಲಹೆಯು ನಿಮ್ಮ ಉದ್ಯೋಗಕ್ಕೆ ಸಹಕಾರಿಯಾಗಲಿದೆ. ಮೈಗಳ್ಳತನದಿಂದ ನಷ್ಟ ಸಂಭಿಸಲಿದೆ. ಮಾತಿನ ಪರಿಣಾಮವು ಇಂದು ಗೊತ್ತಾಗಲಿದೆ. ಮಕ್ಕಳ ಸುಖವನ್ನು ಅನುಭವಿಸುವಿರಿ. ಅಧಿಕಾರವನ್ನು ಸದುಪಯೋಗ ಮಾಡಿಕೊಳ್ಳುವಿರಿ. ವಿದ್ಯಾಭ್ಯಾಸದ ಕಾರಣಕ್ಕೆ ಮನೆಯನ್ನು ಬಿಡುವುದು ನಿಮಗೆ ಕಷ್ಟವಾದೀತು.

ಧನು ರಾಶಿ: ನಿಮಗೆ ಬರಬೇಕಾದ ಹಣವನ್ನು ಪಡೆಯಲು ಸಾಧ್ಯವಾಗದು. ಯಾವುದರಲ್ಲಿಯೂ ಸುಖ ಕಾಣುವ ಮನಸ್ಸು ಆಗದು. ಶುಭಕಾರ್ಯದಲ್ಲಿ ಭಾಗವಹಿಸುವಿರಿ. ನಿಮ್ಮ ಸಂಗಾತಿಯ ಮನಃಸ್ಥಿತಿಯು ಬದಲಾಗಿದ್ದು ನಿಮಗೆ ಸಮಸ್ಯೆಯಾಗುವುದು. ನೀವು ಜಾಣ್ಮೆಯಿಂದ ವರ್ತಿಸಬೇಕಾದೀತು. ಇಂದು ನಿಮ್ಮ ಕೆಲಸಕ್ಕೆ ಸಂಬಂಧಿಸಿದ ಒಳ್ಳೆಯ ಸುದ್ದಿಯು ಇರಲಿದೆ. ಮನೆಯಿಂದ ದೂರ ಇರಬೇಕಾದೀತು. ಸಜ್ಜನರ ಸಹವಾಸವನ್ನು ಹೆಚ್ಚು ಇಷ್ಟಪಡುವಿರಿ. ಇತರರಿಗೆ ನೋವಾಗದಂತೆ ಮಾತುಗಳನ್ನಾಡಿ. ನಿಮ್ಮ ಗೌರವಕ್ಕೆ ಸರಿಯಾದ ಕಾರ್ಯವನ್ನು ಮಾಡಿ. ಹಿರಿಯ ಹಿತವಚನವು ನಿಮಗೆ ಕಿರಿಕಿರಿಯಂತೆ ತೋರುವುದು. ನಿಮ್ಮ ಯಶಸ್ಸನ್ನು ನೀವೇ ಕಾಡಿಕೊಳ್ಳಬೇಕು. ಸಂಗಾತಿಯ ಮಾತನ್ನು ವಿರೋಧಿಸುವಿರಿ. ಸುಲಭವಾಗಿ ಸಿಕ್ಕಿದ್ದನ್ನು ಬಿಟ್ಟುಕೊಡುವಿರಿ. ಇನ್ನೊಬ್ಬರನ್ನು ಚುಚ್ಚಿ ಮಾತನಾಡಿಸುವುದು ಬೇಡ. ಸುಲಭವಾಗಿ ಸಿಗುವುದನ್ನು ಬಿಟ್ಟುಕೊಡುವಿರಿ. ನಿಮ್ಮ ಪ್ರಯಾಣದಿಂದ ಇಂದು ತುಂಬಾ ಪ್ರಯೋಜನ ಆಗದು.

ಮಕರ ರಾಶಿ: ಅಂದಿನ ಕಾರ್ಯವನ್ನು ಮುಗಿಸಿದರೆ ಭಯವಿಲ್ಲ. ಇಂದು ಕೆಲವು ಘಟನೆಗಳನ್ನು ಹೇಗೆ ಸ್ವಕರಿಸಬೇಕು ಎಂಬ ಇರುಸುಮುರುಸಾಗಬಹುದು. ನಿಮ್ಮ ಕಾರ್ಯಗಳು ಅಂದುಕೊಂಡಂತೆ ಪೂರ್ಣವಾಗುವುದು. ಹಳೆಯ ವಿಚಾರವನ್ನು ಇಂದು ವಿರೋಧಿಗಳು‌ ಪುನಃ ಮೇಲಕ್ಕೆ ತಂದು ಕಲಹ ಮಾಡಬಹುದು. ಆರ್ಥಿಕ ಬಿಕ್ಕಟ್ಟು ಹೆಚ್ಚಾಗುವುದು. ಅವಕಾಶವನ್ನು ಬಿಟ್ಟು ನೀವು ದೊಡ್ಡವರಾಗುವುದು ಬೇಡ. ಕೆಟ್ಟ ಮಾತುಗಳನ್ನು ಇನ್ನೊಬ್ಬರ ಬಗ್ಗೆ ತಪ್ಪಿ ಆಡುವಿರಿ. ಗೊತ್ತಿಲ್ಲದೇ ಯಾರ ಬಗ್ಗೆಯೂ ಮಾತನಾಡುವುದು ಬೇಡ‌. ನಿರಂತರ ಕ್ರಿಯಾಶೀಲತೆಯು ನಿಮ್ಮ ಮಾನಸಿಕ ಒತ್ತಡವನ್ನು ನಿವಾರಿಸುವುರು‌. ಸರ್ಕಾರಿ ಕೆಲಸದಲ್ಲಿ ಇರುವವರಿಗೆ ಆತಂಕವಿರಲಿದೆ. ಸಹೋದ್ಯೋಗಿಗಳು ನಿಮ್ಮ ವರ್ತನೆಯನ್ನು ಗಮನಿಸುವರು. ಹೊಸ ಭೂಮಿಯ ಖರೀದಿಗೆ ಆಪ್ತರನ್ನು ಜೊತೆಗೆ ಇಟ್ಟುಕೊಳ್ಳಿ. ಮನೆಯಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಅಮೂಲ್ಯ ವಸ್ತುವಿನ ಬಗ್ಗೆ ನಿಷ್ಕಾಳಜಿ ಸರಿಯಲ್ಲ. ವ್ಯಾಪಾರಸ್ಥರು ಅಧಿಕ ಲಾಭವನ್ನು ಗಳಿಸುವರು.

ಕುಂಭ ರಾಶಿ: ದೊಡ್ಡದನ್ನೇನೋ ಮಾಡಲು ಹೋಗಿ ಮುಗ್ಗರಿಸಬಹುದು. ನಿಮಗೆ ಸಿಗಬೇಕಾದ ಸವಲತ್ತುಗಳನ್ನು ಪಡೆದುಕೊಳ್ಳಲು ಸಾಧ್ಯವಾಗದು. ನಿಮ್ಮ ಪ್ರೀತಿಪಾತ್ರರ ಜೊತೆ ಆಪ್ತವಾದ ಸಮಯವನ್ನು ಕಳೆಯುವಿರಿ.‌ ಕಚೇರಿಯಲ್ಲಿ ನಿಮ್ಮ ಸಹೋದ್ಯೋಗಿಗಳ ಜೊತೆ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಳ್ಳಿ. ನಿಮ್ಮ ಆರ್ಥಿಕ ಸ್ಥಿತಿ ಆರೋಗ್ಯದ ಕಡೆ ಸ್ವಲ್ಪ ಹೆಚ್ಚು ಗಮನವಿರಲಿ. ಅಲ್ಪ ತಾಳ್ಮೆಯೂ ದೊಡ್ಡ ಅನಾಹುತವನ್ನು ತಪ್ಪಿಸಬಹುದು. ನಿಮ್ಮ‌ ಕೆಲಸವು ಕೇವಲ ಸುತ್ತಾಟದಲ್ಲಿಯೇ ಮುಕ್ತಾಯವಾಗುವುದು. ಆಲಂಕಾರಿಕ ವಸ್ತುಗಳ ಬಗ್ಗೆ ಅಸದ ಅಸೆ ಇರುವುದು. ನಿಮ್ಮ ವರ್ತನೆಯು ಇಷ್ಟವಾಗುವುದು. ಬಂಧುಗಳು ನಿಮ್ಮ ಬಗ್ಗೆ ಹಗುರವಾದ ಭಾವವನ್ನು ಇಟ್ಟುಕೊಳ್ಳುವರು. ಸಂಗಾತಿಯ ಜೊತೆ ಪ್ರೀತಿಯನ್ನು ಹಂಚಿ. ಅಪರಿಚಿತರ ಸಹವಾಸವು ಇಂದು ಬೇಡ. ನಿಮ್ಮ ಸಂಪತ್ತು ನಷ್ಟವಾಗಬಹುದು. ಇಂದಿನ ಆದಾಯವು ಮಧ್ಯಮಕ್ಕಿಂತ ಚೆನ್ನಾಗಿ ಇರುವುದು. ಚಂಚಲ ಮನಸ್ಸು ಸಹಜವಾದುದನ್ನು ಗುರುತಿಸಲಾರದು. ಇಂದಿನ ಒತ್ತಡದಲ್ಲಿ ಗಂಭೀರವಾದ ತೀರ್ಮಾನಗಳು ಕಷ್ಟ.

ಮೀನ ರಾಶಿ: ಇಂದು ನಿಮ್ಮ ಬಾಂಧವ್ಯಗಳನ್ನು ಸುದೃಢಗೊಳಿಸಲು ನೀವು ವಿಶೇಷ ಪ್ರಯತ್ನಗಳನ್ನು ಮಾಡಬೇಕಾಗುವುದು. ಇಂದಿನ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದು. ಅಗತ್ಯಕ್ಕಿಂತ ಹೆಚ್ಚು ಖರ್ಚು ಬೇಡ. ದಾಂಪತ್ಯದಲ್ಲಿ ಪರಸ್ಪರ ಅಭಿಪ್ರಾಯ ಭೇದವು ಕಾಣಿಸಿಕೊಂಡೀತು. ಸಂಗಾತಿಯ ಆರೋಗ್ಯದ ಬಗ್ಗೆ ಚಿಂತೆ ಶುರುವಾಗುತ್ತದೆ. ಆರ್ಥಿಕ ಸ್ಥಿತಿಯು ಉತ್ತಮವಾಗಿರುತ್ತದೆ. ತಂದೆಯಿಂದ ಬೆಂಬಲ ಸಿಗಲಿದೆ. ಪ್ರೀತಿಪಾತ್ರರು ನಿಮಗೆ ಬೇಕಾದ ಸಹಕಾರ ಮಾಡುವರು. ಆಪ್ತರನ್ನು ನೀವು ದೂರ ಮಾಡಿಕೊಳ್ಳುವುದು ಕಷ್ಟವಾಗಬಹುದು. ಕುಟುಂಬದವರನ್ನು ನೀವು ಕಳೆದುಕೊಳ್ಳಬೇಕಾದೀತು. ಪರೀಕ್ಷೆಯ ಸಿದ್ಧತೆಯಲ್ಲಿ ನಿಮ್ಮ ಸಮಯವನ್ನು ಕಳೆಯುವಿರಿ. ಇಂದು ನೀವು ಅಗತ್ಯ ಸೌಲಭ್ಯಗಳನ್ನು ಪಡೆದುಕೊಳ್ಳುವಿರಿ. ಮನೆಯ ಬದಲಾವಣೆಯು ಅನಿವಾರ್ಯವಾದೀತು. ಇಂದಿನ ಎಲ್ಲ ಸಂದರ್ಭದಲ್ಲಿಯೂ ಸಕಾರಾತ್ಮಕ ಆಲೋಚನೆ ಇರಲಿ. ನಿಮ್ಮ ನೇರ ನುಡಿಗಳೇ ಇಂದು ನಿಮಗೆ ತೊಂದರೆ ತರುವುದು. ಇಂದು ನಿಮ್ಮ ತಲೆಯಲ್ಲಿ ಅಪೂರ್ಣ ಕಾರ್ಯಗಳೇ ತುಂಬಿರುವುದು.

ಸಿದ್ದರಾಮಯ್ಯ ಪತ್ನಿಗೆ ಐಸಿಯುನಲ್ಲಿ ಚಿಕಿತ್ಸೆ: ಪಾರ್ವತಿಯವರಿಗೆ ಆಗಿದ್ದೇನು?
ಸಿದ್ದರಾಮಯ್ಯ ಪತ್ನಿಗೆ ಐಸಿಯುನಲ್ಲಿ ಚಿಕಿತ್ಸೆ: ಪಾರ್ವತಿಯವರಿಗೆ ಆಗಿದ್ದೇನು?
ಪರಸ್ಪರ ದೃಷ್ಟಿ ತೆಗೆಸಿಕೊಂಡ ಜಾಹ್ನವಿ, ಅಶ್ವಿನಿ: ಮತ್ತೆ ಒಂದಾದ ಹಳೇ ಜೋಡಿ
ಪರಸ್ಪರ ದೃಷ್ಟಿ ತೆಗೆಸಿಕೊಂಡ ಜಾಹ್ನವಿ, ಅಶ್ವಿನಿ: ಮತ್ತೆ ಒಂದಾದ ಹಳೇ ಜೋಡಿ
ಯಮುನಾ ನದಿಯಲ್ಲಿ ತುಂಬಿದ್ದ ವಿಷಕಾರಿ ನೊರೆಯ ಕ್ಲೀನಿಂಗ್ ಶುರು
ಯಮುನಾ ನದಿಯಲ್ಲಿ ತುಂಬಿದ್ದ ವಿಷಕಾರಿ ನೊರೆಯ ಕ್ಲೀನಿಂಗ್ ಶುರು
ಪ್ರಧಾನಿ ಮೋದಿ ಭೇಟಿ ಹಿಂದಿನ ಕಾರಣ ಬಿಚ್ಚಿಟ್ಟ ಸಿದ್ದರಾಮಯ್ಯ
ಪ್ರಧಾನಿ ಮೋದಿ ಭೇಟಿ ಹಿಂದಿನ ಕಾರಣ ಬಿಚ್ಚಿಟ್ಟ ಸಿದ್ದರಾಮಯ್ಯ
ಸಮಸ್ಯೆ ಬಗೆಹರಿಸದ ಸ್ಥಳೀಯ ಆಡಳಿತ: ಪ್ರಧಾನಿ ತನಕ ಹೋದ ಬಾಲಕ
ಸಮಸ್ಯೆ ಬಗೆಹರಿಸದ ಸ್ಥಳೀಯ ಆಡಳಿತ: ಪ್ರಧಾನಿ ತನಕ ಹೋದ ಬಾಲಕ
ಯೋಗ್ಯತೆ ಇಲ್ಲದೇ ಬಿಗ್ ಬಾಸ್ ಮನೆ ಒಳಗೆ ಇರುವ ಸ್ಪರ್ಧಿಗಳು ಯಾರು?
ಯೋಗ್ಯತೆ ಇಲ್ಲದೇ ಬಿಗ್ ಬಾಸ್ ಮನೆ ಒಳಗೆ ಇರುವ ಸ್ಪರ್ಧಿಗಳು ಯಾರು?
ಶಬರಿಮಲೆ ದೇವಸ್ಥಾನ ಚಿನ್ನ ಕಳ್ಳತನ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ
ಶಬರಿಮಲೆ ದೇವಸ್ಥಾನ ಚಿನ್ನ ಕಳ್ಳತನ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ
VIDEO: ಪಾಕ್ ಆಟಗಾರನ ಆಕ್ರಮಣಕಾರಿ ವರ್ತನೆ... ವಾರ್ನಿಂಗ್!
VIDEO: ಪಾಕ್ ಆಟಗಾರನ ಆಕ್ರಮಣಕಾರಿ ವರ್ತನೆ... ವಾರ್ನಿಂಗ್!
ಚಂದ್ರಪ್ರಭ ಬಿಗ್ ಬಾಸ್​​ನಿಂದ ಹೊರಬಂದಿದ್ದಕ್ಕೆ ಅಸಲಿ ಕಾರಣ ತಿಳಿಸಿದ ಸುಧಿ
ಚಂದ್ರಪ್ರಭ ಬಿಗ್ ಬಾಸ್​​ನಿಂದ ಹೊರಬಂದಿದ್ದಕ್ಕೆ ಅಸಲಿ ಕಾರಣ ತಿಳಿಸಿದ ಸುಧಿ
ಬೆಂಗಳೂರಿನತ್ತ ಡಿಕೆ ಶಿವಕುಮಾರ್: ದಿಲ್ಲಿಗೆ ಹೋದ ಕೆಲಸ ಏನಾಯ್ತು?
ಬೆಂಗಳೂರಿನತ್ತ ಡಿಕೆ ಶಿವಕುಮಾರ್: ದಿಲ್ಲಿಗೆ ಹೋದ ಕೆಲಸ ಏನಾಯ್ತು?