Horoscope: ಸಂಗಾತಿಯೊಂದಿಗೆ ಸಮಯ ಕಳೆಯುವಿರಿ, ವಿದೇಶ ಪ್ರಯಾಣದ ಗುಂಗಿನಲ್ಲಿರುವಿರಿ

| Updated By: ಗಂಗಾಧರ​ ಬ. ಸಾಬೋಜಿ

Updated on: Nov 16, 2024 | 12:12 AM

ನೀವು ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ನವೆಂಬರ್​ 16: ಸಮರ್ಪಕವಾದ ನಿಲುವನ್ನು ಹೊಂದಿದರೆ ನಿಮಗೇ ಮುಂದಿನ ಮಾರ್ಗ ತೆರೆಯುವುದು. ಉನ್ನತ ವಿದ್ಯಾಭ್ಯಾಸದಲ್ಲಿ ಉತ್ತಮ ಪ್ರದರ್ಶನ ಇರಲಿದೆ. ನಿಮ್ಮ ಒಳ್ಳೆಯತನವನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ಉಪಯೋಗಿಸಿಕೊಳ್ಳಬಹುದು. ಹಾಗಾದರೆ ನವೆಂಬರ್​ 16ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Horoscope: ಸಂಗಾತಿಯೊಂದಿಗೆ ಸಮಯ ಕಳೆಯುವಿರಿ, ವಿದೇಶ ಪ್ರಯಾಣದ ಗುಂಗಿನಲ್ಲಿರುವಿರಿ
ಸಂಗಾತಿಯೊಂದಿಗೆ ಸಮಯ ಕಳೆಯುವಿರಿ, ವಿದೇಶ ಪ್ರಯಾಣದ ಗುಂಗಿನಲ್ಲಿರುವಿರಿ
Follow us on

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ತುಲಾ ಮಾಸ, ಮಹಾನಕ್ಷತ್ರ: ವಿಶಾಖಾ, ಮಾಸ: ಕಾರ್ತಿಕ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಕೃತ್ತಿಕಾ, ಯೋಗ: ವರಿಯಾನ್, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 35 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 05 ಗಂಟೆ 59 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 09:26 ರಿಂದ 10:52ರವರೆಗೆ, ಯಮಘಂಡ ಕಾಲ ಮಧ್ಯಾಹ್ನ 01:43 ರಿಂದ 03:09 ರವರೆಗೆ, ಗುಳಿಕ ಕಾಲ ಬೆಳಿಗ್ಗೆ 06:35ರಿಂದ 08:01 ರವರೆಗೆ.

ತುಲಾ ರಾಶಿ: ಸ್ತ್ರೀಯರ ಜೊತೆ ವ್ಯವಹಾರದಿಂದ ದೂರವಿರುವುದು ಉತ್ತಮ. ವ್ಯವಸ್ಥೆಯ ಕೈಮೀರುವತ ತನಕ‌ ಅದನ್ನು ಬಿಡುವುದು ಬೇಡ. ನಿಮ್ಮ ಯಶಸ್ಸಿಗೆ ವಿರೋಧಿಗಳು ಅಡ್ಡಗಾಲು ಹಾಕಬಹುದು. ಧೃತಿಗೆಡುವ ಅವಶ್ಯಕತೆ ಇರುವುದಿಲ್ಲ. ಉದ್ವೇಗದಿಂದ ಸಿಟ್ಟುಗೊಂಡು ಅಪ್ರಿಯರಾಗುವಿರಿ. ಉದ್ಯೋಗದ ಬದಲಾವಣೆಯ ವಿಚಾರದಲ್ಲಿ ನೀವು ದ್ವಂದ್ವವಿರಲಿದೆ. ಸ್ಥಿರ ಮನಸ್ಸಿನಿಂದ ಯಾವುದನ್ನೂ ಒಪ್ಪಲಾರಿರಿ. ಇಂದಿನ ಕೆಲಸಗಳು ಬೇಗ ಮುಕ್ತಾಯವಾಗಿ ನಿಶ್ಚಿಂತೆಯಿಂದ ಇರುವಿರಿ. ವಿದ್ಯಾಭ್ಯಾಸಕ್ಕೆ ಮನೆಯನ್ನು ಬಿಟ್ಟು ದೂರವಿರಲು ನಿಮಗೆ ಮನಸ್ಸಾಗದು. ನಿಮ್ಮ ಇಂದಿನ ಆರ್ಥಿಕಲಾಭವು ನಿಮಗೆ ಹೆಚ್ಚು ಸುಖವನ್ನು ಕೊಡಬಹುದು. ಸಂಗಾತಿಯು ನಿಮಗೆ ಬೇಸರವಾಗುವಂತೆ ಮಾತನಾಡಬಹುದು. ಇಂದು ನೀವು ಗಂಭೀರವಾದ ಆಲೋಚನೆಯಲ್ಲಿ ಮುಳುಗುವಿರಿ. ಬಂದ ಹಣವನ್ನು ಸರಿಯಾಗಿ ವಿನಿಯೋಗವಾಗುವಂತೆ ಮಾಡಿ. ಅಧಿಕೃತ ಮಾತು ಅಥವಾ ಪತ್ರವನ್ನು ಮಾತ್ರ ನಂಬಿ.

ವೃಶ್ಚಿಕ ರಾಶಿ: ರಾಜಕಾರಣದಿಂದ ನೀವು ಪ್ರೇರಣೆ ಪಡೆಯುವಿರಿ. ಅಧಿಕಾರ ಮತ್ತು ವರ್ಚಸ್ಸು ಹೆಚ್ಚಿಸಿಕೊಳ್ಳುವ ಅವಕಾಶಗಳು ಸಿಗಲಿದೆ. ಸಕಾರಾತ್ಮಕ ಯೋಚನೆಯಿಂದ ಮುಂದಡಿ ಇಡಬೇಕಾದೀತು. ನಿಮ್ಮ ಬುದ್ಧಿಶಕ್ತಿಗೆ ತಕ್ಕಂತೆ ಕೆಲಸದಲ್ಲಿ ಜಯವನ್ನು ಸಾಧಿಸುವಿರಿ. ನಿಮ್ಮ ರೂಢಿಗಳು ನಿಮಗೆ ಗೊತ್ತಾಗದಂತೆ ಬದಲಾಗಬಹುದು. ಸ್ವಂತ ಉದ್ಯೋಗವನ್ನು ನಡೆಸಲು ಚಿಂತಿಸುವುದು ಉತ್ತಮ. ವಂಚನೆಯ ಕರೆಗಳಿಂದ ಆದಷ್ಟು ಎಚ್ಚರವಾಗಿರಿ. ನಿಮ್ಮ ಸುತ್ತಮುತ್ತಲಿನವರಿಂದ ತೊಂದರೆಯಾಗಬಹುದು. ಇಂದು ನೀವು ಒತ್ತಡದ ಕೆಲಸದಿಂದ ವಿರಾಮ ಪಡೆದುಕೊಳ್ಳಲು ಬಯಸುವಿರಿ. ಉಳಿಯತಾಯಕ್ಕೆ ಏನೇ ಮಾಡಿದರೂ ಕೆಲವು ಸಂದರ್ಭಗಳಲ್ಲಿ ಅದು ಸಾಧ್ಯವಾಗದು. ಹೊಸ ಕೆಲಸದಲ್ಲಿ ಉತ್ಸಾಹವು ಇರಲಿದೆ. ನಿಮ್ಮ ಅಂತರಂಗವು ಎಲ್ಲರಿಗೂ ಗೊತ್ತಾದೀತು. ಮಕ್ಕಳ ಜೊತೆ ಸಂತೋಷದಿಂದ ಸಮಯವನ್ನು ಕಳೆಯುವಿರಿ. ಸೃಜನಾತ್ಮಕವಾಗಿ ಏನನ್ನಾದರೂ ಮಾಡಲು ಹೋಗಿ ಎಡವುವಿರಿ.

ಧನು ರಾಶಿ: ದುಃಖವನ್ನು ಎಷ್ಟೇ ಹಿಡಿದಿಟ್ಟರೂ ಅದು ಅಸ್ಥಾನದಲ್ಲಿ ಪ್ರಕಟವಾಗಬಹುದು. ನಿಮ್ಮ ಬೆಳವಣಿಕೆಗೆಯು ಸಾತ್ತ್ವಿಕ ರೀತಿಯಲ್ಲಿ ಇರಲಿ. ಮನಸ್ಸಿಗೆ ಮಂಕು ಕವಿದಂತೆ ಇರುವಿರಿ. ಜೀವನವು ಅಸಾರವಾದುದ್ದು ಎಂಬ ಭಾವವು ಬರಬಹುದು. ಜೀವನದಲ್ಲಿ ಚುರುಕುತನ ಕಂಡುಕೊಳ್ಳಲು ದಾರಿಯನ್ನು ಕಂಡುಕೊಳ್ಳಿ. ನಿಮ್ಮ ಕಾರ್ಯವೇ ದೀರ್ಘವಾಗಬಹುದು. ಬಂಧುಗಳು ನಿಮ್ಮನ್ನು ಪ್ರಶಂಸಿಸಿ ಕಾರ್ಯವನ್ನು ಸಾಧಿಸಿಕೊಳ್ಳುವರು. ಸಂಗಾತಿಯ ಜೊತೆ ಹೊಂದಾಣಿಕೆಯನ್ನು ಬೆಳೆಸಿಕೊಳ್ಳದಿದ್ದರೆ ಕಷ್ಟವಾದೀತು. ಹಿಂದಿನ ಹಣಕಾಸಿನ ಸಮಸ್ಯೆಯು ಇಂದೂ ಕಾಣಿಸಿಕೊಳ್ಳಬಹುದು. ನಿಮ್ಮ ಸಾಧನೆಯನ್ನು ನೀವು ಎಲ್ಲರ ಬಳಿ ಹೇಳಿಕೊಳ್ಳುವಿರಿ. ಮಹತ್ತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸೂಕ್ಷ್ಮತೆಯ ಅಗತ್ಯತೆ ಇದೆ. ತಂತ್ರವನ್ನು ಹೂಡಿ ನಿಮ್ಮ ಹಿತಶತ್ರುವನ್ನು ಕಂಡುಕೊಳ್ಳುವಿರಿ. ವ್ಯಾಪಾರದಲ್ಲಿ ಜಾಗರೂಕತೆ ಮುಖ್ಯ.

ಮಕರ ರಾಶಿ: ಸಮರ್ಪಕವಾದ ನಿಲುವನ್ನು ಹೊಂದಿದರೆ ನಿಮಗೇ ಮುಂದಿನ ಮಾರ್ಗ ತೆರೆಯುವುದು. ಉನ್ನತ ವಿದ್ಯಾಭ್ಯಾಸದಲ್ಲಿ ಉತ್ತಮ ಪ್ರದರ್ಶನ ಇರಲಿದೆ. ನಿಮ್ಮ ಒಳ್ಳೆಯತನವನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ಉಪಯೋಗಿಸಿಕೊಳ್ಳಬಹುದು. ಜಾಗರೂಕರಾಗಿ ಜನರಿಂದ ದೂರವಿರುವುದು ಒಳ್ಳೆಯದು. ನಿಮ್ಮದೇ ಆದ ಕುಟುಂಬದಲ್ಲಿ ಹಲವರು ಕಿರಿಕಿರಿ ಮಾಡಬಹುದು. ಹಿಂದೆ ಮುಂದೆ ಯೋಚಿಸದೆ ಏಕಾಏಕಿಯಾಗಿ ಯಾರಿಗೂ ಮಾತು ಕೊಡುವುದು ಬೇಡ. ಕೋಪಿಷ್ಠರ ಜೊತೆ ವ್ಯವಹಾರ ಕಷ್ಟ. ಕೃಷಿ ಚಟುವಟಿಕೆಗಳ ಬಗ್ಗೆ ನಿಮಗೆ ಅಸಕ್ತಿಯು ಹೆಚ್ಚಿರುವುದು. ಅನನುಕೂಲತೆಯನ್ನು ಬಳಸಿಕೊಂಡು ಸಕಾರಾತ್ಮಕವಾಗಿ ಸಾಧಿಸುವಿರಿ. ವ್ಯಕ್ತಿಗತ ಸಂಬಂಧಗಳನ್ನು ಸರಿಯಾಗಿ ಇರುವಂತೆ ನೋಡಿಕೊಳ್ಳಿ. ನಿಮ್ಮ ಚಿಂತೆನೆಗಳು ಉತ್ತಮವಾಗಿದ್ದರೂ ಅದನ್ನು ಕಾರ್ಯರೂಪಕ್ಕೆ ತರಲು ಕಷ್ಟವಾದೀತು. ಯಾರ ಮಾತನ್ನಾದರೂ ಸಮಾಧಾನದಿಂದ ಕೇಳಿ.

ಕುಂಭ ರಾಶಿ: ಪರಧನವನ್ನು ಪಡೆದು ಸ್ವತಂತ್ರವಾಗಿ ಇರಲಾಗದು. ನಿಮ್ಮ ಕೆಲಸಕ್ಕೆ ಪ್ರಶಂಸೆ ಸಿಗುವುದು. ನಿಮ್ಮ ಏಳಿಗೆ ಕಂಡು ಅಸೂಯೆ ಪಡುವವರ ಸಂಖ್ಯೆ ಹೆಚ್ಚಾಗಲಿದೆ. ಅದಕ್ಕೆ ತಲೆ ಕೆಡಿಸಿಕೊಳ್ಳದೆ ನಿಮ್ಮ ಕಾರ್ಯದಲ್ಲಿ ಪ್ರವೃತ್ತರಾಗಿ ಕಾರ್ಯದಲ್ಲಿ ನಿಷ್ಠೆಯನ್ನು ತೋರಿಸಿ. ವಿದೇಶ ಪ್ರಯಾಣದ ಗುಂಗಿನಲ್ಲಿ ನೀವು ಇರುವಿರಿ. ಕುಟುಂಬದ ಪ್ರೋತ್ಸಾಹವು ನಿಮಗೆ ಸಿಗುವುದು. ಸಂಗಾತಿಯ ಜೊತೆ ಸಮಯವನ್ನು ಕಳೆಯುವಿರಿ. ನಿಮ್ಮ ತಪ್ಪನ್ನು ಎತ್ತಿ ತೋರಿಸುವವರು ಇಂದು ಕಾಣಿಸುವರು. ಶೈಕ್ಷಣಿಕವಾಗಿ ಹೆಚ್ಚಿನ ಪ್ರಗತಿಯನ್ನು ವಿದ್ಯಾರ್ಥಿಗಳು ಸಾಧಿಸುವರು. ಹೊಸದನ್ನು ಕಲಿಯಲು ಮತ್ತು ನಿಮ್ಮ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಏನನ್ನಾದರೂ ಮಾಡುವುದು ಉತ್ತಮ. ಉದ್ಯಮವು ಸಕ್ರಿಯವಾಗಿದ್ದು ಇದನ್ನು ವಿಸ್ತರಿಸುವಿರಿ. ನಿಮ್ಮನ್ನು ಇಷ್ಟಪಟ್ಟವರು ನಿಮ್ಮನ್ನು ಕಡೆಗಣಿಸಬಹುದು. ಇದು ನಿಮಗೆ ಸಂತೋಷವೂ ಆಗುವುದು. ಕಳೆದುಕೊಂಡು ವಸ್ತುವಿನ ಮೌಲ್ಯವು ಇಂದು ಗೊತ್ತಾಗುವುದು.

ಮೀನ ರಾಶಿ: ಸಡಿಲವಾದಷ್ಟು ನಿಮಗೇ ತೊಂದರೆ. ಎಲ್ಲಿಯೂ ಹಿಡಿತ ತಪ್ಪದಂತೆ ನೋಡಿಕೊಳ್ಳಿ. ಖಾಸಗಿ ಉದ್ಯೋಗದಲ್ಲಿ ಇದ್ದವರಿಗೆ ತೊಂದರೆ. ನಿಮಗೆ ವ್ಯವಹಾರವು ಅಂದುಕೊಂಡಷ್ಟು ಸಾಧಿಸಲಾಗದೇ ಇಂದು ಬೇಸರವಾಗಬಹುದು. ನಿಮ್ಮನ್ನು ಲಕ್ಷಿಸಲು ಸಾಧ್ಯವಾಗದ ದೊಡ್ಡ ವ್ಯಕ್ತಿತ್ವ ನಿಮ್ಮದಾಗುವುದು. ಸ್ವಕೀಯರೇ ನಿಮ್ಮ ನಿಜವಾದ ವೇಗವನ್ನು ಕುಂಠಿತಗೊಳಿಸುವರು. ಕಣ್ಣಿಗೆ ಪ್ರತ್ಯಕ್ಷ ಕಂಡರೂ ಪ್ರಾಮಾಣಿಸಿ ನೋಡು ಎನ್ನುವಂತೆ ಪರಿಶೀಲಿಸಿ ಕಾರ್ಯ ಪ್ರವೃತ್ತರಾಗಿ. ತಪ್ಪು ಮಾಹಿತಿ ನೀಡಿ ನಿಮ್ಮ ದಾರಿ ತಪ್ಪಿಸಬಹುದು. ನಿಮ್ಮ ಮೇಲೆ ಅರೋಪವು ಬರುವ ಸಾಧ್ಯತೆ ಇದ್ದೆ. ಸಣ್ಣ ಮಟ್ಟಿನ ಗೌರವಕ್ಕೆ ಪಾತ್ರರಾಗುವಿರಿ. ಕಾನೂನು ಸಮರಕ್ಕೆ ನಿಮಗೆ ಹೊಸ ಆಯಾಮ ಸಿಗಲಿದೆ. ಲಾಭವನ್ನು ಪಡೆಯಲು ಹೋಗಿ ಇರುವ ಸಂಪತ್ತನ್ನೂ ನಷ್ಟವಾಗಬಹುದು. ಯಾವುದನ್ನಾದರೂ ನಂಬಿಕಸ್ಥರ ಜೊತೆ ವ್ಯವಹರಿಸಿ. ನಿಮ್ಮನ್ನು ರೂಪಿಸಿಕೊಳ್ಳಲು ಪ್ರಯತ್ನಿಸುವಿರಿ.