AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವೆಂಬರ್ 16 ಕುಜನ ಸ್ಥಾನಪಲ್ಲಟ; ಈ 3 ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ

ನವೆಂಬರ್ 16.2023 ರಂದು ಕುಜನು ತುಲಾ ರಾಶಿಯಿಂದ ವೃಶ್ಚಿಕ ರಾಶಿಗೆ ಸಂಚಾರವನ್ನು ಮಾಡಲಿದ್ದು.... ಮಕರ ,ಮೇಷ ,ಕನ್ಯಾ ಈ ಮೂರು ರಾಶಿಗೆ ಶುಭವನ್ನು ನೀಡಲಿದ್ದಾನೆ…

ನವೆಂಬರ್ 16 ಕುಜನ ಸ್ಥಾನಪಲ್ಲಟ; ಈ 3 ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ
ಸಾಂದರ್ಭಿಕ ಚಿತ್ರ
TV9 Web
| Updated By: Digi Tech Desk|

Updated on:Nov 16, 2023 | 2:33 PM

Share

ನವೆಂಬರ್ 16.2023 ರಂದು ಕುಜನು ತುಲಾ ರಾಶಿಯಿಂದ ವೃಶ್ಚಿಕ ರಾಶಿಗೆ ಸಂಚಾರವನ್ನು ಮಾಡಲಿದ್ದು…. ಡಿಸೆಂಬರ್ 27ರ ವರೆಗೂ ವೃಶ್ಚಿಕ ರಾಶಿಯಲ್ಲಿ ಕುಜನು ಇರುವುದರಿಂದ ನವೆಂಬರ್ 16ರಿಂದ ಡಿಸೆಂಬರ್ 27 ವರೆಗೆ ಮೂರು ರಾಶಿಯವರಿಗೆ ಶುಭ ಫಲವನ್ನು ಕುಜನು ಈ ಸಂಚಾರ ಸಮಯದಲ್ಲಿ ನೀಡಲಿದ್ದಾನೆ .ಮಕರ ,ಮೇಷ ,ಕನ್ಯಾ ಈ ಮೂರು ರಾಶಿಯ ಜನರಿಗೆ ಕುಜನ ಸ್ಥಾನ ಬದಲಾವಣೆಯು ಶುಭ ಫಲ ಗಳನ್ನು ನೀಡಲಿದೆ. “ಕ್ಷೀಣೇಂದ್ವರ್ಕಕುಜಾಹಿಕೇತುರವಿಜಾಃ ಪಾಪಾಃ …..” ಎನ್ನುವಂತೆ ಕುಜನು ಪಾಪ ಗ್ರಹ ಅದದ್ದರಿಂದ ಪಾಪ ಗ್ರಹಗಳು ಗೋಚಾರದಲ್ಲಿ ತೃತೀಯ ,ಷಷ್ಠ ,ಏಕಾದಶದಲ್ಲಿ ಶುಭಫಲವನ್ನು ನೀಡುತ್ತಾರೆ ಕುಜನಿಂದ ತೃತೀಯ ಸ್ಥಾನ ಮಕರ ಷಷ್ಠ ಸ್ಥಾನ ಮೇಷ ಏಕಾದಶ ಸ್ಥಾನ ಕನ್ಯಾ ಆದದರಿಂದ ಈ ಮೂರು ರಾಶಿಯವರಿಗೆ ವಿಶೇಷವಾದ ಶುಭಫಲಗಳನ್ನು ಕುಜನು ನೀಡಲಿದ್ದಾನೆ ಉಳಿದ ರಾಶಿಯವರಿಗೆ ಸಾಮಾನ್ಯ ಮತ್ತು ಅಶುಭ ಫಲಗಳನ್ನು ನೀಡಲಿದ್ದಾನೆ.

ಮಕರ ರಾಶಿ :-

ಕುಜನ ಈ ಸ್ಥಾನಪಲ್ಲಟವು ನಿಮ್ಮ ಕಾರ್ಯಗಳಲ್ಲಿ ಸಫಲತೆಯನ್ನು ನೀಡಲಿದೆ ಜೀವನದಲ್ಲಿ ಸಂತೋಷ ಸೌಭಾಗ್ಯ ವನ್ನು ಕುಜನು ನೀಡಲಿದ್ದಾನೆ ಮಕ್ಕಳಿಂದ ಸುಖ ಸಿಗುವುದು ನಿಮ್ಮ ಕೀರ್ತಿ ವೃದ್ಧಿಯಾಗುವುದು ಬಂಗಾರದ ಆಭರಣ ಖರೀದಿ ಮಾಡುವಿರಿ ನಿಮ್ಮ ಮಾತನ್ನು ಸುತ್ತಲಿನ ಜನರು ಕೇಳುವುದರ ಜೊತೆಗೆ ಮಾತನ್ನು ಪಾಲಿಸುತ್ತಾರೆ.

ಇದನ್ನೂ ಓದಿ: ಈ ನಾಲ್ಕು ರಾಶಿಯವರು ಚಿಕ್ಕ ವಯಸ್ಸಿನಲ್ಲೇ ಶ್ರೀಮಂತರಾಗ್ತಾರೆ

ಮೇಷ ರಾಶಿ:-

ಶತ್ರುಗಳೊಂದಿಗೆ ಇರುವ ವಿವಾದ ಕಲಹಗಳಿಗೆ ಮುಕ್ತಾಯ ದೊರಕುತ್ತದೆ ದೀರ್ಘ ರೋಗದಿಂದ ಬಳಲುತ್ತಿದ್ದರೆ ರೋಗದಿಂದ ಮುಕ್ತಿ ಸಿಗುವುದು ಕೈಗೊಂಡ ಕೆಲಸಗಳಲ್ಲಿ ವಿಜಯ ಮತ್ತು ಧನ ಪ್ರಾಪ್ತಿಯಾಗುವುದು ಕಾರ್ಯವು ಸಫಲ ಗೊಳ್ಳುವುದು ಬಂಗಾರ ತಾಮ್ರ ಹವಳಗಳನ್ನ ಖರೀದಿ ಮಾಡುವಿರಿ ಯಾವುದೇ ವಿಚಾರ ಅಥವಾ ಕೆಲಸದಲ್ಲಿ ಯಾರ ಯಾವ ಮುಲಾಜು ಇಲ್ಲದೆ ಮುಂದುವರೆಯುತ್ತೀರಿ.

ಕನ್ಯಾ ರಾಶಿ:-

ಕಾರ್ಯಗಳಲ್ಲಿ ಜಯ ಮತ್ತು ಲಾಭವನ್ನು ಕಾಣುತ್ತೀರಿ ಆರೋಗ್ಯ ಉತ್ತಮವಾಗಿರುವುದು ಭೂಸಂಪತ್ತಿನಿಂದ ಲಾಭವನ್ನು ಪಡೆಯುತ್ತೀರಿ ಭ್ರಮರಗಳು ಪುಷ್ಪ ಗೊಂಚಲಿಗೆರೆಗಿ ಜೇನು ಸವಿದಂತೆ ಜನತಾ ಮುಖಂಡನಾಗಿ ಸುಖಭೋಗ ಗಳನ್ನು ಅನುಭವಿಸುವ ಯೋಗವನ್ನು ಕುಜನು ಈ ರಾಶಿಗೆ ನೀಡಲಿದ್ದಾನೆ.

ಲೇಖಕರು: ವಿಧ್ವಾನ್​ ಮಂಜುನಾಥ ಭಟ್, ಕೋಗೋಡು

82771 73283

Published On - 2:31 pm, Thu, 16 November 23