ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ಅಕ್ಟೋಬರ್ 07) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ನವಮೀ, ನಿತ್ಯನಕ್ಷತ್ರ: ಪುನರ್ವಸು, ಯೋಗ: ಪರಿಘ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06-23ಕ್ಕೆ, ಸೂರ್ಯಾಸ್ತ ಸಂಜೆ 06 – 17ಕ್ಕೆ, ರಾಹು ಕಾಲ ಬೆಳಿಗ್ಗೆ 09:22 – 10:51ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 01:50 – 03:19ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 06:24 – 07:53ರ ವರೆಗೆ.
ಮೇಷ ರಾಶಿ: ಸ್ವಭಾವವು ಉಗ್ರವಾಗಿ ಇರಲಿದೆ. ಯಾರ ಮಾತನ್ನೂ ಕೇಳವ ಸಹನೆ ಇರದು. ಪ್ರತಿಸ್ಪರ್ಧಿಗಳಿಗೆ ಸರಿಯಾದ ಸ್ಪರ್ಧೆಯನ್ನು ಕೊಡುವಿರಿ. ನಿಮ್ಮ ನಿರ್ಧಾರಗಳೇ ಅಂತಿಮವಾಗಬೇಕು ಎನ್ನುವ ಮನಃಸ್ಥಿತಿ ಇರುವುದು. ಮಾನಸಿಕವಾಗಿ ಉತ್ಸಾಹವು ಕಡಿಮೆ ಇರುವುದು. ಕೃಷಿಯಲ್ಲಿ ನೀವು ಹೆಚ್ಚು ಪ್ರಗತಿಯನ್ನು ಸಾಧಿಸುವ ಮನಸ್ಸು ಇರುವುದು. ನೀವು ಇಂದು ಅತಿಥಿಯಾಗಿ ಭಾಗವಹಿಸುವಿರಿ. ನಿಮ್ಮ ನಡವಳಿಕೆಯನ್ನು ಬದಲಿಸಿಕೊಳ್ಳುವುದು ಉತ್ತಮ. ನಿಮ್ಮಿಂದಾಗಿ ಮನೆಯಲ್ಲಿ ಇಂದು ಸಂತೋಷವು ಇರಲಿದೆ. ಕಳೆದ ದಿನಗಳನ್ನು ಒಂದೊಂದಾಗಿಯೇ ಮೆಲುಕು ಹಾಕಿಕೊಂಡು ಹಂಚಿಕೊಳ್ಳುವಿರಿ. ಬರಬೇಕಾದ ಹಣವು ವಿಳಂಬವಾಗುವುದು.
ವೃಷಭ ರಾಶಿ: ಸಾಹಿತ್ಯಾಸಕ್ತರಿಗೆ ಹೆಚ್ಚು ಅನುಕೂಲಕರ ವಾತಾವರಣವು ಇರುವುದು. ನಿಮ್ಮ ಪ್ರತಿಭೆಗೆ ಯೋಗ್ಯವಾದ ಕಾರ್ಯವು ಸಿಗುವುದು. ನಿಮ್ಮ ಆಕರ್ಷಕ ರೂಪಕ್ಕೆ ಮನವು ಸೋಲಬಹುದು. ಬರುವ ಯೋಜನೆಗಳನ್ನು ಸಕಾರಾತ್ಮಕವಾಗಿ ಪಡೆಯುವಿರಿ. ಸಹೋದ್ಯೋಗಿಗಳಿಂದ ಸಹಾಯವನ್ನು ಪಡೆಯುವಿರಿ. ಸ್ವಾರ್ಥವನ್ನು ಬಿಟ್ಟು ಬೇರೆ ಕಡೆ ಯೋಚನೆಯನ್ನು ಮಾಡಲಾರಿರಿ. ಆನಂದದಿಂದ ಈ ದಿನವನ್ನು ಕಳೆಯಬೇಕು ಎನಿಸುವುದು. ಅನಿರೀಕ್ಷಿತ ಪ್ರಯಾಣದಿಂದ ಸುಖವಿರಲಿದೆ. ನಿಮ್ಮ ವಿವಾಹದ ಮಾತುಕತೆ ವಿಳಂಬವಾಗಿದೆ ಎಂದು ಬೇಸರ ಆಗಬಹುದು. ಮುಖ್ಯ ದಾಖಲೆಗಳನ್ನು ಸರಿಯಾದ ಕಡೆಗಳಲ್ಲಿ ಇಟ್ಟುಕೊಳ್ಳಿ. ನಿಮಗೆ ಸರಿಯಾದ ಸಮಯದಲ್ಲಿ ಹಣವು ಸಿಕ್ಕಿರುವುದು ಖುಷಿ ಕೊಡುವುದು.
ಮಿಥುನ ರಾಶಿ: ಪ್ರಭಾವೀ ಶತ್ರುಗಳನ್ನು ನೀವು ಸೋಲಿಸುವಿರಿ. ಅದೃಷ್ಟದ ಪರೀಕ್ಷೆಯು ಆಗಬಹುದು. ಪ್ರತಿಭೆಯ ಪ್ರದರ್ಶನಕ್ಕೆ ಉತ್ತಮ ಅವಕಾಶವು ಸಿಗುವುದು. ಅಜಾಗರೂಕತೆಯಿಂದ ನಿಮಗೆ ನಷ್ಟ ಮಾಡಿಕೊಳ್ಳುವಿರಿ. ಅಧಿಕ ಆಲೋಚನೆಯಿಂದ ಮನಸ್ಸು ದುರ್ಬಲವಾಗುವುದು. ಕಾಲು ನೋವಿಗೆ ವೈದ್ಯರ ಸಲಹೆಯನ್ನು ಭೇಟಿ ಮಾಡಿ. ನಿಮ್ಮ ದಿನಚರ್ಯೆಯನ್ನು ಬದಲಿಸಿಕೊಳ್ಳಲು ಇಷ್ಟಪಡುವಿರಿ. ಸ್ವಂತ ಉದ್ಯೋಗದಲ್ಲಿ ನಿಮಗೆ ಕೆಲವು ಕಹಿ ವಿಚಾರವು ಗೊತ್ತಾಗುವುದು. ನಿಮ್ಮ ಸಂಗಾತಿಯ ಜೊತೆ ಹೆಚ್ಚು ಸಮಯ ಕಳೆಯಲು ಆಗದು. ಉದ್ಯೋಗಕ್ಕೆ ಸಂಬಂಧಿಸಿದಂತೆ ಮನೆಯಿಂದ ದೂರ ಹೋಗುವಿರಿ. ಸಮಾಜವು ನಿಮ್ಮ ಸಾಧನೆಗೆ ಮೆಚ್ಚಿಕೊಳ್ಳುವುದು.
ಕರ್ಕಾಟಕ ರಾಶಿ: ಚಾಣಾಕ್ಷತನದಿಂದ ನಿಮ್ಮ ಕೆಲಸವನ್ನು ಬೇಗ ಪೂರ್ಣ ಮಾಡುವಿರಿ. ವಿದ್ಯಾರ್ಥಿಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತಿ ಇರುವುದು. ಉದ್ಯೋಗದಲ್ಲಿ ಹೊಸ ವಿಚಾರಗಳನ್ನು ನೀವು ಕಲಿಯಬೇಕಾಗುವುದು. ನಿಮ್ಮ ಮಾತಿಗೆ ಇಂದು ವಿರೋಧವು ಉಂಟಾಗುವುದು. ಅಪರಿಚರ ಜೊತೆ ವ್ಯವಹಾರವು ಸರಿಯಾಗಿ ಇರಲಿ. ತಂದೆಯ ಮೇಲೆ ನಿಮಗೆ ಬೇಸರ ಬರಬಹುದು. ಸಂಗಾತಿಯ ಮಾತುಗಳು ನಿಮಗೆ ನೋವನ್ನು ತರಬಹುದು. ಆಸ್ತಿಯ ವಿಚಾರದಲ್ಲಿ ನಿಮ್ಮರಿಗೆ ಸುಳ್ಳು ಹೇಳಿದ್ದು ಗೊತ್ತಾಗುವುದು. ಆರ್ಥಿಕ ನಷ್ಟವನ್ನು ತುಂಬಿಕೊಳ್ಳಲು ಬೇರೆ ದಾರಿಯನ್ನು ಹುಡುಕಿಕೊಳ್ಳುವಿರಿ. ಮನೆಯ ವಾತಾವರಣವು ನಿಮಗೆ ಹಿತಕರ ಎನಿಸದು. ವಿಶೇಷವಾದ ವಸ್ತುವನ್ನು ಕೊಳ್ಳುವಿರಿ.
ಸಿಂಹ ರಾಶಿ: ವೃತ್ತಿಯಲ್ಲಿ ನಿಮಗೆ ಆಕಸ್ಮಿಕ ಪ್ರಶಂಸೆಯಿಂದ ಅಚ್ಚರಿಗೊಳ್ಳುವಿರಿ. ನಿಮ್ಮ ಗೌರವಕ್ಕೆ ಧಕ್ಕೆ ಬರುವ ಮಾತನ್ನು ನೀವು ಸಹಿಸಲಾರಿರಿ. ವಾಮಮಾರ್ಗದಿಂದ ಹಣವನ್ನು ಸಂಪಾದಿಸುವ ಮನಸ್ಸು ಇರಲಿದೆ. ಅತಿಯಾದ ನಂಬಿಕೆಯು ನಿಮ್ಮ ಮೌಲ್ಯಯುತ ವಸ್ತುಗಳನ್ನು ಕಳೆದುಕೊಳ್ಳುವಂತೆ ಮಾಡುವುದು. ಮನೆಯಲ್ಲಿ ಅಶಾಂತಿಯ ವಾತಾವರಣವು ಸರಿಮಾಡಿಕೊಳ್ಳಿ. ನಿಮ್ಮ ವ್ಯವಹಾರಕ್ಕೆ ಯಾರಾದರೂ ಮಧ್ಯ ಬರಬಹುದು. ಬೇಗ ಸಿಟ್ಟು ಮಾಡಿಕೊಂಡರೂ ಕ್ಷಣ ಕಾಲದಲ್ಲಿ ಸರಿಯಾಗುವುದು. ತಾಯಿಯು ನಿಮಗೆ ಹಿತವಚನವನ್ನು ಹೇಳುವರು. ಆತ್ಮವಿಶ್ವಾಸದ ಕೊರತೆಯನ್ನು ಸ್ನೇಹಿತರು ತುಂಬುವರು. ವೃತ್ತಿಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳುವಿರಿ. ಬಾಲ್ಯದ ಸ್ನೇಹಿತರು ನಿಮ್ಮನ್ನು ಕಂಡು ಖುಷಿಪಡುವರು.
ನಮ್ಮ ವೃತ್ತಿಜೀವನವು ಹೊಸ ದಿಕ್ಕಿಗೆ ಜಾರಬಹುದು.
ಕನ್ಯಾ ರಾಶಿ: ಹಿರಿಯರು ನಿಮ್ಮ ಬಗ್ಗೆ ವ್ಯಂಗ್ಯವಾಗಿ ಮಾತನಾಡಬಹುದು. ಉದ್ಯೋಗದ ಕಾರಣ ದೂರ ಪ್ರಯಾಣ ಮಾಡುವಿರಿ. ಸಾಲ ಕೊಟ್ಟವರ ಎದುರು ತಲೆ ಮೆರೆಸಿಕೊಂಡು ಓಡಾಡುವಿರಿ. ರಾಜಕೀಯವಾಗಿ ಹಿನ್ನಡೆಯನ್ನು ಅನುಭವಿಸುವರು. ಹೊಸ ತಂತ್ರವನ್ನು ನೀವು ರೂಪಿಸಿಕೊಳ್ಳಬೇಕಾದೀತು. ಸಿಟ್ಟಾಗುವ ಸಂದರ್ಭದಲ್ಲಿ ತಾಳ್ಮೆಯನ್ನು ಇಟ್ಟುಕೊಳ್ಳಿ. ಹಳೆಯ ನೋವುಗಳು ನಿಮ್ಮನ್ನು ಕಾಡುವುಸು. ಶುಭ ಸುದ್ದಿಯ ನಿರೀಕ್ಷೆಯು ಇಂದು ಕೇವಲ ನಿರೀಕ್ಷೆಯಾಗಿಯೇ ಇರುವುದು. ಮನಃಸ್ಥಿತಿಯು ಸರಿ ಇಲ್ಲದ ಕಾರಣ ಯಾವ ಕೆಲಸವನ್ನೂ ಖುಷಿಯಿಂದ ಮಾಡುವುದಿಲ್ಲ. ದಾಂಪತ್ಯದಲ್ಲಿ ಸಣ್ಣ ವಿರಸವು ಬರಬಹುದು. ಮಕ್ಕಳ ವಿಚಾರದಲ್ಲಿ ನಿಮ್ಮ ತೀರ್ಮಾನ ಸರಿಯಲ್ಲ. ಅಧಿಕಾರಿಗಳನ್ನು ಮೆಚ್ಚಿಸಲು ನೀವು ಸಮಯವನ್ನು ವ್ಯರ್ಥ ಮಾಡವಿರಿ.
ತುಲಾ ರಾಶಿ: ಅಧಿಕಾರ ತಪ್ಪುವ ಸಾಧ್ಯತೆ ಇದೆ. ಉದ್ಯೋಗವನ್ನು ಬಿಟ್ಟು ಭೂಮಿಯ ವ್ಯವಹಾರದಲ್ಲಿ ತೊಡಗಿಕೊಳ್ಳುವಿರಿ. ಪ್ರಯಾಣದಲ್ಲಿ ಯಾವುದೇ ತೊಂದರೆಗಳು ಬಾರದು. ಕೆಲವು ಜನರ ಭೇಟಿಯು ನಿಮಗೆ ಖುಷಿ ಕೊಡುವುದು. ನಕಾರಾತ್ಮಕ ಚಿಂತನೆಯನ್ನು ಹೆಚ್ಚಿಸಲು ನಿಮ್ಮ ಸುತ್ತ ಅಂತಹ ವಾತಾವರಣವು ಇರುವುದು. ಅವುಗಳಿಗೆ ಕಿವಿಗೊಡದೇ ಕಾನೂನು ಪ್ರಕ್ರಿಯೆಯನ್ನು ಮಾಡಿ. ಮಕ್ಕಳಿಗಾಗಿ ಮಾಡಿದ ಖರ್ಚು ನಿಮಗೆ ಸಾರ್ಥಕ ಎನಿಸಬಹುದು. ಸಂಗಾತಿಗೆ ನಿಮ್ಮ ಉಡುಗೊರೆಯು ಇಷ್ಟವಾಗದು. ಮಹಿಳೆಯರು ಸಮಾರಂಭಗಳಿಗೆ ಮನೆಗೆ ಹೋಗುವ ಸಾಧ್ಯತೆ ಇದೆ. ಆಹಾರವನ್ನು ಸರಿಯಾಗಿ ಸಮಯಕ್ಕೆ ಸ್ವೀಕರಿಸಿ. ನಿಮ್ಮ ನಂಬಿಕೆಯನ್ನು ನೀವು ಎಲ್ಲರೆದುರು ಸಮರ್ಥಿಸಿಕೊಳ್ಳುವಿರಿ. ಅಪರಿಚಿತರು ನಿಮ್ಮ ವಿವರಗಳನ್ನು ಪಡೆಯುವರು.
ವೃಶ್ಚಿಕ ರಾಶಿ: ಮಕ್ಕಳಿಂದ ನಿಮಗೆ ಕೀರ್ತಿಯು ಪ್ರಾಪ್ತವಾಗುವುದು. ಮಾತಿನಿಂದ ಆಪ್ತರನ್ನು ದೂರ ಮಾಡಿಕೊಳ್ಳುವಿರಿ. ಆಕಸ್ಮಿಕವಾಗಿ ಅಧಿಕಾರವು ಸಿಗಬಹುದು. ಪರಿಚಿತರ ವಿವಾಹಕ್ಕೆ ಓಡಾಟ ಮಾಡಿ ಸಫಲರಾಗುವಿರಿ. ಇಂದು ಬಹು ದಿನಗಳ ಚಿಂತಿತ ಕಾರ್ಯವು ಫಲ ಕೊಡದು. ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸಿ ಹಣವನ್ನು ವ್ಯಯ ಮಾಡುವಿರಿ. ನಿಮಗೆ ಆಗಬೇಕಾದ ಕೆಲಸವನ್ನು ವಿವಾದ ಇಲ್ಲದೇ ಮಾಡಿಕೊಳ್ಳಿ. ವಾಹನವನ್ನು ಸರಿ ಮಾಡಿಸಲು ಹಣವು ಖರ್ಚಾಗಲಿದೆ. ಇಂದು ಸಂಗಾತಿಯ ಪ್ರೀತಿಯನ್ನು ನೀವು ಹೆಚ್ಚು ಅನುಭವಿಸುವಿರಿ. ನಿಮ್ಮ ಕಂಡು ಅಸೂಯೆ ಪಡುವವರಿಗೆ ನೀವು ಇನ್ನಷ್ಟು ತುಪ್ಪ ಸುರಿಯುವುದು ಬೇಡ. ಎಲ್ಲ ಸಂದರ್ಭದಲ್ಲಿಯೂ ವಾತಾವರಣವು ನಿಮ್ಮ ಪರವಾಗಿಯೇ ಇರುತ್ತದೆ ಎಂದುಕೊಳ್ಳಬೇಡಿ. ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳಬಹುದು.
ಧನು ರಾಶಿ: ಸಣ್ಣದಾಗಿ ಹದ ತಪ್ಪಿದ ಆರೋಗ್ಯವು ದೊಡ್ಡದಾಗಬಹುದು. ದೂರ ಪ್ರಯಾಣವನ್ನು ನೋವು ಹೆಚ್ಚು ಇಷ್ಟಪಡುವಿರಿ. ತಂದೆಯಿಂದ ಸಹಕಾರವನ್ನು ಪಡೆಯುವಿರಿ. ನಿಮ್ಮ ನೇರ ಮಾತಿನಿಂದ ತೊಂದರೆ ಆಗಬಹುದು. ವ್ಯರ್ಥ ಓಡಾಟದಿಂದ ಬೇಸರವಾಗುವುದು. ನಿಮ್ಮ ಇಂದಿನ ತುರ್ತು ಕಾರ್ಯಗಳನ್ನು ಮುಂದೂಡುವಿರಿ. ಒತ್ತಡದ ಕಾರ್ಯದಿಂದ ನೀವು ದೂರ ಉಳಿಯುವಿರಿ. ಲಾಭ ಬರುವ ಕಾರ್ಯದಲ್ಲಿ ಮಾತ್ರ ಇಚ್ಛೆಯು ಇರುವುದು. ಮನಸ್ಸಿನ ಚಾಂಚಲ್ಯವನ್ನು ಧ್ಯಾನದಿಂದ ಸರಿ ಮಾಡಿಕೊಳ್ಳಿ. ಬಂಧುಗಳು ನಿಮಗೆ ಆರ್ಥಿಕ ಸಹಾಯವನ್ನು ಮಾಡಲು ಬಂದರೂ ಸ್ವಾಭಿಮಾನದಿಂದ ನಿರಾಕರಿಸುವಿರಿ. ಸರ್ಕಾರದ ಕೆಲಸಕ್ಕೆ ಪ್ರಯತ್ನಿಸುತ್ತಿದ್ದರೆ ಸಿಗಬಹುದು. ನಿಮ್ಮವರ ಏಳ್ಗೆಯನ್ನು ಸಹಿಸುವುದು ನಿಮಗೆ ಕಷ್ಟವಾದೀತು. ಕಲಾವಿದರು ಉತ್ತಮ ಅವಕಾಶಗಳನ್ನು ಪಡೆದುಕೊಳ್ಳುವರು.
ಮಕರ ರಾಶಿ: ಪಾಲುದಾರಿಕೆಯಲ್ಲಿ ಕಲಹವು ಶುರುವಾಗಬಹುದು. ಯಂತ್ರಗಳ ಮಾರಾಟದಿಂದ ಹೆಚ್ಚಿನ ಲಾಭಾಂಶವನ್ನು ಪಡೆಯುವಿರಿ. ಸಹೋದ್ಯೋಗಿಗಳ ಕಿರಿಕಿರಿಯಿಂದ ಉದ್ಯೋಗವನ್ನು ಬದಲಿಸುವಿರಿ. ಇಂದು ಸ್ತ್ರೀಯರಿಗೆ ಅನಿರೀಕ್ಷಿತ ತೊಂದರೆಗಳು ಇರಲಿದೆ. ಅನಾರೋಗ್ಯವು ನಿಮ್ಮ ಉತ್ಸಾಹವನ್ನು ಕಡಿಮೆ ಮಾಡುವುದು. ನೆರೆಹೊರೆಯರ ಜೊತೆ ವಾಗ್ವಾದ ಮಾಡುವಿರಿ. ಬಾಡಿಗೆ ಮನೆಯ ಮಾಲಿಕರಿಂದ ನಿಮಗೆ ಏನಾದರೂ ಆಗಬಹುದು. ಸರ್ಕಾರದ ಕಡೆಯಿಂದ ನಿಮ್ಮ ಕೆಲಸಕ್ಕೆ ಒಪ್ಪಿಗೆ ಸಿಗುವುದು. ಉದ್ಯೋಗದಲ್ಲಿ ಉದ್ವೇಗಕ್ಕೆ ಒಳಗಾಗುವ ಸಾಧ್ಯತೆ ಇದೆ. ಉದ್ಯೋಗದ ಮಿತ್ರರು ಇಂದು ಸಿಗವರು. ಆದಾಯವು ನಿಮ್ಮ ಯೋಜನೆಯಷ್ಟು ಇದ್ದರೂ ಆದಾಯವು ಹೆಚ್ಚಿನ ಖರ್ಚಿಗೆ ಕಾರಣವಾಗುವುದು. ದಾಂಪತ್ಯದಲ್ಲಿ ಕಲಹವು ಸಾಮಾನ್ಯವಾದರೂ ಇಂದು ಬೇರೆ ಪರಿಣಾಮವನ್ನು ಬೀರಬಹುದು.
ಕುಂಭ ರಾಶಿ: ಆರ್ಥಿಕ ವಿಚಾರವಾಗಿ ದಾಂಪತ್ಯದಲ್ಲಿ ವಿರಸ ಉಂಟಾಗಬಹುದು. ವಿದೇಶ ಪ್ರಯಾಣಕ್ಕೆ ನೀವು ಸಮಯವನ್ನು ಹೊಂದಿಸಿಕೊಳ್ಳುವಿರಿ. ನೀವು ಎಣಿಸಿದ್ದನ್ನು ಬಂಧುಗಳು ಮಾಡಿಕೊಡುವರು. ನಿಮಗೆ ಬೇರೆ ಬೇರೆ ಮೂಲಗಳಿಂದ ಸಂಪಾದನೆಗೆ ಇಂದು ಅವಕಾಶಗಳು ಸಿಗುವುದು. ವಿದೇಶೀ ವ್ಯವಹಾರದಿಂದ ನಿಮಗೆ ಲಾಭವಿದೆ. ಕುಟುಂಬದಲ್ಲಿ ನೆಮ್ಮದಿಯ ತಂದುಕೊಳ್ಳುವಿರಿ. ಇಷ್ಟಮಿತ್ರರ ಭೇಟಿಯಿಂದ ಖುಷಿಯು ಹೆಚ್ಚಾಗುವುದು. ಇನ್ನೊಬ್ಬರ ಕ್ಷೇಮ ಭಾಗಿಯಾಗುವಿರಿ. ನಿಮ್ಮ ಕೆಲಸಗಳಿಗೇ ನೀವು ಇಂದು ಹೆಚ್ಚು ಪ್ರಾಮುಖ್ಯ ನೀಡಿ ಮುಗಸಿಕೊಳ್ಳುವಿರಿ. ಬಹಳ ದಿನಗಳ ಸಂತಾನದ ಸುಖದ ನಿರೀಕ್ಷೆಯಲ್ಲಿ ಸಫಲರಾಗುವುದು. ಸಾಹಸದ ಕಾರ್ಯಗಳಲ್ಲಿ ಜಾಗರೂಕತೆ ಅವಶ್ಯಕ. ಆಪ್ತರಿಂದ ನಿಮ್ಮ ಸಂಪತ್ತನ್ನು ಪಡೆದುಕೊಳ್ಳುವಿರಿ. ಇನ್ನೊಬ್ಬರ ಒತ್ತಾಯಕ್ಕೆ ಹೊಸ ಕಲಿಕೆಯನ್ನು ಆರಂಭಿಸುವಿರಿ.
ಮೀನ ರಾಶಿ: ನಿಮ್ಮ ಸ್ಥಿರಾಸ್ತಿಯ ಮಾರಾಟಕ್ಕೆ ಹೆಚ್ಚು ಓಡಾಟ ಮಾಡಬೇಕಾದೀತು. ಬಂಧುಗಳು ಮನೆಗೆ ಬಂದ ಕಾರಣ ಖರ್ಚು ಹೆಚ್ಚಾದೀತು. ನಿಮ್ಮ ಸಣ್ಣ ಮನಸ್ಸನ್ನು ಅವರಿಗೆ ತೋರಿಸಬೇಡಿ. ಉನ್ನತ ಅಧ್ಯಯನವನ್ನು ಬಯಸಿ ಬೇರೆ ಕಡೆಗೆ ತೆರಳುವಿರಿ. ನಿಮ್ಮ ನಿರೀಕ್ಷೆಯ ಗುರಿಯನ್ನು ತಲುಪುವುದು ಕಷ್ಟವಾಗಬಹುದು. ನಿಮ್ಮ ಸಂಗಾತಿಯ ವಿಚಾರದಲ್ಲಿ ಪ್ರೀತಿಯು ಅಧಿಕವಾಗಿರುವುದು. ಬಂಧುಗಳ ಸಲಹೆಯು ನಿಮ್ಮನ್ನು ದಾರಿ ತಪ್ಪಿಸಬಹುದು. ಆರ್ಥಿಕ ವ್ಯವಹಾರವನ್ನು ಮೊದಲೇ ಸರಿಮಾಡಿಕೊಳ್ಳುವುದು ಉತ್ತಮ. ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ನೀವು ಹೆಚ್ಚು ಶ್ರಮವಹಿಸಬೇಕು.
-ಲೋಹಿತಶರ್ಮಾ – 8762924271 (what’s app only)