Horoscope 22 August: ದಿನಭವಿಷ್ಯ, ದುರಭ್ಯಾಸಗಳಿಂದ ದೂರವಿರುವುದು ಒಳ್ಳೆಯದು, ನಿಮ್ಮ ಗೌರವಕ್ಕೆ ಧಕ್ಕೆ ಉಂಟಾಗಬಹುದು

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹಾಗಾದರೆ ಇಂದಿನ (2023 ಆಗಸ್ಟ್ 22) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

Horoscope 22 August: ದಿನಭವಿಷ್ಯ, ದುರಭ್ಯಾಸಗಳಿಂದ ದೂರವಿರುವುದು ಒಳ್ಳೆಯದು, ನಿಮ್ಮ ಗೌರವಕ್ಕೆ ಧಕ್ಕೆ ಉಂಟಾಗಬಹುದು
ಪ್ರಾತಿನಿಧಿಕ ಚಿತ್ರ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಗಂಗಾಧರ​ ಬ. ಸಾಬೋಜಿ

Updated on: Aug 22, 2023 | 12:02 AM

ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಆಗಸ್ಟ್ 22) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ನಿಜ ಶ್ರಾವಣ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಸ್ವಾತೀ, ಯೋಗ: ಶುಕ್ಲ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 20 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 49 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:43 ರಿಂದ 05:16ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:28 ರಿಂದ 11:02ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:35 ರಿಂದ 02:09ರ ವರೆಗೆ.

ಮೇಷ ರಾಶಿ: ಉನ್ನತ ಶಿಕ್ಷಣಕ್ಕಾಗಿ ಮನೆಯಿಂದ ಹೊರಗೆ ಇರಬೇಕಾಗುವುದು. ನಿಮ್ಮ ಬಗ್ಗೆ ಸುಳ್ಳು ವದಂತಿಗಳನ್ನು ಸೃಷ್ಟಿಸುವರು. ಸೌಂದರ್ಯಕ್ಕೆ ಇಂದು ಬೆಲೆಕೊಡಲಿದ್ದೀರಿ. ನಿಮ್ಮಿಂದ ಉಪಕಾರವನ್ನು ಪಡೆದು ಶತ್ರಗಳಾಗುವರು. ಸಂಗಾತಿಯಿಂದ .ನೀವು ನಿರ್ಲಕ್ಷ್ಯಕ್ಕೆ ಒಳಗಾಗುವಿರಿ. ನಿಮ್ಮ ಕುರಿತು ನೀವು ನಕಾರಾತ್ಮಕ ಆಲೋಚನೆಯನ್ನು ಮಾಡುವಿರಿ. ನಿಮ್ಮ ಸಮಯವನ್ನು ವ್ಯರ್ಥ ಮಾಡುವ ಸಂಗತಿಗಳು ಬರಬಹುದು. ಸ್ವಂತ ವಾಹನದಿಂದ ದೂರ ಪ್ರಯಾಣವನ್ನು ಮಾಡುವಿರಿ. ನಿಮ್ಮ ಹಾಸ್ಯ ಸ್ವಭಾವವು ಕೆಲವರಿಗೆ ಇಷ್ಟವಾಗದು. ಮಾತು ನೇರವಾಗಿದ್ದರೂ ಮೃದುವಾಗಿರಲಿ. ನಿಮ್ಮ‌ ನಡತೆಯನ್ನು ಯಾರಾದರೂ ಅನುಕರಿಸುವರು.

ವೃಷಭ ರಾಶಿ: ಕಛೇರಿಯ ಕೆಲಸವು ನಿಮಗೆ ಸಾಕೆನಿಸಬಹುದು. ಸಮಾಧಾನದ ಚಿತ್ತವು‌ ಅನೇಕ ಸಂಗತಿಗಳಿಗೆ ಪೂರಕವಾಗಲಿದೆ. ಆರೋಗ್ಯದ ವಿಚಾರದಲ್ಲಿ‌ ನಿರ್ಲಕ್ಷಿಸುವುದು ಸೂಕ್ರವಲ್ಲ. ನಿಮ್ಮ‌ ಬಲದ ಪ್ರದರ್ಶನವನ್ನು ಮಾಡಬೇಕಾದೀತು. ಮಾನಸಿಕವಾಗಿ ನೀವು ದುರ್ಬಲವಾಗಲಿದ್ದು ಏಕಾಂತದಿಂದ ಇರುವುದು ಉತ್ತಮ. ಸುಮ್ಮನೇ ವಾದವನ್ನು ಮಾಡಲು ಹೋಗಿ ನಿಮ್ಮ ಸಮಯವನ್ನು ಹಾಗೂ ಇತರರ‌‌ ಸಮಯವನ್ನೂ ವ್ಯರ್ಥ ಮಾಡುವಿರಿ. ನಿಮ್ಮ ಗುರಿಯು ಬದಲಾಗಬಹುದು. ‌ಪ್ರಾಣಿಗಳಿಂದ ನಿಮಗೆ ಭೀತಿಯು ಬರಬಹುದು. ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸುವಿರಿ.

ಮಿಥುನ ರಾಶಿ: ಪ್ರೇಮಕ್ಕೆ ಮಿತ್ರರಿಂದ‌ ಸಹಕಾರವು ಸಿಗಲಿದೆ. ಸಹೋದ್ಯೋಗಿಗಳಿಂದಲೂ ಸಾಲಾವನ್ನು ಪಡೆಯಬೇಕಾಗಬಹುದು. ಸ್ನೇಹ ಸಂಬಂಧವನ್ನು ಹೆಚ್ಚು ಆಪ್ತವಾಗಸಿಕೊಳ್ಳುವಿರಿ. ನಿಮ್ಮ ಪರಿಶ್ರಮಕ್ಕೆ ಯೋಗ್ಯವಾದ ಗೌರವವು ಸಿಗಬಹುದು. ಕೆಟ್ಟ ಕೆಲಸಕ್ಕೆ ಯಾರಾದರೂ ಪ್ರೇರಣೆ ಕೊಡಬಹುದು. ಎಲ್ಲವನ್ನೂ ಹೇಳಬೇಕೆಂದಿಲ್ಲ. ಸಂಗಾತಿಯ ಮೇಲೇ ಪ್ರೀತಿಯು ಹೆಚ್ಚುವುದು. ಸ್ವಲ್ಪ‌ ತಿಳಿಯದವರ ಮಾರ್ಗರ್ಶನ ನಿಮ್ಮ ಸ್ವಂತ ಅಲೋಚವನೆಯೇ ಸೂಕ್ತ. ಏಕಾಂಗಿ ಇರುವುದು ನಿಮಗೆ ಇಷ್ಟವಾಗದೇ ಇರಬಹುದು. ಸಮಾರಂಭಗಳಿಗೆ ಭಾಗವಹಿಸುವಿರಿ.

ಕರ್ಕ ರಾಶಿ: ಯಾವದೂ ನೀವಂದುಕೊಂಡಷ್ಟು ಸುಲಭವಾಗಿ ಆಗದು ಎಂಬುದರ ಮನವರಿಕೆ ಆಗುವುದು. ಬೇರೆಯವರ ಮೇಲೆ ದೋಷಗಳ ಪಟ್ಟಿಯನ್ನೇ ಮಾಡುವಿರಿ. ನಿಮ್ಮ ಮಾತುಗಳೇ ನಿಮಗೆ ಪುನಃ ಬರಲಿದೆ. ತಾಳ್ಮೆಯನ್ನು ಕಳೆದುಕೊಳ್ಳುವಿರಿ. ಖರೀದಿಯನ್ನು ಬಹಳ ಭರದಿಂದ ಮಾಡುವಿರಿ. ಸಂದೇಹದ ಕಾರಣದಿಂದ ಸಂಬಂಧಗಳನ್ನು ಹಾಳು ಮಾಡಿಕೊಳ್ಳುವುರಿ. ಸಂಗಾತಿಯ ಮಾತು ನಿಮ್ಮೊಳಗೆ ನಾಟಬಹುದು. ಹೆಚ್ಚಿನ ವಿದ್ಯಾಭ್ಯಾಸಕ್ಕೆ ತಂದೆಯಿಂದ ಸಹಾಯವನ್ನು ಪಡೆಯುವಿರಿ. ಸಾಲದ ವಿಚಾರದಲ್ಲಿ ಹೆಚ್ಚಿನ ತಿಳಿವಳಿಕೆ ಅಗತ್ಯ. ದೂರ‌ಪ್ರಯಾಣವು ಸುಖ ಎನಿಸಬಹುದು.

ಸಿಂಹ ರಾಶಿ: ಕುಟುಂಬದಲ್ಲಿ ಪರಸ್ಪರ ಸಹಬಾಳ್ವೆಯು ಎದ್ದು ತೋರುವುದು. ಧಾರ್ಮಿಕ ಆಚರಣೆಗಳಲ್ಲಿ ನಿರಾಸಕ್ತಿಯು ಇರುವುದು. ಪ್ರಯಾಣದಿಂದ ಪ್ರಯಾಸವಾಗಬಹುದು. ಇಂದಿನ ಅದಾಯಕ್ಕೆ ತಕ್ಕುದಾದ ಖರ್ಚು ಇರಲಿದೆ. ಹೊಸ ಯೋಜನೆಯಿಂದ ಲಾಭವೂ ಅಧಿಕವಾಗುವುದು. ಎಲ್ಲವನ್ನೂ ಬದಲಿಸುತ್ತೇನೆ ಎಂಬ ಹುಂಬುತನ‌ ಬೇಡ. ಸಂಸ್ಥೆಗೆ ನಿಮ್ಮನ್ನು ಮುಖ್ಯಸ್ಥರನ್ನಾಗಿ ಮಾಡುವರು. ಹಣದ ಉಳಿಕೆಗೆ ಸಂಬಂಧಿಸಿದಂತೆ ನೀವು ಕಾನೂನು ರೀತಿಯ ಕ್ರಮವನ್ನು ಅನುಸರಿಸಬೇಕಾಗಬಹುದು. ಹಣದ ಕಾರಣಕ್ಕೆ ವಂಚನೆಯಲ್ಲಿ ಬೀಳುವಿರಿ. ಕ್ರಯ ಹಾಗೂ ವಿಕ್ರಯಗಳ ವಿಚಾರದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುವುದು.

ಕನ್ಯಾ ರಾಶಿ: ನಿಷ್ಠೆಯಿಂದ ಮಾಡುವ ಉದ್ಯೋಗದಲ್ಲಿ ಬಡ್ತಿಯು ಸಿಗದೇ ಬೇಸರವಾಗುವುದು. ಸ್ಥಾನಮಾನವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಉದ್ಯೋಗವೇ ಸಾಕು ಎಂದು ಅನ್ನಿಸುವಷ್ಟು ಮಾನಸಿಕ ಸ್ಥಿತಿಯು ಬರಬಹುದು. ಹೊಸ ಮನೆಗೆ ಸ್ಥಳಾಂತರ ಮಾಡಿಕೊಳ್ಳುವಿರಿ. ತಾಯಿಯ ಪ್ರೀತಿಯು ನಿಮಗೆ ಸಿಗಲಿದೆ. ಮನೆಯಲ್ಲಿ ಹಿರಿಯರಾದ ಕಾರಣ ನೀವು ಹೆಚ್ಚು ಬೈಗಳುಕ್ಕೆ ಸಿಲುಕುವಿರಿ. ಹೋದ ಸಂಪತ್ತಿನ ಬಗ್ಗೆ ನಿಮಗೆ ಆಸಕ್ತಿಯು ಇರದು. ಸಂಅಗರಿಯು ನಿಮ್ಮಿಂದ ಏನನ್ನೋ‌ ಮುಚ್ಚಿಡುತ್ತಾನೆ ಎಂದು ಅನ್ನಿಸಬಹುದು. ನೀವು ಕರ್ತವ್ಯವನ್ನು ಬಿಡದೇ ಕೈಯ್ಯಲ್ಲಿ ಆಗುವ ಕೆಲಸವನ್ನು ಮಾಡಿ. ಎಲ್ಲವೂ ಅನುಕೂಲಕರವಾಗಿದೆ ಎಂದು ಅನ್ನಿಸಬಹುದು.

ತುಲಾ ರಾಶಿ: ನಿಮ್ಮ ಉದ್ಯಮದ ಮೇಲೆ ಯಾರದ್ದಾದರೂ ದೃಷ್ಟಿಯು ಬೀಳಲಿದೆ. ಸಮಾಜಮುಖೀ ಕಾರ್ಯಗಳನ್ನು ಯಾವದೇ ಫಲಾಪೇಕ್ಷೆ ಇಲ್ಲದೆ ಮಾಡುವಿರಿ. ಆರೋಗ್ಯವು ಚೆನ್ನಾಗಿ ಇರಲಿದ್ದು ಮಾನಸಿಕವಾದ ನೆಮ್ಮದಿಯು ಇರಲಿದೆ‌. ನಿಮ್ಮ ತಾಳ್ಮೆಯು ಕಡಿಮೆ ಆದಂತೆ ತೋರುವುದು. ನಿಮ್ಮ ಗುಣಗಳನ್ನು ದುರುಪಯೋಗ‌ ಮಾಡಿಕೊಳ್ಳಬಹುದು. ಬಂಧುಗಳ ಸಲಹೆಯನ್ನು ಸ್ವೀಕರಿಸದೇ ಇದ್ದುದಕ್ಕೆ ಅವರು ಬೇಸರಿಸುವರು. ನಿಮ್ಮ ಹೊಸ ಉದ್ಯೋಗದಕ್ಕೆ ಎದುರಾಗುವ ಸವಾಲುಗಳನ್ನು ಚರ್ಚಿಸಿ ಪರಿಹಾರವನ್ನು ಕಂಡುಕೊಳ್ಳುವಿರಿ. ಸರ್ಕಾರಿ ಉದ್ಯೋಗಿಗಳ ಆದಾಯವು ಹೆಚ್ಚಾಗಲಿದೆ. ನಿರಾಧಾರವಾದ ನಿಮ್ಮ ದೂರು ಬಿದ್ದು ಹೋಗುವುದು.

ವೃಶ್ಚಿಕ ರಾಶಿ: ಅಧ್ಯಾತ್ಮ ಸಾಧನೆಗೆ ನಿಮ್ಮ ಮನಸ್ಸು ಬದಲಾಗಬಹುದು. ವಾಹನವನ್ನು ಚಲಿಸುವಾಗ ಯಾವದೇ ಒತ್ತಡವನ್ನು ಇಟ್ಟುಕೊಳ್ಳುವುದು ಬೇಡ. ಯಾರಾದರೂ ಬೇಡ ಎಂದು ಹೇಳಿದ ಕೆಲಸವನ್ನು ಹಠದಿಂದ ಅವರ ಮಾತನ್ನು ವಿರೋಧಿಸಿ ಮಾಡುವುದು ಬೇಡ. ಚರಾಸ್ತಿಗಳನ್ನು ನಷ್ಟ ಮಾಡಿಕೊಳ್ಳುವಿರಿ. ನಿಮಗೆ ಯಾರಾದರೂ ದಾನವನ್ನು ಮಾಡಲು ಯೋಗ್ಯರೂ ಎಂದು ಅನ್ನಿಸಿದರೆ ಅಂಥಹವರಿಗೆ ದಾನವನ್ನು ಮಾಡಿ. ಸಾಲವಾಗಿ ನೀಡಿದ ಹಣವನ್ನು ಹಿಂಪಡೆಯಲು ಕಷ್ಟವಾದೀತು. ಸಂಗಾತಿಯನ್ನು ನೀವು ಅಲಕ್ಷಿಸುವಿರಿ. ನಿಮ್ಮ ಕೆಲಸದ ವೇಗವನ್ನು ಹೆಚ್ಚಿಸುವಿರಿ. ನಿಮ್ಮಿಂದ ಆಗದ ಕೆಲಸಕ್ಕೆ ನೀವು ಹೋಗಿ ಕೈ ಸುಟ್ಟುಕೊಳಳ್ಳುವಿರಿ. ಪ್ರೀತಿ ಪಾತ್ರರನ್ನು ನೀವು ಚೆನ್ನಾಗಿ ನೋಡಿಕೊಳ್ಳುವಿರಿ. ಹಣವನ್ನು ಗಳಿಸಬೇಕು ಎಂಬ ಹಂಬಲವು ಅಧಿಕವಾಗಿರುವುದು.

ಧನು ರಾಶಿ: ದುರಭ್ಯಾಸದ ಕಾರಣ ಎಲ್ಲರೆದುರು ಮರ್ಯಾದಿಯನ್ನು ತೆಗೆದಕೊಳ್ಳಬೇಕಾಗುವುದು. ಮಹಿಳೆಯರಿಗೆ ಸಹಾಯ ಮಾಡಲು ಹೋಗಿ ಅಪವಾದವು ಬರಬಹುದು. ನಿಮ್ಮ ನಿರುದ್ಯೋಗದ ಸಮಸ್ಯೆಯನ್ನು ಸರಿ ಮಾಡಿಕೊಳ್ಳುವಿರಿ. ಈಗಾಗಲೇ ವೃತ್ತಿಯಲ್ಲಿ ತೊಡಗಿದವರು ಬಡ್ತಿಯನ್ನು ನೀಡುವಂತೆ ಒತ್ತಾಯಿಸಬಹುದು. ನಿಮ್ಮದೇ ಆದ ವ್ಯಕ್ತಿತ್ವವು ನಿಮ್ಮ ಗೌರವವನ್ನು ಹೆಚ್ಚಿಸುವುದು. ಕಹಿ ಘಟನೆಗಳು ನಿಮ್ಮ ಹೆಚ್ಚು ಕಾಡಬಹುದು. ಇಂದು ನಿಮ್ಮ ಸಂತೋಷವನ್ನು ಯಾರ ಬಳಿ ಕೊಂಡರೆ ಇಮ್ಮಡಿಸುವದೋ ಅವರ ಬಳಿ ಹೇಳಿಕೊಳ್ಳಿ. ವಿದ್ಯಾಭ್ಯಾಸದ ಬಗ್ಗೆ ನಿಮಗೆ ಬಹಳ ಆಸ್ಥೆಯು ಅಧಿಕವಾಗಿದ್ದು ಮಾರ್ಗವನ್ನು ನೀವು ನಿರೀಕ್ಷಿಸುವಿರಿ.

ಮಕರ ರಾಶಿ: ಆರ್ಥಿಕತೆಯ ಕಾರಣಕ್ಕಾಗಿ ನೀವು ಹೆಚ್ಚು ಆತಂಕ ಪಡುವಿರಿ. ದಾಯದಿದಗಳ ಕಲಹವೂ ನಿಮ್ಮ ಅನಾರೋಗ್ಯಕ್ಕೆ ಪೂರಕವಾಗಿರುವುದು. ನಿಮ್ಮ ಉತ್ಸಾಹಕ್ಕೆ ಭಂಗವಾಗುವ ಸನ್ನಿವೇಶವು ನಿಮ್ಮ ಕಣ್ಣೆದುರಿಗೆ ನಡೆಯುವುದು. ಆಪತ್ಕಾಲಕ್ಕಾಗಿ ಕೂಡಿಟ್ಟ ಹಣವು ಇಂದು ತೆಗೆಯಬೇಕಾದೀತು. ನಿಮ್ಮ ಮುಂದಾಲೋಚನೆಯು ಅಸ್ಪಷ್ಟವಾಗಿ ಇರುವ ಕಾರಣ ಮನಸ್ಸಿಗೆ ಕಿರಿಕಿರಿ ಆಗಬಹುದು. ದೃಷ್ಟಿಯಲ್ಲಿ ದೋಷವು ಕಾಣಿಸಿಕೊವಲಳ್ಳಬಹುದು‌. ನಿಮ್ಮ ಅರೋಗ್ಯ ಸಮಸ್ಯೆಯನ್ನು ಆಪ್ತರ ಜೊತೆ ಹೇಳಿಕೊಳ್ಳಿ. ನಿಮ್ಮದೇ ಆದ ಯೋಜನೆಯನ್ನು ಮೊದಲೇ ಸಿದ್ಧಪಡಿಸಿಕೊಳ್ಳಿ. ದಾಂಪತ್ಯದ ಸುಖದಲ್ಲಿ ಮಕ್ಕಳನ್ನು ಮರೆಯದಿರಿ.

ಕುಂಭ ರಾಶಿ: ಸ್ವಯಂ ಕೃತ ತಪ್ಪಿನಿಂದ ಪಶ್ಚಾತ್ತಾಪ ಪಡಬೇಕಾಗುವುದು. ಸಂಗಾತಿಯ ವಿಚಾರದಲ್ಲಿ ನಿಮಗೆ ಬೇಸರವಾಗಬಹುದು. ನೀವಾಡುವ ಮಾತುಗಳಿಗೆ ಕುಟುಂಬವು ಉತ್ತರಿಸಬೇಕಾದೀತು. ಕ್ರೀಡೆಯಲ್ಲಿ ಉತ್ಸಾಹವು ಹೆಚ್ಚಿರಲಿದೆ. ಇಂದಿನ ನಿಮ್ಮ ಓಡಾಡವು ವ್ಯರ್ತಯವಸದೀತು. ನೀವು ಇಂದು ನಿಮ್ಮ ಬಳಿ ಇರುವ ಸಂಪತ್ತನ್ನು ತೋರಿಸುವುದು ಬೇಡ. ದೇಹವನ್ನು ಹೆಚ್ಚು ದಂಡಿಸಬೇಕಾಗುವುದು. ನಿಮ್ಮ ಜೀವನ ಶೈಲಿಯನ್ನು ಬದಲಿಸಿಕೊಳ್ಳುವುದು ಉತ್ತಮ. ಕಛೇರಿಯ ವ್ಯವಹಾರವನ್ನು ಅಲ್ಲಿಯೇ ಬಿಟ್ಟು ಬನ್ನಿ. ಸ್ನೇಹಿತರಿಗಾಗಿ ಧನವು ನಷ್ಟವಾಗುವುದು.‌ ಯಾರನ್ನೂ ಸಣ್ಣವರನ್ನಾಗಿ ತಿಳಿಯುವುದು ಬೇಡ. ಯಾರದೋ ಮೇಲಿನ ಭಯದಿಂದ ಗೌಪ್ಯ ವಿಚಾರವನ್ನು ಹೇಳುವಿರಿ.

ಮೀನ ರಾಶಿ: ನಿಮಗೆ ಇಂದು ನೀವು ಮಾಡುವ ಕೆಲಸದಲ್ಲಿ ತೃಪ್ತಿಯು ಸಿಗಲಿದೆ. ಸಂಗಾತಿಯ ಪ್ರೀತಿಯೂ ನಿಮಗೆ ಲಭ್ಯವಾಗುವುದು. ನೌಕರರ ಅಲಭ್ಯದಿಂದ ಉದ್ಯಮದಲ್ಲಿ ಲಾಭವು ಕಡಿಮೆ ಆಗುವುದು. ಸಣ್ಣ ವಿಚಾರಕ್ಕೆ ಬಂಧುಗಳ ಜೊತೆ ವಾಗ್ವಾದವನ್ನು ಮಾಡುವಿರಿ. ನೀವು ಅಧ್ಯಾತ್ಮದಿಂದ ಹೆಚ್ಚು ಪ್ರಭಾವಿತರಾಗಲಿದ್ದೀರಿ. ನಿಮ್ಮ ಚಂಚಲ ಮನಸ್ಸಿನಿಂದ ಮಾಡಿದ ನಿರ್ಧಾರವು ಕುಟುಂಬಕ್ಕೆ ಸಮಸ್ಯೆಯಾಗಿ ಪರಿಣಮಿಸಬಹುದು. ಅತಿಯಾದ ಭೋಜನವು ನಿಮಗೆ ಸಂಕಟ ಕೊಟ್ಟೀತು. ತಾಯಿಯ ಕಡೆಯ ಬಂಧುಗಳ ಸಹಾಯದಿಂದ ನೀವು ಸ್ವಂತ ವಾಹನವನ್ನು ಖರೀದಿಸುವಿರಿ. ಗಂಭೀರ ವಿಚಾರವನ್ನು ಲಘುವಾಗಿ ತೆಗೆದುಕೊಳ್ಳುವುವುದು ಬೇಡ. ಉದ್ಯೋಗಕ್ಕೆ ಸೇರಿ ನಿಮಗೆ ತೊಂದರೆಯಾಗಬಹುದು.

ಲೋಹಿತಶರ್ಮಾ – 8762924271 (what’s app only)

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್