AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 12ರ ದಿನಭವಿಷ್ಯ

ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 12ರ ಭಾನುವಾರದ ದಿನ ಭವಿಷ್ಯ(daily horoscope) ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 12ರ ದಿನಭವಿಷ್ಯ
ಸಂಖ್ಯಾಶಾಸ್ತ್ರ
TV9 Web
| Updated By: ವಿವೇಕ ಬಿರಾದಾರ|

Updated on: Dec 12, 2022 | 6:00 AM

Share

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿಯನ್ನು ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 12ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1

ನಿಮ್ಮ ಸಾಲದ ಬಗ್ಗೆ ಒಂದಿಷ್ಟು ಕ್ಯಾಲ್ಕುಲೇಟರ್ ಹಿಡಿದು, ಲೆಕ್ಕ ಹಾಕಿಕೊಳ್ಳುವ ಸಮಯ. ಸಂಗಾತಿ ಏನಾದರೂ ಹೇಳುತ್ತಿದ್ದಾರೆ ಅಂದರೆ ಸ್ವಲ್ಪ ಕೇಳಿಸಿಕೊಳ್ಳಿ. ಇದರಿಂದ ತುಂಬ ದೊಡ್ಡ ಸಹಾಯ ಆಗುತ್ತದೆ ಅಂತಲ್ಲ, ಸಂಬಂಧ ಸುಧಾರಿಸುತ್ತದೆ. ನೆಮ್ಮದಿ ವಾತಾವರಣ ಸೃಷ್ಟಿ ಆಗುತ್ತದೆ. ನಿಮ್ಮಿಂದ ಸಾಧ್ಯವಾದಲ್ಲಿ, ಅನುಕೂಲ ಇದ್ದಲ್ಲಿ ಪಾರಿವಾಳಗಳಿಗೆ ಕೈಲಾದಷ್ಟು ಆಹಾರ ಹಾಕಿ.

ಜನ್ಮಸಂಖ್ಯೆ 2

ಎಲ್ಲೆಲ್ಲಿಂದ ಹಣದ ಮೂಲಗಳಿಗೆ ಎಂದು ಆಲೋಚನೆ ಮಾಡುವುದಕ್ಕೆ ಶುರು ಮಾಡುತ್ತೀರಿ. ಈ ಹಿಂದೆ ಯಾವಾಗಲೂ ನೀವು ಕೆಲಸ ಮಾಡಿಕೊಟ್ಟ ರೀತಿಯನ್ನು ಬಹಳ ಇಷ್ಟಪಟ್ಟು ಮತ್ತೆ ಹುಡುಕಿಕೊಂಡು ಬರಲಿದ್ದಾರೆ. ಆದರೆ ಇವತ್ತು ನಿಮ್ಮ ಗ್ಯಾಜೆಟ್, ಲ್ಯಾಪ್‌ಟಾಪ್, ಮೊಬೈಲ್ ಹ್ಯಾಕ್ ಆಗುವ ಅಥವಾ ಅದನ್ನು ಬೇರೆಯವರು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆಗಳಿವೆ.

ಜನ್ಮಸಂಖ್ಯೆ 3

ನಿಮ್ಮ ಬುದ್ಧಿ ಬಹಳ ಚುರುಕಾಗಿ ಹಾಗೂ ಸಮಯೋಚಿತವಾಗಿ ಬಳಸಿ, ಇತರರ ಮೆಚ್ಚುಗೆಗೆ ಪಾತ್ರರಾಗಲಿದ್ದೀರಿ. ಬ್ಯಾಂಕ್‌ ಕೆಲಸಗಳನ್ನು ಬೇಗ ಬೇಗ ಮುಗಿಸುವುದಕ್ಕೆ ಮಾಡುವ ಪ್ರಯತ್ನಗಳು ಸಫಲವಾಗಲಿವೆ. ರೈಲು ಪ್ರಯಾಣ ಮಾಡುವಂಥವರು ಈ ದಿನ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಮುಖ್ಯವಾಗಿ ನಿಮ್ಮ ವಸ್ತುಗಳನ್ನು ಜೋಪಾನ ಮಾಡಿಟ್ಟುಕೊಳ್ಳಿ. ಸಾಧ್ಯವಾದಲ್ಲಿ ಪ್ರಯಾಣವನ್ನು ಮುಂದೂಡಿ.

ಜನ್ಮಸಂಖ್ಯೆ 4

ನೀವು ಈ ಹಿಂದೆ ಹೇಳಿದ್ದ ವಿಚಾರವನ್ನು ಈಗ ಸ್ವತಃ ನೀವೇ ಮರೆತು, ಬೇರೆಯವರ ಮೇಲೆ ತಪ್ಪನ್ನು ಹೊರೆಸುವ ಸಾಧ್ಯತೆ ಇದೆ. ಆದ್ದರಿಂದ ಎದುರಿನವರು ಹೇಳಿದ ಮಾತನ್ನೂ ಸ್ವಲ್ಪ ಲಕ್ಷ್ಯ ಇಟ್ಟು ಕೇಳಿಸಿಕೊಳ್ಳಿ, ಈ ಹಿಂದೆ ಹೇಳಿದ್ದನ್ನು ನೆನಪಿಸಿಕೊಳ್ಳಿ. ಈ ದಿನ ನಿಮಗೆ ಪಾರ್ಟಿಗಳಿಗೆ, ಗೆಟ್ ಟು ಗೆದರ್‌ಗೆ ಆಹ್ವಾನ ಬರಲಿದೆ. ಅದಕ್ಕೆ ಹೋದರೂ ಸ್ವಂತ ವಾಹನದಲ್ಲಿ ಬೇಡ.

ಜನ್ಮಸಂಖ್ಯೆ 5

ನಿಮ್ಮ ಡಿಜಿಟಲ್ ಪೇಮೆಂಟ್ ವ್ಯಾಲೆಟ್ ಬಳಸುವಾಗ ಒಂದಕ್ಕೆ ಎರಡು ಬಾರಿ ಸಂಖ್ಯೆಯನ್ನು ಪರಿಶೀಲಿಸಿಕೊಳ್ಳಿ. ಭವಿಷ್ಯದ ಸಾಧಕ ಅಂಶವೊಂದು ನಿಮ್ಮ ಪಾಲಿಗೆ ಒದಗಿ ಬರಲಿದೆ. ಗಾರ್ಡನಿಂಗ್, ಸಂಗೀತದಂಥ ಹವ್ಯಾಸ ಇದ್ದಲ್ಲಿ ಸ್ವಲ್ಪ ಸಮಯ ತೊಡಗಿಸಿಕೊಳ್ಳಿ. ರಾತ್ರಿ ಬಹಳ ಹೊತ್ತು ಎಚ್ಚರ ಇರುವಂಥ ಕೆಲಸ ಮಾಡುವವರಿಗೆ ಆರೋಗ್ಯ ಸಮಸ್ಯೆ ಎದುರಾಗಲಿದೆ.

ಜನ್ಮಸಂಖ್ಯೆ 6

ನಿಮ್ಮ ಸವಾಲುಗಳನ್ನು ಮೀರಿ ನಿಲ್ಲುತ್ತೀರಿ. ಆದ್ಯತೆಗಳು, ಜೀವನಶೈಲಿ ಬದಲಾಗುತ್ತವೆ. ಸಾಲ ಇದ್ದಲ್ಲಿ ತೀರಿಸಿಕೊಳ್ಳುತ್ತೀರಿ. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಜಾರಿಗೆ ತರಬೇಕು ಅಂದುಕೊಂಡಿದ್ದ ಹೊಸ ಹೊಸ ಯೋಜನೆಗಳನ್ನು ತರುತ್ತೀರಿ. ಈ ಹಿಂದೆ ನೀವು ನೀಡಿದ್ದ ಮಾತು- ಭರವಸೆಗಳ ಕಡೆಗೆ ಗಮನ ನೀಡಿ. ಸಂಸಾರದಲ್ಲಿ ಕಲಹ ಆಗದಂತೆ ಎಚ್ಚರಿಕೆ ವಹಿಸಿ.

ಜನ್ಮಸಂಖ್ಯೆ 7

ನಿಮ್ಮ ಮನೆಗಾಗಲೀ, ನಿಮಗಾಗಲೀ ಏನು ಬೇಕು ಮತ್ತು ಎಷ್ಟು ಬೇಕು ಎಂಬ ಸ್ಪಷ್ಟತೆ ಇಟ್ಟುಕೊಳ್ಳಿ. ಕೊಂಡು ತಂದ ಮೇಲೆ ಸುಮ್ಮನಿದ್ದಿದ್ದರೆ ಆಗುತ್ತಿತ್ತು ಎಂದುಕೊಂಡು ಹಳಹಳಿಸಬೇಡಿ. ಯಾರದೋ ಮೇಲಿನ ಸವಾಲಿಗೋ ಪ್ರತಿಷ್ಠೆಗೋ ಖರ್ಚು ಮಾಡುವುದಕ್ಕೆ ಹೋಗದಿರಿ. ನಿಮಗೆ ಸಮಯ ದೊರೆತಲ್ಲಿ, ನಂಬಿಕೆ ಇದ್ದಲ್ಲಿ ಹತ್ತು ನಿಮಿಷ ಪ್ರಶಾಂತವಾದ ಸ್ಥಳದಲ್ಲಿ ಓಂಕಾರ ಧ್ಯಾನ ಮಾಡಿ.

ಜನ್ಮಸಂಖ್ಯೆ 8

ನೀವು ಕೂಡಿಟ್ಟುಕೊಂಡಿದ್ದ ಹಣವನ್ನು ಖರ್ಚು ಮಾಡುವ ಅಥವಾ ಹೂಡಿಕೆ ಮಾಡುವ ದಾರಿ ಕಾಣಿಸಿಕೊಳ್ಳುತ್ತದೆ. ಈ ದಿನ ಮನಸ್ಸಿಗೆ ತೋಚುವ ಅಥವಾ ಇನ್ನೊಬ್ಬರ ಬಗ್ಗೆ ಹೊಳೆಯುವ ಸಂಗತಿಗಳನ್ನು ಉಪೇಕ್ಷೆ ಮಾಡಬೇಡಿ. ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯಿಂದ ದೂರ ಇರಬೇಕು. ಅಥವಾ ವಾಟ್ಸಾಪ್ ಗ್ರೂಪ್, ಫೇಸ್‌ಬುಕ್ ಕಮ್ಯುನಿಟಿ ಹೀಗೆ ಯಾವುದರಿಂದಾದರೂ ಆಚೆ ಬರಬೇಕು ಎಂದಾದಲ್ಲಿ ಮುಲಾಜಿಲ್ಲದೆ ಹೊರಬನ್ನಿ.

ಜನ್ಮಸಂಖ್ಯೆ 9

ನಿಮ್ಮ ಮನಸ್ಸಿನಲ್ಲಿ ಇಂಥವರನ್ನೇ ಮದುವೆ ಆಗಬೇಕು ಎಂದು ನಿಶ್ಚಯಿಸಿ, ಈ ದಿನ ಮನೆಯಲ್ಲಿ ವಿಷಯ ಪ್ರಸ್ತಾವ ಮಾಡಬೇಕು ಎಂದಿದ್ದಲ್ಲಿ ಸಾಧ್ಯವಾದರೆ ಬೇರೆ ದಿನಕ್ಕೆ ಮುಂದೂಡಿ. ಏಕೆಂದರೆ ನಿಮ್ಮ ಮನೆಯಲ್ಲಿ ಒಪ್ಪಿಸುವುದು ಕಷ್ಟವಾಗುತ್ತದೆ. ಇನ್ನು ವಯೋಸಹಜ ಅನಾರೋಗ್ಯ ಸಮಸ್ಯೆ ಇರುವಂಥವರು ವೈದ್ಯರನ್ನು ಬದಲಾಯಿಸಬೇಕು ಎಂದಿದಲ್ಲಿ ಸದ್ಯಕ್ಕೆ ಬೇಡ.

ಲೇಖನ- ಎನ್‌.ಕೆ.ಸ್ವಾತಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ