AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರಪತ್ನಿಯ ಸೇವೆಯಲ್ಲಿ ಹೆಚ್ಚು ನಿರತರು ಈ ನಕ್ಷತ್ರದವರು

ಕೆಲವೊಂದು ನಕ್ಷತ್ರಗಳಲ್ಲಿ ಕೆಲವೊಂದು ಕೆಟ್ಟ ಗುಣಗಳು ಇರುತ್ತದೆ. ಅದರಲ್ಲಿ ಒಂದು ಶತಭಿಷಾ ನಕ್ಷತ್ರ. ಈ ನಕ್ಷತ್ರದವರು ತಮ್ಮ ಪತ್ನಿಗೆ ಉಪಕಾರಿಯಾಗಿ ಇರುವುದಕ್ಕಿಂತ ಪರರ ಪತ್ನಿಯ ಸೇವೆ ಹೆಚ್ಚು ಮಾಡುತ್ತಾರೆ. ಇದು ವೈವಾಹಿಕ ಜೀವನಕ್ಕೆ ಕಂಟಕವಾಗಿರುತ್ತದೆ. ಈ ನಕ್ಷತ್ರದವರು ಈ ಗುಣ ಮಾತ್ರವಲ್ಲದೆ. ಇನ್ನು ಅನೇಕ ಕೆಟ್ಟ ಅಭ್ಯಾಸಗಳನ್ನು ರೂಢಿಸಿಕೊಂಡಿರುತ್ತಾರೆ. ಈ ಬಗ್ಗೆ ಇಲ್ಲಿದೆ ನೋಡಿ

ಪರಪತ್ನಿಯ ಸೇವೆಯಲ್ಲಿ ಹೆಚ್ಚು ನಿರತರು ಈ ನಕ್ಷತ್ರದವರು
ಸಾಂದರ್ಭಿಕ ಚಿತ್ರ Image Credit source: Tv9 kannada
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: May 13, 2025 | 12:27 PM

Share

ಜಲಗಳಿಗೆ ಒಡೆಯನಾದ ವರುಣನನ್ನು ಅಧಿಪತಿಯಾಗಿ ಇರುವ ನಕ್ಷತ್ರ ಶತಭಿಷಾ ಅಥವಾ ಶತತಾರಾ (Shatabhisha Nakshatra). ಇಪ್ಪತ್ತೇಳನೇ ನಕ್ಷತ್ರವಾದ ಇದು ರಾಕ್ಷಸ ಗಣಕ್ಕೆ ಸೇರಿದ್ದಾಗಿದೆ. ವಾತ ಪ್ರಕೃತಿಯ ನಕ್ಷತ್ರವಿದು ಆದಿ ನಾಡಿಯಾಗಿರಲಿದೆ. ಗೋ ಸಾ ಸಿ‌ ಸೂ ಎಂಬ ನಾಮಾಕ್ಷರಗಳಿಂದ ಇರುವ ಇದು ಮಂಡಲಾಕಾರದಲ್ಲಿ ಕಾಣಿಸುವ ನೂರು‌ ನಕ್ಷತ್ರಗಳ ಸಮೂಹ. ಈ ನಕ್ಷತ್ರ ಪೂರ್ಣ ಪಾದವೂ ಕುಂಭ ರಾಶಿಯಲ್ಲಿಯೇ (Aquarius zodiac sign) ಇರಲಿದೆ. ಇಂತಹ ವಿಶೇಷಣಗಳಿಂದ ಕೂಡಿರುವ ನಕ್ಷತ್ರದಲ್ಲಿ ಜನಿಸಿದವರು ಹೇಗೆಲ್ಲ ಇರುತ್ತಾರೆ-

ಸ್ಫುಟವಾಕ್ :

ಹೇಳಬೇಕಾದ ಮಾತನ್ನು ಸರಿಯಾಗಿ ಹೇಳುವರು ಹಾಗು ಕೇಳುಗನಿಗೆ ಚೆನ್ನಾಗಿ ಅರ್ಥವಾಗುವಂತೆ ಹೇಳುವರು. ವಿಷಯದಲ್ಲಿ ಹಾಗೂ ಮಾತಿನಲ್ಲಿ ಸ್ಪಷ್ಟತೆ ಕಾಣಬಹುದು.

ವ್ಯಸನೀ :

ಇವರಿಗೆ ಆಗಾಗ ಕಷ್ಟಗಳನ್ನು ಎದುರಿಸಬೇಕಾದ ಸ್ಥಿತಿ ಬರಲಿದೆ. ಕೆಟ್ಟ ಅಭ್ಯಾಸಗಳನ್ನು ರೂಢಿಸಿಕೊಂಡು, ಅನಂತರ ದುಃಖವಾಗಲಿದೆ.

ಇದನ್ನೂ ಓದಿ
Image
ಹೆಣ್ಣಿನ ಸಿಂಧೂರ ಮುಟ್ಟಿದವರು ಅಂದು ಪುರಾಣದಲ್ಲೂ ಉಳಿದಿಲ್ಲ, ಇಂದು ಉಳಿದಿಲ್ಲ
Image
ಈ ನಾಲ್ಕು ರಾಶಿಯವರಿಗೆ ಚಿನ್ನ ಧರಿಸುವುದು ಅತ್ಯಂತ ಶುಭ
Image
ಮೇ 8 ಮೋಹಿನಿ ಏಕಾದಶಿ; ಪೂಜಾ ವಿಧಾನ ಮತ್ತು ಮಹತ್ವ
Image
ಶಿವನ ವಿಶೇಷ ಅನುಗ್ರಹ ಪಡೆಯಲು ಈ ಸರಳ ಪರಿಹಾರವನ್ನು ಪ್ರಯತ್ನಿಸಿ

ರಿಪುಹಾ :

ಈ ನಕ್ಷತ್ರದಲ್ಲಿ ಜನಿಸಿದವರು ಶತ್ರುಗಳನ್ನು ಯಾವುದೇ ಸಮರವಿಲ್ಲದೇ ಕೇವಲ ಯುಕ್ತಿಯಿಂದ ಗೆಲ್ಲುವರು. ಶತ್ರುಗಳೇ ಇಲ್ಲದಂತೆ ಇವರು ಮಾಡಿಕೊಳ್ಳುವರು.

ಸಾಹಸೀ :

ಯಾವ ಕಾರ್ಯವನ್ನು ಮಾಡುವಾಗಲೂ ಅತಿಯಾಗಿ ಯೋಚಿಸಿ ಕಾರ್ಯವನ್ನು ಮಾಡಲಾರರು. ಆರಂಭ ಮಾಡಿ ಅನಂತರ ಆಲೋಚನೆ ಸಮಯಕ್ಕೆ ಬೇಕಾದ ರೀತಿಯಲ್ಲಿ ಕಾರ್ಯವನ್ನು ಮಾಡುವರು.

ತಂಪಿನ ಭಯ :

ಈ ನಕ್ಷತ್ರದ ಅಧಿಪತಿ ಜಲದೇವತೆಯಾದ ಕಾರಣ ತಂಪು ಅಧಿಕವಾಗಿ ಬಾಧಿಸಲಿದೆ. ತಂಪಿನ ವಾತಾವರಣದಲ್ಲಿ ಇರಲು ಅಂತಹ ಪ್ರದೇಶದಲ್ಲಿ ವಾಸ ಕಷ್ಟವಾಗುವುದು. ಹೆಚ್ಚು ಬಿಸಿಲಿರುವ ಪ್ರದೇಶದಲ್ಲಿ ಉಷ್ಣ ಸ್ಥಳದಲ್ಲಿ ಆರಾಮಾಗಿ ಇರುವರು. ಕಫದ ರೋಗವೂ ಬರಲು ಸಾಧ್ಯವಿದೆ.

ನಿಷ್ಠುರತೆ :

ಈ ನಕ್ಷತ್ರದಲ್ಲಿ ಜನಿಸಿದವೆಇಗೆ ಹೊಂದಾಣಿಕೆ ಸ್ವಭಾವ ಕಷ್ಟ. ಇರುವುದು ಇರುವಂತೆ ಹೇಳಿ ಎಲ್ಲರ ಜೊತೆ ನಿಷ್ಠುರತೆಯನ್ನು ಬೆಳೆಸಿಕೊಳ್ಳುವರು. ಇವರ ಮನಸ್ಸ್ಥಿತಿಗೆ ಇತರರು ಹೊಂದಿಕೊಳ್ಳುವುದು ದುಸ್ಸಾಧ್ಯ ಎನಿಸುವುದು.

ಪರಪತ್ನಿ ಸೇವೆ :

ಇವರು ತಮ್ಮ ಪತ್ನಿಗೆ ಉಪಕಾರಿಯಾಗಿ ಇರುವುದಕ್ಕಿಂತ ಪರರ ಪತ್ನಿಯ ಸೇವೆಯಲ್ಲಿ, ಅವರಿಗೆ ಅನುಕೂಲವಾಗಿ ಇರಲು ಆಸಕ್ತಿ ಹೆಚ್ಚು. ಅವರ ಪ್ರೀತಿಯನ್ನು ಗಳಿಸಲು ಇಚ್ಛೆ ಇದೆ.

ಕೃಪಣ :

ಹೇರಳವಾದ ಸಂಪತ್ತು ಇವರ ಬಳಿ ಇದ್ದರು ಕೈ ಎತ್ತಿ ಕೊಡುವ ಸ್ವಭಾವ ಇರದು. ಎಲ್ಲವನ್ನೂ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವರು. ಜಿಪುಣತನವೇ ಅಧಿಕವಾಗಿ ಇರಲಿದೆ. ಕೊಟ್ಟರೂ ಅಲ್ಪವನ್ನು ಮಾತ್ರ ಕೊಡುವರು.

ಹೀಗೆ ಅನೇಕ ಶುಭಾಶುಭ ಫಲವನ್ನು ಇಟ್ಟುಕೊಂಡ ನಕ್ಷತ್ರ ಇದು. ಈ ನಕ್ಷತ್ರದಲ್ಲಿ ಶುಭ ಗ್ರಹರು ಇದ್ದಾಗ ಅಥವಾ ಶುಭ ಗ್ರಹರ ದೃಷ್ಟಿ ಜನಿಸುವಾಗ ಇದ್ದರೆ ಆಗ ಹುಟ್ಟಿದವನು ಎಲ್ಲ ಶುಭ ಗುಣಗಳಿಂದ ಪೂರ್ಣವಾಗಿರುವರು.

– ಲೋಹಿತ ಹೆಬ್ಬಾರ್ – 8762924271

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ