
ಸಿಂಹ ರಾಶಿಯಲ್ಲಿ ಬೃಹಸ್ಪತಿ ಮತ್ತು ಕೇತು ಗ್ರಹಗಳ ಸಂಯೋಜನೆಯು ಜ್ಯೋತಿಷ್ಯ ಶಾಸ್ತ್ರದಲ್ಲಿ ಅತ್ಯಂತ ಮಹತ್ವದ ಹಾಗೂ ಗಂಭೀರವಾದ ಆಧ್ಯಾತ್ಮಿಕ ಯೋಗವನ್ನು ಸೃಷ್ಟಿಸುತ್ತದೆ. ಜ್ಯೋತಿಷ್ಯದಲ್ಲಿ ಗುರುವಿಗೆ ಜ್ಞಾನ, ಧರ್ಮ, ಸುಖ ಮತ್ತು ವೃದ್ಧಿಯ ಕಾರಕತ್ವವಿದ್ದರೆ, ಕೇತುವಿಗೆ ಮೋಕ್ಷ, ವೈರಾಗ್ಯ, ಗೂಢ ವಿದ್ಯೆ ಮತ್ತು ಆಧ್ಯಾತ್ಮದ ಕಾರಕತ್ವವಿದೆ. ಸೂರ್ಯನ ಅಧಿಪತ್ಯದ ಅಗ್ನಿ ತತ್ತ್ವದ ಸಿಂಹ ರಾಶಿಯಲ್ಲಿ ಈ ಇಬ್ಬರು ಗ್ರಹಗಳು ಒಂದಾದಾಗ, ಇದನ್ನು ಧ್ವಜ ಯೋಗ ಅಥವಾ ಕುಲದೀಪಕ ಯೋಗ ಎಂದು ಕರೆಯಲಾಗುತ್ತದೆ. ಈ ಯೋಗವು ಭೌತಿಕ ಲಾಭಕ್ಕಿಂತಲೂ ಆಧ್ಯಾತ್ಮಿಕ, ಬೌದ್ಧಿಕ ಹಾಗೂ ಗೂಢ ವಿದ್ಯೆಯ ಜಾಗೃತಿಗೆ ಹೆಚ್ಚು ದಾರಿಮಾಡಿಕೊಡುತ್ತದೆ.
ಈ ರಾಶಿಯಲ್ಲಿಯೇ ಯೋಗ ಏರ್ಪಡುವುದರಿಂದ ನಿಮ್ಮ ವ್ಯಕ್ತಿತ್ವದಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆಗಳು ಹೆಚ್ಚಾಗುತ್ತವೆ. ಧರ್ಮ ಕಾರ್ಯಗಳಲ್ಲಿ ಆಸಕ್ತಿ ಮೂಡಲಿದೆ. ಆದರೆ, ಕೇತುವಿನ ಪ್ರಭಾವದಿಂದ ಮಾನಸಿಕ ಗೊಂದಲ, ನಿರ್ಧಾರ ತಳೆಯುವಲ್ಲಿ ಹಿಂಜರಿಕೆ ಉಂಟಾಗಬಹುದು. ಆರೋಗ್ಯದಲ್ಲಿ, ವಿಶೇಷವಾಗಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಎಚ್ಚರ ವಹಿಸಬೇಕು.
ಪಂಚಮ ಭಾವದಲ್ಲಿ ಈ ಯೋಗ ಸೃಷ್ಟಿಯಾಗುವುದರಿಂದ ಜ್ಞಾನಾರ್ಜನೆಗೆ ಅತ್ಯುತ್ತಮ ಕಾಲ. ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಹಾಗೂ ಬರವಣಿಗೆ ಕ್ಷೇತ್ರದಲ್ಲಿರುವವರಿಗೆ ಸುವರ್ಣ ಅವಕಾಶಗಳು ಲಭಿಸಲಿವೆ. ಅನಿರೀಕ್ಷಿತ ಧನಲಾಭ ಹಾಗೂ ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ.
ಭಾಗ್ಯ ಸ್ಥಾನದಲ್ಲಿ ಗುರು-ಕೇತು ಒಂದಾಗುವುದರಿಂದ ದೈವಿಕ ಕೃಪೆ ಸದಾ ಇರುತ್ತದೆ. ಸುದೀರ್ಘ ಧಾರ್ಮಿಕ ಯಾತ್ರೆಗಳು ಕೈಗೂಡಲಿವೆ. ಗುರು ಹಾಗೂ ಹಿರಿಯರ ಆಶೀರ್ವಾದದಿಂದ ಬಾಕಿ ಉಳಿದಿದ್ದ ಕೆಲಸಗಳು ಪೂರ್ಣಗೊಳ್ಳುತ್ತವೆ. ಉನ್ನತ ಶಿಕ್ಷಣ ಬಯಸುವವರಿಗೆ ಶುಭ ವಾರ್ತೆ ಸಿಗಲಿದೆ.
ಏಕಾದಶ ಭಾವದಲ್ಲಿ ಈ ಯೋಗ ಉಂಟಾಗುವುದರಿಂದ ಹಳೆಯ ಹೂಡಿಕೆಗಳಿಂದ ಅನಿರೀಕ್ಷಿತ ಲಾಭ ಸಿಗಲಿದೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗುತ್ತವೆ. ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಸಂಪರ್ಕಗಳು ಬೆಳೆಯಲಿವೆ.
ದಶಮ ಭಾವದಲ್ಲಿ ಈ ಸಂಯೋಜನೆ ನಡೆಯುವುದರಿಂದ ವೃತ್ತಿಜೀವನದಲ್ಲಿ ಬದಲಾವಣೆಗಳು ಎದುರಾಗಬಹುದು. ಕೆಲಸದ ಸ್ಥಳದಲ್ಲಿ ಮೇಲಧಿಕಾರಿಗಳೊಂದಿಗೆ ಅಭಿಪ್ರಾಯ ಭೇದ ಅಥವಾ ಕೆಲಸ ಬದಲಾಯಿಸುವ ಆಲೋಚನೆಗಳು ಬರಬಹುದು. ತಾಳ್ಮೆಯಿಂದ ಇರುವುದು ಅತ್ಯಗತ್ಯ.
ಸಪ್ತಮ ಭಾವದಲ್ಲಿ ಗ್ರಹಗಳ ಈ ಮಿಲನವಾಗುವುದರಿಂದ ವ್ಯಾಪಾರದಲ್ಲಿ ಹೊಸ ಪಾಲುದಾರಿಕೆಗಳು ದೊರೆಯಬಹುದು. ಆದರೆ ದಾಂಪತ್ಯ ಜೀವನದಲ್ಲಿ ಪರಸ್ಪರ ತಪ್ಪು ತಿಳುವಳಿಕೆಗಳು, ಅನಗತ್ಯ ಅನುಮಾನಗಳು ಮೂಡದಂತೆ ಕಾಳಜಿ ವಹಿಸಬೇಕು.
ಸಿಂಹ ರಾಶಿಯು ರಾಜಸ ಹಾಗೂ ಅಹಂಕಾರದ ಸಂಕೇತದ ರಾಶಿ. ಅಲ್ಲಿ ಕೇತು ಪ್ರವೇಶಿಸಿದಾಗ ವ್ಯಕ್ತಿಯ ಅಹಂಕಾರವನ್ನು ಕಳೆದುಕೊಂಡು, ಆಧ್ಯಾತ್ಮಿಕ ಜ್ಞಾನದ ಕಡೆಗೆ ಮುನ್ನಡೆಸುತ್ತಾನೆ. ಈ ಯೋಗದ ಪ್ರಭಾವ ಇರುವ ಅವಧಿಯಲ್ಲಿ ಜ್ಯೋತಿಷ್ಯ, ಮಂತ್ರ ಶಾಸ್ತ್ರ, ಯೋಗ ಹಾಗೂ ತತ್ವಜ್ಞಾನದ ಅಧ್ಯಯನ ಮಾಡುವವರಿಗೆ ಶೀಘ್ರ ಸಿದ್ಧಿಯಾಗುವುದು. ಗುರು ಮತ್ತು ಕೇತು ಸಿಂಹ ರಾಶಿಯಲ್ಲಿ ಸೇರುವುದು ಸುಮಾರು ೩೫ ರಿಂದ ೩೬ ವರ್ಷಗಳಿಗೊಮ್ಮೆ ಮಾತ್ರ ಎದುರಾಗುವ ಅಪರೂಪದ ಘಟನೆಯಾಗಿದೆ. ಇದು ಅಕ್ಟೋಬರ್ 31 ರಿಂದ ನವೆಂಬರ್12 ರವರೆಗೆ ಇರುವುದು. ಗಣಪತಿಯ ಆರಾಧನೆ, ವಿಷ್ಣುಸಹಸ್ರನಾಮ ಅಥವಾ ಶಿವಪೂಜೆ ಮಾಡುವುದು ಅತ್ಯಂತ ಶ್ರೇಯಸ್ಕರ. ಗುರುವಾರಗಳಲ್ಲಿ ಕಡಲೆಬೇಳೆ ಅಥವಾ ಬಾಳೆಹಣ್ಣನ್ನು ದಾನ ಮಾಡಿ. ಗುರು-ಹಿರಿಯರನ್ನು ಹಾಗೂ ಧಾರ್ಮಿಕ ಮಾರ್ಗದರ್ಶಕರನ್ನು ಗೌರವಿಸಿ ಆಶೀರ್ವಾದ ಪಡೆಯಿರಿ.
-ಲೋಹಿತ್ ಹೆಬ್ಬಾರ್
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ