Horoscope: ನಿತ್ಯಭವಿಷ್ಯ; ಮಕ್ಕಳ ವಿಚಾರದಲ್ಲಿ ನಿಮಗೆ ಸಮಾಧಾನ, ಸಮಯೋಚಿತ ನಿರ್ಧಾರ ತೆಗೆದುಕೊಳ್ಳುವಿರಿ

ಒಂದಷ್ಟು ಮಂದಿ ಪ್ರತಿನಿತ್ಯ ತಮ್ಮ ಭವಿಷ್ಯ ನೋಡುತ್ತಾರೆ. ಹಾಗಿದ್ದರೆ, ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರಾಗಿದ್ದರೇ, 01 ಏಪ್ರಿಲ್​​ 2024ರ ನಿಮ್ಮ ರಾಶಿಭವಿಷ್ಯ ಹೇಗಿದೆ? ನಿಮಗೆ ಶುಭ ಅಥವಾ ಅಶುಭ ದಿನವಾ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಎಂಬಿತ್ಯಾದಿ ಮಾಹಿತಿಗಳನ್ನು ಇಂದಿನ ರಾಶಿಭವಿಷ್ಯದಿಂದ ತಿಳಿದುಕೊಳ್ಳಿ.

Horoscope: ನಿತ್ಯಭವಿಷ್ಯ; ಮಕ್ಕಳ ವಿಚಾರದಲ್ಲಿ ನಿಮಗೆ ಸಮಾಧಾನ, ಸಮಯೋಚಿತ ನಿರ್ಧಾರ ತೆಗೆದುಕೊಳ್ಳುವಿರಿ
ದಿನಭವಿಷ್ಯImage Credit source: freepik
Follow us
ಗಂಗಾಧರ​ ಬ. ಸಾಬೋಜಿ
|

Updated on: Apr 01, 2024 | 12:10 AM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (ಏಪ್ರಿಲ್​​​​​ 01) ರಾಶಿ ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮೀನ ಮಾಸ, ಮಹಾನಕ್ಷತ್ರ: ರೇವತೀ, ಮಾಸ: ಫಾಲ್ಗುಣ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಮೂಲಾ, ಯೋಗ: ಶುಭ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 29 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 43 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 08:01 ರಿಂದ 09:33ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 11:05 ರಿಂದ ಮಧ್ಯಾಹ್ನ 12:36ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:08 ರಿಂದ 03:40ರ ವರೆಗೆ.

ಮೇಷ ರಾಶಿ: ಮನೆಯಲ್ಲಿ ಯಾರಿಗೂ ಏನನ್ನೂ ಹೇಳಲು ಹೋಗದೇ ನಿಮ್ಮಷ್ಟಕ್ಕೆ ನೀವು ಕೆಲಸಗಳನ್ನು ಮಾಡಿ. ಸ್ತ್ರೀಯರು ಸಮಯದ ಬಗ್ಗೆ ಅಲಕ್ಷ್ಯ ಮಾಡಬಹುದು. ಹತ್ತಿರದ ಬಂಧುಗಳ ಮನೆಗೆ ಹೋಗುವುದು ಸನ್ನಿವೇಶವು ಬರುವುದು. ನೀವು ತೋರಿಸುವ ಅನುಕಂಪವು ಇನ್ನೊಬ್ಬರಿಗೆ ಅರಗಿಸಿಕೊಳ್ಳಲು ಕಷ್ಟವಾದೀತು. ಸ್ಥಿರಾಸ್ತಿಯ ಖರೀದಿಸಲು ಸಾಲ‌ ಮಾಡಲು ಇಚ್ಛಿಸುವಿರಿ. ಕುಟುಂಬದ ಸದಸ್ಯರಿಗಾಗಿಯೂ ನೀವು ಸ್ವಲ್ಪ ಸಮಯವನ್ನು ಮೀಸಲಿಡಬೇಕು. ನೀವು ಕೆಲವು ಪ್ರಮುಖ ವಿಷಯಗಳಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ನಿಮ್ಮ ನೆಚ್ಚಿನ ಜನರ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಯಾರ ಮೇಲೂ ನಿಮ್ಮದೇ ಆದ ನಿಲವು ಬೇಡ. ನೋವಿನಿಂದ ಹೊರಬರಲು ನಿಮಗೆ ಕಷ್ಟವಾದೀತು. ದಿನದಲ್ಲಿ ಬದಲಾವಣೆಯನ್ನು ತಂದುಕೊಳ್ಳುವಿರಿ.‌ ಶುಭ ದಿನಕ್ಕೆ ದಿನಗಣನೆಯ ಅಗತ್ಯವಿಲ್ಲ. ನಿಮ್ಮಿಂದ ಒಳ್ಳೆಯ ಕಾರ್ಯಗಳು ಆರಂಭವಾಗಲಿ.

ವೃಷಭ ರಾಶಿ: ಇಂದು ನಿಮ್ಮ ವಿಷಯ ಚಿಕ್ಕದಾದರೂ ಮಾತಿನಿಂದಾಗಿ ದೊಡ್ಡ ರೂಪವನ್ನು ಪಡೆಯುವುದು. ಸಮಯ ಪಾಲನೆ ಇಲ್ಲದೇ ಎಲ್ಲರಿಂದ ಬೈಗುಳ ಪಡೆಯಬೇಕಾಗುವುದು. ಕಛೇರಿಯಲ್ಲಿ ನಿಮಗೆ ಅಳುಕಿರುವುದು. ನೀವು ಕೆಲವು ವಿಚಾರಗಳನ್ನು ನೆನಪು ಮಾಡಿಕೊಳ್ಳುವುದು ಕಷ್ಟವಾಗಬಹುದು. ನಿಮ್ಮ ಕೆಲಸದಲ್ಲಿ ಇನ್ನೊಬ್ಬರಿಗೆ ಪ್ರವೇಶವನ್ನು ಕೊಡುವುದು ಬೇಡ. ಹಣಕಾಸಿನ ಪರಿಸ್ಥಿತಿಯನ್ನು ನೆನೆದು ಚಿಂತಿತರಾಗಬಹುದು. ಸರ್ಕಾರಿ ನಿಯಮಗಳ ಉಲ್ಲಂಘನೆ ಬೇಡ‌. ಸ್ತ್ರೀಯರಿಂದ ಲಾಭವನ್ನು ಪಡೆಯುವಿರಿ. ಇಂದಿನ‌ ಸ್ನೇಹಿತರ ಭೇಟಿಯಿಂದ ನಿಮ್ಮಲ್ಲಿ‌ ಉತ್ಸಾಹವನ್ನು ಜಾಗರೂಕಗೊಳಿಸುವುದು. ಕಛೇರಿಯಲ್ಲಿ ನಿಮ್ಮ ಶ್ರಮವು ಲೆಕ್ಕಕ್ಕೆ ಬಾರದೇ ಹೋದೀತು. ಶ್ರಮಕ್ಕೆ ಫಲವನ್ನು ನಿರೀಕ್ಷಿಸುತ್ತ‌ ಸಮಯವನ್ನು ವ್ಯರ್ಥ ಮಾಡುವಿರಿ. ಕಾಲಹರಣದಿಂದ ಏನಾದರೂ ಹೇಳಿಯಾರು.

ಮಿಥುನ ರಾಶಿ: ವ್ಯಾಪಾರದ ಸಣ್ಣ ನಷ್ಟವನ್ನೂ ಅತಿ ಗಂಭೀರವಾಗಿ ತೆಗೆದುಕೊಳ್ಳುವಿರಿ. ಎಲ್ಲರ ಜೊತೆ ವೃತ್ತಿಗೆ ಸಂಬಂಧಿಸಿದ ಮಾತುಗಳನ್ನೇ ಆಡುವಿರಿ. ಒಪ್ಪಿಕೊಂಡ ಕೆಲಸವನ್ನು ಶಿಸ್ತಿನಿಂದ ಮಾಡಿ ಯಶಸ್ಸು ಪಡೆಯುವಿರಿ. ನೀವು ಕುಟುಂಬದಿಂದ ಬೆಂಬಲವನ್ನು ಪಡೆಯುತ್ತೀರಿ. ಆದಾಯವು ಉತ್ತಮವಾಗಿ ಉಳಿಯುತ್ತದೆ. ನೀವು ಕೊಟ್ಟ ಆಶ್ವಾಸನೆಯನ್ನು ಸುಲಭವಾಗಿ ಪೂರೈಸಲು ಸಾಧ್ಯವಾಗುತ್ತದೆ. ಅದರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಕೆಲವು ಹೊಸ ಮೂಲಗಳನ್ನು ವ್ಯಾಪಾರದಲ್ಲಿ ಸೇರಿಸಿಕೊಳ್ಳಬಹುದು. ನಿಮ್ಮ ಕೆಲವು ವಿರೋಧಿಗಳು ನಿಮಗೆ ತೊಂದರೆ ಕೊಡಲು ಪ್ರಯತ್ನಿಸಬಹುದು. ನಿಮ್ಮ ಕೊರತೆಯೇ ನಿಮಗೆ ಶಾಪವಾಗಬಹುದು. ದೇಹಾರೋಗ್ಯವು ಸರಿಯಾಗಿ ಇಲ್ಲದ ಕಾರಣ ಮನಸ್ಸು ಸರಿಯಾಗಿ ಕೆಲಸ ಮಾಡದು. ಉದ್ಯೋಗದ ಕಾರಣದಿಂದ ಬೇರೆ ಕಡೆ ಇದ್ದರೂ ಮನೆಯ ನೆನಪು ಕಾಡುವುದು. ಉದ್ಯೋಗವು ಸಾಕು ಎನಿಸಬಹುದು.‌ ನಿಮ್ಮ ಆಚರಣೆಯು ಇತರರಿಗೆ ಇಷ್ಟವಾಗುವುದು.

ಕಟಕ ರಾಶಿ: ಯಾರಿಂದಲಾದರೂ ನಿಮ್ಮ ನೆಮ್ಮದಿಯನ್ನು ಕದಡುವ ಕೆಲಸವು ಬಹಳ ಶಿಸ್ತಿನಿಂದ ಆಗಬಹುದು. ನಿಮ್ಮದಲ್ಲದ ಕಾರ್ಯಕ್ಷೇತ್ರದಲ್ಲಿ ವ್ಯವಹರಿಸುವುದು ಸುಲಭದ್ದಾಗದು. ಸ್ವಾರ್ಥಕ್ಕೆ ಹೆಚ್ಚು ಒತ್ತುಕೊಡುವ ನೀವು ಒತ್ತಾಯಕ್ಕೆ ಮಣಿದು ಇನ್ನೊಬ್ಬರ ವಿಚಾರದಲ್ಲಿ ಯಾವ ಲಾಭವೂ ಇಲ್ಲದೇ ಭಾಗವಹಿಸುವಿರಿ. ಪರಹಿತಾಸಕ್ತಿಯ‌ ಬಗ್ಗೆ ಹೆಚ್ಚು ಗಮನವಿರಲಿದೆ. ಸಾಮಾಜಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನರು ಗೌರವವನ್ನು ಪಡೆಯುವರು. ನೀವು ಅವಕಾಶಗಳತ್ತ ಗಮನ ಹರಿಸಬೇಕು. ಮಕ್ಕಳ ವಿಚಾರದಲ್ಲಿ ನಿಮಗೆ ಸಮಾಧಾನವು ಸಿಗದೇ ಇರಬಹುದು. ಕುಟುಂಬ ವ್ಯವಸ್ಥೆ ಇಂದು ನಿಮ್ಮನ್ನು ಸುಧಾರಿಸಿಕೊಳ್ಳುವುದು ಸುಲಭವಿಲ್ಲ. ಸಮಯೋಚಿತ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಪ್ರಭಾವೀ ವ್ಯಕ್ತಿಗಳಿಂದ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಕೆಟ್ಟವರ ಸಹವಾಸ ಸಿಗುವ ಸಾಧ್ಯತೆ ಇದೆ. ಬೇಡವೆಂದರೂ ಕೆಟ್ಟವರ ಸಹವಾಸವೇ ಸಿಗುವುದು. ನಂಬಿಕೆಯನ್ನು ಕಳೆದುಕೊಳ್ಳಬಹುದು.

‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು