Rashi Bhavishya: ಈ ರಾಶಿಯವರ ಸಹೋದರಿಯರ ನಡುವೆ ಕಲಹವಾಗಬಹುದು-ಎಚ್ಚರ

ಭವಿಷ್ಯದ ಬಗ್ಗೆ ತಿಳಿದುಕೊಳ್ಳಬೇಕೆಂಬ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ಹೀಗಾಗಿ ಒಂದಷ್ಟು ಜನರು ದಿನಭವಿಷ್ಯ ನೋಡುತ್ತಾರೆ. ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ. ಇಂದಿನ (ಫೆಬ್ರವರಿ​​​​ 18) ಭವಿಷ್ಯ ಹೇಗಿದೆ? ಯಾವ ರಾಶಿಯವರಿಗೆ ಕೆಡುಕು, ಇನ್ಯಾವ ರಾಶಿಯವರಿಗೆ ಒಳ್ಳೆಯದು ಎಂಬುದು ಇಲ್ಲಿದೆ. 

Rashi Bhavishya: ಈ ರಾಶಿಯವರ ಸಹೋದರಿಯರ ನಡುವೆ ಕಲಹವಾಗಬಹುದು-ಎಚ್ಚರ
ರಾಶಿ ಭವಿಷ್ಯ
Updated By: ಕಿರಣ್ ಹನುಮಂತ್​ ಮಾದಾರ್

Updated on: Feb 18, 2024 | 12:29 AM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಫೆಬ್ರವರಿ​​​​ 18) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಕರ ಮಾಸ, ಮಹಾನಕ್ಷತ್ರ : ಧನಿಷ್ಠಾ, ಮಾಸ : ಮಾಘ, ಪಕ್ಷ : ಶುಕ್ಲ, ವಾರ : ಭಾನು, ತಿಥಿ : ನವಮೀ, ನಿತ್ಯನಕ್ಷತ್ರ : ಮೃಗಶಿರಾ, ಯೋಗ: ವೈಧೃತಿ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 56 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 6 ಗಂಟೆ 36 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 05:09 ರಿಂದ 06:37ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:47 ರಿಂದ 02:14ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:42 ರಿಂದ 05:09ರ ವರೆಗೆ.

ಸಿಂಹ ರಾಶಿ : ಇಂದು ಅನೇಕ ವಿಷಯಗಳ ಬಗ್ಗೆ ತಿಳಿವಳಿಕೆ ಬರುವುದು. ಇದು ನಿಮ್ಮ ಮುಂದಿನ‌ ನಡೆಗೆ ಪೂರಕವಾಗಿ ಇರುವುದು. ವ್ಯಾಪಾರಿಗಳು ಅನಿರೀಕ್ಷಿತವಾಗಿ ಉತ್ತಮ ಲಾಭವನ್ನು ಗಳಿಸುವರು. ಸಂಬಂಧವಿಲ್ಲದ ವಿಚಾರದಲ್ಲಿ ಚರ್ಚೆ ಮಾಡಿ ಸಮಯವನ್ನು ವ್ಯರ್ಥ ಮಾಡುವಿರಿ. ಸ್ನೇಹಿತರಿಂದ ಬಾಲಿಶ ಸಲಹೆ ಪಡೆಯುವುದನ್ನು ತಪ್ಪಿಸಬೇಕು. ಇದು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ದಾರಿ ಮಾಡಿಕೊಡುತ್ತದೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ದೊರೆಯಬಹುದು. ಆಪ್ತರ ಬಗ್ಗೆ ನಿಮಗೆ ಹಲವು ಅನುಮಾನಗಳು ಇರಬಹುದು.‌ ಕಛೇರಿಯ ಕಿರಿಕಿರಿಯಿಂದ‌ ಮನೆಯಲ್ಲಿಯೂ ನಿಮಗೆ ನೆಮ್ಮದಿ ಸಿಗದು. ಖುಷಿಯ ವಾತಾವರಣವಿದ್ದರೂ ನಿಮಗೆ ನಿಮ್ಮದೇ ಚಿಂತೆ ಕಾಡಬಹುದು. ಬಹಳ‌ ದಿನಗಳ ಅನಂತರ ಪುಣ್ಯ ಸ್ಥಳಗಳಿಗೆ ಹೋಗುವಿರಿ. ಜವಾಬ್ದಾರಿಯ ಕಾರಣಕ್ಕೆ ನಿಮ್ಮ ವರ್ತನೆಯಲ್ಲಿ ಭಿನ್ನತೆ ಕಾಣುವುದು. ನಿಮಗೆ ಬರಬೇಕಾದ ಹಣವನ್ನು ಬೇರೆಯವರ ಮೂಲಕ ಪಡೆದುಕೊಳ್ಳುವಿರಿ.

ಕನ್ಯಾ ರಾಶಿ : ಇಂದು ಸಮಾಜದಲ್ಲಿ ಗೌರವವನ್ನು ಪಡೆಯುವಿರಿ. ನಿಮ್ಮ ಮನೆಗೆ ಹೊಸ ವಾಹನವನ್ನು ಖರೀದಿಸುವ ಉತ್ಸಾಯವಿರುವುದು. ನಿಮ್ಮ ಕುಟುಂಬ ಜೀವನದಲ್ಲಿ ಎಲ್ಲರೂ ಸಂತೋಷದಿಂದ ಇರಲು ಬಯಸುವಿರಿ. ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿಯುವ ಸಾಧ್ಯತೆ ಇದೆ. ಬಹಳ ದಿನಗಳ ಅನಂತರ ಹಳೆಯ ಬಂಧುಗಳ ಭೇಟಿಯಾಗುವಿರಿ. ಗೌಪ್ಯ ವಿಷಯಗಳನ್ನು ನಿಮ್ಮ ಸಂಗಾತಿಯಿಂದ ಹಂಚಿಕೊಳ್ಳುವಿರಿ. ಸ್ತ್ರೀಯರಿಗೆ ತಾಳ್ಮೆಯ ಪರೀಕ್ಷೆ ಆಗಬಹುದು. ಮನೆಯ ಕೆಲಸದಲ್ಲಿ ಹೆಚ್ಚು ತೊಡಗಿಕೊಳ್ಳುವಿರಿ. ಸಹೋದರಿಯರ ನಡುವೆ ಕಲಹವಾಗಬಹುದು. ಅಮೂಲ್ಯವಾದ ವಸ್ತುಗಳನ್ನು ನಷ್ಟ ಮಾಡಿಕೊಳ್ಳುವ ಸಾಧ್ಯತೆ ಇದೆ. ಬಂಧುಗಳ ಆರೋಪವನ್ನು ನೀವು ನಿರಾಕರಿಸುವಿರಿ.‌ ಮನೆಯಲ್ಲಿ ನಿಮ್ಮ ಮಾತಿಗೆ ಯಾವ ಉತ್ತರವೂ ಕೊಡದೇ ಇರುವುದು ನಿಮಗೆ ನೋವಾಗುವುದು. ದುರಭ್ಯಾಸವನ್ನು ಹಿಡಿಸಿಕೊಳ್ಳುವ ಸಂದರ್ಭವು ಬರಬಹುದು. ಕಲಾವಿದರು ಇತರರ ಸಹಕಾರವನ್ನು ಪಡೆಯುವರು.

ತುಲಾ ರಾಶಿ : ಇಂದು ಕೆಲವು ವಿಷಯಗಳ ಬಗ್ಗೆ ಅನಗತ್ಯವಾಗಿ ಚಿಂತಿಸುವಿರಿ. ನಿಮ್ಮ ಕುಟುಂಬದಲ್ಲಿ ಪರಸ್ಪರ ಹೊಂದಣಿಕೆಯಲ್ಲಿ ಭಿನ್ನಾಭಿಪ್ರಾಯವು ಬರಬಹುದು. ಇಂದಿನ ನಿಮ್ಮ ಸುತ್ತಲಿನ ವಾತಾವರಣವು ಸಾಮಾನ್ಯವಾಗಿರುವುದು. ನಿಮ್ಮ ಮನಸ್ಸಿನಲ್ಲಿ ಪ್ರಾಣಭೀತಿಯು ಹೆಚ್ಚಾಗಬಹುದು. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ‌ಫಲಿತಾಂಶವನ್ನು ಪಡೆಯುವ ಕಾರಣ ಸಂತೋಷದಿಂದ‌ ಇರುವರು. ಪ್ರಗತಿಯ ಹೊಸ ಮಾರ್ಗಗಳು ನಿಮಗಾಗಿ ತೆರೆದುಕೊಳ್ಳಬಹುದು. ದಾಂಪತ್ಯದಲ್ಲಿ ಶಾಂತಿಯು ಬೇಕಾದರೆ ಸುಮ್ಮನಿರುವುದು ಉತ್ತಮ. ಕೋಪವನ್ನು ದೀರ್ಘಕಾಲ ಮುಂದುವರಿಸುವುದು ಬೇಡ. ಸ್ವಾಭಿಮಾನ ಬಂಧುಗಳ ಎದುರು ಕಾಣಿಸಿಕೊಳ್ಳಬಹುದು. ಎಲ್ಲ ವಿಚಾರದಲ್ಲಿ ಹಿನ್ನಡೆ ಇರಲಿದೆ. ನಿಮ್ಮ ಸ್ವಭಾವಕ್ಕೆ ಯೋಗ್ಯವಾದ ವ್ಯಕ್ತಿಯ ಗೆಳೆತನವಾಗಲಿದೆ. ಸ್ವಂತ ಉದ್ಯಮವನ್ನು ಮಾಡುತ್ತಿದ್ದರೆ ನಿರೀಕ್ಷಿತ ಲಾಭವನ್ನು ತಲುಪುವುದು ಕಷ್ಟವಾದೀತು.

ವೃಶ್ಚಿಕ ರಾಶಿ : ಇಂದು ಸಿಗುವ ಅನಿರೀಕ್ಷಿತ ಲಾಭದಿಂದ ನಿಮಗೆ ಖುಷಿಯಾಗುವುದು. ವಾಹನ ಚಾಲಕರು ಇಂದು ಜಾಗರೂಕರಾಗಿರಬೇಕು. ವ್ಯಾಪಾರಿಗಳು ಪಾಲುದಾರಿಕೆಯಲ್ಲಿ ಉತ್ತಮ ವ್ಯವಹಾರಗಳನ್ನು ಮಾಡುತ್ತಾರೆ. ಉತ್ತಮ ಫಲಿತಾಂಶವನ್ನೂ ಪಡೆಯುತ್ತಾರೆ. ನೀವು ಹೊಸದನ್ನು ಏನ್ನಾದರೂ ಪ್ರಾರಂಭಿಸಲು ಬಯಸಿದರೆ ನಿಮಗೆ ಒಳ್ಳೆಯದು. ಸಹೋದರ ಸಹೋದರಿಯರ ಜೊತೆ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಜಗಳಗಳು ಆಗಬಹುದು. ಹೊಸ ಉದ್ಯೋಗವನ್ನು ಹುಡುಕುವವರಿಗೆ ಹೆಚ್ಚು ಗೊಂದಲವಾಗಬಹುದು. ಇಂದು ಒಂದು ಮಿತಿಯಲ್ಲಿ ನಿಮ್ಮ ಮಾತಿರಲಿ. ತಾಯಿಯ ವಿಚಾರದಲ್ಲಿ ಕೋಪಗೊಳ್ಳುವಿರಿ. ಸಹೋದರರ ಸಹಕಾರವು ನಿಮಗೆ ಬಲವನ್ನು ಕೊಡಬಹುದು. ತಾಯಿಯ ಪ್ರೀತಿಯು ನಿಮಗೆ ಅಪರೂಪವೆನಿಸುವಂತೆ ಆಗುವುದು.‌ ನಿಮ್ಮ ಸ್ವಭಾವವನ್ನು ಬಿಟ್ಟು ಎಲ್ಲರ ಜೊತೆ ಹೊಂದಾಣಿಕೆಯಿಂದ ಇರುವಿರಿ. ಯಾರ ಸಹಾಯವನ್ನೂ ಪಡೆಯದೆ ಕಾರ್ಯವು ನಿಧಾನವಾಗುವುದು.