Horoscope: ಈ ರಾಶಿಯವರಿಗೆ ಇಂದು ಪ್ರಾಣಭೀತಿಯು ಕಾಡಬಹುದು

| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 13, 2024 | 12:45 AM

ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ, ಏಪ್ರಿಲ್ 13 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Horoscope: ಈ ರಾಶಿಯವರಿಗೆ ಇಂದು ಪ್ರಾಣಭೀತಿಯು ಕಾಡಬಹುದು
ರಾಶಿ ಭವಿಷ್ಯ
Follow us on

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಏಪ್ರಿಲ್​​​​​ 13) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ: ರೇವತೀ, ಮಾಸ: ಚೈತ್ರ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಪಂಚಮೀ, ನಿತ್ಯನಕ್ಷತ್ರ: ಮೃಗಶಿರಾ, ಯೋಗ: ಸೌಭಾಗ್ಯ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 45 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 09:27  ರಿಂದ 11:00ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:06 ರಿಂದ 03:39 ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 06:21 ರಿಂದ 07:54ರ ವರೆಗೆ.

ಧನು ರಾಶಿ : ನೀವು ಕಾರ್ಯದ ಕಾರಣ ಸಹೋದ್ಯೋಗಿಗಳ ಜೊತೆ ದೂರ ಪ್ರಯಾಣ ಮಾಡಬೇಕಾಗುವುದು. ಇಂದು ಹೆಚ್ಚು ಸಮಯವು ಸಿಗುವ ಕಾರಣ ಇನ್ನೊಬ್ಬರ ಕುರಿತು ಹರಟೆ ಮಾಡುವಿರಿ. ನಿಮಗೆ ಇಂದು ಹಣಕಾಸಿನ ವಿಚಾರದಲ್ಲಿ ಲೆಕ್ಕಾಚಾರವು ಗಟ್ಟಿತನ ಕೊಡಲಿದೆ. ಸಾಲವನ್ನು ಮರುಪಾವತಿ ಮಾಡದೇ ಇರುವ ನಿಮ್ಮ ಸಂಬಂಧಿಕರಿಗೆ ಇಂದು ಸಾಲ ಕೊಡಬಾರದು. ಇಂದು ನಿಮ್ಮ ಕೆಲಸದ ಸ್ಥಳದಲ್ಲಿ ಪ್ರೀತಿ ಮೇಲುಗೈ ಸಾಧಿಸುತ್ತದೆ. ಪ್ರತಿಕೂಲ ವಾತಾವರಣವನ್ನು ನಿಭಾಯಿಸುವ ಕಲೆಯನ್ನು ಗೊತ್ತುಮಾಡಿಕೊಳ್ಳುವಿರಿ. ಹಳೆಯ ವಸ್ತುಗಳು ನಿಮಗೆ ಸಾಕೆನಿಸಬಹುದು. ಮಕ್ಕಳ ಭವಿಷ್ಯಕ್ಕೆ ಹಣವನ್ನು ಕೂಡಿಡಬೇಕಾಗುವುದು. ಸಾಲ ಕೊಟ್ಟವರು ನಿಮ್ಮನ್ನು ಇಂದು ಏನೂ ಕೇಳುವುದಿಲ್ಲ. ಮಕ್ಕಳು ನಿಮಗೆ ಬೇಕಾದ ಆರ್ಥಿಕ ನೆರವನ್ನು ಕೊಡುವರು. ನಿಮ್ಮ ದುರಭ್ಯಾಸವು ಅತಿಯಾಗಲಿದೆ. ಕಛೇರಿಯಲ್ಲಿ ಸ್ವಲ್ಪ ಬಿಡುವು ಮಾಡಿಕೊಂಡು ಕುಟುಂಬಕ್ಕೆ ಸಮಯವನ್ನು ಕೊಡುವಿರಿ.

ಮಕರ ರಾಶಿ : ನಿಮಗೆ ಇಂದು ಪ್ರಾಣಭೀತಿಯು ಕಾಡಬಹುದು. ಎಲ್ಲ ಕಡೆಗಳಿಂದ ತೊಂದರೆಯಾದಂತೆ ಅನ್ನಿಸೀತು. ಸಾಲದ ವಸೂಲಿಯನ್ನು ಬಹಳ ತಾಳ್ಮೆಯಿಂದ ಸಿಟ್ಟನ್ನೆಲ್ಲ ನಿಯಂತ್ರಣದಲ್ಲಿ ಇರಿಸಿಕೊಂಡು ಮಾಡಬೇಕಾಗುತ್ತದೆ.
ಇಂದು‌ನೀವು ದೈಹಿಕ ಸೌಕರ್ಯವನ್ನು ಇಷ್ಟಪಡುವಿರಿ. ಎಲ್ಲ ಕಡೆಗಳಲ್ಲಿ ನೀವು ಆತ್ಮರಕ್ಷಣೆಯನ್ನು ಮಾಡಿಕೊಳ್ಳುವಿರಿ. ದಿನವನ್ನು ಜಾಗರೂಕತೆಯಿಂದ ಆಯೋಜಿಸಿ. ಸುತ್ತಲೂ ನಿಮ್ಮ ಪ್ರಿಯತಮೆಯ ಪ್ರೀತಿಯನ್ನು ಅನುಭವಿಸುತ್ತೀರಿ.‌ ವಿದ್ಯಾಭ್ಯಾಸದಲ್ಲಿ ಹಿನ್ನಡೆಯಿಂದಾಗಿ ಕೆಲವು ಅವಕಾಶಗಳು ತಪ್ಪುವುದು. ಕುಟುಂಬದಲ್ಲಿ ಕೆಲವು ಸಮಸ್ಯೆಗಳಿರುತ್ತವೆ. ನಿಮ್ಮ ಬಗ್ಗೆ ಕುಟುಂಬದಲ್ಲಿ ಒಳ್ಳೆಯ ಅಭಿಪ್ರಾಯವು ಇರುವುದು. ವೈವಾಹಿಕ ಜೀವನದಲ್ಲಿ ಏರಿಳಿತವು ಆರಂಭವಾಗಬಹದು. ಸಾಲ ಕೊಟ್ಟವರು ನಿಮ್ಮನ್ನು ಶತ್ರುಗಳಂತೆ ಕಾಣುವರು. ನಿಮ್ಮ ಕಾರ್ಯವನ್ನು ಕೆಲವು ಸಹೋದ್ಯೋಗಿಗಳು ಟೀಕಿಸಬಹುದು.

ಕುಂಭ ರಾಶಿ : ನಿಮ್ಮ ಇಷ್ಟದ ವಸ್ತುಗಳನ್ನು ಪಡೆಯುವ ಖುಷಿಯು ಇಂದು ಇರಲಿದೆ. ನಿಮಗೆ ಉದ್ಯೋಗದಲ್ಲಿ ಬಡ್ತಿ ಸಿಗುವ ಬಗ್ಗೆ ಖುಷಿ ಇರಲಿದೆ. ಕೆಲವು ಸಂದರ್ಭದಲ್ಲಿ ನೀವು ತಾಳ್ಮೆಯನ್ನು ಕಳೆದುಕೊಳ್ಳಬಹುದು. ನಿಮ್ಮದೇ ಸರಿ ಇದ್ದರೂ ಅದನ್ನು ಪ್ರತಿಪಾದಿಸುವ ಕ್ರಮವು ವ್ಯತ್ಯಾಸವಾಗುವುದು. ಇಂದು ನಿಮ್ಮ ಎಲ್ಲ ಕೆಲಸವನ್ನು ಬಿಟ್ಟು ಸಂಗಾತಿಯ ಜೊತೆ ಸಮಯವನ್ನು ಕಳೆಯಲು ಬಯಸುವಿರಿ. ಹಳೆಯ ರೋಗ ನಿಮ್ಮನ್ನು ಕಾಡಲಿದ್ದು, ಸೂಕ್ತ ಚಿಕಿತ್ಸೆಯ ಅವಶ್ಯಕತೆ ಇರುವುದು. ಜೀವನದ ತೊಂದರೆಗಳನ್ನು ಸಂಗಾತಿಯ ಜೊತೆಗೆ ಹಂಚಿಕೊಳ್ಳಲು ಬಯಸುವಿರಿ. ಸಂಬಂಧಿಕರ ಜೊತೆ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತವೆ. ಆತುರಾತುರವಾಗಿ ಯಾವುದನ್ನೂ ಮಾಡಲು ಹೋಗುವುದು ಬೇಡ. ಇನ್ನೊಬ್ಬರು ತೋರುವ ನಿರ್ಲಕ್ಷ್ಯದಿಂದ ನೀವು ಬಹಳ ದುಃಖಿಸುವಿರಿ. ಹೊಸ ಯೋಜನೆಯನ್ನು ನಿರ್ವಹಿಸುವ ಅವಕಾಶವು ಸಿಗಲಿದೆ.

ಮೀನ ರಾಶಿ : ನೀವು ಇಂದು ಬಂಧುಗಳಿಂದ ಯಾವುದಾದರೂ ಒಂದು ರೀತಿಯಲ್ಲಿ ಸಹಾಯವನ್ನು ಬಯಸುವಿರಿ. ಅಲ್ಪ ಜಮೀನಿನ ಕೃಷಿಯಲ್ಲಿ ಒಳ್ಳೆಯ ಲಾಭವನ್ನು ಗಳಿಸಲಿದ್ದೀರಿ. ಪ್ರಭಾವಿ ವ್ಯಕ್ತಿಗಳ ಭೇಟಿಗೆ ಇಂದು ಅವಕಾಶ ಸಿಗದೇ ಹೋಗದೆ ಇರಬಹುದು. ಇಂದು ಬಂಧುಗಳ ಆಗಮನವಾದ ಕಾರಣ ಕುಟುಂಬ ಜೊತೆ ಹೆಚ್ವು ಕಾಲ ಕಳೆಯಿರಿ. ನೀವು ಕೆಲಸದಲ್ಲಿ ಇಂದು ಒಂದು ಒಳ್ಳೆಯ ಸುದ್ದಿ ಪಡೆಯಬಹುದು. ಮಾನಸಿಕವಾಗಿ ಸ್ವಲ್ಪ ಮಟ್ಟಿನ ಕಿರಿಕಿರಿಯನ್ನು ಅನುಭವಿಸುವಿರಿ. ಒಂಟಿತನವನ್ನು ಇಷ್ಟಪಡುತ್ತೀರಿ. ಗುರುವಿನ ದರ್ಶನವನ್ನು ಪಡೆಯಿರಿ. ಇಂದು ನೀವಾಡುವ ಮಾತಿನ ಮೇಲೆ ನಿಮ್ಮ ಕಾರ್ಯಗಳು ನಿಂತಿರುವುದು. ಓಡಾಟಕ್ಕೆ ನಿಮಗೆ ವಾಹನದ ಅನುಕೂಲತೆಯೂ ಆಗುವುದು. ಸ್ವಂತ ಉದ್ಯಮದಲ್ಲಿ ನಿರೀಕ್ಷಿತ ಲಾಭವನ್ನು ಕಾಣುವಿರಿ. ಪ್ರೇಮವು ನಿಮಗೆ ನಿಮ್ಮನ್ನು ಉತ್ಸಾಹದಿಂದ ಇಡುವುದು. ಇನ್ನೊಬ್ಬರಿಗೆ ನೀವು ಸಹಾಯವನ್ನು ಮಾಡಲು ಹೆಚ್ಚು ಇಷ್ಟಪಡುವಿರಿ.

-ಲೋಹಿತ ಹೆಬ್ಬಾರ್ – 8762924271 (what’s app only)