ದಿನ ಭವಿಷ್ಯ : ಇಂದು ಈ ರಾಶಿಯವರ ಪ್ರಗತಿಯ ಕೊರತೆಯಿಂದ ಉಳಿದ ವ್ಯವಸ್ಥೆಗೆ ತೊಂದರೆ…
ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಭಾದ್ರಪದ ಮಾಸದ ಕೃಷ್ಣ ಪಕ್ಷದ ಷಷ್ಠೀ ತಿಥಿಯ ಶುಕ್ರವಾರದಂದು ಆಲಸ್ಯದಿಂದ ವರದಾನ, ಕ್ಷಮೆಯಿಂದ ಸುವ್ಯವಸ್ಥೆ, ಸಾಮೂಹಿ ವ್ಯವಹಾರ ಪ್ರಜ್ಞೆ, ತೀಕ್ಷ್ಣ ಆಹಾರ ಸೇವನೆ, ನಿಯಮ ಸಡಿಲ, ತಪ್ಪಿನಿಂದ ಕಾನೂನು ಭಯ ಇವೆಲ್ಲ ಇಂದಿನ ವಿಶೇಷ.

ಮೇಷ ರಾಶಿ :
ಕೆಲಸ ಮಾಡುವ ಸಂಸ್ಥೆಯ ಲೆಕ್ಕಾಚಾರವು ನಿಮಗೆ ಕಗ್ಗಂಟಾಗಬಹುದು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ನಿಮಗೆ ಚಿಂತೆ ಇರಲಿದೆ. ಆರೋಗ್ಯವು ನಿನ್ನೆಗಿಂತ ಉತ್ತಮವಾಗಿದ್ದು, ಹಾಗೆಯೇ ಉಳಿಸಿಕೊಳ್ಳಲು ಪ್ರಯತ್ನಿಸಿ. ಆಸ್ತಿಯನ್ನು ಮಾರಾಟಮಾಡುವ ಆಲೋಚನೆ ಇರಲಿದೆ. ಅನ್ಯರ ವಿಚಾರಗಳನ್ನು ಆಡಿಕೊಳ್ಳಲಿದ್ದೀರಿ. ನಕಾರಾತ್ಮಕ ಮಾತೇ ಆಗಿದ್ದರೂ ನಿಮ್ಮ ದೃಷ್ಟಿಕೋನ ಬದಲಾಗಲಿ. ಬಿಡಿಸಲಾಗದ ಸಮಸ್ಯೆಗಳು ನಿಮ್ಮೆದುರು ಬರಬಹುದು.
ವೃಷಭ ರಾಶಿ:
ಯಾವ ತೊಂದರೆಯನ್ನೂ ಹಂಚಿಕೊಳ್ಳಲಾರಿರಿ. ಪರೀಕ್ಷೆಯಲ್ಲಿ ನೀವು ಅಂದುಕೊಂಡಷ್ಟು ಯಶಸ್ಸು ಸಿಗದು. ಸಂಗಾತಿಯು ಒಂದೇ ವಿಚಾರಗಳನ್ನು ಮತ್ತೆ ಮತ್ತೆ ಹೇಳಿ ನಿಮಗೆ ಬೇಸರ ಮಾಡಬುದು. ಆಲಸ್ಯವನ್ನು ಬಿಟ್ಟು ಧೈರ್ಯದಿಂದ ಮುನ್ನಡೆಯಿರಿ. ಕೆಲವು ಸಂಗತಿಗಳು ಅನಿರೀಕ್ಷಿತವಾಗಿ ಬಂದು ಮನಸ್ಸಿನ ನೆಮ್ಮದಿಯನ್ನು ಹಾಳು ಮಾಡವುವು. ಅತಿಯಾದ ಆತ್ಮವಿಶ್ವಾಸದ ಜೊತೆ ಪೂರ್ವಾಪರಜ್ಞಾನವೂ ಇರಲಿ.
ಮಿಥುನ ರಾಶಿ:
ನಿಮ್ಮ ಅಶಕ್ತತೆಯು ಸಿಟ್ಟಾಗಿ ಬದಲಾಗುವುದು. ಪಾಲುದಾರಿಕೆಯಲ್ಲಿ ಕಲಹವಾಗಬಹುದು. ಮಾರ್ಗದಲ್ಲಿ ಕಾಲಿಗೆ ಕಲ್ಲು ತಾಕಬಹುದು. ಅದನ್ನು ನಿಂದಿಸಿ ಪ್ರಯೋಜನವಿಲ್ಲ. ಅಪರಿಚಿತರು ನಿಮ್ಮ ತಮಾಷೆಯನ್ನು ಹಾಗೆಯೇ ಸ್ವೀಕರಿಸುತ್ತಾರೆ ಎಂದೇನಿಲ್ಲ. ಗೊತ್ತಿಲ್ಲ ಕೆಲಸಕ್ಕೆ ಮುನ್ನುಗ್ಗುವುದು ಬೇಡ. ನಿಮ್ಮ ಮಾತುಗಳು ಹಾಸ್ಯಾಸ್ಪದವಾಗಿ ಇರಲಿದೆ. ಹೊಸ ಯೋಜನೆಗಳನ್ನು ಆರಂಭಿಸುವಾಗ ಆಪ್ತರ ಜೊತೆ ಚರ್ಚೆಯನ್ನು ಮಾಡಿ. ನಿಮ್ಮ ಆದಾಯದ ಹೆಚ್ಚಿನ ಭಾಗವು ಸೌಂದರ್ಯಕ್ಕೆ ಹೋಗುವುದು.
ಕರ್ಕಾಟಕ ರಾಶಿ:
ನಿಮಗೆ ಖಾಸಗಿ ಸಂಸ್ಥೆಯ ಮುಖ್ಯಸ್ಥರಾಗಲು ಕರೆ ಬರಬಹುದು. ಸಾಲದಿಂದ ನೀವು ಮುಕ್ತರಾಗಿ ಖುಷಿಪಡುವಿರಿ. ವಿನೀತರಂತೆ ನೀವು ತೋರುವಿರಿ. ಕೃಷಿಕರು ಸ್ವಲ್ಪ ಲಾಭವನ್ನು ಪಡೆಯುವರು. ವಿನಾಕಾರಣ ಇನ್ನೊಬ್ಬರ ಮೇಲೆ ಸಿಟ್ಟಾಗುವುದು ಸರಿಯಾಗದು. ದೂರ ಪ್ರಯಾಣವನ್ನು ಇಂದು ಮಾಡುವುದು ಬೇಡ. ಧಾರ್ಮಿಕ ಕ್ಷೇತ್ರಗಳ ದರ್ಶನವನ್ನು ಮಾಡುವಿರಿ. ಕೆಲಸದ ಕುರಿತು ಗೊಂದಲ ಇರಲಿದೆ. ಯಾರದ್ದಾದರೂ ನೋವಿಗೆ ಸ್ಪಂದಿಸಿ.
ಸಿಂಹ ರಾಶಿ:
ನಿಮ್ಮ ಬಲವು ಸಾಮಾಜಿಕ ಕಾರ್ಯದಿಂದ ಟೀಕೆಗೆ ಗುರಿಯಾಗುವಿರಿ. ವಿದ್ಯಾರ್ಥಿಗಳು ಓದಿನ ಬಗ್ಗೆ ಹೆಚ್ಚು ಆಸಕ್ತಿ ಇದ್ದರೂ ಅದನ್ನು ಅರ್ಥಮಾಡಿಕೊಳ್ಳಲು ಕಷ್ಟವಾದೀತು. ಯಾರನ್ನೋ ಸಂಶಯಿಸುತ್ತ ಇರುವುದು ಬೇಡ. ನಿಮ್ಮ ಮನಸ್ಸಿಗೆ ತೋಚಿದ್ದನ್ನು ಹೇಳಬೇಕಾದಲ್ಲಿಗೆ ಹೇಳಿ. ದೂರ ಪ್ರಯಾಣವು ನಿಮಗೆ ಇಷ್ಟವಾದೀತು. ಪರಿಮಳದ ವೃಕ್ಷದ ಬಳಿ ನಿಂತರೆ ಅಲ್ಲಿಂದ ಬರುವ ಗಾಳಿಯೇ ನಿಮಗೆ ಸುಗಂಧವನ್ನು ಕೊಡುವುದು.
ಕನ್ಯಾ ರಾಶಿ:
ಯಾರದೋ ಮಾತಿನ ಮೇರೆಗೆ ಇಂದು ಕುಟುಂಬದಲ್ಲಿ ಕಲಹವಾಗಬಹುದು. ಯಾರನ್ನೂ ನಿಮ್ಮ ಮೂಗಿನ ನೇರಕ್ಕೆ ಅಳೆಯಬಾರದು. ಇಂದು ನಿಮಗೆ ಕಛೇರಿಯ ಕೆಲಸಗಳು ಅತಿಯಾಗಿದೆ ಎಂದು ಅನ್ನಿಸಬಹುದು. ಕುರುಡಾಗಿ ಯಾರನ್ನೂ ನಂಬಬಹದು. ಭೀತಿಯಿದ್ದರೆ ಯಾವುದನ್ನೂ ಮಾಡಲಾಗದು, ಕಲಿಯಲೂ ಆಗದು. ಯಾವುದಕ್ಕಾದರೂ ಒಂದು ಮಾಪನವಿರಲಿ. ಚಂಚಲವಾದ ಮನಸ್ಸು ನಿಮಗೆ ಅನೇಕ ಒಳ್ಳೆಯ ಆಯ್ಕೆಯನ್ನು ತಪ್ಪಿಸುವುದು.
ತುಲಾ ರಾಶಿ:
ಸಾಮಾಜಿಕ ಜೀವನದಲ್ಲಿ ಹೆಚ್ಚು ತೊಡಗಿಕೊಳ್ಳುವಿರಿ. ನಿಮ್ಮ ಮಮಕಾರದಿಂದ ನಿಮಗೆ ತೊಂದರೆಯಾಗಲಿದೆ. ನಿಮ್ಮ ತಪ್ಪು ತಿಳಿವಳಿಕೆಗೆ ಯಾರನ್ನೂ ದೂರುವುದು ಬೇಡ. ಹಣದ ಸಂಪಾದನೆಗೆ ಅನೇಕ ಮಾರ್ಗಗಳು ಇದ್ದರೂ ನಿಮಗೆ ಅದಾವುದೂ ಇಷ್ಟವಾಗದು. ಪಾಲುದಾರಿಕೆಯ ಉದ್ಯೋಗದಿಂದ ಸ್ವಲ್ಪ ಮಟ್ಟಿಗೆ ನಿಶ್ಚಿಂತೆ. ಅನಿರೀಕ್ಷಿತ ಗೆಲುವು ನಿಮಗೆ ಖುಷಿಕೊಟ್ಟೀತು. ನಿರ್ಧಾರಗಳನ್ನು ಭಾವನಾತ್ಮಕವಾಗಿ ತೆಗೆದುಕೊಳ್ಳುವಿರಿ. ಅಧಿಕಾರಿಗಳು ನಿಮ್ಮ ಬಗ್ಗೆ ತಪ್ಪಾದ ಭಾವನೆಗಳನ್ನು ಇಟ್ಟುಕೊಳ್ಳುವರು.
ವೃಶ್ಚಿಕ ರಾಶಿ:
ಖರ್ಚಿನ ಮೇಲೆ ನಿಯಂತ್ರಣ ಸಾಧಿಸಬೇಕೆಂದು ಹೊರಟರೂ ಅದು ಮತ್ತೆಲ್ಲೋ ಒಂದು ಕಡೆ ಹರಿದು ಹೋಗುವುದು. ಮನೆಗೆ ಬೇಕಾದ ವಸ್ತುಗಳ ಪಟ್ಟಿಯು ದೀರ್ಘವಾಗಿ ಕಾಣಿಸುವುದು. ಪ್ರಸಾರದ ಚಪಲತೆಯು ಹೆಚ್ಚಾಗಲಿದೆ. ನೂತನ ವಸ್ತುಗಳ ಖರೀದಿಯನ್ನು ನೀವು ಮಾಡಲಿದ್ದೀರಿ. ತಾನು ಕಂಡಿದ್ದು ಮಾತ್ರ ಸರಿ ಎಂಬ ವಾದವು ನಿಮ್ಮವರಿಗೆ ಬೇಸರ ತರಿಸೀತು. ನಿಮ್ಮ ಯಾರಾದರೂ ಕೆಲಸ ವಹಿಸಿ ನಿಶ್ಚಿಂತರಾಗಬಹುದು. ಅನುಪಯುಕ್ತ ಆಹಾರವನ್ನು ಸೇವಿಸುವುದು ಬೇಡ.
ಧನು ರಾಶಿ:
ಸ್ವಂತ ಬಲವಿಲ್ಲದೇ ನೀವು ಯಾರನ್ನೂ ಎದುರಿಸಲಾಗದು. ನಿಮಗೆ ಸಂಬಂಧಿಸದ ವಿಚಾರಗಳನ್ನು ನೀವು ಹೆಚ್ಚು ಮಾತನಾಡಲು ಬಯಸುವಿರಿ. ದೂರ ಪ್ರಯಾಣದಿಂದ ಹೆಚ್ಚು ಆಯಾಸಗೊಳ್ಳುವಿರಿ. ಭೋಗವಸ್ತುಗಳ ಖರೀಯು ಅಧಿಕವಾಗಿ ಇರಲಿದೆ. ಬಂಗಾರದ ಸೂಜಿಯಾದರೂ ಕಣ್ಣಿಗೆ ಚುಚ್ಚುವುದಿಲ್ಲ. ನೀವು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಕಷ್ಟಪಡುವಿರಿ.
ಮಕರ ರಾಶಿ:
ಇಂದು ನಿಮ್ಮ ಮನಸ್ಸು ಭಯದಿಂದ ಹಿಂದೇಟು ಹಾಕಬಹುದು. ಉದ್ಯೋಗದ ಕಾರಣದಿಂದ ಬೇರೆ ಊರಿನಲ್ಲಿ ಇದ್ದರೂ ಮನೆಯ ನೆನಪು ನಿಮ್ಮನ್ನು ಅತಿಯಾಗಿ ಕಾಡಬಹುದು. ನಂಬಿದ ಸ್ನೇಹಿತನಿಗೆ ಸಹಾಯ ಮಾಡುವಿರಿ. ಉದ್ಯೋಗವೇ ಸಾಕು ಎನಿಸಬಹುದು. ಸಾಲದ ಅತಿಯಾದ ಚಿಂತೆ ಇರುವುದು. ಸಂಗಾತಿಯನ್ನು ನೀವು ದೂರ ಮಾಡಿಕೊಳ್ಳುವಿರಿ ಉಳಿತಾಯಕ್ಕೆ ಹೆಚ್ಚು ಪ್ರಾಮುಖ್ಯವನ್ನು ಕೊಡುವಿರಿ.
ಕುಂಭ ರಾಶಿ:
ಸರ್ಕಾರದ ಉದ್ಯೋಗಕ್ಕೆ ನಿಮ್ಮ ಸಣ್ಣ ಪ್ರಯತ್ನ ಇರಲಿದೆ. ಭಾರದ ವಸ್ತುಗಳನ್ನು ನೀವು ಒಯ್ಯುವುದು ಬೇಡ. ನಿಮ್ಮದಾದ ಚೌಕಟ್ಟನ್ನು ಮಾಡಿಕೊಳ್ಳುವಿರಿ. ಪಥ್ಯಾಹಾರ ಸೇವನೆಯಿಂದ ಆರೋಗ್ಯದಲ್ಲಿ ಗಣನೀಯ ಬದಲಾವಣೆ ಗೊತ್ತಾಗುವುದು. ಅಸಾಮಾನ್ಯ ವಿಚಾರವನ್ನು ನೀವು ಸರಳೀಕರಿಸುವ ನೈಪುಣ್ಯತೆಯನ್ನು ಹೊಂದಿರುವಿರಿ. ವ್ಯಾಪಾರವು ಕುಂಟುತ್ತ ಸಾಗುವುದು. ಹಿರಿಯರ ಮಾತನನ್ನು ಅನುಸರಿಸಲು ನೀವು ಹಿಂದೇಟು ಹಾಕಬಹುದು.
ಮೀನ ರಾಶಿ:
ನಿಮ್ಮನ್ನು ಭೇಟಿಯಾಗಲು ಬಂದವರನ್ನು ಅಗೌರವವನ್ನು ತೋರಿಸಿದಂತೆ ಕಾಣಿಸುಬುದು. ಲಾಭವನ್ನು ಗಮನದಲ್ಲಿಟ್ಟುಕೊಂಡು ನೀವು ಮತ್ತೆಲ್ಲವನ್ನೂ ಮರೆಯುವಿರಿ. ನಿಮ್ಮ ಬಗ್ಗೆ ಇತರರಿಗೆ ಅನುಕಂಪ ಬರಬಹುದು. ನಿರಂತರ ಕಾರ್ಯವನ್ನು ಮಾಡು ಅವಶ್ಯಕತೆ ಇಲ್ಲ. ಸುಮ್ಮನೇ ಕುಳಿತು ಏನ್ನಾದರೂ ನಕಾರಾತ್ಮಕ ಯೋಚನೆಯನ್ನು ಮಾಡುವಿರಿ. ನಿಮ್ಮ ಯೋಜನೆಗಳು ಎಣಿಸಿದಂತೆ ಆಗದೇ ಇರಬಹುದು.
ಇಂದಿನ ಪಂಚಾಂಗ:
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಭಾದ್ರಪದ, ಸೌರ ಮಾಸ : ಕನ್ಯಾ, ಮಹಾನಕ್ಷತ್ರ : ಹಸ್ತಾ, ವಾರ : ಶುಕ್ರ, ಪಕ್ಷ : ಕೃಷ್ಣ, ತಿಥಿ : ಷಷ್ಠೀ, ನಿತ್ಯನಕ್ಷತ್ರ : ಮೃಗಶಿರಾ, ಯೋಗ : ಸಿದ್ಧಿ, ಕರಣ : ವಣಿಜ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 07 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:39 – 12:09, ಯಮಗಂಡ ಕಾಲ 15:08 – 16:38, ಗುಳಿಕ ಕಾಲ 07:40 – 09:09
– ಲೋಹಿತ್ ಹೆಬ್ಬಾರ್ – 8762924271 (what’s app only)
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




