Scorpio Yearly Horoscope 2025: ಈ ರಾಶಿಯವರಿಗೆ ಯಾರ ಮೇಲಾದರೂ ತಾತ್ಕಾಲಿಕ ಪ್ರೇಮ ಆಗಬಹುದು

ವೃಶ್ಚಿಕ ರಾಶಿ ವರ್ಷ ಭವಿಷ್ಯ 2025: ವೃಶ್ಚಿಕ ರಾಶಿಯವರಿಗೆ ಗುರುವು ವರ್ಷದ ಮಧ್ಯಾವಧಿಯಲ್ಲಿ ತನ್ನ ಸ್ಥಾನವನ್ನು ಬದಲಿಸಿ ಅಷ್ಟಮಕ್ಕೆ ಹೋಗುವನು. ಪಂಚಮ ಶನಿಯೂ ಇದೇ ಸಂದರ್ಭದಲ್ಲಿ ಆರಂಭವಾಗುವುದು. ರಾಹುವು ಚತುರ್ಥದಲ್ಲಿ ಹಾಗೂ ಕೇತುವು ದಶಮದಲ್ಲಿ ಇರುವ ಸಂದರ್ಭ ಹೆಚ್ಚು. ಅಪಮಾನ, ಆರ್ಥಿಕ ನಷ್ಟ, ಸ್ಥಾನ ಭ್ರಷ್ಟತೆ, ದುಃಖ ಇವುಗಳೇ ಅಧಿಕವಾಗಿತ್ತು ಕಾಣಿಸುವುದು.

Scorpio Yearly Horoscope 2025: ಈ ರಾಶಿಯವರಿಗೆ ಯಾರ ಮೇಲಾದರೂ ತಾತ್ಕಾಲಿಕ ಪ್ರೇಮ ಆಗಬಹುದು
ಸಾಂದರ್ಭಿಕ ಚಿತ್ರ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಅಕ್ಷಯ್​ ಪಲ್ಲಮಜಲು​​

Updated on:Dec 31, 2024 | 5:56 PM

ರಾಶಿ ಚಕ್ರದ ಎಂಟನೇ ರಾಶಿಯವರಿಗೆ ಹೊಸ ವರ್ಷ ಕಷ್ಟದ್ದಾಗಿದೆ. ಸುಖವನ್ನು ಕಂಡ ನಿಮಗೆ ಸಣ್ಣ ಕಷ್ಟಗಳೂ ದೊಡ್ಡದಾಗಿ ಕಾಣಿಸುವ ಕಾಲ. ಗುರುವು ವರ್ಷದ ಮಧ್ಯಾವಧಿಯಲ್ಲಿ ತನ್ನ ಸ್ಥಾನವನ್ನು ಬದಲಿಸಿ ಅಷ್ಟಮಕ್ಕೆ ಹೋಗುವನು. ಪಂಚಮ ಶನಿಯೂ ಇದೇ ಸಂದರ್ಭದಲ್ಲಿ ಆರಂಭವಾಗುವುದು. ರಾಹುವು ಚತುರ್ಥದಲ್ಲಿ ಹಾಗೂ ಕೇತುವು ದಶಮದಲ್ಲಿ ಇರುವ ಸಂದರ್ಭ ಹೆಚ್ಚು. ಅಪಮಾನ, ಆರ್ಥಿಕ ನಷ್ಟ, ಸ್ಥಾನ ಭ್ರಷ್ಟತೆ, ದುಃಖ ಇವುಗಳೇ ಅಧಿಕವಾಗಿತ್ತು ಕಾಣಿಸುವುದು.

ಆರೋಗ್ಯ :

ದೃಢಕಾಯರೂ ದೃಢಮನಸ್ಕರೂ ಆಗಿದ್ದ ನಿಮಗೆ ಈ ವರ್ಷ ಬಹಳ ದುಷ್ಕರವಾದುದು. ಷಷ್ಠಾಧಿಪತಿ ವರ್ಷಾರಂಭದಲ್ಲಿ ನೀಚನಾಗಿದ್ದು ಅದರ ಜೊತೆ ಸ್ವರಾಶ್ಯಧಿಪತಿಯೂ ಆಗಿದ್ದ ಕುಜನು ಕಲಾಹೀನನಂರೆ ಇದ್ದು ನಿಮ್ಮ ರಾಶಿಯನ್ನು ನೋಡುತ್ತಿದ್ದಾನೆ. ದೇಹಕ್ಕೆ ಯಾವುದೇ ಪುಷ್ಟಿಯನ್ನು ಕೊಡಲಾರ. ಕೇವಲ ಗುರುದೃಷ್ಟಿ ನಿಮ್ಮನ್ನು ಕಾಪಾಡಿದೆ.

ಪ್ರೇಮ ಮತ್ತು ವಿವಾಹ :

ಏಪ್ರಿಲ್ ತಿಂಗಳ ಒಳಗೆ ವಿವಾಹವನ್ನು ನಿಶ್ಚಯಿಸಿ ಆಗುವುದು ಉತ್ತಮ. ಅನಂತರ ಗುರುಬಲವಿಲ್ಲ. ಇನ್ನು ಪ್ರೇಮದ ವಿಚಾರಕ್ಕೆ ಬಂದರೆ ಯಾರ ಮೇಲಾದರೂ ತಾತ್ಕಾಲಿಕ ಪ್ರೇಮ ಅಂಕುರಿಸುವುದು. ಅದು ಶಾಶ್ವತವಾಗಿ ಉಳಿಯದು. ಈ ಸಮಯದಲ್ಲಿ ಹುಟ್ಟಿದ ಪ್ರೇಮಕ್ಕೆ ಆಯುಸ್ಸು ಕಡಿಮೆ.

ಉದ್ಯೋಗ ಮತ್ತು ಆರ್ಥಿಕತೆ :

ವರ್ಷಾರಂಭದಲ್ಲಿಯೇ ಹೊಸ ಉದ್ಯೋಗವನ್ನು ಆರಂಭಿಸಿದರೆ ಪ್ರಗತಿ ಇರುವುದು. ಕೇತುವು ದಶಮಕ್ಕೆ ಬಂದ ಅನಂತರ ಕಾನೂನಾತ್ಮಕ ತೊಡಕು ಬರುವುದು. ಮೇ ತಿಂಗಳವರೆಗೂ ಉದ್ಯಮಕ್ಕೆ ಬೇಕಾದ ಆರ್ಥಿಕ ನೆರವು ಅಥವಾ ಉತ್ಪನ್ನಗಳು ಅನಾಯಾಸವಾಗಿ ಅಲಭ್ಯ. ಅನಂತರವೇ ಕ್ಲಿಷ್ಟಕರ.

ಕುಟುಂಬ ವ್ಯವಸ್ಥೆ :

ಇದರಲ್ಲಿ ಅತಿಯಾದ ವ್ಯತ್ಯಾಸ ಏನೂ ಇರದು. ಹಳೆಯ ವರ್ಷದಂತೆ ಈ ವರ್ಷವೂ ಹಾಗೇ ಇರುವುದು. ಸಂತಾನದ ಅಪೇಕ್ಷೆ ಇರದು. ಬೇಡ ಎನ್ನುವ ತೀರ್ಮಾನಕ್ಕೂ ಬರುವಿರಿ.

ಶತ್ರುಬಾಧೆ :

ಯಾವುದೇ ಶತ್ರುಬಾಧೆ ಇರದು. ಇದು ನಿಮ್ಮ ಈ ವರ್ಷದ ಸಕಾರಾತ್ಮಕ ಅಂಶ. ಇರುವ ಶತ್ರುತ್ವವೂ ಸರಿಯಾಗಿಹೋಗುವುದು.

ಅದೃಷ್ಟ :

ನವಮದಲ್ಲಿ ನೀಚನಾದ ಕುಜನು ನಿಮ್ಮ ಅದೃಷ್ಟಕ್ಕೆ ಭಂಗತಂದಿದ್ದಾನೆ. ನಿಮ್ಮ ಪ್ರಯತ್ನ ಎಲ್ಲವೂ ವಿಫಲ. ದೈವಾನುಕೂಲವಂತೂ ಇಲ್ಲ. ಕುಜ ದಶೆ ಇದ್ದವರಿಗೆ ಈ ವರ್ಷ ಬಹಳ ಕಷ್ಟಕರ.

ಹೀಗೆ ನಿಮಗೆ ಈ ವರ್ಷ ನಕಾರಾತ್ಮಕ ಅಂಶಗಳೇ ಅಧಿಕವಾಗಿವೇ. ಸುಖ ಬರಬೇಕು ಎಂದರೆ ಕಷ್ಟಗಳು ಬರಬೇಕು ಎನ್ನುವುದನ್ನು ಅರಿತರೆ ಎಲ್ಲವೂ ಸುಖಮಯ. ತಂಪಾದ ಮಳೆ ಬರಬೇಕೆಂದರೆ ತಾಪ ಅಧಿಕವಾಗುವಂತೆ ನಿಮಗೂ ಈ ಅನುಭವವಾಗಲಿದೆ. ದೈವಾನುಗ್ರಹವನ್ನು ಪ್ರತಿದಿನ ಪ್ರಾರ್ಥಿಸಿ. ಸುಬ್ರಹ್ಮಣ್ಯನ ಸ್ತೋತ್ರವನ್ನು ಪಠಿಸಿ, ಬಿಡುವು ಪಡೆದು ಗುರುದರ್ಶನ, ಅವರ ಆಶಿರ್ವಾದ ಪಡೆಯಿರಿ. ಎಲ್ಲವೂ ಸುಖಾಂತವಾಗುವುದು.

-ಲೋಹಿತ ಹೆಬ್ಬಾರ್, ಇಡುವಾಣಿ

Published On - 5:56 pm, Tue, 31 December 24

ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಯಾರ ಮಾತು ಕೇಳಬೇಕೆಂದು ಗೊತ್ತಾಗದ ಪೊಲೀಸ್ ಪರಿಸ್ಥಿತಿಯ ಕೈಗೊಂಬೆ!
ಯಾರ ಮಾತು ಕೇಳಬೇಕೆಂದು ಗೊತ್ತಾಗದ ಪೊಲೀಸ್ ಪರಿಸ್ಥಿತಿಯ ಕೈಗೊಂಬೆ!
ನನ್ನ ಮುಟ್ಟಿದರೆ ಹುಷಾರ್ ಪೊಲೀಸರ ಬಳಿ ಅಶೋಕ್ ಅಬ್ಬರ
ನನ್ನ ಮುಟ್ಟಿದರೆ ಹುಷಾರ್ ಪೊಲೀಸರ ಬಳಿ ಅಶೋಕ್ ಅಬ್ಬರ
ಸಿದ್ಧಗಂಗಾ ಶ್ರೀಗಳನ್ನು ವಿವಾಹಕ್ಕೆ ಆಮಂತ್ರಿಸಿದ ಡಾಲಿ ಹೇಳಿದ್ದು ಹೀಗೆ
ಸಿದ್ಧಗಂಗಾ ಶ್ರೀಗಳನ್ನು ವಿವಾಹಕ್ಕೆ ಆಮಂತ್ರಿಸಿದ ಡಾಲಿ ಹೇಳಿದ್ದು ಹೀಗೆ
ಸಿದ್ದರಾಮಯ್ಯ ನಡೆಸುತ್ತಿರೋದು ಒಂದು ಕಳಂಕಿತ ಸರ್ಕಾರ: ಪ್ರತಾಪ್ ಸಿಂಹ
ಸಿದ್ದರಾಮಯ್ಯ ನಡೆಸುತ್ತಿರೋದು ಒಂದು ಕಳಂಕಿತ ಸರ್ಕಾರ: ಪ್ರತಾಪ್ ಸಿಂಹ
ಚಿರತೆ ಕಂಡರೆ ಜನ ಪ್ಯಾನಿಕ್ ಆಗದೆ 1926 ನಂಬರ್​ಗೆ ಕರೆ ಮಾಡಬೇಕು: ಡಿಸಿಎಫ್
ಚಿರತೆ ಕಂಡರೆ ಜನ ಪ್ಯಾನಿಕ್ ಆಗದೆ 1926 ನಂಬರ್​ಗೆ ಕರೆ ಮಾಡಬೇಕು: ಡಿಸಿಎಫ್
10 ವರ್ಷಗಳಿಂದ ಅಯ್ಯಪ್ಪ ಮಾಲೆ ಧರಿಸುತ್ತಿದ್ದಾರೆ ಈ ಮುಸ್ಲಿಂ ವ್ಯಕ್ತಿ
10 ವರ್ಷಗಳಿಂದ ಅಯ್ಯಪ್ಪ ಮಾಲೆ ಧರಿಸುತ್ತಿದ್ದಾರೆ ಈ ಮುಸ್ಲಿಂ ವ್ಯಕ್ತಿ